533. ಮಂಕುತಿಮ್ಮ (1980)


ಮಂಕು ತಿಮ್ಮ ಚಿತ್ರದ ಹಾಡುಗಳು 
  1. ನೋಡು ನನ್ನೊಮ್ಮೇ ನೋಡು 
  2. ನನ್ನ ಮುದ್ದು ತಾರೇ ನಗುತಲಿ ಬಾರೇ 
  3. ನಿನ್ನ ನೋಡಿದಾಗ 
  4. ಇದೇ ಬಾ ಇಲ್ಲಿದೇ ಬಾ 
  5. ನನ್ನ ಮುದ್ದು ತಾರೇ ನಗುತಲಿ ಬಾರೆ (ದುಃಖ)
ಮಂಕುತಿಮ್ಮ (1980) - ನೋಡು ನನ್ನೊಮ್ಮೆ ನೋಡು
ಚಿತ್ರಗೀತೆ : ಚಿ. ಉದಯಶಂಕರ್ ಸಂಗೀತ: ರಾಜನ್-ನಾಗೇಂದ್ರ ಎಸ್.ಪಿ.ಬಿ

ಗಂಡು : ನೋಡು ನನ್ನೊಮ್ಮೆ ನೋಡು ನೋಡಿ ಒಲವಿನಲಿ ಹಾಡು
           ನೋಡು ನನ್ನೊಮ್ಮೆ ನೋಡು ನೋಡಿ ಒಲವಿನಲಿ ಹಾಡು
ಹೆಣ್ಣು: ಆ ರಾಗಕೇ..ಮನ ನಲಿಯಲು.. ಮೈಮರೆಯಲು..ದಿನವು..ಎಂಥ ಚೆನ್ನ ಎಂದು
         ನೋಡು ನನ್ನೊಮ್ಮೆ ನೋಡು  ನೋಡಿ ಒಲವಿನಲಿ ಹಾಡು
        ನೋಡು ನನ್ನೊಮ್ಮೆ ನೀ ನೋಡು  ನೋಡಿ ಒಲವಿನಲಿ ಹಾಡು

ಗಂಡು: ನನಗಾಗಿ ಬಳಿ ಬಂದ ಹೆಣ್ಣೆ ನಿನ್ನ,  ಹೇಗೆ ಮುದ್ದಿಸಲಿ ನಾನು
ಹೆಣ್ಣು : ಸೊಗಸಾಗಿ ಮಾತಾಡೊ ಗಂಡೆ ನಿನ್ನ,  ಇನ್ನು ಬಿಟ್ಟರೆನು ನಾನು
ಗಂಡು: ನುಡಿಯಲೇ , ನಿಜ ನುಡಿಯಲೇ  ನಿನ್ನ ಸೇರಲೇ,  ಬಾ ಹತ್ತಿರ
ಹೆಣ್ಣು: ನಿನ್ನಲ್ಲಿ ನಾನಾದೆ ನೀ ನನ್ನ ಕಣ್ಣಾದೆ
        ನೋಡು ನನ್ನೊಮ್ಮೆ ನೋಡು  ನೋಡಿ ಒಲವಿನಲಿ ಹಾಡು
ಗಂಡು:  ಆ ರಾಗಕೇ..                ಹೆಣ್ಣು: ಆ ಹಾ ಹ
ಗಂಡು: ಮನ ನಲಿಯಲು..          ಹೆಣ್ಣು: ಆ ಹಾ ಹ
ಗಂಡು: ಮೈಮರೆಯಲು..            ಹೆಣ್ಣು: ಆ
ಗಂಡು: ದಿನವು                         ಹೆಣ್ಣು: ಆ
ಗಂಡು: ಎಂಥ ಚೆನ್ನ ಎಂದು
          ನೋಡು ನನ್ನೊಮ್ಮೆ ನೋಡು  ನೋಡಿ ಒಲವಿನಲಿ ಹಾಡು
          ನೋಡು ನನ್ನೊಮ್ಮೆ ನೀ ನೋಡು  ನೋಡಿ ಒಲವಿನಲಿ ಹಾಡು

