548. ಶ್ರೀಗಂಧ (1995).


ಶ್ರೀಗಂಧ ಚಿತ್ರದ ಹಾಡುಗಳು 
  1. ಒಂದು ಅನುರಾಗದ ಕಾವ್ಯ 
  2. ಕಾಯಿಸುವ ಹುಡುಗಿಯರ 
  3. ಕೋಗಿಲೆ ಪದ ಜಾನಪದ 
  4. ಓ ಅಂದರಮ್ಮ ಅಂದರು 
  5. ಸಿಸ್ಟರ್ ಸಿಸ್ಟರ್ 
ಶ್ರೀಗಂಧ (1995) - ಒಂದು ಅನುರಾಗದ ಕಾವ್ಯ
ಸಾಹಿತ್ಯ : ಹಂಸಲೇಖ ಸಂಗೀತ : ಹಂಸಲೇಖ ಗಾಯನ : ಎಸ್.ಪಿ.ಬಾಲಸುಬ್ರಹ್ಮಣ್ಯಂ, ಮಂಜುಳಾ ಗುರುರಾಜ್


ಗಂಡು : ಒಂದು ಅನುರಾಗದ ಕಾವ್ಯ ಈ ಅಂದ ಕಾವ್ಯದ ಮೈಯ ತುಂಬೆಲ್ಲಾ ಶ್ರೀಗಂಧ            
             ಒಂದು ಅಪರೂಪದ ಶಿಲ್ಪ ಈ ಅಂದ ಶಿಲ್ಪದ ಮೈಯ ತುಂಬೆಲ್ಲಾ ಶ್ರೀಗಂಧ
            ಶ್ರೀಗಂಧ ಶ್ರೀಗಂಧ ಶ್ರೀಗಂಧ ಈ ಅಂದ ಈ ಅಂದ ಶ್ರೀಗಂಧ
ಕೊರಸ್ : ಶ್ರೀಗಂಧ ಶ್ರೀಗಂಧ ಶ್ರೀಗಂಧ ಈ ಅಂದ ಈ ಅಂದ ಶ್ರೀಗಂಧ
ಗಂಡು : ಒಂದು ಅನುರಾಗದ ಕಾವ್ಯ ಈ ಅಂದ ಕಾವ್ಯದ ಮೈಯ ತುಂಬೆಲ್ಲಾ ಶ್ರೀಗಂಧ

ಸರಳವಾಗಿ ಸಾಗುವ ಹೃದಯ ತುಂಬಿ ಅರಳುವ ಕುಸುಮ ಕಾವ್ಯ ಕನ್ನಿಕೆ
ಒಂದು ಮೂಕ ಭಂಗಿಗೆ ಕೋಟಿ ಭಾವ ತೆರೆಯುವ ಚತುರ ಶಿಲಾ ಬಾಲಿಕೆ
ಓದಿದರೆ ಓಲೈಸುವ ನೋಡಿದರೆ ಪೂರೈಸುವ
ಮೆಚ್ಚಿದರೆ ಮನ್ನಿಸುವ ಮುಟ್ಟಿದರೆ ಕಂಪಿಸುವ
ಕವಿ ಶಿಲ್ಪಿ ಕಾಣಿಕೆ
ಶ್ರೀಗಂಧ ಶ್ರೀಗಂಧ ಶ್ರೀಗಂಧ  ಈ ಅಂದ ಈ ಅಂದ ಶ್ರೀಗಂಧ
ಕೊರಸ್ : ಶ್ರೀಗಂಧ ಶ್ರೀಗಂಧ ಶ್ರೀಗಂಧ
              ಈ ಅಂದ ಈ ಅಂದ ಶ್ರೀಗಂಧ
ಗಂಡು : ಒಂದು ಅನುರಾಗದ ಕಾವ್ಯ ಈ ಅಂದ ಕಾವ್ಯದ ಮೈಯ ತುಂಬೆಲ್ಲಾ ಶ್ರೀಗಂಧ
            ಕಮಲಕೊಂದು ಸೊಗಸಿದೆ  ನವಿಲಿಗೊಂದು ಚೆಲುವಿದೆ ಎರಡು ನಿನ್ನಲಡಗಿದೆ
            ಹಣ್ಣಿಗೊಂದು ರಂಗಿದೆ  ಮಣ್ಣಿಗೊಂದು ಸೊಗಡಿದೆ  ಎರಡು ನಿನಗೆ ಒಲಿದಿದೆ
            ಕೋಗಿಲೆಗೆ ಕಂಠವಿದೆ ಕಸ್ತೂರಿಗೆ ಕಂಪು ಇದೆ  ಭೂರಮೆಗೆ ಚೈತ್ರವಿದೆ
           ಈ ರಮೆಗೆ ಅಂದವಿದೆ  ನಿನ್ನಂದ ನಿನ್ನದೆ  ಶ್ರೀಗಂಧ ಶ್ರೀಗಂಧ ಶ್ರೀಗಂಧ
           ಈ ಅಂದ ಈ ಅಂದ ಶ್ರೀಗಂಧ  
ಕೊರಸ್ : ಶ್ರೀಗಂಧ ಶ್ರೀಗಂಧ ಶ್ರೀಗಂಧ  ಈ ಅಂದ ಈ ಅಂದ ಶ್ರೀಗಂಧ
ಗಂಡು : ಒಂದು ಅನುರಾಗದ ಕಾವ್ಯ ಈ ಅಂದ ಕಾವ್ಯದ ಮೈಯ ತುಂಬೆಲ್ಲಾ ಶ್ರೀಗಂಧ
            ಒಂದು ಅಪರೂಪದ ಶಿಲ್ಪ ಈ ಅಂದ ಶಿಲ್ಪದ ಮೈಯ ತುಂಬೆಲ್ಲಾ ಶ್ರೀಗಂಧ
-------------------------------------------------------------------------------------------------------------------------

