535. ಓಂ (1995)

ಓಂ ಚಲನಚಿತ್ರದ ಹಾಡುಗಳು 
  1. ಹೇ.. ದಿನಕರ ಶುಭಕರ ಧರೆಗೆ ಬಾ|
  2. ಓ ಗುಲಾಬಿಯೇ....ಓ ಗುಲಾಬಿಯೇ....
  3. ಮೆಹಬೂಬಾ,,, ಮೆಹಬೂಬಾ,,, ಮುದ್ದಾಡೋಣ ಬಾ..
  4. ಕಾಲೇಜುಕುಮಾರ್ ಕಿಸ್ಸಿಗೇ ಢಮಾರ್ 
  5. ಅಮೃತವಂತೇ ಪ್ರೇಮದ ಗಾನ 
ಓಂ (1995) - ಓಂ ಬ್ರಹ್ಮಾನಂದ ಓಂಕಾರ
ಸಾಹಿತ್ಯ: ಹಂಸಲೇಖ ಸಂಗೀತ: ಹಂಸಲೇಖ ಗಾಯನ: ಡಾ.ರಾಜ್‍ಕುಮಾರ್

ಓಂ.. ಓಂ.. ಓಂ.. ಓಂ ಬ್ರಹ್ಮಾನಂದ ಓಂಕಾರ ಆತ್ಮಾನಂದ ಸಾಕಾರ|
ಓಂ ವೇದಾಂತದಿಯ ಝೇಂಕಾರ   ಆಧ್ಯಾತ್ಮಾಭಿ ಮಧುಸಾರ||

ಹೇ.. ದಿನಕರ ಶುಭಕರ ಧರೆಗೆ ಬಾ|
ಈ..ಧರಣಿಯ ದೇಗುಲ ಬೆಳಗು ಬಾ||
ನೀಗಿಸು ಬಾಳಿನ "ಆಹಂ ಆಹಂ ಆಹಂ"|
ಮಾನಸ ಮಂದಿರ ತುಂಬು ಓಂಕಾರ ನಾದವೋ||
ಓಂ ಬ್ರಹ್ಮಾನಂದ ಓಂಕಾರ  ಆತ್ಮಾನಂದ ಸಾಕಾರ|
ಓಂ ವೇದಾಂತದಿಯ ಝೇಂಕಾರ|  ಆಧ್ಯಾತ್ಮಾಭಿ ಮಧುಸಾರ||

ನಗುವ ಮನಸೆ ಸಾಕು ನಮಗೆ, ಹಗಲುಗನಸೇ ಬೇಡ|
ಮನೆಯ ತುಂಬ ಪ್ರೀತಿ ಸಾಕು ಬೆಳ್ಳಿ ಚಿನ್ನ ಬೇಡ||
ತಂದೆ ತಾಯೆ ದೈವ, ಗುರುವೆ ನಮ್ಮ ಜೀವ|
ಎಂಬ ದಿವ್ಯ ಮಂತ್ರ ನಮ್ಮ ಹೃದಯ ತುಂಬಿಸು||ಆಆಆಆಆಆಆಆಆಆ
ಹೇ.. ದಿನಕರ ಶುಭಕರ ಧರೆಗೆ ಬಾ|  ಈ..ಧರಣಿಯ ದೇಗುಲ ಬೆಳಗು ಬಾ||

ಸತ್ಯ ಹೇಳೊ ಕನ್ನಡಿಯಂತೆ ಅಂತರಂಗ ಮಾಡು|
ದಯೆ ತೋರೊ ಧರಣಿಯಂತ ಮನೊಧರ್ಮ ನೀಡು||
ನೊಂದ ಎಲ್ಲ ಜೀವ ನನ್ನದೆಂಬ ಭಾವ|
ಬಾಳಿನಲ್ಲಿ ತುಂಬೊ ವಿದ್ಯೆ ವಿನಯ ಕರುಣಿಸೋ|| ಆಆಆಆಆಆಆಆಆಆ
ಹೇ.. ದಿನಕರ ಶುಭಕರ ಧರೆಗೆ ಬಾ| ಈ..ಧರಣಿಯ ದೇಗುಲ ಬೆಳಗು ಬಾ||
ನೀಗಿಸು ಬಾಳಿನ "ಆಹಂ ಆಹಂ ಆಹಂ"|
ಮಾನಸ ಮಂದಿರ ತುಂಬು ಓಂಕಾರ ನಾದವೋ||
ಓಂ ಬ್ರಹ್ಮಾನಂದ ಓಂಕಾರ| ಆಆಆಆಆಆಆ
ಆತ್ಮಾನಂದ ಸಾಕಾರ|  ಆಆಆಆಆಆಆ
ಓಂ ವೇದಾಂತದಿಯ ಝೇಂಕಾರ| ಆಆಆಆಆಆಆ
ಆಧ್ಯಾತ್ಮಾಭಿ ಮಧುಸಾರ||
-------------------------------------------------------------------------------------------------------------------------