ಗಂಡು : ಲಲಲ ಲಲಲ ಲಲ
ಹೆಣ್ಣು: ಹೇ ಹೇ ಹೇ              ಗಂಡು: ಲಲಲ ಲಲಲ ಲಲ
ಹೆಣ್ಣು: ಹೇ ಹೇ ಹೇ              ಗಂಡು: ಲಲಲ ಲಲಲ ಲಲ
ಹೆಣ್ಣು : ಹೋ ಹೋ ಹೋ     ಗಂಡು : ಆ
ಹೆಣ್ಣು: ಲ ಲಲ್ಲಾ                 ಗಂಡು : ಆ.
ಹೆಣ್ಣು:   ಲ ಲಲ್ಲಾ               ಗಂಡು: ಹೇ
ಹೆಣ್ಣು: ಲಲ ಲಲ                ಗಂಡು : ಹೋ
ಹೆಣ್ಣು:  ಆ.ಆ.ಆ

ಹೆಣ್ಣು:  ಬಾಳೆಲ್ಲ ಒಂದಾಗಿ ನಾನು ನೀನು ಕೂಡಿ ಕುಣಿಯುವ ಹಾಡು
ಗಂಡು: ಬದುಕೆಂಬ ಉಯ್ಯಾಲೆ ತೂಗಿ ನಾವು ಆಡಿ ನಲಿಯುವ ಹಾಡು
ಹೆಣ್ಣು:  ಕಳೆಯಲಿ ಯುಗ ಕಳೆಯಲಿ ಸುಖ ಉಳಿಯಲಿ ಆನಂದದಿ
ಗಂಡು: ಎಂದೆಂದು ಒಂದಾಗಿ ಬಾಳೋಣ ಹಾಡೋಣ
           ನೋಡು ನನ್ನೊಮ್ಮೆ ನೋಡು  ನೋಡಿ ಒಲವಿನಲಿ ಹಾಡು
ಹೆಣ್ಣು: ಆ ರಾಗಕೇ..                      ಗಂಡು: ಆಹಾಹ
ಹೆಣ್ಣು: ಮನ ನಲಿಯಲು..               ಗಂಡು: ಲಾಲಲ
ಹೆಣ್ಣು: ಮೈಮರೆಯಲು..ದಿನವು.. ಎಂಥ ಚೆನ್ನ ಎಂದು
ಇಬ್ಬರು: ನೋಡು ನನ್ನೊಮ್ಮೆ ನೀ ನೋಡು ನೋಡಿ ಒಲವಿನಲಿ ಹಾಡು
           ಲಲಲಲಾ ಲಲಲಲಾ ಲಲಲಲಾ ಲಲಲಲಾ
-------------------------------------------------------------------------------------------------------------------------

ಮಂಕುತಿಮ್ಮ (1980) - ನೋಡು ನನ್ನೊಮ್ಮೆ ನೋಡು
ಚಿತ್ರಗೀತೆ : ಚಿ. ಉದಯಶಂಕರ್ ಸಂಗೀತ: ರಾಜನ್-ನಾಗೇಂದ್ರ ಎಸ್.ಪಿ.ಬಿ


ನನ್ನ ಮುದ್ದು ತಾರೆ ಹಾ ಹ ………
ನಗುತಲಿ ಬಾರೆ ನಿನ್ನ ಬಿಟ್ಟು ಎಂದಿಗೂ ನಾನಿರಲಾರೆ
ನನ್ನ ಮುದ್ದು ತಾರೆ ನಗುತಲಿ ಬಾರೆ ನಿನ್ನ ಬಿಟ್ಟು ಎಂದಿಗೂ ನಾನಿರಲಾರೆ
ನನ್ನ ಮುದ್ದು ತಾರೆ ನಗುತಲಿ ಬಾರೆ
.ಹೂ….ನ್ ಹೂ…. ನ್………ಹ್ಹಾಂ ಹ್ಹಾಂ ಹ್ಹಾಂ
ಚುಕ್ ಚುಕ್ ಚುಕ್….ಆಆ ಆಅ ಹಾ ಹಾ ಓಓಓಓಒ

