569. ಮುತ್ತಿನಂತ ಅತ್ತಿಗೆ (1982)

ಮುತ್ತಿನಂತ ಅತ್ತಿಗೆ ಚಲನಚಿತ್ರದ ಹಾಡುಗಳು
  1. ರೇಡಿಯೊ ರಂಗಮ್ಮ
  2. ನಾ ಮರದ ಕೋಗಿಲೆ
  3. ಮೋಹನ ರೂಪ
  4. ಆಹ್..ಆಹಾಹ್.. (ಇದಕ್ಕೆ ಸಾಹಿತ್ಯವಿಲ್ಲ)
ಮುತ್ತಿನಂತ ಅತ್ತಿಗೆ (1982) - ರೇಡಿಯೊ ರಂಗಮ್ಮ
ಸಂಗೀತ : ರಮೇಶ್ ನಾಯ್ಡು, ಸಾಹಿತ್ಯ: ಆರ್.ಏನ್.ಜಯಗೋಪಾಲ್, ಗಾಯನ : ಆರ್.ಏನ್.

ಜಯಗೋಪಾಲ್ ಮತ್ತು ಎಸ್.ಪಿ.ಶೈಲಜಾ   

ಹೆಣ್ಣು : ರೇಡಿಯೋ ರಂಗಮ್ಮ ಬಂದಳು ನೋಡಮ್ಮ
           ಹಾದಿ ಬೀದಿ ಸುದ್ದಿ ತಂದಳು ಕೇಳಮ್ಮ
           ಬಾಯೆಲ್ಲ ಹೊಲಸು ನರಿಯಂತ ಮನಸು
          ಕಂಡೋರಾ ಮನೆ ಹಾಳು ಮಾಡುವಳಮ್ಮ
ಗಂಡು : ಅಕ್ಕಯ್ಯಾ ಅಯಯ್ಯೋ ಅಕ್ಕಯ್ಯಾ ಅಯಯ್ಯೋ

ಹೆಣ್ಣು : ಲಂಕಿಣಿ ಹುಟ್ಟಿದ ದಿನವೇ..
ಕೋರಸ್: ಲಂಕೆಗೆ ಹಾನಿ ಬಂತಂತೆ
ಹೆಣ್ಣು: ಈ ಯಮ್ಮ ಕಾಲಿಟ್ಟ ದಿನವೇ,
ಕೋರಸ್: ಕೇರಿಗೆ ಬಂತು ಕೇಡಂತೆ
ಹೆಣ್ಣು: ಹೃದಯವೇ ಇಲ್ಲದ ಈ ಮಣ್ಣು ಬೊಂಬೆ
            ಬದಲಾಗೋದು ಹೇಗಂತೆ
            ಮೋಸದಿ ಇಲ್ಲದ ಈ ವಿಷ ರೋಗ ಗುಣ
            ಮಾಡೋದು ಹೇಗಂತೆ
ಗಂಡು : ಹೆಳ್ಲಾ ಅಕ್ಕಯ್ಯ
ಹೆಣ್ಣು : ಹೇಳು ತಮ್ಮಯ್ಯ
ಗಂಡು :  ಚೀ.. ಕಾಗೆ ಎಂದು ಕಾಗೇನೆ ಡೊಂಕು ತಿಮ್ಮಾ
             ಕೋಗಿಲೆ ಆಗದೆಂದು ಡೊಂಕುತಿಮ್ಮಾ
             ಕಾಗೆ ಎಂದು ಕಾಗೇನೆ ಡೊಂಕು ತಿಮ್ಮಾ
             ಕೋಗಿಲೆ ಆಗದೆಂದು ಡೊಂಕುತಿಮ್ಮಾ
             ಕೆಟ್ಟ ಬಾಯಿಗೆಂದೂ ಬೀಗ ಹಾಕಬೇಕು
             ಬುದ್ಧಿ ಕಲ್ಸಿ ದೊಣ್ಣೆ ಪೂಜೆ ಮಾಡಬೇಕು
             ಅಕ್ಕಯ್ಯಾ ಅಯಯ್ಯೋ ಹೇಗಿದೆ ಅಕ್ಕಯ್ಯ ಅಹ್ಹಹ..
ಕೋರಸ್: ರೇಡಿಯೋ ರಂಗಮ್ಮ ಬಂದಳು ನೋಡಮ್ಮ
           ಹಾದಿ ಬೀದಿ ಸುದ್ದಿ ತಂದಳು ಕೇಳಮ್ಮ
           ಬಾಯೆಲ್ಲ ಹೊಲಸು ನರಿಯಂತ ಮನಸು
          ಕಂಡೋರಾ ಮನೆ ಹಾಳು ಮಾಡುವಳಮ್ಮ ...

