553. ಬ್ರಹ್ಮಗಂಟು (1985)

ಬ್ರಹ್ಮಗಂಟು ಚಿತ್ರದ ಹಾಡುಗಳು 
  1. ಪ್ರತಿದಿನ ಪ್ರತಿಕ್ಷಣ ನೀನೆ ನನ್ನ ಮನಸಲಿ 
  2. ಸೌಖ್ಯವೇ ಮೇಡಂ ಕುಶಲವೇ 
  3. ಇವಳೇ ನಮ್ಮಮ್ಮ 
  4. ಅವರೆಂದು ನನ್ನವರೂ 
ಬ್ರಹ್ಮಗಂಟು (1985) - ಪ್ರತಿದಿನ ಪ್ರತಿಕ್ಷಣ ನೀನೇ ನನ್ನ ಮನಸಲಿ
ಸಾಹಿತ್ಯ: ಆರ್.ಎನ್.ಜಯಗೋಪಾಲ್ ಸಂಗೀತ: ವಿಜಯಾನಂದ್ ಹಾಡಿದವರು: ಎಸ್.ಪಿ.ಬಿ., ಎಸ್.ಜಾನಕಿ

ಗಂಡು : ಹ್ಹಹ್ಹಹ್ಹ ... ಪ್ರತಿ ದಿನ ಪ್ರತಿ ಕ್ಷಣ ನೀನೆ ನನ್ನ ಮನಸಲಿ
ಹೆಣ್ಣು :  ಹಗಲಲಿ ಇರುಳಲಿ ನೀನೆ ನನ್ನ ಕನಸಲಿ
ಗಂಡು : ವಂದನೆ ನಿನ್ನನು ಮಾಡಿದ ಶಿಲ್ಪಿಗೆ
ಹೆಣ್ಣು : ವಂದನೆ ಅಂದವ ಹೀರಿದ ಕಣ್ಣಿಗೆ
ಗಂಡು : ಪ್ರತಿ ದಿನ ಪ್ರತಿ ಕ್ಷಣ 
ಹೆಣ್ಣು : ನೀನೆ ನನ್ನ ಮನಸಲಿ

ಗಂಡು : ಹೃದಯದ ಪುಟದಲಿ ನಿನ್ನ ಹೆಸರೇ ಬರೆದಿದೆ
           ನನ್ನ ಹೆಸರು ಸೇರಿದಾಗ ಬಾಳು ಚೆಂದ ಎಂದಿದೆ
ಹೆಣ್ಣು : ಅಂದದ ಮನೆಯದು ನಮ್ಮ ಬರುವ ಕಾದಿದೆ
          ನನ್ನ ನಿನ್ನ ಪ್ರೀತಿ ನಗುವ ಗುಡಿ ಇದೆಂದು ಹೇಳಿದೆ
ಗಂಡು : ಹೇ ನನಗಾಗಿ ನೀನು ನಿನಗಾಗಿ ನೀನು
ಹೆಣ್ಣು : ಬೆರೆತಾದ ವೇಳೆ ಬಾಳೆಲ್ಲ ಜೇನು
ಗಂಡು : ಇದುವೆ ಪ್ರೇಮ ಎಂದಿದೆ
ಹೆಣ್ಣು : ಪ್ರತಿ ದಿನ (ಅಹ್ಹಹ್ಹ) ಪ್ರತಿ ಕ್ಷಣ (ಹಹ್ಹಹ್ಹಹ್ಹ ) 
ಗಂಡು : ನೀನೆ ನನ್ನ ಮನಸಲಿ

