556. ಜಾಣ (1994)

ಜಾಣ ಚಿತ್ರದ ಹಾಡುಗಳು 
  1. ಪ್ರೇಮಲೋಕದ ಪಾರಿಜಾತವೆ ಯಾಕೆ ನೀನು ಎದೆಯ ತುಂಬಿದೆ
  2. ಪ್ರೇಮಾನೇ ನನ್ನಾ ಪ್ರಾಣ ಓ ಲೈಲಾ ಓ.. ಲೈಲಾ 
  3. ಒನ್ ಬೈಟು ಮುತ್ತನು ತಿನ್ನುವ ಬಾರಾ 
  4. ಢಮ್ ಢಮ್ ಅಂತಿದೆ ಎದೆಯ ಢಂಗುರ 
  5. ಏ ... ಹುಡುಗಿ ಯಾಕೇ ನನ್ನ ಮೆಚ್ಚಿಕೊಂಡೇ 
ಜಾಣ (1994) - ಪ್ರೇಮಲೋಕದ ಪಾರಿಜಾತವೆ
ಸಾಹಿತ್ಯ : ಹಂಸಲೇಖ ಸಂಗೀತ : ಹಂಸಲೇಖ ಗಾಯನ : ಎಸ್. ಪಿ. ಬಾಲಸುಬ್ರಹ್ಮಣ್ಯಂ

ಪ್ರೇಮಲೋಕದ ಪಾರಿಜಾತವೆ ಯಾಕೆ ನೀನು ಎದೆಯ ತುಂಬಿದೆ
ನೀನು ಒಳಗಿರಲು ಮಲಗೊ ಮಾತಿಲ್ಲ ನೀನು ಒಳಗಿರಲು ಉಸಿರೆ ಬೇಕಿಲ್ಲ
ನೀನು ಕನ್ನಡದ ಚಂದನದ ಕಂಪು ಕಸ್ತೂರಿ
ಪ್ರೇಮಲೋಕದ ಪಾರಿಜಾತವೆ ಯಾಕೆ ನೀನು ಎದೆಯ ತುಂಬಿದೆ
ನೀನು ಒಳಗಿರಲು ಮಲಗೊ ಮಾತಿಲ್ಲ ನೀನು ಒಳಗಿರಲು ಉಸಿರೆ ಬೇಕಿಲ್ಲ
ನೀನು ಕನ್ನಡದ ಚಂದನದ ಕಂಪು ಕಸ್ತೂರಿ

ಚೆಲುವಿನ ಬಲೆಯಲಿ ಒಲವಿನ ಮೀನು ನಾ ಸೆರಗಿನ ಗಿರಿಯಲಿ ವಿಲವಿಲ ಹಾಡು ನಾ
ಧರೆಗೆ ಇಳಿದ ಅಪ್ಸರೆ ನಗುವೆ ನಿನಗೆ ವರವೇ... ಸರಳ ವಿರಳ ಸುಂದರಿ ನೀನೆ ಸ್ವರ್ಗ ಎನುವೇ....
ಪ್ರೇಮಲೋಕದ ಪಾರಿಜಾತವೆ ಯಾಕೆ ನೀನು ಎದೆಯ ತುಂಬಿದೆ
ನೀನು ಒಳಗಿರಲು ಮಲಗೊ ಮಾತಿಲ್ಲ ನೀನು ಒಳಗಿರಲು ಉಸಿರೆ ಬೇಕಿಲ್ಲ
ನೀನು ಕನ್ನಡದ ಚಂದನದ ಕಂಪು ಕಸ್ತೂರಿ