ಹೆಣ್ಣು : ಒಂದು ಬಿಂದಿಗೆ ಹಾಲಿಗೆ
ಕೋರಸ್: ಹನಿ ಹುಳಿ ಬೆರೆತರೆ ಹಾಲಂತೆ
ಹೆಣ್ಣು: ಒಂದು ಹೆಣ್ಣಿನ ಬಾಳೆಲ್ಲ
ಕೋರಸ್ : ಗಾಳಿ ಮಾತಿಂದ ಹಾಳಂತೆ
ಹೆಣ್ಣು ,: ಶ್ರೀಮಂತಳಾದ ಮಾತ್ರ ಈ ಒಣ ಜಂಬ
           ಈ ಪೊಗರೆಲ್ಲಾ ಏಕಂತೆ
          ಸೀತಮ್ಮ ಸಾವಿತ್ರಿ ಹುಟ್ಟಿದ ನಾಡಲ್ಲಿ
          ಹೆಣ್ಣು ಮನೆ ಬೆಳಕಾಗಬೇಕಂತೆ
ಗಂಡು : ಅಯ್ಯೊ ನಾಯಿ ಬಾಲ ಡೊಂಕಂತೆ ಡೊಂಕುತಿಮ್ಮ
            ನೆಟ್ಟಗಾಗದೆಂದೂನು ಡೊಂಕುತಿಮ್ಮ
            ನಾಯಿ ಬಾಲ ಡೊಂಕಂತೆ ಡೊಂಕುತಿಮ್ಮ
            ನೆಟ್ಟಗಾಗದೆಂದೂನು ಡೊಂಕುತಿಮ್ಮ
            ಮೆಟ್ಟಿದ ದೆವಕ್ಕೆ ಚಪ್ಪಲಿ ಪೂಜೆ ಪೊರಕೆ ಸೇವೆಯೆ
            ಸರಿಯಮ್ಮ ಅಹ್ಹಹ..
             ಅಕ್ಕಯ್ಯಾ ಅಯಯ್ಯೋ ಅಕ್ಕಯ್ಯಾ ಅಯಯ್ಯೋ
 ಕೋರಸ್:  ರೇಡಿಯೋ ರಂಗಮ್ಮ ಬಂದಳು ನೋಡಮ್ಮ
                ಹಾದಿ ಬೀದಿ ಸುದ್ದಿ ತಂದಳು ಕೇಳಮ್ಮ
                ಬಾಯೆಲ್ಲ ಹೊಲಸು ನರಿಯಂತ ಮನಸು
                ಕಂಡೋರಾ ಮನೆ ಹಾಳು ಮಾಡುವಳಮ್ಮೇ
                ಅಹ್ಹಹ...ಅಹ್ಹಹ....ಅಹ್ಹಹ

--------------------------------------------------------------------

ಮುತ್ತಿನಂತ ಅತ್ತಿಗೆ (1982) - ಮಾಮರದಿ‌ ಕೋಗಿಲೆ ಹಾಡು
ಸಂಗೀತ : ರಮೇಶ್ ನಾಯ್ಡು, ಸಾಹಿತ್ಯ: ಆರ್.ಏನ್.ಜಯಗೋಪಾಲ್, ಗಾಯನ : ಎಸ್.ಪಿ.ಶೈಲಜಾ, ಕೆ.ಜೆ.ಏಸುದಾಸ

ಹೆಣ್ಣು: ಮಾಮರದಿ ಕೋಗಿಲೆ ಹಾಡು
          ಹೂವು ಅರಳಿ ನಕ್ಕಿದೆ ನೋಡು
          ಪ್ರೇಮಕ್ಕೆ ಕಾಲ ಬಂತೀಗ ಸಂಗಾತಿ ಮೌನ ಏಕೀಗ..
ಗಂಡು: ಮಾಮರದೇ ಕೋಗಿಲೆ ಹಾಡು
            ಆತುರದ ಲಕ್ಷಣ ನೋಡು
            ಇನ್ನೂನೂ ಚೈತ್ರ ಬಂದಿಲ್ಲ ಚಳಿಗಾಲ ಇನ್ನೂ ಹೋಗಿಲ್ಲ

