559. ಪ್ರೀತಿಸಿ ನೋಡು (1981)


ಪ್ರೀತಿಸಿ ನೋಡು ಚಿತ್ರದ ಹಾಡುಗಳು 
  1. ಹಸಿವೇ ದೂರ ನೀನಿರು 
  2. ಬಳ್ಳಿ ಹೂವಿಗಾಸರೇ ಮರವು ಬಳ್ಳಿಗಾಸರೆ  
  3. ಪ್ರೇಮವೆಂಬ ಪಂದ್ಯದಲ್ಲಿ 
  4. ಪ್ರೀತಿಸಿ ನೋಡು ಪ್ರೇಮಿಸಿ ನೋಡು 
ಪ್ರೀತಿಸಿ ನೋಡು (1981) - ಹಸಿವೇ ದೂರ ನೀನಿರು 
ಸಂಗೀತ: ವಿಜಯಭಾಸ್ಕರ್ ಸಾಹಿತ್ಯ: ಗೀತಪ್ರಿಯ,  ಹಾಡಿದವರು: ಎಸ್.ಚೂಡಾಮಣಿ, ಎಸ್.ಪಿ.ಬಿ., ಪಿ.ಪದ್ಮಾ 

ಗಂಡು : ಹಸಿವೇ ದೂರಾ ನೀನೀರೂ ಆಆಆ...  
            ಹಸಿವೇ ದೂರಾ ನೀನೀರೂ ಆಆಆ...
            ಹಸಿವೇ ದೂರಾ ನೀನೀರೂ
           ಹಸಿವೇ ದೂರಾ ನೀನೀರೂ ಆಆಆ... ..  ಹೊಯ್
ಹೆಣ್ಣು : ಹಸಿವೇ ದೂರಾ ನೀನೀರೂ
ಗಂಡು :  ಆಆಆ... ದೂರಾ.ಆಆಆ .. ದೂರಾ... ದೂರಾ ದೂರಾ ನೀನೀರೂ  
            ಅಡಿಗೆ ಆಗುವ ತನಕಾ ...
ಹೆಣ್ಣು : ಆಗುವ ತನಕಾ... ತನಕಾ...
ಗಂಡು : ದೂರಾ ನೀನೀರು
ಎಲ್ಲರು : ಹಸಿವೇ ದೂರಾ ನೀನೀರೂ ಆಆಆ...
            ಹಸಿವೇ ದೂರಾ ನೀನೀರೂ

ಗಂಡು : ಮಾಡಿದ ಅಡಿಗೇ ಆಗಲೂ ಖಾಲೀ ಆಆಆ...
            ಖಾಲಿ ಹೊಟ್ಟೆಗೇ ಎಲ್ಲಿದೇ ಜಾಲಿ
            ಹೊಟ್ಟೆಯೂ ಇಲ್ಲದ ಪ್ರಾಣಿಯೂ ಇಲ್ಲಾ
ಹೆಣ್ಣು: ಯಾವ ಪ್ರಾಣಿಯೂ ಇಲ್ಲಾ ಇಲ್ಲಾ ಇಲ್ಲಾ
ಗಂಡು : ಹೊಟ್ಟೆಯು ಇಲ್ಲದೇ ಲೋಕವೇ ಇಲ್ಲಾ
ಹೆಣ್ಣು : ಈ ಲೋಕವೇ ಇಲ್ಲಾ....  ಇಲ್ಲಾ
ಗಂಡು : ಹೊಟ್ಟೆ ಬೇಗ ಹೀಗೇ ತಾಳ ಹಾಕು ಆಗ
            ಅರೇ ಈಗ ನಮ್ಮನೀಗ ಸುಸ್ತೂ ಮಾಡಿದಾಗ
            ತಾಳಲಾರೇ ದೇವಾ ಹೊಟ್ಟೆ ತಾಳವನ್ನೂ
            ಕಾಲ ಕಳೆಯುತಿಹವೂ ತಟ್ಟಿ ತಬಲವನ್ನೂ
ಹೆಣ್ಣು : ಆತನಕಾ ಉರಿಯುತಿರೆವೂ ಹೊಟ್ಟೇ... ಶಾಂತವಾಗಿರೂ
ಗಂಡು : ಹೊಯ್ ಹೊಯ್ ಹೊಯ್ ಹೊಯ್ ನೀನೂ ಶಾಂತಾವಾಗಿರೂ
ಎಲ್ಲರು : ಹಸಿವೇ ದೂರಾ ನೀನೀರೂ ಆಆಆ...
            ಹಸಿವೇ ದೂರಾ ನೀನೀರೂ

