575. ದೀಪಾ (1977)


ದೀಪಾ ಚಲನಚಿತ್ರದ ಹಾಡುಗಳು
  1. ಸಮಯ ಒಲಿದಿದೆ.. ನಲಿದಿದೆ...ನಗುತಿದೆ..
  2. ದಾರಿ ಕಾಣದಾಗಿದೇ ರಾಘವೇಂದ್ರನೇ
  3. ನಗು ನಗುತಿರುವ ಮೊಗದಲಿ
  4. ಕಂಡ ಕನಸು ನನಸಾಗಿ
ದೀಪಾ (1977) - ಸಮಯ ಒಲಿದಿದೆ
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ವಿಜಯಭಾಸ್ಕರ್ ಗಾಯನ: ವಾಣಿ ಜಯರಾಂ


ಆ ಆಹಾ ಅ ಆಹಾ ಆ ಆಹಾ ಅ ಆಹಾ
ಸಮಯ ಒಲಿದಿದೆ.. ನಲಿದಿದೆ...ನಗುತಿದೆ..
ಸನಿಹಕೇ ಕರೆದಿದೆ.. ಕರೆದಿದೆ.. ಕರೆದಿದೆ...

ನೀಲಿ ಗಗನವು ಬಾ ಎನುತಿದೆ
ತಾರೆ ಸ್ನೇಹದ ಕೈ ನೀಡಿದೆ
ಸುಧೆಯಿದೆ ಸುಖವಿದೆ
ಸುಧೆಯಿದೆ ಸುಖವಿದೆ
ಕಾಣದೆ.. ಕಾಣದೆ.. ಕಾಣದೆ..

ತಂಪು ಗಾಳಿಯು ಝಲ್ ಎನುತಿದೆ
ರಾತ್ರಿ ಮೌನವು ಜುಮ್ ಎಂದಿದೆ
ಮಧುವಿದೆ ಮತ್ತಿದೆ
ಮಧುವಿದೆ ಮತ್ತಿದೆ
ಕಾಣದೆ.. ಕಾಣದೆ.. ಕಾಣದೆ..
---------------------------------------------------------------------

ದೀಪಾ (1977) - ಸಮಯ ಒಲಿದಿದೆ
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ವಿಜಯಭಾಸ್ಕರ್ ಗಾಯನ: ವಾಣಿ ಜಯರಾಂ


ದಾರಿ ಕಾಣದಾಗಿದೇ ರಾಘವೇಂದ್ರನೇ
ಬೆಳಕ ತೋರಿ ನಡೆಸು ಬಾ ಯೋಗಿವರ್ಯನೇ
ದಾರಿ ಕಾಣದಾಗಿದೇ ರಾಘವೇಂದ್ರನೇ

ಮನದ ಆಸೆ ತಿಳಿಯುವಾಸೆ ಹೇಗೆ ಹೇಳಲಿ
ನಾಳೆ ಹೇಗೆ ಎಂಬ ಚಿಂತೆ ಇಂದು ಮನದಲ್ಲಿ
ಕಲ್ಲು ಮುಳ್ಳು ಏನೇ ಇರಲಿ ಬಾಳ ಹಾದೀಲಿ
ನಿನ್ನ ಕರುಣೆಯಿಂದ ಎಲ್ಲಾ ಸುಗಮವಾಗಲಿ
ದಾರಿ ಕಾಣದಾಗಿದೇ ರಾಘವೇಂದ್ರನೇ
ಬೆಳಕ ತೋರಿ ನಡೆಸು ಬಾ ಯೋಗಿವರ್ಯನೇ
ದಾರಿ ಕಾಣದಾಗಿದೇ ರಾಘವೇಂದ್ರನೇ

