ಸ್ನೇಹಲೋಕ ಚಲನಚಿತ್ರದ ಹಾಡುಗಳು
- ಒಂದೇ ಉಸಿರಂತೆ ಇನ್ನು ನಾನು ನೀನು
- ಟೈಟಾನಿಕ್ ಹೀರೋಯಿನ್ ನನ್ನ ಚೆಲುವೇ
- ಬಸುರಿ ಮೋಡವು ಮಳೆಯ ಮಕ್ಕಳ
- ತಾಂತ ಟಕಟಕ ಟಕ ಡುಂಡ ಡುಂಟಕ
- ಈ ಲೋಕ ಸ್ನೇಹಲೋಕ
- ಯಾರೀಗೆ ಯಾರು ಇಲ್ಲರೀ
- ಕಾಶಿಗೆ ಹೋಗಿ ಬರ್ತಿನ ಅಂದ್ರೆ
ಸಂಗೀತ: ಸಾಹಿತ್ಯ: ಹಂಸಲೇಖ ಗಾಯನ: ರಾಜೇಶ, ಚಿತ್ರ
ಗಂಡು: ಹಾಡು ಹಾಡು ಒಂದು ಹಾಡು ಹಾಡು
ಹೆಣ್ಣು: ಹೂಂ..ಹೂಂ
ಗಂಡು: ಹಾಡದಿದ್ದರೆ ನನ್ನ ಹಾಡು ಕೇಳು
ಹೆಣ್ಣು: ಹೂಂ..ಹೂಂ...
ಗಂಡು: ಉಸಿರು ಕಟ್ಟಿ ಹಾಡುವೆ ಈ ಹಾಡು
ಹೆಣ್ಣು: ಹೂಂ..ಹೂಂ...
ಗಂಡು: ಈ ಉಸಿರು ನಿಂತರೆ ನಿಂಗೇ ನಷ್ಟ ನೋಡು
ಒಂದೇ ಉಸಿರಂತೆ ಇನ್ನು ನಾನು ನೀನು
ನಾನು ನೀನು ಬೇರೆ ಏನು ನೀನೆ ನಾನು ನಾನೆ ನೀನು
ಒಂದೇ ಕಡಲಂತೆ ಇನ್ನು ನಾನು ನೀನು
ತೀರ ಸಾಗರ ಬೇರೆ ಏನು ಬೇರೆ ಎಂದರೆ ಅರ್ಥ ಏನು
ಹಾಡೇ ಕೋಗಿಲೆ ಒಂದೇ ಉಸಿರಿನಲಿ
ಚಂದಿರನನ್ನು ಚಂದಿರನೆನ್ನಲು
ಅಂಜಿಕೆಯೇನು ಅಳುಕಿನ್ನೇನು
ಕೇಳೇ ಕೋಗಿಲೆ ನನ್ನ ಕೊರಳಿನಲಿ
ನಿನ್ನ ಹೆಸರೇ ಕೊನೆಯ ಮಾತು ಕೊನೆಯ ನಾದ
ಕೊನೆಯ ವೇದ
ಪ್ರೀತಿ ಪ್ರೀತಿ ಪ್ರೀತಿ ಪ್ರೀತಿ ಕೊಡುವೆ ನನ್ನ ಪ್ರಾಣ ಪ್ರೀತಿ
ಹೆಣ್ಣು: ಹೂಂ..ಹೂಂ
ಒಂದೇ ಉಸಿರಂತೆ ಇನ್ನು ನಾನು ನೀನು
ನಾನು ನೀನು ಅಲ್ಲ ಇನ್ನು ನೀನೆ ನಾನು ನಾನೆ ನೀನು
ಯತ್ತ ಇತ್ತೋ ಎಂತೋ ಬಂತೊ ಕಾಣೆ ನಾನು
ಒಂದೇ ಧೈರ್ಯ ಒಂದೇ ಹುರುಪು
ಹಾಡೊ ಹಂಬಲ ತಂದೆ ನೀನು
ಕೋಟಿ ಕೋಗಿಲೆ ಒಂದೇ ಉಸಿರಿನಲಿ
ಪ್ರೀತಿ ಮಾಡು ಪ್ರೀತಿಯ ಬೇಡು
ಅಂದಿದೆ ಅಂದಿದೆ ಹಾಡಿದೆ ಹೆಣ್ಣೆದೆ
ಅಂತರಂಗದ ಸಹ್ಯಾದ್ರಿ ಮಡಿಲಲಿ
ನೂರು ನವಿಲಾಗಿ ಹೃದಯ
ಆಡಿದೆ ಆಡಿದೆ ಕುಣಿದಿದೆ ಕುಣಿದಿದೆ
ಕಾದಿದೆ ಕಾದಿದೆ ಪ್ರೀತಿಯ ನೀಡಲು
ಒಂದೇ ಉಸಿರಲಿ ನಿಂತಿದೆ ನಿಂತಿದೆ
ಗಂಡು: ಓ...ಓ..ಓ..ಓ..
ಇಂದು ಪ್ರೀತಿಯು ಹಾಡಿದ ಪರ್ವ ದಿನ ಆ...
ಇಂದು ಪ್ರೀತಿಯು ಹಾಡಿದ ಪರ್ವ ದಿನ
ಅದ ಕೇಳಲು ದಕ್ಕಿದ ಪುಣ್ಯ ದಿನ
ಅದು ಬೆಳಕಂತೆ ಮುಟ್ಟಲಾಗದಂತೆ
ಬೆಳದಿಂಗಳಂತೆ ಅಪ್ಪಲಾಗದಂತೆ
ಗೆಳತಿ ಗೆಳತಿ ಪ್ರೀತಿಯ ಗೆಳತಿ
ನೀನೆ ನನ್ನೀ ಪ್ರೀತಿಯ ಒಡತಿ
ಬ್ರಹ್ಮ ಬಾರಿ ಜಾಣ ಜಾಣ ನಾರೀಲಿಟ್ಟ ಪ್ರೀತಿ ಪ್ರಾಣ
ನಾರಿ ನೀನೆ ಪ್ರೀತಿಯ ರೂಪ ನೀನೆ ತಾನೇ ಹೃದಯದ ದೀಪ
ಹೊತ್ತಿಕೊಂಡಿತಮ್ಮ ನಮ್ಮ ಪ್ರೀತಿ ಜ್ಯೋತಿ
ಗಾಳಿ ಅಲ್ಲ ಮಳೆಯೂ ಅಲ್ಲಭೂಮಿ ಬಿರಿದರು ಆರೋದಿಲ್ಲ ಒಂದೇ ದೀಪದಂತೆ ಇನ್ನು ನಾನು ನೀನು
ಎಣ್ಣೆ ದಾರ ಬೇರೆ ಏನು ಬೇರೆ ಎಂದರೆ ಅರ್ಥ ಏನು
ಚಂದಮಾಮನೇ ಕೇಳೊ ನಮ್ಮಿಬ್ಬರ
ನೀನು ಕಂಡ ಪ್ರೇಮಿಗಳಲ್ಲಿ
ನಮ್ಮನು ಸೇರಿಸು ಅವರಿಗು ಹೋಲಿಸು
ಚಂದಮಾಮನೇ ಕೇಳೊ ನಮ್ಮಾಣೆಯ
ನಮ್ಮಿಂದಂತು ಪ್ರೀತಿಗೆ ದ್ರೋಹ
ಆಗದು ಆಗದು ಎಂದಿಗೂ ಆಗದು
ಆಗುವೂದಾದರೆ ಇಂದೇ ಆಗಲಿ
ಆಗುವ ಮೊದಲೇ ಪ್ರಾಣ ಹೋಗಲಿ
ಹೆಣ್ಣು: ಆ... ಆ... ಆ..
