573. ಗುರು ಭಕ್ತಿ (1984)

ಗುರುಭಕ್ತಿ ಚಲನಚಿತ್ರದ ಹಾಡುಗಳು 
  1. ಸಾಗರದ ಕನ್ನಿಕೆಯು ಒಲಿದೂ ಬಂದಳೋ
  2. ತಾಯಿ ತಂದೆ ಗುರುವೆ ದೈವ ನಮ್ಮ ಬಾಳಲಿ
  3. ತಾಯಿ ತಂದೆ ಗುರುವೆ ದೈವ ನಮ್ಮ ಬಾಳಲಿ (ಎಸ್.ಪಿ.ಬಿ)
  4. ನನಗೂ ನಿನಗೂ ನಂಟನು ತಂದಿದೇ 
  5. ಪ್ರಾಯ ಆಸೇ ಅಂಕೇ ಮೀರೋ ಪ್ರಾಯ 
ಗುರು ಭಕ್ತಿ (1984) - ಸಾಗರದ ಕನ್ನಿಕೆಯು ಒಲಿದೂ ಬಂದಳೋ
ಸಂಗೀತ: ಜಿ.ಕೆ.ವೆಂಕಟೇಶ ಸಾಹಿತ್ಯ: ಆರ್.ಎನ್.ಜಯಗೋಪಾಲ, ಗಾಯನ : ರಾಜ್‌ಕುಮಾರ್ ಭಾರತಿ, ಬಿ.ಆರ್.ಛಾಯ

ಗಂಡು : ಸಾಗರದ ಕನ್ನಿಕೆಯು ಒಲಿದೂ ಬಂದಳೋ ಚೆಲುವಾ ಚೆಲ್ಲುತ
           ಎದುರು ನಿಂತಳೋ ಕಣ್ಣೆದುರು ನಿಂತಳೋ
ಹೆಣ್ಣು : ಹಗಲಿನಲೆ ಚಂದಿರನು ಧರೆಗೇ ಬಂದನೋ ಹೃದಯಾ ಮೀಟುತ
           ಎದುರು ನಿಂತನೋ ಕಣ್ಣೆದುರು ನಿಂತನೋ

ಗಂಡು : ಪಾಲ್ಗಡಲಿನಲ್ಲಿ ಮೈತೊಳೆದು ಬಂದೆ ಅಮೃತ ಕಲಶ ನನಗಾಗಿ ತಂದೆ
ಹೆಣ್ಣು : ಬಾನಂಚಿನಲ್ಲಿ ರವಿಯಂತೆ ಬಂದೆ ಏನೇನೋ ಆಸೆ ಎದೆಯಲ್ಲಿ ತಂದೆ
ಗಂಡು : ಹೆಣ್ಣಂದದ...  ಈ ಕಾವ್ಯಕೇ .. ಇಂದು ನಾ ತಂದೆ ಈ ಅಭಿನಂದನೆ
ಹೆಣ್ಣು : ಹಗಲಿನಲೆ ಚಂದಿರನು ಧರೆಗೇ ಬಂದನೋ ಹೃದಯಾ ಮೀಟುತ
          ಎದುರು ನಿಂತನೋ ಕಣ್ಣೆದುರು ನಿಂತನೋ

ಹೆಣ್ಣು : ಋತುರಾಜನಂತೆ ಹಸಿರನ್ನು ತಂದೆ ಈ ಬಾಳ ಗೀತೆಗೆ ಶೃತಿಯಾಗಿ ಬಂದೆ
ಗಂಡು : ವಾಸಂತಿಯಂತೆ ಹೂ ದರಿಸಿ ನಿಂದೆ ತಂಗಾಳಿಯಂತೆ ತಂಪನ್ನು ತಂದೆ
ಹೆಣ್ಣು : ಈ ಪ್ರೇಮದ...  ಉಯ್ಯಾಲೆಯ..  ಮೇಲೇ ತೂಗಾಡಿ ನಾ ಸುಖ ಕಾಣುವೆ
ಗಂಡು : ಸಾಗರದ ಕನ್ನಿಕೆಯು ಒಲಿದೂ ಬಂದಳೋ ಚೆಲುವಾ ಚೆಲ್ಲುತ
            ಎದುರು ನಿಂತಳೋ ಕಣ್ಣೆದುರು ನಿಂತಳೋ
ಹೆಣ್ಣು : ಹಗಲಿನಲೆ ಚಂದಿರನು ಧರೆಗೇ ಬಂದನೋ ಹೃದಯಾ ಮೀಟುತ
          ಎದುರು ನಿಂತನೋ ಕಣ್ಣೆದುರು ನಿಂತನೋ
-------------------------------------------------------------------------------------------------------------------------

ಗುರು ಭಕ್ತಿ (1984) - ತಾಯಿ ತಂದೆ ಗುರುವೆ ದೈವ ನಮ್ಮ ಬಾಳಲಿ

ಸಂಗೀತ: ಜಿ.ಕೆ.ವೆಂಕಟೇಶ್ ಸಾಹಿತ್ಯ: ಆರ್.ಎನ್.ಜಯಗೋಪಾಲ, ಗಾಯನ : ಎಸ್.ಪಿ.ಬಿ.