ಕನ್ನಡ ಕವಿಗಳ ಕವನದ ಕವಿಗಳ....  ಜೇನಿನ ಪದಗಳ ಹೂಮಳೆ ಸುರಿಸುವೇ...
ಕಮಲ ವಿಮಲ ಮಲ್ಲಿಗೆ ಕಣ್ಣು ಹೃದಯ ಮನಸು...
ರಾತ್ರಿ ರಾಣಿ ನೈದಿಲೆ ನಿನ್ನ ಮೈಯೆ ಸೊಗಸು
ಪ್ರೇಮಲೋಕದ ಪಾರಿಜಾತವೆ ಯಾಕೆ ನೀನು ಎದೆಯ ತುಂಬಿದೆ
ನೀನು ಒಳಗಿರಲು ಮಲಗೊ ಮಾತಿಲ್ಲ ನೀನು ಒಳಗಿರಲು ಉಸಿರೆ ಬೇಕಿಲ್ಲ
ನೀನು ಕನ್ನಡದ ಚಂದನದ ಕಂಪು ಕಸ್ತೂರಿ
--------------------------------------------------------------------------------------------------------------------------

ಜಾಣ (1994) - ಪ್ರೇಮಾನೇ ನನ್ನಾ ಪ್ರಾಣಾ ಓ .. ಲೈಲಾ.. ಓ ಲೈಲಾ.. ಓ... 
ಸಾಹಿತ್ಯ : ಹಂಸಲೇಖ ಸಂಗೀತ : ಹಂಸಲೇಖ ಗಾಯನ : ಎಸ್. ಪಿ. ಬಾಲಸುಬ್ರಹ್ಮಣ್ಯಂ, ಚಿತ್ರಾ 

ಗಂಡು : ಹೇಹೇ ... ಹೇಹೇಹೇ ... ಹೇಹೇ ... ಹೇಹೇಹೇ ...
           ಪ್ರೇಮಾನೇ ನನ್ನಾ ಪ್ರಾಣ ಓ.. ಲೈಲಾ ಓ.. ಲೈಲಾ ಓ...
           ಪ್ರೀತೀಲಿ ನಾನು ಜಾಣ ಓ.. ಲೈಲಾ ಓ.. ಲೈಲಾ ಓ...ಲೈಲಾ.. ಹೊಯ್
           ಲೋಕಾನೇ ಪ್ರೀತಿಯಲ್ಲಿದೆ ಪ್ರೀತಿಗೇ ರೂಪವೆಲ್ಲಿದೇ
           ಆ ರೂಪ ನಿನ್ನದಾಗಿದೇ... ಲೈಲಾ.. ಲೈಲಾ...ಲೈಲಾ.. ಲಾಲ .. ಲಲ .. ಲಾಲ .. ಲಲಲಾ
           ಪ್ರೇಮಾನೇ ನನ್ನಾ ಪ್ರಾಣ ಓ.. ಲೈಲಾ ಓ.. ಲೈಲಾ ಓ...
           ಪ್ರೀತೀಲಿ ನಾನು ಜಾಣ ಓ.. ಲೈಲಾ ಓ.. ಲೈಲಾ ಓ...ಲೈಲಾ.. ಹೊಯ್

ಇಬ್ಬರು : ಹೇಹೇ ... ಹೇಹೇಹೇ ... ಹೇಹೇ ... ಹೇಹೇಹೇ ...  ಒಹೋ..  ಒಹೋ     
ಗಂಡು : ಪ್ರೇಮಾನ ಖೈದು ಮಾಡೋ ಸೆರೆಮನೆ ಇಲ್ಲಿ ಕಟ್ಟಲು ಸರಳಿಲ್ಲ ಮರಳಿಲ್ಲ
           ಜಗವೆಲ್ಲ ಒಂದುಗೂಡಿ ಬಂದರೂ ಅದು ಮುಗಿಯದೂ
ಇಬ್ಬರು : ಹೃದಯಾನೇ ಬಂಧೀಖಾನೇ ಓಓಓ ... ಸೆರೆಯಾದದು ನಾವೂ ತಾನೇ ಓಓಓ ...
ಗಂಡು : ಸೆರೆಯಲ್ಲೂ  ಮಣಿರೂಪ ಈ ನಿನ್ನ ರತಿರೂಪ ಈ ನಿರ್ಮಲ ಕಣ್ಣಲಿ ಪ್ರೇಮವಿದೇ ..
            ಈ ಪ್ರೇಮವೇ ನನ್ನನೂ ಹಾಡಿಸಿದೇ ..
           ಪ್ರೇಮಾನೇ ನನ್ನಾ ಪ್ರಾಣ ಓ.. ಲೈಲಾ ಓ.. ಲೈಲಾ ಓ...
           ಪ್ರೀತೀಲಿ ನಾನು ಜಾಣ ಓ.. ಲೈಲಾ ಓ.. ಲೈಲಾ ಓ...ಲೈಲಾ.. ಹೊಯ್