ಚಂದನ ಚಂದನ ಕಂಪಿನ ಚಂದನ
ನಿನ್ನೀ ಉಸಿರಿನ ಕಸ್ತೂರಿ ಸಿಂಚನ
ಕಂಪನ ಕಂಪನ ಇಂಪಿನ ಕಂಪನ
ನಿನ್ನೀ ಮಾತಿನ ಅಮೃತ ಸಿಂಚನ
ಗಾಯನ ಗಾಯನ ನಿನ್ನೀ ಪ್ರೀತಿಯ
ಜೀವನ ಚೇತನ ಗಾಯನ ಗಾಯನ
ಅಯನ ಅಯನ ನಿನ್ನ ನೆರಳಲಿ
ನನ್ನೀ ಜನುಮದ ಪ್ರೇಮಾಯನ
ನಡೆ ಕಲ್ಲಿರಲಿ ಕಲ್ಲು ಮುಳ್ಳಿರಲಿ...
ಕಲ್ಲಿರಲಿ ಕಲ್ಲು ಮುಳ್ಳಿರಲಿ
ನಡೆ ಮಳೆಯಿರಲಿ ಮಳೆ ಬಿಸಿಲಿರಲಿ
ಪ್ರೇಮಾಯನಕೆ ನಿನ್ನ ನೆರಳಿರಲಿ
ಜನುಮಾಯನಕೆ ನಿನ್ನ ಕೊಡೆಯಿರಲಿ
ಭಯವಿಲ್ಲ ಇನ್ನು ಭಯವಿಲ್ಲ
ನನ್ನ ನಿರ್ಧಾರ ಇನ್ನು ನನದಲ್ಲ
ನನ್ನಾ ಎದೆಯಲೊಬ್ಬ ಚಂದ್ರ
ಬೆಳ್ಳೀ ಬೆಳಕ ತಂದ ತಂದ
ಪ್ರೀತಿಯಂದರೇನು ಅಂದ
ಕೇಳಿ ತಾನೇ ಉತ್ತರ ತಂದ
ಸ್ವಚ್ಛ ಬಿಳುಪಿನಂತೆ ಇನ್ನು ನಾನು ನೀನು
ಏಳು ಬಣ್ಣ ಸೇರಿ ಬೀಳೊ
ಪಾದ ಹಾಗೆ ನೀನು ನಾನು
ಒಂದೇ ಹಾಡಂತೆ ಇನ್ನು ನಾನು ನೀನು
ಏಳು ಭಾವ ಕೂಡಿಕೊಂಡ
ಬಾಳಿನಂತೆ ನಾನು ನೀನು
ಚಂದಮಾಮನೇ ಕೇಳೊ ನಮ್ಮಿಬ್ಬರ
ನೀನು ಕಂಡ ಪ್ರೇಮಿಗಳಲ್ಲಿ
ನಮ್ಮನು ಸೇರಿಸು ಅವರಿಗು ಹೋಲಿಸು
ಚಂದಮಾಮನೇ ಕೇಳೊ ನಮ್ಮಾಣೆಯ
ನಮ್ಮಿಂದಂತು ಪ್ರೀತಿಗೆ ದ್ರೋಹ
ಆಗದು ಆಗದು ಎಂದಿಗೂ ಆಗದು
ಆಗುವೂದಾದರೆ ಇಂದೇ ಆಗಲಿ
ಆಗುವ ಮೊದಲೇ ಪ್ರಾಣ ಹೋಗಲಿ
ಗಂಡು: ಹೂಂ... Ooo.
ಒಂದೇ ಉಸಿರಂತೆ ಇನ್ನು ನಾನು ನೀನು
ನಾನು ನೀನು ಬೇರೆ ಏನು
ನೀನೆ ನಾನು ನಾನೆ ನೀನು
ಒಂದೇ ಕಡಲಂತೆ ಇನ್ನು ನಾನು ನೀನು
ತೀರ ಸಾಗರ ಬೇರೆ ಏನು
ಬೇರೆ ಎಂದರೆ ಅರ್ಥ ಏನು
ಹಾಡೇ ಕೋಗಿಲೆ ಒಂದೇ ಉಸಿರಿನಲಿ
ಚಂದಿರನನ್ನು ಚಂದಿರನೆನ್ನಲು
ಅಂಜಿಕೆಯೇನು ಅಳುಕಿನ್ನೇನು
ಕೇಳೇ ಕೋಗಿಲೆ ನನ್ನ ಕೊರಳಿನಲಿ
ನಿನ್ನ ಹೆಸರೇ ಕೊನೆಯ ಮಾತು
ಕೊನೆಯ ನಾದ ಕೊನೆಯ ವೇದ
ಪ್ರೀತಿ ಪ್ರೀತಿ ಪ್ರೀತಿ ಪ್ರೀತಿ ಕೊಡುವೆ ನನ್ನ ಪ್ರಾಣ ಪ್ರೀತಿ
-----------------------------------------------------------------
ಸ್ನೇಹಲೋಕ (1999) - ಟೈಟಾನಿಕ್ ಹೀರೋಯಿನ್
ಸಂಗೀತ: ಸಾಹಿತ್ಯ: ಹಂಸಲೇಖ ಗಾಯನ: ಸೋನು ನಿಗಂ
ಟೈಟಾನಿಕ್ ಹೀರೋಯಿನ್ ನನ್ನ ಚೆಲುವೇ
ಅವಳಿಗೇ ಈ ನನ್ನ ಮನಸು ಮೀಸಲು ಈ ಕನಸು ಮೀಸಲು
ಟೈಟಾನಿಕ್ ಹೀರೋಯಿನ್ ನನ್ನ ಚೆಲುವೇ
ಅವಳಿಗೇ ಈ ನನ್ನ ಮನಸು ಮೀಸಲು ಈ ಕನಸು ಮೀಸಲು
ಐಲಾ..ಐಲಾ..ಐಲಾ..ಐಲಾ..