ಹೆಣ್ಣು: ಕಣ್ಣಲೇ ಬರೆದಂತ ಈ ಗೀತೆ
           ಈ ನನ್ನ ನೂರಾಸೇ ಮಾತಂತೇ
ಗಂಡು: ಓದೋಕೆ ಕಲಿತಿಲ್ಲ ಈ ಬಾಷೆ
           ಅದರಿಂದ ಬೆಳೆದಿಲ್ಲ ನಿನ್ನಾಸೇ...
ಹೆಣ್ಣು: ಆ.. ಪಾಠ ಹೇಳಿ ಕೋಡಲೇನೂ.   
           ಆ.. ಪಾಠ ಹೇಳಿ ಕೋಡಲೇನೂ
ಗಂಡು: ಕಾಣಿಕೆ ಕೊಡಲಾರೆ ನಾನೇನೂ...
ಹೆಣ್ಣು: ಮಾಮರದಿ ಕೋಗಿಲೆ ಹಾಡು
          ಹೂವು ಅರಳಿ ನಕ್ಕಿದೆ ನೋಡು
          ಪ್ರೇಮಕ್ಕೆ ಕಾಲ ಬಂತೀಗ ಸಂಗಾತಿ ಮೌನ ಏಕೀಗ..
ಗಂಡು: ಮಾಮರದೇ ಕೋಗಿಲೆ ಹಾಡು
            ಆತುರದ ಲಕ್ಷಣ ನೋಡು
            ಇನ್ನೂನೂ ಚೈತ್ರ ಬಂದಿಲ್ಲ ಚಳಿಗಾಲ ಇನ್ನೂ ಹೋಗಿಲ್ಲ

ಹೆಣ್ಣು: ದಾಹಕ್ಕೆ ಈ ಹೊಳೆಯ ನೀರೂಂಟು
           ಮೋಹಕ್ಕೆ ಜೋತೆಗಾರ ನೀನೂಂಟೂ....
ಗಂಡು: ಎಲ್ಲಿಂದ ಬಂತಪ್ಪ ಈ ನಂಟು
            ಬೀಡಿಸೋಕೆ ಆಗದ ಈ ಗಂಟು
ಹೆಣ್ಣು:  ಈ ಬಂಧ ಇದು ಆನಂದ...
            ಈ ಬಂಧ ಇದು ಆನಂದ...
ಗಂಡು: ತಪ್ಪಲು ಆಗದು ನಿನ್ನಿಂದ..
ಹೆಣ್ಣು: ಮಾಮರದಿ ಕೋಗಿಲೆ ಹಾಡು
          ಹೂವು ಅರಳಿ ನಕ್ಕಿದೆ ನೋಡು
          ಪ್ರೇಮಕ್ಕೆ ಕಾಲ ಬಂತೀಗ ಸಂಗಾತಿ ಮೌನ ಏಕೀಗ..
ಗಂಡು: ಮಾಮರದೇ ಕೋಗಿಲೆ ಹಾಡು...ಆಆಆ..
            ಆತುರದ ಲಕ್ಷಣ ನೋಡು (ಹೂಂಹೂಂ)
            ಇನ್ನೂನೂ ಚೈತ್ರ ಬಂದಿಲ್ಲ ಚಳಿಗಾಲ ಇನ್ನೂ ಹೋಗಿಲ್ಲ
--------------------------------------------------------------------

ಮುತ್ತಿನಂತ ಅತ್ತಿಗೆ (1982) - ಮೋಹನ ರೂಪ
ಸಂಗೀತ : ರಮೇಶ್ ನಾಯ್ಡು, ಸಾಹಿತ್ಯ: ಆರ್.ಏನ್. ಜಯಗೋಪಾಲ್, ಗಾಯನ : ಏಸ್.ಪಿ.ಶೈಲಜಾ, ಪೂರ್ಣ ಚಂದ್ರ, ಕೃಷ್ಣಮೂರ್ತಿ

ಗಂಡು: ಮೋಹನ ರೂಪ ಶ್ರೀರಾಮ ಮಂಗಳ ರೂಪಿಣಿ ಸೀತವ್ವ
            ನೆಲೆಸಿಹ ತಾಣವೇ ಗುಡಿಯಮ್ಮಾ....
ಹೆಣ್ಣು: ಮೋಹನ ರೂಪ ಶ್ರೀರಾಮ ಮಂಗಳ ರೂಪಿಣಿ ಸೀತವ್ವ
            ನೆಲೆಸಿಹ ತಾಣವೇ ಗುಡಿಯಮ್ಮಾ....