ಗಂಡು : ಹನಿ ಹನಿ ಮುತ್ತಿನ ಮಳೆಯು ಎಲ್ಲೂ ಸುರಿದಿದೆ
            ಗಗನವೇ ನಮ್ಮನು ಪ್ರೀತಿಯಿಂದ ಹರಸಿದೆ
ಹೆಣ್ಣು : ಹರೆಯದ ಹೂವಿದು ನೆನೆದು ನಾಚಿ ನಿಂತಿದೆ
          ದೇಹದಲ್ಲಿ ಇಂದು ಸವಿಯ ಬಯಕೆ ಒಂದು ಬಂದಿದೆ
ಗಂಡು : ನೆನೆದಂತ ಸೆರಗು ಕೊಡೆಯಾಯಿತೇನು
ಹೆಣ್ಣು : ಸೆಳೆದಂತ ವಯಸು ಮರೆಯಾಗದೇನು
ಗಂಡು : ಆಸೆ ಹೊಮ್ಮಿ ಕಾಡಿದೆ
           ಪ್ರತಿ ದಿನ (ಆಆ ) ಪ್ರತಿ ಕ್ಷಣ (ಆಆ ) ನೀನೆ ನನ್ನ ಮನಸಲಿ
ಹೆಣ್ಣು : ಹಗಲಲಿ (ಹೂಂಹೂಂ)  ಇರುಳಲಿ (ಆಆಆ) ನೀನೆ ನನ್ನ ಕನಸಲಿ
ಗಂಡು :ವಂದನೆ ನಿನ್ನನು ಮಾಡಿದ ಶಿಲ್ಪಿಗೆ
ಹೆಣ್ಣು : ವಂದನೆ ಅಂದವ ಹೀರಿದ ಕಣ್ಣಿಗೆ
ಇಬ್ಬರು : ಪ್ರತಿ ದಿನ ಪ್ರತಿ ಕ್ಷಣ ನೀನೆ ನನ್ನ ಮನಸಲಿ
-------------------------------------------------------------------------------------------------------------------------

ಬ್ರಹ್ಮಗಂಟು (1985) - ಸೌಖ್ಯವೇ ಮೇಡಮ್ ಕುಶಲವೇ ಹೇಗಿದೆ
ಸಾಹಿತ್ಯ: ಆರ್.ಎನ್.ಜಯಗೋಪಾಲ್ ಸಂಗೀತ: ವಿಜಯಾನಂದ್ ಹಾಡಿದವರು: ಎಸ್.ಪಿ.ಬಿ., ಎಸ್.ಜಾನಕಿ

ಗಂಡು : ಸೌಖ್ಯವೇ ಮೇಡಮ್ ಕುಶಲವೇ ಹೇಗಿದೆ ಮೇಡಮ್ ಮನಸಿಗೆ
ಹೆಣ್ಣು : ನಿಮ್ಮ ಪುಣ್ಯ ನಾ ಸೌಖ್ಯ ಮನಸಿನಲ್ಲಿ ಸಂತೋಷ
ಗಂಡು :  ಮೈ ಡಿಯರ್, ಕಮ್ ನಿಯರ್ ನಿಯರ್
ಹೆಣ್ಣು : ಸೌಖ್ಯವೇ ಮಿಸ್ಟರ್ ಕುಶಲವೇ ಹೇಗಿದೆ ಮಿಸ್ಟರ್ ಮನಸಿಗೆ
ಗಂಡು : ನಿನ್ನ ಪುಣ್ಯ ನಾ ಸೌಖ್ಯ ಮನಸಿನಲ್ಲಿ ಸಂತೋಷ
ಹೆಣ್ಣು : ಮೈ ಡಿಯರ್, ಕಮ್ ನಿಯರ್ ನಿಯರ್

ಕೋರಸ್ : ಪನೀರಮಪ ಪಗಮದಮಪ ಪನೀರಮಪ ಪಗಮದಮಪ
               ಪದಪದಮ ರಿಗರಿಗಮ ಪಪಪಪಮ ರಿಗರಿಗನಿ
               ಪಪಪಪ ಸಸಸಸ ಗಗಗಗ ನಿರಿನಿರಿನಿರಿಸ
ಗಂಡು : ಮತ್ತೇಕೆ ನಾಡೀಲಿ ಈ ಓಟ (ಹ್ಹಾಂ ) ಕೆನ್ನೇಲಿ ಈ ರಂಗು ಚೆಲ್ಲಾಟ (ಹ್ಹಹ್ಹ )
ಹೆಣ್ಣು : ನೂರಾರಿದೆ ಹೇಗೆ ನಾ ಹೇಳಲಿ ಕಾವೇರಿದೆ ಹೇಗೆ ನಾ ತಾಳಲಿ
ಗಂಡು : ಬಂದೆ... ನಿಂದೆ..  ನನ್ನೇ ತಂದೆ.. ಆಹಾಹಹ್ಹಹ್ಹಹ್ಹ...
ಹೆಣ್ಣು : ಸೌಖ್ಯವೇ ಮಿಸ್ಟರ್ ಕುಶಲವೇ
ಗಂಡು : ಹೇಗಿದೆ ಮೇಡಮ್ ಮನಸಿಗೆ

