564. ಆಸೆಯ ಬಲೆ (1987)

ಆಸೆಯ ಬಲೆ ಚಲನಚಿತ್ರದ ಹಾಡುಗಳು 
  1. ನನ್ನ ನಲ್ಲೆ ಮುದ್ದು ನಲ್ಲೆ ನಿನ್ನ ಆಸೆ ಎಲ್ಲ ಬಲ್ಲೆ
  2. ಎಲ್ಲಿರುವೇ ಎಲ್ಲಿರುವೇ 
  3. ಕಣ್ಣ ಮುಚ್ಚೇ ಚುಪ್ಪಾ ಚುಪ್ಪಿ 
  4. ಸರಿಸಾಟಿ ಯಾರಿಹರೂ ಈ ನೋಟಕೆ 
  5. ಕಣ್ಣ ಮುಚ್ಚೇ ಚುಪ್ಪಾ ಚುಪ್ಪಿ (ದುಃಖ )
ಆಸೆಯ ಬಲೆ (1987) - ನನ್ನ ನಲ್ಲೆ ಮುದ್ದು ನಲ್ಲೆ
ಸಂಗೀತ: ವಿಜಯಭಾಸ್ಕರ್ ಸಾಹಿತ್ಯ: ಚಿ.ಉದಯಶಂಕರ್  ಹಾಡಿದವರು: ಎಸ್.ಪಿ.ಬಿ., ವಾಣಿ ಜಯರಾಮ್

ಗಂಡು : ರಾಧಾ, ರಾಧಾ
            ನನ್ನ ನಲ್ಲೆ ಮುದ್ದು ನಲ್ಲೆ ನಿನ್ನ ಆಸೆ ಎಲ್ಲ ಬಲ್ಲೆ ನೋಡಿಲ್ಲಿ ನಾ ನಿಲ್ಲೆ
ಹೆಣ್ಣು : ನನ್ನ ನಲ್ಲ ಮುದ್ದು ನಲ್ಲ ನಿನ್ನ ಆಸೆ ಎಲ್ಲ ಬಲ್ಲೆ ನೋಡಿಲ್ಲಿ ನಾ ನಿಲ್ಲೆ

ಕೋರಸ್ : ಲಲ್ಲಾ ಲಲ್ಲಾ ಲಲ್ಲಾ ಲಲಲಲಲ್ಲಾ  ಲಲಲಲಲ್ಲಾ  ಜೂಜೂಜೂಜೂ ಜೂ ಜೂ
ಹೆಣ್ಣು : ನಿನ್ನೆ ನಿನ್ನ ಕಾಣದೇನೆ ನಲ್ಲ ನೊಂದೆನು
          ಬೆಂಕಿ ಕಂಡ ಹೂವಿನಂತೆ ಬಾಡಿ ಹೋದೆನು
ಕೋರಸ್ : ಲಲ್ಲಾ ಲಲ್ಲಾ ಲಲ್ಲಾ ಲಲಲಲಲ್ಲಾ
ಗಂಡು:  ಬೀಸೊ ಗಾಳಿಯಂತೆ ನಾನು ಸುತ್ತಿ ಬಂದೆನು (ಹ್ಹಾ)
            ನನ್ನ ರಾಧೆಯನ್ನೆ ಹುಡುಕಿ ಸೋತು ಹೋದೆನು
ಹೆಣ್ಣು : ನೀನೆಲ್ಲೊ ನಾನು ಅಲ್ಲೆ ಅಲ್ಲೆ
ಗಂಡು : ನಿನ್ನಂತೆ ನಾನು ನಲ್ಲೆ ನಲ್ಲೆ
ಹೆಣ್ಣು : ನೀನೆಲ್ಲೊ ನಾನು ಅಲ್ಲೆ ಅಲ್ಲೆ
ಗಂಡು : ನಿನ್ನಂತೆ ನಾನು ನಲ್ಲೆ ನಲ್ಲೆ ನಗಿಸುವೆ ಕುಣಿಸುವೆ ಸುಖವನು ತರುವೆ
ಹೆಣ್ಣು : ನನ್ನ ನಲ್ಲ ಮುದ್ದು ನಲ್ಲ ನಿನ್ನ ಆಸೆ ಎಲ್ಲ ಬಲ್ಲೆ ನೋಡಿಲ್ಲಿ ನಾ ನಿಲ್ಲೆ

