542. ಆರಾಧನೆ (1984)


ಆರಾಧನೆ ಚಲನಚಿತ್ರದ ಹಾಡುಗಳು 
  1. ಒಲವೆ ಚೆಲುವ ಕವನ ನಗುವೆ ಸುಖದ ಹೂಬನ
  2. ಒಲವೆ ಚೆಲುವ ಕವನ ನಗುವೆ ಸುಖದ ಹೂಬನ (ಎಸ್.ಪಿ.ಬಿ)
  3. ಬಾರೇ ಚಿನ್ನಾ ತಾರೇ ನಿನ್ನಾ 
  4. ಎದೆಯ ಡಬ ಡಬ 
ಆರಾಧನೆ (1984) - ಒಲವೆ ಚೆಲುವ ಕವನ ನಗುವೆ ಸುಖದ ಹೂಬನ
ಸಾಹಿತ್ಯ: ಆರ್.ಎನ್.ಜಯಗೋಪಾಲ್ ಸಂಗೀತ: ಕುಮಾರ್ ಹಾಡಿದವರು: ಎಸ್.ಪಿ.ಬಿ., ಎಸ್.ಜಾನಕಿ

ಹೆಣ್ಣು : ಲಲಲಾಲಲ
ಗಂಡು : ಒಲವೆ ಚೆಲುವ ಕವನ ನಗುವೆ ಸುಖದ ಹೂಬನ
ಹೆಣ್ಣು : ಒಲವೆ ಚೆಲುವ ಕವನ ನಗುವೆ ಸುಖದ ಹೂಬನ
          ಅನುರಾಗ ಇರುವಾಗ ಮನೆಯೊಂದು ನಂದನ ಮನ ನಲೀ ದಿನ
ಗಂಡು :  ಒಲವೆ ಚೆಲುವ ಕವನ ನಗುವೆ ಸುಖದ ಹೂಬನ

ಗಂಡು : ಕರುಳಿನ ಕುಡಿಇದೆ ಕಂಗಳು ಬಾಳಿಗೆ
ಹೆಣ್ಣು : ಹೃದಯವು ಬಯಸಿದೆ ಕಂದನ ಏಳಿಗೆ
ಗಂಡು : ಕಿರು ನೋವೆ ಆದರೂ ಈ ಜೀವ ಸಹಿಸದು ನಗು .. ಸದಾ..  ನಗು
ಹೆಣ್ಣು : ಒಲವೆ ಚೆಲುವ ಕವನ ನಗುವೆ ಸುಖದ ಹೂಬನ
ಗಂಡು : ಅನುರಾಗ ಇರುವಾಗ ಮನೆಯೊಂದು ನಂದನ ಮನ .. ನಲೀ..  ದಿನ
ಹೆಣ್ಣು : ಒಲವೆ ಚೆಲುವ ಕವನ ನಗುವೆ ಸುಖದ ಹೂಬನ

ಹೆಣ್ಣು : ದೇವರ ಕೃಪೆಯಲಿ ನಲಿಯಲಿ ಜೀವನ
ಗಂಡು : ಬಾಡದ ಹೂವಿದು ನಮ್ಮ ಈ ಬಂಧನ
ಹೆಣ್ಣು : ಸವಿಯಾದ ನೆನಪಿದೆ ಮಿಡಿದಿರಲಿ ಎದೆಯಲಿ ಪ್ರತಿ..  ಕ್ಷಣ..  ಕ್ಷಣ
ಗಂಡು : ಒಲವೆ ಚೆಲುವ ಕವನ ನಗುವೆ ಸುಖದ ಹೂಬನ
ಹೆಣ್ಣು : ಒಲವೆ ಚೆಲುವ ಕವನ ನಗುವೆ ಸುಖದ ಹೂಬನ
ಇಬ್ಬರು : ಅನುರಾಗ ಇರುವಾಗ ಮನೆಯೊಂದು ನಂದನ ಮನ.. ನಲೀ..  ದಿನ..
ಹೆಣ್ಣು : ಒಲವೆ ಚೆಲುವ ಕವನ ... ಹಹ್ಹಹ್ಹಹ್ಹ
ಗಂಡು : ನಗುವೆ ಸುಖದ ಹೂಬನ ಅಹ್ಹಹ್ಹಹ್
ಹೆಣ್ಣು : ಆಹಹಹಹಾ (ಲಾ ಲಲಲಲಾಲಾಲ ) ಅಆಹಾಹಾ (ಹೂಂ ಹೂಂಹೂಂ)
          ಲಲಲಲಲ (ಲಾ ಲಲಲಲ ) ಲಾಲಲಲಲ  (ಲಾಲಲಲಲ  )  ಅಹ್ಹಹ್ಹ (ಹೂಂ ಹೂಂ )
--------------------------------------------------------------------------------------------------------------------------