ಶ್ರೀಗಂಧ (1995) - ಕಾಯಿಸುವ ಹುಡುಗಿಯರ ಯಾರು ಪ್ರೀತಿಸಬಾರದು 
ಸಾಹಿತ್ಯ : ಹಂಸಲೇಖ ಸಂಗೀತ : ಹಂಸಲೇಖ ಗಾಯನ : ಮನೋ, ಎಸ.ಜಾನಕಿ 

ಕಾಯಿಸುವ ಹುಡುಗಿಯರ ಯಾರು ಪ್ರೀತಿಸಬಾರದು 
ಪ್ರೀತಿಸುವ ಹುಡುಗರನು ಯಾರು ನೋವಿಸಬಾರದು 
ಕಾಯಿಸಿದರೂ.. ನೋಯಿಸಿದರೂ... ನಾನು ನಿನ್ನ ಪ್ರಿತಿಸುವೇ ... 
ನಾನು ನಿನ್ನ ಪ್ರಿತಿಸುವೇ ...
ಕೋಪಿಸುವ ಹುಡುಗರನು ಯಾರು ಪ್ರೀತಿಸಬಾರದು 
ಪ್ರೀತಿಸುವ ಹುಡುಗಿಯರ ಯಾರು ನಿಂದಿಸಬಾರದು 
ಕೋಪಿಸಿದರೂ... ನಿಂದಿಸಿದರೂ... ನಾ ನಿನ್ನ ಪ್ರೀತಿಸುವೆ   
ನಾ ನಿನ್ನ ಪ್ರೀತಿಸುವೆ   

ಕಾಯಿಸುವುದು ಸತಾಯಿಸುವುದು 
ಹೆಣ್ಣುಗಳ ಕಲೆತಾನೇ... ಪ್ರೀತಿಗದು ಬಲೆತಾನೆ 
ಕೋಪಿಸುವುದು.. ಚುಡಾಯಿಸುವುದೂ.. 
ಗಂಡುಗಳ ಕಲೀತಾನೆ... ಪ್ರೀತಿಗದು  ಸೆಳೆತಾನೇ 
ಕೂಗುವಿರಿ ಓಡಾಡಿಸುವಿರಿ ಒರೆಗೆ ಹಚ್ಚಿ ಬೇಯಿಸುವಿರಿ
ಹೊಗಳುವಿರಿ ಮೈಮರೆಸುವಿರಿ ಅಟ್ಟಕ್ಕೆ ಹತ್ತಿ ಬೀಳಿಸುವಿರಿ 
ನಿಜವಾಗಿ ನಾನು ಅಂತ ಹುಡುಗನು ಅಲ್ಲ 
ನಿಜವಾಗಿ ನಾನು ಅಂತ ಹುಡುಗಿಯು ಅಲ್ಲ 
ನಿಜವಾಗಿ ನಾನು ನಿನ್ನ ಪ್ರೀತಿಯ ದಾಸ 
ನಿಜವಾಗಿ ನಾನು ನಿನ್ನ ಪ್ರೀತಿಯ ದಾಸಿ 
ಕಾಯಿಸುವ ಹುಡುಗಿಯರ ಯಾರು ಪ್ರೀತಿಸಬಾರದು 
ಪ್ರೀತಿಸುವ ಹುಡುಗಿಯರ ಯಾರು ನಿಂದಿಸಬಾರದು 
ಕಾಯಿಸಿದರೂ.. ನಿಂದಿಸಿದರೂ .. ನಾನು ನಿನ್ನ ಪ್ರಿತಿಸುವೇ ... 
ನಾನು ನಿನ್ನ ಪ್ರಿತಿಸುವೇ ...   

