543. ಅಣ್ಣ ಅತ್ತಿಗೆ (1974)

ಅಣ್ಣ ಅತ್ತಿಗೆ ಚಿತ್ರದ ಹಾಡುಗಳು 
  1. ಒಲವೆಂಬ ಒಂದು ಹೂದೋಟದಲಿ 
  2. ಬಾಳೊಂದು ರಮ್ಯಗಾನ 
  3. ನಾಡಿಗರೇ ಕನ್ನಡ ನಾಡಿಗರೇ ಎಚ್ಚರ 
  4. ಏನೇನೋ ಆಗಿ ಹೋದ ಮೇಲೆ ತಾನಾಗಿ ಕೂಡಿ ಬಂತು 
ಅಣ್ಣ ಅತ್ತಿಗೆ (1974) - ಒಲವೆಂಬ ಒಂದು, ಹೂದೋಟದಲ್ಲಿ ಅರಳಿದೆ ಹೂವು, ಸೌಗಂಧ ಚೆಲ್ಲಿ
ಸಾಹಿತ್ಯ: ಆರ್.ಎನ್.ಜಯಗೋಪಾಲ್ ಸಂಗೀತ: ಜಿ.ಕೆ.ವೆಂಕಟೇಶ್ ಗಾಯನ : ಕೆ.ಜೆ.ಯೇಸುದಾಸ್, ವಾಣಿ ಜಯರಾಮ್

ಗಂಡು : ಒಲವೆಂಬ ಒಂದು, ಹೂದೋಟದಲ್ಲಿ ಅರಳಿದೆ ಹೂವು, ಸೌಗಂಧ ಚೆಲ್ಲಿ
          ಈ ದುಂಬಿ ಜೋಕೆ, ಹೂ ಸಂಗ ಬೇಕೆ  ನಾ ಕಾದಿಹೆ, ಮುಂಚೆಯೆ ಹೂವಿಗಾಗಿ
          ಒಲವೆಂಬ ಒಂದು, ಹೂದೋಟದಲ್ಲಿ ಅರಳಿದೆ ಹೂವು, ಸೌಗಂಧ ಚೆಲ್ಲಿ

ಹೆಣ್ಣು : ಇಷ್ಟೊಂದು ಹೂವು, ಎಷ್ಟೊಂದು ದುಂಬಿ ಯಾರಿಗೆ ಯಾರು, ಹೇಳುವರು ಯಾರೊ
          ನೀರೆರೆದ ಮಾಲಿ, ಹಾಕಿದರೂ ಬೇಲಿ ಈ ಹೂವು ಮುಡಿಪು, ನಿನಗಾಗಿಯೆ
          ಒಲವೆಂಬ ಒಂದು, ಹೂದೋಟದಲ್ಲಿ ಅರಳಿದೆ ಹೂವು, ಸೌಗಂಧ ಚೆಲ್ಲಿ

ಗಂಡು : ಏನಂದು ಕಾಂತಿ, ಚೆಲುವಾದ ಬಣ್ಣ ಈ ಹೂವ ಅಂದ, ಕವಿ ಮಾಡಿತೆನ್ನ
           ಈ ಬಿಸಿಲ ತಾಪ, ಸಾಲದಿದು ತಾಪ ನೆರಳಾಗುವೆ ನಾ, ಈ ಹೂವಿಗೆ
           ಒಲವೆಂಬ ಒಂದು, ಹೂದೋಟದಲ್ಲಿ ಅರಳಿದೆ ಹೂವು, ಸೌಗಂಧ ಚೆಲ್ಲಿ

