567. ಭೂಕೈಲಾಸ (೧೯೫೮)



ಭೂಕೈಲಾಸ ಚಿತ್ರದ ಹಾಡುಗಳು 
  1. ರಾಮನ ಅವತಾರ 
  2. ಜಯ ಜಯ ಮಹಾದೇವಾ 
  3. ತರವೇ ವರದಾನ 
  4. ಬಾಲೆಯ ಹೃದಯವ ಆವರಿಸಿರುವ 
  5. ಈ ದೇಹ ಮೂರುದಿನ 
  6. ನಾಕವನೇ ನಾಚಿಸುವಾ 
  7. ಸುಂದರಾಂಗ ಬಂದನೀಗ 
  8. ಕ್ಷೀರಾಭಿ ವರಧಾಮ 
  9. ದೂರ ನೀನಾದೆ 
  10. ಈ ರಾತ್ರಿ ಮಹಾರಾತ್ರಿ 
ಭೂಕೈಲಾಸ (೧೯೫೮).....ರಾಮನ ಅವತಾರ
ಸಂಗೀತ : ಆರ್.ಸುದರ್ಶನಂ-ಆರ್.ಗೋವರ್ಧನಮ್ ಸಾಹಿತ್ಯ : ಕು.ರಾ.ಸೀ  ಗಾಯನ : ಶ್ರೀಕಾಳಿ ಗೋವಿಂದರಾಜನ್


ದ್ವಾರಪಾಲರ ಮರಳಿ ಬಳಿಗೊಯ್ವ ಕೃಪೆಯೋಜಾರತನ ಸದೆ ಬಡಿವ ಸಂಭ್ರಮದ ನೆಪವೋ
ರಾಮನ ಅವತಾರ ರಘುಕುಲ ಸೋಮನ ಅವತಾರ
ರಾಮನ ಅವತಾರ ರಘುಕುಲ ಸೋಮನ ಅವತಾರ
ರಾಮನ ಅವತಾರ ರಘುಕುಲ ಸೋಮನ ಅವತಾರ
ನಿರುಪಮ ಸಂಯಮ ಜೀವನಸಾರ ಹರಿವುದು ಭೂಮಿಯ ಭಾರ
ರಾಮನ ಅವತಾರ

ದಾಶರಥಿಯ ದಿವ್ಯಾತ್ಮವ ತಳೆವ ಕೌಸಲ್ಯೆಯ ಬಸಿರೆನಿತು ಪುನೀತ
ಲೇಸಿಗರೈ ಸಹಜಾತರು ಮೂವರು
ಲೇಸಿಗರೈ ಸಹಜಾತರು ಮೂವರು ಲಕ್ಷ್ಮಣ ಶತ್ರುಘ್ನ ಭರತ
ರಾಮನ ಅವತಾರ ರಘುಕುಲ ಸೋಮನ ಅವತಾರ

ತ್ರಿಭುವನಪಾಲಗೆ ನೆಪಮಾತ್ರ ವರಾಗುರು ವಿಶ್ವಾಮಿತ್ರ
ತ್ರಿಭುವನಪಾಲಗೆ ನೆಪಮಾತ್ರ ವರಾಗುರು ವಿಶ್ವಾಮಿತ್ರ
ಅಭಯ ಅಹಲ್ಯೆಗೆ ನೀಡುವ ಪಾತ್ರ
ಅಭಯ ಅಹಲ್ಯೆಗೆ ನೀಡುವ ಪಾತ್ರ  ಧರಿಸುವ ಹಾರಿಸುವ ಗಾತ್ರ
ರಾಮನ ಅವತಾರ ರಘುಕುಲ ಸೋಮನ ಅವತಾರ

ಧನುವೋ ಜನಕನ ಮಮತೆಯ ಕುಡಿಯೋ
ಸೀತೆಯ ಕನ್ಯಾ ಸಂಕಲೆಯೋ
ಧನುಜರ ಕನಸಿನ ಸುಖ ಗೋಪುರವೋ
ಧನುಜರ ಕನಸಿನ ಸುಖ ಗೋಪುರವೋ ಮುರಿವುದು ಮಿಥಿಲಾ ನಗರದಲಿ
ರಾಮನ ಅವತಾರ ರಘುಕುಲ ಸೋಮನ ಅವತಾರ
ಕಪಟನಾಟಕನ ಪಟ್ಟಾಭಿಷೇಕ ಉಪಟಳ ತಾತ್ಕಾಲಿಕ ಶೋಕ
ಭೀಕರ ಕಾನನವಾಸದ ಕುಹಕ  ಲೋಕೋದ್ಧಾರದ ಮೊದಲಂಕ
ಭರತಗೆ ಪಾದುಕೆ ನೀಡುವ ವೇಷ
ಭರತಗೆ ಪಾದುಕೆ ನೀಡುವ ವೇಷ ಗುರುಜನ ಭಕ್ತಿಯ ಆದೇಶ
ನರಲೋಕಕೆ ನವನಿಧಿ ಸಂತೋಷ
ನರಲೋಕಕೆ ನವನಿಧಿ ಸಂತೋಷ  ಭರವಸೆ ನೀಡುವ ಸಂದೇಶ
ರಾಮನ ಅವತಾರ ರಘುಕುಲ ಸೋಮನ ಅವತಾರ