ಹೆಣ್ಣು : ಲಲಲಲಾ .. ಹೇ..ಹೇ.. ಏಏಏಏ...  ಹೇ.. ಏಏಏ
ಗಂಡು : ಪ್ರೀತಿಲಿ ಬಿದ್ದಮೇಲೆ ಥಂಡಿಯೇ ಮೈ ನಡುಕವೇ ಅದುರೋದೆ ಬೆದರೋದೇ
ಹೆಣ್ಣು : ಮುತ್ತೆಲ್ಲ ತಿಂದಮೇಲೂ ಬಯಕೆಯ ಇನ್ನೂ ಹಸಿವೆಯೇ
ಗಂಡು : ಶೃಂಗಾರ ಇದರ ರಾಗ ಓಓಓ ...
ಹೆಣ್ಣು : ಪ್ರಣಯಾನೇ ಇದರ ಲೋಕ ಆಆಆ....
ಗಂಡು : ಮೈ ಮೇಲೆ ಅರಿವಿರದೂ
ಹೆಣ್ಣು : ಅವರಿವರ ಭಯವಿರದೂ
ಗಂಡು : ಈ ನಿರ್ಮಲ ಪ್ರೇಮವೂ ಜೊತೆ ಇರಲೂ
ಹೆಣ್ಣು : ಪ್ರೇಮದ ಈ ಸುಮಧುರ ಸುಖವಿರಲೂ
ಗಂಡು :  ಪ್ರೇಮಾನೇ ನನ್ನಾ ಪ್ರಾಣ ಓ.. ಲೈಲಾ ಓ.. ಲೈಲಾ ಓ...
           ಪ್ರೀತೀಲಿ ನಾನು ಜಾಣ ಓ.. ಲೈಲಾ ಓ.. ಲೈಲಾ ಓ...ಲೈಲಾ.. ಹೊಯ್
ಹೆಣ್ಣು :  ಲೋಕಾನೇ ಪ್ರೀತಿಯಲ್ಲಿದೆ ಪ್ರೀತಿಗೇ ರೂಪವೆಲ್ಲಿದೇ
           ಆ ರೂಪ ನಿನ್ನದಾಗಿದೇ... ಮಜನು ಮಜನು ಮಜನು.. ಲಾಲ .. ಲಲ .. ಲಾಲ .. ಲಲಲಾ
ಗಂಡು : ಪ್ರೇಮಾನೇ ನನ್ನಾ ಪ್ರಾಣ ಓ.. ಲೈಲಾ ಓ.. ಲೈಲಾ ಓ...
           ಪ್ರೀತೀಲಿ ನಾನು ಜಾಣ ಓ.. ಲೈಲಾ ಓ.. ಲೈಲಾ ಓ...ಲೈಲಾ.. ಹೊಯ್
--------------------------------------------------------------------------------------------------------------------------

ಜಾಣ (1994) - ಒನ್ ಬೈ ಟೂ ಮುತ್ತನು ತಿನ್ನುವ ಬಾರಾ 
ಸಾಹಿತ್ಯ : ಹಂಸಲೇಖ ಸಂಗೀತ : ಹಂಸಲೇಖ ಗಾಯನ : ಎಸ್. ಪಿ. ಬಾಲಸುಬ್ರಹ್ಮಣ್ಯಂ, ಲತಾ ಹಂಸಲೇಖ