ತಾಯಿ ತಂದೆ ಗುರುವೆ ದೈವ ನಮ್ಮ ಬಾಳಲಿ ಅವರ ಸೇವೆಯಲ್ಲಿ ಆನಂದ ಕಾಣಲಿ
ಗುರುವು ತಂದ ಪಾಠ ಹೊಸ ದಾರಿಯಾಗಲಿ
ತಾಯಿ ತಂದೆ ಗುರುವೆ ದೈವ ನಮ್ಮ ಬಾಳಲಿ...  ನಮ್ಮ ಬಾಳಲಿ

ಒಳ್ಳೆ ಮಾತನಾಡು ನೀ ಒಳ್ಳೆದನ್ನೆ ನೋಡು ಒಳ್ಳೆಯವರ ಸ್ನೇಹ ಸಹವಾಸ ನೀನು ಮಾಡು
ಕಳ್ಳನಾಗ ಬೇಡ ನೀ ಸುಳ್ಳು ಹೇಳಬೇಡ ನಿನ್ನ ನಂಬಿದವರ ನೀ ಮೋಸಮಾಡಬೇಡ
ಎಲ್ಲರಲ್ಲೂ ಒಂದೇ ರೀತಿ ಪ್ರೀತಿ ತೋರಿಸು ಬಡವ ಧನಿಕ ಭೇದ ನೀಗಿ ಬಾಳಿ ತೋರಿಸು
ತಾಯಿ ತಂದೆ ಗುರುವೆ ದೈವ ನಮ್ಮ ಬಾಳಲಿ ಅವರ ಸೇವೆಯಲ್ಲಿ ಆನಂದ ಕಾಣಲಿ
ಗುರುವು ತಂದ ಪಾಠ ಹೊಸ ದಾರಿಯಾಗಲಿ
ತಾಯಿ ತಂದೆ ಗುರುವೆ ದೈವ ನಮ್ಮ ಬಾಳಲಿ..  ನಮ್ಮ ಬಾಳಲಿ

ತಾಯಿ ನುಡಿಯ ಪ್ರೀತಿ ತಾಯ್‌ನಾಡ ಮೇಲೆ ಭಕ್ತಿ ನಿಮ್ಮ ಹೃದಯ ತುಂಬಿ ಈ ನಾಡು ಬೆಳಗಲಿ
ನೂರು ತಡೆಯೆ ಬರಲಿ ನೂರೊಂದು ನೋವೆ ಇರಲಿ ನ್ಯಾಯ ನೀತಿ ರಕ್ಷೆ ನಿಮ್ಮಿಂದ ಆಗಲಿ
ಹಿರಿಯರಾಸೆ ಪೂರ್ತಿ ಮಾಡೊ ಭಾರ ನಿಮ್ಮದು ನಾಳೆ ನಮ್ಮ ನಾಡ ಕಾಯೊ ಹೊರೆಯು ನಿಮ್ಮದು
ತಾಯಿ ತಂದೆ ಗುರುವೆ ದೈವ ನಮ್ಮ ಬಾಳಲಿ ಅವರ ಸೇವೆಯಲ್ಲಿ ಆನಂದ ಕಾಣಲಿ
ಗುರುವು ತಂದ ಪಾಠ ಹೊಸ ದಾರಿಯಾಗಲಿ
ತಾಯಿ ತಂದೆ ಗುರುವೆ ದೈವ ನಮ್ಮ ಬಾಳಲಿ...  ನಮ್ಮ ಬಾಳಲಿ... ನಮ್ಮ ಬಾಳಲಿ...
--------------------------------------------------------------------------------------------------------------------------

ಗುರು ಭಕ್ತಿ (1984) - ತಾಯಿ ತಂದೆ ಗುರುವೆ ದೈವ ನಮ್ಮ ಬಾಳಲಿ
ಸಂಗೀತ: ಜಿ.ಕೆ.ವೆಂಕಟೇಶ್ ಸಾಹಿತ್ಯ: ಆರ್.ಎನ್.ಜಯಗೋಪಾಲ, ಗಾಯನ : ಪಿ.ಬಿ.ಶ್ರೀನಿವಾಸ