ಆರಾಧನೆ (1984) - ಒಲವೆ ಚೆಲುವ ಕವನ ನಗುವೆ ಸುಖದ ಹೂಬನ
ಸಾಹಿತ್ಯ: ಆರ್.ಎನ್.ಜಯಗೋಪಾಲ್ ಸಂಗೀತ: ಕುಮಾರ್ ಹಾಡಿದವರು: ಎಸ್.ಪಿ.ಬಿ.

ತಂದೆ : ಹೂಂಹೂಂಹೂಂಹೂಂ
           ಒಲವೆ ಚೆಲುವ ಕವನ ನಗುವೆ ಸುಖದ ಹೂಬನ
           ಒಲವೆ ಚೆಲುವ ಕವನ ನಗುವೆ ಸುಖದ ಹೂಬನ
          ಅನುರಾಗ ಇರುವಾಗ ಮನೆಯೊಂದು ನಂದನ ಮನ.. ನಲೀ..  ದಿನ
         ಒಲವೆ ಚೆಲುವ ಕವನ ನಗುವೆ ಸುಖದ ಹೂಬನ

        ಕರುಳಿನ ಕುಡಿಇದೆ ಕಂಗಳು ಬಾಳಿಗೆ ಹೃದಯವು ಬಯಸಿದೆ ಕಂದನ ಏಳಿಗೆ
        ಕಿರು ನೋವೆ ಆದರೂ ಈ ಜೀವ ಸಹಿಸದು ನಗು..  ಸದಾ..  ನಗು
        ಒಲವೆ ಚೆಲುವ ಕವನ ನಗುವೆ ಸುಖದ ಹೂಬನ
ಮಗ : ಅನುರಾಗ ಇರುವಾಗ ಮನೆಯೊಂದು ನಂದನ ಮನ.. ನಲೀ.. ದಿನ
ತಂದೆ : ಒಲವೆ ಚೆಲುವ ಕವನ ನಗುವೆ ಸುಖದ ಹೂಬನ

ತಂದೆ : ದೇವರ ಕೃಪೆಯಲಿ ನಲಿಯಲಿ ಜೀವನ
ಮಗ : ಬಾಡದ ಹೂವಿದು ನಮ್ಮ ಈ ಬಂಧನ
ತಂದೆ : ಸವಿಯಾದ ನೆನಪಿದೆ ಮಿಡಿದಿರಲಿ ಎದೆಯಲಿ
ಮಗ : ಪ್ರತಿ                          ತಂದೇ : ಕ್ಷಣ..  ಕ್ಷಣ
ಒಲವೆ ಚೆಲುವ ಕವನ ನಗುವೆ ಸುಖದ ಹೂಬನ
ಒಲವೆ ಚೆಲುವ ಕವನ ನಗುವೆ ಸುಖದ ಹೂಬನ
--------------------------------------------------------------------------------------------------------------------------

ಆರಾಧನೆ (1984) - ಬಾರೇ ಚಿನ್ನ ತಾರೇ ನಿನ್ನ 
ಸಂಗೀತ: ಕುಮಾರ್  ಸಾಹಿತ್ಯ: ಆರ್.ಎನ್.ಜಯಗೋಪಾಲ್ ಹಾಡಿದವರು: ಎಸ್.ಪಿ.ಬಿ., ಎಸ್.ಜಾನಕಿ 

