541. ಪರಾಜಿತ (1981)


ಪರಾಜಿತ ಚಿತ್ರದ ಹಾಡುಗಳು 
  1. ಓಡುವೇ ಏತಕೆ ಹೇಳಲು ನಾಚಿಕೇ 
  2. ಸುತ್ತ ಮುತ್ತಲೂ ಸಂಜೆ ಕತ್ತಲೂ ಇಲ್ಲೇ ಬಂತು ಸ್ವರ್ಗ 
  3. ಈ ಯೌವ್ವನ ಬಂದಾಗ 
  4. ಹದಿನೇಳರ ಅಂದದ ಹರೆಯ  
ಪರಾಜಿತ (1981) - ಏತಕೆ ನನ್ನನೆ ಪ್ರೀತಿಯ ಮಾಡಿದೆ
ಸಂಗೀತ: ರಾಜನ್-ನಾಗೇಂದ್ರ ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ


ಗಂಡು: ಓಡುವೆ ಏತಕೆ      ಹೆಣ್ಣು: ಹೇಳಲು ನಾಚಿಕೆ
ಗಂಡು: ಸ್ವೀಟೀ               ಹೆಣ್ಣು: ಏನು
ಗಂಡು: ಹೂಂ..  ಒಂದು ಪ್ರಶ್ನೆ       ಹೆಣ್ಣು: ಓಹ್ ಕೇಳಿ
ಗಂಡು: ಏತಕೆ ನನ್ನನೆ ಪ್ರೀತಿಯ ಮಾಡಿದೆ ರೂಪ ಮೆಚ್ಚಿತೆ ನಡತೆ ಮೆಚ್ಚಿತೆ
           ಒಲವು ಸೆಳೆಯಿತೆ ಜೊತೆಯ ಬಯಸಿತೆ
ಹೆಣ್ಣು: ಹ್ಹಾ.. ನಂದೂ ಒಂದು ಪ್ರಶ್ನೆ   
ಗಂಡು: ಕೇಳಿ ಕಮ್ ಆನ್
ಹೆಣ್ಣು: ಏತಕ್ಕೆ ನನ್ನನೆ ಪ್ರೀತಿಯ ಮಾಡಿದೆ ರೂಪ ಮೆಚ್ಚಿತೆ ನಡತೆ ಮೆಚ್ಚಿತೆ
         ಒಲವು ಸೆಳೆಯಿತೆ ಜೊತೆಯ ಬಯಸಿತೆ
ಗಂಡು: ತಿಳಿಯದೆ ತನುಮನದ ಆಸೆ ಅರಳಿ ನಿಂತು ಪ್ರೀತಿ ಮೂಡಿ ಬಂತು
          ರೂಪ ಮೆಚ್ಚಿತು ನಡತೆ ಮೆಚ್ಚಿತು ಒಲವು ಸೆಳೆಯಿತು ಜೊತೆಯ ಬಯಸಿತು

ಗಂಡು: ನಗುನಗುತ ನೀ ಬರಲು ಮನಸು ಅರಳಿತೇಕೆ
ಹೆಣ್ಣು : ನನ್ನಲ್ಲಿ ನೀನು ನಿನ್ನಲ್ಲಿ ನಾನು ಒಂದಾಗಿ ಬೆರೆತ ಸುಖಕೆ
ಗಂಡು : ಮನಸಿನಲೂ ಕನಸಿನಲೂ ನಿನದೇ ನೆನಪು ಏಕೆ
ಹೆಣ್ಣು: ನಿಂತಲ್ಲಿ ನಾನೆ ಕುಂತಲ್ಲಿ ನಾನೆ ನನದೇನೆ ಧ್ಯಾನ ನಿಮಗೆ
ಗಂಡು: ನಾವೆಂದು ಇರುವ ಹೀಗೆ
ಹೆಣ್ಣು: ಏತಕ್ಕೆ ನನ್ನನೆ ಪ್ರೀತಿಯ ಮಾಡಿದೆ 
         ರೂಪ               ಗಂಡು : ಮೆಚ್ಚಿತು           
ಹೆಣ್ಣು : ನಡತೆ             ಗಂಡು : ಮೆಚ್ಚಿತು           
ಹೆಣ್ಣು :   ಒಲವು          ಗಂಡು :ಸೆಳೆಯಿತು           
ಹೆಣ್ಣು : ಜೊತೆಯ        ಗಂಡು:   ಬಯಸಿತು 

