536. ಸ್ನೇಹ (1999)

ಸ್ನೇಹ ಚಿತ್ರದ ಹಾಡುಗಳು 
  1. ಓ ಹೋ ಓ ಹೋ ಹೃದಯಕೆ ಜಾರಿದ ಹುಣ್ಣಿಮೆ
  2. ಎಲ್ಲಿದೆ ಬಾಳಿನ ಜನಪದ ಎಲ್ಲಿದೆ ಬದುಕಿನ ಜಾನಪದ
  3. ಚೆಂದಗಾತಿ ಚಂದ ಕಣ್ ಸನ್ನೆ ಕಂಡರೇ 
  4. ಸೂರ್ಯ ಸುತ್ತಾಂಗಿಲ್ಲ ಚಂದ್ರ ಹಾರಂಗಿಲ್ಲ 
  5. ಜೀವನ ಎನ್ನುವ ದಾರಿಯಲಿ 
  6. ಯಾಕಮ್ಮ ಬೇಕೂ ಇಂಥಾ ಲೋಕ 
ಸ್ನೇಹ (1999) - ಓ ಹೋ ಓ ಹೋ ಹೃದಯಕೆ ಜಾರಿದ ಹುಣ್ಣಿಮೆ ಕಂಗಳ ಬೆಳಗಿದ ಪ್ರಿಯತಮೆ
ಸಾಹಿತ್ಯ: ಕೆ.ಕಲ್ಯಾಣ್ ಸಂಗೀತ: ವಿ.ರವಿಚಂದ್ರನ್ ಹಾಡಿದವರು: ಎಸ್.ಪಿ.ಬಿ.

ಓ ಹೋ ಓ ಹೋ ಹೃದಯಕೆ ಜಾರಿದ ಹುಣ್ಣಿಮೆ ಕಂಗಳ ಬೆಳಗಿದ ಪ್ರಿಯತಮೆ
ಹೇಗೆ ಬಂದೆ ನನ್ನ ಹೃದಯಕೆ, ಹೇಳಮ್ಮ ಬಂದ ಹಾಗೆ ಇದ್ದು ಬಿಡಮ್ಮ
ಮಪಮಗಮಪನಿಸಗಸನಿಸನಿಸನಿಪನಿಪಮಪ...
ಕಂಪನ, ಕಂಪನ, ಕಂಪಿಸೊ ಕಂಪನ ಏನಿದೇನಿದು
ಓ ಹೋ ಓ ಹೋ ಹೃದಯಕೆ ಜಾರಿದ ಹುಣ್ಣಿಮೆ ಕಂಗಳ ಬೆಳಗಿದ ಪ್ರಿಯತಮೆ

ಕರೆಯದೇ ಬರುವುದು ತುಂಬಿಕೋ ಎನುವುದು ಪ್ರೀತಿ ಒಂದೇನೆ
ಕೊಡುವುದು ಬಿಡುವುದು ನಮ್ಮಲೂ ಸಿಗುವುದು ಪ್ರೀತಿ ಇಂದಾನೆ
ಪ್ರೇಮ ಪ್ರೀತಿ ಎಲ್ಲಾ ಮಾಡುವರು
ಆದರೂ ಏತಕೆ ಕೇಳಬೇಕೆಂದುಕೊಂಡೆ ಕಾಲ ಕಳೆವರು
ಓ ಹೋ ಓ ಹೋ ಹೃದಯಕೆ ಜಾರಿದ ಹುಣ್ಣಿಮೆ ಕಂಗಳ ಬೆಳಗಿದ ಪ್ರಿಯತಮೆ