ಗಂಡು :  ಆಹ್ಹ್ ಆಆಆ..                         ಹೆಣ್ಣು : ಲಲ್ಲಲ್ಲಲ್ಲಾ.. ಲಲ್ಲಲ್ಲಲ್ಲಾ.. ಲಲ್ಲಲ್ಲಲ್ಲಾ.. 
ಹೆಣ್ಣು  :  ಆಹ್ಹ್ ಆಆಆ..                         ಗಂಡು: ಲಲ್ಲಲ್ಲಲ್ಲಾ.. ಲಲ್ಲಲ್ಲಲ್ಲಾ.. ಲಲ್ಲಲ್ಲಲ್ಲಾ..
ಗಂಡು : ಬಾರೇ ಚಿನ್ನ ತಾರೇ ನಿನ್ನ ಸವಿ ಸವಿ ಸಿಹಿ ಸಿಹಿ ಬಿಸಿಬಿಸಿ ರುಚಿರುಚಿ ಮುತ್ತೊಂದು
            ತೇಲಿಹೋದೇ ಕೇಳಿ ನಿನ್ನ ಕಿಲಕಿಲ ನಗುವಿನ ಸರಿಗಮ ಸ್ವರದಲಿ ನಾನಿಂದೂ
            ನೆಲ ಡೊಂಕಿದೇ ... ನಡು ಡೊಂಕಿದೆ.. ಬಳುಕಾಡುವೇ ಹೀಗೇಕೇ  ..
ಹೆಣ್ಣು : ಸಾಕೂ ಚೆನ್ನ ತುಂಟ ನನ್ನ ಹೊಗಳುತ ಕೆಣಕುವ ಸವಿಸವಿ ಸಿಹಿಸಿಹಿ ಮಾತೆಲ್ಲಾ
          ಒಳ್ಳೇ ಇಲ್ಲಾ ಆಟವಲ್ಲಾ ಹುಡುಗಿಯ ಮನಸನು ಕದಿಯಲು ನಡೆಸುವ ಸಂಚೆಲ್ಲಾ
          ನಮ್ಮ ಪ್ರೀತಿಯೂ ಎಲ್ಲ ರೀತಿಯೂ..  ಗುಲ್ಲಾಗಿದೆ .. ಊರೆಲ್ಲಾ
 ಗಂಡು : ಆಯ್ ಲವ್ ಯೂ ... ಆಯ್ ಲವ್ ಯೂ ...

ಗಂಡು : ಜನ ನೋಡಲೀ ಮಾತಾಡಲೀ ನಮ್ಮ ಪ್ರೀತಿ ಯಾರಿಗೂ ಅಂಜೋಲ್ಲಾ..
            ನಿನ್ನ ಸೇರುವೇ..  ಬಿಗಿದಪ್ಪುವೇ .. ನನ್ನ ತಡೆಯೋರು ಯಾರೂ ಇಲ್ಲಾ
ಹೆಣ್ಣು : ನಿನ್ನ ಆಸೆಗೇ ನಿನ್ನ ವೇಗಕೆ ಕಡಿವಾಣ ಹಾಕುವೇ ನಾನೀಗ
          ಭಾರಿ ಮೋಜಲಿ ತಾಳಿ ಬೀಳಲಿ ನನ್ನ ತನುವೆಲ್ಲಾ ನಿಂದೇ ರಾಜಾ
ಗಂಡು : ಬಾರೇ ಚಿನ್ನ ತಾರೇ ನಿನ್ನ ಸವಿ ಸವಿ ಸಿಹಿ ಸಿಹಿ ಬಿಸಿಬಿಸಿ ರುಚಿರುಚಿ ಮುತ್ತೊಂದು
ಹೆಣ್ಣು : ಒಳ್ಳೇ ಇಲ್ಲಾ ಆಟವಲ್ಲಾ ಹುಡುಗಿಯ ಮನಸನು ಕದಿಯಲು ನಡೆಸುವ ಸಂಚೆಲ್ಲಾ
ಗಂಡು : ನೆಲ ಡೊಂಕಿದೇ ... ನಡು ಡೊಂಕಿದೆ.. ಬಳುಕಾಡುವೇ ಹೀಗೇಕೇ  ..
            ತೇಲಿಹೋದೇ ಕೇಳಿ ನಿನ್ನ ಕಿಲಕಿಲ ನಗುವಿನ ಸರಿಗಮ ಸ್ವರದಲಿ ನಾನಿಂದೂ