ಕೋರಸ್ : ಜೂಜು.. ಜೂಜು..ಜೂಜು..ಜೂಜು..ಜೂಜು..ಜೂಜು..ಜೂಜು.. 
ಗಂಡು : ಮಾತು ಚೆನ್ನ ಮೌನ ಚೆನ್ನ ನೋಟ ಚೆಂದವು
           ಚಿನ್ನ ನಿನ್ನ ಸೇರಿದಾಗ ಬಾಳೆ ಚೆಂದವು
ಕೋರಸ್ : ಲಲಲಲಲಲ ಲಲಲಲಲಲಲ
ಹೆಣ್ಣು : ಸೂರ್ಯ ಕೂಡ ಚಂದ್ರನಂತೆ ತಣ್ಣಗಾದನು
          ನಿನ್ನ ಪ್ರೀತಿ ಮಾತಿನಿಂದ ಮಂಕನಾದನು.. ಹ್ಹಾ
ಗಂಡು : ಬಂಗಾರ ಬೊಂಬೆ ನೀನು ನೀನು 
ಹೆಣ್ಣು : ಒಂದೊಂದೂ ಮಾತು ಜೇನು ಜೇನು
ಗಂಡು : ಬಂಗಾರ ಬೊಂಬೆ ನೀನು ನೀನು 
ಹೆಣ್ಣು : ಒಂದೊಂದೂ ಮಾತು ಜೇನು ಜೇನು ಸರಸದ ನುಡಿಯಲಿ ಮನವನು ಗೆಲುವೆ
ಗಂಡು : ನನ್ನ ನಲ್ಲೆ ಮುದ್ದು ನಲ್ಲೆ ನಿನ್ನ ಆಸೆ ಎಲ್ಲ ಬಲ್ಲೆ ನೋಡಿಲ್ಲಿ ನಾನಿಲ್ಲೆ
            ನನ್ನ ನಲ್ಲೆ ಮುದ್ದು ನಲ್ಲೆ ನಿನ್ನ ಆಸೆ ಎಲ್ಲ ಬಲ್ಲೆ ನೋಡಿಲ್ಲಿ ನಾನಿಲ್ಲೆ
----------------------------------------------------------------------------------------------------------------------

ಆಸೆಯ ಬಲೆ (1987) - ಎಲ್ಲಿರುವೇ ಎಲ್ಲಿರುವೇ
ಸಂಗೀತ: ವಿಜಯಭಾಸ್ಕರ್  ಸಾಹಿತ್ಯ: ಚಿ.ಉದಯಶಂಕರ್ ಹಾಡಿದವರು: ಎಸ್.ಪಿ.ಬಿ., ವಾಣಿ ಜಯರಾಮ್

ಕೋರಸ್ : ಪಸ ನಿಸನಿಸಪ ದಪ   ರಿರಿ  ಸರಿಸರಿನಿ ಸನಿ ಗಪ ಗಪ ಗಮಮಮ ಪದನಿಸ ನಿಸ
                ಪನಿನಿಸ ದಪಪಮ ಪಮಗಮ ಪದ ರಿಸರಿಸ                   
ಹೆಣ್ಣು : ಎಲ್ಲಿರುವೇ .. ಎಲ್ಲಿರುವೇ ... ಮುರುಳಿಯ ಮೋಹನ ರಾಗವ ಕೇಳಿ ಓಡಿ .. ಓಡಿ.. ಬಂದೇನೇ ..
          ಎಲ್ಲಿರುವೇ .. ಎಲ್ಲಿರುವೇ ... ಮುರುಳಿಯ ಮೋಹನ ರಾಗವ ಕೇಳಿ ಓಡಿ .. ಓಡಿ.. ಬಂದೇನೇ ..
ಗಂಡು : ಇಲ್ಲಿರುವೇ .. ಇಲ್ಲಿರುವೇ ....  ಒಲವಿನ ಹಾಡಿಗೇ ಶೃತಿಯಾಗಿರಲು ಬಯಸೀ .. ಬಯಸೀ .. ಬಂದೇನೇ ..
            ಇಲ್ಲಿರುವೇ .. ಇಲ್ಲಿರುವೇ ....  ಒಲವಿನ ಹಾಡಿಗೇ ಶೃತಿಯಾಗಿರಲು ಬಯಸೀ .. ಬಯಸೀ .. ಬಂದೇನೇ ..