ಗಂಡು : ಲಾಲಾಲ ಲಲ್ಲಲಲ್ಲ ಲಾಲಾಲ      ಹೆಣ್ಣು : ಆಹಾಹ ಲಾಲಾಲ 
ಗಂಡು : ಆಹಾಹ                                  ಹೆಣ್ಣು : ಆಹಾಹ 
ಹೆಣ್ಣು : ಹಗಲಿರುಳು ಜೊತೆಯಿರಲು ನನಗೆ ಏನು ತರುವೆ
ಗಂಡು :    ಕರೆದಾಗ ಬರುವೆ ಕೇಳಿದ್ದ ಕೊಡುವೆ ನನ್ನನ್ನೇ ನಿನಗೆ ತರುವೆ
ಹೆಣ್ಣು: ಸಮರಸದಿ ಬದುಕಿದರೆ ಬಹುಮಾನವೇನು ಕೊಡುವೆ
ಗಂಡು : ನಾನಾಗಿ ಮದುವೆ ನಿನ್ನಲ್ಲಿ ಬೆರೆವೆ ಮುದ್ದಾದ ಮಗುವ ಕೊಡುವೆ 
ಹೆಣ್ಣು : ಹೂಂ..   ನಾನಿನ್ನು ಹೋಗಿ ಬರುವೆ
ಗಂಡು: ಏತಕ್ಕೆ ನನ್ನನೆ ಪ್ರೀತಿಯ ಮಾಡಿದೆ 
         ರೂಪ               ಹೆಣ್ಣು : ಮೆಚ್ಚಿತು           
ಗಂಡು : ನಡತೆ            ಹೆಣ್ಣು : ಮೆಚ್ಚಿತು           
ಗಂಡು : ಒಲವು          ಹೆಣ್ಣು :ಸೆಳೆಯಿತು           
ಗಂಡು : ಜೊತೆಯ       ಹೆಣ್ಣು :  ಬಯಸಿತು 
ಇಬ್ಬರು : ತಿಳಿಯದೆ ತನುಮನದ ಆಸೆ ಅರಳಿ ನಿಂತು ಪ್ರೀತಿ ಮೂಡಿ ಬಂತು
          ರೂಪ ಮೆಚ್ಚಿತು ನಡತೆ ಮೆಚ್ಚಿತು ಒಲವು ಸೆಳೆಯಿತು ಜೊತೆಯ ಬಯಸಿತು
----------------------------------------------------------------------------------------------------------------------

ಪರಾಜಿತ (1981) - ಸುತ್ತ ಮುತ್ತಲು ಸಂಜೆ ಕತ್ತಲು
ಸಾಹಿತ್ಯ: ಶ್ಯಾಮಸುಂದರ್ ಕುಲಕರ್ಣಿ ಸಂಗೀತ: ರಾಜನ್-ನಾಗೇಂದ್ರ ಗಾಯನ: ಎಸ್.ಪಿ.ಶೈಲಜ