ಓಂ (1995) - ಓ ಗುಲಾಬಿಯೇ....ಓ ಗುಲಾಬಿಯೇ
ಸಾಹಿತ್ಯ : ಹಂಸಲೇಖ ಸಂಗೀತ : ಹಂಸಲೇಖ ಗಾಯನ : ಡಾ.ರಾಜ್ ಕುಮಾರ್

ಓ ಗುಲಾಬಿಯೇ....ಓ ಗುಲಾಬಿಯೇ....
ನಿನ್ನಂದ ಚೆಲುವಿಂದ ಸೆಳೆಯೋದೇ ಪ್ರೇಮವೇ...ಓ
ಮುಳ್ಳಿಂದ ಬಾಳಂದ ಕೆಡಿಸೋದು ನ್ಯಾಯವೇ..ಓ....
ಲ ಲ ಲಾ.....ಲ ಲ ಲಾ.....ಅಹಹಾ......ಲಲಲಾ....

ದ್ವೇಷವಾ ಸಾಧಿಸೇ ಪ್ರೇಮದಾ ಅಸ್ತ್ರವೇ
ಸೇಡಿನಾ ಹಾಡಿಗೆ ಹಾವಿನಾ ಧಾಟಿಗೆ
ವಿನಯದ ತಾಳವೆ ಭಾವಕೆ ವಿಷದಾ ಲೇಪವೇ
ಹೆಣ್ಣು ಒಂದು ಮಾಯೆಯಾ ರೂಪಯೆಂಬಾ ಮಾತಿದೆ
ಹೆಣ್ಣು ಕ್ಷಮಿಸೋ ಭೂಮಿಯಾ ರೂಪ ಎಂದೂ ಹೇಳಿದೆ
ಯಾವುದು ಯಾವುದು ನಿನಗೇ ಹೋಲುವುದಾವುದು....?(೨).. {ಪಲ್ಲವಿ}

ಲಲಲಾಲ....ಲಲ್ಲಲಲಾ...(೨)
ಮನ್ನಿಸೂ ಮನ್ನಿಸು ಎಲ್ಲವಾ ಮನ್ನಿಸೂ
ನೊಂದಿರೋ ಮನಸಿಗೆ ಬೆಂದಿರೋ ಕನಸಿಗೆ
ಮಮತೆಯ ತಿನ್ನಿಸು ನಿನ್ನಯ ಪ್ರೀತಿಯ ಒಪ್ಪಿಸು
ಒಂದು ಬಾರಿ ಪ್ರೀತಿಸಿ ಒಲ್ಲೆಯೆಂದು ಹೇಳುವೆ
ಪ್ರೀತಿ ಮರೆತು ಹೋಗಲೂ ಹೆಣ್ಣೆ ನೀನು ಸೋಲುವೆ
ಏನಿದೆ ಏನಿದೆ ನಿನ್ನಯ ಮನದೊಳಗೇನಿದೆ...(೨)...{ಪಲ್ಲವಿ}
--------------------------------------------------------------------------------------------------------------------------