ಹೆಣ್ಣು : ಕನಸೆಲ್ಲವೂ ನಿಜವಾದರೇ ಭಾಗ್ಯಶಾಲೀ ನನ್ನಂತೇ ಯಾರಿಲ್ಲಾ..
          ನಮ್ಮ ಪ್ರೇಮಕೇ ತಡೆ ತೊಂದರೇ ಆಗ ಈ ಜೀವ ನಿಲ್ಲೋದಿಲ್ಲಾ
ಗಂಡು : ಈ ಭೂಮಿಯೇ ಅಲುಗಾಡಲೀ ನಾ ನಿನ್ನ ಕೈ ಬಿಡೇ ಎಂದೆಂದೂ
            ಕಣ್ಣಾಗಿ ನಾ.. ಕಾಪಾಡುವೇ .. ಪ್ರಿಯೇ ಈ ಜೀವ ನಿಂದೇ ಎಂದೂ
ಹೆಣ್ಣು : ಸಾಕೂ ಚೆನ್ನ ತುಂಟ ನನ್ನ ಹೊಗಳುತ ಕೆಣಕುವ ಸವಿಸವಿ ಸಿಹಿಸಿಹಿ ಮಾತೆಲ್ಲಾ
ಗಂಡು : ತೇಲಿಹೋದೇ ಕೇಳಿ ನಿನ್ನ ಕಿಲಕಿಲ ನಗುವಿನ ಸರಿಗಮ ಸ್ವರದಲಿ ನಾನಿಂದೂ
ಹೆಣ್ಣು : ನಮ್ಮ ಪ್ರೀತಿಯೂ ಎಲ್ಲ ರೀತಿಯೂ..  ಗುಲ್ಲಾಗಿದೆ .. ಊರೆಲ್ಲಾ   
 ಗಂಡು : ಆಯ್ ಲವ್ ಯೂ ... ಆಯ್ ಲವ್ ಯೂ ...
--------------------------------------------------------------------------------------------------------------------------

ಆರಾಧನೆ (1984) - ಎದೆಯ ಡಬ ಡಬ 
ಸಂಗೀತ: ಕುಮಾರ್ ಸಾಹಿತ್ಯ: ಆರ್.ಎನ್.ಜಯಗೋಪಾಲ್  ಹಾಡಿದವರು: ಎಸ್.ಪಿ.ಬಿ., ವೀಣಾ ಪಂಡಿತ  

ಕೋರಸ್ : ಲಾ ಲಲಲಾಲಾಲಾಲಾ... ಲಾ.. ಲಲಲಾಲಾಲಾಲಾ  ಲಾ.. ಲಲಲಾಲಾಲಾಲಾ...
ಹೆಣ್ಣು : ಎದೆಯ ಡಬ್ ಡಬ್ ಮಿಡಿತ ಇದಕೇ ಔಷಧಿ ಸಂಗೀತ ಇನ್ನೂ ಕುಣಿತ
          ಜೀವ ಬರುತಲೀ ಶಕ್ತಿ ತರುತಲೀ ಕಾಲು ಕುಣಿಸಲೂ ಮನವು ನಗಿಸಲೂ ಡಿಸ್ಕೋ ..
ಕೋರಸ್ : ಡಿಸ್ಕೋ ಕುಣಿಸಿ ಹುಚ್ಚಿನ ಮನಸ್ಸಿ ಡಿಸ್ಕೋ ಮಾಂತ್ರಿ ಗಂಗೆಮದಲ್ಲಿ
            ಯುವರ್ ಅಂಗಣ ಮೇಲುವುದರಲ್ಲಿ ಡಿಸ್ಕೋ ಪಾಪ ಹುಡುಗರಿಗೆಲ್ಲಿ               
ಗಂಡು : ಏನೀ ಹೊಸ ಹೊಸ ಮಿಡಿತ ಇಂಥ ಮೋಹಕ ಸಂಗೀತ ಹೊಸ ಕುಣಿತ
            ಜೀವ ಬಂದಿದೆ  ಶಕ್ತಿ ತುಂಬಿದೇ ಕಾಲು ಕುಣಿದಿದೇ ಮನವ ನಗಿಸಿದೇ.. ಡಿಸ್ಕೋ ..