ತಾಯಿ ತಂದೆ ಗುರುವೆ ದೈವ ನಮ್ಮ ಬಾಳಲಿ ಅವರ ಸೇವೆಯಲ್ಲಿ ಆನಂದ ಕಾಣಲಿ
ಗುರುವು ತಂದ ಪಾಠ ಹೊಸ ದಾರಿಯಾಗಲಿ
ತಾಯಿ ತಂದೆ ಗುರುವೆ ದೈವ ನಮ್ಮ ಬಾಳಲಿ..  ನಮ್ಮ ಬಾಳಲಿ

ಒಳ್ಳೆ ಮಾತನಾಡು ನೀ ಒಳ್ಳೆದನ್ನೆ ನೋಡು ಒಳ್ಳೆಯವರ ಸ್ನೇಹ ಸಹವಾಸ ನೀನು ಮಾಡು
ಕಳ್ಳನಾಗ ಬೇಡ ನೀ ಸುಳ್ಳು ಹೇಳಬೇಡ ನಿನ್ನ ನಂಬಿದವರ ನೀ ಮೋಸಮಾಡ ಬೇಡ
ಎಲ್ಲರಲ್ಲೂ ಒಂದೇ ರೀತಿ ಪ್ರೀತಿ ತೋರಿಸು ಬಡವ ಧನಿಕ ಭೇದ ನೀಗಿ ಬಾಳಿ ತೋರಿಸು
ತಾಯಿ ತಂದೆ ಗುರುವೆ ದೈವ ನಮ್ಮ ಬಾಳಲಿ ಅವರ ಸೇವೆಯಲ್ಲಿ ಆನಂದ ಕಾಣಲಿ
ಗುರುವು ತಂದ ಪಾಠ ಹೊಸ ದಾರಿಯಾಗಲಿ
ತಾಯಿ ತಂದೆ ಗುರುವೆ ದೈವ ನಮ್ಮ ಬಾಳಲಿ ನಮ್ಮ ಬಾಳಲಿ

ತಾಯಿ ನುಡಿಯ ಪ್ರೀತಿ ತಾಯ್‌ನಾಡಮೇಲೆ ಭಕ್ತಿ ನಿಮ್ಮ ಹೃದಯ ತುಂಬಿ ಈ ನಾಡು ಬೆಳಗಲಿ
ನೂರು ತಡೆಯೆ ಬರಲಿ ನೂರೊಂದು ನೋವೆ ಇರಲಿ ನ್ಯಾಯ ನೀತಿ ರಕ್ಷೆ ನಿಮ್ಮಿಂದ ಆಗಲಿ
ಹಿರಿಯರಾಸೆ ಪೂರ್ತಿ ಮಾಡೊ ಭಾರ ನಿಮ್ಮದು ನಾಳೆ ನಮ್ಮ ನಾಡ ಕಾಯೊ ಹೊರೆಯು ನಿಮ್ಮದು
ತಾಯಿ ತಂದೆ ಗುರುವೆ ದೈವ ನಮ್ಮ ಬಾಳಲಿ ಅವರ ಸೇವೆಯಲ್ಲಿ ಆನಂದ ಕಾಣಲಿ
ಗುರುವು ತಂದ ಪಾಠ ಹೊಸ ದಾರಿಯಾಗಲಿ
ತಾಯಿ ತಂದೆ ಗುರುವೆ ದೈವ ನಮ್ಮ ಬಾಳಲಿ..  ನಮ್ಮ ಬಾಳಲಿ.. ನಮ್ಮ ಬಾಳಲಿ
--------------------------------------------------------------------------------------------------------------------------

ಗುರು ಭಕ್ತಿ (1984) - ನನಗೂ ನಿನಗೂ ನಂಟನು ತಂದಿದೇ
ಸಂಗೀತ: ಜಿ.ಕೆ.ವೆಂಕಟೇಶ ಸಾಹಿತ್ಯ: ಶ್ಯಾಮಸುಂದರಕುಲಕರ್ಣಿ  ಗಾಯನ : ರಾಜ್‌ಕುಮಾರ್ ಭಾರತಿ, ವಾಣಿಜಯರಾಂ 