ತತ್ತತ್ತರತ್ತ.. ತತ್ತತ್ತರತ್ತ...ಲ್ಲಲ್ಲಲ್ಲಾ
ಸುತ್ತ ಮುತ್ತಲು, ಸಂಜೆ ಕತ್ತಲು ಮೆತ್ತ ಮೆತ್ತಗೆ ಮೈಯ ಮುಟ್ಟಲು
ಇಲ್ಲೆ ಬಂತು ಸ್ವರ್ಗss ಎಲ್ಲ ಓಲಾಡುವ, ಎಲ್ಲ ತೇಲಾಡುವ 
 ಕುಣಿಯೋಣ, ನಲಿಯೋಣ ಮತ್ತೇರಿss ಹೋ ...
ಸುತ್ತ ಮುತ್ತಲು, ಸಂಜೆ ಕತ್ತಲು ಮೆತ್ತ ಮೆತ್ತಗೆ ಮೈಯ ಮುಟ್ಟಲು 
ಇಲ್ಲೆ ಬಂತು ಸ್ವರ್ಗss ಎಲ್ಲ ಓಲಾಡುವ, ಎಲ್ಲ ತೇಲಾಡುವ

ನೆನ್ನೆಯ ನಾಳೆಯ ಚಿಂತೆ ನಮಗೇಕೆ ಇನ್ನೂ 
ಜಾರುವ ಮುನ್ನವೆ ಸವಿಯೋಣ ತಾರುಣ್ಯವನ್ನು
ಕಣ್ಣಿಗೆ ಹಬ್ಬವು ಇಂದು ಈ ಅಂದ ಚೆಂದ
ಬಿಟ್ಟರೆ ಸಿಗದು ಇನ್ನೆಲ್ಲು ಇಂಥ ಆನಂದ
ಅತ್ತ ಇತ್ತ ಓಡುದಂತೇ ಚಿತ್ತವನ್ನು ಕಟ್ಟಿ ಇಟ್ಟು ನಲಿವಾss ೧ ೨ ೩ ೪
ಸುತ್ತ ಮುತ್ತಲು, ಸಂಜೆ ಕತ್ತಲು ಮೆತ್ತ ಮೆತ್ತಗೆ ಮೈಯ ಮುಟ್ಟಲು
ಇಲ್ಲೆ ಬಂತು ಸ್ವರ್ಗss ಎಲ್ಲ ಓಲಾಡುವ, ಎಲ್ಲ ತೇಲಾಡುವ

ಚಿಕಿಚಿಕಿಜುಮ್ ಜುಮ್ ಚಿಕಿಚಿಕಿಜುಮ್ ಜುಮ್ 
ಚಿಕಿಚಿಕಿಜುಮ್ ಜುಮ್ ಜುಮ್ ಜುಮ್ 
ಚೂಮ್ ಚೂಮ್ ಚಿಕಿಚಿಕಿ ಚೂಮ್ ಚೂಮ್ ಚಿಕಿಚಿಕಿ
ಚೂಮ್ ಚೂಮ್ ಚಿಕಿಚಿಕಿ ಪಕಾ..  ಕಲಾ..  
ಹ್ಹಾಂ.. ಹ್ಹಾಂ  ಹ್ಹಾಂ  ಹೆಣ್ಣಿನ ಗಂಡಿನ ಬೇಧ ಇಲ್ಲೆಂದೂ ಇಲ್ಲ
ಮತ್ತಲ್ಲೇ ಮೋಜಿನ ಮಧುವ ಹೀರೋಣ ನಾವೆಲ್ಲಾ....
ಚಿಮ್ಮಿದೆ ಹೊಮ್ಮಿದೆ ಆಸೆ ನಮ್ಮಲ್ಲಿ ಇಂದು
ಹಿಗ್ಗಿದೇ ಯೌವನ ಎಲ್ಲ ಸಂತೋಷ ನಮದೆಂದೂ 
ಕಣ್ಣಿನಲ್ಲಿ ಕಣ್ಣನಿಟ್ಟು ಲಜ್ಜೆ ಬಿಟ್ಟು ಹೆಜ್ಜೆ ಇಟ್ಟು ಕುಣಿಯುವಾss ೧ ೨ ೩ ೪
ಸುತ್ತ ಮುತ್ತಲು, ಸಂಜೆ ಕತ್ತಲು ಮೆತ್ತ ಮೆತ್ತಗೆ ಮೈಯ ಮುಟ್ಟಲು
ಇಲ್ಲೆ ಬಂತು ಸ್ವರ್ಗss ಎಲ್ಲ ಓಲಾಡುವ, ಎಲ್ಲ ತೇಲಾಡುವ
ಕುಣಿಯೋಣ, ನಲಿಯೋಣ ಮತ್ತೇರಿss  ಹೋ .....
ಸುತ್ತ ಮುತ್ತಲು, ಸಂಜೆ ಕತ್ತಲು ಮೆತ್ತ ಮೆತ್ತಗೆ ಮೈಯ ಮುಟ್ಟಲು
ಇಲ್ಲೆ ಬಂತು ಸ್ವರ್ಗss ಎಲ್ಲ ಓಲಾಡುವ, ಎಲ್ಲ ತೇಲಾಡುವಾ...
--------------------------------------------------------------------------------------------------------------------------