ಗಂಡು : ಲವ್ ಡವ್ ಲವ್ ಡವ್ ...
ಹೆಣ್ಣು : ಒನ್ ಬೈ ಟೂ ಮುತ್ತನು ತಿನ್ನುವ ಬಾರಾ
ಗಂಡು : ಈ ನೈಟು ಮುತ್ತಿಗೆ ನಾನು ದೂರಾ
ಹೆಣ್ಣು : ಬಾ ತಿನ್ನು ಕಂದ                ಗಂಡು : ನಂಗೇ ಹಸಿವಿಲ್ಲಾ
ಹೆಣ್ಣು : ಬಾಯಿ ತೇಗಿ ಕಂದ            ಗಂಡು : ನಂಗೇ ಬೇಕಿಲ್ಲಾ..
ಹೆಣ್ಣು : ನಾ ಮುತ್ತಿಟ್ಟರೇ ಮುತ್ತಿಲ್ಲ ಬಾರಾ .. ವೀರಾ ..
ಹೆಣ್ಣು : ಒನ್ ಬೈ ಟೂ ಮುತ್ತನು ತಿನ್ನುವ ಬಾರಾ
ಗಂಡು : ಈ ನೈಟು ಮುತ್ತಿಗೆ ನಾನು ದೂರಾ

ಹೆಣ್ಣು : ಘಮಘಮ ನಗುವಿನ ತುಪ್ಪ ಈ ಮದ್ದು ತುತ್ತಿಗೆ ಸವರಿ
          ದಂತದಂಥ ತೊಳಲಿ ಅಪ್ಪಿ ತಿನಿಸುವೇ ಬಾರಾ ಚೆಲುವಿನಾ ಚೋರಾ ಹೇ.. ಜೋಕುಮಾರಾ...
ಗಂಡು : ಹಗಲು ನಾನು ಇರುಳೂ ನೀನು
            ಹಗಲು ನಾನು ಇರುಳೂ ನೀನು ನಾ ಮುತ್ತಿಟ್ಟರೇ ಬೆಳಗಾಗ್ತು ಹೋಗೆ ದೂರಾ ...
ಹೆಣ್ಣು : ಒನ್ ಬೈ ಟೂ ಮುತ್ತನು ತಿನ್ನುವ ಬಾರಾ
ಗಂಡು : ಈ ನೈಟು ಮುತ್ತಿಗೆ ನಾನು ದೂರಾ

ಹೆಣ್ಣು : ಹರೆಯದ ಅರಗಿನ ಮನೆಗೆ ಓ ರಸಿಕ ನೀ ದಯಮಾಡು
          ತನುವ ಮಸೆದು ಬೆಂಕಿಯ ಹಚ್ಚಿ ಆಗ ನೀ ನೋಡು ತನುವ ಎದೆಗೂಡು ಉರಿಯುವಾ ಹಾಡು
ಗಂಡು : ವರುಣ ನಾನು ಜ್ವಾಲೆ ನೀನು ಹೇಯ್... ನಾನು ಸಿಕ್ರೇ ಉರಿಯಲ್ಲ ನೀನು ಬಾಲೇ..
ಹೆಣ್ಣು : ಒನ್ ಬೈ ಟೂ ಮುತ್ತನು ತಿನ್ನುವ ಬಾರಾ
ಗಂಡು : ಈ ನೈಟು ಮುತ್ತಿಗೆ ನಾನು ದೂರಾ
ಹೆಣ್ಣು : ಬಾ ತಿನ್ನು ಕಂದ                ಗಂಡು : ನಂಗೇ ಹಸಿವಿಲ್ಲಾ
ಹೆಣ್ಣು : ಬಾಯಿ ತೇಗಿ ಕಂದ            ಗಂಡು : ನಂಗೇ ಬೇಕಿಲ್ಲಾ..
ಹೆಣ್ಣು : ನಾ ಮುತ್ತಿಟ್ಟರೇ ಮುತ್ತಿಲ್ಲ ಬಾರಾ .. ವೀರಾ ..
ಹೆಣ್ಣು : ಒನ್ ಬೈ ಟೂ ಮುತ್ತನು ತಿನ್ನುವ ಬಾರಾ
ಗಂಡು : ಈ ನೈಟು ಮುತ್ತಿಗೆ ನಾನು ದೂರಾ
--------------------------------------------------------------------------------------------------------------------------