ನನ್ನ ನಿನ್ನ ಈ ಸ್ನೇಹಾ ಇಂದಿನದಲ್ಲ
ನಿನ್ನ ನನ್ನ ಸಂಬಂಧ ನೆನ್ನೆಯದಲ್ಲ
ಪರಿಚಯ ಎಂದೆಂದಿಗೂ ಮರೆಯುವುದಲ್ಲ
ಅಪ್ಪ ಅಮ್ಮ ಯಾರನ್ನು ನೋಡಲೇ ಇಲ್ಲ
ಅಣ್ಣ ತಮ್ಮ ಎಲ್ಲೆಂದು ಹೇಳುವರಿಲ್ಲ
ನನಗೂ ನಿನ್ನಂತೆಯೇ ಗೆಳೆಯರು ಇಲ್ಲ
ನೀನು ದೂರಾದರೆ ಉಳಿಯುವುದಿಲ್ಲ.. ಹ್ಹಾಂ ಹ್ಹಾಂ ಹ್ಹಾಂ
ನನ್ನ ಮುದ್ದು ತಾರೆ ನಗುತಲಿ ಬಾರೆ
ನಿನ್ನ ಬಿಟ್ಟು ಎಂದಿಗೂ ನಾನಿರಲಾರೆ
ನನ್ನ ಮುದ್ದು ತಾರೆ ನಗುತಲಿ ಬಾರೆ

ನನ್ನ ಕಂಡು ನೀ ಬಂದೆ ಏತಕೋ ಕಾಣೆ
ನನ್ನ ಮೇಲೆ ಈ ಪ್ರೇಮ ಏತಕೆ ಜಾಣೆ
ಅರಿಯೆನು ಏನೊಂದನು ನಾ ನಿನ್ನಾಣೆ
ನನ್ನ ಪುಟ್ಟ ಈ ಮನೆಗೆ ನೀ ಬೆಳಕಾದೆ
ಇನ್ನೂ ಬಾಳಬೇಕೆಂಬ ಆಸೆಯ ತಂದೆ
ತಿಮ್ಮನ ಸಂತೋಷಕೆ ಕಾರಣವಾದೆ
ಇಂದು ನಿನ್ನಿಂದ ನಾ ಹೊಸತನ ಕಂಡೆ.. ಓಹೋಹೋ..
ನನ್ನ ಮುದ್ದು ತಾರೆ ನಗುತಲಿ ಬಾರೆ
ನಿನ್ನ ಬಿಟ್ಟು ಎಂದಿಗೂ ನಾನಿರಲಾರೆ
ನನ್ನ ಮುದ್ದು ತಾರೆ ನಗುತಲಿ ಬಾರೆ
ಚಂದ ಮಾಮ ಬಾರೋ ಚಕ್ಕುಲಿ ಮಾಮ ಬಾರೋ
ತಾರೆಗೆ ನಿದ್ದೆ ತಾರೋ ಚಂದದ ಕನಸ ತೋರೋ|
ತಾರೆಗೆ ನಿದ್ದೆ ತಾರೋ ಚಂದದ ಕನಸ ತೋರೋ|
ಹೂಂ ಹೂಂ ಹೂಂ ಹೂಂ ಹೂಂ ಹೂಂ ಹೂಂ

