570. ಋತುಗಾನ (1977)

ಋತುಗಾನ ಚಲನಚಿತ್ರದ ಹಾಡುಗಳು 

  1. ಋತುಗಾನ ನವ ಋತುಮಾನ ಫಲಿಸಿತು
  2. ಈ ಹೆಜ್ಜೆಗೇ ಒಲಿದ ಗೆಜ್ಜೆಯ ನಾದ 
  3. ಅಭಿನಯ ರಸರಾಗ 
  4. ದಾನಕ್ಕಿಂತ ದೊಡ್ಡದ್ದಲ್ಲ 
ಋತುಗಾನ (1977) - ಋತುಗಾನ ನವ ಋತುಮಾನ ಫಲಿಸಿತುಸಂಗೀತ: ಗುಣಸಿಂಗ್ ಸಾಹಿತ್ಯ: ಜಯದೇವ್ ಕುಮಾರ್  ಹಾಡಿದವರು: ಎಂ.ಬಾಲಮುರಳಿ ಕೃಷ್ಣ

ಆಆಆ... ಆಆಆ... ಆಆಆ... ಆಆಆ...
ಋತುಗಾನ ನವ ಋತುಮಾನ ಫಲಿಸಿತು ಪ್ರಕೃತಿ ಶುಭಸಂಧಾನ
ಋತುಗಾನ ನವ ಋತುಮಾನ ಫಲಿಸಿತು ಪ್ರಕೃತಿ ಶುಭಸಂಧಾನ
ಋತುಗಾನ ನವ ಋತುಮಾನ

ಕೋಗಿಲೆ ಕೊರಳಿಂದ ಕೊಳಲುಲಿ ಗಾನ ಹರಿಯುವ ಜಲದಿಂದ ನಾಟ್ಯವಿಧಾನ
ಕೋಗಿಲೆ ಕೊರಳಿಂದ ಕೊಳಲುಲಿ ಗಾನ ಹರಿಯುವ ಜಲದಿಂದ ನಾಟ್ಯವಿಧಾನ
ಬೆಳಗಿತು ಕಲೆಯ ಚೆಲುವ ಚೇತನ ಬೆಳೆಯಿತು ಒಲುಮೆಯ ಪುನೀತ ಪಾವನ
ಋತುಗಾನ ನವ ಋತುಮಾನ

ವಿಕಸಿತ ಹೂವದು ಹೇಳಿತು ಗುರಿಯ ಬನದ ಬಾನಾಡಿ ತೋರಿತು ದಾರಿಯ
ವಿಕಸಿತ ಹೂವದು ಹೇಳಿತು ಗುರಿಯ ಬನದ ಬಾನಾಡಿ ತೋರಿತು ದಾರಿಯ
ಕಡಲಿನ ಅಲೆಯು ಕಲಿಸಿತು ಕಲೆಯ ಗಿರಿಯ ಶಿಖರವು ತಿಳಿಸಿತು ನೆಲೆಯ
ಸಿಂಧು ತಾ ಸಿಂಧು ಆಗಬೇಕಿಂದು ಮುಂದೋಡಲಂದು ಸಾಗರವು ಇಂದು
ಒಂದರಾ ಹಿಂದೊಂದು ಭಾವಗಳು ಬಂದು ಮಂದಿರದಿ ತಾನಿಂದು ಕಲೆಯಾಯಿತಿಂದು
ಋತುಗಾನ ನವ ಋತುಮಾನ

ನಿದ ಪಮಗಪ ಗಮಪಮ ಗರಿನಿಸ
ಶಶಿಯು ಮರವಾಗಿ ಮೊಗ್ಗು ಹೂವಾಗಿ ಕಾಯಿ ಹಣ್ಣಾಗಿ ಕಾಲದಾ ನಡೆಗೆ
ಶಶಿಯು ಮರವಾಗಿ ಮೊಗ್ಗು ಹೂವಾಗಿ ಕಾಯಿ ಹಣ್ಣಾಗಿ ಕಾಲದಾ ನಡೆಗೆ
ಸೇವೆ ನೆರವಾಗಿ ಸಾಧನೆ ಜಿತವಾಗೆ ಬದುಕು ಅಲೆದು ಬಯಕೆ ಬೆಳಕಿನಡೆಗೆ
ಋತುಗಾನ ನವ ಋತುಮಾನ ಫಲಿಸಿತು ಪ್ರಕೃತಿ ಶುಭಸಂಧಾನ
ಋತುಗಾನ ನವ ಋತುಮಾನ
----------------------------------------------------------------------------------------------------------------------

