558. ಭಕ್ತ ಸಿರಿಯಾಳ (1980)


ಭಕ್ತ ಸಿರಿಯಾಳ ಚಿತ್ರದ ಹಾಡುಗಳು
  1. ಪ್ರೀತಿ ಪ್ರೇಮಗಳೇ ಬದುಕಿಗೇ 
  2. ಶಿವ ಶಿವ ಎಂದರೇ ಭಯವಿಲ್ಲ 
  3. ಮದುವೇ ಅಂದರೇನೂ ನೀ ಹೇಳೋ ಬೇಗನೇ 
  4. ಏಕೋ ಈ ಕೋಪ ಶಂಕರ 
  5. ಅತಿಥಿ ಸೇವೆಯೇ ಪಾವನವೆಂದೂ 
ಭಕ್ತ ಸಿರಿಯಾಳ (1980)
ಸಾಹಿತ್ಯ: ಹುಣಸೂರು ಕೃಷ್ಣಮೂರ್ತಿ ಸಂಗೀತ: ಟಿ.ಜಿ.ಲಿಂಗಪ್ಪ ಹಾಡಿದವರು: ಕೆ.ಜೆ.ಯೇಸುದಾಸ್, ಎಸ್.ಜಾನಕಿ

ಹೆಣ್ಣು : ಪ್ರೀತಿ ಪ್ರೇಮಗಳೇ ಬದುಕಿಗೆ ಸಿರಿತನ
          ಹೊಂದಿ ಬಾಳದ ಬದುಕೇ ಬಡತನ
ಇಬ್ಬರು : ಪ್ರೀತಿ ಪ್ರೇಮಗಳೇ ಬದುಕಿಗೆ ಸಿರಿತನ 

ಗಂಡು : ಒಬ್ಬರನೊಬ್ಬರು ಅರಿತು ಬಾಳಲು
          ಹಬ್ಬಿ ಹರಿವುದು ಸುಖದಾ ಹೊನಲು (ಆಆಆ)
          ಒಬ್ಬರನೊಬ್ಬರು ಅರಿತು ಬಾಳಲು
         ಹಬ್ಬಿ ಹರಿವುದು ಸುಖದಾ ಹೊನಲು
ಹೆಣ್ಣು : ಪತಿಯ ಸೇವೆಯೇ ಸತಿಗೆ ಸರ್ವಸ್ವ
         ಪತಿಯ ಸೇವೆಯೇ ಸತಿಗೆ ಸರ್ವಸ್ವ
ಗಂಡು : ಸತಿಯ ಸಹಕಾರವೆ ಪತಿಗೆ ಸರ್ವಸ್ವ (ಆಆಆ)
           ಪ್ರೀತಿ ಪ್ರೇಮಗಳೇ ಬದುಕಿಗೆ ಸಿರಿತನ

ಹೆಣ್ಣು : ಉಪವಾಸ ವನವಾಸ ದೈವಾಧೀನ 
         ಅದಕಾಗಿ ಕೊರಗುವನು ಜಗದೊಳು ಬಲು ಹೀನ  (ಆಆಆ)
        ಉಪವಾಸ ವನವಾಸ ದೈವಾಧೀನ
        ಅದಕಾಗಿ ಕೊರಗುವನು ಜಗದೊಳು ಬಲು ಹೀನ
ಗಂಡು: ಇಟ್ಹಾಗೆ ಇರಬೇಕು ಕೊಟ್ಟಿದ್ದು ತಿನಬೇಕು
           ಇಟ್ಹಾಗೆ ಇರಬೇಕು ಕೊಟ್ಟಿದ್ದು ತಿನಬೇಕು
          ಪರಶಿವನು ಕರೆದಾಗ ನಡೀಬೇಕು
ಇಬ್ಬರು : ಆಆಆ... ಪ್ರೀತಿ ಪ್ರೇಮಗಳೇ ಬದುಕಿಗೆ ಸಿರಿತನ
             ಹೊಂದಿ ಬಾಳದ ಬದುಕೇ ಬಡತನ
             ಪ್ರೀತಿ ಪ್ರೇಮಗಳೇ ಬದುಕಿಗೆ ಸಿರಿತನ
--------------------------------------------------------------------------------------------------------------------------

ಭಕ್ತ ಸಿರಿಯಾಳ (1980).....ಶಿವಶಿವ ಎಂದರೆ ಭಯವಿಲ್ಲ

ಸಾಹಿತ್ಯ : ಹುಣಸೂರು ಕೃಷ್ಣಮೂರ್ತಿ  ಸಂಗೀತ : ಟಿ.ಜಿ.ಲಿಂಗಪ್ಪ  ಗಾಯನ : ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಮ್