ಹೆಣ್ಣು : ನನಗೂ ನಿನಗೂ ನಂಟನು ತಂದಿದೇ ಸಂದೇಶವೂ
          ಒಲವೂ ಚೆಲುವೂ ಸೇರಿದ ಬಾಳೂ ಸಂಗೀತವೂ.. ಸಂಗೀತವೂ
          ಪ್ರಣಯದ ಪ್ರತಿದಿನ ಶುಭ ಯಾನ ಮಿಲನದ ಪ್ರತಿಕ್ಷಣ ಋತುಗಾನವೂ.. ಋತುಗಾನವೂ
          ನನಗೂ ನಿನಗೂ ನಂಟನು ತಂದಿದೇ ಸಂದೇಶವೂ
          ಒಲವೂ ಚೆಲುವೂ ಸೇರಿದ ಬಾಳೂ ಸಂಗೀತವೂ.. ಸಂಗೀತವೂ
       
ಗಂಡು : ಶುಭವನ್ನೂ ಕೋರಿ ಬಿಗುಮಾನವನ್ನೂ ದೂಡಿ ಸಾಗೋಣ ನಾವೂ ಬದುಕೆಂಬ ದಾರೀ ..
ಹೆಣ್ಣು : ಅನುರಾಗ ತೋರಿ ಸುಧೆಯನ್ನೂ ಹೀರಿ ಎಂದೆಂದೂ ನಡೇವಾ ಜೊತೆಯಲ್ಲಿ ಸೇರಿ
          ಫಲಿಸಿರುವಾ ಒಲವೊಂದೇ ಬಳಿಯಿರುವಾ ಸಿರಿಯಲ್ಲಿ ಗೆಳತಿಯ ಬದುಕಿದೇ ನೆಲೆಯಾಗಿ
          ಗೆಳೆಯಾ ನಿನ್ನ ನಾನೂ ನಂಬಿದೇ ...
ಗಂಡು :  ನನಗೂ ನಿನಗೂ ನಂಟನು ತಂದಿದೇ ಸಂದೇಶವೂ
          ಒಲವೂ ಚೆಲುವೂ ಸೇರಿದ ಬಾಳೂ ಸಂಗೀತವೂ.. ಸಂಗೀತವೂ
          ನಿಸಸಗ ಗಮಮಪ  ನಿಪಾಮಗ ಸಗಗಮ ಮಪಪನಿ ಸನಿಪಮಾಪ ನಿನಿಸ ಸನಿಮಾಪಸ 
           
 ಹೆಣ್ಣು : ರಘುರಾಮನಾಗಿ ಪ್ರಿಯೇ ಸೀತೆ ನಾನೇ ಘನ ಶ್ಯಾಮನಾಗಿ ನಿನ್ನ ರಾಧೇ ನಾನೂ 
ಗಂಡು : ಬೆರೆತಾಗ ನೀನೂ ಬದುಕಾಯ್ತು ಜೇನೂ ಇನ್ನೆಂದೂ ನಿನ್ನಾ ಬೀಡಲಾರೆ ನಾನೂ 
           ಜೊತೆಯಿರುವೇ ನಲಿವಿನಲಿ ಜೊತೆಯಿರುವೇ ನೋವಿನಲಿ ಎನ್ನುತ ಎನ್ನುತ ನಾ ಬರುವೇ 
           ಎಂದೂ ನಿನ್ನ ಜೋತೆಗೆ ಬಾಳುವೇ .. 
ಹೆಣ್ಣು : ನನಗೂ ನಿನಗೂ ನಂಟನು ತಂದಿದೇ ಸಂದೇಶವೂ
ಗಂಡು : ಒಲವೂ ಚೆಲುವೂ ಸೇರಿದ ಬಾಳೂ ಸಂಗೀತವೂ.. ಸಂಗೀತವೂ
ಇಬ್ಬರು : ಪ್ರಣಯದ ಪ್ರತಿದಿನ ಶುಭ ಯಾನ ಮಿಲನದ ಪ್ರತಿಕ್ಷಣ ಋತುಗಾನವೂ.. ಋತುಗಾನವೂ
ಗಂಡು : ನಿಸಸಗ ಗಮಮಪ  ನಿಪಾಮಗ ಸಗಗಮ ಮಪಪನಿ ಲಲಲಲಲಾ ( ಲಲಲಲಾ ) ಹೂಂಹುಂಹುಂ..
            (ಹೂಂಹುಂಹುಂ..) ಅಹ್ಹಹ್ಹಹ್ಹ .. (ಅಹ್ಹಹ್ಹ  )
--------------------------------------------------------------------------------------------------------------------------

ಗುರು ಭಕ್ತಿ (1984) - ಪ್ರಾಯ ಆಸೇ ಅಂಕೇ ಮೀರೋ ಪ್ರಾಯ
ಸಂಗೀತ: ಜಿ.ಕೆ.ವೆಂಕಟೇಶ ಸಾಹಿತ್ಯ: ದೊಡ್ಡ ರಂಗೇಗೌಡ  ಗಾಯನ : ಎಸ್.ಜಾನಕೀ