ರಾತ್ರಿಗೂ ಹಗಲಿಗೂ ಅಂದಕೂ ಆಸೆಗೂ ಏನು ಅಂತರ
ಪ್ರೀತಿಯ ಕನಸಿಗೆ ಕನಸಿನ ಪ್ರೀತಿಗೆ ಎಲ್ಲಿ ಅಂತರ
ನಾನು ನೀನು ನಾವು ಆದೆವು
ತಿಳಿಯದೆ ಕಲಿಯದೆ ತಿಳಿದಹಾಗೆ ನಟಿಸುವ ಪ್ರೀತಿ ಸುಂದರ
ಓ ಹೋ ಓ ಹೋ ಹೃದಯಕೆ ಜಾರಿದ ಹುಣ್ಣಿಮೆ ಕಂಗಳ ಬೆಳಗಿದ ಪ್ರಿಯತಮೆ
ಹೇಗೆ ಬಂದೆ ನನ್ನ ಹೃದಯಕೆ, ಹೇಳಮ್ಮ ಬಂದ ಹಾಗೆ ಇದ್ದು ಬಿಡಮ್ಮ
ಮಪಮಗಮಪನಿಸಗಸನಿಸನಿಸನಿಪನಿಪಮಪ...
ಕಂಪನ, ಕಂಪನ, ಕಂಪಿಸೊ ಕಂಪನ ಏನಿದೇನಿದು
------------------------------------------------------------------------------------------------------------------

ಸ್ನೇಹ - (೧೯೯೯) - ಎಲ್ಲಿದೆ ಬಾಳಿನ ಜನಪದ ಎಲ್ಲಿದೆ ಬದುಕಿನ ಜಾನಪದ
ಸಾಹಿತಿ - ಕೆ.ಕಲ್ಯಾಣ್ ಗಾಯಕ - ಏಸುದಾಸ್ ಸಂಗೀತ - ವಿ.ರವಿಚಂದ್ರನ್

ಎಲ್ಲಿದೆ ಬಾಳಿನ ಜನಪದ ಎಲ್ಲಿದೆ ಬದುಕಿನ ಜಾನಪದ
ಹೇಳುವೆ ಮನಸಿಟ್ಟು ಕೇಳು ಸ ರೀ ಗ ಮ ಪ ದ

ಏನದು ಜಗದಲಿ ಶಾಶ್ವತ ಏನದು ಬದುಕಿಸೊ ಅಮೃತ
ತಿಳಿಸುವೆ ಕಿವಿಗೊಟ್ಟು ಕೇಳು ಏನು ಅಂತ
ಮೋಡ ಕರಗಿ ನೀರು ಆಗಿ ಮರಳಿ ಹಾವಿ ಆಗಿ ಹೋಗಿ
ಸುರಿಯೊ ನೀರಿನ ಸ್ನೇಹವದು ತಿರುಗೊ ಭೂಮಿಯ ಸ್ನೇಹವದು
ಸ್ನೇಹ ಸ್ನೇಹ ಎಂದು ಸ್ನೇಹ

ಹಗಲಿಗೆ ಸೂರ್ಯನ ನೆರವಿದೆ ಇರುಳಿಗೆ ಚಂದ್ರನ ನೆರವಿದೆ
ಹಗಲಿರುಳಲ್ಲಿಯು ಕಣೋ ನೆರವು ಒಂದೇ
ಮುಗಿಲಿಗೆ ನವಿಲಿನ ಜೊತೆಇದೆ ಚೈತ್ರಕೆ ಕೋಗಿಲೆ ಜೊತೆಇದೆ
ಯಾವುದೆ ಋತುವಲು ನಮ್ಮ ಜೋತೆಯುವೊಂದೇ
ಉಸಿರ ನಿಯಮ ಜನನ ಮರಣ ಜಗದ ನಿಯಮ ಪುನರಪಿ ಜನನ
ಆತ್ಮ ದೇಹದ ಸ್ನೇಹವಿದು ಆತ್ಮ ಕಥೆಗಳ ಸ್ನೇಹವಿದೂ
ಸ್ನೇಹ ಸ್ನೇಹ ಒಂದೆ ಸ್ನೇಹ
--------------------------------------------------------------------------------------------------------------------------

