43. ಬೆಟ್ಟದ ಹುಲಿ (1965)



ಬೆಟ್ಟದ ಹುಲಿ ಚಿತ್ರದ ಗೀತೆಗಳು 
  1. ಆಡುತಿರುವ ಮೋಡಗಳೇ 
  2. ಆಕಾಶದ ಲೋಕದಿ ದೂರ 
  3. ಅತ್ತೆಯ ಮಗಳೇ 
  4. ಮದುಮಗಳು ನಾನಾಗಿ 
  5. ಏಕೋ ಈ ದಿನಾ 
ಬೆಟ್ಟದ ಹುಲಿ (1965) - ಆಡುತಿರುವ ಮೋಡಗಳೆ
ಸಾಹಿತ್ಯ:ಗೀತಪ್ರಿಯ ಸಂಗೀತ:ಟಿ.ಜಿ.ಲಿಂಗಪ್ಪ ಗಾಯಕ:ಪಿ.ಬಿ.ಶ್ರೀನಿವಾಸ್


ಒಹೊಹೊ ಒಹೊಹೊ...
ಆಡುತಿರುವ ಮೋಡಗಳೆ ಹಾರುತಿರುವ ಹಕ್ಕಿಗಳೆ
ಯಾರ ತಡೆಯೂ ನಿಮಗಿಲ್ಲ ನಿಮ್ಮ ಭಾಗ್ಯ ನಮಗಿಲ್ಲ
ಆಡುತಿರುವ ಮೋಡಗಳೆ

ಒಬ್ಬನು ತನ್ನಯ ಸಲುವಾಗಿ         ಹಲವರ ದೋಚಿ ನಗುವಂಥ
ಒಬ್ಬನೆಲ್ಲೊ ನಗುತಿರಲು              ಕೋಟಿ ಮಂದಿ ಅಳುವಂಥ
ಲೋಕವಿದುವಂತೆ ಹೊಯ್ ಪಾಪದ ಸಂತೆ,ಲೋಕವಿದುವಂತೆ ಹೊಯ್ ಪಾಪದ ಸಂತೆ
ಪ್ರೀತಿಯೆಲ್ಲಿ ನೀತಿಯೆಲ್ಲಿ ಶಾಂತಿಯು ಎಲ್ಲಿದೆ ಜಗದಲ್ಲಿ
ಆಡುತಿರುವ ಮೋಡಗಳೆ ಹಾರುತಿರುವ ಹಕ್ಕಿಗಳೆ

ಮನುಜರು ಮನುಜರ ದಾರಿಯಲಿ         ಮುಳ್ಳನು ಹಾಸಿ ಮೆರೆಯುವರು
ಆಸೆಯಿಂದ ಮನೆ ಕಟ್ಟಿ                        ಕಡೆಗೆ ಮಣ್ಣಲಿ ಮಲಗುವರು
ಲೋಕದೀ ಆಟ ಹೊಯ್ ಜೀವ ಜಂಜಾಟ,ಲೋಕದೀ ಆಟ ಹೊಯ್ ಜೀವ ಜಂಜಾಟ
ಭೇದಭಾವ ಆಳುತಿರುವ ಲೋಕದಿ ನ್ಯಾಯದ ನೆರಳೆಲ್ಲಿ
ಆಡುತಿರುವ ಮೋಡಗಳೆ ಹಾರುತಿರುವ ಹಕ್ಕಿಗಳೆ
ಯಾರ ತಡೆಯೂ ನಿಮಗಿಲ್ಲ ನಿಮ್ಮ ಭಾಗ್ಯ ನಮಗಿಲ್ಲ

--------------------------------------------------------------------------------------------------------------------------

ಬೆಟ್ಟದ ಹುಲಿ (೧೯೬೫/1965)
ಸಾಹಿತ್ಯ: ಗೀತಪ್ರಿಯ ಸಂಗೀತ: ಟಿ.ಜಿ.ಲಿಂಗಪ್ಪ ಹಾಡಿದವರು: ಪಿ.ಬಿ.ಶ್ರೀನಿವಾಸ್, ಎಸ್.ಜಾನಕಿ