ಋತುಗಾನ (1977) - ಈ ಗೆಜ್ಜೆಯ ನಾದ
ಸಂಗೀತ: ಗುಣಸಿಂಗ್ ಸಾಹಿತ್ಯ: ಜಯದೇವ್ ಕುಮಾರ್  ಹಾಡಿದವರು: ಕಸ್ತೂರಿ ಶಂಕರ

ಈ ಹೆಜ್ಜೆಗೆ ಒಲಿದ ಗೆಜ್ಜೆಯ ನಾದ ಆಯಿತು ನಿನಗೇ ಒಡಕುಲಿ ನಾದ...
ನಾಕ್ಯಾರ ನವಿಲ ನೀನೇ ಸಲುಹಿದೇ .. ಹಾಡಲೂ ಬಿಡದೇ ಮುನಿದೇ
ಏಕೇ  ನೀ ತೊರೆದೇ.. 

ಆರುವ ಹಣತೆಯಲಿ ಎಣ್ಣೆಯ ನೀನೆರೆವೇ ಬೆಳಗುವ ಕಾಲದಲೀ ನೆನೆದ ಬತ್ತಿಯೂ  ನೀ ಸೆಳೆದೇ
ಆರದು ಈ ಹಣತೆ ಉರಿಯುವ ಛಲವಿಂದ ಬೆಳಗುತ ನೀಡುವುದೂ ನಿನಗೆ ನಿತ್ಯದ ಆನಂದ
ತೋರುವುದೀ ಜೀವನದ ಜಾಡಿನ ಅನುಬಂಧ

ಗುಡುಗಿಯೂ ಮೋಡ ಹನಿಯಲೇ ಬೇಕೂ ಕಟುಕರ ಮಂಜೂ ಕರಗಲೇಬೇಕು
ಉರುಳಿದೇ ಋತುವೂ...  ಮರೆಯಲೇ ಬೇಕೂ .. ಕರಗಿದ ಮನವೂ ಮೂಡಲೇ ಬೇಕೂ ..
ನಾನೇಡೆವ  ನೀ ನೊಲಿವ ಕಾಲವೂ ಬರಬೇಕು
ಈ ಹೆಜ್ಜೆಗೆ ಒಲಿದ ಗೆಜ್ಜೆಯ ನಾದ ಆಯಿತು ನಿನಗೇ ಒಡಕುಲಿ ನಾದ...
ನಾಕ್ಯಾರ ನವಿಲ ನೀನೇ ಸಲುಹಿದೇ .. ಹಾಡಲೂ ಬಿಡದೇ ಮುನಿದೇ
ಏಕೇ  ನೀ ತೊರೆದೇ..
----------------------------------------------------------------------------------------------------------------------

ಋತುಗಾನ (1977) - ಅಭಿನಯ ರಸರಾಗ
ಸಾಹಿತ್ಯ: ಜಯದೇವ್ ಕುಮಾರ್ ಸಂಗೀತ: ಗುಣಸಿಂಗ್ ಹಾಡಿದವರು: ಎಸ್.ಜಾನಕೀ

ಅಭಿನಯ ರಸರಾಗ ರಂಜನೇ.. ಸ್ವರ ಸಾಹಿತ್ಯ ಲಯ ಸಾಧನೇ ನಿವೇದನೇ ..
ಅಭಿನಯ ರಸರಾಗ ರಂಜನೇ.. ಸ್ವರ ಸಾಹಿತ್ಯ ಲಯ ಸಾಧನೇ ನಿವೇದನೇ ..
ಅಭಿನಯ ರಸರಾಗ ರಂಜನೇ..

ಭಾವ ಭಾವದಲೀ ಅಮೃತ ಸಂಚಾರ ಅನುನಯ ಧನಿಕನೇ ಸಾಕ್ಷಾತ್ಕಾರ
ಪರಮ ಶೃಂಗಾರ... ಆಆಆ ... ಆಆಆ...
ಪರಮ ಶೃಂಗಾರ ಹಾಸ್ಯದ ತೀರ ವಜ್ರ್ಯಾಂಕಿತ  ನವರಸ ನಾಟ್ಯ ತಾರಾ
ವಜ್ರ್ಯಾಂಕಿತ  ನವರಸ ನಾಟ್ಯ ತಾರಾ
ಅಭಿನಯ ರಸರಾಗ ರಂಜನೇ.. ಸ್ವರ ಸಾಹಿತ್ಯ ಲಯ ಸಾಧನೇ ನಿವೇದನೇ ..
ಅಭಿನಯ ರಸರಾಗ ರಂಜನೇ..