ಹೆಣ್ಣು : ಅಬ್ಬಬ್ಬ ಈ ನಿನ್ನ ತುಂಟಾಟ (ಹುಂಹೂಂ) ನೀ ಹೇಳಿ ಕೊಟ್ಟಂತ ಈ ಪಾಠ (ಹೋ)
ಗಂಡು : ಏಕಾಂತದ ಪಾಠ ಏನೆಂದಿದೆ (ಏ ) ಈ ಲಜ್ಜೆಯು ಇನ್ನೂ ಬೇಕೆಂದಿದೆ
ಹೆಣ್ಣು : ಚಿನ್ನ ನಿನ್ನ ಜೋಡಿ ಚೆನ್ನ... ಹೇ....
ಗಂಡು : ಸೌಖ್ಯವೇ ಮೇಡಮ್ ಕುಶಲವೇ ಹೇಗಿದೆ ಮೇಡಮ್ ಮನಸಿಗೆ
ಹೆಣ್ಣು : ನಿಮ್ಮ ಪುಣ್ಯ ನಾ ಸೌಖ್ಯ ಮನಸಿನಲ್ಲಿ ಸಂತೋಷ
ಗಂಡು : ಕಮ್ ನಿಯರ್, ಮೈ ಡಿಯರ್ ಡಿಯರ್
ಹೆಣ್ಣು : ಸೌಖ್ಯವೇ
ಗಂಡು : ಮೇಡಮ್ ಕುಶಲವೇ  ಹೇಗಿದೆ
ಹೆಣ್ಣು : ಮಿಸ್ಟರ್ ಮನಸಿಗೆ
--------------------------------------------------------------------------------------------------------------------------

ಬ್ರಹ್ಮಗಂಟು (1985) - ಇವಳೇ ನಮ್ಮ ಹಳ್ಳಿ ರತಿ 
ಸಂಗೀತ: ವಿಜಯಾನಂದ್ ಸಾಹಿತ್ಯ: ಚಿ.ಉದಯಶಂಕರ ಹಾಡಿದವರು: ಎಸ್.ಜಾನಕಿ, ಕೋರಸ್

ಕೋರಸ್ : ಹೈ... ಯ್ಯಾ.. ನನನನನ ಲಲಲಲಲ ಲಲಲಲಲ  ನನನನನ ..
               ಆಂ... ಹ್ಹಾಂ .. ಹ್ಹಾಂ .. ಹೇ..ಹೇ... ಹೇ.ಹೇ . ತನತನನನ
ಹೆಣ್ಣು : ಇವಳೇ ನಮ್ಮ ಹಳ್ಳಿ ರತಿ  ಇವಳ ಅಂದಕೆ ಇಲ್ಲ ಕಣೇ ರೀತಿ ನೀತಿ
          ಇಲ್ಲಿಯೂ ಬಾಲ ಇಲ್ಲೇ ನೋಡೇ ಆ ಊರ್ವಶಿಗೂ ಇಲ್ಲ ಕಣೇ ಇಂಥಾ ಜಡೇ
          (ಹೈ ) ಇವಳ ಈ ಮೊರೆ ಚೆನ್ನಾ ಇವಳ ಮೂಗೇ ಚೆನ್ನಾ ಮೈಯ್ಯ ನೋಡು ಕಾಗೆ ಬಣ್ಣ         
          ಇವಳೇ ನಮ್ಮ ಹಳ್ಳಿ ರತಿ  ಇವಳ ಅಂದಕೆ ಇಲ್ಲ ಕಣೇ ರೀತಿ ನೀತಿ