ಆಕಾಶದ ಲೋಕದಿ ದೂರ ನಲಿದಾಡಿರೆ ಚಂದಿರ ತಾರ
ಈ ಭೂಮಿಯಲಿ ಅನುರಾಗದಲಿ        ಮೆರೆದಾಡಿದೆ ಪ್ರೇಮದ ಸಾರ
ಆಕಾಶದ ಲೋಕದಿ ದೂರ               ನಲಿದಾಡಿರೆ ಚಂದಿರ ತಾರ
ಹೃದಯ ವೇಗ ಹೊಂದಿರೆ ಈಗ         ಮಿಲನದ ಕಾತುರತೆ
ಹೃದಯ ವೇಗ ಹೊಂದಿರೆ ಈಗ         ಮಿಲನದ ಕಾತುರತೆ
ಪ್ರೇಮದಲ್ಲಿ ಮಿಂದು ಕಂಡೆ               ಪ್ರೇಮದಲ್ಲಿ ಮಿಂದು ಕಂಡೆ
ಇಂದು ಭಾವುಕತೆ
ಆಕಾಶದ ಲೋಕದಿ ದೂರ              ನಲಿದಾಡಿರೆ ಚಂದಿರ ತಾರ

ಹೃದಯವನ್ನೆ ಉಡುಗೊರೆಯಾಗಿ          ಪಡೆಯಲು ಬಾ ಗೆಳೆಯ
ನೆನಪಲಿ ಬಂದು ಮನದಲಿ ನಿಂದು         ಸರಸವಾಡುವೆಯ
ಕಣ್ಣ ನೋಟ, ಆಡಿ ಆಟ                        ಕಣ್ಣ ನೋಟ, ಆಡಿ ಆಟ
ಕಲಿಸೆ ಪ್ರೇಮದ ಪಾಠ                     
ಆಕಾಶದ ಲೋಕದಿ ದೂರ             ನಲಿದಾಡಿರೆ ಚಂದಿರ ತಾರ
ಈ ಭೂಮಿಯಲಿ ಅನುರಾಗದಲಿ     ಮೆರೆದಾಡಿದೆ ಪ್ರೇಮದ ಸಾರ
ಆಕಾಶದ ಲೋಕದಿ ದೂರ            ನಲಿದಾಡಿರೆ ಚಂದಿರ ತಾರ
------------------------------------------------------------------------------------------------------------------------

ಬೆಟ್ಟದ ಹುಲಿ (೧೯೬೫)
ಸಾಹಿತ್ಯ: ಗೀತಪ್ರಿಯ ಸಂಗೀತ: ಟಿ.ಜಿ.ಲಿಂಗಪ್ಪ ಹಾಡಿದವರು: ಎಲ್.ಆರ್.ಈಶ್ವರಿ, ರುದ್ರಪ್ಪ, ಎಸ್.ಜಾನಕಿ

ಅತ್ತೆಯ ಮಗಳೇ ಏತಕೆ ರಗಳೇ
ಮುತ್ತಿನ ಕಡಿವಾಣ ನಿನಗೆ ತರುವೆ ನಿಂಗೆ ತರುವೆ
ಹೊಯ್ಯನ ಹೊಯ್ಯನ ಹೊಯ್ಯನ ಹೊಯ್ಯನ ಹೊಯ್ಯನ ಹೊಯ್ಯನ ಹೊಯ್
ಮಾವನ ಮಗನೆ ಮಾತಿನ ಮಲ್ಲನೆ
ಮದುವೆಗೆ ಮುಂಚೆ ಇಂಥ ಸಲಿಗೆ ತರವೇ.. ಸಲಿಗೆ ತರವೇ..

ಚೆಂದುಳ್ಳಿ ಚೆನ್ನೆ ನಿಂಗೆ ಆ ಚಿಂತೆ ಯಾಕೆ
ಇಂದಲ್ಲಾ ನಾಳೆ ನನ್ನ ಜತೆಗೂಡುವೇ
ಹೊಯ್ಯನ ಹೊಯ್ಯನ ಹೊಯ್ಯನ ಹೊಯ್ಯನ ಹೊಯ್ಯನ ಹೊಯ್ಯನ ಹೊಯ್
ನಿಶ್ಚಯ ಆಗೋವರೆಗೂ ಅವಸರ ಯಾಕೇ 
ಆ ತನಕ ಸುಮ್ನೆ ಯಾಕೆ ಹಾರಾಡುವೆ
ಹೊಯ್.. ಕೇಳೆಲೆ ನಾರಿ ನಾ ಬ್ರಹ್ಮಚಾರಿ
ಹಾಗದ್ರೆ ಈಗಲೇ ಸರಸ ಸರಿಯೇ.. ಸರಸ ಸರಿಯೇ
ಅತ್ತೆಯ ಮಗಳೇ ಏತಕೆ ರಗಳೇ
ಮದುವೆಗೆ ಮುಂಚೆ ಇಂಥ ಸಲಿಗೆ ತರವೇ.. ಸಲಿಗೆ ತರವೇ..