ಗಂಡು : ಊಟವೇ ಇಲ್ಲದೇ ನೀರೂ ಸೇರದೂ... ಆಆಆ...
            ನೀರೂ ಇಲ್ಲದೇ ಖೀರೂ ಆಗದು
            ಘಟ್ಟಿಯೂ ಆಗಲೂ ಮುದ್ದೆಯು ಇರಲೀ
ಹೆಣ್ಣು : ಜಾಸ್ತಿಯೂ ಮುದ್ದೆಯು ಇರಲೀ... ಇರಲೀ
ಗಂಡು : ಜಟ್ಟಿ ಆಗಲೂ ರೊಟ್ಟಿಯೂ ಇರಲೀ
ಹೆಣ್ಣು : ಜೋಳದ ರೊಟ್ಟಿಯೂ ಇರಲೀ ... ಇರಲೀ
ಗಂಡು : ಸಿಹಿಯ ಕೇಸರಿ ಬಾತೂ ಒಳ್ಳೇ ವಾಂಗೀ ಬಾತೂ
            ಸದ್ಯ ನಮಗೇ ಬೇಡಾ ಯಾವ ಚೌ ಚೌ ಭಾತೂ
            ಈಗ ಅರ್ಜೆಂಟಾಗಿ ಅನ್ನ ಬೆಂದೂ ಬಿಡಲೀ
            ಅರೇ ಅರ್ಧ ಬೆಂದು ಇದ್ದರೂ ಬೇಗ ಬಡಿಸಿ ಬಿಡಲೀ
ಹೆಣ್ಣು : ಆ ತನಕ ಕಾಯುತಿರುವಾ ಮನವಿ...  ಘಟ್ಟಿಯಾಗಿರೂ                  
ಗಂಡು : ಹೊಯ್ ನೀನೂ ಘಟ್ಟಿಯಾಗಿರೂ
            ಹಸಿವೇ ದೂರಾ ನೀನೀರೂ ಆಆಆ...  
            ಹಸಿವೇ ದೂರಾ ನೀನೀರೂ ಆಆಆ...
            ಹಸಿವೇ ದೂರಾ ನೀನೀರೂ
           ಹಸಿವೇ ದೂರಾ ನೀನೀರೂ ಆಆಆ... ..  ಹೊಯ್
ಎಲ್ಲರು : ಹಸಿವೇ ದೂರಾ ನೀನೀರೂ ಆಆಆ..
            ಹಸಿವೇ ದೂರಾ ನೀನೀರೂ ಆಆಆ..
            ಹಸಿವೇ ದೂರಾ ನೀನೀರೂ ಆಆಆ.. 
------------------------------------------------------------------------------------------------------------------------

ಪ್ರೀತಿಸಿ ನೋಡು (1981) - ಬಳ್ಳಿ ಹೂವಿಗಾಸರೇ ಮರವು ಬಳ್ಳಿಗಾಸರೆ 
ಸಂಗೀತ: ವಿಜಯಭಾಸ್ಕರ್  ಸಾಹಿತ್ಯ: ಗೀತಪ್ರಿಯ,  ಹಾಡಿದವರು: ಎಸ್.ಜಾನಕೀ ಎಸ್.ಪಿ.ಬಿ. 

ಹೆಣ್ಣು : ಬಳ್ಳಿ ಹೂವಿಗಾಸರೇ ಮರವು ಬಳ್ಳಿಗಾಸರೆ
ಗಂಡು : ನನ್ನ ನಿನ್ನ ಬಾಳಿಗೆ ಪ್ರೀತಿ ಆಸರೇ
ಹೆಣ್ಣು : ಬಳ್ಳಿ ಹೂವಿಗಾಸರೇ ಮರವು ಬಳ್ಳಿಗಾಸರೆ
ಗಂಡು : ನನ್ನ ನಿನ್ನ ಬಾಳಿಗೆ ಪ್ರೀತಿ ಆಸರೇ