ಕೋರಸ್ : ಹೊಯ್ ಲೂಲಲಲಲ   ಹೊಯ್ ಲೂಲಲಲಲ
ಹೆಣ್ಣು : ಕಾಗೆಯಿಂದ ಕಣ್ಣಂದ (ಕಾವ್ ಕಾವ್ ಕಾವ್)
          ಗೂಬೆಯಿಂದ ಮೂಗ ಅಂದಾ (ತಾನನನನ  ತಾನನನನ ತನನನ ತನನನ ನಾ )
          ಹಕ್ಕಿಯಿಂದ ಕೊರಳಂದಾ (ಹ್ಹಾಹೂಯ್ ಹ್ಹಾಹೂಯ್)
          ಎಮ್ಮೆಯಿಂದಾ ಮೈ ಅಂದಾ ನಿದ್ದೆಯೂ ಕಣ್ಣಲೀ
          ಬ್ರಹ್ಮನು ಮಾಡಿದಾ ಸುಂದರಾಂಗಿ ಚೆಲುವೇ ಇವಳೆನೇ
          ಇವಳೇ ನಮ್ಮ ಹಳ್ಳಿ ರತಿ  ಇವಳ ಅಂದಕೆ ಇಲ್ಲ ಕಣೇ ರೀತಿ ನೀತಿ
          ಇಲ್ಲಿಯೂ ಬಾಲ ಇಲ್ಲೇ ನೋಡೇ ಆ ಊರ್ವಶಿಗೂ ಇಲ್ಲ ಕಣೇ ಇಂಥಾ ಜಡೇ

ಕೋರಸ್ : ತಾನನನನ  ತಾನನನನ ತನನನ ತನನನ ನಾ
               ಪೀಪಿ ಪ್ಪಿಪ್ಪಿಪಿ ಪೀಪಿ ಪ್ಪಿಪ್ಪಿಪಿ ಪೀಪಿ ಪ್ಪಿಪ್ಪಿಪಿ
               ಪ್ಪಿಪ್ಪಿರೀ ಪ್ಪಿಪ್ಪಿರೀ ಪ್ಪಿಪ್ಪಿರೀ ಪ್ಪಿಪ್ಪಿರೀ ಪೀ
               ಪ್ಪಿಪ್ಪಿರೀ ಪ್ಪಿಪ್ಪಿರೀ ಪ್ಪಿಪ್ಪಿರೀ ಪ್ಪಿಪ್ಪಿರೀ ಪೀ
ಹೆಣ್ಣು : ಇವಳ ಗಂಡ ಮೇಲಿಂದ ಬಂದ ನೋಡಿ ಇವಳಂದಾ 
ಕೋರಸ್ : ತಾನನನನ  ತಾನನನನ ತನನನ ತನನನ ನಾ
ಹೆಣ್ಣು : ಕಣ್ಣು ಹಿಡಿದು ನೋವಿಂದಾ ಎದೆಯು ಒಡೆದು ಭಯದಿಂದಾ 
          ಅಯ್ಯೋಯ್ಯೋ ಎನ್ನುವಾ ಊರಿಗೇ ಓಡುವಾ ನೀನೇ ಹೇಳೇ ಇವಳ ಗತಿಯ ಏನೇ...                         
ಹೆಣ್ಣು : ಇವಳೇ ನಮ್ಮ ಹಳ್ಳಿ ರತಿ  ಇವಳ ಅಂದಕೆ ಇಲ್ಲ ಕಣೇ ರೀತಿ ನೀತಿ
          ಇಲ್ಲಿಯೂ ಬಾಲ ಇಲ್ಲೇ ನೋಡೇ ಆ ಊರ್ವಶಿಗೂ ಇಲ್ಲ ಕಣೇ ಇಂಥಾ ಜಡೇ
          (ಹೈ ) ಇವಳ ಈ ಮೊರೆ ಚೆನ್ನಾ ಇವಳ ಮೂಗೇ ಚೆನ್ನಾ ಮೈಯ್ಯ ನೋಡು ಕಾಗೆ ಬಣ್ಣ       
          ಲಾಲಲಾಲಾಲಾಲಾ (ಹೈ ಹೈ ಹೈ ) ಲಾಲಲಾಲಾಲಾಲಾ (ಹೈ ಹೈ ಹೈ ) 
          ಲಾಲಲಾಲಾಲಾಲಾ (ಹೈ ಹೈ ಹೈ ) ಲಾಲಲಾಲಾಲಾಲಾ (ಹೈ ಹೈ ಹೈ ) 
--------------------------------------------------------------------------------------------------------------------------

ಬ್ರಹ್ಮಗಂಟು (1985) - ಅವರೆಂದು ನನ್ನವರೇ
ಸಂಗೀತ: ವಿಜಯಾನಂದ್ ಸಾಹಿತ್ಯ: ಚಿ.ಉದಯಶಂಕರ ಹಾಡಿದವರು: ಎಸ್.ಜಾನಕಿ, ಮಂಜುಳಾ