ಸ್ನೇಹ - (೧೯೯೯) - ಚೆಂದಗಾತಿ ಚೆಂದದ ಕಣ್ ಸನ್ನೆ ಕಂಡರೆ
ಸಂಗೀತ - ವಿ.ರವಿಚಂದ್ರನ್ ಸಾಹಿತಿ - ಕೆ.ಕಲ್ಯಾಣ್ ಗಾಯಕ - ಎಲ್.ಏನ್.ಶಾಸ್ತ್ರಿ ಸುಮಾ ಶಾಸ್ತ್ರಿ

ಗಂಡು : ಚೆಂದಗಾತಿ ಚಂದದ ಕಣ್ ಸನ್ನೆ ಕಂಡರೇ ಚಂದಮಾಮನಾದರೂ ಬರಿ ಸೊನ್ನೆಯಾಗುವಾ
ಹೆಣ್ಣು : ಈ ಮಾಯಗಾರನಾ ಅಂಗೈಲಿ ಸಿಕ್ಕರೆ ಈ ಲೋಕ ಮಾಯವಾದರೂ ಗೊತ್ತೇ ಆಗದು

ಹೆಣ್ಣು : ಯಾಕೇ... ಎಲ್ಲಾ ಪ್ರೇಮಿಯು ಆಗಾಗ ಮಾತೇ ಆಡರು
ಗಂಡು : ಹೌದು... ಮೌನ ಎಂಬುದು ಪ್ರೇಮಕ್ಕೆ ಮೊದಲ ದೇವರು
ಹೆಣ್ಣು : ಈ ಮೌನ ಎಂಬುದೇ ಈ ನಮ್ಮ ಮಿಲನದ ಸಂಗೀತ
ಗಂಡು : ಇಲ್ಲಿ ಎದೆಯಾ ಬಡಿತಗಳೇ ಭೋರ್ಗರೆಯೋ ;ಜಲಪಾತ
ಹೆಣ್ಣು : ಓಓಓಓಓ ... ಓಓಓಓಓ
ಗಂಡು : ಸ್ವರಗಳೆಲ್ಲ ... ಸ್ವರಗಳಲ್ಲ ನೆನಪುಗಳು
ಹೆಣ್ಣು : ಅಂದವಾದ ಗಂಡಿನ ಬಂಧನಾ ಕಂಡರೇ ಅಂಧಳಾಗಿ ಹೋಗುವೆ ಯಾಕಯ್ಯ ದೇವರೇ
ಗಂಡು : ಚೆನ್ನಾ... ಬಣ್ಣದ ಲೋಕದಲ್ಲಿ ಆಸೆಗೆ ಯಾವ ಬಣ್ಣವಿದೆ
ಹೆಣ್ಣು : ರನ್ನಾ... ಆಸೆಯ ಬಣ್ಣಗಳು ಒತ್ತಾಸೆ ನೀಡೋ ಕನಸಲಿದೆ
ಗಂಡು : ಈ ಹೃದಯದ ಮನೆಯಲ್ಲಿ ಸಂಗೀತ ತುಂಬಿದ ಶ್ವಾಸವಿದೆ
ಹೆಣ್ಣು : ಈ ಪ್ರೀತಿಸೋ ಎದೆಯಲ್ಲಿ ಒಂದಾಗೋ ವೇದದ ಘೋಷವಿದೆ
ಗಂಡು : ಓ ಓ ಓ ಓಓಓಓ
ಹೆಣ್ಣು : ಪದಗಳೆಲ್ಲ ... ಪದಗಳಲ್ಲ ಕನಸುಗಳು
ಗಂಡು : ಚೆಂದಗಾತಿ ಚಂದದ ಕಣ್ ಸನ್ನೆ ಕಂಡರೇ ಚಂದಮಾಮನಾದರೂ ಬರಿ ಸೊನ್ನೆಯಾಗುವಾ
ಹೆಣ್ಣು : ಈ ಮಾಯಗಾರನಾ ಅಂಗೈಲಿ ಸಿಕ್ಕರೆ ಈ ಲೋಕ ಮಾಯವಾದರೂ ಗೊತ್ತೇ ಆಗದು
--------------------------------------------------------------------------------------------------------------------------