ಹೆಣ್ಣು : ನಾನು ಯಾರೋ ನೀನು ಯಾರೋ ಆದೇ ನಾವ್....  
ಗಂಡು : ನಾನು ನೀನು ಇಬ್ಬರೊಂದೇ ಈ ದಿನಾ... 
ಹೆಣ್ಣು : ನಾನು ಯಾರೋ ನೀನು ಯಾರೋ ಆದೇ ನಾವ್....  
ಗಂಡು : ನಾನು ನೀನು ಅಹ್ಹಹ್ ಇಬ್ಬರೊಂದೇ ಈ ದಿನಾ... 
ಹೆಣ್ಣು : ಗಂಡು ಹೆಣ್ಣಿನ ಬಾಳ ಬಂಧನ 
ಗಂಡು : ಜನ್ಮ ಜನ್ಮದ ಆತ್ಮ ಬಂಧನ 
ಇಬ್ಬರು : ಅದುವೇ ಪ್ರೀತಿಯಾಸರೇ 
ಗಂಡು : ಬಳ್ಳಿ ಹೂವಿಗಾಸರೇ    ಹೆಣ್ಣು :ಮರವು ಬಳ್ಳಿಗಾಸರೆ
ಗಂಡು : ನನ್ನ ನಿನ್ನ ಬಾಳಿಗೆ      ಹೆಣ್ಣು : ಪ್ರೀತಿ ಆಸರೇ 

ಗಂಡು : ಸೋಲು ಬರಲೂ ಗೆಲುವೇ ಇರಲಿ ಬಾಳಲೀ 
ಹೆಣ್ಣು : ಮುಳ್ಳೂ ಕೂಡಾ ಹೂವೇ ನಮಗೇ ಆಗಲೀ 
ಗಂಡು : ಸೋಲು ಬರಲೂ ಗೆಲುವೇ ಇರಲಿ ಬಾಳಲೀ 
ಹೆಣ್ಣು : ಮುಳ್ಳೂ ಕೂಡಾ ಹೂವೇ ನಮಗೇ ಆಗಲೀ 
ಗಂಡು : ಸುಖದ ಸರಸ ಸನಿಹ ಇರಲೂ 
ಹೆಣ್ಣು : ವಿರಸವೆಂದೂ ಬಳಿಗೆ ಬರದು 
ಇಬ್ಬರು : ಉಲಿಯೇ ಒಲವಿನ ಕರೇ 
ಹೆಣ್ಣು : ಬಳ್ಳಿ ಹೂವಿಗಾಸರೇ  ಗಂಡು : ಮರವು ಬಳ್ಳಿಗಾಸರೆ
ಹೆಣ್ಣು : ನನ್ನ ನಿನ್ನ ಬಾಳಿಗೆ ಗಂಡು:  ಪ್ರೀತಿ ಆಸರೇ
ಹೆಣ್ಣು : ಪ್ರೀತಿ ಆಸರೇ
ಇಬ್ಬರು : ಹೇ... ಪ್ರೀತಿ ಆಸರೇ
 ------------------------------------------------------------------------------------------------------------------------

ಪ್ರೀತಿಸಿ ನೋಡು (1981) - ಪ್ರೇಮವೆಂಬ ಪಂದ್ಯದಲ್ಲಿ 
ಸಂಗೀತ: ವಿಜಯಭಾಸ್ಕರ್ ಸಾಹಿತ್ಯ: ಗೀತಪ್ರಿಯ  ಹಾಡಿದವರು: ಎಸ್.ಜಾನಕೀ 

ಪ್ರೇಮವೆಂಬ ಪಂದ್ಯದಲ್ಲಿ
ಪ್ರೇಮವೆಂಬ ಪಂದ್ಯದಲ್ಲಿ ನಾನು ಸೋಲಲಿಲ್ಲಾ  ನೀನೂ ಗೆಲ್ಲಲಿಲ್ಲಾ

ಮನಸಿನಲಿ ಹುದುಗಿರಲು ಯಾವುದೋ ಯೋಚನೇ
ನೋಡುವ ಈ ನೋಟವಿದೇ ನೀಡಿದೇ ಸೂಚನೇ
ನಿನ್ನೆ ಇಂದೂ ಇಂದು ನಾಳೆ ಎಂದು ಆಗದು
ಸಂದು ಹೋದ ಕಾಲವೆಂದೂ ಹಿಂದೇ ಬಾರದೂ
ಮಿಂಚಿ ಹೋದ ಮೋಹಗಾಗಿ ಚಿಂತೇ ಏತಕೆ
ಪ್ರೇಮವೆಂಬ ಪಂದ್ಯದಲ್ಲಿ
ಪ್ರೇಮವೆಂಬ ಪಂದ್ಯದಲ್ಲಿ ನಾನು ಸೋಲಲಿಲ್ಲಾ  ನೀನೂ ಗೆಲ್ಲಲಿಲ್ಲಾ