ರಾಸಕ್ರೀಡೆಯ ಲಹರಿಯ ಸಂಧಾನ ತಾಂಡವ ನೃತ್ಯದ ಕಲಾ ವಿನೂತನ
(ಧೀಮ್ ಧೀಮ್ ತಕಿಟ ತಾಮ್ ಧೀಮ್ ತಕಿಟ ತರಿಕಿಟ ತೋಮ )
ಮಧುರ ಪಾನ ಘನ  ತಿಲ್ಲಾಣ ಸುವಿಗಾನ ತನನ  ಧೀಮ್ ಧೀರನ ತಿಲ್ಲಾಣ
(ತತ ತರಗಿಡತೊಂ ತರಗಿಡತೊಂ ತಕಧಿನ ತತಧಿಮ್ ) ಆಆಆ.. ಆಆಆ..
ಮಧುರ ಪಾನ ಘನ  ತಿಲ್ಲಾಣ ಸುವಿಗಾನ ಬರುವ ಆನಂದಕೆ ಹೃದಯದ ನಮನ
ಬರುವ ಆನಂದಕೆ ಹೃದಯದ ನಮನ
ಅಭಿನಯ ರಸರಾಗ ರಂಜನೇ.. ಸ್ವರ ಸಾಹಿತ್ಯ ಲಯ ಸಾಧನೇ ನಿವೇದನೇ ..
ಅಭಿನಯ ರಸರಾಗ ರಂಜನೇ..
(ಧಿಧಿಗೀತ ಧೀಮತನ ತಾಳ ಮೃದಂಗ ಜನನ ಜಂಗ್ರೂಧೀ ಗತಿ ಸ್ವರ ಶೃತಿ ಸಂಗ )
ನೀನಿದ ನೀನಿದ ನಿರಿಗರಿಸನಿಪಮಗಮರಿಸ   ದಪದನಿಸ ಗಪದನಿಸ
ಧಿಮಿಕಿಟ ಧೀಮತನ ತಾಳ ಮೃದಂಗ ಜನನ ಝಮ್ಕೃತಿ ಸತಿ ಸ್ವರ ಶೃತಿ ಸಂಗ
ಮಿಡಿತು ನವರಾಗ ಪಡೆದು ಅಂಗಾಂಗ ಹಿತದೊಳಾಗಿತೇ ಜಗರಂಗ ಅದರ ಈಗ
ಅಭಿನಯ ರಸರಾಗ ರಂಜನೇ.. ಸ್ವರ ಸಾಹಿತ್ಯ ಲಯ ಸಾಧನೇ ನಿವೇದನೇ ..
ಅಭಿನಯ ರಸರಾಗ ರಂಜನೇ..
----------------------------------------------------------------------------------------------------------------------

ಋತುಗಾನ (1977) - ದಾನಕ್ಕಿಂತ ದೊಡ್ಡದಿಲ್ಲ 
ಸಂಗೀತ: ಗುಣಸಿಂಗ್ ಸಾಹಿತ್ಯ: ಜಯದೇವ್ ಕುಮಾರ್ ಸಂಗೀತ: ಗುಣಸಿಂಗ್ ಹಾಡಿದವರು: ಎಸ್.ಪಿ.ಬಿ, ಎಲ್.ಆರ್ .ಅಂಜಲಿ 

ಗಂಡು : ದಾನಕ್ಕಿಂತ ದೊಡ್ಡದಿಲ್ಲ ದಾನ ಮಾಡಿ ಕೆಟ್ಟೋರಿಲ್ಲ ದಾನವೇ ದೇವರೂ ದಾನ ಮಾಡಿರೆಲ್ಲಾ..
           ದಯವೇ ತಾಯೀ ಧರ್ಮವೇ ತಂದೆ ದಯ ಧರ್ಮ ತೋರಿ ದೀನರೂ ನಾವೆಂದೇ
ಹೆಣ್ಣು : : ದಾನಕ್ಕಿಂತ ದೊಡ್ಡದಿಲ್ಲ ದಾನ ಮಾಡಿ ಕೆಟ್ಟೋರಿಲ್ಲ ದಾನವೇ ದೇವರೂ ದಾನ ಮಾಡಿರೆಲ್ಲಾ..
           ದಯವೇ ತಾಯೀ ಧರ್ಮವೇ ತಂದೆ ದಯ ಧರ್ಮ ತೋರಿ ದೀನರೂ ನಾವೆಂದೇ
ಇಬ್ಬರು : ದಾನಕ್ಕಿಂತ ದೊಡ್ಡದಿಲ್ಲ ದಾನ ಮಾಡಿ ಕೆಟ್ಟೋರಿಲ್ಲ...