ಆಹಾ..! ನೋಡದೋ ಹೊನ್ನಿನ ಜಿಂಕೆ
ಆಹಾ..! ನೋಡದೋ ಹೊನ್ನಿನ ಜಿಂಕೆ  ಹಾಳಾಗುವುದಯ್ಯೋ ಲಂಕೆ
ಹೆಣ್ಣಿದು ಶಿವನುರಿಗಣ್ಣೋ ಮಂಕೆ ಮಣ್ಣಾಗುವೆ ನೀ ನಿಶ್ಯoಕೆ
ಶರಣು ಶರಣು ಹೇ ಭಾಗವತ್ತೋತ್ತಮ ಕನ್ನಡ ಕುಲಪುoಗವ ಹನುಮ
ಮುದ್ರಿಕೆಯಲ್ಲಿದು ಸೋಹಮ್ ಬ್ರಹ್ಮ ಎಂಬುವ ಸತ್ಯವ ತಿಳಿಸಮ್ಮ
ಎಂಬುವ ಸತ್ಯವ ತಿಳಿಸಮ್ಮ
ರಾಮ ರಾಮ ಜಯ ರಾಮ ರಾಮ ಜಯ  ರಾಮ ರಾಮ ರಘುಕುಲ ಸೋಮ
ಸೀತೆಯ ಚಿಂತೆಗೆ ಪೂರ್ಣ ವಿರಾಮ ಲಂಕೆಯ ವೈಭವ ನಿರ್ನಾಮ
ಅಯ್ಯೋ ದಾನವ ಭಕ್ತಾಗ್ರೇಸರ ಆಗಲಿ ನಿನ್ನೀಕಥೆ ಅಮರ
ಮೆರೆಯಲಿ ಈ ಶುಭ ತತ್ವ ವಿಚಾರ ಪರಸತಿ ಬಯಕೆಯ ಸಂಹಾರ
ರಾಮನ ಅವತಾರ ರಘುಕುಲ ಸೋಮನ ಅವತಾರ
ರಾಮನ ಅವತಾರ ರಘುಕುಲ ಸೋಮನ ಅವತಾರ
--------------------------------------------------------------------------------------------------------------------------

ಭೂಕೈಲಾಸ (೧೯೫೮).....ಜಯ ಜಯ ಮಹಾದೇವಾ
ಸಂಗೀತ : ಆರ್.ಸುದರ್ಶನಂ-ಆರ್.ಗೋವರ್ಧನಮ್ ಸಾಹಿತ್ಯ : ಕು.ರಾ.ಸೀ  ಗಾಯನ : ಸಿ.ಎಸ.ಜಯರಾಮನ್ 


ಜಯ ಜಯ ಮಹಾದೇವಾ ಶಂಭೋ ಶಿವ ಶಂಕರ
ದೀನಜನ ಮಂದಾರ ಜ್ಞಾನವನ ಸಂಚಾರ
ಭಕ್ತವತ್ಸಲ ಬಾರ ನಿತ್ಯ ನಿರ್ಮಲ ತೋರಾ ನಿನ್ನ ರೂಪವ

ಸತ್ಯ ಸುಂದರ ಸ್ವಾಮಿ ಸತ್ಯ ಶೀಲರ ಪ್ರೇಮಿ
ಸತ್ಯ ಸುಂದರ ಸ್ವಾಮಿ ಸತ್ಯ ಶೀಲರ ಪ್ರೇಮಿ
ಅನ್ಯ ದೈವವ ಅರಿಯೆ ನಿನ್ನ ಪಾದವ ತೊರೆಯೇ 
ಸನ್ನತಾಂಗ ನಿನ್ನ ಸೌಮ್ಯ ರೂಪ ನೀ ತೋರು ಬಾ 
ಸನ್ನತಾಂಗ ನಿನ್ನ ಸೌಮ್ಯ ರೂಪ ನೀ ತೋರು ಬಾ