ನವರಸದ ಸರಿಗಮವೇ ಬಾಳಿನ ತೀಡಿಕೆ... 
ಬೆರೆತಿರುವಾ ಮನಗಳಿಗೆ ಪ್ರೇಮವೇ ಕಾಣಿಕೆ 
ಹಗಲು ರಾತ್ರಿ ರಾತ್ರಿ ಹಗಲು ಒಂದೇ ಆಗದು 
ಒಲವು ಇರಲೂ ಶೋಕ ಸೋಲು ಎಂದೂ ಕಾಣದೂ 
ನೋವೂ ಕೂಡಾ ನಲಿವೇ ನಮಗೆ ಒಂದುಗೂಡಲೂ... 
ಪ್ರೇಮ ಒಂದು ಪಂದ್ಯಾವಲ್ಲಾ   
ಪ್ರೇಮ ಒಂದು ಪಂದ್ಯಾವಲ್ಲಾ  ಸೋಲು ಗೆಲುವ ಎಂಬ
ಮಾತೇ ಅದರಲೀ ಇಲ್ಲಾ

ಒಳಒಳಗೇ ತಳಮಳಿಸಿ ಸೋಕೂ ಸಾಕಾಗದೇ
ಕಳಕಳವೇ ಹಗಲಿರಳೂ ಬೇಕೇ ಬೇಕಾಯಿತೇ
ನೆಟ್ಟ ನೋಟ ಬಿಟ್ಟ ಬಾಣ ಎಲ್ಲಿ ಹೊಕ್ಕಿತೋ
ಹುಟ್ಟಿನಲ್ಲೇ ಕೊಟ್ಟ ಆಸೇ ಎಲ್ಲಿ ತಪ್ಪಿತೋ
ಬೆಟ್ಟದಂತ ಬಯಕೆ ಈಗ ಏನೋ ದಕ್ಕಿತೋ
ಪ್ರೇಮವೆಂಬ ಪಂದ್ಯದಲ್ಲಿ
ಪ್ರೇಮವೆಂಬ ಪಂದ್ಯದಲ್ಲಿ ನಾನು ಸೋಲಲಿಲ್ಲಾ  ನೀನೂ ಗೆಲ್ಲಲಿಲ್ಲಾ
------------------------------------------------------------------------------------------------------------------------

ಪ್ರೀತಿಸಿ ನೋಡು (1981) - ಪ್ರೀತಿಸಿ ನೋಡು ಪ್ರೇಮಿಸಿ ನೋಡು
ಸಂಗೀತ: ವಿಜಯಭಾಸ್ಕರ್ ಸಾಹಿತ್ಯ: ಗೀತಪ್ರಿಯ  ಹಾಡಿದವರು: ಎಸ್.ಪಿ.ಬಿ.

ಕೋರಸ್ : ಆಆಆ... ಆಆಆ... ಆಆಆ...
ಗಂಡು : ಪ್ರೀತಿಸಿ ನೋಡು (ಆಆಆಆ ) ಪ್ರೇಮಿಸಿ ನೋಡು (ಆಆಆಆ )
          (ಆಆ ) ಪ್ರೀತಿಯೇ (ಲಲ್ಲಲ್ಲಲ್ಲಲ್ಲಾ ) ಬಾಳಿನ (ಲಲ್ಲಲ್ಲಲ್ಲಲ್ಲಾ )
           ಒಲುಮೆಯ ಹಾಡು (ಆಆಆ)
           ಪ್ರೀತಿಸಿ ನೋಡು (ಆಆಆಆ ) ಪ್ರೇಮಿಸಿ ನೋಡು (ಆಆಆಆ )
          (ಆಆ ) ಪ್ರೀತಿಯೇ (ಲಲ್ಲಲ್ಲಲ್ಲಲ್ಲಾ ) ಬಾಳಿನ (ಲಲ್ಲಲ್ಲಲ್ಲಲ್ಲಾ )
           ಒಲುಮೆಯ ಹಾಡು (ಆಆಆ)
ಕೋರಸ್ :  ಪ್ರೀತಿಸಿ ನೋಡು ಪ್ರೇಮಿಸಿ ನೋಡು
                ಪ್ರೀತಿಸಿ ನೋಡು ಪ್ರೇಮಿಸಿ ನೋಡು... ಲಲ್ಲಲ್ಲಲ್ಲಲ್ಲಾ