ಕಣ್ಣುಗಳಲ್ಲಿ ಕಪಟ ಕಾಣದು, 
ಕಣ್ಣು ಮುಚ್ಚಿ ನಂಬಬಹುದು..  ಅಂತರಂಗ ನೋಡಬಹುದು  
ಸನ್ನೆಗಳಲಿ ಸನ್ನಾಹ ಕಾಣದು 
ಮನ ಬಿಚ್ಚಿ ತೋರಬಹುದು.. ಸ್ನೇಹ ಸಂಗ ಮಾಡಬಹುದು 
ನಾಚುವುದು ಹಿಂಬಾಲಿಸುವುದು ಪ್ರೀತಿಯ ಆಳ ತೋರಿಸುವುದು 
ಅಂಜುವುದು ಅನುಮಾನಿಸುವುದು ಪ್ರೀತಿಗೆ ಸಹಿ ಹಾಕಿಸುವುದು 
ಕಾಯೋದು ಕಾಯಿಸುವುದು ವಿರಹದ ಪ್ರೇಮ  
ಕಾಯುತ ಕನವರಿಸೋದು ಕನಸಿನ ಪ್ರೇಮ 
ತಾಂಬೂಲ ಸೀರೆ ತಂದು ಮಾತಿಗೆ ಕೂಗು 
ಸುಖವಾಗಿ ನನ್ನ ನಂಬಿ ಮಾಡುವೆ ಆಗು 
ಕೋಪಿಸುವ ಹುಡುಗರನು ಯಾರು ಪ್ರೀತಿಸಬಾರದು 
ಪ್ರೀತಿಸುವ ಹುಡುಗಿಯರ ಯಾರು ನಿಂದಿಸಬಾರದು 
ಕೋಪಿಸಿದರೂ... ನಿಂದಿಸಿದರೂ... ನಾನು  ನಿನ್ನ ಪ್ರೀತಿಸುವೆ   
ನಾನು  ನಿನ್ನ ಪ್ರೀತಿಸುವೆ   
ಕಾಯಿಸುವ ಹುಡುಗಿಯರ ಯಾರು ಪ್ರೀತಿಸಬಾರದು 
ಪ್ರೀತಿಸುವ ಹುಡುಗರನು ಯಾರು ನೋವಿಸಬಾರದು 
ಕಾಯಿಸಿದರೂ.. ನೋಯಿಸಿದರೂ... ನಾನು ನಿನ್ನ ಪ್ರಿತಿಸುವೇ ... 
ನಾನು ನಿನ್ನ ಪ್ರಿತಿಸುವೇ ...   
--------------------------------------------------------------------------------------------------------------------------

ಶ್ರೀಗಂಧ (1995) - ಕೋಗಿಲೆ ಪದ ಜಾನಪದ ಧೀಮತಾನನನ
ಸಾಹಿತ್ಯ : ಹಂಸಲೇಖ ಸಂಗೀತ : ಹಂಸಲೇಖ ಗಾಯನ :ಮನೋ, ಎಸ್.ಜಾನಕೀ 


