578. ಸ್ಕೂಲ್ ಮಾಸ್ಟರ್ (1958)



ಸ್ಕೂಲ್ ಮಾಸ್ಟರ್ ಚಲನ ಚಿತ್ರದ ಹಾಡುಗಳು 
  1. ಸ್ವಾಮಿ ದೇವನೆ ಲೋಕಪಾಲನೆ ತೇ ನಮೋಸ್ತು ನಮೋಸ್ತುತೆ.. 
  2. ಬನ್ನಿರೈ ಬನ್ನಿರೈ ಬನ್ನಿರೈ ಗುರುಸೇವೆಯೇ ನಮ್ಮ ಸರ್ವೋದಯ
  3. ರಾಧಾ ಮಾಧವ ವಿನೋದ ಹಾಸ ಆ..ಆ..
  4.  ಸೊಂಪಾದ ಸಂಜೆ ವೇಳೆ 
  5. ಅತಿ ಮಧುರ ಅನುರಾಗ 
  6. ಭಾಮೆಯ ನೋಡಲೂ ತಾ ಬಂದಾ 
  7.  ಎಲ್ಲರೂ ನಮ್ಮವರೇ 
  8. ಇನ್ನೇನೋ ಆನಂದ 
  9. ನಾನು ನೀನೂ ಜೋಡಿ 
ಸ್ಕೂಲ್ ಮಾಸ್ಟರ್ (1958) - ಸ್ವಾಮಿ ದೇವನೆ
ಸಾಹಿತ್ಯ : ಸೋಸಲೆ ಅಯ್ಯ ಶಾಸ್ತ್ರೀ ಸಂಗೀತ: ಟಿ.ಜಿ.ಲಿಂಗಪ್ಪ ಗಾಯನ :ಕೋಮಲ್, ರೇನಿ, ಟಿ.ಜಿ.ಲಿಂಗಪ್ಪ

ಗಂಡು : ಸ್ವಾಮಿ ದೇವನೆ ಲೋಕಪಾಲನೆ ತೇ ನಮೋಸ್ತು ನಮೋಸ್ತುತೆ..
ಮಕ್ಕಳು : ಸ್ವಾಮಿ ದೇವನೆ ಲೋಕಪಾಲನೆ ತೇ ನಮೋಸ್ತು ನಮೋಸ್ತುತೆ..
ಗಂಡು : ಪ್ರೇಮದಿಂದಲಿ ನೋಡು ನಮ್ಮನು ತೇ ನಮೋಸ್ತು ನಮೋಸ್ತುತೆ..
ಎಲ್ಲರು : ಪ್ರೇಮದಿಂದಲಿ ನೋಡು ನಮ್ಮನು ತೇ ನಮೋಸ್ತು ನಮೋಸ್ತುತೆ..
            ಸ್ವಾಮಿ ದೇವನೆ ಲೋಕಪಾಲನೆ ತೇ ನಮೋಸ್ತು ನಮೋಸ್ತುತೆ.. 

ಎಲ್ಲರು : ದೇವ ದೇವನೆ ಹಸ್ತ ಪಾದಗಳಿಂದಲೂ ಮನದಿಂದಲೂ..
             ದೇವ ದೇವನೆ ಹಸ್ತ ಪಾದಗಳಿಂದಲೂ ಮನದಿಂದಲೂ..
             ನಾವು ಮಾಡಿದ ಪಾಪವೆಲ್ಲವ ಹೋಗಲಾಡಿಸು ದೇವನೆ.. 
            ನಾವು ಮಾಡಿದ ಪಾಪವೆಲ್ಲವ ಹೋಗಲಾಡಿಸು ದೇವನೆ..
            ಸ್ವಾಮಿ ದೇವನೆ ಲೋಕಪಾಲನೆ ತೇ ನಮೋಸ್ತು ನಮೋಸ್ತುತೆ.. 
           ಪ್ರೇಮದಿಂದಲಿ ನೋಡು ನಮ್ಮನು ತೇ ನಮೋಸ್ತು ನಮೋಸ್ತುತೆ..
           ಸ್ವಾಮಿ ದೇವನೆ ಲೋಕಪಾಲನೆ ತೇ ನಮೋಸ್ತು ನಮೋಸ್ತುತೆ.. 