ನನ್ ತಮ್ಮನ ಅತ್ತಿಗೆ ಆಗುವೆ ನೀನು
ನಿನ್ ತಮ್ಮನ ಭಾವ ನಾನಾಗುವೆ
ಹೊಯ್ಯನ ಹೊಯ್ಯನ ಹೊಯ್ಯನ ಹೊಯ್ಯನ ಹೊಯ್ಯನ ಹೊಯ್ಯನ ಹೊಯ್
ನನ್ ಕಂಡು ಹಾಡೋನೆ ನಕ್ಕರ ಹಾಡೋನೆ 
ಹೀಗೇಕೆ ಮಂಕನಂತೆ ತೂರಾಡುವೆ
ಹೈ ನೀನೊಮ್ಮೆ ನಕ್ಕರೆ ನನಗದೇ ಸಕ್ಕರೆ
ಬೆಕ್ಕಸ ಬೆರಗಾದೆ ಏಕೋ ಅರಿಯೆ..  ಏಕೋ ಅರಿಯೆ..
ಹೊಯ್ಯನ ಹೊಯ್ಯನ ಹೊಯ್ಯನ ಹೊಯ್ಯನ ಹೊಯ್ಯನ ಹೊಯ್ಯನ
ಓ ಭಲೇ ಭಲೇ ಭಲೇ ಭಲೇ ಹೊಯ್ 
ಅತ್ತೆಯ ಮಗಳೇ ಏತಕೆ ರಗಳೇ
ಮುತ್ತಿನ ಕಡಿವಾಣ ನಿನಗೆ ತರುವೆ ನಿಂಗೆ ತರುವೆ
------------------------------------------------------------------------------------------------------------------------

ಬೆಟ್ಟದ ಹುಲಿ (೧೯೬೫)
ಸಾಹಿತ್ಯ: ಗೀತಪ್ರಿಯ ಸಂಗೀತ: ಟಿ.ಜಿ.ಲಿಂಗಪ್ಪ ಹಾಡಿದವರು: ಎಸ್.ಜಾನಕಿ

ಮಧುಮಗಳು ನಾನಾಗಿ, ಮಧುಮಗನು ನೀನಾಗಿ
ಒಲವಿಂದ ಒಂದಾಗಿ ಹೂಂಹೂಂಹೂಂ ಹಾಡೋಣ
ಮಧುಮಗಳು ನಾನಾಗಿ, ಮಧುಮಗನು ನೀನಾಗಿ

ಬಯಸಿರಲು ಓ ಇನಿಯಾ, ಮಿಲನವನು ಈ ಬಾಲೆ
ಬಂಧಿಸಲು ಜೀವನವ ತೊಡಿಸುವೆ ನೀ ಹೂಮಾಲೆ
ಬಯಸಿರಲು ಓ ಇನಿಯಾ, ಮಿಲನವನು ಈ ಬಾಲೆ
ಬಂಧಿಸಲು ಜೀವನವ ತೊಡಿಸುವೆ ನೀ ಹೂಮಾಲೆ
ಸಂತಸದಿ ಹೃದಯಗಳು ಹಾಡುತಿರೆ ಉಯ್ಯಾಲೆ
ಆನಂದಮಯ ಲೋಕದಲಿ ಜೊತೆಗೂಡಿ ಸಾಗೋಣ
ಮಧುಮಗಳು ನಾನಾಗಿ, ಮಧುಮಗನು ನೀನಾಗಿ