ಯಾರ ಯಾರ ಸೇರಿಸುವೆಯೋ ಯಾರು ಅರಿಯರು 
ಯಾರ ನಗಿಸಿ ಅಳಿಸುವೆಯೋ ಯಾರು ಬಲ್ಲರು 
ನೀನು ಕುಣಿಸಿದಂತೆ ತಾನೇ ಎಲ್ಲ ಕುಣಿವರು 
ನೀನು ಜ್ಯೋತಿ ಅರಯ ಮಣ್ಣು ಹಣತೆ ಎಲ್ಲರು 
ದಾರಿ ಕಾಣದಾಗಿದೇ ರಾಘವೇಂದ್ರನೇ
ಬೆಳಕ ತೋರಿ ನಡೆಸು ಬಾ ಯೋಗಿವರ್ಯನೇ
ದಾರಿ ಕಾಣದಾಗಿದೇ ರಾಘವೇಂದ್ರನೇ 
----------------------------------------------------------------

ದೀಪಾ (1977) - ನಗು  ನಗುತಿರುವ ಮೊಗದಲಿ
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ವಿಜಯಭಾಸ್ಕರ್ ಗಾಯನ: ಎಸ್.ಪಿ.ಬಿ


ನಗು ನಗುತಿರುವ ಮೊಗದಲಿ ಅರಳಿದೆ ತಾವರೆ ಚೆಲುವಲಿ
ನಗು ನಗುತಿರುವ ಮೊಗದಲಿ ಅರಳಿದೆ ತಾವರೆ ಚೆಲುವಲಿ
ಬಂದಿಹೆ ಎದೆಯಲಿ ಮೂಡಿ ಎಲ್ಲೆಲ್ಲೂ ನಗುವಿನ ಮೋಡಿ
ನಗು ನಗುತಿರುವ ಮೊಗದಲಿ ಅರಳಿದೆ ತಾವರೆ ಚೆಲುವಲಿ

ಕಡಲಿನ ಅಲೆ ನಗೆ ನೀನು ತುಂಬಿದ ಹುಣ್ಣಿಮೆ ನೀನು..ಆಆಆ
ಕಡಲಿನ ಅಲೆ ನಗೆ ನೀನು ತುಂಬಿದ ಹುಣ್ಣಿಮೆ ನೀನು
ತಿಳಿ ನಗೆ ಮಲ್ಲಿಗೆ ನೀನು ಬಾನಿನ ತಾರೆಯು ನೀನು
ಬಾಳಲ್ಲಿ ನಗೆ ತುಂಬಿ ನೀ ಬಂದೆ
ನಗು ನಗುತಿರುವ ಮೊಗದಲಿ ಅರಳಿದೆ ತಾವರೆ ಚೆಲುವಲಿ..

ಬೆಳಗುವ ದೀಪವು ನೀನು ಪ್ರೀತಿಯ ಕಾಂತಿಯು ನೀನು
ಬೆಳಗುವ ದೀಪವು ನೀನು ಪ್ರೀತಿಯ ಕಾಂತಿಯು ನೀನು
ಚೆಲುವಿನ ಚೆಲುವೆಯು ನೀನು ಒಲವಿನ ಬಳ್ಳಿಯು ನೀನು
ಎಲ್ಲೆಲ್ಲೂ ನಗೆ ಚೆಲ್ಲಿ ನೀ ಸೆಳೆವೆ
ನಗು ನಗುತಿರುವ ಮೊಗದಲಿ ಅರಳಿದೆ ತಾವರೆ ಚೆಲುವಲಿ
ಬಂದಿಹೆ ಎದೆಯಲಿ ಮೂಡಿ ಎಲ್ಲೆಲ್ಲೂ ನಗುವಿನ ಮೋಡಿ
ನಗು ನಗುತಿರುವ ಮೊಗದಲಿ ಅರಳಿದೆ ತಾವರೆ ಚೆಲುವಲಿ
ನಗು ನಗುತಿರುವ ಹಹಹಹಾ...
ಅರಳಿದೆ ತಾವರೆ ಹಹಹಹಾ...
-----------------------------------------------------------------

ದೀಪಾ (1977) - ಕಂಡು ಕನಸು ನನಸಾಗಿ
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ವಿಜಯಭಾಸ್ಕರ್ ಗಾಯನ: ವಾಣಿ ಜಯರಾಂ, ಎಸ್.ಪಿ.ಬಿ

ಹೆಣ್ಣು: ಕಂಡ ಕನಸು ನನಸಾಗಿ ಇಂದೂ ಮನಸು ಹಗುರಾಗಿ
           ಹಾರಾಡುವಾ....ತೇಲಾಡುವಾ... ರಾಗತಾನ  ಸೇರಿದಂತೆ
           ತಾಳ ಮೇಳ ಕೂಡಿದಂತೆ ...