ಎಲ್ಲರು : ವಿಜಯ ವಿದ್ಯಾರಣ್ಯ ಕಟ್ಟಿದ ಚಾಮುಂಡಾಂಬೆಯ ನಾಡಿನ..
            ವಿಜಯ ವಿದ್ಯಾರಣ್ಯ ಕಟ್ಟಿದ ಚಾಮುಂಡಾಂಬೆಯ ನಾಡಿನ..
           ಮನೆಯ ಮಕ್ಕಳ ಐಕ್ಯಗಾನವ ಲಾಲಿಸೈ ಪರಿಪಾಲಿಸೈ..
           ಮನೆಯ ಮಕ್ಕಳ ಐಕ್ಯಗಾನವ ಲಾಲಿಸೈ ಪರಿಪಾಲಿಸೈ..
           ಸ್ವಾಮಿ ದೇವನೆ ಲೋಕಪಾಲನೆ ತೇ ನಮೋಸ್ತು ನಮೋಸ್ತುತೆ.. 
           ಪ್ರೇಮದಿಂದಲಿ ನೋಡು ನಮ್ಮನು ತೇ ನಮೋಸ್ತು ನಮೋಸ್ತುತೆ.. ।।
           ಸ್ವಾಮಿ ದೇವನೆ ಲೋಕಪಾಲನೆ ತೇ ನಮೋಸ್ತು ನಮೋಸ್ತುತೆ.. 
------------------------------------------------------------------------------------------------------------------------

ಸ್ಕೂಲ್ ಮಾಸ್ಟರ (೧೯೫೮) - ಬನ್ನಿರೈ ಬನ್ನಿರೈ ಬನ್ನಿರೈ ಗುರುಸೇವೆಯೇ ನಮ್ಮ ಸರ್ವೋದಯ 
ಸಂಗೀತ: ಟಿ.ಜಿ.ಲಿಂಗಪ್ಪ  ಸಾಹಿತ್ಯ: ಕಣಗಾಲ್ ಪ್ರಭಾಕರ ಶಾಸ್ತ್ರಿ ಗಾಯನ: ರಾಜಲಕ್ಷ್ಮಿ, ಕೋಮಲ, ರಾಣಿ

ಗಂಡು : ಬನ್ನಿರೈ....         ಕೋರಸ್ :    ಬನ್ನಿರೈ
ಗಂಡು :  ಬನ್ನಿರೈ ಗುರುಸೇವೆಯೇ ನಮ್ಮ ಸರ್ವೋದಯ
ಕೋರಸ್ :  ಗುರುಸೇವೆಯೇ ನಮ್ಮ ಸರ್ವೋದಯ
ಗಂಡು :  ಗುರುಮನೆಯೇ ನಮ್ಮೂರ ದೇವಾಲಯ
ಕೋರಸ್ : ಗುರುಮನೆಯೇ ನಮ್ಮೂರ ದೇವಾಲಯ
               ಬನ್ನಿರೈ...  ಬನ್ನಿರೈ...  ಬನ್ನಿರೈ..

ಗಂಡು : ಮನೆಗೊಂದು ತೊಲೆ ಹೆಂಚು ತನ್ನಿರೆಲ್ಲಾ ಗುರುಮನೆಯ ಕಟ್ಟುವೆವು ಮಕ್ಕಳೆಲ್ಲಾ
ಕೋರಸ್ :  ಮನೆಗೊಂದು ತೊಲೆ ಹೆಂಚು ತನ್ನಿರೆಲ್ಲಾ ಗುರುಮನೆಯ ಕಟ್ಟುವೆವು ಮಕ್ಕಳೆಲ್ಲಾ
                 ಬನ್ನಿರೈ...  ಬನ್ನಿರೈ...  ಬನ್ನಿರೈ

ಗಂಡು : ಜಾತಿ ಭೇದದ ವ್ಯಾಧಿ ಊರಿನಿಂದ ತೊಲಗಿಸಿ ...  ಕೋರಸ್ :  ಆಆಆ..
ಗಂಡು : ಜಾತಿ ಭೇದದ ವ್ಯಾಧಿ ಊರಿನಿಂದ ತೊಲಗಿಸಿ ನೀತಿಯ ಪ್ರೀತಿಯ ಜ್ಯೋತಿಯನ್ನು ಬೆಳಗುವಾ
ಕೋರಸ್ :  ನೀತಿಯ ಪ್ರೀತಿಯ ಜ್ಯೋತಿಯನ್ನು ಬೆಳಗುವಾ
ಗಂಡು : ನುಡಿದಂತೆ ನಡೆಯುವ ಗಂಡುತನ ಕಲಿಸುವಾ ..        ಕೋರಸ್ :  ಆಆಆ
ಗಂಡು :  ನುಡಿದಂತೆ ನಡೆಯುವ ಗಂಡುತನ ಕಲಿಸುವಾ ನಾಡ ಕಟ್ಟೊ ಶಕ್ತಿಯಾ ತಾನೊಲಿದು ನೀಡುವ
ಕೋರಸ್ :  ಬನ್ನಿರೈ...  ಬನ್ನಿರೈ..  ಬನ್ನಿರೈ