ಹೆಣ್ಣು : ದೀನರಾದರೂ ನಾವು ಬಿಕ್ಷೆಯ ಬೇಡಲ್ಲಾ
ಗಂಡು : ಮಾಲಿಸುವ ಕಲೆಯ ಕಾಯಕ ನಮದೆಲ್ಲಾ..
ಹೆಣ್ಣು : ದೀನರಾದರೂ ನಾವು ಬಿಕ್ಷೆಯ ಬೇಡಲ್ಲಾ
ಗಂಡು : ಮಾಲಿಸುವ ಕಲೆಯ ಕಾಯಕ ನಮದೆಲ್ಲಾ..
ಹೆಣ್ಣು : ದಾನಿಗಳೂ ನೀವೆಂದೂ ಅಭಿಮಾನ ಬೇಡ...
ಗಂಡು : ಆಆಆ.. ದಾನಿಗಳೂ ನೀವೆಂದೂ ಅಭಿಮಾನ ಬೇಡ...
ಹೆಣ್ಣು : ದೀನರ ಕಲೆ ಮೆಚ್ಚಿ ಕೇಳ ಬನ್ನೀ ಹಾಡ
ಗಂಡು : ದಾನಕ್ಕಿಂತ ದೊಡ್ಡದಿಲ್ಲ ದಾನ ಮಾಡಿ ಕೆಟ್ಟೋರಿಲ್ಲ...

ಗಂಡು : ದಾನದಲ್ಲಿ ಶೂರ ಆ ಕರ್ಣ ಸೂರ್ಯ ತೇಜಾ ..
ಹೆಣ್ಣು : ದಾನದಲ್ಲಿ ವೀರ ಶಿಬಿ ಮಹಾರಾಜ
ಗಂಡು : ದಾನದಲ್ಲಿ ಶೂರ ಆ ಕರ್ಣ ಸೂರ್ಯ ತೇಜಾ ..
ಹೆಣ್ಣು : ದಾನದಲ್ಲಿ ವೀರ ಶಿಬಿ ಮಹಾರಾಜ
ಗಂಡು : ದಾನದಲ್ಲಿ ಧೀರ ಬಲಿ ಚಕ್ರವರ್ತಿ
ಹೆಣ್ಣು : ಆಆಆ.. ದಾನದಲ್ಲಿ ಧೀರ ಬಲಿ ಚಕ್ರವರ್ತಿ
          ದಾನ ಮಾಡಿ ನೀವೂ ಪಡಕೊಳ್ಳಿ ಕೀರ್ತಿ..
ಇಬ್ಬರು : ದಾನಕ್ಕಿಂತ ದೊಡ್ಡದಿಲ್ಲ ದಾನ ಮಾಡಿ ಕೆಟ್ಟೋರಿಲ್ಲ...

ಗಂಡು : ಈ ಹಾಡು ಕುಣಿತ ನಮ್ಮ ಹೊಟ್ಟೆಪಾಡು ಇಂದು ಇಲ್ಲಿ ನಾಳೇ ಎಲ್ಲೋ ನಮ್ಮ ಗೂಡು
            ಈ ಹಾಡು ಕುಣಿತ ನಮ್ಮ ಹೊಟ್ಟೆಪಾಡು ಇಂದು ಇಲ್ಲಿ ನಾಳೇ ಎಲ್ಲೋ ನಮ್ಮ ಗೂಡು
ಹೆಣ್ಣು : ಬಳಿಗೆ ಇನ್ನೂ ಕೋರಿ ಬಾಳಲಾಟ ಸಾಗೀ .. ಹೀಡಿತೀವು ಮುಂದೇ ಹೊಸ ಊರ ದಾರೀ ..
ಇಬ್ಬರು : ದಾನಕ್ಕಿಂತ ದೊಡ್ಡದಿಲ್ಲ ದಾನ ಮಾಡಿ ಕೆಟ್ಟೋರಿಲ್ಲ... ದಾನವೇ ದೇವರೂ ದಾನ ಮಾಡಿರೆಲ್ಲಾ..
           ದಯವೇ ತಾಯೀ ಧರ್ಮವೇ ತಂದೆ ದಯ ಧರ್ಮ ತೋರಿ ದೀನರೂ ನಾವೆಂದೇ
           ದಾನಕ್ಕಿಂತ ದೊಡ್ಡದಿಲ್ಲ ದಾನ ಮಾಡಿ ಕೆಟ್ಟೋರಿಲ್ಲ... ಆಆಆ
----------------------------------------------------------------------------------------------------------------------

No comments:

Post a Comment