ದೇಹಿ ಎಂದರೆ ಕೋಟಿ ಫಲವೀವ ತಂದೆ ಪಾಹಿ ಎಂದರೆ
ದಿವ್ಯ ಪದತರುವೆಯಂತೆ ಸ್ನೇಹಮಯ ನಿನ್ನ ಶುಭನಾಮ
ಜಪವೊಂದೇ ನೇಮದಿಂದಾಚರಿಸಲಿ ವನಕೆ ಬಂದೆ
ಜಪವೊಂದೇ ನೇಮದಿಂದಾಚರಿಸಲಿ ವನಕೆ ಬಂದೆ

ವರವರ್ಷ ಧಾರೆಯನು ತರುವ ಕಾರ್ಮುಗಿಲೇ
ದುರೀತಾಂಧಕಾರವನು ಹರಿದೆಸೆವ ಹಗಲೇ
ಭರದಿಂದ ಮೈದೋರು ಭವ ಪಾಶ ನಾಶ
ಹರಹರ ಮಹಾದೇವಾ ಕೈಲಾಸವಾಸ
ಹರಹರ ಮಹಾದೇವಾ ಕೈಲಾಸವಾಸ

ಮೌನವೇನಿದು ಮಂಗಳಗಾನ ಬಿನ್ನಹ ಮನ್ನಿಸೆಯಾ
ಸೋಮಶೇಖರ ಪ್ರೇಮಸಾಗರ ಕೋರಿಕೆ ತೀರಿಸೆಯಾ
ತಾಳಲಾರೆನೋ ಫಾಲಲೋಚನ ಈ ಪರಿತಾಪವೇನಾ
ತಾಳಲಾರೆನೋ ಫಾಲಲೋಚನ ಈ ಪರಿತಾಪವೇನಾ
ಸಾಕು ಸಾಕಿ ಸಾವಧಾನದ ಬಿಂಕದ ಬಿನ್ನಾಣ
ಶಂಕರ ಶಿವ ಶಂಕರ ಪ್ರಳಯಂಕರ ಅಭಯಂಕರ
ಶಂಕರ ಶಿವ ಶಂಕರ ಪ್ರಳಯಂಕರ ಅಭಯಂಕರ
-------------------------------------------------------------------------------------------------------------------------

ಭೂಕೈಲಾಸ (೧೯೫೮).....ತರವೇ ವರದಾನ ಈ ನೀತಿ ಬಾಹಿರಗೆ
ಸಂಗೀತ : ಆರ್.ಸುದರ್ಶನಂ-ಆರ್.ಗೋವರ್ಧನಮ್ ಸಾಹಿತ್ಯ : ಕು.ರಾ.ಸೀ  ಗಾಯನ : 
ಸಿ.ಎಸ.ಜಯರಾಮನ್

ತರವೇ ವರದಾನ ಈ ನೀತಿ ಬಾಹಿರಗೆ
ಪರಮ ಪಾಪಿಗೆ ನೇಹವ ಬೀರುತ ನಿನೈತರೇ ದ್ರೋಹವ ನಾ ಗೈದೇನೋ
ಮೋಹಗೊಂಡು ಕಾಡು ಮಧಾಂಧನೆನ್ನ ದಹಿಸದೆ ದಯೆ ತೋರಲೇಕೋ ಹರ
ಮೋಹಗೊಂಡು ಕಾಡು ಮಧಾಂಧನೆನ್ನ ದಹಿಸದೆ ದಯೆ ತೋರಲೇಕೋ ಹರ

ಮಂಗಳ ದಾತೆಯ ಮಾತೆ ಪಾರ್ವತಿಯ ಮತಿ ಹೀನ ನಾ ಮೊಹಿಸೆ 
ಕಂಗಳನಲ್ಲೇ ಕೈಯ್ಯಾರ ಇರಿದು ಕಾಮಿಯ ಸೀಳದೇ  
ಆತನ ಬೇಡಿಕೆ ಏನಾದರೂ ದಾತ  ನೀ ನೀವುದೇ 
ಧೂರ್ತನೆನ್ನ ಕಡು ವಿರೋಧ ಚರಿಯ ಸಹಿಪುದೇ ಸುಗುಣಾಂತರಂಗ ಶಿವ 
ತರವೇ ವರದಾನ ಈ ನೀತಿ ಬಾಹಿರಗೆ 