ಗಂಡು : ಶಾಲೆಯೊಂದೇ  ತನ್ನ ಬಾಳ್ವೆ ಭಾಗ್ಯವೆನ್ನುವಾ   ಕೋರಸ್ :  ಆಆಆ
ಗಂಡು : ಶಾಲೆಯೊಂದೇ  ತನ್ನ ಬಾಳ್ವೆ ಭಾಗ್ಯವೆನ್ನುವಾ  ಬಾಲರೆಲ್ಲ ತನ್ನ ಮನೆಯ ಮಕ್ಕಳೆನ್ನುವಾ
ಕೋರಸ್ :  ಬಾಲರೆಲ್ಲ ತನ್ನ ಮನೆಯ ಮಕ್ಕಳೆನ್ನುವಾ |
ಗಂಡು : ತಾಳ್ಮೆಯಿಂದ ನಮ್ಮ ಮತಿಗೆ ಬೆಳಕ ತೋರುವಾ
            ತಾಳ್ಮೆಯಿಂದ ನಮ್ಮ ಮತಿಗೆ ಬೆಳಕ ತೋರುವಾ ಗುರುಬ್ರಹ್ಮ ಗುರುವಿಷ್ಣು ಗುರುವೇ ಶಿವಾ
ಕೋರಸ್ : ಗುರುಬ್ರಹ್ಮ ಗುರುವಿಷ್ಣು ಗುರುವೇ ಶಿವಾ  ಬನ್ನಿರೈ...  ಬನ್ನಿರೈ ... ಬನ್ನಿರೈ ..
                ಗುರುಸೇವೆಯೇ ನಮ್ಮ ಸರ್ವೋದಯ ಗುರುಮನೆಯೇ ನಮ್ಮೂರ ದೇವಾಲಯ
               ಬನ್ನಿರೈ .... ಬನ್ನಿರೈ...  ಬನ್ನಿರೈ...
------------------------------------------------------------------------------------------------------------------------

ಸ್ಕೂಲ್ ಮಾಸ್ಟರ್ (1958) -ರಾಧಾ ಮಾಧವ
ಸಾಹಿತ್ಯ :ಕೆ.ಪ್ರಭಾಕರ ಶಾಸ್ತ್ರಿ ಸಂಗೀತ: ಟಿ.ಜಿ.ಲಿಂಗಪ್ಪ ಗಾಯನ : ಪಿ.ಸುಶೀಲಾ, ಟಿ.ಜಿ.ಲಿಂಗಪ್ಪ


ಗಂಡು : ಅಆಆಆಆ...  ಅಆಆಆಆ... ಅಆಆಆಆ...
ಹೆಣ್ಣು : ರಾಧಾ ಮಾಧವ ವಿನೋದಹಾಸ ಆ..ಆ.. ಯಾರೋ ಮರೆಯದ ಪ್ರೇಮ ವಿಲಾಸ ಆ..ಆ..
          ರಾಧಾ ಮಾಧವ ವಿನೋದ ಹಾಸ ಯಾರೋ ಮರೆಯದ ಪ್ರೇಮ ವಿಲಾಸ
         ರಾಧಾ ಮಾಧವ ವಿನೋದ ಹಾಸ

ಗಂಡು : ಮಾಗಿ ಮಲ್ಲಿಗೆ ಹೂ ಬನದಲ್ಲಿ (ಓ..ಓ..)
            ಮಾಗಿ ಮಲ್ಲಿಗೆ ಹೂ ಬನದಲ್ಲಿ ಭೋಗಿ ಹುಣ್ಣಿಮೆ ರಾತ್ರಿಯಲಿ
ಹೆಣ್ಣು : ಸ್ವರ್ಗ ಭೂಮಿ ಎಲ್ಲಾ ದಾಟಿ (.ಆಆಆ .)
          ಸ್ವರ್ಗ ಭೂಮಿ ಎಲ್ಲಾ ದಾಟಿ ಆಡಿದ ಮಾತೆ ರಾಗವಿಲಾಸ
ಇಬ್ಬರು : ರಾಧಾ ಮಾಧವ ವಿನೋದ ಹಾಸ ಯಾರು ಮರೆಯದ ಪ್ರೇಮ ವಿಲಾಸ
             ರಾಧಾ ಮಾಧವ ವಿನೋದ ಹಾಸ 