ಇನ್ನೂ ಕಾಯಬೇಕು ನೀನು ನಿನ್ನ ಪ್ರಿತಿ ಪಾಸೋ ಫೇಲೋ
ಐಲಾ..ಐಲಾ..ಪಾಸೋ ಫೇಲೋ...
ಈ ವಿಷಯ ಅವಳಿಗೆ ಮೀಸಲು.....
ಟೈಟಾನಿಕ್ ಹೀರೋಯಿನ್ ನನ್ನ ಚೆಲುವೇ
ಅವಳಿಗೇ ಈ ನನ್ನ ಮನಸು ಮೀಸಲು ಈ ಕನಸು ಮೀಸಲು
ಐಲಾ..ಐಲಾ..ಐಲಾ..ಐಲಾ..
ಇನ್ನೂ ಕಾಯಬೇಕು ನೀನು ನಿನ್ನ ಪ್ರಿತಿ ಪಾಸೋ ಫೇಲೋ
ಐಲಾ..ಐಲಾ..ಪಾಸೋ ಫೇಲೋ...
ಹೇ...ನಾಲ್ಕು ಸೀಜನ್ ಒಂದೇ ದಿವಸ ಎದುರು ಬರಲಿ
ಬೇಸಗೇನು ರೀಜನ್ಸ ಕಂಡ ಕ್ಷಣವೇ ನಾನು ಮರಳು
ಐಲಾ...ಐಲಾ...ಐಲಾ...ಐಲಾ... ಇನ್ನೂ ಓದಬೇಕು ನೀನು
ಮಜ್ನು ದೇವದಾಸು ಮೂಲಾ ಐಲಾ..ಐಲಾ.. ಐಲಾ.. ಐಲಾ
ಸುಖವೋ..ದುಃಖವೋ.. ನಾನಂತೂ ಅವಳಿಗೆ ಮೀಸಲೂ...
ಟೈಟಾನಿಕ್ ಹೀರೋಯಿನ್ ನನ್ನ ಚೆಲುವೇ
ಅವಳಿಗೇ ಈ ನನ್ನ ಮನಸು ಮೀಸಲು ಈ ಕನಸು ಮೀಸಲು
ಐಲಾ..ಐಲಾ..ಐಲಾ..ಐಲಾ..
ಇನ್ನೂ ಕಾಯಬೇಕು ನೀನು ನಿನ್ನ ಪ್ರಿತಿ ಪಾಸೋ ಫೇಲೋ
ಐಲಾ..ಐಲಾ..ಪಾಸೋ ಫೇಲೋ...
ನನ್ನ ಕನಸುಗಳಲ್ಲಿ ನಿನ್ನ ಕಂಡೆ ಸ್ನೇಹ ಮಾಡಿಕೊಂಡೆ
ಪ್ರೀತಿ ಅಂದರೇನು ಕಂಡೆ ಓ..ಓ..ಎದೆಯಾ ಪ್ರಿಯಾ ವಿಜಯ
ನಿನ್ನನು ಸೇರುವಾ ದಾರಿ ನನಗೊಂದೇ ಇದೊಂದೇ
ಆ ಚೆಲುವೇ ಕೊಡುವ ಹಸಿರು ಚಿನ್ಹೆ ಬಿಳುಪಿಗಾಗಿ
ನಾ ಓಡೋ ರೈಲು ಬದುಕಿನಲ್ಲಿ ಅವಳಿಗಾಗಿ
ಐಲಾ.. ಐಲಾ.. ಐಲಾ.. ಐಲಾ ಇನ್ನೂ ಹಿಡಿಯಬೇಕು ನೀನು
ಅದೃಷ್ಟದ ಕೈಕಾಲ ಐಲಾ..ಐಲಾ.. ಸೋಲೋ.. ಗೆಲವೋ
ಈ ಜೀವ ಅವಳಿಗೆ ಮೀಸಲು
ಟೈಟಾನಿಕ್ ಹೀರೋಯಿನ್ ನನ್ನ ಚೆಲುವೇ
ಅವಳಿಗೇ ಈ ನನ್ನ ಮನಸು ಮೀಸಲು ಈ ಕನಸು ಮೀಸಲು
ಐಲಾ..ಐಲಾ..ಐಲಾ..ಐಲಾ..
ಇನ್ನೂ ಕಾಯಬೇಕು ನೀನು ನಿನ್ನ ಪ್ರಿತಿ ಪಾಸೋ ಫೇಲೋ
ಐಲಾ..ಐಲಾ..ಪಾಸೋ ಫೇಲೋ...
----------------------------------------------------------------
ಸ್ನೇಹಲೋಕ (1999) - ಬಸುರಿ ಮೋಡವು ಮಳೆಯ
ಸಂಗೀತ: ಸಾಹಿತ್ಯ: ಹಂಸಲೇಖ ಗಾಯನ: ಲತಾ ಹಂಸಲೇಖ, ಸುರೇಶ ಪೀಟರ್ಸ
ಗಂಡು: ಹೇ..ಬಸುರಿ ಮೋಡವು ಮಳೆಯ ಮಕ್ಕಳ ಹಡೆಯಲು
ಹೇ..ಬಸುರಿ ಮೋಡವು ಮಳೆಯ ಮಕ್ಕಳ ಹಡೆಯಲು
ಗುಡುಗು ಮಿಂಚು ಸಿಡಿಲು ತಪ್ಪದು ತಮ್ಮಾ....
ಕೋರಸ್: ತ..ತ..ತ.. ಮಮಮಮ ತತ ಮಮ ತಮತಮ
ಗಂಡು: ಡೋಂಟ್ ವರೀ ತಮ್ಮಾ ಈ ಲವ್ವೇ ಹೀಗಮ್ಮಾ...
ಡೋಂಟ್ ವರೀ ತಮ್ಮಾ ಈ ಲವ್ವೇ ಹೀಗಮ್ಮಾ...
ಅಂಜೀದರೇ..ಅಳಿಸುವುದೋ... ದುಡುಕಿದರೇ
ದಹಿಸುವುದೋ..ಸಹಿಸದರೆ ಉಳಿಯುವುದೋ..
