- ಭೂಮಿ ತೇಲಾಡೋ ಹೊತ್ತು
- ಕುಡಿದಾಗ ಸತ್ಯವನ್ನೇ ನಾ ಹೇಳುವೇ
- ಪ್ರೇಮ ಪ್ರೇಮದ ಕನಸೂ ಕಾಣಲು ಸೊಗಸು
ಕುರುಕ್ಷೇತ್ರ (೧೯೮೭) - ಭೂಮಿ ತೇಲಾಡೋ ಹೊತ್ತು
ಸಂಗೀತ : ಎಂ.ರಂಗರಾವ್ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಜಾನಕೀ, ಕೋರಸ್
ಆಆಆ.. ಭೂಮಿ ತೇಲಾಡೋ ಹೊತ್ತು ಎಂಥಾ ಮೋಜಿನ ಮತ್ತು
ಒಮ್ಮೆ ಆಟದಿ ಅನುಭವನಿಂದು ಅಲ್ಲಿ ಕಾಣುವೇ ಹೊಸ ಹೊಸ ರಂಗು
ಮರೆಯುವ ಸುಖವನು ಸವಿಯುವ ಬಾ
ಭೂಮಿ ತೇಲಾಡೋ ಹೊತ್ತು ಎಂಥಾ ಮೋಜಿನ ಮತ್ತು
ನೀ ಯಾರೋ ನಾ ಯಾರೋ ಬೇಡ ಇದ್ದಾಗ ಏನಾಯ್ತು ನಂಟೂ
ತೋಳಲ್ಲಿ ಒಂದಾಗೂ ನೋಡೋಕೆ ಈ ಸ್ವರ್ಗ ಇನ್ನೆಲ್ಲಿ ಉಂಟು
ಸೂಜಿಯ ಮೊನೆಯಲೀ ಸುಖಮಯ ಗುಂಗೂ
ರಾತ್ರಿಯ ನಿಶೆಯಿರೇ ನಮಗಾರ ಹಂಗು
ಗಮ್ಮಿನ ಗಮ್ಮತ್ತು ತಿಳಿಯಲು ಬಾ..
ಗಮ್ಮಿನ ಗಮ್ಮತ್ತು ತಿಳಿಯಲು ಬಾ..
ಭೂಮಿ ತೇಲಾಡೋ ಹೊತ್ತು ಎಂಥಾ ಮೋಜಿನ ಮತ್ತು
ಪ್ರಾಯಕ್ಕೆ ನೂರಾರು ಆಸೇ ಕಾಮಕ್ಕೆ ಬೇಕಿಲ್ಲ ಬಾಷೇ
ಕಣ್ಣಲ್ಲೇ ಮಾತಾಡ ಬಲ್ಲೆ ಅದರರ್ಥ ನೀನೇನೂ ಬಲ್ಲೇ
ಬೇರೆಯ ಲೋಕಕೆ ಒಯ್ಯುವೇ ನಿನ್ನ ಅರಿಯದ ಪಾಠವ ಕಲಿಸುವೆ ಇನ್ನೂ
ರಸಿಕತೆ ಹೊಳೆಯಲಿ ಮುಳುಗಲು ಬಾ
ಭೂಮಿ ತೇಲಾಡೋ ಹೊತ್ತು ಎಂಥಾ ಮೋಜಿನ ಮತ್ತು
ಒಮ್ಮೆ ಆಟದಿ ಅನುಭವನಿಂದು ಅಲ್ಲಿ ಕಾಣುವೇ ಹೊಸ ಹೊಸ ರಂಗು
ಮರೆಯುವ ಸುಖವನು ಸವಿಯುವ ಬಾ
ಭೂಮಿ ತೇಲಾಡೋ ಹೊತ್ತು ಎಂಥಾ ಮೋಜಿನ ಮತ್ತು
-------------------------------------------------------------------------------------------------------------------------
ಕುರುಕ್ಷೇತ್ರ (೧೯೮೭) - ಕುಡಿದಾಗ ಸತ್ಯವನ್ನೇ ನಾ ಹೇಳುವೇ
ಸಂಗೀತ : ಎಂ.ರಂಗರಾವ್ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ.