ಗಂಡು: ಶ್ರೀರಾಮಚಂದ್ರನೇ ಅಣ್ಣಯ್ಯನೂ
           ಸೀತಮ್ಮಾ ನಮ್ಮಾ ಅತ್ತಿಗೆಯೂ
ಇಬ್ಬರು: ಶ್ರೀರಾಮಚಂದ್ರನೇ ಅಣ್ಣಯ್ಯನೂ
           ಸೀತಮ್ಮಾ ನಮ್ಮಾ ಅತ್ತಿಗೆಯೂ
ಗಂಡು: ಬಂದಿಹ ಸಹಿತ ಮೂವರು ನಾವೂ ರಘುನಾಮನವನ
            ಒಡಹುಟ್ಟಿದವರೂ..
ಚಂದ್ರ:  ನಾನೇ ಹನುಮಂತ ಭಂಟದ ಭಂಟ ಈ
             ಮನೆಗೆಂದೆಂದೂ ನಂಬಿದ ನಂಟ..
             ಈ ಮನೆಗೆಂದೆಂದೂ ನಂಬಿದ ನಂಟ..
ಇಬ್ಬರು: ಮೋಹನ ರೂಪ ಶ್ರೀರಾಮ ಮಂಗಳ ರೂಪಿಣಿ ಸೀತವ್ವ
             ನೆಲೆಸಿಹ ತಾಣವೇ ಗುಡಿಯಮ್ಮಾ...

ಗಂಡು: ಅಣ್ಣನ ಮಾತನೂ ಮೀರೇವೂ ನಾವೂ..
           ನಾವೇ ಎಲ್ಲರ ಆದರ್ಶ...
ಹೆಣ್ಣು: ಅಣ್ಣನ ಮಾತನೂ ಮೀರೇವೂ ನಾವೂ..
           ನಾವೇ ಎಲ್ಲರ ಆದರ್ಶ...
ಗಂಡು: ಅತ್ತಿಗೆ ಮಡಿಲ ಮಕ್ಕಳು ನಾವೂ..
           ಅವಳ ನುಡಿಗೇ ಆದೇಶ
           ಕಲೆತು ಬೆರೆತು ನಗುತಾ‌ ನಲಿದು
           ಒಂದಾಗಿರುವುದೇ ಸಂತೋಷ...
           ಒಂದಾಗಿರುವುದೇ ಸಂತೋಷ...
ಎಲ್ಲರು: ಮೋಹನ ರೂಪ ಶ್ರೀರಾಮ ಮಂಗಳ ರೂಪಿಣಿ ಸೀತವ್ವ
             ನೆಲೆಸಿಹ ತಾಣವೇ ಗುಡಿಯಮ್ಮಾ...

ಗಂಡು: ಹೊಸ ಮದುಮಗನು ಅಣ್ಣಯ್ಯ.. ಇಂದೂ
           ಹಣೆಗೆ ಕುಂಕುಮ ಹಚ್ಚಿರಿ ಬಂದೂ...
ಹೆಣ್ಣು: ಹಣೆಗೆ ಕುಂಕುಮ ಹಚ್ಚಿರಿ ಬಂದೂ...
ಗಂಡು: ಹಾರವ ಹಾಕಿ ಕೈಯಲ್ಲಿ ಕೈಯಿಡಿಸಿ
           ಆರತಿಯಾ ಬೆಳಗಿ ಶುಭ ಹಾರೈಸೀ...
ಎಲ್ಲರು: ಹಾರವ ಹಾಕಿ ಕೈಯಲ್ಲಿ ಕೈಯಿಡಿಸಿ
           ಆರತಿಯಾ ಬೆಳಗಿ ಶುಭ ಹಾರೈಸೀ... ಶುಭ ಹಾರೈಸೀ...
           ಜಯಜಯರಾಮ ಜಾನಕೀ ರಾಮ
           ಪಾವನ ನಾಮ ಪಟ್ಟಾಭೀ ರಾಮ..
           ಜಯಜಯರಾಮ ಜಾನಕೀ ರಾಮ
           ಪಾವನ ನಾಮ ಪಟ್ಟಾಭೀ ರಾಮ..
           ಜಯಜಯರಾಮ ಜಾನಕೀ ರಾಮ
           ಪಾವನ ನಾಮ ಪಟ್ಟಾಭೀ ರಾಮ..
--------------------------------------------------------------------

ಮುತ್ತಿನಂತ ಅತ್ತಿಗೆ (1982) - ಅಹ್ಜಹ.. ಅಹಾಹ 
ಸಂಗೀತ : ರಮೇಶ್ ನಾಯ್ಡು, ಸಾಹಿತ್ಯ: ಆರ್.ಏನ್.ಜಯಗೋಪಾಲ್, ಗಾಯನ : ಆರ್.ಏನ್.
ಜಯಗೋಪಾಲ್ ಮತ್ತು ಎಸ್.ಪಿ.ಶೈಲಜಾ

ಈ ಹಾಡಿಗೇ ಸಾಹಿತ್ಯವಿಲ್ಲ...

--------------------------------------------------------------------

No comments:

Post a Comment