ಶಿವಶಿವ ಎಂದರೆ ಭಯವಿಲ್ಲ ...
ಶಿವಶಿವ ಎಂದರೆ ಭಯವಿಲ್ಲ
ನಾಮಕ್ಕೆ ಸಾಟಿ ಬೇರಿಲ್ಲ ಶಿವನಾಮಕ್ಕೆ ಸಾಟಿ ಬೇರಿಲ್ಲ
ಶಿವಭಕ್ತನಿಗೇ ನರಕಾಯಿಲ್ಲ...
ಶಿವಭಕ್ತನಿಗೇ ನರಕಾಯಿಲ್ಲ  ಜನುಮಜನುಮಗಳ ಕಾಟವು ಇಲ್ಲಾ ...
ಶಿವಶಿವ ಎಂದರೆ ಭಯವಿಲ್ಲ
ನಾಮಕ್ಕೆ ಸಾಟಿ ಬೇರಿಲ್ಲ  ಶಿವನಾಮಕ್ಕೆ ಸಾಟಿ ಬೇರಿಲ್ಲ

ಅನ್ನದಾನವ ತೊರೆಯದಿರು ನಾನು ನನ್ನದು ಎನ್ನದಿರು
ಅನ್ನದಾನವ ತೊರೆಯದಿರು ನಾನು ನನ್ನದು ಎನ್ನದಿರು
ಉನ್ನತಿ ಸಾಧಿಸೇ ಹಗಲಿರುಳು...
ಉನ್ನತಿ ಸಾಧಿಸೇ ಹಗಲಿರುಳು ದೀನಾನಾಥನ ಮರೆಯದಿರು
ಶಿವಶಿವ ಎಂದರೆ ಭಯವಿಲ್ಲ
ನಾಮಕ್ಕೆ ಸಾಟಿ ಬೇರಿಲ್ಲ ಶಿವನಾಮಕ್ಕೆ ಸಾಟಿ ಬೇರಿಲ್ಲ  

ಭೋಗಭಾಗ್ಯದ ಬಲೆಯೊಳಗೆ ಬಳಲಿ ಬಾಡದೇ ಇಳೆಯೊಳಗೆ
ಭೋಗಭಾಗ್ಯದ ಬಲೆಯೊಳಗೆ ಬಳಲಿ ಬಾಡದೇ ಇಳೆಯೊಳಗೆ
ಕಾಯಕ ಮಾಡುತ ಎಂದೆಂದೂ....
ಕಾಯಕ ಮಾಡುತ ಎಂದೆಂದೂ ಆತ್ಮಾನಂದವ ಸವಿಯುತಿರು
ಶಿವಶಿವ ಎಂದರೆ ಭಯವಿಲ್ಲ
ನಾಮಕ್ಕೆ ಸಾಟಿ ಬೇರಿಲ್ಲ ಶಿವನಾಮಕ್ಕೆ ಸಾಟಿ ಬೇರಿಲ್ಲ

ದಾನವೇ ಜಗದೊಳು ತಪವಯ್ಯಾ ಧ್ಯಾನವೇ ಘನಕರ ಜಪವಯ್ಯಾ
ದಾನವೇ ಜಗದೊಳು ತಪವಯ್ಯಾ ಧ್ಯಾನವೇ ಘನಕರ ಜಪವಯ್ಯಾ
ಅಪಕಾರವ ನೀ ಮಾಡಿದರೇ.....
ಅಪಕಾರವ ನೀ ಮಾಡಿದರೇ ಕೈಲಾಸವದು ಸಿಗದಯ್ಯಾ
ಶಿವಶಿವ ಎಂದರೆ ಭಯವಿಲ್ಲ
ನಾಮಕ್ಕೆ ಸಾಟಿ ಬೇರಿಲ್ಲ ಶಿವನಾಮಕ್ಕೆ ಸಾಟಿ ಬೇರಿಲ್ಲ
-------------------------------------------------------------------------------------------------------------------------

ಭಕ್ತ ಸಿರಿಯಾಳ (1980)..... ಮದುವೆ ಅಂದರೇನೂ ನೀ ಹೇಳೋ ಬೇಗನೇ
ಸಾಹಿತ್ಯ : ಹುಣಸೂರು ಕೃಷ್ಣಮೂರ್ತಿ ಸಂಗೀತ : ಟಿ.ಜಿ.ಲಿಂಗಪ್ಪ ಗಾಯನ :ಪಿ.ಬಿ.ಎಸ್. ಬಿ.ವಸಂತ

