538. ಭಾಗ್ಯದ ಬೆಳಕು (1981)

ಭಾಗ್ಯದ ಬೆಳಕು ಚಲನಚಿತ್ರದ ಹಾಡುಗಳು 
  1. ತುಂಗಾ ತುಂಗಾತೀರ ನಿವಾಸಿ
  2. ಏನೆಂದೂ ನಾ ಹಾಡಲೀ ಈ ದಿನ ಹೇಗೆ ಹಾಡಲೀ 
  3. ನಮ್ಮ ಪ್ರೇಮದ ಬದುಕಿಗೇ  ಹೊಸ ಬೆಳಕು ಚಿಮ್ಮಿದೇ 
ಭಾಗ್ಯದ ಬೆಳಕು (1981) - ತುಂಗಾತೀರ ನಿವಾಸಿ
ಸಂಗೀತ: ಜಯಪ್ರಕಾಶ್ ಸಾಹಿತ್ಯ :  ಸೋರಟ್ ಅಶ್ವಥ್    ಗಾಯನ: ಕಸ್ತೂರಿ ಶಂಕರ್ 

ಓ ಪ್ರಭು ಗುರು ರಾಘವೇಂದ್ರ  ಸಕಲರ ಸಲಹುವ .... ಯತೀಂದ್ರ ಗುರು ರಾಘವೇಂದ್ರ
ತುಂಗಾ....
ತುಂಗಾತೀರ ನಿವಾಸಿ ರಾಘವ ಬೇಡುವೆ ನಾ ನಮಿಸಿ ... ರಾಘವ ಬೇಡುವೆ ನಾ ನಮಿಸಿ
ತುಂಗಾ ತುಂಗಾತೀರ ನಿವಾಸಿ ರಾಘವ ಬೇಡುವೆ ನಾ ನಮಿಸಿ
ದೀನರ ದೈವವೆ ನೀನೆನಿಸಿ ಸ್ವಾಮಿ...  ಸ್ವಾಮಿ..   
ತುಂಗಾ ತುಂಗಾತೀರ ನಿವಾಸಿ

ಮಂಗಳ ಮೂರುತಿ ನೀ ಮರೆಯೆ ಆಸರೆ ನೀಡುವ ಅನ್ಯರ ಅರಿಯೆ
ಮಂಗಳ ಮೂರುತಿ ನೀ ಮರೆಯೆ ಆಸರೆ ನೀಡುವ ಅನ್ಯರ ಅರಿಯೆ
ಬೇಡುವ ನಿನ್ನನು ಬಿಡದೆಲೆ ಪೊರೆಯೆ ಆಆಆಆ...ಆ...
ಬಾಳಿನ ಸಂಕಟ ನೀಗಿಪ ದೊರೆಯೆ.... ಓ ಗುರು ರಾಘವೇಂದ್ರ  ಸ್ವಾಮಿ... ಸ್ವಾಮಿ..
ತುಂಗಾ ತುಂಗಾತೀರ ನಿವಾಸಿ

ಚಂಚಲ ಮನವು ಕಾಣದೆ ಶಾಂತಿ ಚಿಂತೆ ಮುಸುಕಿ ಆಗಿದೇ  ವಿಭ್ರಾಂತಿ
ಚಂಚಲ ಮನವು ಕಾಣದೆ ಶಾಂತಿ ಚಿಂತೆ ಮುಸುಕಿ ಆಗಿದೇ  ವಿಭ್ರಾಂತಿ
ಹಗಲು ರಾತ್ರಿ ಕಾಡಿದೆ ಭೀತಿ ಬಾಳಿನ ಸಂಕಟ ನೀಗಿಪ ದೊರೆಯೆ
ಓ ಗುರು ರಾಘವೇಂದ್ರ ಸ್ವಾಮಿ...  ಸ್ವಾಮಿ...
ತುಂಗಾ ತುಂಗಾತೀರ ನಿವಾಸಿ ರಾಘವ ಬೇಡುವೆ ನಾ ನಮಿಸಿ
ದೀನರ ದೈವವೆ ನೀನೆನಿಸಿ ಸ್ವಾಮಿ...  ಸ್ವಾಮಿ... ಸ್ವಾಮಿ...  ಸ್ವಾಮಿ...

--------------------------------------------------------------------------------------------------------------------------

ಭಾಗ್ಯದ ಬೆಳಕು (1981) - ಏನೆಂದೂ ಹಾಡಲೀ 
ಸಂಗೀತ: ಜಯಪ್ರಕಾಶ್  ಸಾಹಿತ್ಯ :  ಶ್ರೀಕೃಪ  ಗಾಯನ: ಎಸ್.ಪಿ.ಬಿ 

ಎನೆಂದು ನಾ ಹಾಡಲಿ ಈ ದಿನ  ಹೇಗೆ ಹಾಡಲೀ
ಕವಿಯು ಬರೆಯದ ಕವಿತೇಯಾ ಈ ದಿನ ನಾನೆಂತೂ ಹಾಡಲೀ
ಎನೆಂದು ನಾ ಹಾಡಲಿ ಈ ದಿನ  ಹೇಗೆ ಹಾಡಲೀ

ನಾಳಿನ ಬಾಳಲಿ ದಾರೀ ಕಾಣದೇ....  ಬಾಳಿನ ಬಾನಲಿ ಮೋಡ ಮುಸುಕಿದೇ
ಸಾಗರದ ಮಡಿಲಲಿ ಬಿರುಗಾಳೀ ಬೀಸಿದೆ
ಸಾಗಿದೇ ನಾವೇಯೂ ತೀರ ಕಾಣದೇ.. ಹಾಯ್ ನಡುಗಿದೇ
ಎನೆಂದು ನಾ ಹಾಡಲಿ ಈ ದಿನ  ಹೇಗೆ ಹಾಡಲೀ