ಕೋರಸ್ : ಲಾಲಾಲ್ಲಲ್ಲಲ್ಲಾ ಲಾಲಾ ಲಲಲಲಾ ಲಾಲಾಲ್ಲಲ್ಲಲ್ಲಾ ಲಾಲಾ ಲಾಲಾ ಲಲಲಲಾ
                ಲಾಲಾಲ್ಲಲ್ಲಲ್ಲಾ ಲಾಲಾ ಲಾಲಾ ಲಲಲಲಾ
ಹೆಣ್ಣು : ರವಿಯ ಮೋಗವ ಕಾಣದೇ ಹೋದರೇ ತಾವರೇ ಅರಳುವುದೇ
          ರವಿಯ ಮೋಗವ ಕಾಣದೇ ಹೋದರೇ ತಾವರೇ ಅರಳುವುದೇ
ಗಂಡು : ನಿನ್ನ ಕಂಗಳ ಚಂದ್ರಿಕೆ ಚೆಲ್ಲದೇ ಈ ಮನ ನಲಿಯುವುದೇ....
ಹೆಣ್ಣು : ನಿನ್ನ ಆಧರ  ಸೋಕದೇ ಹೋದರೇ ಕೊಳಲೂ ಹಾಡುವುದೇ
ಗಂಡು : ನಿನ್ನ ಈ ಕ್ಷಣ ನೋಡದೇ ಹೋದರೇ ಜೀವ ನಿಲ್ಲುವುದೇ.. 
ಹೆಣ್ಣು : ಎಲ್ಲಿರುವೇ .. ಎಲ್ಲಿರುವೇ ... ಮುರುಳಿಯ ಮೋಹನ ರಾಗವ ಕೇಳಿ ಓಡಿ .. ಓಡಿ.. ಬಂದೇನೇ ..
ಕೋರಸ್ : ಆಆಆ... ಆಆಆ... ಆಆಆ... ಆಆಆ... ... ಆಆಆ... ಆಆಆ...

ಹೆಣ್ಣು : ಗುಡುಗೂ ಸಿಡಿಲೂ ಕೇಳಿದ ನವಿಲೂ ಮೌನದೀ ನಿಲ್ಲುವುದೇ..
          ಗುಡುಗೂ ಸಿಡಿಲೂ ಕೇಳಿದ ನವಿಲೂ ಮೌನದೀ ನಿಲ್ಲುವುದೇ..
ಗಂಡು : ನಗುವ ಸುಮವ ನೋಡಿದ ಭೃಮರ ದೂರಕೆ ಓಡುವುದೇ..
ಹೆಣ್ಣು : ಒಲಿದ  ಹೃದಯ ವಿರಹದ ವೇದನೇ ಯಾತನೇ ಸಹಿಸುವುದೇ..
ಗಂಡು : ರಾಧೇಯೋ ಎಲ್ಲೋ ಮಾಧವನಲ್ಲೇ ಈ ನಿಜ ಮರೆಯುವುದೇ..
ಹೆಣ್ಣು : ಎಲ್ಲಿರುವೇ .. ಎಲ್ಲಿರುವೇ ... ಮುರುಳಿಯ ಮೋಹನ ರಾಗವ ಕೇಳಿ ಓಡಿ .. ಓಡಿ.. ಬಂದೇನೇ ..
----------------------------------------------------------------------------------------------------------------------