ಜಾಣ (1994) - ಢಮ್ ಢಮ್ ಅಂತಿದೆ ಎದೆಯ ಡಂಗುರ 
ಸಾಹಿತ್ಯ : ಹಂಸಲೇಖ ಸಂಗೀತ : ಹಂಸಲೇಖ ಗಾಯನ : ಎಸ್. ಪಿ. ಬಾಲಸುಬ್ರಹ್ಮಣ್ಯಂ, ಚಂದ್ರಿಕಾ ಗುರುರಾಜ 

ಹೆಣ್ಣು : ಒಹೋ... ಲಲಲಾ... ಲಾಲ .. ಓಓಓ ... ಓಓಓ ...ಆಹಾ... ಆಹಾಹಾ...
          ಢಮ್ ಢಮ್ ಅಂತಿದೆ ಎದೆಯ ಢಂಗುರ ತನನಂ ಅಂತಿದೆ ತನುವಿನ  ತಂಬೂರ
          ಸಂಚಾರ ಸಂಚಾರ                           ಗಂಡು : ಒಹೋ..ಓ..
ಹೆಣ್ಣು : ಈ ಮಿಂಚಿನ ಸಂಚಾರ                       ಗಂಡು : ಒಹೋ..ಓ..
ಹೆಣ್ಣು : ಹಾದಿಲೂ ಬೀದೀಲೂ ಪ್ರೇಮದ ಸಂಸಾರ
          ಢಮ್ ಢಮ್ ಅಂತಿದೆ ಎದೆಯ ಢಂಗುರ ತನನಂ ಅಂತಿದೆ ತನುವಿನ  ತಂಬೂರ
          ಸಂಚಾರ ಸಂಚಾರ                           ಗಂಡು : ಒಹೋ..ಓ..
ಹೆಣ್ಣು : ಈ ಮಿಂಚಿನ ಸಂಚಾರ                       ಗಂಡು : ಒಹೋ..ಓ..
ಹೆಣ್ಣು : ಹಾದಿಲೂ ಬೀದೀಲೂ ಪ್ರೇಮದ ಸಂಸಾರ

ಗಂಡು : ಓಓಓ ... ಆಹಾ..ಆಹಾ... ಓ...              ಹೆಣ್ಣು : ಹೇ.... ಹೇ... ಹೇ... ಹೇ...
ಗಂಡು : ಸ್ವರ್ಗ ಅಲ್ಲಿದೇ ವಿಳಾಸ ಇಲ್ಲಿದೇ ಪ್ರೀತಿ ತುಂಬಿದ ವಿಮಾನ ಮುಂದಿದೆ
            ಎದೆಯ ಭೋಗೀಲಿ ಆಸೀನ ಕಾದಿದೇ ಮುತ್ತು ಕೊಟ್ಟರೇ ಪ್ರಯಾಣ ಎಂದಿದೇ
ಹೆಣ್ಣು : ನಾಕು ಗೋಡೆಯ ನಡುವಿನಿಂದಲಿ ಹೊರಗೆ ತಂದೆನಮ್ಮ
          ಆಸೆ ಹಕ್ಕಿಯ ರೆಕ್ಕೆಯಾಸೆ ನೀ ಸ್ವರ್ಗಯಾಕೋ ಇನ್ನ
          ತಂಪು ಗಾಳಿಯ ಬೆಣ್ಣೆ ನೀರಿನ ತೇಲುತಿರುವ ಚಿನ್ನ ಜೀವ ಹೋಗಲಿ ಏನೇ ಆಗಲಿ ನೀನೇ ಎಲ್ಲ ಇನ್ನ
          ಓ.. ಜಾಣ... ಓ.. ಜಾಣ... ನೀನೇ ನನ್ನ ಪ್ರಾಣ
          ಢಮ್ ಢಮ್ ಅಂತಿದೆ ಎದೆಯ ಢಂಗುರ ತನನಂ ಅಂತಿದೆ ತನುವಿನ  ತಂಬೂರ
          ಸಂಚಾರ ಸಂಚಾರ                           ಗಂಡು : ಒಹೋ..ಓ..
ಹೆಣ್ಣು : ಈ ಮಿಂಚಿನ ಸಂಚಾರ                       ಗಂಡು : ಒಹೋ..ಓ..
ಹೆಣ್ಣು : ಹಾದಿಲೂ ಬೀದೀಲೂ ಪ್ರೇಮದ ಸಂಸಾರ