ಎಲ್ಲರ ಮೊಗದಲೀ ನಗೆಯೂ ಅರಳಿದೇ ... ನನ್ನಯ ಸ್ವರದಲೀ ಇಂಪೂ ಉಡುಗಿದೇ
ಕತ್ತಲು ತುಂಬಿದ ನಾಳೇ ಎದುರಿದೇ
ಮುಂದೇ ಮುಂದೇ ಸಾಗಲೂ ಇಂದೂ ತೋಚದೇ ಮನವೂ ನರಳಿದೇ
ಎನೆಂದು ನಾ ಹಾಡಲಿ ಈ ದಿನ  ಹೇಗೆ ಹಾಡಲೀ
--------------------------------------------------------------------------------------------------------------------------

ಭಾಗ್ಯದ ಬೆಳಕು (1981) - ನಮ್ಮ ಪ್ರೇಮದ ಬದುಕಿಗೇ  ಹೊಸ ಬೆಳಕು ಚಿಮ್ಮಿದೇ 
ಸಂಗೀತ: ಜಯಪ್ರಕಾಶ್  ಸಾಹಿತ್ಯ :  ದೊಡ್ಡರಂಗೇಗೌಡ, ಗಾಯನ: ಎಸ್.ಪಿ.ಬಿ, ಎಸ್.ಜಾನಕೀ 

ಹೆಣ್ಣು : ನಮ್ಮ ಪ್ರೇಮದ ಬದುಕಿಗೇ ಹೊಸ ಬೆಳಕೂ ಚಿಮ್ಮಿದೇ
          ಹೊಸ ಹೊಳಪೂ ಹೊಮ್ಮಿದೇ... ಹೊಮ್ಮಿದೇ... ಹೊಮ್ಮಿದೇ... ಹೊಮ್ಮಿದೇ   
ಗಂಡು : ನಮ್ಮ ಬಾಳಿನ ಚೆಲುವಿಗೇ ಸಿರಿ ಹರುಷ ಬಂದಿದೇ
           ಸವಿ ಸರಸ ತಂದಿದೇ... ತಂದಿದೇ... ತಂದಿದೇ... ತಂದಿದೇ..
 
ಹೆಣ್ಣು : ನನ್ನ ಹರೆಯದ ಹೂವಿಗಿಂದೂ ದುಂಬಿಯೊಂದು ಒಲಿದು ಬಂದೂ
ಗಂಡು : ಲಲಲಲಾ... ಲಲಲಲಾ... ಲಲಲಲಾ...ಹೂಂ ಹೂಂ  ಹುಂ
ಹೆಣ್ಣು : ನನ್ನ ಹರೆಯದ ಹೂವಿಗಿಂದೂ ದುಂಬಿಯೊಂದು ಒಲಿದು ಬಂದೂ
          ಒಲುಮೆ ಗೀತೆಯ ಹಾಡಿದೇ.. ಹಾಡಿದೇ..  ಹಾಡಿದೇ..  ಹಾಡಿದೇ..  
ಗಂಡು : ನಮ್ಮ ಬಾಳಿನ ಚೆಲುವಿಗೇ ಸಿರಿ ಹರುಷ ಬಂದಿದೇ
           ಸವಿ ಸರಸ ತಂದಿದೇ... ತಂದಿದೇ... ತಂದಿದೇ... ತಂದಿದೇ..

ಗಂಡು : ನಿನ್ನ ಮಿಲನದ ರಾಗ ಮಿಂದೂ ಹೊಳೆದು ಬೆಳೆದು ಕುಣಿದು ಮಣಿದು 
ಹೆಣ್ಣು : ಆಆಆಅ... ಆಆಆಆ.... ಲಲಲಲಲಾಲಾಲ ಲಾಲಾಲಾಲ 
ಗಂಡು : ನಿನ್ನ ಮಿಲನದ ರಾಗ ಮಿಂದೂ ಹೊಳೆದು ಬೆಳೆದು ಕುಣಿದು ಮಣಿದು 
           ಮಧುರ ಸ್ನೇಹವೋ ಕೂಡಿದೇ  ಕೂಡಿದೇ.... ಕೂಡಿದೇ... ಕೂಡಿದೇ... 
ಹೆಣ್ಣು : ನಮ್ಮ ಪ್ರೇಮದ ಬದುಕಿಗೇ ಹೊಸ ಬೆಳಕೂ ಚಿಮ್ಮಿದೇ
          ಹೊಸ ಹೊಳಪೂ ಹೊಮ್ಮಿದೇ... ಹೊಮ್ಮಿದೇ... ಹೊಮ್ಮಿದೇ... ಹೊಮ್ಮಿದೇ   
ಗಂಡು : ಲಲಲಲಾ ಲಲಲಲಾ ಲಲಲಲಾ ಆಹಾಹಾ
ಹೆಣ್ಣು : ಲಲಲಲಾ (ಆಹಾ ) ಲಲಲಲಾ (ಆಹಾ )
ಇಬ್ಬರು : ಲಲಲಲಾ... ಲಲಲಲಾ ... ಲಲಲಲಾ ...
--------------------------------------------------------------------------------------------------------------------------

No comments:

Post a Comment