ಲಾಲಾಲಲಲ..  ಒಹ್...  ಲಾಲಾಲಲಲ..  ಒಹ್...
ಧೀಮತಾನನನ ಧೀಮತಾನನನ
ಕೋಗಿಲೆ ಪದ ಜಾನಪದ ಧೀಮತಾನನನ
ಪ್ರೇಯಸಿ ಪದ ಪ್ರೇಮಪದ ಧೀಮತಾನನನ
ಕೋಗಿಲೆ ಪದ ಜಾನಪದ ಧೀಮತಾನನನ
ಪ್ರೇಯಸಿ ಪದ ಪ್ರೇಮಪದ ಧೀಮತಾನನನ
ಹಾಡಿಗೆ ಪ್ರಾಣ ಪಲ್ಲವಿ.. ಒಹ್... ಮಾತಿಗೆ ಮೌನ ಪಲ್ಲವಿ.. ಒಹ್
ಪ್ರೇಮಕೆ ಕಣ್ಣು ಪಲ್ಲವಿ...  ಬಾಳಿಗೆ ಹೆಣ್ಣು ಪಲ್ಲವಿ.. ಒಹ್

ಹೃದಯವೀಣೆಯ ಜೀವತಂತಿಯ ಶುಧ್ದ ಶ್ರುತಿಯ ಮಧುರ ನಾದಕೆ
ಹೆಣ್ಣು ಪಂಚಮ ಗಂಡು ಶಟ್ಚಮಾ ಆದರೇನೇ ರಾಗ ಮಾಲಿಕೆ
ಸರಿಗಮದ ಸ್ವರಗಳಿಗೆ ಒಲವಿನ ಈ ಅಧರ
ತಾಕದಿಮಿಥಾಮ್ ಜತಿಗಳಿಗೆ ಚಂದಿನದೇ ಶೃಂಗಾರ
ಹಾಡಿಗೆ ಪ್ರಾಣ ಪಲ್ಲವಿ..ಒಹ್ ಮಾತಿಗೆ ಮೌನ ಪಲ್ಲವಿ
ಪ್ರೇಮಕೆ ಕಣ್ಣು ಪಲ್ಲವಿ.. ಒಹ್.. ಬಾಳಿಗೆ ಹೆಣ್ಣು ಪಲ್ಲವಿ..
ಕೋಗಿಲೆ ಪದ ಜಾನಪದ ಧೀಮತಾನನನ
ಪ್ರೇಯಸಿ ಪದ ಪ್ರೇಮಪದ ಧೀಮತಾನನನ
ಕೋಗಿಲೆ ಪದ ಜಾನಪದ ಧೀಮತಾನನನ
ಪ್ರೇಯಸಿ ಪದ ಪ್ರೇಮಪದ ಧೀಮತಾನನನ

ಸಿಂಧು ಭೈರವಿ ಹಂಸ ನಂದಿನಿ ಮೋಹನದಲಿ ಕಾಮವರ್ಧಿನಿ..
ವರಾಹಪ್ರಿಯ ಷಣ್ಮುಖ ಪ್ರಿಯ ರಂಜನಿಯಲಿ ರಾಗ ರಾಗಿಣಿ
ಧಮನಿಗಳ ಗಮಕಗಳೇ ಪ್ರಣಯಿಗಳ ಆಲಾಪ
ಆಧಾರಗಳ ಪಲಕುಗಳೇ ಪ್ರೇಮಿಗಳ ಸಲ್ಲಾಪ
ಹಾಡಿಗೆ ಪ್ರಾಣ ಪಲ್ಲವಿ...ಒಹ್  ಮಾತಿಗೆ ಮೌನ ಪಲ್ಲವಿ
ಪ್ರೇಮಕೆ ಕಣ್ಣು ಪಲ್ಲವಿ.. ಒಹ್.. ಬಾಳಿಗೆ ಹೆಣ್ಣು ಪಲ್ಲವಿ..
ಕೋಗಿಲೆ ಪದ ಜಾನಪದ ಧೀಮತಾನನನ
ಪ್ರೇಯಸಿ ಪದ ಪ್ರೇಮಪದ ಧೀಮತಾನನನ
ಕೋಗಿಲೆ ಪದ ಜಾನಪದ ಧೀಮತಾನನನ
ಪ್ರೇಯಸಿ ಪದ ಪ್ರೇಮಪದ ಧೀಮತಾನನ
-------------------------------------------------------------------------------------------------------------------------