ಓಂ (1995) - ಮೆಹಬೂಬಾ,,, ಮೆಹಬೂಬಾ
ಸಾಹಿತ್ಯ : ಹಂಸಲೇಖ ಸಂಗೀತ : ಹಂಸಲೇಖ ಗಾಯನ :ಮನೋ 

ಕೋಳೀಮಾಂಜಾ ಡೀಲಾ, ಜಪಾನ್ ಸ್ಕೆಚ್
ಎ ಪೀಸ್  ಪೀಸ್ ಲವ್ ಪೀಸ್  ಚೇಸ್ ಚೇಸ್ ಲವ್ ಚೇಸ್
ಹೇ..ಹೇ.. ಸಾಂಗ್ ವಿತ್ ಎ ಗ್ಯಾಂಗ್

ಮೆಹಬೂಬಾ,,, ಮೆಹಬೂಬಾ,,, ಮೆಹಬೂಬಾ,,, ಮುದ್ದಾಡೋಣ ಬಾ..
ಹೇ..ಮಿಣಿಮಿಣಿ ಡ್ರೆಸ್ಸು ಮಿಸ್ಸಿಗೆ ಪ್ಲಸ್ ಪಬ್ಲಿಕ್ ಬಸ್ ಶಿವ ಶಿವ
ಬಿಟಿಸ್ ಬಸ್ ಬಿಟ್ಟರೇ ಕಿಸ್ಸು ಚಿನಿಮಿಣಿ ಡ್ರೆಸ್ಸು ಹರಹರ
ಚಕ ಚಕ ವಾಕೂ, ಪೀಕಾಕ್ ಶೇಪು  ಮತ್ತೆ ಮತ್ತೆ ಬ್ರೇಕೂ ಆಯ್ ಲೈಕ ಯು
ಐಸ್ ಕ್ರೀಮು ಬೈಟು ಸೈಕಲ್ ಸೈಟ್ ಅಲ್ಲೇ ಲವ್ ಫೈಟ್ ರೈಟ್ ರೈಟ್
ಬುಗುರಿ ಬುಗುರಿ ನೀನು ಬುಗುರಿ ಬುಗುರಿ ಈ ಈ ಚಾಟಿಗೆ ತಿರುಗೋ ಬುಗುರಿ..
ಮೆಹಬೂಬಾ,,, ಮೆಹಬೂಬಾ,,, ಮೆಹಬೂಬಾ,,, ಮುದ್ದಾಡೋಣ ಬಾ..ಬಾ.. ಬಾ ..

ರೂಪಾಯಿ ನೋಟಿಗೆ ಬಳಸುತ್ತಾ ಮಲ್ಲಿಗೆ
ಮುಡಿಯಲ್ಲಿ ಇಟ್ಟರೆ ಅದು ಕೋಟಿಕೋಟಿಗೆ
ನಾನು ಫಟಿಂಗ ರೌಡಿ ಲಫಂಗ ಲವ್ ಲಫಂಗ.. ಬಾ..
ನಿನ್ನ ಟೀನು ಏಜಿಗೆ ಒಂದು ಗೇಜುಬೇಕಿದೆ
ನನ್ನ ಲವ್ ಗಾರ್ಡ್ ಗೆ ಒಂದು ಗೇಜುಬೇಕಿದೆ
ಮೆಹಬೂಬಾ,,, ಮೆಹಬೂಬಾ,,, ಮೆಹಬೂಬಾ,,, ಬಾ..ಬಾ.. ಬಾ .. ಮೆಹಬೂಬಾ...
ನೀನು ಮಧುಬಾಲ ನಾನಿನ್ನ ಬಾಲ ತೊರೆ ನಿನ್ನ ಗಲ್ಲ ಕಿಲ ಕಿಲ 
ನೀನು ಒಂಟಿ ಲೇಡಿ ನಾ ನಿನ್ನ ಬಾಡಿ ಕಾಳಿಗೆ ಬಿದ್ರೆ ಜೋಡಿ ಭಲಾಭಲಾ 
ನಾನು ಸ್ವಲ್ಪು ರಾಂಗು ಆದರೇ ಸ್ಟ್ರಾಂಗ್ ನಿನನ್ ಗಲ್ಲ ವೀಕು ಗಲಗಲ 
ನೀನು ಸಿಹಿ ಕಬ್ಬು ಕಟ್ಟಿಕೊ ಉಪ್ಪು ಹಿಂಡಿ ತೆಗೆದರೆ ಕೊಬ್ಬು ಜಲಜಲ 
ಕುದುರೇ ಕುದುರೇ ನೀನು ಕುದುರೇ ಕುದುರೇ ನಾನು ನನ್ನ ಮನದ ಮುಗಿಲೆ ಜೇನು 
ಮೆಹಬೂಬಾ,,, ಮೆಹಬೂಬಾ,,, ಮೆಹಬೂಬಾ,,, ಮುದ್ದಾಡೋಣ ಬಾ..ಬಾ.. ಬಾ .. 
ಮೆಹಬೂಬಾ,,, ಮೆಹಬೂಬಾ,,, ಮೆಹಬೂಬಾ,,, ಮುದ್ದಾಡೋಣ ಬಾ..ಬಾ.. ಬಾ .. 