ಮಗು : ಅಯ್ಯೋ ಮಂಕು ತಿಮ್ಮ ನನ್ನ ಮುದ್ದು ಮಾಮ
           ಅಯ್ಯೋ ಮಂಕು ತಿಮ್ಮ ನನ್ನ ಮುದ್ದು ಮಾಮ
          ತುಂಟತನ ಮಾಡದಿರೂ ಬರುವನು ಗುಮ್ಮ
          ತಂಟೆಯೇ ಮಾಡದೇ ಮಲಗೋ ತಿಮ್ಮ
         ಬರುವನು ಗುಮ್ಮ ಮಲಗೋ ತಿಮ್ಮ
         ಬರುವನು ಗುಮ್ಮ ಮಲಗೋ ತಿಮ್ಮ
--------------------------------------------------------------------------------------------------------------------------

ಮಂಕುತಿಮ್ಮ (1980) - ನಿನ್ನ ನೋಡಿದಾಗ
ಸಂಗೀತ: ರಾಜನ್-ನಾಗೇಂದ್ರ  ಚಿತ್ರಗೀತೆ : ಚಿ. ಉದಯಶಂಕರ್, ಗಾಯನ: ಎಸ್.ಪಿ.ಬಿ, ಎಸ್.ಜಾನಕೀ

ಹೆಣ್ಣು : ನಿನ್ನ ನೋಡಿದಾಗ ಕಣ್ಣು ಕೂಡಿದಾಗ
          ನಿನ್ನ ನೋಡಿದಾಗ ಕಣ್ಣು ಕೂಡಿದಾಗ 
          ಇನ್ನೂ ಇನ್ನೂ ನೋಡೋ ಆಸೆ ಆಯಿತೋ 
          ನಿನ್ನ ಹಿಂದೇ ಕಾಲು  ಓಡಿ ಬಂದಿತೋ    
          ಹೇಳು ನನ್ನ ನೋಡಿ ನೀನಗೇನಾಯಿತು 
ಗಂಡು : ನಿನ್ನ ನೋಡಿದಾಗ ಮನಸು ಹಾಕಿ ಲಾಗ 
            ನಿನ್ನ ನೋಡಿದಾಗ ಮನಸು ಹಾಕಿ ಲಾಗ 
            ಓಡಿ ಹೋಗೋ ಆಸೆ  ನನಗೇ ಬಂತು 
            ನಿನ್ನ ಮೂತಿ ನಂಗೇ ಭಯವ ತಂತೂ 
            ನಿನ್ನ ಮೂತಿ ನಂಗೇ ಭಯವೇ ತಂದೀತೂ  

  ಹೆಣ್ಣು : ಬಾ ಗೌರಿ ಎಂದರೇ ನೀನೂ ಕುಡಿದಂಗೇ ಹಾಲು ಜೇನೂ 
           ಈ ರತಿಗೇ ಕಾಮನು ನೀನು ನಿನಗೊಳ್ಳೇ ಜೋಡಿ ನಾನೂ 
           ನಿನ್ನ ಅಂದಕ್ಕೆ ಸೋತೇ ಹೋದೆನೋ  
ಗಂಡು : ಬಾ ತಿಮ್ಮ ಎಂದರೇ ನೀನೂ ನಾನಾಗ ಗಾಳದ ಮೀನು 
            ಮೈಮೇಲೆ ಬೀಳುವ ಹೆಣ್ಣು ತಿಮ್ಮನಿಗೇ ಜೋಡೀ ನೀನು 
            ಸಾಕೂ ಹೋಗಿನ್ನೂ ಬಿಟ್ಟು ನನ್ನನ್ನೂ 
ಹೆಣ್ಣು : ಸಿಡುಕದಿರೂ ದುಡುಕದಿರೂ ಅಯ್ಯೋ ಮಂಕು ತಿಮ್ಮ (ಹೊಯ್)
          ಎಂದೋ ಆಯಿತು ನಮ್ಮ ಪ್ರೇಮ ಸಂಗಮ 
          ಎಂದೋ ಆಯಿತು ನಮ್ಮ ಪ್ರೇಮ ಸಂಗಮ 
ಗಂಡು : ನಿನ್ನ ನೋಡಿದಾಗ ಮನಸು ಹಾಕಿ ಲಾಗ 
            ನಿನ್ನ ನೋಡಿದಾಗ ಮನಸು ಹಾಕಿ ಲಾಗ 
            ಓಡಿ ಹೋಗೋ ಆಸೆ  ನನಗೇ ಬಂತು 
            ನಿನ್ನ ಮೂತಿ ನಂಗೇ ಭಯವ ತಂತೂ 
            ನಿನ್ನ ಮೂತಿ ನಂಗೇ ಭಯವೇ ತಂದೀತೂ 