ಸ್ನೇಹ - (೧೯೯೯) - ಸೂರ್ಯ ಸುತ್ತಾಂಗಿಲ್ಲಾ ಚಂದ್ರ ಹಾರಂಗಿಲ್ಲ
ಸಂಗೀತ - ವಿ.ರವಿಚಂದ್ರನ್ ಸಾಹಿತಿ - ಕೆ.ಕಲ್ಯಾಣ್ ಗಾಯಕ - ಸುಖವಿಂದರ್ ಸಿಂಗ್ ಅನುರಾಧ ಶ್ರೀರಾಮ

ಗಂಡು : ಸೂರ್ಯ ಸುತ್ತಾಂಗಿಲ್ಲಾ ಚಂದ್ರ ಹಾರಂಗಿಲ್ಲ ಅಂತಾ ಅನ್ನೋ ಮನಸು ಹಾರಿ ಹೋಯ್ತಲ್ಲ
ಹೆಣ್ಣು : ಎತ್ತಾ ಹಾರೋಯ್ತದು ಹೇಳು ಹೆಂಗಾಯ್ತದು ನಂಗೆ ತೀರಾ ಹೊಸದಿದು
ಗಂಡು : ಪ್ರೀತಿ ಒಂದು ಬಂದರಾಯ್ತು ಭೂಮಿ ಮಾತೈತೀ
ಗಂಡು : ಸೂರ್ಯ ಸುತ್ತಾಂಗಿಲ್ಲಾ ಚಂದ್ರ ಹಾರಂಗಿಲ್ಲ ಅಂತಾ ಅನ್ನೋ ಮನಸು ಹಾರಿ ಹೋಯ್ತಲ್ಲ

ಗಂಡು : ನೆನ್ನೆ ಮಂಜಲ್ಲಿ ಮುಂಜಾವಲಿ ನಿನ್ನ ಕಣ್ಣ ರೆಪ್ಪೆ ಉಪ್ಪರಿಗೆಯಲ್ಲಿ 
           ಒಂದು ಕೊಪ್ಪರಿಗೆ ನಗಿಯಾ ಚೆಲ್ಲಿ ಕರೆದೆಯಾ ಗೌರಿ ಸಂಜೆವರೆಗೂ ಕಾತವ್ವಿ 
ಹೆಣ್ಣು : ನನ್ನ ನಗೆಯ ಹಿಂದೆ ಮಾಗಿಯ ಕನಸೈತೆ 
ಗಂಡು : ಮಾಗಿ ಧರೆಯಾಗ್ಲೆನವ್ವಿ... 
ಹೆಣ್ಣು : ನೊರೆ ಹಾಲಾ ಮನಸಯ್ಯೋನೇ ಎದೆಯಾಗಿ ತೆನೆಯ ಬೆರಸಿದೆ ನೀ 
ಗಂಡು : ಸೂರ್ಯ ಸುತ್ತಾಂಗಿಲ್ಲಾ ಚಂದ್ರ ಹಾರಂಗಿಲ್ಲ ಅಂತಾ ಅನ್ನೋ ಮನಸು ಹಾರಿ ಹೋಯ್ತಲ್ಲ