ಶ್ರೀಗಂಧ (1995) - ಓ ಅಂದರಮ್ಮ ಅಂದರು ಪ್ರೀತಿ ಕಳೆದು ಕೊಂಡೋರು
ಸಾಹಿತ್ಯ : ಹಂಸಲೇಖ ಸಂಗೀತ : ಹಂಸಲೇಖ ಗಾಯನ :ಪಿ.ಬಿ.ಶ್ರೀನಿವಾಸ, ಬಿ.ಆರ್.ಛಾಯಾ.  ಎಸ್.ಜಾನಕೀ

ಓ...ಓ....ಓ...ಓ...
ಓ ಅಂದರಮ್ಮ ಅಂದರು ಪ್ರೀತಿ ಕಳೆದು ಕೊಂಡೋರು
ಕಂಡು ಕಂಡು ಎಡವಿದರೇ, ತಿಳಿದು ತಿಳಿದು ದುಡಿಕಿದರೆ
ಆ ಭಾಗ್ಯಕ್ಕೆ ಕಣ್ಣೇಕೆ...
ಓ ಅಂದರಮ್ಮ ಅಂದರು ಪ್ರೀತಿ ಕಳೆದು ಕೊಂಡೋರು
ಬಯಸಿ ಬಯಸಿ ಬಳಲಿದರೇ ಕೋರಿ ಕೋರಿ ಕೊರಗಿದರೇ
ಆ ಭಾಗ್ಯಕ್ಕೆ ಬದುಕೇಕೆ...
ಓ ಅಂದರಮ್ಮ ಅಂದರು ಪ್ರೀತಿ ಕಳೆದು ಕೊಂಡೋರು

ಈ ಕೋಪ ತುಂಬಾ ಕೆಟ್ಟದು, ಸತ್ಯವನ್ನು ಸಹಿ ಅದು, ಸ್ನೇಹವನು ಬಯ್ದವು
ಪ್ರೀತಿಪರ ವಹಿಸದು, ಈ ತಾಪ ತುಂಬಾ ಕೆಟ್ಟದು
ನಂಬಿಕೆಯಾ ಸುಡುವುದು ಅಂಜಿಕೆಯಾ ನೆಡುವುದು
ಕಂಬನಿಯ ಕೊಡುವುದು
ಕೋಪ ತಾಪದ ಕಡಲೊಳಗೆ  ಬೇಕು ಬೇಡದ ಕವಲೊಳಗೆ
ಬಿಗುಮಾನದ ಮುನಿಸೇಕೆ..
ಓ ಅಂದರಮ್ಮ ಅಂದರು ಪ್ರೀತಿ ಕಳೆದು ಕೊಂಡೋರು
ಕಂಡು ಕಂಡು ಎಡವಿದರೇ, ತಿಳಿದು ತಿಳಿದು ದುಡಿಕಿದರೆ
ಆ ಭಾಗ್ಯಕ್ಕೆ ಕಣ್ಣೇಕೆ...
ಓ ಅಂದರಮ್ಮ ಅಂದರು ಪ್ರೀತಿ ಕಳೆದು ಕೊಂಡೋರು
ಬಯಸಿ ಬಯಸಿ ಬಳಲಿದರೇ ಕೋರಿ ಕೋರಿ ಕೊರಗಿದರೇ
ಆ ಭಾಗ್ಯಕ್ಕೆ ಬದುಕೇಕೆ...
ಓ ಅಂದರಮ್ಮ ಅಂದರು ಪ್ರೀತಿ ಕಳೆದು ಕೊಂಡೋರು