ಪರಾಜಿತ (1981) - ಈ ಯೌವ್ವನ
ಸಂಗೀತ: ರಾಜನ್-ನಾಗೇಂದ್ರ ಸಾಹಿತ್ಯ: ಶ್ಯಾಮಸುಂದರ್ ಕುಲಕರ್ಣಿ  ಗಾಯನ: ಎಸ್.ಪಿ.ಬಿ., ಜಯಚಂದ್ರನ್


ಎಸ್ಪಿ: ಅಹ್ಹಹ್ಹ.. ಹೇಹೇ... ಹೂಹ್ಹೂಂ...  ಅಹ್ಹಹ್ಹ..
        ಈ ಯೌವ್ವನ  ರೋಮಾಂಚನ
       ಹೇ.. ಈ ಯೌವ್ವನ (ಓಓಓ ) ರೋಮಾಂಚನ (ಓಓಓ )
       ಜೊತೆಯೇ ಗೆಳೆತನ ಬಲು ಮೋಜು ಜೀವನ
ಜಯ : ಹಾರೋ ಹಕ್ಕಿ ನಾವಾಗಿ ಮಧು ಹೀರೋ ದುಂಬಿ  ನಾವಾಗಿ
          ಹೂವಿರೋ ಕಂಪು ನಮಗಾಗಿ ಜೋತೆ ತೇಲೋ ಅಸೆ ನಮಗಾಗಿ
ಇಬ್ಬರು : ಪ್ರಾಯ ತಂತು ಹೊಸತನ
ಎಸ್ಪಿ :ಈ ಯೌವ್ವನ  ರೋಮಾಂಚನ
        ಜೊತೆಯೇ ಗೆಳೆತನ ಬಲು ಮೋಜು ಜೀವನ.. ಅಹ್ಹಹ್ಹಾ
 
ಕೋರಸ್: ಲಾಲಲಲಾ  ಲಾಲಲಲಾ  ಲಲಲಾ ಲಲಲಾ ಹೇಹೇಹೇಹೇ
 ಎಸ್ಪಿ: ಮಸ್ತಾದ ಶಿಸ್ತಾದ ಹೆಣ್ಣಂದ (ಹೋಹೋ ) ಮತ್ತೇರಿ ಕರೆದಾಗ ಆನಂದ
         ಇಂದೇ ಹೊಂದಬೇಕೂ ಅಹ್ಹಹ್ಹಹ್ಹಾ
ಜಯ : ಚೆಲುವಾದ ಹೂವಂತೇ ಹೆಣ್ಣಂದ (ನಾಟಿ ನಾಟಿ )
          ಬಲವಂತ ಸರಿಯಲ್ಲ ಕಾಮಾಂಧ ಕಾದು ಸುಖಿಸಬೇಕೂ
ಎಸ್ಪಿ : ಹರೆಯದ ಹೆಣ್ಣಾ ರಸಮಯ ಹಣ್ಣ
         ಹಸಿದಿಹ ಕಣ್ಣ ಅಹ್ಹ.. ಮೆಸೆದರೇ ಚೆನ್ನ
         ಬಿಸಿಯಲ್ಲಿ ಸವಿದೋನೇ ಜಾಣ
ಜಯ : ಸರಿ ತಪ್ಪು ಅರಿತವನೇ ಜಾಣ
ಎಸ್ಪಿ :ರಿ.. ಬ್ಬ.. ಬ್ಬ..  ಈ ಯೌವ್ವನ.. ನ... ನ... ನ..   ರೋಮಾಂಚನ.. ನ... ನ... ನ..
       ಜೊತೆಯೇ ಗೆಳೆತನ ನನನನನ
ಜಯ: ಬಲು ಮೋಜು ಜೀವನ....