ಡೋಂಟ್ ವರೀ ಈ ಲವ್ವೇ ಹೀಗಮ್ಮಾ
ಹಿಂಗಿರುವಾಗ ನೀನು ಕುಂತ್ರೇ ಹೇಂಗಮ್ಮಾ
ಹೆಣ್ಣು: ಡೋಂಟ್ ವರೀ ಡೋಂಟ್ ವರೀ ತಮ್ಮಾ..
ಹೇ ಡೋಂಟ್ ವರೀ ತಮ್ಮಾ ಈ ಲವ್ವೇ ಹಿಂಗಮ್ಮಾ
ಗಂಡು: ಡೋಂಟ್ ವರೀ ಡೋಂಟ್ ವರೀ ತಮ್ಮಾ
ಹೆಣ್ಣು: ಡೋಂಟವರೀ ತಮ್ಮಾ.. ಡೋಂಟವರೀ ಡೋಂಟವರೀ
ಡೋಂಟವರೀ ಡೋಂಟವರೀ ಹೇ...ಡೋಂಟವರೀ
ಡೋಂಟವರೀ ತಮ್ಮಾ.. ಈ ಲವ್ವೇ ಹಿಂಗಮ್ಮಾ
ಗಂಡು: ಬಸ್ಸಲ್ಲೀ.... ರಶ್ಯಲಿ...ಉದಯವಾಗೋ ಸಡನ್ ಲವ್
ಸ್ಟಾಪಿಂದ ಸ್ಟಾಪಿಗೇ ಮುಗಿವುದು ತಮ್ಮಾ..
ಹೆಣ್ಣು: ಎಲ್ ಓ ವಿ ಈ ಇನ್ ಲವ್ ಯು ಲವ್ ಯುವರ್ ಲವ್
ಗಂಡು: ಪಬ್ಲಿಕ್ ಮೋಜಲ್ಲಿ ಉದಯವಾಗೋ ಟೈಂಪಾಸ ಲವ್
ಸಂಜೆ ಹೊತ್ತಲ್ಲಿ ಮುಗಿವುದು ತಮ್ಮಾ...
ಸಿನಿಮಾ ಥೇಟರಲ್ಲಿ ಅರೆ ಬರೆ ಕತ್ತಲಲ್ಲಿ
ಮುಖ ಮುಖ ಕಾಣದು ಅನ್ನೋದು ಈ ಮೂಡಲ್ಲಿ...
ಉದಯಿಸೋ ಲವ್ವದು ಬೇಗನೇ ಮುಗಿವುದು
ಕಾಯುವ ನಿನ್ನ ಲವ್ ಸೂಪರ್ ಲವ್ ಸೂಪರ್ ಲವ್
ಸೂಪರ್ ಡೂಪರ್ ಲವ್
ಡೋಂಟ್ ವರೀ ತಮ್ಮಾ ಈ ಲವ್ವೇ ಹೀಗಮ್ಮಾ...
ಡೋಂಟ್ ವರೀ ತಮ್ಮಾ ಈ ಲವ್ವೇ ಹೀಗಮ್ಮಾ...
ಗಂಡು: ಪ್ರಾಣಕ್ಕೆ ಪ್ರಾಣ ಕೊಡುವ ಪ್ರೀತಿ ಪ್ರೇಮವೋ
ಗೋಲ್ಡನ್ ಲವ್ ಸ್ಟೋರಿ ಮೈ ಡಿಯರ್ ತಮ್ಮಾ
ಹೆಣ್ಣು: ಎಲ್ ಓ ವಿ ಈ ಇನ್ ಲವ್ ಯು ಲವ್ ಯುವರ್ ಲವ್
ಗಂಡು: ಸಾರಿಗೆ ತೋರುವ ಛಲದ ಪ್ರೀತಿ ಪ್ರೇಮವೋ
ಡೈಮಂಡ್ ಲವ್ ಸ್ಟೋರಿ ಮೈ ಡಿಯರ್ ತಮ್ಮಾ
ಕಾಯುವ ಸುಖದಲಿ ಕನಸಿನ ಜೊತೆ ಇದೆ
ಕನಸಿನ ರಥದಲಿ ಸ್ನೇಹ ಕದವಿದೆ
ಕೃಷ್ಣನ ನೆರಳಲಿ ಪ್ರೇಮ ಕಥನದಲಿ ಅಂಬು ಜಗವಲ್ಲಿದೆ
ಲವ್ ಗಾಡ್ ಲವ್ ಗಾಡ್ ಲವ್ ಇಜ್ ರೀಯಲ್ ಗಾಡ್
ಡೋಂಟ್ ವರೀ ತಮ್ಮಾ ಈ ಲವ್ವೇ ಹೀಗಮ್ಮಾ...
ಡೋಂಟ್ ವರೀ ತಮ್ಮಾ ಈ ಲವ್ವೇ ಹೀಗಮ್ಮಾ...
ಅಂಜೀದರೇ..ಅಳಿಸುವುದೋ... ದುಡುಕಿದರೇ
ದಹಿಸುವುದೋ..ಸಹಿಸದರೆ ಉಳಿಯುವುದೋ..
ಡೋಂಟ್ ವರೀ ಈ ಲವ್ವೇ ಹೀಗಮ್ಮಾ
ಹಿಂಗಿರುವಾಗ ನೀನು ಕುಂತ್ರೇ ಹೇಂಗಮ್ಮಾ
----------------------------------------------------------------
ಸ್ನೇಹಲೋಕ (1999) - ತಾಂತ ಟಕಟಕ ಟಕ
ಸಂಗೀತ: ಸಾಹಿತ್ಯ: ಹಂಸಲೇಖ ಗಾಯನ: ರಾಜೇಶ, ರಮೇಶ ಚಂದ್ರ, ಲತಾ ಹಂಸಲೇಖ, ಮಂಜುಳಾ ಗುರುರಾಜ್
ಹೆಣ್ಣು: ತಾಂತ ಟಕಟಕ ಟಕ ಡುಂಡ ಡುಂಟಕ ಡುಂಟಕ
ಟಕ ಡುಂಡ ಟಕ ಟಕ ಡುಂಡ ಓ..ಓ..