ಕುಡಿದಾಗ ಸತ್ಯವನ್ನೇ ನಾ ಹೇಳುವೇ ಗುಂಡ್ ಹಾಕಿ ಗುಂಗಲ್ಲಿ ನಾ ಹಾಡುವೇ
ಕಹಿಯಾದ ಸತ್ಯವು ಎಂದು ಸಿಹಿಯಾದ ಸುಳ್ಳಿಗೂ ಮೇಲು
ಗೋಮುಖ ವ್ಯಾಘ್ರಕ್ಕಿಂತ ನಿಯತ್ತಿನ ನಾಯೇ ಮೇಲೂ
ಹೌದಾ ಅಲ್ವೇ ಹೇಳಿ ಈಗ ನೀವೇಲ್ಲರೂ ನಾ ಹಾಡಿದಾಗ ಹಾಡಬೇಕು ನೀವೆಲ್ಲರೂ
ಖಾಕಿ ಕಾವಿಗೂ ಖಾದಿ ಟೋಪಿಗೂ ಮಾನಭಂಗ ಮಾಡಿ
ಹಣದಾ ಗಂಟಿಗೆ ದಾಸರಾಗುವಾ ಸ್ವಾರ್ಥಿ ಗುಂಪು ನೋಡಿ

ಹತ್ತು ತಿಂಗಳು ಹೊತ್ತು ಹೆತ್ತವಳ ಮಾರ ಬಲ್ಲರಿವರು
ಬಿದ್ದ ಕಾಸನು ನಾಲಿಗೆ ಚಾಚಿ ತೆಗೆಯ ಬಲ್ಲರಿವರು
ಮನಃಸಾಕ್ಷಿಯೂ ಇಲ್ಲ ದೈವದಂಜಿಕೆ ಇಲ್ಲ
ಪ್ಲೇಗೂ ಕಾಲರಾ ಬೇರೆ ಇಲ್ಲವು ಇವರೇ ಎಲ್ಲ ನೋಡಿ
ಕುಡಿದಾಗ ಸತ್ಯವನ್ನೇ ನಾ ಹೇಳುವೇ ಗುಂಡ್ ಹಾಕಿ ಗುಂಗಲ್ಲಿ ನಾ ಹಾಡುವೇ
ರಾಜಕೀಯದ ಚಕ್ರತೀರ್ಥದೇ ಈಜಬಲ್ಲ ಜಾಣ
ಕುರ್ಚಿ ಆಸೆಗೇ ನಂಬಿದವರಿಗೇ ಚೂರಿ ಹಾಕೋ ಜಾಣ
ಓಟು ಬೇಡುತ ತಿರುಕನ ಕಾಲಿಗೆ ಬೀಳಬಲ್ಲ ಇವರೂ
ಗೇಟು ತೋರುವನು ಗೆದ್ದನಂತರ ಬಳಿಗೆ ಹೋದರೇ ಅವನು
ಬಡವ ಇವನಿಗೆ ಏಣಿ ಧನಿಕನಾಗಲು ದೋಣಿ
ಮೇಲೆ ನೋಡಲು ಹೂವು ಒಳಗೆ ವಿಷದ ಹಾವೂ
ಕುಡಿದಾಗ ಸತ್ಯವನ್ನೇ ನಾ ಹೇಳುವೇ ಗುಂಡ್ ಹಾಕಿ ಗುಂಗಲ್ಲಿ ನಾ ಹಾಡುವೇ
ಕಹಿಯಾದ ಸತ್ಯವು ಎಂದು ಸಿಹಿಯಾದ ಸುಳ್ಳಿಗೂ ಮೇಲು
ಗೋಮುಖ ವ್ಯಾಘ್ರಕ್ಕಿಂತ ನಿಯತ್ತಿನ ನಾಯೇ ಮೇಲೂ
ಗೋಮುಖ ವ್ಯಾಘ್ರಕ್ಕಿಂತ ನಿಯತ್ತಿನ ನಾಯೇ ಮೇಲೂ
ಹೌದಾ ಅಲ್ವೇ ಹೇಳಿ ಈಗ ನೀವೇಲ್ಲರೂ ನಾ ಹಾಡಿದಾಗ ಹಾಡಬೇಕು ನೀವೆಲ್ಲರೂ