ಆಸೆಯ ಬಲೆ (1987) - ಕಣ್ಣ ಮುಚ್ಚೇ ಚುಪ್ಪಾ ಚುಪ್ಪಿ
ಸಂಗೀತ: ವಿಜಯಭಾಸ್ಕರ್  ಸಾಹಿತ್ಯ: ಆರ್.ಏನ್.ಜಯಗೋಪಾಲ ಹಾಡಿದವರು: ಎಸ್.ಪಿ.ಬಿ., 

ಕಣ್ಣ ಮುಚ್ಚೇ ಚುಪ್ಪಾ ಚುಪ್ಪಿ ಆಡೋ ಮುದ್ದೂ ರೋಜಾ ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಓಡೋ ನನ್ನ ರಾಜ.. ಅಹ್ಹಹ್ಹಹ್ಹ   
ಕಣ್ಣ ಮುಚ್ಚೇ ಚುಪ್ಪಾ ಚುಪ್ಪಿ ಆಡೋ ಮುದ್ದೂ ರೋಜಾ ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಓಡೋ ನನ್ನ ರಾಜ..
ನೀನೇ ಎಂದೂ ಆಶಾದೀಪ ಬಾಳಲೀ ನನ್ನ ಆಯುಸ್ಸೆಲ್ಲಾ ನಿನ್ನ ಸೇರಲೀ .. 

ನಗುವ ಹೂವ ನೆರಳ ತರುವ ಮರವ ಕೇಳಿ ತಿಳಿವೇ
ಬಿಳಿಯ ಮುಗಿಲೇ ಆಡೋ ನವಿಲೇ ಹೇಳಿ ನನಗೇ ಏನುವೇ
ಹೂವ ಮೊಗದ ಚೆಲುವಾ ತಂದಾ ಅವನ ಕಂಡಿರೇನೂ
ಮುಗಿಲ ಹಿಂದೇ ರವಿಯ ತೆರೆದೆ ಅವನೂ ಇರುವನೇನೂ
ಹಕ್ಕಿಗಳೇ ಹೇಳಿ ನನ್ನ ರಾಜ ಎಲ್ಲೀ.. ನನ್ನ ಅಲ್ಲಿ ಕರೆದುಕೊಂಡೂ ಹೋಗಬಲ್ಲೀರಾ ..
ಕಣ್ಣ ಮುಚ್ಚೇ ಚುಪ್ಪಾ ಚುಪ್ಪಿ ಆಡೋ ಮುದ್ದೂ ರೋಜಾ ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಓಡೋ ನನ್ನ ರಾಜ.. ಅಹ್ಹಹ್ಹಹ್ಹ.. 

ನನ್ನ ಉಸಿರೂ ಕಣ್ಣ ಬೆಳಕೂ ನನ್ನ ಜೀವನ ನೀನೇ ..
ನಿನ್ನ ನಗೆಯೇ ಜೇನ ನುಡಿಯೇ ನನ್ನ ಪ್ರಾಣತಾನೇ
ಹಗಲೂ ರಾತ್ರೀ ನಿನ್ನ ನೆನೆದೂ ನಗುತಾ ಇಹುದೂ ಮನವೂ
ನಿನ್ನಾ ಅಗಲೀ ದೂರ ತೆರಳಿ ಇರೇನೂ ಒಂದೂ ಕ್ಷಣವೂ
ಓಡಿ ಬಂದೂ ಬೇಗ ಅಪ್ಪು ನನ್ನ ಈಗ ನಿನ್ನ ತಬ್ಬಿಕೊಂಡು ನಾನೂ ತೇಲಿ ಹೋಗುವೇ ..
ಕಣ್ಣ ಮುಚ್ಚೇ ಚುಪ್ಪಾ ಚುಪ್ಪಿ ಆಡೋ ಮುದ್ದೂ ರೋಜಾ ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಓಡೋ ನನ್ನ ರಾಜ.. 
ನೀನೇ ಎಂದೂ ಆಶಾದೀಪ ಬಾಳಲೀ ನನ್ನ ಆಯುಸ್ಸೆಲ್ಲಾ ನಿನ್ನ ಸೇರಲೀ .. 
----------------------------------------------------------------------------------------------------------------------