ಹೆಣ್ಣು : ನೀ ನನ್ನ  ಸೋಕಿದರೇನೇ ಮೈಯೆಲ್ಲಾ ಮಿಂಚಾಗುವುದೂ 
ಗಂಡು : ಈ ಮಾತು ಕೇಳಿದರೇನೇ ಮೈಯೆಲ್ಲಾ ಮುಳ್ಳಾಗುವುದೂ 
ಹೆಣ್ಣು : ಸಾಕು ಈ ಬುರುಡೆ ಬಾರೋ ಪ್ರಿಯತಮ 
          ಕನಸಲ್ಲಿ ನೀ ದಿನ ಬರುವೇ ಏನೇನೋ ಆಸೆಯ ತರುವೇ            
ಗಂಡು : ರಾತ್ರೀಲಿ ನೆನಪಿಗೇ ಬರುವೇ ನಾ ನಿದ್ದೇ ಬಾರದೇ ಅಳುವೇ 
ಹೆಣ್ಣು : ಸುಳ್ಳು ಈ ಮಾತು ನಾನು ನಂಬೆನೂ 
ಗಂಡು : ಕೆಣಕದಿರೂ ಕೆಡಿಸದಿರೂ ನನ್ನ ಮಾನ ಉಳಿಸು  
           ಸಾಕು ದೂರ ನಿಂತೇ ನನ್ನ ಪ್ರೀತಿಸೂ  
           ಹ್ಹಾಂ ಹ್ಹಾಂ ಹ್ಹಾಂ ಅಮ್ಮ ತಾಯೇ ನಿನ್ನ ರಾಗ ನಿಲ್ಲಿಸೋ 
ಹೆಣ್ಣು : ನಿನ್ನ ನೋಡಿದಾಗ (ಹ್ಹಾಂ ಹ್ಹಾಂ ಹ್ಹಾಂ)   
          ಕಣ್ಣು ಕೂಡಿದಾಗ (ಹ್ಹಾಂ ಹ್ಹಾಂ ಹ್ಹಾಂ) 
          ನಿನ್ನ ನೋಡಿದಾಗ ಕಣ್ಣು ಕೂಡಿದಾಗ 
          ಇನ್ನೂ ಇನ್ನೂ ನೋಡೋ ಆಸೆ ಆಯಿತೋ 
ಗಂಡು : ಓಡಿ ಹೋಗೋ ಆಸೆ  ನನಗೇ ಬಂತು 
ಇಬ್ಬರು : ಹ್ಹಹ್ಹಹ್ಹಹ್ಹಾ... ಹೂಂ ಹೂಂ ಹೂಂ ಹೂಂ  
--------------------------------------------------------------------------------------------------------------------------

ಮಂಕುತಿಮ್ಮ (1980) - ಇದೇ ಇಲ್ಲಿದೇ ಬಾ
ಸಂಗೀತ: ರಾಜನ್-ನಾಗೇಂದ್ರ  ಚಿತ್ರಗೀತೆ : ಚಿ. ಉದಯಶಂಕರ್, ಗಾಯನ: ಎಸ್.ಜಾನಕೀ