ಹೆಣ್ಣು : ಬಿಸಿಲಾದರೇನು, ಮಳೆಯಾದರೇನು ಈ ಹೂವೂ ಎಂದೂ, ತಾ ಬಾಡದಂತೆ
          ಅನುರಾಗವೆಂಬ, ಸಿಹಿ ಜೇನು ತುಂಬಿ ನಿಂತೆದೆನೋಡ, ಬಾ ನಾಚುತೆ
ಗಂಡು :  ಒಲವೆಂಬ ಒಂದು, ಹೂದೋಟದಲ್ಲಿ ಅರಳಿದೆ ಹೂವು, ಸೌಗಂಧ ಚೆಲ್ಲಿ
ಹೆಣ್ಣು : ಈ  ದುಂಬಿ ಜೋಕೆ, ಹೂ ಸಂಗ ಬೇಕೆ
ಗಂಡು : ನಾ ಕಾದಿಹೆ, ಮುಂಚೆಯೆ ಹೂವಿಗಾಗಿ
ಇಬ್ಬರು : ಒಲವೆಂಬ ಒಂದು, ಹೂದೋಟದಲ್ಲಿ ಅರಳಿದೆ ಹೂವು, ಸೌಗಂಧ ಚೆಲ್ಲಿ
--------------------------------------------------------------------------------------------------------------------------

ಅಣ್ಣ ಅತ್ತಿಗೆ (1974) - ಬಾಳೊಂದು ರಮ್ಯಗಾನ ಇದರ ಆಂತರ್ಯ ಕೇಳೋ ಜಾಣ
ಸಾಹಿತ್ಯ: ಆರ್.ಎನ್.ಜಯಗೋಪಾಲ್ ಸಂಗೀತ: ಜಿ.ಕೆ.ವೆಂಕಟೇಶ್ ಗಾಯನ : ಪಿ.ಬಿ.ಶ್ರೀನಿವಾಸ 

ಬಾಳೊಂದು ರಮ್ಯಗಾನ ಇದರ ಆಂತರ್ಯ ಕೇಳೋ ಜಾಣ
ಬಾಳೊಂದು ರಮ್ಯಗಾನ ಇದರ ಆಂತರ್ಯ ಕೇಳೋ ಜಾಣ
ಬಯಕೆ ಬಳಕೆ ಒಳಗೊಂಡ ತಾಳಮೇಳ
ಬಾಳೊಂದು ರಮ್ಯಗಾನ ಇದರ ಆಂತರ್ಯ ಕೇಳೋ ಜಾಣ

ಒಲವೇ ಮಧುರ ಧಾಟಿ ಇದಕೆ ಬೇರೆ ಇಲ್ಲ ಸಾಟಿ
ಅನುಕಂಪ ಮರುಕ ಹದವಾದ ಗಮಕ ಮೇಳೈಸಿದಾಗ ರಸಿಕ
ನಾಕ ಇಹಲೋಕ ಸುಖಕುಂಟೆ ಅಂಕೆ ಶಂಕೆ
ಬಾಳೊಂದು ರಮ್ಯಗಾನ ಇದರ ಆಂತರ್ಯ ಕೇಳೋ ಜಾಣ

ಕುಲವ ಬಳಗ ಬಂದ ಅಲ್ಪಳಾದ ಹೆಣ್ಣಿನಿಂದ
ಹೆಣವಾಗೇ ತಾಳ ಹೊಲಸಾಗೆ ಮೇಳ
ಇನಿ ಹಾಡು ವಿರಸಕೀಡು
ಬಾಳು ಬರಿಗೋಳು ರಸವೆಲ್ಲ ಕಸದ ಧೂಳು
ಬಾಳೊಂದು ರಮ್ಯಗಾನ ಇದರ ಆಂತರ್ಯ ಕೇಳೋ ಜಾಣ

ಶ್ರುತಿಯ ಲಯದ ಗರಿಯ ನಿಲ್ಲಿಸಿದಾಗ ಉಲಿದ ರಾಗ
ಬಿರಿದಂಥ ಹೃದಯ ಬೇರವಂಥ ಸಮಯ
ಆನಂದ ಬಾಳಿನಿಂದ 
ಗೆಳೆಯ ತಳೆ ವಿಜಯ ಇನ್ನೆಲ್ಲ ಭವ್ಯ ಕಾವ್ಯ
ಬಾಳೊಂದು ರಮ್ಯಗಾನ ಇದರ ಆಂತರ್ಯ ಕೇಳೋ ಜಾಣ
ಬಯಕೆ ಬಳಕೆ ಒಳಗೊಂಡ ತಾಳಮೇಳ
ಬಾಳೊಂದು ರಮ್ಯಗಾನ ಇದರ ಆಂತರ್ಯ ಕೇಳೋ ಜಾಣ 
--------------------------------------------------------------------------------------------------------------------------