ಆಸೆಯ ಬಲೆ (1987) - ಸರಿಸಾಟಿ ಯಾರಿಹರೂ ಈ ನೋಟಕೆ
ಸಂಗೀತ: ವಿಜಯಭಾಸ್ಕರ್  ಸಾಹಿತ್ಯ: ಚಿ.ಉದಯಶಂಕರ್  ಹಾಡಿದವರು:  ವಾಣಿ ಜಯರಾಮ್

ಆಆಆ.... ಆಆಆ.... ಆಆಆ... ಆಆಆ.... ಆಆಆ.... ಆಆಆ... ಆಆಆ.... ಆಆಆ.... ಆಆಆ...
ಸ... ನಿಸಸ ಸಸಸ ನೀ ದನಿನಿನಿ ಪಗ ಗಗಗಗ ಪಗಪ
ಸರಿಸಾಟಿ ಯಾರಿಹರೂ...
ಸರಿಸಾಟಿ ಯಾರಿಹರೂ... ಈ ನೋಟಕೆ ನನ್ನಾಟಕೇ.. ಮೈಮಾಟಕೇ ..
ಸರಿಸಾಟಿ ಯಾರಿಹರೂ... ಈ ನೋಟಕೆ ನನ್ನಾಟಕೇ.. ಮೈಮಾಟಕೇ ..
ಸರಿಸಾಟಿ ಯಾರಿಹರೂ...

ಕಣ್ಣಲೀ ಹೂವಿನ ಬಾಣವ ಬಿಡುವೇ ಕಲ್ಲಿನ ಮನಸನೂ ಕ್ಷಣದಲೀ ಸೆಳೆವೆ
ಕಣ್ಣಲೀ ಹೂವಿನ ಬಾಣವ ಬಿಡುವೇ ಕಲ್ಲಿನ ಮನಸನೂ ಕ್ಷಣದಲೀ ಸೆಳೆವೆ
ಹೆಜ್ಜೆಯ ತಾಳದಿ ಗೆಜ್ಜೆಯ ನಾದದೀ ಮೋಹವ ತುಂಬುತ ಆಡಿಸುವಾ ಮೋಹಿನಿಗೇ ಭೂಮಿಗಿಳಿದ ಅಪ್ಸರೆಗೇ ..
ಸರಿಸಾಟಿ ಯಾರಿಹರೂ... ಹ್ಹಾ.. ಈ ನೋಟಕೆ ನನ್ನಾಟಕೇ.. ಮೈಮಾಟಕೇ ..
ಸರಿಸಾಟಿ ಯಾರಿಹರೂ...
---------------------------------------------------------------------------------------------------------------------

ಆಸೆಯ ಬಲೆ (1987) -  ಕಣ್ಣ ಮುಚ್ಚೇ ಚುಪ್ಪಾ ಚುಪ್ಪಿ (ದುಃಖ )
ಸಂಗೀತ: ವಿಜಯಭಾಸ್ಕರ್  ಸಾಹಿತ್ಯ: ಆರ್.ಏನ್.ಜಯಗೋಪಾಲ ಹಾಡಿದವರು: ಎಸ್.ಪಿ.ಬಿ., ಬಿ.ಆರ್.ಛಾಯ