ತಾಳೆನೋ ಸಲೆಗಳಿಸೆದ ಪಾಪ ಸಂತಾಪ ಸುಡಲಿ
ತಮ ಬಾಳೇನೋ ಕಡೆಗಾಣಿಸೋ ಇನ್ನಾದರೆನ್ನ ಪುಣ್ಯ ಹೀನ
ದೂರ್ಜಿವನ ಮಣ್ಣಾಯಿತು ಮತಿ ಇನ್ನೇತರ ಗತಿ ರೀತಿ
ಹೋಳಾಗಲಿ ತಲೆ ಇಲ್ಲೇ ಹಾಳಾಗಲೀ ತನುವಿಲ್ಲೇ
ತಾಳೆನೋ ಬಾಳಿಸೋ ಮನ್ನಿಸೋ ಮನ್ನಿಸೋ
ಶಿರವಾ ಸ್ವೀಕರಿಸೋ ದೇವಾ ಶಿರವಾ ಮಾಲೆಯೊಳು
ಇರಿಸೋ ಧರಿಸೋ ಪಾಪದ ಹೊರೆ ಇಳಿಸೋ ಅಳಿಸೋ
ಧನ್ಯನಾದೆ ನಿಲಂಧರ ನಿರಂತರ ಪುಣ್ಯಶೀಲ ನನ್ನೆದೆಯ
ನಂಜುಂಡ ವಿಷಪಾನಲೋಲ ನನ್ನೆದೆ ನಂಜುಂಡ ಶಿವ
ನಿನ್ನ ನಂಬಿ ನಿರ್ಮಲತೆಯ ಪೊಂದಿ
ನಿನ್ನ ನಂಬಿ ನಿರ್ಮಲತೆಯ ಪೊಂದಿ
ತರವೇ ವರದಾನ ಈ ನೀತಿ ಬಾಹಿರಗೆ
ಪರಮ ಪಾಪಿಗೆ ನೇಹವ ಬೀರುತ ನಿನೈತರೇ ದ್ರೋಹವ ನಾ ಗೈದೇನೋ
--------------------------------------------------------------------------------------------------------------------------

ಭೂಕೈಲಾಸ (೧೯೫೮).....ಬಾಲೆಯ ಹೃದಯವನಾವರಿಸಿರುವ
ಸಂಗೀತ : ಆರ್.ಸುದರ್ಶನಂ-ಆರ್.ಗೋವರ್ಧನಮ್ ಸಾಹಿತ್ಯ : ಕು.ರಾ.ಸೀ  ಗಾಯನ :ಪಿ.ಸುಶೀಲಾ 


ಬಾಲೆಯ ಹೃದಯವನಾವರಿಸಿರುವ
ಬಯಕೆಯ ತೀರಿಸೋ ಮಹಾನುಭಾವ
ಮನದಲಿ ಮೂಡಿದ ಅನನ್ಯ ಭಾವ
ಮನ್ನಿಸಿ ಕಾಯೋ ಮಹಾದೇವಾ

ತುಂಬಿಯ ಕಾಯುವ ತಾವರೆಯಂತೆ
ಅಂಬರ ನೋಡುವ ಚಾತಕದಂತೆ
ಹಂಬಲದುಂಬಿಗೇ ನಾ ಗುರಿಯಾಗಿಹೇ
ಬೆಂಬಲ ನೀಡೋ ಸದಾಶಿವಾ

ಮೂಡಿದ ಪ್ರೇಮಾಂಕುರವ ಬೆಳೆಸಿ
ಎದೆಯಾಳದ ಹಿರಿಯಾಸೆಯ ಸಲಿಸೋ
ನೋಡಿದ ಕೂಡಲೇ ಮನಸೋಲಿದ
ಹೃದೆಯೇಶನ ಸೇವೆಯ ನೀಡೋ
ಬಾಲೆಯ ಹೃದಯವನಾವರಿಸಿರುವ
ಬಯಕೆಯ ತೀರಿಸೋ ಮಹಾನುಭಾವ
ಮನದಲಿ ಮೂಡಿದ ಅನನ್ಯ ಭಾವ
ಮನ್ನಿಸಿ ಕಾಯೋ ಮಹಾದೇವಾ
-------------------------------------------------------------------------------------------------------------------------

ಭೂಕೈಲಾಸ (೧೯೫೮).....ಈ ದೇಹ ಮೂರೂ ದಿನ ಅಲ್ಲವೇನೋ
ಸಂಗೀತ : ಆರ್.ಸುದರ್ಶನಂ-ಆರ್.ಗೋವರ್ಧನಮ್ ಸಾಹಿತ್ಯ : ಕು.ರಾ.ಸೀ  ಗಾಯನ :ಎ.ಪಿ.ಕೋಮಲ 