ಇದೇ ಬಾ ಇಲ್ಲಿದೇ ಬಾ ಎಲ್ಲಾ ನಿನಗಾಗಿ ಬಾ
ರಾಜಾ ಹೇ.. ರಾಜಾ ನೀ ಬೇಗ ಬಾರೋ
ರಾಜಾ ಬಾ ಹಿಂದೇ ಬಾ
ಇದೇ ಬಾ ಇಲ್ಲಿದೇ ಬಾ ಎಲ್ಲಾ ನಿನಗಾಗಿ ಬಾ

ಆಸೆಯನು ಚೆಲ್ಲದೇ ಕಣ್ಣಲ್ಲೇ ಹೀಗೇ ನನ್ನಂದ ಬಳಿ ಬಂದು ನೀ ನೋಡು
ಆಸೆಯನು ಚೆಲ್ಲದೇ ಕಣ್ಣಲ್ಲೇ ಹೀಗೇ ನನ್ನಂದ ಬಳಿ ಬಂದು ನೀ ನೋಡು
ಈ ರಾತ್ರಿ ಬಿಸಿ ಊಟ ಬಂದು ರುಚಿ ನೋಡಿ ಮಾತಾಡು 
ಎಂದೆಂದಿಗೂ ಇಂಥ ಆನಂದವ ನೀನೂ ಕಂಡಿಲ್ಲವೋ ನಲ್ಲ 
ಎಂದೆಂದಿಗೂ ಇಂಥ ಬಿಸಿ ಬೆಲ್ಲದ ರುಚಿ ನೋಡಿಲ್ಲ ನೀನು ಬಾಳಲ್ಲಿಯೇ 
ಇದೇ ಬಾ ಅಹ್ಹಹ್ಹ..  ಇದೇ ಬಾ ಇದೇ ಬಾ ಇಲ್ಲಿದೇ ಬಾ
ಎಲ್ಲಾ ನಿನಗಾಗಿ ಬಾ ರಾಜಾ ಹೊಯ್ ಹೊಯ್ ಹೊಯ್ ಹೊಯ್
ಹೇ.. ರಾಜಾ ನೀ ಬೇಗ ಬಾರೋ ರಾಜಾ ಬಾ ಹಿಂದೇ ಬಾ ಬಾ ಬಾ ಬಾ
ಇದೇ ಬಾ ಇಲ್ಲಿದೇ ಬಾ ಎಲ್ಲಾ ನಿನಗಾಗಿ ಬಾ ಹ್ಹಹ್ಹಹ್ಹಹ್ಹ.. 

ಕಾಯುತಿದೆ ಈ ಸುಖ ನೆನದಾಗೆ ಇಂದೂ ಇನ್ನೇಕೆ ಬಿಗುಮಾನ ಬಾ ಬೇಗ 
ಕಾಯುತಿದೆ ಈ ಸುಖ ನೆನದಾಗೆ ಇಂದೂ ಇನ್ನೇಕೆ ಬಿಗುಮಾನ ಬಾ ಬೇಗ 
ನನ್ನಾಸೆ ಪೂರೈಸು ಸಮಯ ನನಗೀಗ ಬಂತೀಗ 
ಮುಗಿದಂತೆಯೇ ನಿನ್ನ ವ್ಯಥೆ ಇಂದಿಗೇ  ಇನ್ನೂ ಕ್ಷಣದಲ್ಲಿ ನೋಡೂ 
ಮುಗಿದಂತೆಯೇ ನಿನ್ನ ಕಥೆ ಇಂದಿಗೇ ಗಂಡೇ ನಿನಗಿಲ್ಲ ಚಿಂತೇ ಇನ್ನೆಂದಿಗೂ 
ಇದೇ ಬಾ ಅಹ್ಹಹ್ಹ..  ಇದೇ ಬಾ ಇದೇ ಬಾ ಇಲ್ಲಿದೇ ಬಾ
ಎಲ್ಲಾ ನಿನಗಾಗಿ ಬಾ ರಾಜಾ ಹೇ.. ರಾಜಾ ನೀ ಬೇಗ ಬಾರೋ
ರಾಜಾ ಬಾ ಹಿಂದೇ ಬಾ ಬಾ ಬಾ ಬಾ
ಇದೇ ಬಾ ಹ್ಹಹ್ಹಹ್ಹ..   ಇಲ್ಲಿದೇ ಬಾ ಹಹ್ಹಹ್ಹ .. ಎಲ್ಲಾ ನಿನಗಾಗಿ ಬಾ ಆಆಆ.. 
-------------------------------------------------------------------------------------------------------------------------