ಹೆಣ್ಣು : ಮದುವೇ ಅಂದರೇನೂ ನೀ ಹೇಳೋ ಬೇಗನೇ
          ಮದುವೇ ಅಂದರೇನೂ ನೀ ಹೇಳೋ ಬೇಗನೇ
ಗಂಡು : ಮೋಹದಿಂದ ಗಂಡು ಹೆಣ್ಣು ಕೂಡೋ ಅಪ್ಪಣೇ
            ಮೋಹದಿಂದ ಗಂಡು ಹೆಣ್ಣು ಕೂಡೋ ಅಪ್ಪಣೇ
ಹೆಣ್ಣು : ಕೂಡಲೇನೇ ಸುಖವುಂಟು ತಿಳಿಸು ಬೇಗನೇ
          ಕೇಳಿಕೊಂಡು ಹೋಗುವೇ ಸುಮ್ಮನೇ
ಗಂಡು : ಮದುವೇ ಆದಮೇಲೆ ಎಲ್ಲ ತಿಳಿಸಿ ಕೊಡುವೇನೇ
            ನಿನಗೇ ತಿಳಿಸಿ ಕೊಡುವೇನೇ ನಾನೇ ತಿಳಿಸಿ ಕೊಡುವೇನೇ
ಹೆಣ್ಣು : ಮದುವೇ ಅಂದರೇನೂ ನೀ ಹೇಳೋ ಬೇಗನೇ

ಹೆಣ್ಣು : ಹೆಣ್ಣು ನಾನು ಗಂಡು ಯಾರೋ ಏನೋ ಗೊತ್ತಿಲ್ಲಾ 
ಗಂಡು : ನನ್ನ ಬಿಟ್ರೇ ನಿನಗೆ ಬೇರೆ ಗಂಡೇ ಗತಿಯಿಲ್ಲ            
            ಬೇರೆ ಗಂಡೇ ಗತಿಯಿಲ್ಲ         
ಹೆಣ್ಣು : ನಿನ್ನ ಮದುವೆ ಆದರೇ ನೀ ಏನೂ ಕೊಡುವೇ
          ನಿನ್ನ ಮದುವೆ ಆದರೇ ನೀ ಏನೂ ಕೊಡುವೇ
ಗಂಡು : ಕೊಡುವೇ ನಿನಗೇ ಮೈತುಂಬಾ ಮುತ್ತ.. ( ಆಂ!) ಮುತ್ತಿನ ಒಡವೇ
           ಕೊಡುವೇ ನಿನಗೇ ಮೈತುಂಬಾ ಮುತ್ತಿನ ಒಡವೇ
ಹೆಣ್ಣು : ಮದುವೇ ಅಂದರೇನೂ ನೀ ಹೇಳೋ ಬೇಗನೇ

ಹೆಣ್ಣು : ಮುತ್ತು ಬೇಡಾ ರತ್ನ ಬೇಡಾ ಬೇಕಾದ್ದು ಬೇರೆ ಇದೇ 
          ನನಗೇ ಬೇಕಾದ್ದು ಬೇರೆ ಇದೇ 
ಗಂಡು : ಏನೂ ಬೇಕು ಕೇಳು ಬೇಗ ಕೊಡುವ ಗಂಡು ನಾನೇನೇ
            ಎಲ್ಲ ಕೊಡುವ ಗಂಡು ನಾನೇನೇ
ಹೆಣ್ಣು : ಅಪ್ಪನಂತೇ ಆಗಬೇಕು ಅವಳಿಗಿಂತ ನಾನು ಬಲು ಬೇಗನೇ
ಗಂಡು : ಅದಕ್ಕಾಗಿ ನಾನು ಕಾದಿಹೇ ಜಾಣೆ ನಿನಗ್ಯಾಕೆ ಈ ಯೋಚನೇ
ಹೆಣ್ಣು : ಮದುವೇ ಅಂದರೇನೂ ನೀ ಹೇಳೋ ಬೇಗನೇ
ಗಂಡು : ಮೋಹದಿಂದ ಗಂಡು ಹೆಣ್ಣು ಕೂಡೋ ಅಪ್ಪಣೇ
--------------------------------------------------------------------------------------------------------------------------