ಜಾನಕೀ : ಅವರೆಂದು ನನ್ನೋರು...  ಎಂದೆಂದೂ ನನ್ನವರೂ
              ನನಗೆ ತಾಳಿ ಕಟ್ಟಲು ಎಂದೇ ಭೂಮಿಗೆ ಬಂದವರೂ
              ನನ್ನ ಜೀವಾ ನನ್ನ ದೈವಾ ಅವರೇ ನನ್ನುಸಿರು ಓಓಓ..  ಅವರೇ ನನ್ನುಸಿರು
              ಅವರೆಂದು ನನ್ನೋರು...  ಎಂದೆಂದೂ ನನ್ನವರೂ
              ನನಗೆ ತಾಳಿ ಕಟ್ಟಲು ಎಂದೇ ಭೂಮಿಗೆ ಬಂದವರೂ
              ನನ್ನ ಜೀವಾ ನನ್ನ ದೈವಾ ಅವರೇ ನನ್ನುಸಿರು ಓಓಓ..  ಅವರೇ ನನ್ನುಸಿರು

ಜಾನಕೀ : ಆ ನನ್ನ ಸ್ವಾಮಿಯ ನಾ ಹೇಗೆ ಮರೆಯಲೀ ನೀ ಹೇಳು ಹೇಗೆ ಬಾಳಲೀ 
              ಆ ನನ್ನ ಸ್ವಾಮಿಯ ನಾ ಹೇಗೆ ಮರೆಯಲೀ ನೀ ಹೇಳು ಹೇಗೆ ಬಾಳಲೀ 
              ಈಗವರೂ ಎಲ್ಲಿರಲೀ ಯಾರೊಡನೇ ಆವರಿರಲೀ ಆನಂದದಿಂದ ಬಾಳಲೀ 
ಮಂಜುಳಾ : ಅವರೆಂದು ನಿನ್ನವರೂ ..  ಎಂದೆಂದೂ ನಿನ್ನವರೂ
              ನಿನಗೆ ತಾಳಿ ಕಟ್ಟಲು ಎಂದೇ ಭೂಮಿಗೆ ಬಂದವರೂ
              ನಿನ್ನ ಜೀವಾ ನಿನ್ನ ದೈವಾ ಅವರೇ ನಿನ್ನುಸಿರು ಓಓಓ..  ಅವರೇ ನಿನ್ನುಸಿರು 

ಮಂಜುಳಾ : ನಿನ್ನಂಥ ಹೆಣ್ಣಿನ ಕಣ್ಣಲ್ಲಿ ಕಂಬನಿ ತಂದತಾನನ್ನು ಕಂಡರೇ 
                  ನಿನ್ನಂಥ ಹೆಣ್ಣಿನ ಕಣ್ಣಲ್ಲಿ ಕಂಬನಿ ತಂದತಾನನ್ನು ಕಂಡರೇ 
                  ಕೈ ಹಿಡಿದು ಎಳೆತರುವೇ ನಿನ್ನೊಡನೇ ನಿಲ್ಲಿಸುವೇ 
                  ಕಣ್ಣೀರ ನಾನೂ ಒರೆಸುವೇ.. 
ಜಾನಕೀ : ಅವರೆಂದು ನನ್ನೋರು...  ಎಂದೆಂದೂ ನನ್ನವರೂ
              ನನಗೆ ತಾಳಿ ಕಟ್ಟಲು ಎಂದೇ ಭೂಮಿಗೆ ಬಂದವರೂ
              ನನ್ನ ಜೀವಾ ನನ್ನ ದೈವಾ ಅವರೇ ನನ್ನುಸಿರು ಓಓಓ..  ಅವರೇ ನನ್ನುಸಿರು
ಮಂಜುಳಾ : ಅವರೆಂದು ನಿನ್ನವರೂ ..  ಎಂದೆಂದೂ ನಿನ್ನವರೂ
              ನಿನಗೆ ತಾಳಿ ಕಟ್ಟಲು ಎಂದೇ ಭೂಮಿಗೆ ಬಂದವರೂ
              ನಿನ್ನ ಜೀವಾ ನಿನ್ನ ದೈವಾ ಅವರೇ ನಿನ್ನುಸಿರು ಓಓಓ..  ಅವರೇ ನಿನ್ನುಸಿರು 
--------------------------------------------------------------------------------------------------------------------------

No comments:

Post a Comment