ಜಗಮೆಚ್ಚಿದ ಮಗ ಈ ವೀರಕೇಸರಿ
ದಾರಿ ತಪ್ಪಿದ ಮಗ ನವಕೋಟಿ ನಾರಾಯಣ 
ರೌಡಿ ರಂಗಣ್ಣ ಚೂರಿ ಚಿಕ್ಕಣ್ಣ ನಾನೊಬ್ಬ ಕಳ್ಳ ಕಣೇ
ಓಹಿಲೇಶ್ವರ.. ನೀನ  ರಾಜಶೇಖರ  ಈ ಬೆಟ್ಟದ ಹುಲಿ ನಿಂಗೆ ಜೇಡರ ಬಲೇ
ಭಲೇ ಜೋಡಿ ಭಲೇ ಜೋಡಿ ಭಲೇ ಜೋಡಿ ಭಲೇ ಜೋಡಿ
ಭಲೇ ಭಲೇ ಭಲೇ ಭಲೇ ಜೋಡಿ....
ಹೆಂಚಿನ ಮೇಲೆ ದೋಸೆ ನನಗೆ ಅಸೆ ಅರ್ಧ ಬೆಂದು ಕೂಗಿದೆ ಚಿಟಚಿಟ
ಗಾಳಿಪಟ ನೀನು ಡೀಲಿನ್ ಪಂಟ ನಾನು ಮಂಜ ಹಾಕೋ ಮನಸು ಪಟಪಟ
ಬ್ಲ್ಯಾಕ್ ಕೊಟ್ಟು ನೋಡಿದೆ ಪ್ರೀತಿಯ ಕಾಣದ ಸಖಿ ನಿನ್ನ ಮೊಗದ ಸಿನೇಮವಾ
ಲಾಟರಿ ಟಿಕೆಟ್ ಕೊಂಡಿದೆ ಲಕ್ಕಿ ಗೆಲ್ಲದೇ ಬಂಪರ್ ಆದರೆ ಕೊಡೆ ನಿನ್ನ ಹೃದಯವ
ಲೈಲಾ ಲೈಲಾ ನನ್ನ ಲೈಲಾ ಲೈಲಾ ನಿನಗೊಂದು ಪಪ್ಪೀ ಕೊಡಲಾ
ಮೆಹಬೂಬಾ,,, ಮೆಹಬೂಬಾ,,, ಮೆಹಬೂಬಾ,,, ಮುದ್ದಾಡೋಣ ಬಾ..ಬಾ.. ಬಾ .. 
ಮೆಹಬೂಬಾ,,, ಮೆಹಬೂಬಾ,,, ಮೆಹಬೂಬಾ,,, ಮುದ್ದಾಡೋಣ ಬಾ..ಬಾ.. ಬಾ .. 
-------------------------------------------------------------------------------------------------------------------------

ಓಂ (1995) - ಅಮೃತವಂತೇ ಪ್ರೇಮದಗಾನ
ಸಾಹಿತ್ಯ : ಹಂಸಲೇಖ ಸಂಗೀತ : ಹಂಸಲೇಖ ಗಾಯನ :ಮನೋ 

ಅಮೃತವಂತೇ ಪ್ರೇಮದ ಗಾನ ಸ್ವರ್ಗವಿದಂತೇ ಪ್ರೇಮದ ಧ್ಯಾನ 
ಗೀತಾಂಜಲಿ ಪ್ರೇಮಾಂಜಲಿ ಬೇರೇನೂ ನಾ ನೀಡಲಿ 
ಅಮೃತವಂತೇ ಪ್ರೇಮದ ಗಾನ ಸ್ವರ್ಗವಿದಂತೇ ಪ್ರೇಮದ ಧ್ಯಾನ 