ಗಂಡು: ತಾಳ ಒಂದು ಎದೆ ತುಂಬಿ ಕುಣಿಯಂಗಾಗೋದ
ಯಾವಾಗ ಕಣ್ಣ ಮುಂದೆ ಆಸೆಗಳೆಲ್ಲ ಕೈಗೂಡಿದಾಗ
ರಾಗ ಒಂದು ಎದೆ ತುಂಬ ಹಾಡಂಗಾಗೋದ ಯಾವಾಗ
ಈಗ ಇರೋ ಸುಖ ಸಾಕು ಅಂತ ಹೃದಯ ಅಂದಾಗ
ಹೆಣ್ಣು: ತಾಂತ ಟಕಟಕ ಟಕ ಡುಂಡ ಡುಂಟಕ ಡುಂಟಕ
ಟಕ ಡುಂಡ ಟಕ ಟಕ ಡುಂಡ ಓ..ಓ..
ಗಂಡು: ಆನಂದ ಕಣ್ಣೀರು ಹೆಣ್ಣು: ತುಳುಕೋದು ಯಾವಾಗ
ಗಂಡು: ಪ್ರೀತೀನು ತ್ಯಾಗಾನೂ ಹೆಣ್ಣು: ಕಣ್ತುಂಬಿ ಬಂದಾಗ
ಗಂಡು: ಓ..ತಂಗಿ ನಿನಗಾಗಿ ಈ ಬಾಳು ಈ ಜೀವ
ಗಂಡು: ಹೆಣ್ಣು ನಾಚೋದು ಯಾವಾಗ
ಹೆಣ್ಣು: ಗಂಡನ ಕೂಡೆಂದಾಗ
ಗಂಡು: ನಲಿಯೋದು ಯಾವಾಗ
ಹೆಣ್ಣು: ಸೀಮಂತ ಆದಾಗ..
ಹೆಣ್ಣು: ತಾಂತ ಟಕಟಕ ಟಕ ಡುಂಡ ಡುಂಟಕ ಡುಂಟಕ
ಟಕ ಡುಂಡ ಟಕ ಟಕ ಡುಂಡ ಓ..ಓ..
ಗಂಡು: ಈ ಬಾಳೇ ಭೂ ಭಾರ
ಹೆಣ್ಣು: ಹೂವಾಗೋದ ಯಾವಾಗ
ಗಂಡು: ಧೈರ್ಯಾನಾ ತುಂಬುವಾಗ
ಹೆಣ್ಣು: ಜೀವ ಜೊತೆ ಇರುವಾಗ
ಗಂಡು: ಓ.. ಗೆಳೆಯ ಈ ಮನೆಯ ಸುಖ ನಿನದು ದುಃಖ ನನದು
ಸ್ವರ್ಗ ಅನ್ನೋದು ಎಲ್ಲಿದೆ
ಹೆಣ್ಣು: ಈ ನಮ್ಮ ಮನೆಯಲ್ಲಿದೆ
ಗಂಡು: ಮನೆ ತುಂಬ ಏನಿದೆ
ಹೆಣ್ಣು: ಪ್ರೀತಿನೇ ತುಂಬಿದೆ
ಹೆಣ್ಣು: ತಾಂತ ಟಕಟಕ ಟಕ ಡುಂಡ ಡುಂಟಕ ಡುಂಟಕ
ಟಕ ಡುಂಡ ಟಕ ಟಕ ಡುಂಡ ಓ..ಓ..
ಗಂಡು: ತಾಳ ಒಂದು ಎದೆ ತುಂಬಿ ಕುಣಿಯಂಗಾಗೋದು ಯಾವಾಗ
ಹೆಣ್ಣು: ಕಣ್ಣ ಮುಂದೆ ಆಸೆಗಳೆಲ್ಲ ಕೈಗೂಡಿದಾಗ
ಗಂಡು: ರಾಗ ಒಂದು ಎದೆ ತುಂಬ ಹಾಡಂಗಾಗೋದ ಯಾವಾಗ
ಹೆಣ್ಣು: ಈಗ ಇರೋ ಸುಖ ಸಾಕು ಅಂತ ಹೃದಯ ಅಂದಾಗ
ತಾಂತ ಟಕಟಕ ಟಕ ಡುಂಡ ಡುಂಟಕ ಡುಂಟಕ
ಟಕ ಡುಂಡ ಟಕ ಟಕ ಡುಂಡ ಓ..ಓ..
----------------------------------------------------------------
ಸ್ನೇಹಲೋಕ (1999) - ಈ ಲೋಕ ಈ ಲೋಕ
ಸಂಗೀತ: ಸಾಹಿತ್ಯ: ಹಂಸಲೇಖ ಗಾಯನ: ರಾಜೇಶ,
ಈ ಲೋಕ ಈ ಲೋಕ ಲೋಕ ಸ್ನೇಹಲೋಕ
ಇದು ಲೋಕ ಸ್ನೇಹಲೋಕ ಹಲೋ ಹಾಯ್ ಹಲೋ ಹಾಯ್
ಈ ಲೋಕ ಈ ಲೋಕ ಲೋಕ ಸ್ನೇಹಲೋಕ
ಇದು ಲೋಕ ಸ್ನೇಹಲೋಕ ಹಲೋ ಹಾಯ್ ಹಲೋ ಹಾಯ್
ದ್ವೇಷಕ್ಕೆ ದ್ವೇಷ ಮೋಸಕ್ಕೆ ಮೋಸ ಔಷಧಿ ಇಲ್ಲ ಅಂದ ಪುರಂದರ ದಾಸ ದಾಸರ ವಾಣಿಗೆ ಬೋಲೋ ಜೈ..ಬೋಲೋ ಜೈ..
ಹೇ..ಹೇ..ಸ್ನೇಹ ಮಳೆಯಲಿ ಸುಡು ಬಿಸಿಲಿಗೆ ಕೊಡೆಯಂತೆ
ಸಮಯಕ್ಕಾಗೋ ಬೈದು ಹೇಳೋ ಭಲೇ ಬಂಧು ಗೆಳೆಯ
ಹೇ..ಹೇ..ಸ್ನೇಹ ಮನಸಿನ ವ್ಯಥೆಯ ಕೇಳುವ ತಾಯಂತೆ
ನಿಂದೆ ಸಹಿಸಿ ಮಾನ ಉಳಿಸೋ ಪಾಪ ಪ್ರಾಣಿ ಗೆಳೆಯ
ಜಾಣಾನೋ.. ಇಲ್ಲಾ ಪೆದ್ದನೋ..ಸ್ನೇಹ ಆದರೆ ಸಾಕು ಭಲೇ ಜೋಡಿ
ಮಾನಾನೋ ಇಲ್ಲ ಪ್ರಾಣನೋ ತಂದು ನೀಡಲು ಸ್ನೇಹ ಗತಿ ನೋಡಿ
ಯುದ್ಧದಿ ಎಲ್ಲಾ ಸೋತರು ಸಹಿತ ಗೆಳೆಯನ ಸ್ನೇಹ ಗೆದ್ದಿತು
ಕೌರವ ಬಾಳಿಗೆ ಬೋಲೋ ಬೋಲೋ ಜೈ...