ಕೋರಸ್ : ಡಿಸ್ಕೋ .. (ಡಿಸ್ಕೋ ಡಿಸ್ಕೋ)  ಡಿಸ್ಕೋ .. (ಡಿಸ್ಕೋ ಡಿಸ್ಕೋ)             
                (ಡಿಸ್ಕೋ ಡಿಸ್ಕೋ ಡಿಸ್ಕೋ ಡಿಸ್ಕೋ ಡಿಸ್ಕೋ ಡಿಸ್ಕೋ)             
ಗಂಡು : ನನ್ನ ಮರೆಮನದಲ್ಲೂ .. ಹೊಯ್.. ಕುಣಿದು ಹಾಡುವ ಆಸೇ ಉಸಿರು ಉಸಿರಲಿ ಬೀಸೇ.. ಹೇಯ್ ..
           ಅದುವೇ ನನ್ನಯ ಆಸೇ ಹೊಸದು ಸ್ನೇಹದ ಕವನ ಯೌವ್ವನ ಬನ್ನೀ ಗೆಳೆಯರೆಲ್ಲಾ  ಬೆರೆವಾ ಈ ದಿನಾ ...
           ನನ್ನ ಜೊತೆ ತಾಳ ಹಾಕೀ ಮನಸೂ ನಗಲೀ  ಸುಖವ ತರಲೀ.. ಡಿಸ್ಕೋ
           ಡಿಸ್ಕೋ ಇಸ್ ದಿ ಕಮ್ ಟು ಡಿಕೀಟ್ ಜಾಯಿನ್ ಫೋರ್ಸ್ ಟುಡೇ
           ಏನೀ ಹೊಸ ಹೊಸ ಮಿಡಿತ ಅಹ್ಹಹ್ಹಾ..ಇಂಥ  ಮೋಹಕ ಸಂಗೀತ ಹೊಸ ಕುಣಿತ
          ಜೀವ ಬಂದಿದೆ  ಶಕ್ತಿ ತುಂಬಿದೇ ಕಾಲು ಕುಣಿದಿದೇ ಮನವ ನಗಿಸಿದೇ.. ಡಿಸ್ಕೋ ..

ಕೋರಸ್ : ಡಿಸ್ಕೋ .. (ಡಿಸ್ಕೋ ಡಿಸ್ಕೋ)  ಡಿಸ್ಕೋ .. (ಡಿಸ್ಕೋ ಡಿಸ್ಕೋ)             
                (ಡಿಸ್ಕೋ ಡಿಸ್ಕೋ ಡಿಸ್ಕೋ ಡಿಸ್ಕೋ ಡಿಸ್ಕೋ ಡಿಸ್ಕೋ)   
ಹೆಣ್ಣು : ಬೆರೆತು ಮೊದಲನೇ ವೀಣೆ ಮನಸು ಯಾವುದೂ ನಾವೂ
          ಎಲ್ಲೀ ಪಯಣವು ನಾಳೇ  ಎಲ್ಲೀ ಇರುವೇವು ನಾವೂ
          ಹೃದಯ ಮರುಗಿದೇ  ಇರಲೀ ಜೀವನ..
ಇಬ್ಬರು : ಬನ್ನೀ ಎಲ್ಲ ಮರೆತೂ ಸೇರಿ ಕುಣಿಯುವಾ
            ಹೆಜ್ಜೇ ಹೆಜ್ಜೇ ಸೇರಿ ಹಾಕೀ  ಮನಸು ನಗಲೀ ಸುಖವ ತರಲೀ.. ಡಿಸ್ಕೋ ..
ಗಂಡು : ಹೇ... ಯೂ .. ನೋ ಎನಿ ಕಂಡೀಷನ ಪ್ರೂವ್ ಇಟ್ ಸೇ ..
          ಏನೀ ಹೊಸ ಹೊಸ ಮಿಡಿತ ಇಂಥ ಮೋಹಕ ಸಂಗೀತ ಹೊಸ ಕುಣಿತ
            ಜೀವ ಬಂದಿದೆ  ಶಕ್ತಿ ತುಂಬಿದೇ ಕಾಲು ಕುಣಿತಿದೇ ಮನವ ನಗಿಸಿದೇ.. ಡಿಸ್ಕೋ ..
ಕೋರಸ್ : ಡಿಸ್ಕೋ .. (ಡಿಸ್ಕೋ ಡಿಸ್ಕೋ)  ಡಿಸ್ಕೋ .. (ಡಿಸ್ಕೋ ಡಿಸ್ಕೋ)           
                (ಡಿಸ್ಕೋ ಡಿಸ್ಕೋ ಡಿಸ್ಕೋ ಡಿಸ್ಕೋ ಡಿಸ್ಕೋ ಡಿಸ್ಕೋ)     
             ಹೇಹೇಹೇಹೇಹೇ ... 
--------------------------------------------------------------------------------------------------------------------------

No comments:

Post a Comment