ಗಂಡು : ಪ್ರೀತಿಯೆ ದೇವನು ನೀಡಿದ ಕೊಡುಗೆ ಪ್ರೀತಿಯೆ ಆಗಲಿ ಮನಸಿನ ಉಡುಗೆ
            ಪ್ರೀತಿಯೆ ಒಂದು ಪಾವನ ಜ್ಯೋತಿ
            ಪ್ರೀತಿಯೆ ಒಂದು ಪಾವನ ಜ್ಯೋತಿ ಪ್ರೀತಿಯ ಬಾಳಿಗೆ ಪ್ರೀತಿಯೆ ನೀತಿ
            ಪ್ರೀತಿಸಿ ನೋಡು (ಆಆಆಆ ) ಪ್ರೇಮಿಸಿ ನೋಡು (ಆಆಆಆ )
            (ಆಆ ) ಪ್ರೀತಿಯೇ (ಲಲ್ಲಲ್ಲಲ್ಲಲ್ಲಾ ) ಬಾಳಿನ (ಲಲ್ಲಲ್ಲಲ್ಲಲ್ಲಾ )
           ಒಲುಮೆಯ ಹಾಡು (ಆಆಆ)

ಕೋರಸ್ : ಆಆಆಆಅ...  
ಗಂಡು : ತಾಯಿಯ ಮಡಿಲಲೆ ಪ್ರೀತಿಯ ಬೆಸುಗೆ ಹರೆಯದ ವಯಸಲಿ ಪ್ರೀತಿಯ ಒಸಗೆ
            ಪ್ರೀತಿಯ ಭಾವದ ಆಳ ಅಪಾರ...
            ಪ್ರೀತಿಯ ಭಾವದ ಆಳ ಅಪಾರ  ಪ್ರೀತಿಯೆ ಬಾಳಿಗೆ ಅಮೃತ ಧಾರ
            ಪ್ರೀತಿಸಿ ನೋಡು (ಆಆಆಆ ) ಪ್ರೇಮಿಸಿ ನೋಡು (ಆಆಆಆ )
            (ಆಆ ) ಪ್ರೀತಿಯೇ (ಲಲ್ಲಲ್ಲಲ್ಲಲ್ಲಾ ) ಬಾಳಿನ (ಲಲ್ಲಲ್ಲಲ್ಲಲ್ಲಾ )
           ಒಲುಮೆಯ ಹಾಡು (ಆಆಆ)
ಕೋರಸ್ :  ಪ್ರೀತಿಸಿ ನೋಡು ಪ್ರೇಮಿಸಿ ನೋಡು
                ಪ್ರೀತಿಸಿ ನೋಡು ಪ್ರೇಮಿಸಿ ನೋಡು...

ಕೋರಸ್ : ಆಆಆಆಅ...  
ಗಂಡು : ಪ್ರೀತಿಯ ಲೋಕಕೆ ಆಸೆಯ ಹೊನಲು ಪ್ರೀತಿಯು ಇದ್ದರೆ ದಿನ ಹೊಸ ಹಗಲು
            ಮನಸಿನ ಭಾವಕೆ ಪ್ರೀತಿಯ ಚಿಲುಮೆ
            ಮನಸಿನ ಭಾವಕೆ ಪ್ರೀತಿಯ ಚಿಲುಮೆ ಸನಿಹಕೆ ತರುವುದೆ ಪ್ರೀತಿಯ ಹಿರಿಮೆ
            ಪ್ರೀತಿಸಿ ನೋಡು (ಆಆಆಆ ) ಪ್ರೇಮಿಸಿ ನೋಡು (ಆಆಆಆ )
            (ಆಆ ) ಪ್ರೀತಿಯೇ (ಲಲ್ಲಲ್ಲಲ್ಲಲ್ಲಾ ) ಬಾಳಿನ (ಲಲ್ಲಲ್ಲಲ್ಲಲ್ಲಾ )
           ಒಲುಮೆಯ ಹಾಡು (ಆಆಆ)
--------------------------------------------------------------------------------------------------------------------------

No comments:

Post a Comment