ಈ ಲೋಕ ಈ ಲೋಕ ಲೋಕ ಸ್ನೇಹಲೋಕ
ಇದು ಲೋಕ ಸ್ನೇಹಲೋಕ ಹಲೋ ಹಾಯ್ ಹಲೋ ಹಾಯ್
ಕೃಷ್ಣ ಪಾರ್ಥ ಗೆಳೆಯರೆ ಆದರೂ ಸಲಿಗೆಯ ಮೀರಲಿಲ್ಲ
ಅವನು ಒಂದೇ ಇವನು ಒಂದೇ ಸೋತು ಗೆದ್ದರಲ್ಲ
ಅಣ್ಣ ತಮ್ಮ ಬಂಧು ಬಳಗ ಮೋಸ ತಾಳಬಹುದು
ಧ್ರೋಹ ಧ್ರೋಹ ಸ್ನೇಹ ದ್ರೋಹ ಎಂದು ಆರದ ಬೆಂಕಿ
ಆರೋಯ್ತೋ ಬೆಂಕಿ ಆರೋಯ್ತೋ ನಿನ್ನ ರಾಮ ಬಾಣದಂಥ ಮಾತಿಂದ ಸ್ನೇಹ ಎಂದರೇ ನಿಜದ ನಿಶಾನೆ
ಗುಟ್ಟನ್ನೂ ಕಾಯುವ ಹೃದಯ ಖಜಾನೆ ಹೃದಯ ಬಾನಿಗೆ
ಬೋಲೋ ಜೈ ಬೋಲೋ ಜೈ
ಈ ಲೋಕ ಈ ಲೋಕ ಲೋಕ ಸ್ನೇಹಲೋಕ
ಇದು ಲೋಕ ಸ್ನೇಹಲೋಕ ಹಲೋ ಹಾಯ್ ಹಲೋ ಹಾಯ್
ಈ ಲೋಕ ಈ ಲೋಕ ಲೋಕ ಸ್ನೇಹಲೋಕ
ಇದು ಲೋಕ ಸ್ನೇಹಲೋಕ ಹಲೋ ಹಾಯ್ ಹಲೋ ಹಾಯ್
ದ್ವೇಷಕ್ಕೆ ದ್ವೇಷ ಮೋಸಕ್ಕೆ ಮೋಸ ಔಷಧಿ ಇಲ್ಲ ಅಂದ ಪುರಂದರ ದಾಸ ದಾಸರ ವಾಣಿಗೆ ಬೋಲೋ ಜೈ..ಬೋಲೋ ಜೈ
----------------------------------------------------------------
ಸ್ನೇಹಲೋಕ (1999) - ಯಾರಿಗೆ ಯಾರೂ ಇಲ್ಲರೀ...
ಸಂಗೀತ: ಸಾಹಿತ್ಯ: ಹಂಸಲೇಖ ಗಾಯನ: ರಾಜೇಶ,
ಯಾರಿಗೇ ಯಾರೂ ಇಲ್ಲರೀ..ರೀ..ರೀ...ರೀ..
ಬಂಧುಗಳೆಲ್ಲ ಸುಳ್ಳರೀ..ರೀ..ರೀ...ರೀ..
ಅಂತಸ್ತೇ.. ಮುಖ್ಯಾರೀ... ವರ್ಚಸ್ಸೇ.. ಲೆಖ್ಖಾರೀ
ಪ್ರೀತ್ಸೀದ್ದೇ ತಪ್ಪಂದ್ರೇ..ನಾವಿನ್ನೇನ್ ಹೇಳೋದ್ರೀ...
ಎತ್ತಿಗೇ ಜ್ವರ ಬಂದ್ರೇ ರೀ...ಎಮ್ಮೆಗೇ ಬರೇ ಹಾಕ್ತಾರ್ರೀ....
ಯಾರಿಗೇ ಯಾರೂ ಇಲ್ಲರೀ..ರೀ..ರೀ...ರೀ..
ಬಂಧುಗಳೆಲ್ಲ ಸುಳ್ಳರೀ..ರೀ..ರೀ...ರೀ..
ಅಂತಸ್ತೇ.. ಮುಖ್ಯಾರೀ... ವರ್ಚಸ್ಸೇ.. ಲೆಖ್ಖಾರೀ
ಪ್ರೀತ್ಸೀದ್ದೇ ತಪ್ಪಂದ್ರೇ..ನಾವಿನ್ನೇನ್ ಹೇಳೋದ್ರೀ...
ಎತ್ತಿಗೇ ಜ್ವರ ಬಂದ್ರೇ ರೀ...ಎಮ್ಮೆಗೇ ಬರೇ ಹಾಕ್ತಾರ್ರೀ....
ಯಾರಿಗೇ ಯಾರೂ ಇಲ್ಲರೀ..ರೀ..ರೀ...ರೀ..
ಬಂಧುಗಳೆಲ್ಲ ಸುಳ್ಳರೀ..ರೀ..ರೀ...ರೀ..
ಅಪ್ಪಾ ಹಾಕಿದ ಮರಂತ ಹಗ್ಗಾ ಕಟ್ಟಿ ನೇಣ ಹಾಕ್ಕೊಂತಾರಲ್ರೀ..
ಹಳೇ ನೀರು ಹೋಗಿ ಹೊಸ ನೀರು ಒಂದೇ ಅನ್ನಬಾರದ್ರೀ...
ರೀರೀ... ರೀರೀರೀ.... ರೀರೀ... ರೀರೀರೀ
ಬಣ್ಣ ಜಾತಿ ಅಂತ ದೇವ್ರೇ ಸಾವಿರ ತಪ್ಪು ಮಾಡಿ ಕುಂತಿದಾನಲ್ರೀ..
ಪ್ರೀತಿ ಮಾಡಿ ಅವ್ನ ತಪ್ಪನ್ನೇಲ್ಲಾ.. ಸರಿಮಾಡೋದ್ ಒಳ್ಳೇದ್ ಕಣ್ರೀ
ಮೂರು ಘಳಿಗೆ ಬಾಳಿನೋಳಗೆ ಪ್ರೀತಿ ಮಾಡ್ರೀ...ಒಂದು ಘಳಿಗೆ
ಮನಸ್ಸನ್ನು ಕಲ್ಲು ಮಾಡದಿರಿ ಮಸೆದು ಮಸೆದು ಬೆಂಕಿ ತಂದಿರಿ
ದ್ವೇಷದ ಬೆಂಕಿಯ ಬೆಳಕಲಿ ನಮ್ಮನು ಬಾಳಿ ಎಂದಿರೀ...