ಪ್ರಾಯ.. ಪ್ರಾಯ ಪ್ರಾಯ
ಪ್ರಾಯ ಆಸೇ ಅಂಕೇ ಮೀರೋ ಪ್ರಾಯ
ನೀತಿ ನಿಯಮ ದಾಟಿ ಪ್ರೀತಿ ಪ್ರೇಮ ಮೀಟಿ ನಾ...  ಕಂಡೇ ರೋಮಾಂಚ ಪ್ರಾಯ
ಪ್ರಾಯ ಆಸೇ ಅಂಕೇ ಮೀರೋ ಪ್ರಾಯ
ನೀತಿ ನಿಯಮ ದಾಟಿ ಪ್ರೀತಿ ಪ್ರೇಮ ಮೀಟಿ ನಾ...  ಕಂಡೇ ರೋಮಾಂಚ ಪ್ರಾಯ 

(ಹುಂಹೂಂ... ಹುಂಹೂಂ...  ಹುಂಹೂಂ...  ಉಉಉಉಉಉ )
ಅಂಗ ಸಂಗ ಬೆಂಕಿಯಾಗಿ ಕಾಮ ತುಂಬಿ ಬೆಂದು ಹೋಗಿ ಸ್ನೇಹ ಮೋಹದಾಗಿ ಜೀವಿ ಬಾಳೂ ಸಾಗಿದೇ
ಜೀವ ಭಾವ ಹೊಮ್ಮಿ ಹೊಂದು ಬಿಸಿಯ ಬಯಕೇ ಚಿಮ್ಮಿಕೊಂಡು ನೂರು ರೀತಿ ಹಾಡಿಕೊಂಡು ಮೋಜು ತುಂಬಿದೇ
ವಿಶಾಲ ವಿನೋದ ವಿಲಾಸ ವಿನೋದ ಇಂದೇನೇ ಒಂದಾಗಿ ನಲಿಯುತಿದೆ
ಕಳ್ಳ ನೋಟ ಬೀರಿ ರಾಗ ರಂಗೂ ಕೂಡಿ ನಾ...  ಕಂಡೇ ರೋಮಾಂಚ ಪ್ರಾಯ
ಪ್ರಾಯ ಆಸೇ ಅಂಕೇ ಮೀರೋ ಪ್ರಾಯ
ನೀತಿ ನಿಯಮ ದಾಟಿ ಪ್ರೀತಿ ಪ್ರೇಮ ಮೀಟಿ ನಾ...  ಕಂಡೇ ರೋಮಾಂಚ ಪ್ರಾಯ

(ಹುಂಹೂಂ... ಹುಂಹೂಂ...  ಹುಂಹೂಂ...  ಉಉಉಉಉಉ )
ಮೈಯಗೇ ಮೈಯ್ಯಿ ಸೋಕಿದಂತೆ ದೂರವಾಗಿ ಎಲ್ಲ ಚಿಂತೇ ಹೂವೂ ದುಂಬಿ ಕೂಡಿದಂತೇ ದಾಹ ಕಾಡಿದೇ
ಗಂಧ ಗಾಳಿ ಬೀಸಿದಂತೆ ಮೂಡಿಬಂತು ಸ್ವಪ್ನ ಸಂತೇ ಗಂಡು ಹೆಣ್ಣು ಕಲೆಯುವಂತೆ ರಾತ್ರೀ ಕರೆದಿದೇ
ಉತ್ಸಾಹ ಉದ್ವೇಗ ಉಲ್ಲಾಸ ಉನ್ಮಾದ ಉಕ್ಕೇರಿ ಮತ್ತೇರಿ ಮೆರೆಯುತಿದೇ
ರಾಗ ತಾಳ ಸೇರಿ ಹಾವ ಭಾವ ಕೋರಿ  ನಾ...  ಕಂಡೇ ರೋಮಾಂಚ ಪ್ರಾಯ
ಪ್ರಾಯ ಆಸೇ ಅಂಕೇ ಮೀರೋ ಪ್ರಾಯ
ನೀತಿ ನಿಯಮ ದಾಟಿ ಪ್ರೀತಿ ಪ್ರೇಮ ಮೀಟಿ ನಾ...  ಕಂಡೇ ರೋಮಾಂಚ ಪ್ರಾಯ
--------------------------------------------------------------------------------------------------------------------------

No comments:

Post a Comment