ಈ ಪ್ರೀತಿ ಎಂಬ ಗಂಧವು,
ಹೆಣ್ಣಿನಲ್ಲಿ ಇದ್ದರು ಗಂಡಿನಲ್ಲಿ ಇದ್ದರು ಮುಚ್ಚಿ ಇಡಲಾರರು
ಈ ಪ್ರೀತಿ ಎಂಬ ಮಾಯೆಯ ಅಪ್ಪಿಕೊಂಡ ಗಂಡಿಗೆ
ಒಪ್ಪಿಕೊಂಡ ಹೆಣ್ಣಿಗೆ ಶೋಧನೆಯು ತಪ್ಪದು
ಬೆಳಕೇ ಸೂರ್ಯನ ನುಂಗಿರಲು, ಮನಸೇ ಬಯಕೆಯ ದಹಿಸಿರಲು
ಅಭಿಮಾನದ ಮುಸುಕೆಕೆ..
ಓ ಅಂದರಮ್ಮ ಅಂದರು ಪ್ರೀತಿ ಕಳೆದು ಕೊಂಡೋರು
ಕಂಡು ಕಂಡು ಎಡವಿದರೇ, ತಿಳಿದು ತಿಳಿದು ದುಡಿಕಿದರೆ
ಆ ಭಾಗ್ಯಕ್ಕೆ ಕಣ್ಣೇಕೆ...
ಓ ಅಂದರಮ್ಮ ಅಂದರು ಪ್ರೀತಿ ಕಳೆದು ಕೊಂಡೋರು
ಬಯಸಿ ಬಯಸಿ ಬಳಲಿದರೇ ಕೋರಿ ಕೋರಿ ಕೊರಗಿದರೇ
ಆ ಭಾಗ್ಯಕ್ಕೆ ಬದುಕೇಕೆ...
ಓ ಅಂದರಮ್ಮ ಅಂದರು ಪ್ರೀತಿ ಕಳೆದು ಕೊಂಡೋರು

ಕಾಯಿಸುವ ಹುಡುಗಿಯರ ಯಾರು ಪ್ರೀತಿಸಬಾರದು 
ಪ್ರೀತಿಸುವ ಹುಡುಗರನು ಯಾರು ನೋವಿಸಬಾರದು 
ಕಾಯಿಸಿದರೂ.. ನೋಯಿಸಿದರೂ... ನಾನು ನಿನ್ನ ಪ್ರಿತಿಸುವೇ ... 
ನಾನು ನಿನ್ನ ಪ್ರಿತಿಸುವೇ ...
ಕಾಯಿಸಿದರೂ.. ನೋಯಿಸಿದರೂ... ನಾನು ನಿನ್ನ ಪ್ರಿತಿಸುವೇ ... 
ನಾನು ನಿನ್ನ ಪ್ರಿತಿಸುವೇ ...
--------------------------------------------------------------------------------------------------------------------------

ಶ್ರೀಗಂಧ (1995) - ಸಿಸ್ಟರ್ ಸಿಸ್ಟರ್ ಓ ಬ್ಯೂಟಿಫುಲ್ ಸಿಸ್ಟರ್
ಸಾಹಿತ್ಯ : ಹಂಸಲೇಖ ಸಂಗೀತ : ಹಂಸಲೇಖ ಗಾಯನ :ಲತಾ 
ಹಂಸಲೇಖ, ವಿಜಯಲಕ್ಷ್ಮಿ

ಸಿಸ್ಟರ್ ಸಿಸ್ಟರ್ ಓ ಬ್ಯೂಟಿಫುಲ್ ಸಿಸ್ಟರ್
ಸಿಸ್ಟರ್ ಸಿಸ್ಟರ್ ಓ ಬ್ಯೂಟಿಫುಲ್ ಸಿಸ್ಟರ್
ಸಿಸ್ಟರ್ ಸಿಸ್ಟರ್ ಓ ವಂಡರ್ಫುಲ್ ಸಿಸ್ಟರ್
ನಮ್ಮಮ್ಮ ನೀನಮ್ಮ ನನಗಿತ್ತೇ ಮರುಜನ್ಮ
ತಾಯಾಗಿ ನೀನು ನನ್ನ ಉಳಿಸಿದೆ..
ಹೂವಾಗಿ ನಾನು ನಗಲು ಹರಿಸಿದೆ
ಸಿಸ್ಟರ್ ಸಿಸ್ಟರ್ ಓ ಬ್ಯೂಟಿಫುಲ್ ಸಿಸ್ಟರ್
ಸಿಸ್ಟರ್ ಸಿಸ್ಟರ್ ಓ ವಂಡರ್ಫುಲ್ ಸಿಸ್ಟರ್
ಥುನತಕ್ಕ ಥುನತಕ್ಕ ನಾನಿನ್ನು ನಿನಗಕ್ಕ
ಕಲ್ಯಾಣಯೋಗ ಕೂಡಿ ಬಂದಿದೆ
ತುಂಟಾಟ ಆಡೋ ಕಾಲ ಮುಗಿದಿದೆ..