ಮಂಕುತಿಮ್ಮ (1980) - ನನ್ನ ಮುದ್ದು ತಾರೆ (ದುಃಖ)
ಸಂಗೀತ: ರಾಜನ್-ನಾಗೇಂದ್ರ  ಚಿತ್ರಗೀತೆ : ಚಿ. ಉದಯಶಂಕರ್, ಗಾಯನ: ಎಸ್.ಪಿ.ಬಿ,

ನನ್ನ ಮುದ್ದು ತಾರೆ ಹಾ ಹ ………
ನಗುತಲಿ ಬಾರೆ ನಿನ್ನ ಬಿಟ್ಟು ಎಂದಿಗೂ ನಾನಿರಲಾರೆ
ನನ್ನ ಮುದ್ದು ತಾರೆ ನಗುತಲಿ ಬಾರೆ ನಿನ್ನ ಬಿಟ್ಟು ಎಂದಿಗೂ ನಾನಿರಲಾರೆ
ನನ್ನ ಮುದ್ದು ತಾರೆ ನಗುತಲಿ ಬಾರೆ ... .

ನನ್ನ ನಿನ್ನ ಈ ಸ್ನೇಹಾ ಇಂದಿನದಲ್ಲ
ನಿನ್ನ ನನ್ನ ಸಂಬಂಧ ನೆನ್ನೆಯದಲ್ಲ
ಪರಿಚಯ ಎಂದೆಂದಿಗೂ ಮರೆಯುವುದಲ್ಲ
ಅಪ್ಪ ಅಮ್ಮ ಯಾರೆನ್ನು  ನೋಡಲೇ ಇಲ್ಲ
ಅಣ್ಣ ತಮ್ಮ ಎಲ್ಲೆಂದು ಹೇಳುವರಿಲ್ಲ
ನನಗೂ ನಿನ್ನಂತೆಯೇ ಗೆಳೆಯರು ಇಲ್ಲ
ನೀನು ದೂರಾದರೆ ಉಳಿಯುವುದಿಲ್ಲ...
ನನ್ನ ಮುದ್ದು ತಾರೆ ನಗುತಲಿ ಬಾರೆ
ನಿನ್ನ ಬಿಟ್ಟು ಎಂದಿಗೂ ನಾನಿರಲಾರೆ
ನನ್ನ ಮುದ್ದು ತಾರೆ ನಗುತಲಿ ಬಾರೆ

ಮಗು : ನನ್ನ ಮುದ್ದು ತಿಮ್ಮ ಅಳದಿರು ಮಾಮ
          ನನ್ನ ಮುದ್ದು ತಿಮ್ಮ ಅಳದಿರು ಮಾಮ
         ನಿನ್ನ ಬಿಟ್ಟು ಎಂದಿಗೂ ನಾನಿರಲಾರೆ
         ಎಂದಿಗೂ ನಿನ್ನನು ನಾ ಬಿಡಲಾರೆ
         ನನ್ನ ಮುದ್ದು ತಿಮ್ಮ ಅಳದಿರು ಮಾಮ
         ನಗುತಿರು ತಿಮ್ಮ ಅಳದಿರು ಮಾಮ 
         ನಗುತಿರು ತಿಮ್ಮ 
--------------------------------------------------------------------------------------------------------------------------

No comments:

Post a Comment