ಹೆಣ್ಣು : ನಾಳೆ ತೋಪಲಿ ಬೆಳದಿಂಗಳಿ ಕೈ ನಡುಗಿತ್ಯಾಕೋ ಗಂಡುಗಲಿ 
          ಪಚ್ಚೆವಿಳ್ಯ ತಿನಿಸಾಕೆ ಹೆಚ್ಚೇ ಇರಿಸಿಕೊಂಡು ಬಂದೆ ನಂಬೋ ಹೆಣ್ಣಿಗಳೇ ಸಾಕ್ಷಿ 
ಗಂಡು : ವ್ಹಾರೇ ... ಗೆಳತೀ ನನ್ನಾಕೀ ಘನತೆ ನೀನವ್ವಿ 
ಹೆಣ್ಣು : ಜಗ ಬೆಳಕೈತಿ ಕಣೋ ಸೂಜಿಯಾ ಮೊನೆಯಗಲ ಮನಸು ಸಾಕು ಮದಿವಿಯಾಕ್ತಿನಿ 
ಗಂಡು : ಸೂರ್ಯ ಸುತ್ತಾಂಗಿಲ್ಲಾ ಚಂದ್ರ ಹಾರಂಗಿಲ್ಲ ಅಂತಾ ಅನ್ನೋ ಮನಸು ಹಾರಿ ಹೋಯ್ತಲ್ಲ
ಹೆಣ್ಣು : ಎತ್ತಾ ಹಾರೋಯ್ತದು ಹೇಳು ಹೆಂಗಾಯ್ತದು ನಂಗೆ ತೀರಾ ಹೊಸದಿದು
ಗಂಡು : ಪ್ರೀತಿ ಒಂದು ಬಂದರಾಯ್ತು ಭೂಮಿ ಮಾತೈತೀ
ಗಂಡು : ಸೂರ್ಯ ಸುತ್ತಾಂಗಿಲ್ಲಾ ಚಂದ್ರ ಹಾರಂಗಿಲ್ಲ ಅಂತಾ ಅನ್ನೋ ಮನಸು ಹಾರಿ ಹೋಯ್ತಲ್ಲ
--------------------------------------------------------------------------------------------------------------------------

ಸ್ನೇಹ - (೧೯೯೯) - ಜೀವನ ಎನ್ನುವ ದಾರಿಯಲಿ ಯೌವ್ವನದ ಅಂಬಾರಿಯಲಿ
ಸಂಗೀತ - ವಿ.ರವಿಚಂದ್ರನ್ ಸಾಹಿತಿ - ಕೆ.ಕಲ್ಯಾಣ್ ಗಾಯಕ - ಮನೋ, ಕೋರಸ್

ಕೋರಸ್ : ಜೀವನ ಎನ್ನುವ ದಾರಿಯಲಿ ಯೌವ್ವನದ ಅಂಬಾರಿಯಲ್ಲಿ
               ಇಪ್ಪತ್ತೊಂದನೇ ಶತಮಾನಕ್ಕೆ ಹೊರಟಿದೆ ನಮ್ಮ ಈ ಪಯಣ
ಗಂಡು : ಮುಂದಿನ ಶತಮಾನ ... ಕೈ ಸೇರಿಕೊಳ್ಳೋಕೆ ಕೈ ಬೀಸಿ ಬಾರೋ
            ನೆನ್ನೆಯ ಕಥೆಗಳ ಮರಿಬೇಕು ನಾಳೆಯ ಪುಟಗಳ ತೆರಿಬೇಕು
            ಇಪ್ಪತ್ತೊಂದನೇ ಶತಮಾನಕ್ಕೆ ಹೊರಟಿದೆ ನಮ್ಮ ಈ ಪಯಣ