ಇರದ ನಗುವ ಗಂಧ ಬೀರೋ ಸ್ನೇಹಿತೆ
ಮನದ ಗುಡಿಯ ಒಳಗೆ ಕುಳಿತ ಪೂಜಿತೆ
ಸ್ವೀಕರಿಸಮ್ಮ  ಕಂಬನಿ ಮಾಲೆ
ನಿನ್ನ ಮನಸು ಕುಸುಮದಂತೆ ಕೋಮಲ
ಮಾತು ಹುರಿದ ಅರಳಿನಂತೆ ನಿರ್ಮಲ
ಮರೆಯದಿರಮ್ಮ ವರಿಸಿದ ಮೇಳ
ನಮ್ಮಮ್ಮ ನೀನಮ್ಮ ನನಗಿತ್ತೇ ಮರುಜನ್ಮ
ತಾಯಾಗಿ ನೀನು ನನ್ನ ಉಳಿಸಿದೆ..
ಹೂವಾಗಿ ನಾನು ನಗಲು ಹರಿಸಿದೆ
ಸಿಸ್ಟರ್ ಸಿಸ್ಟರ್ ಓ ಬ್ಯೂಟಿಫುಲ್ ಸಿಸ್ಟರ್
ಸಿಸ್ಟರ್ ಸಿಸ್ಟರ್ ಓ ವಂಡರ್ಫುಲ್ ಸಿಸ್ಟರ್

ನಾಳೆ ನೀನು ವರಿಸಲಿರುವ ಹುಡುಗನು
ಬ್ರಹ್ಮ ತಾನೇ ನಿಂತು ಹುಡುಕಿ ತಂದನು...
ವರಗಳ ರಾಜ ಗುಣಗಳ ತೇಜ
ಅಕ್ಕ ನಿನ್ನ ಹೊರೆಯು ನಿನ್ನ ಹೆಗಲಲಿ
ನನ್ನ ಮೊದಲ ಚಂದ್ರ ನಿನ್ನ ಮಡಿಲಲಿ
ತವರಿರುವಾಗ ತಬ್ಬಲಿ ಯಾರು..
ಥುನತಕ್ಕ ಥುನತಕ್ಕ ನಾನಿನ್ನು ನಿನಗಕ್ಕ
ಕಲ್ಯಾಣಯೋಗ ಕೂಡಿ ಬಂದಿದೆ
ತುಂಟಾಟ ಆಡೋ ಕಾಲ ಮುಗಿದಿದೆ..
ಸಿಸ್ಟರ್ ಸಿಸ್ಟರ್ ಓ ಬ್ಯೂಟಿಫುಲ್ ಸಿಸ್ಟರ್
ಸಿಸ್ಟರ್ ಸಿಸ್ಟರ್ ಓ ವಂಡರ್ಫುಲ್ ಸಿಸ್ಟರ್
ಥುನತಕ್ಕ ಥುನತಕ್ಕ ನಾನಿನ್ನು ನಿನಗಕ್ಕ
ಕಲ್ಯಾಣಯೋಗ ಕೂಡಿ ಬಂದಿದೆ
ತುಂಟಾಟ ಆಡೋ ಕಾಲ ಮುಗಿದಿದೆ..
ಸಿಸ್ಟರ್ ಸಿಸ್ಟರ್ ಓ ಬ್ಯೂಟಿಫುಲ್ ಸಿಸ್ಟರ್
ಸಿಸ್ಟರ್ ಸಿಸ್ಟರ್ ಓ ಬ್ಯೂಟಿಫುಲ್ ಸಿಸ್ಟರ್
ಸಿಸ್ಟರ್ ಸಿಸ್ಟರ್ ಓ ವಂಡರ್ಫುಲ್ ಸಿಸ್ಟರ್
ನಮ್ಮಮ್ಮ ನೀನಮ್ಮ ನನಗಿತ್ತೇ ಮರುಜನ್ಮ
ತಾಯಾಗಿ ನೀನು ನನ್ನ ಉಳಿಸಿದೆ..
ಹೂವಾಗಿ ನಾನು ನಗಲು ಹರಿಸಿದೆ 
------------------------------------------------------------------------------------------------

No comments:

Post a Comment