ಗಂಡು: ಕಣ್ಣಲ್ಲಿ ಕಂಡಿದೆ ಪ್ರೇಮದ‌ ನಂದನ
           ಮೌನವೂ ತಂದಿದೆ ಒಲವಿನ ಬಂಧನ...ಬಂಧನ
ಹೆಣ್ಣು: ಚೆಲುವಾದ ಸಂಗವೇ ಸೊಗಸಿನ ಚೇತನ
          ಆಸರೇ ಬದುಕಿಗೆ ಭರವಸೆ ಕಿರಣ
          ಅರಿತಾಗ ಕಲ್ಫನ ಕಲೆತಾಗ ನೂತನ
ಗಂಡು: ಕಂಡ ಕನಸು ನನಸಾಗಿ ಇಂದೂ ಮನಸು ಹಗುರಾಗಿ
           ಹಾರಾಡುವಾ....ತೇಲಾಡುವಾ... ರಾಗತಾನ  ಸೇರಿದಂತೆ
           ತಾಳ ಮೇಳ ಕೂಡಿದಂತೆ ...

ಹೆಣ್ಣು: ನೀರಾಗೀ ಹರಿದಿದೆ ಹೃದಯದ ಭಾವನ
           ಇನಿದಾದ ಮನಸಲ್ಲಿ ಒಲುಮೆಯ ಸ್ಪಂದನ..ಸ್ಪಂದನ
ಗಂಡು: ಮೋಹದ ಬಿಸಿಗೇ ಕಾದಿದೆ ಮೈಮನ
            ಹಿತವಾದ ಮಿಲನಕೆ ಪ್ರಣಯವೇ ಕಾರಣ
            ಅನುರಾಗ ಜೀವನ ಕವಿರಾದ ದಿಂಗಣ‌....
ಹೆಣ್ಣು: ಕಂಡ ಕನಸು ನನಸಾಗಿ ಇಂದೂ ಮನಸು ಹಗುರಾಗಿ
           ಹಾರಾಡುವಾ....ತೇಲಾಡುವಾ... ರಾಗತಾನ  ಸೇರಿದಂತೆ
           ತಾಳ ಮೇಳ ಕೂಡಿದಂತೆ ...

ಗಂಡು: ಹಾಗಲೀ ಇಂತೇ..ಅಂತರಂಗ ಕಂಕಣ
           ಕಾಣದ ಕೈವಾಡ ನುಡಿಸಿದೇ ಗಾನ..ಗಾನ
ಹೆಣ್ಣು: ತುಳದಲಿ ಮಿಡಿದಿದೆ ನಂಬಿಕೆ ಚರಣ
           ಚಿರ ನೂತನ ಗೆಳೆತನ ಕಂಪಿನ ಚಂದನ.. ಚಂದನ
           ಒಳಿತಾದ ಕಂಕಣ ಕಲೆತಾಗ ಭೂಷಣ
ಗಂಡು: ಕಂಡ ಕನಸು ನನಸಾಗಿ ಇಂದೂ ಮನಸು ಹಗುರಾಗಿ
           ಹಾರಾಡುವಾ....ತೇಲಾಡುವಾ... ರಾಗತಾನ  ಸೇರಿದಂತೆ
           ತಾಳ ಮೇಳ ಕೂಡಿದಂತೆ ...
ಹೆಣ್ಣು: ಕಂಡ ಕನಸು ನನಸಾಗಿ ಇಂದೂ ಮನಸು ಹಗುರಾಗಿ
-----------------------------------------------------------------

No comments:

Post a Comment