------------------------------------------------------------------------------------------------------------------------
------------------------------------------------------------------------------------------------------------------------
ಕುರುಕ್ಷೇತ್ರ (೧೯೮೭) - ಪ್ರೇಮ ಪ್ರೇಮದ ಕನಸೂ ಕಾಣಲು ಸೊಗಸು
ಸಂಗೀತ : ಎಂ.ರಂಗರಾವ್ ಸಾಹಿತ್ಯ : ಚಿ.ಉದಯಶಂಕರ ಗಾಯನ : ರಾಜಕುಮಾರಭಾರತಿ
ಹೂಂ.. ಪ್ರೇಮ.. ಪ್ರೇಮ.. ಪ್ರೇಮದ ಕನಸು ಕಾಣಲು ಸೊಗಸು
ಒಲವಿನ ನೂರು ಕಥೆ ಹೇಳುತಿರೆ ಕೇಳುತಿರೆ
ಆಹ್ .. ಎಂಥ ಆನಂದ ಪ್ರೇಮ ತಂದ ಸಂಬಂಧ
ಪ್ರೇಮದ ಕನಸು ಕಾಣಲು ಸೊಗಸು
ಒಲವಿನ ನೂರು ಕಥೆ ಹೇಳುತಿರೆ ಕೇಳುತಿರೆ
ಆಹ್ .. ಎಂಥ ಆನಂದ ಪ್ರೇಮ ತಂದ ಸಂಬಂಧ
ಒಲವಿನ ಬಂಧನಕೆ ಜೊತೆಯಿರಬೇಕು ಕಷ್ಟದ ವೇದನೆಗೆ ಒಬ್ಬನೀರೇ ಸಾಕೂ
ಬದುಕಲಿ ನಿನಗೆಂದು ಅನುಭವ ಗುರುವಂತೆ ಈ ನಿಜ ತಿಳಿದಾಗ ಬಾಳಲಿ ನಿಷ್ಚಿಂತೆ
ನಗುತಿರೇ ಎಲ್ಲೇ ಇರು ಎಲ್ಲ ಜನ ನಿನ್ನವರು ನನ್ನ ಮಾತು ಸುಳ್ಳಲ್ಲ ಕೇಳೋ ನನ್ನ ತಮ್ಮಯ್ಯ
ಪ್ರೇಮದ ಕನಸು ಕಾಣಲು ಸೊಗಸು
ಒಲವಿನ ನೂರು ಕಥೆ ಹೇಳುತಿರೆ ಕೇಳುತಿರೆ
ಆಹ್ .. ಎಂಥ ಆನಂದ ಪ್ರೇಮ ತಂದ ಸಂಬಂಧ
ಬದುಕಿನ ಹಾದಿಯಲಿ ಬಗೆ ಬಗೆ ಮುಳ್ಳು ಸುಖವನು ಹೊಂದಿರುವೇ ಎನುವುದು ಸುಳ್ಳು
ಮನದಲಿ ತುಂಬಿರುವ ಆಸೆಗಳ ಕೊಲ್ಲು ಮಸಣದ ಮನೆಯಲ್ಲಿ ಕಷ್ಟದ ಮಾತಿಲ್ಲ
ಸಾವಿನ ಮುಸುಗಲ್ಲಿ ನೋವಿನ ನೆರಳಿಲ್ಲ ಕಂಗಳು ಮುಚ್ಚಿದರೇ ನೆಮ್ಮದಿಯ ಕಾಣುವುದು
ನನ್ನ ಮಾತು ಸುಳ್ಳಲ್ಲ.. ಕೇಳೋ ತಮ್ಮಯ್ಯಾ...