ಬದುಕಿನ ಬಂಧು ಪ್ರೀತಿಯೇ ಎಂದು ತಿಳಿದು ಕೊಳ್ಳದಿರುವ ಜಾಣ ದಡ್ಡಾರೀ...
ಯಾರಿಗೇ ಯಾರೂ ಇಲ್ಲರೀ..ರೀ..ರೀ...ರೀ..
ಬಂಧುಗಳೆಲ್ಲ ಸುಳ್ಳರೀ..ರೀ..ರೀ...ರೀ..
ಅಂತಸ್ತೇ.. ಮುಖ್ಯಾರೀ... ವರ್ಚಸ್ಸೇ.. ಲೆಖ್ಖಾರೀ
ಪ್ರೀತ್ಸೀದ್ದೇ ತಪ್ಪಂದ್ರೇ..ನಾವಿನ್ನೇನ್ ಹೇಳೋದ್ರೀ...
ಎತ್ತಿಗೇ ಜ್ವರ ಬಂದ್ರೇ ರೀ...ಎಮ್ಮೆಗೇ ಬರೇ ಹಾಕ್ತಾರ್ರೀ....
ಯಾರಿಗೇ ಯಾರೂ ಇಲ್ಲರೀ..ರೀ..ರೀ...ರೀ..
ಬಂಧುಗಳೆಲ್ಲ ಸುಳ್ಳರೀ..ರೀ..ರೀ...ರೀ..
ಕೊಲೆ ಮಾಡಿದರೂ ಜೈಲು ಹಾರಿದರೂ ಕ್ಷಮೇ ಕೇಳುತಾರೀ....
ಲಂಚ ನುಂಗಿದರೂ.. ದೇಶ ಮಾರಿದರೂ...ಅಪೀಲ್ ಹೋಗುತಾರೀ...ರೀರೀ..ರೀರೀರೀ...
ಬಿಡೋದಿಲ್ಲ ಅಂತ ನದೀ ನೀರು ಬೇಗ ಬಿಡ್ತಾ ಇದ್ದೀವಲ್ರೀ...
ಪ್ರೀತಿ ಮಾಡಿದವರು ಒಮ್ಮೆ ಕ್ಷಮಿಸಲು ಮುಖ ನೋಡ್ತೀರಲ್ರೀ...
ನೀವೂ ಮಾಡಿದರೇ.. ಮದುವೆಯಂತೆ ನಾವೇ ಆದ್ರೇ ಪ್ರೀತಿಯಂತೇ..
ಭರತನ ತಾಯಿ ಶಕುಂತಲ ಮದುವೆ ಆಗಿಯೇ ಹೆತ್ತಳಾ...
ಯಾರೇ ನೀನು ಅಂದರೂ ರುಜುವಾತ್ ಮಾಡದೇ ಬಿಟ್ಟಳಾ..
ಬದುಕಿಗೇ ಎಂದೂ ಪ್ರೀತಿಯೇ.. ಬಂಧು ತಿಳಿದುಕೊಳ್ಳದಿರುವ
ಜಾಣ ದಡ್ಡಾರೀ......
ಯಾರಿಗೇ ಯಾರೂ ಇಲ್ಲರೀ..ರೀ..ರೀ...ರೀ..
ಬಂಧುಗಳೆಲ್ಲ ಸುಳ್ಳರೀ..ರೀ..ರೀ...ರೀ..
ಅಂತಸ್ತೇ.. ಮುಖ್ಯಾರೀ... ವರ್ಚಸ್ಸೇ.. ಲೆಖ್ಖಾರೀ
ಪ್ರೀತ್ಸೀದ್ದೇ ತಪ್ಪಂದ್ರೇ..ನಾವಿನ್ನೇನ್ ಹೇಳೋದ್ರೀ...
ಎತ್ತಿಗೇ ಜ್ವರ ಬಂದ್ರೇ ರೀ...ಎಮ್ಮೆಗೇ ಬರೇ ಹಾಕ್ತಾರ್ರೀ....
ಯಾರಿಗೇ ಯಾರೂ ಇಲ್ಲರೀ..ರೀ..ರೀ...ರೀ..
ಬಂಧುಗಳೆಲ್ಲ ಸುಳ್ಳರೀ..ರೀ..ರೀ...ರೀ..
----------------------------------------------------------------
ಸ್ನೇಹಲೋಕ (1999) - ಕಾಶಿಗೆ ಹೋಗಿ ಬರ್ತೀನ್ ಅಂದ್ರೇ..
ಸಂಗೀತ: ಸಾಹಿತ್ಯ: ಹಂಸಲೇಖ ಗಾಯನ: ರಾಜೇಶ, ಸುರೇಶ ಪೀಟರ್ಸ, ಮಹೆಂದ್ರ
ಕಾಶಿಗೆ ಹೋಗಿ ಬರ್ತೀನ ಅಂದ್ರೆ ತಿಳ್ಕೋ ಪಾರ್ಟಿ ಕ್ಲೋಸ ಅಂತ
ಉಟಿಗೇ ಹೋಗಿ ಬರ್ತೀನ ಅಂದ್ರೇ ತಿಳ್ಕೋ ಪಾರ್ಟಿ ಸ್ಟಾರ್ಟ್ ಅಂತ
ಬಳೆಗಳ ಸೌಂಡೇ ಸ್ಟಾರ್ ನ್ಯೂಸ್ ಅಂತ..
ಗಾಗಲ್ಸೂ ಬ್ಯಾಂಗಲ್ಸೂ ಲೇಡೀಸು ಗೋಲ್ಡನ್
ಪಾರ್ಟಿ ಪಾರ್ಟಿ ಪಾರ್ಟಿಯಲ್ಲಿ ಬ್ಯೂಟಿ ಬ್ಯೂಟಿ ಬ್ಯೂಟಿ
ಬ್ಯೂಟಿ ಬ್ಯೂಟಿ ತುಂಬಾ ಸ್ವೀಟೀ.. ಸ್ವೀಟೀ.. ಸ್ವೀಟೀ..