ಅಂಜಿಕೆ ಇಲ್ಲ ಆತುರವಿಲ್ಲ ಅನುಮಾನದ ಅಂಕೆ ಇನ್ನಿಲ್ಲಾ.. ಇನ್ನಿಲ್ಲಾ 
ಕಾಮನಬಿಲ್ಲ ಬಣ್ಣಗಳೆಲ್ಲಾ ಮುಂಬಾಳಲೀ ತುಂಬಿದೆ ಭಯವಿಲ್ಲ.. ಭಯವಿಲ್ಲ 
ಮಂದಾರ ಮಂದಾರ ಈ ಪ್ರಾಯ ಮಂದಾರ 
ಚಿತ್ತಾರ ಚಿತ್ತಾರ ಈ ಪ್ರೇಮ ಚಿತ್ತಾರ
ಅಮೃತವಂತೇ ಪ್ರೇಮದ ಗಾನ ಸ್ವರ್ಗವಿದಂತೇ ಪ್ರೇಮದ ಧ್ಯಾನ 
ಗೀತಾಂಜಲಿ ಪ್ರೇಮಾಂಜಲಿ ಬೇರೇನೂ ನಾ ನೀಡಲಿ 
ಅಮೃತವಂತೇ ಪ್ರೇಮದ ಗಾನ ಸ್ವರ್ಗವಿದಂತೇ ಪ್ರೇಮದ ಧ್ಯಾನ 

ಸಾಗರ ನಾನೂ ಹುಣ್ಣಿಮೇ ನೀನೂ ಭೂದೇವಿಗೆ ಎದೆಯಾ ಉಸಿರೆಲೆಯೂ.. ಉಸಿರೆಲೆಯೂ 
ತಾವರೇ ನೀನೂ ದುಂಬಿಯೂ ನಾನೂ ಅಮಲೇರಿಸಿ ಬಿಟ್ಟಿದೇ ಮಕರಂದ.. ಮಕರಂದ
ಶೃಂಗಾರ ಶೃಂಗಾರ ಚೆಲುವಿನ ಶೃಂಗಾರ ಸಂಸಾರ ಸಂಸಾರ ತನು ಮಂಗಳ ಸಂಸಾರ 
ಅಮೃತವಂತೇ ಪ್ರೇಮದ ಗಾನ ಸ್ವರ್ಗವಿದಂತೇ ಪ್ರೇಮದ ಧ್ಯಾನ 
ಗೀತಾಂಜಲಿ ಪ್ರೇಮಾಂಜಲಿ ಬೇರೇನೂ ನಾ ನೀಡಲಿ 
ಅಮೃತವಂತೇ ಪ್ರೇಮದ ಗಾನ ಸ್ವರ್ಗವಿದಂತೇ ಪ್ರೇಮದ ಧ್ಯಾನ 
------------------------------------------------------------------------------------------------------------------------

ಓಂ (1995) - ಕಾಲೇಜುಕುಮಾರ್ ಕಿಸ್ಸಿಗೇ ಢಮಾರ್
ಸಾಹಿತ್ಯ : ಹಂಸಲೇಖ ಸಂಗೀತ : ಹಂಸಲೇಖ ಗಾಯನ :ಮನೋ, ಕೋರಸ್  