ಕೋರಸ್ : ಮುಂಬರುವ ಶತಮಾನದಲಿ ನಿನ್ನಾ ಯೊಚನೆ ಏನಿಲ್ಲಿ
ಗಂಡು : ಕನಸುಗಳಾ ನನಸಾಗಿಸುವ ಯೋಚನೆಯೊಂದೇ ತಲೆಯಲ್ಲಿ
ಕೋರಸ್ :  ನಾಳೆಗಾಗಿ ಮಾಡಬೇಕಾ ಇಂದೇ ಸಾಧನೆ
ಗಂಡು : ಸಮಯ ಹೋಗೋ ಮುಂಚೆ ಹೃದಯ ಗೆಲ್ಲೊ ಸುಮ್ಮನೇ
           ಹೆಜ್ಜೆಗೊಂದು ಕನಸು ನಮಗಿಲ್ಲಿ ಬೆರಗಾಗುವೆ ನೀನು ಕೈಗೂಡೋ ಸಮಯದಲಿ
           ಜೀವನ ಎನ್ನುವ ಪಾಠದಲಿ  ಯೌವ್ವನದ ಹೋರಾಟದಲಿ
           ಇಪ್ಪತ್ತೊಂದನೇ ಶತಮಾನಕ್ಕೆ ಹೊರಟಿದೆ  ನಮ್ಮ ಈ ಪಯಣ
ಕೋರಸ್ : ನೆನ್ನೆಯ ಹಾಗೆ ನಾಳೆಗಳು ಅದಕೆ ಯಾಕೋ ಕನಸುಗಳು
ಗಂಡು : ನಮ್ಮಾ ನಾಳೆಯ ಬಂಧುಗಳೇ ನಂಬಿಕೆಯಿರುವ ಕನಸುಗಳು
ಕೋರಸ್ : ಯಾವ ರೀತಿ ಯಾವ ಕನಸು ಹೇಳೋ ಸೋದರ
ಗಂಡು : ಪ್ರಶ್ನೆ ಎಂಬ ಮಾತೇ ಮರೆಸೋ ಕನಸು ಸುಂದರ ಚರಿತ್ರೆಯೊಳಗೆ ಕೋಟಿ ಹಾಳೆ ಇದೆ
            ಒಂದೊಂದರಲ್ಲೂನೂ ನಾವಳೋ ನಾಳೇ ಇದೇ
ಕೋರಸ್ : ಜೀವನ ಎನ್ನುವ ವೇಗದಲಿ ಯೌವ್ವನದ ಆವೇಗದಲಿ
           ಇಪ್ಪತ್ತೊಂದನೇ ಶತಮಾನಕ್ಕೆ ಹೊರಟಿದೆ  ನಮ್ಮ ಈ ಪಯಣ
           ಜೀವನ ಎನ್ನುವ ಬೆಳಕಿನಲಿ ಯೌವ್ವನದಾ ಹೊಂಬಣ್ಣದಲಿ
           ಇಪ್ಪತ್ತೊಂದನೇ ಶತಮಾನಕ್ಕೆ ಹೊರಟಿದೆ  ನಮ್ಮ ಈ ಪಯಣ
--------------------------------------------------------------------------------------------------------------------------

ಸ್ನೇಹ - (೧೯೯೯) - ಯಾಕಮ್ಮ ಬೇಕು ಇಂಥ ಲೋಕ
ಸಂಗೀತ - ವಿ.ರವಿಚಂದ್ರನ್ ಸಾಹಿತಿ - ಕೆ.ಕಲ್ಯಾಣ್ ಗಾಯಕ - ಕೆ.ಜೆ.ಏಸುದಾಸ್

ಓಓಓಓಓ ಓಓಓಓಓಓಓ ಓಓಓಓಓಓಓ
ಯಾಕ್ಕಮ್ಮ ಬೇಕು ಇಂಥಾ ಲೋಕ ಕಣ್ಣೀರ ಮುಂದೆ ನಗುವ ಲೋಕ
ತಪ್ಪೇ ಇರದಾ ಮನಸೇ ರೆಪ್ಪೆ ತೆರೆದು ನೋಡೇ
ಈ ಸಂದೇಹ ಎಲ್ಲಿ ತನಕ ನೀರಾಗಿ ನಿಲ್ಲೋತನಕ
ಯಾಕ್ಕಮ್ಮ ಬೇಕು ಇಂಥಾ ಲೋಕ ಕಣ್ಣೀರ ಮುಂದೆ ನಗುವ ಲೋಕ
ತಪ್ಪೇ ಇರದಾ ಮನಸೇ ರೆಪ್ಪೆ ತೆರೆದು ನೋಡೇ
ಈ ಸಂದೇಹ ಎಲ್ಲಿ ತನಕ ನೀರಾಗಿ ನಿಲ್ಲೋತನಕ
ಲಾಲಾರಾರಿರಾ ಓಓ  ಲಾಲಾರಾರಿರಾ