ಹೆಣ್ಣು : ಲಲಲಲಲಲಾಲಾಲಲಲ ಲಲಲಲಲ
         ಕಣ್ಣ ಮುಚ್ಚೇ ಚುಪ್ಪಾ ಚುಪ್ಪಿ ಆಡೋ ಮುದ್ದೂ ರೋಜಾ ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಓಡೋ ನನ್ನ ರಾಜ.. 
         ಕಣ್ಣ ಮುಚ್ಚೇ ಚುಪ್ಪಾ ಚುಪ್ಪಿ ಆಡೋ ಮುದ್ದೂ ರೋಜಾ ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಓಡೋ ನನ್ನ ರಾಜ..
         ನೀನೇ ಎಂದೂ ಆಶಾದೀಪ ಬಾಳಲೀ ನನ್ನ ಆಯುಸ್ಸೆಲ್ಲಾ ನಿನ್ನ ಸೇರಲೀ .. 

ಗಂಡು : ನನ್ನ ಉಸಿರೂ ಕಣ್ಣ ಬೆಳಕೂ ನನ್ನ ಜೀವನ ನೀನೇ ..
            ನಿನ್ನ ನಗೆಯೇ ಜೇನ ನುಡಿಯೇ ನನ್ನ ಪ್ರಾಣತಾನೇ
            ಹಗಲೂ ರಾತ್ರೀ ಕಣ್ಣ ತುಂಬ ನೀನೇ ತುಂಬಿದೇ
            ನಿನ್ನಾ ಅಗಲೀ ದೂರ ತೆರಳಿ ಜೀವ ಬಾಡಿದೇ
            ಓಡಿ ಬಂದೂ ಬೇಗ ಅಪ್ಪು ನನ್ನ ಈಗ ನಿನ್ನ ತಬ್ಬಿಕೊಂಡು ನಾನೂ ತೇಲಿ ಹೋಗುವೇ ..
----------------------------------------------------------------------------------------------------------------------

ಆಸೆಯ ಬಲೆ (1987) - ಕಣ್ಣ ಮುಚ್ಚೇ ಚುಪ್ಪಾ ಚುಪ್ಪಿ
ಸಂಗೀತ: ವಿಜಯಭಾಸ್ಕರ್  ಸಾಹಿತ್ಯ: ಆರ್.ಏನ್.ಜಯಗೋಪಾಲ ಹಾಡಿದವರು: ಎಸ್.ಪಿ.ಬಿ., ಬಿ.ಆರ್.ಛಾಯ 

ಗಂಡು : ನಗುವ ಹೂವ ನೆರಳ ತರುವ ಮರವ ಕೇಳಿ ತಿಳಿವೇ
ಮಗು : ಬಿಳಿಯ ಮುಗಿಲೇ ಆಡೋ ನವಿಲೇ ಹೇಳಿ ನನಗೇ ಏನುವೇ (ಆ... ಅಹ್ಹಹ್ಹಹ)
ಗಂಡು : ಹೂವ ಮೊಗದ ಚೆಲುವಾ ತಂದಾ ಅವನ ಕಂಡಿರೇನೂ
ಮಗು : ಮುಗಿಲ ಹಿಂದೇ ರವಿಯ ತೆರೆದೆ ಅಡಗಿ ಇರುವೇ ನಾನೂ
ಗಂಡು : ಹಕ್ಕಿಗಳೇ ಹೇಳಿ ನನ್ನ ರಾಜ ಎಲ್ಲೀ..
ಮಗು : ನಿಮ್ಮ ತೋಳಿನಲ್ಲಿ ನಾನೂ  ಸೇರಿ ಹೋಗುವೇ
ಇಬ್ಬರು : ಕಣ್ಣ ಮುಚ್ಚೇ ಚುಪ್ಪಾ ಚುಪ್ಪಿ ಆಡೋ ಮುದ್ದೂ ರೋಜಾ ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಓಡೋ ನನ್ನ ರಾಜ.. 
ಗಂಡು : ನೀನೇ ಎಂದೂ ಆಶಾದೀಪ ಬಾಳಲೀ ನನ್ನ ಆಯುಸ್ಸೆಲ್ಲಾ ನಿನ್ನ ಸೇರಲೀ ..
----------------------------------------------------------------------------------------------------------------------

No comments:

Post a Comment