ಭಕ್ತ ಸಿರಿಯಾಳ (1980)..... ಏಕೋ ಈ ಕೋಪ ಶಂಕರ
ಸಾಹಿತ್ಯ : ಹುಣಸೂರು ಕೃಷ್ಣಮೂರ್ತಿ ಸಂಗೀತ : ಟಿ.ಜಿ.ಲಿಂಗಪ್ಪ ಗಾಯನ : ಎಸ್.ಜಾನಕೀ

ಶಂಭೋ ಶಂಕರ ಹರ ಹರ ಮಹಾದೇವ
ಶಂಕರ ಗಿರಿಜಾಧರ ನಮೋ ನಮಃ .. ನಮೋ ನಮಃ
ಏಕೋ ಈ ಕೋಪ ಶಂಕರ ಶಿವಶಂಕರ
ಏಕೋ ಈ ತಾಪ ಶಂಕರ ಶಿವಶಂಕರ ಹರ ಶಂಕರ
ಏಕೋ ಈ ಕೋಪ ಶಂಕರ

ದಾನ ಧರ್ಮವ ಮಾಡುತ  ಜನಕ ನೀಡುತಲಿದ್ದ ಧನಕನಕ
ದಾನ ಧರ್ಮವ ಮಾಡುತ ಜನಕ ನೀಡುತಲಿದ್ದ ಧನಕನಕ 
ಎಲ್ಲಾ ನಿನ್ನ ಲೀಲೆ ನಂಬಿಹ 
ಎಲ್ಲಾ ನಿನ್ನ ಲೀಲೆ ನಂಬಿಹ ಭಕ್ತನಿಗೇ ಈ ಬೇಗೆ ಏಕೋ ಶಂಕರ......
ಏಕೋ ಈ ಕೋಪ ಶಂಕರ ಶಿವಶಂಕರ
ಏಕೋ ಈ ತಾಪ ಶಂಕರ ಶಿವಶಂಕರ ಹರ ಶಂಕರ
ಏಕೋ ಈ ಕೋಪ ಶಂಕರ

ಯಾಗ ಯೋಗವೇ ಕಾಯುತ ಜನಕ ಸಾಧಿಸುತ್ತಿರುವ ಘನ ವೃತವ 
ಯಾಗ ಯೋಗವೇ ಕಾಯುತ ಜನಕ ಸಾಧಿಸುತ್ತಿರುವ ಘನ ವೃತವ 
ದೀನನಾಗಿ ನಿನ್ನಿ  ನಂಬಿಹ 
ದೀನನಾಗಿ ನಿನ್ನೀ ನಂಬಿಹ ಭಕ್ತನಿಗೇ ಈ ಶಿಕ್ಷೆ ಏಕೋ ಶಂಕರ....
ಏಕೋ ಈ ಕೋಪ ಶಂಕರ ( ಶಿವಶಂಕರ ಶಿವಶಂಕರ)
ಏಕೋ ಈ ತಾಪ ಶಂಕರ (ಶಿವಶಂಕರ ಹರ ಶಂಕರ ಶಿವಶಂಕರ ಹರ ಶಂಕರ )
ಏಕೋ ಈ ಕೋಪ ಶಂಕರ

ಗುಡಿಗುಡಿಸಿ ಗುಡಿಲೆಂದು ಬರಸಿಡಿಲು ಬಡಿದು (ಆಆಆ.. ಆಆಆ )
ಆರ್ಭಟಿಸಿ ಭೋರ್ಗರೆದು ಮಳೆ ಸುರಿಯಲೀ (ಆಆಆ.. ಆಆಆ )
ಜಟೇಯೊಳಗೇ ಬಿಗಿದಿರುವ ಗಂಗೆಯನು ಕಳಿಸು (ಆಆಆ.. ಆಆಆ )
ಭಕ್ತಿಯ ಮುಕ್ತಿಯೇ ಭಕ್ತಿಯ ಮುಕ್ತಿಯೇ ಶಕ್ತಿ ಏನಿಸೂ... 
ಓ ನಮಃ ಶಿವಾಯಃ  (ಓ ನಮಃ ಶಿವಾಯಃ  )
ಓ ನಮಃ ಶಿವಾಯಃ  (ಓ ನಮಃ ಶಿವಾಯಃ  )
ಓ ನಮಃ ಶಿವಾಯಃ  (ಓ ನಮಃ ಶಿವಾಯಃ  )
ಓ ನಮಃ ಶಿವಾಯಃ  (ಓ ನಮಃ ಶಿವಾಯಃ  )
ಓ ನಮಃ ಶಿವಾಯಃ  (ಓ ನಮಃ ಶಿವಾಯಃ  )
ಓ ನಮಃ ಶಿವಾಯಃ  (ಓ ನಮಃ ಶಿವಾಯಃ  )
-------------------------------------------------------------------------------------------------------------------------