ಜಯ : ಅನುರಾಗ ಸಂಬಂಧ ಹೆಣ್ಣಿಂದ (ಬ್ಯೂಟಿ  ಬ್ಯೂಟಿ )
          ಒಡನಾಟ ಬೆಳೆದಾಗ ಅನುಬಂಧ ಎಲ್ಲ ಮಧುರ ಯೋಗ
ಎಸ್ಪಿ : ಅಹ್ಹಹ್ಹಾ.. ಉತ್ಸಾಹ ಉಲ್ಲಾಸ ಹೆಣ್ಣಿಂದ (ಓಹೋಹ್ಹೋ )
         ಮುದ್ದಾಡಿ ಕಲೇತಾಗ ಬಲು ಚಂದ ಇಲ್ಲೇ ಸ್ವರ್ಗ ಭೋಗ
ಜಯ : ಬಗೆ ಬಗೆ ಹೆಣ್ಣಾ ಬಯಸುವ ಮುನ್ನ ಗಮನಿಸು ನಿನ್ನಾ
          ನಡತೆಯ ಬಣ್ಣ ತಿಳಿದಾಗ ತೆರೆ ನಿನ್ನ ಕಣ್ಣ
ಎಸ್ಪಿ: ಅಹ್ಹ.. ಬೀಡು ನಿನ್ನ ಕಂತೆ ಪುರಾಣ
        ಹೇಹೇ ..  ಈ ಯೌವ್ವನ. ರೋಮಾಂಚನ.. .
       ಜೊತೆಯೇ ಗೆಳೆತನ ಬಲು ಮೋಜು ಜೀವನ
ಜಯ : ಹಾರೋ ಹಕ್ಕಿ ನಾವಾಗಿ ಮಧು ಹೀರೋ ದುಂಬಿ  ನಾವಾಗಿ
          ಹೂವಿರೋ ಕಂಪು ನಮಗಾಗಿ ಜೋತೆ ಸೇರೋ ಅಸೆ ನಮಗಾಗಿ
         ಪ್ರಾಯ ತಂತು ಹೊಸತನ 
ಇಬ್ಬರು : ಈ ಯೌವ್ವನ. (ಓಹೋಹೋ) ರೋಮಾಂಚನ.. (ಓಹೋಹೋ)
            ಈ ಯೌವ್ವನ.. ನ... ನ... ನ..   ರೋಮಾಂಚನ.. ನ... ನ... ನ..
            ಜೊತೆಯೇ ಗೆಳೆತನ ಬಲು ಮೋಜು ಜೀವನ  .....
--------------------------------------------------------------------------------------------------------------------------

ಪರಾಜಿತ (1981) - ಹದಿನೇಳರ ಅಂದದ ಹರೆಯ 
ಸಂಗೀತ: ರಾಜನ್-ನಾಗೇಂದ್ರ  ಸಾಹಿತ್ಯ: ಶ್ಯಾಮಸುಂದರ್ ಕುಲಕರ್ಣಿ ಗಾಯನ: ಎಸ್.ಜಾನಕೀ