ಗಂಡು : ಓಹೋಹೋ .. ಓಓ ... ರುರುರೂ .... ರೂರು .. ರಿರಿರಿ ... ರೀರಿ .. ರೀರಿ .. ರಾರಾ.. ರಾರಾ..
ಹೆಣ್ಣು :  ತುಂಬು ಯೌವ್ವನದಾ ಅಂಬಾರಿ ಏರಿದೆ ಜಾರ ಬಂಡಿಗೆ ಹಾಡುತ್ತ ಜಾರಿದೇ
           ನಂಬು ನನ್ನನ್ನ ಕಾಮನ ಕನಸಿದು ಕುಂಟೆಬಿಲ್ಲೆಲ್ಲಿ ಕುಣಿಯುತ್ತ ಕಾಡಿದೆ
ಗಂಡು : ಜಾಣನಾದರೂ ನಿನ್ನ ಪ್ರೀತಿಸಿ ದಾರಿ ತಪ್ಪಿಹೋದೆ
           ಅಂದಗಾತಿಯ ಅಂದ ಮರೆಸುವ ಪ್ರಾಣಪದಕವಾದೆ
           ಕೋಟಿ ಹೆಣ್ಗಳ ಪ್ರೇಮಕಂಗಳ ಈಟಿ ದಾಟಿ ಬಂದೆ
           ಚಂದಗಾತಿಯ ಚಂದನೋಟಕೆ ಚಂದಮಾಮನಾದೆ ಓ.. ಜಾಣೆ... ಓ.. ಜಾಣೆ.. ನೀನೇ ನನ್ನ ಪ್ರಾಣ
          ಢಮ್ ಢಮ್ ಅಂತಿದೆ ಎದೆಯ ಢಂಗುರ
ಹೆಣ್ಣು : ತನನಂ ಅಂತಿದೆ ತನುವಿನ  ತಂಬೂರ
          ಸಂಚಾರ ಸಂಚಾರ                           ಗಂಡು : ಒಹೋ..ಓ..
ಹೆಣ್ಣು : ಈ ಮಿಂಚಿನ ಸಂಚಾರ                       ಗಂಡು : ಒಹೋ..ಓ..
ಇಬರು  : ಹಾದಿಲೂ ಬೀದೀಲೂ ಪ್ರೇಮದ ಸಂಸಾರ
--------------------------------------------------------------------------------------------------------------------------

ಜಾಣ (1994) - ಏ... ಹುಡುಗಿ ಯಾಕೇ ನನ್ನ ಮೆಚ್ಚಿಕೊಂಡೆ 
ಸಾಹಿತ್ಯ : ಹಂಸಲೇಖ ಸಂಗೀತ : ಹಂಸಲೇಖ ಗಾಯನ : ಎಸ್. ಪಿ. ಬಾಲಸುಬ್ರಹ್ಮಣ್ಯಂ, ಚಿತ್ರಾ 

ಗಂಡು : ಏ .. ಹುಡುಗಿ ಯಾಕೇ ನನ್ನ ಮೆಚ್ಚಿಕೊಂಡೇ
ಹೆಣ್ಣು : ಓ.. ಹುಡುಗ ಯಾಕೋ ಕಾಣೆ ಹಚ್ಚಿಕೊಂಡೇ
ಗಂಡು : ಏನಾಯ್ತೆ ನಿಂಗೇ ಯಾಕದೇ ಹಿಂಗೇ
ಹೆಣ್ಣು : ಪ್ರೀತಿನೇ ಹಂಗೇ ಯಾರಾದ್ರೂ ಹಿಂಗೇ
ಗಂಡು : ಏ .. ಹುಡುಗಿ ಯಾಕೇ ನನ್ನ ಮೆಚ್ಚಿಕೊಂಡೇ
ಹೆಣ್ಣು : ಓ.. ಹುಡುಗ ಯಾಕೋ ಕಾಣೆ ಹಚ್ಚಿಕೊಂಡೇ