ಈ ದೇಹ ಮೂರೂ ದಿನ ಅಲ್ಲವೇನೋ
ಮೃತ್ಯು ಸನ್ನಾಹ ಬೆನ್ನ ಹಿಂದೆ ಬಲ್ಲೆಯೇನೋ
ಅಷ್ಟರಲ್ಲಿ ಮಾನವ ಆದೇಯೇಕೋ ದಾನವ 

ಐಸಿರಿಗೆ ಆಳಾಗಿ ಬಾಳಲೇಕೋ
ಕೈಯಲ್ಲೇ ಕೈಲಾಸ ಕಾಣಬೇಕೇ
ಸುಖ ಸಂತೋಷ ಸಂಪೂರ್ಣ ಹೀರಬೇಕೇ
ಧರೆಯೆಲ್ಲ ಆಳುವ ಆಸೆಯೇಕೋ
ಯಮ ಕಿಂಕರು ಕಾದಿಹರು ಕಾನೆಯೇಕೋ
ಈ ದೇಹ ಮೂರೂ ದಿನ ಅಲ್ಲವೇನೋ

ಅತಿ ಆಸೆ ಮಾನವನ ಶತ್ರುವಂತೆ
ಲೋಕ ಹೀತವೊಂದೇ ಜೀವನದ ಸೂತ್ರವಂತೆ
ಕರೆದಲ್ಲೆ ಕಾಣುವ ದೇವನಂತೆ 
ಶಿವ ಶಂಕರ ಕೈ ಬಿಡದೆ ಕಾವನಂತೆ
ಈ ದೇಹ ಮೂರೂ ದಿನ ಅಲ್ಲವೇನೋ
ಮೃತ್ಯು ಸನ್ನಾಹ ಬೆನ್ನ ಹಿಂದೆ ಬಲ್ಲೆಯೇನೋ
ಅಷ್ಟರಲ್ಲಿ ಮಾನವ ಆದೇಯೇಕೋ ದಾನವ 
----------------------------------------------------------------------------------------------

ಭೂಕೈಲಾಸ (೧೯೫೮) - ನಾಕವನೇ ನಾಚಿಸುವಾ 
ಸಂಗೀತ : ಆರ್.ಸುದರ್ಶನಂ-ಆರ್.ಗೋವರ್ಧನಮ್ ಸಾಹಿತ್ಯ : ಕು.ರಾ.ಸೀ  ಗಾಯನ :ಪಿ.ಸುಶೀಲಾ 

----------------------------------------------------------------------------------------------

ಭೂಕೈಲಾಸ (೧೯೫೮) - 
ಸುಂದರಾಂಗ ಬಂದನೀಗ 
ಸಂಗೀತ : ಆರ್.ಸುದರ್ಶನಂ-ಆರ್.ಗೋವರ್ಧನಮ್ ಸಾಹಿತ್ಯ : ಕು.ರಾ.ಸೀ  ಗಾಯನ : ಭಗವತಿ 

----------------------------------------------------------------------------------------------

ಭೂಕೈಲಾಸ (೧೯೫೮) - ಕ್ಷೀರಾಭಿ ವರಧಾಮ 
ಸಂಗೀತ : ಆರ್.ಸುದರ್ಶನಂ-ಆರ್.ಗೋವರ್ಧನಮ್ ಸಾಹಿತ್ಯ : ಕು.ರಾ.ಸೀ  ಗಾಯನ : ವಸಂತಕುಮಾರಿ 

----------------------------------------------------------------------------------------------

ಭೂಕೈಲಾಸ (೧೯೫೮) - ದೂರ ನೀನಾದೆ 
ಸಂಗೀತ : ಆರ್.ಸುದರ್ಶನಂ-ಆರ್.ಗೋವರ್ಧನಮ್ ಸಾಹಿತ್ಯ : ಕು.ರಾ.ಸೀ  ಗಾಯನ :ಪಿ.ಸುಶೀಲಾ, ಎ.ಎಂ.ರಾಜ  

----------------------------------------------------------------------------------------------

ಭೂಕೈಲಾಸ (೧೯೫೮) - ಈ ರಾತ್ರಿ ಮಹಾರಾತ್ರಿ
ಸಂಗೀತ : ಆರ್.ಸುದರ್ಶನಂ-ಆರ್.ಗೋವರ್ಧನಮ್ ಸಾಹಿತ್ಯ : ಕು.ರಾ.ಸೀ  ಗಾಯನ :ಪಿ.ಸುಶೀಲಾ 

---------------------------------------------------------------------------------------------

No comments:

Post a Comment