ಅಣ್ಣ ಅತ್ತಿಗೆ (1974) - ಏನೇನೋ ಆಗಿ ಹೋದ ಮೇಲೆ ತಾನಾಗಿ ಕೂಡಿ ಬಂತು ವೇಳೆ
ಸಾಹಿತ್ಯ: ಆರ್.ಎನ್.ಜಯಗೋಪಾಲ್ ಸಂಗೀತ: ಜಿ.ಕೆ.ವೆಂಕಟೇಶ್ ಗಾಯನ : ಪಿ.ಬಿ.ಶ್ರೀನಿವಾಸ 

ಏನೇನೋ ಆಗಿ ಹೋದ ಮೇಲೆ ತಾನಾಗಿ ಕೂಡಿ ಬಂತು ವೇಳೆ
ಒಲವೆನೀ ಮೈಮರೆತಿಲ್ಲೇ ಅರಳಿತು ಆಸೆಯ ಮಾಲೆ
ನನ್ನ ಕೋಗಿಲೆ ಬಳಿಗೆ ಬಂದ  ಕೂಡಲೇ

ಮೀದವಾಗಿ ಮನ ಮುಗುಳೊಮ್ಮೆ ಮುರಿ ಮೈತೆರೆ
ಕಾವೇರಿ ಮೈ ನರ ನಾಡಿ ನಿಮಿರಿ ನಿಂತರೆ
ಎರಡೆಂಬ ಅಂತರ ಜಾರಿ ಒಂದೇ ಆದರೆ
ಎಂದೆಂದೂ ಕಾಣದ ಹರುಷ ನಮ್ಮ ಕೈಸೆರೆ
ಮುಗುಳೇನೂ ಅರಳುವುದೇನೂ ಕಾಣೆ ತಾರತಮ್ಯ
ನಾನಿನ್ನು ಇನಿಯನ ಕೈಯ ವೀಣೆ ಪ್ರಿಯತಮ
ಕ್ರಮವಾಗಿ ಕಾದಿಹುದೆಲ್ಲ ಮಧುರ ಸಂಭ್ರಮ
ಅರಿತಿಯೇ ಮೈತೆಳೆದಾಗ ಮಧು ಸಮಾಗಮ
ನಮ್ಮ ವಧು ಸಮಾಗಮಾ
--------------------------------------------------------------------------------------------------------------------------

ಅಣ್ಣ ಅತ್ತಿಗೆ (1974) - ನಾಡಿಗರೇ ಕನ್ನಡ ನಾಡಿಗರೇ ಎಚ್ಚರಿಕೆ ಉಶ್ ...
ಸಾಹಿತ್ಯ: ಆರ್.ಎನ್.ಜಯಗೋಪಾಲ್ ಸಂಗೀತ: ಜಿ.ಕೆ.ವೆಂಕಟೇಶ್ ಗಾಯನ : ಪಿ.ಬಿ.ಶ್ರೀನಿವಾಸ 

ನಾಡಿಗರೇ ಕನ್ನಡ ನಾಡಿಗರೇ ಎಚ್ಚರಿಕೆ ಉಶ್ ...
ಕೆಟ್ಟ ಕಾಲ ಬಂತು ಜೋಕೆ
ಕಾಳಸಂತೆ ಪೊರರಿಗೆ ಹಣ ಹಣ ಎಂಬ ಬಯಕೆ
ನಾಡಿಗರೇ ಎಚ್ಚರಿಕೆ ಕೆಟ್ಟ ಕಾಲ ಬಂತು ಜೋಕೆ
ಕಾಳಸಂತೆ ಪೊರರಿಗೆ ಹಣ ಹಣ ಎಂಬ ಬಯಕೆ
ಅರೇ ಹಣ ಹಣ ಎಂಬ ಬಯಕೆ 