ಪ್ರೇಮದ ಕನಸು ಕಾಣಲು ಸೊಗಸು
ಒಲವಿನ ನೂರು ಕಥೆ ಹೇಳುತಿರೆ ಕೇಳುತಿರೆ
ಆಹ್ .. ಎಂಥ ಆನಂದ ಪ್ರೇಮ ತಂದ ಸಂಬಂಧ
-------------------------------------------------------------------------------------------------------------------------
ಒಲವಿನ ನೂರು ಕಥೆ ಹೇಳುತಿರೆ ಕೇಳುತಿರೆ
ಆಹ್ .. ಎಂಥ ಆನಂದ ಪ್ರೇಮ ತಂದ ಸಂಬಂಧ
ಪ್ರೇಮದ ಕನಸು ಕಾಣಲು ಸೊಗಸು
ಒಲವಿನ ನೂರು ಕಥೆ ಹೇಳುತಿರೆ ಕೇಳುತಿರೆ
ಆಹ್ .. ಎಂಥ ಆನಂದ ಪ್ರೇಮ ತಂದ ಸಂಬಂಧ
ಒಲವಿನ ಬಂಧನಕೆ ಜೊತೆಯಿರಬೇಕು ಕಷ್ಟದ ವೇದನೆಗೆ ಒಬ್ಬನೀರೇ ಸಾಕೂ
ಬದುಕಲಿ ನಿನಗೆಂದು ಅನುಭವ ಗುರುವಂತೆ ಈ ನಿಜ ತಿಳಿದಾಗ ಬಾಳಲಿ ನಿಷ್ಚಿಂತೆ
ನಗುತಿರೇ ಎಲ್ಲೇ ಇರು ಎಲ್ಲ ಜನ ನಿನ್ನವರು ನನ್ನ ಮಾತು ಸುಳ್ಳಲ್ಲ ಕೇಳೋ ನನ್ನ ತಮ್ಮಯ್ಯ
ಪ್ರೇಮದ ಕನಸು ಕಾಣಲು ಸೊಗಸು
ಒಲವಿನ ನೂರು ಕಥೆ ಹೇಳುತಿರೆ ಕೇಳುತಿರೆ
ಆಹ್ .. ಎಂಥ ಆನಂದ ಪ್ರೇಮ ತಂದ ಸಂಬಂಧ
ಬದುಕಿನ ಹಾದಿಯಲಿ ಬಗೆ ಬಗೆ ಮುಳ್ಳು ಸುಖವನು ಹೊಂದಿರುವೇ ಎನುವುದು ಸುಳ್ಳು
ಮನದಲಿ ತುಂಬಿರುವ ಆಸೆಗಳ ಕೊಲ್ಲು ಮಸಣದ ಮನೆಯಲ್ಲಿ ಕಷ್ಟದ ಮಾತಿಲ್ಲ
ಸಾವಿನ ಮುಸುಗಲ್ಲಿ ನೋವಿನ ನೆರಳಿಲ್ಲ ಕಂಗಳು ಮುಚ್ಚಿದರೇ ನೆಮ್ಮದಿಯ ಕಾಣುವುದು
ನನ್ನ ಮಾತು ಸುಳ್ಳಲ್ಲ.. ಕೇಳೋ ತಮ್ಮಯ್ಯಾ...
ಪ್ರೇಮದ ಕನಸು ಕಾಣಲು ಸೊಗಸು
ಒಲವಿನ ನೂರು ಕಥೆ ಹೇಳುತಿರೆ ಕೇಳುತಿರೆ
ಆಹ್ .. ಎಂಥ ಆನಂದ ಪ್ರೇಮ ತಂದ ಸಂಬಂಧ
-------------------------------------------------------------------------------------------------------------------------
No comments:
Post a Comment