ಹುಣ್ಣಿಮೆಯ ಮಡಿಲಲ್ಲಿ ಕಾಣುತಿರೆ ಮಧುಸಾರ
ಕಣ್ಣುಗಳ ಅಂಗಳದಿ ಮೊಹಮಯ ಅಭಿಸಾರ
ಹುಣ್ಣಿಮೆಯ ಮಡಿಲಲ್ಲಿ ಕಾಣುತಿರೆ ಮಧುಸಾರ
ಕಣ್ಣುಗಳ ಅಂಗಳದಿ ಮೊಹಮಯ ಅಭಿಸಾರ
ಬಣ್ಣಿಸಿರಿ ಭಾವನೆಯು ಮಧುರಾಮಯ ಸಮರಸ 
ಸಮರಸವ ಸತಿಪತಿಯು ನಾವಾಗಿ ಕಾಣೋಣ 
ಮಧುಮಗಳು ನಾನಾಗಿ, ಮಧುಮಗನು ನೀನಾಗಿ
ಒಲವಿಂದ ಒಂದಾಗಿ ಹೂಂಹೂಂಹೂಂ ಹಾಡೋಣ
ಮಧುಮಗಳು ನಾನಾಗಿ, ಮಧುಮಗನು ನೀನಾಗಿ
ಒಲವಿಂದ ಒಂದಾಗಿ ಹೂಂಹೂಂಹೂಂ ಹಾಡೋಣ 
--------------------------------------------------------------------------------------------------------------------------

ಬೆಟ್ಟದ ಹುಲಿ (೧೯೬೫)
ಸಾಹಿತ್ಯ: ಗೀತಪ್ರಿಯ ಸಂಗೀತ: ಟಿ.ಜಿ.ಲಿಂಗಪ್ಪ ಹಾಡಿದವರು: ಎಸ್.ಜಾನಕಿ

ಏಕೋ ಈ ದಿನ ಏನೋ ತಲ್ಲಣ
ಏಕೋ ಈ ದಿನ ಏನೋ ತಲ್ಲಣ
ಆಸೆಯೂ ಹೆಚ್ಚಿ ಸಾವಿರ ಪಟ್ಟು  ಲೋಕದ ಎಲ್ಲಾ ಯೋಚನೆ ಬಿಟ್ಟು
ಯಾವುದೊ ಗುಟ್ಟು ತಾ ಹೇಳಿ ಕೊಟ್ಟು ಆದೇ ಬಿನ್ನಾಣ
ಏಕೋ ಈ ದಿನ ಏನೋ ತಲ್ಲಣ
ಏಕೋ ಈ ದಿನ ಏನೋ ತಲ್ಲಣ

ಬೆಡಗಿನ ಕಣ್ಣಾಟ ಬದುಕಿನ ಚೆಲ್ಲಾಟ
ಮನದಿ ಮೆರೆಸೆ ಹೊಸ ಬಗೆ ನೋಟ
ಸುಖಮಯ ಸಂಕೋಚದೇ ನಿಂತು ಇಂದೇ
ಸುಖಮಯ ಸಂಕೋಚದೇ ನಿಂತು ಇಂದೇ
ನಾಚುತಿಹೇ ಸಂತೋಷದೇ ಓಹೋಹೋ
ಏಕೋ ಈ ದಿನ ಏನೋ ತಲ್ಲಣ
ಏಕೋ ಈ ದಿನ ಏನೋ ತಲ್ಲಣ

ಮನದಿ ಸಂಚಾರ ಮಾಡುವ ಹಮ್ಮಿರ
ಒಲಿದು ಬರುವ ಪ್ರೀತಿಯ ಚೋರ
ಮನದಿ ಸಂಚಾರ ಮಾಡುವ ಹಮ್ಮಿರ
ಒಲಿದು ಬರುವ ಪ್ರೀತಿಯ ಚೋರ
ಜುಳುಜುಳು ನೀರಾಟ ಕಂಡು ಇಲ್ಲಿ
ಜುಳುಜುಳು ನೀರಾಟ ಕಂಡು ಇಲ್ಲಿ
ಕಾಣುವೆ ಉಲ್ಲಾಸ ಓಹೋಹೋ
ಏಕೋ ಈ ದಿನ ಏನೋ ತಲ್ಲಣ
ಏಕೋ ಈ ದಿನ ಏನೋ ತಲ್ಲಣ
ಆಸೆಯೂ ಹೆಚ್ಚಿ ಸಾವಿರ ಪಟ್ಟು  ಲೋಕದ ಎಲ್ಲಾ ಯೋಚನೆ ಬಿಟ್ಟು
ಯಾವುದೊ ಗುಟ್ಟು ತಾ ಹೇಳಿ ಕೊಟ್ಟು ಆದೇ ಬಿನ್ನಾಣ
ಏಕೋ ಈ ದಿನ ಏನೋ ತಲ್ಲಣ
ಏಕೋ ಈ ದಿನ ಏನೋ ತಲ್ಲಣ 

No comments:

Post a Comment