ನಿನಗೂ ಒಂದು ಓ... ಮನಸು ಇದೇ ಮನಸಲ್ಲೊಂದು ಓ.. ಹೃದಯಇದೇ 
ಇದೇ ಅಂತಾನೇ ಲೋಕ ಅರಿಯದು 
ನಿನಗೂ ಒಂದು ಓ.. ಹಾಡು ಇದೇ ಹಾಡಲ್ಲೊಂದು ಓ... ಆಸೆ ಇದೇ 
ನಿಜ ಅಂತಾನೇ ಎಲ್ಲೂ ತಿಳಿಯದೂ 
ಯಾರಿಗಂತ ಹೇಳುವೇ ನಿನ್ನ ತಳಮಳ ಸ್ವಲ್ಪ ಸಮಯ ಮಾತ್ರ ಇಂಥಾ ತಳಮಳ 
ನಾಳೇ... ನಿನ್ನದೂ .. 
ಯಾಕ್ಕಮ್ಮ ಬೇಕು ಇಂಥಾ ಲೋಕ ಕಣ್ಣೀರ ಮುಂದೆ ನಗುವ ಲೋಕ
ತಪ್ಪೇ ಇರದಾ ಮನಸೇ ರೆಪ್ಪೆ ತೆರೆದು ನೋಡೇ
ಈ ಸಂದೇಹ ಎಲ್ಲಿ ತನಕ ನೀರಾಗಿ ನಿಲ್ಲೋತನಕ
ಲಾಲಾರಾರಿರಾ ಓಓ  ಲಾಲಾರಾರಿರಾ

ಕೈ ಹಿಡಿದ ಅರಸ ಮನಸಿಡಲಿಲ್ಲ ಪ್ರೀತಿಯ ಮುಂದೆ ಕನಸಿಡಲಿಲ್ಲ 
ನೀ ಹಾಗಂತ ಅಳುವುದ್ಯಾತಕೇ 
ಹೆಣ್ಣೆಂದ ಮೇಲೆ ಬರಿ ಅಪವಾದ ತವರಲ್ಲೂ ಕೂಡಾ ಇಂಥಾ ಶೋಧ 
ನೀ ಹಾಗಾಂತ ಸೋಲೋದ್ಯಾತಕೆ  
ಒಳ್ಳೇತನವು ಇಂದಿಗೂ  ಭೂಮಿ ಮೇಲಿದೆ ಅದಕೆ ನಮ್ಮ ಜೀವನ ಭೂಮಿ ಮೇಲಿದೇ 
ಅದಕೆ ನಮ್ಮ ಜೀವನ ಭೂಮಿ ಮೇಲಿದೆ ನಾಳೆ ನಿನ್ನದೂ 
ಯಾಕ್ಕಮ್ಮ ಬೇಕು ಇಂಥಾ ಲೋಕ ಕಣ್ಣೀರ ಮುಂದೆ ನಗುವ ಲೋಕ
ತಪ್ಪೇ ಇರದಾ ಮನಸೇ ರೆಪ್ಪೆ ತೆರೆದು ನೋಡೇ
ಈ ಸಂದೇಹ ಎಲ್ಲಿ ತನಕ ನೀರಾಗಿ ನಿಲ್ಲೋತನಕ
ಲಾಲಾರಾರಿರಾ ಓಓ  ಲಾಲಾರಾರಿರಾ
--------------------------------------------------------------------------------------------------------------------------

No comments:

Post a Comment