ಭಕ್ತ ಸಿರಿಯಾಳ (1980)..... ಅತಿಥಿ ಸೇವೆಯೇ ಪಾವನವೆಂದೂ
ಸಾಹಿತ್ಯ : ಹುಣಸೂರು ಕೃಷ್ಣಮೂರ್ತಿ ಸಂಗೀತ : ಟಿ.ಜಿ.ಲಿಂಗಪ್ಪ ಗಾಯನ : ಕೆ.ಜೆ.ಏಸುದಾಸ್, ಎಸ್.ಜಾನಕೀ

ಗಂಡು : ಅತಿಥಿ ಸೇವೆಯೇ ಪಾವನವೆಂದೂ ಪಾಲಿಸಿಕೊಂಡಿಹ ನಮಗೇ
            ಶಿವನೇ ಗತಿ ಇಂದೂ ಹರನೇ ನೀನೇ ಗತಿ ಇಂದೂ
           ಪಾಪ ಪುಣ್ಯ ಎಲ್ಲವೂ ನಿನ್ನ ಪಾದಕೆ ನೀಡಾಯಿತೂ
           ಶಿವನೇ  ಪಾದಕೆ ನೀಡಾಯಿತೂ ಶಿವನೇ  ಪಾದಕೆ ನೀಡಾಯಿತೂ
ಹೆಣ್ಣು : ಅತಿಥಿ ಸೇವೆಯೇ ಪಾವನವೆಂದೂ ಪಾಲಿಸಿಕೊಂಡಿಹ ನಮಗೇ
            ಶಿವನೇ ಗತಿ ಇಂದೂ ಹರನೇ ನೀನೇ ಗತಿ ಇಂದೂ

ಹೆಣ್ಣು : ಕರುಣೆ ತೋರಿದ ಶರಣರ ದಯದಿಂದ ಬಂದೇ ಭವದೊಳಗೇ
          ಗಣಿಸಿ ಕಂದ ಬಂದೇ ಭವದೊಳಗೇ ಜನಿಸಿ
ಗಂಡು : ಪರಮ ತ್ಯಾಗವ ಮಾಡಿ ನಮ್ಮಯ್ಯ
            ಪರಮ ತ್ಯಾಗವ ಮಾಡಿ ನಮ್ಮಯ್ಯ
           ಧರ್ಮವ ಉಳಿಸಿ ವೃತವ ನಡೆಸಿ ಪಾರಾದೇ ವೃತವ ನಡೆಸಿ ಪಾರಾದೇ
ಇಬ್ಬರು: ಅತಿಥಿ ಸೇವೆಯೇ ಪಾವನವೆಂದೂ ಪಾಲಿಸಿಕೊಂಡಿಹ ನಮಗೇ
            ಶಿವನೇ ಗತಿ ಇಂದೂ ಹರನೇ ನೀನೇ ಗತಿ ಇಂದೂ

ಗಂಡು : ಹಡೆದ ಕಂದನ ಕಡಿದ ಶಿರವ ನೋಡಿ ಎದೆ ಬಿರಿದೂ ಉರಿದು
            ನೋಡಿ ಎದೆ ಬಿರಿದೂ ಉರಿದು
ಹೆಣ್ಣು : ಹರಸುವ ಹಾಗೆಲ್ಲಾ  ಕೋಡಿ ಕಣ್ಣೀರೂ
          ಹರಸುವ ಹಾಗೆಲ್ಲಾ  ಕೋಡಿ ಕಣ್ಣೀರೂ
          ಹರುಷ ತಳೆದು ಸುರಿಸಬೇಕು ಕಣ್ಣೀರು ಸುರಿಸಬೇಕು ಪನ್ನೀರೂ
ಇಬ್ಬರು: ಅತಿಥಿ ಸೇವೆಯೇ ಪಾವನವೆಂದೂ ಪಾಲಿಸಿಕೊಂಡಿಹ ನಮಗೇ
            ಶಿವನೇ ಗತಿ ಇಂದೂ ಹರನೇ ನೀನೇ ಗತಿ ಇಂದೂ
-------------------------------------------------------------------------------------------------------------------------

No comments:

Post a Comment