ಹೆಣ್ಣು : ಪ್ರಾಣ ಬಿಡು ಅಂದ್ರೆ ಬಿಡೋಕಿಲ್ಲ ತೊಂದ್ರೆ ನಿನ್ನ ಮುಖ ಆಡೋ ಸುಖ ಬೇಡ ಅಂದ್ರೆ ತೊಂದ್ರೆ
ಗಂಡು : ಭೂಮಿ ಮೇಲೆ ಹೆಣ್ಣು ಕಣ್ಣು ಕೊಡೋ ಹಣ್ಣು ಪ್ರೀತಿ ಅಂದ್ರೇ ಕರಗಿ ಕರಗಿ ನೀರಾಗುವಾ ಕಣ್ಣು
ಹೆಣ್ಣು : ಆ ಮಾತು ಬಿಡೂ ಕೈ ಸಾಕ್ಷಿ ಇಡು ಒಂಟಿ ಮಾಡೆನೆಂದು ಕೈ ಮಾತು ಕೊಡು
ಗಂಡು : ಏ .. ಹುಡುಗಿ ಯಾಕೇ ನನ್ನ ಮೆಚ್ಚಿಕೊಂಡೇ
ಹೆಣ್ಣು : ಓ.. ಹುಡುಗ ಯಾಕೋ ಕಾಣೆ ಹಚ್ಚಿಕೊಂಡೇ

ಗಂಡು : ಮುದ್ದಾಡ್ತೀನಿ ಅಂದ್ರೆ ಕೊಡ್ತಾಳಪ್ಪಾ ತೊಂದ್ರೆ ಕಷ್ಟ ಕಷ್ಟ ಪ್ರೀತಿ ಮಟ್ಟ ಸಂಕೋಚನ ತಂದ್ರೆ
ಹೆಣ್ಣು : ಕಣ್ಣಿಟ್ಟರೇ ಕತ್ಲು ಬೆವರುತ್ತೆ ಮೈ ಸುತ್ತಲೂ ಬಾ ಇತ್ತರೆ ನಿನ್ನಾಂಗೂ ತಾಯಾಗುವ ದಿಗುಲು
ಗಂಡು : ಬಾ ಬಾರೆ ಇತ್ತ ತಾಯಾಗು ಅತ್ತ ತಾಳಿನ ತತ್ತ ತಿನ್ನಿಸ್ತೀನಿ ಮುತ್ತ 
ಹೆಣ್ಣು : ಓ.. ಹುಡುಗ ಯಾಕೋ ಕಾಣೆ ಹಚ್ಚಿಕೊಂಡೇ
ಗಂಡು : ಏ .. ಹುಡುಗಿ ಯಾಕೇ ನನ್ನ ಮೆಚ್ಚಿಕೊಂಡೇ
ಹೆಣ್ಣು : ಏನಾಯ್ತೆ ನಿಂಗೇ ಯಾಕದೇ ಹಿಂಗೇ
ಗಂಡು : ಪ್ರೀತಿನೇ ಹಂಗೇ ಯಾರಾದ್ರೂ ಹಿಂಗೇ
ಹೆಣ್ಣು : ಓ.. ಹುಡುಗ ಯಾಕೋ ಕಾಣೆ ಹಚ್ಚಿಕೊಂಡೇ
ಗಂಡು : ಏ .. ಹುಡುಗಿ ಯಾಕೇ ನನ್ನ ಮೆಚ್ಚಿಕೊಂಡೇ
--------------------------------------------------------------------------------------------------------------------------

No comments:

Post a Comment