ಹದಿನೇಳರ ಅಂದದ ಹರೆಯ ಮೈ ತುಂಬಿದ ಮಾಗಿದ ಸಿಹಿಯ
ಹದಿನೇಳರ ಅಂದದ ಹರೆಯ ಮೈ ತುಂಬಿದ ಮಾಗಿದ ಸಿಹಿಯ
ಮುದ್ದಾದ ಹೆಣ್ಣಿನ ಲವ್ ಫಸ್ಟ್ ಸೇ ಲವ್ ಫಸ್ಟ್ ಸೇ
ಲವ್ ಫಸ್ಟ್ ಸೇ ಸೀ ಲವ್ ಫಸ್ಟ್ ಸೇ

ಪ್ರೇಮದ ಅಲೆಯಾಗಿ ಮೋಹದ ಬಲೆಯಾಗಿ
ಬಂದೆ ಬಿಡಲಾರೆ ನಿನ್ನ ಬಂಧನ ಸುಖವನ್ನೂ
ಸವಿದರೇ ನೀ ಒಮ್ಮೆ ಬಿಟ್ಟೂ ಇರಲಾರೇ ನನ್ನ
ಹೆಣ್ಣಿನ ನೋಟಕ್ಕೆ ಸೋಲದ ಗಂಡಿಲ್ಲಾ
ಏಕೆ ಅರಿತಿಲ್ಲ ನೀನೂ ಬಂಡೆ ಕಲ್ಲಂತೆ
ಸುಮ್ಮನೇ ನೀ ನಿಂತೇ ಗಂಡು ನೀನಲ್ಲವೇನೂ
ಅಹ.. ಅಹ್ಹಹ್ಹ.. ಆಆಆ..
ಹದಿನೇಳರ ಅಂದದ ಹರೆಯ ಮೈ ತುಂಬಿದ ಮಾಗಿದ ಸಿಹಿಯ
ಮುದ್ದಾದ ಹೆಣ್ಣಿನ ಲವ್ ಫಸ್ಟ್ ಸೇ ಲವ್ ಫಸ್ಟ್ ಸೇ
ಲವ್ ಫಸ್ಟ್ ಸೇ ಸೀ ಲವ್ ಫಸ್ಟ್ ಸೇ

ಕಾಣದ ಸುಖವನ್ನೂ ಕಂಡೇನು ನಾನಿಂದೂ 
ಎಂದೂ ನನ್ನವನೇ ನೀನೂ ನಿನ್ನಯ ತೋಳಲ್ಲಿ ನನ್ನಯ ಬಾಳೆಲ್ಲಾ 
ನಲಿವೇ ನೀನಗಾಗಿ ನಾನು 
ಬೆಂಕಿಯೂ ನೀನಾಗಿ ಬೆಣ್ಣೆಯು ನಾನಾಗೀ ಕರಗಿ ನಿನ್ನಲ್ಲೇ ಬೆರೆತೆ 
ಜೇನಿನ ಹನಿಯಾಗಿ ನಿನ್ನೆದೆಯ ಗೂಡಲ್ಲಿ ನಾನು ನನ್ನನ್ನೇ ಮರೆತೇ 
ಅಹ್ಹಹ.. ನವೀನ ಒಹೋ ಹೆವೆನ್ ಲವ್ ಮೀ .
ಹದಿನೇಳರ ಅಂದದ ಹರೆಯ ಮೈ ತುಂಬಿದ ಮಾಗಿದ ಸಿಹಿಯ
ಮುದ್ದಾದ ಹೆಣ್ಣಿನ ಲವ್ ಇಸ್ ಸ್ವೀಟ್ ಲವ್ ಇಸ್ ಸ್ವೀಟ್
ಲವ್ ಇಸ್ ಸ್ವೀಟ್  ಲವ್ ಇಸ್ ಸ್ವೀಟ್  ಲಾಲಲಾ ಲಾಲಲಾ ಲಾಲಲಾ
--------------------------------------------------------------------------------------------------------------------------

No comments:

Post a Comment