ಕೋರಸ್ : ಕೋಮ್....  ಕೋಮ್...  
               ಕೋಮ್ ಕೋಮ್ ಕೋಮ್ ಕೋಮ್ ಪ್ರೇಮ    ಕೋಮ್ ಕೋಮ್ ಕೋಮ್ ಕೋಮ್ ಪ್ರೇಮ 
               ಕೋಮ್ ಕೋಮ್ ಕೋಮ್ ಕೋಮ್ ಪ್ರೇಮ    ಕೋಮ್ ಕೋಮ್ ಕೋಮ್ ಕೋಮ್ ಪ್ರೇಮ 
ಗಂಡು : ಜುಟ್ಟಿಗೇ ತೈಲವೋ ಬಟ್ಟೆಗೇ ಇಸ್ತ್ರಿಯೋ 
            ಎಲ್ಲ ಮಡಿ ಮಡಿನಡೇ ನುಡಿ ಗಡಿಬಿಡಿ ಪ್ರೇಮ ಎಂಬುದೆಲ್ಲವ ಗುಡಿ ಗುಡಿ 
            ನಡಿಗೆಯೋ..  ನೃತ್ಯವೋ.. 
            ನೆಲದ ಮೇಲ್ಗಡೆ ನಡೆಯಲೂ ಆಗದು ಪ್ರೇಮ ಪಕ್ಷಿಗೇ ರೆಕ್ಕೆಯೂ ಸಾಲದು 
             ಕಾಲೇಜೂ ಕುಮಾರೂ ಕಿಸ್ಸಿಗೇ ಢಮಾರ್ ಕೇಳಣ್ಣೋ 
             ಆಟ ಪಾಠ ಊಟ ಮಾಯ ಸ್ನಾನ ಧ್ಯಾನ ಮಾನ ಮಾಯ
             ನಿದ್ದೇ ಮಾಯ ಬುದ್ದಿ ಮಾಯ ಮಾತು ಮಾಯ ಮನಸೂ ಮಾಯ 
             ಮುಲಾಜೇ ಇಲ್ಲಣ್ಣೋ.. ಲವ್ವಿಗೇ ... 
ಕೋರಸ್ : ಕೋಮ್....  ಕೋಮ್...  
               ಕೋಮ್ ಕೋಮ್ ಕೋಮ್ ಕೋಮ್ ಪ್ರೇಮ    ಕೋಮ್ ಕೋಮ್ ಕೋಮ್ ಕೋಮ್ ಪ್ರೇಮ 
               ಕೋಮ್ ಕೋಮ್ ಕೋಮ್ ಕೋಮ್ ಪ್ರೇಮ    ಕೋಮ್ ಕೋಮ್ ಕೋಮ್ ಕೋಮ್ ಪ್ರೇಮ 

ಗಂಡು : ಮಾಯವೋ ಮೋಡಿಯೋ ಮೂರ್ಛೆಯೋ ಸನ್ನಿಯೋ 
            ಪ್ರೇಮವೆಂಬುದೂ ಯಾವುದೂ ಯಾವುದೂ ಇಂಥ ಸಮಯದಿ ಹೇಳಲೂ ಆಗದೂ 
            ಚಿಂತೆಯೋ.. ಜಿಂಕೆಯೋ ಹಾಲೂ ಮನಸಿದು ಯಾವುದೂ ಯಾವುದೂ 
            ಹಳೆಯ ಹಗರಣ ತಡೆಯಲೂ ಆಗದು 
            ಶಿವರಾಜಕುಮಾರ ಕಿಸ್ಸಿಗೇ ಡಮಾರ್ ಕೇಳಣ್ಣೋ... 
            ಲೋಕ ಕಂಡ ಮೊದಲ ಪಾಪ ಈತ ಈಗ ಕಂಡ ಪಾಪ 
            ಪಾಪ ಪಾಪ ಹುಡುಗ ಪಾಪ    ಪಾಪ ಪಾಪ ಅಯ್ಯೋ ಪಾಪ    
             ಮುಲಾಜೇ ಇಲ್ಲಣ್ಣೋ.. ಲವ್ವಿಗೇ ... 
ಕೋರಸ್ : ಕೋಮ್....  ಕೋಮ್...  
               ಕೋಮ್ ಕೋಮ್ ಕೋಮ್ ಕೋಮ್ ಪ್ರೇಮ    ಕೋಮ್ ಕೋಮ್ ಕೋಮ್ ಕೋಮ್ ಪ್ರೇಮ 
               ಕೋಮ್ ಕೋಮ್ ಕೋಮ್ ಕೋಮ್ ಪ್ರೇಮ    ಕೋಮ್ ಕೋಮ್ ಕೋಮ್ ಕೋಮ್ ಪ್ರೇಮ 
--------------------------------------------------------------------------------------------------------------------------

No comments:

Post a Comment