ಅಕ್ಕಿಯಲ್ಲಿ  ಕಲ್ಲು ಮಣ್ಣು ಮರಳಿನ ಬೆರಕೆ 
ಕಲಸು ಬಾಷೆ ಹೊಲಸು ವೇಷ ಬಳಸೋ ಬಯಕೆ 
ಅಕ್ಕಿಯಲ್ಲಿ  ಕಲ್ಲು ಮಣ್ಣು ಮರಳಿನ ಬೆರಕೆ 
ಕಲಸು ಬಾಷೆ ಹೊಲಸು ವೇಷ ಬಳಸೋ ಬಯಕೆ 
ಮದ್ದಿನಲೀ... ನಕಲಿ ಮದ್ದು  
ಮದ್ದಿನಲೀ... ನಕಲಿ ಮದ್ದು  ಆಯಿತು ಬೆರಕೆ
ಇದು ಮಾಡುವಂತ ಜನರು ಈ ದೇಶಕೆ ಬೇಕೇ... ಈ ದೇಶಕೆ ಬೇಕೇ
ನಾಡಿಗರೇ ಎಚ್ಚರಿಕೆ ಕೆಟ್ಟ ಕಾಲ ಬಂತು ಜೋಕೆ
ಕಾಳಸಂತೆ ಪೊರರಿಗೆ ಹಣ ಹಣ ಎಂಬ ಬಯಕೆ

ಹೆಣ್ಣುಗಳ ಶೀಲವನ್ನ ಕೊಳ್ಳುವ ಇವರು
ಸ್ವಾರ್ಥಕ್ಕಾಗಿ ಬಳುಸವಂಥ ಈ ಲಫಂಗರು 
ಹೆಣ್ಣುಗಳ ಶೀಲವನ್ನ ಕೊಳ್ಳುವ ಇವರು
ಸ್ವಾರ್ಥಕ್ಕಾಗಿ ಬಳುಸವಂಥ ಈ ಲಫಂಗರು 
ದುಡ್ಡಿಗಾಗಿ ತಲೆಯ ಒಡೆಯೇ...   
ದುಡ್ಡಿಗಾಗಿ ತಲೆಯ ಒಡೆಯೇ ಹೇಸದ ಜನರು
ನಾಳೆ ನಿಮ್ಮ ಮನೆಗೂ  ಬಂದಾರು ಜೋಕೇ ಜೋಕೇ... ಜೋಕೆ
ನಾಡಿಗರೇ ಎಚ್ಚರಿಕೆ ಕೆಟ್ಟ ಕಾಲ ಬಂತು ಜೋಕೆ
ಕಾಳಸಂತೆ ಪೊರರಿಗೆ ಹಣ ಹಣ ಎಂಬ ಬಯಕೆ

ಹಣವ ತೆತ್ತ ಬಡವ ಸತ್ತ ದವಸ ಧಾನ್ಯಕೆ
ಹಗಲಿಗೊಂದು ರಾತ್ರಿಗೊಂದು ಬೆಲೆಯ  ಏರಿಕೆ
ಹೆಚ್ಚು ಗಂಟು ಗಳಿಸಿ ನಿಂತ ಕಾಸು ಖಧೀಮರಿಗೆ
ನಡುಬೀದಿಯಲ್ಲಿ ತಂದು ನೀವು ಹಾಕಿ ಶೂಲಕೆ.. ಹಾಕಿ ಶೂಲಕೆ
ನಾಡಿಗರೇ ಎಚ್ಚರಿಕೆ ಕೆಟ್ಟ ಕಾಲ ಬಂತು ಜೋಕೆ
ಕಾಳಸಂತೆ ಪೊರರಿಗೆ ಹಣ ಹಣ ಎಂಬ ಬಯಕೆ
ಅರೇ ಹಣ ಹಣ ಎಂಬ ಬಯಕೆ
ನಾಡಿಗರೇ ಕನ್ನಡ ನಾಡಿಗರೇ ಎಚ್ಚರಿಕೆ
--------------------------------------------------------------------------------------------------------------------------

No comments:

Post a Comment