ಸ್ವೀಟೀ.. ಅಂದರೆ ಬಯ್ಯುತ್ತಾಳೆ ಘಾಟಿ ಘಾಟಿ ಘಾಟಿ
ಕೆನ್ನೆಗೆ ಅರಿಶಿನ ಇಟ್ಟವಳಂದರೇ ತಿಳ್ಕೋ ಹುಡುಗಿ ಒಲ್ಡ್ ಅಂತಾ
ಪಾರ್ಟಿಲ್ ತಿಂಡೀನ್ ಹಿಡಿದವಳೆಂದರೇ ತಿಳ್ಕೋ ಹುಡುಗಿ ನ್ಯೂ ಅಂತಾ..
ಕಿಲಕಿಲ ಸೌಂಡ ಪಾರ್ಟಿಗೆ ಕುಕ್ಕು ಕುಕ್ಕು ಡಿಟಿಎಸ್ ಮ್ಯೂಜಿಕ್
ಎಂಜಿ ರೋಡ ಮ್ಯೂಜಿಕ್ ಕುಕ್ಕು ಕುಕ್ಕು
ಪಬ್ಬು ಪಬ್ಬು ಸುತ್ತೋನು ಡಿಸ್ಟೇಕ್ಷನಗೆ ತರವಲ್ಲ
ತರವಲ್ಲ ಅನ್ನೋ ಪ್ಲೇ ಬಾಯ್ ಹತ್ರ ತರ್ಲೇ ತಂಟೆಗೆ ಬರವಿಲ್ಲ
ಬರ ಬಂದ್ರೂ ಲೋಕಕ್ಕೆ ಟೀನೇಜ್ ಎಂದೂ ಕೊರೆಯಲ್ಲ
ಕೋರೆ ಅನ್ನೋದು ಬರೋದ ಕಾಲೇಜ್ ಮುಚ್ಚಿದಾಗಲೆಲ್ಲಾ
ಹೈಹೀಲ್ಡ್ ಹಾಕೋ ಕಾಲ್ಗಳಿಗೆ ಬರ ಬರದೇ ಇರಲಣ್ಣ...
ಊಟಿ ಊಟಿ ಊಟಿಯಲ್ಲಿ ಪಾರ್ಟಿ.. ಪಾರ್ಟಿ.. ಪಾರ್ಟಿ..
ಪಾರ್ಟಿ ಪಾರ್ಟಿ ಪಾರ್ಟಿಯಲ್ಲಿ ರೋಟಿ... ರೋಟಿ..ರೋಟಿ ರೋಟಿ ಸಂಗಡ ಗರಂ ಗರಂ ಕೇಟಿ
ಕೇಟಿ ರೋಟಿ ಕೇಟಿ ಆದಮೇಲೆ ಬ್ಯೂಟಿ.... ಬ್ಯೂಟಿ.. ಬ್ಯೂಟಿ
ಪಾರ್ಟಿಲ್ ಹೌಸ್ ನಗುವಿದ್ರೇ ತಿಳ್ಕೋ ಸೆಟಪ್ ಆಯ್ತಂತ
ಪಾರ್ಟಿಲೀ ಪ್ರೈವೇಟ್ ಮಾತಿದ್ರೇ ತಿಳ್ಕೋ ಸೆಟಪ್ ಆಯ್ತಂತ
ಓ.ಓ.ಓ. ಪಿಸು ಪಿಸು ಮಾತೇ ಪಾರ್ಟಿಗೆ
ಟೋನ್ ಟೋನ್ ಟೆಕನಿಕ್ಕೂ...ಪಿಕನಿಕ್ಕೋ..ಪಿಕನಿಕ್ಕೂ...
ಕೋಮಾದಲ್ಲಿ ಇರುವಾಗ ಗ್ಲುಕೋಸ್ ಬೇಕಾಗುತ್ತೇ..
ಅಂಥ ಟೈಮಲ್ಲೀ ನೆನಪೇ ಆಕ್ಸಿಜನ್ ಆಗುತ್ತೇ...
ಓದಿ ಮುಂದೆ ಹೋಗಬೇಕು ದುಡಿದು ದೊಡ್ಡವರಾಗಬೇಕು
ಏನೂ ಆಗದೇ.. ಇದ್ರೂನು ಒಳ್ಳೇ ಸ್ನೇಹಿತರಾಗಬೇಕು
ಕ್ಲೀಯೋ ಪ್ಯಾಟ ರೈಟನ್ನೂ ಗೋಲ್ಡನ್ ಶಿಫ್ಟೂ ಕೇಳ್ರಣ್ಣ..
ಊಟಿ ಊಟಿ ಊಟಿಯಲ್ಲಿ ಪಾರ್ಟಿ...
ಊಟಿ ಊಟಿ ಊಟಿಯಲ್ಲಿ ಪಾರ್ಟಿ...
ಊಟಿ ಊಟಿ ಹ್ಯಾಪಿ ಹ್ಯಾಪಿ ಪಾರ್ಟಿ...
ಊಟಿ ಪಾರ್ಟಿ ಪಾರ್ಟಿ ಪಾರ್ಟಿ
ಪಾರ್ಟಿ ಪಾರ್ಟಿ ಪಾರ್ಟಿ ಪಾರ್ಟಿ
ಪಾರ್ಟಿ ಪಾರ್ಟಿ ಓನ್ಲೀ ಪೆಟ್ಟಿ ಪಾರ್ಟಿ ಪಾರ್ಟಿ ಪಾರ್ಟಿ
ಕಾಶಿಗೆ ಹೋಗಿ ಬರ್ತೀನ ಅಂದ್ರೆ ತಿಳ್ಕೋ ಪಾರ್ಟಿ ಕ್ಲೋಸ ಅಂತ
ಉಟಿಗೇ ಹೋಗಿ ಬರ್ತೀನ ಅಂದ್ರೇ ತಿಳ್ಕೋ ಪಾರ್ಟಿ ಸ್ಟಾರ್ಟ್ ಅಂತ
ಬಳೆಗಳ ಸೌಂಡೇ ಸ್ಟಾರ್ ನ್ಯೂಸ್ ಅಂತ..
ಗಾಗಲ್ಸೂ ಬ್ಯಾಂಗಲ್ಸೂ ಲೇಡೀಸು ಗೋಲ್ಡನ್
ಪಾರ್ಟಿ ಪಾರ್ಟಿ ಪಾರ್ಟಿಯಲ್ಲಿ ಬ್ಯೂಟಿ ಬ್ಯೂಟಿ ಬ್ಯೂಟಿ
ಬ್ಯೂಟಿ ಬ್ಯೂಟಿ ತುಂಬಾ ಸ್ವೀಟೀ.. ಸ್ವೀಟೀ.. ಸ್ವೀಟೀ
----------------------------------------------------------------
No comments:
Post a Comment