ಗಂಡು : ಜೀವನವೆಲ್ಲಾ ಗೋಕುಲವಾಗಿ ಒಲವೇ ಯಮುನಾ ನದಿಯಾಗಿ (ಓ..ಓ ಓ..ಓ)
           ಜೀವನವೆಲ್ಲಾ ಗೋಕುಲವಾಗಿ ಒಲವೇ ಯಮುನಾ ನದಿಯಾಗಿ
ಹೆಣ್ಣು : ನಾವೇ ರಾಧಾ ಮಾಧವರಾಗಿ
ಇಬ್ಬರು : ಆಡುವ ಮಾತೆ ಪ್ರೇಮವಿಲಾಸ
            ರಾಧಾ ಮಾಧವ ವಿನೋದ ಹಾಸ ಯಾರು ಮರೆಯದ ಪ್ರೇಮ ವಿಲಾಸ
           ರಾಧಾ ಮಾಧವ ವಿನೋದ ಹಾಸ 
----------------------------------------------------------------------------------------------------------------------

ಸ್ಕೂಲ್ ಮಾಸ್ಟರ್ (1958) - ಸೊಂಪಾದ ಸಂಜೆ ವೇಳೆ
ಸಂಗೀತ: ಟಿ.ಜಿ.ಲಿಂಗಪ್ಪ ಸಾಹಿತ್ಯ : ಕೆ.ಪ್ರಭಾಕರಶಾಸ್ತ್ರಿ ಗಾಯನ : ಪಿ.ಸುಶೀಲಾ, ಟಿ.ಜಿ.ಲಿಂಗಪ್ಪ

ಹೆಣ್ಣು : ಆಆಆ.. ಆಆಆ.. ಆಆಆ.. ಆಆಆ..
ಗಂಡು : ಸೊಂಪಾದ ಸಂಜೇ ವೇಳೆ ತಂಗಾಳಿ ಬೀಸೋ ವೇಳೆ
           ಇಂಪಾದ ರಾಗ ಮಾಲೇ ಹೂಬಳ್ಳಿ ಹಾಡೋ ವೇಳೆ
           ಒಂದಾಗಿ ಪಾಡೋಣ (ಓಓಓಓ ) ಒಂದಾಗಿ ಆಡೋಣ
           ಸೊಂಪಾದ ಸಂಜೇ ವೇಳೆ ತಂಗಾಳಿ ಬೀಸೋ ವೇಳೆ
           ಇಂಪಾದ ರಾಗ ಮಾಲೇ ಹೂಬಳ್ಳಿ ಹಾಡೋ ವೇಳೆ
           ಒಂದಾಗಿ ಪಾಡೋಣ (ಓಓಓಓ ) ಒಂದಾಗಿ ಆಡೋಣ

ಹೆಣ್ಣು : ಹೂಬಾಣ ಹೂಡಬೇಡಿ ಲಾವಣ್ಯ ನೋಡಿರಿ ದಮ್ಮಯ್ಯೋ ಕಾಡಬೇಡಿ ಓಡಾಡೋ ಹಾದಿ
          ದಮ್ಮಯ್ಯೋ ಕಾಡಬೇಡಿ ಓಡಾಡೋ ಹಾದಿ
ಗಂಡು : ನೀನೇ ಎಲ್ಲಾ ಸಿಂಗಾರ ವಾಣಿ...
            ನೀನೇ ಎಲ್ಲಾ ಸಿಂಗಾರ ವಾಣಿ...
ಹೆಣ್ಣು : ಜೀರಿಗೇ ಬೆಲ್ಲ ಜಾರಿದ ಮೇಲೆ ನಾ ನಿಮ್ಮ ರಾಣಿ
          ಜೀರಿಗೇ ಬೆಲ್ಲ ಜಾರಿದ ಮೇಲೆ ನಾ ನಿಮ್ಮ ರಾಣಿ
ಇಬ್ಬರು :ಸೊಂಪಾದ ಸಂಜೇ ವೇಳೆ ತಂಗಾಳಿ ಬೀಸೋ ವೇಳೆ
           ಇಂಪಾದ ರಾಗ ಮಾಲೇ ಹೂಬಳ್ಳಿ ಹಾಡೋ ವೇಳೆ
           ಒಂದಾಗಿ ಪಾಡೋಣ ಓಓಓಓ  ಒಂದಾಗಿ ಆಡೋಣ

ಹೆಣ್ಣು : ನೀರಾಗಿ ತಂಪೂ ಸೀರೇ ನಾ ನೊಲ್ಲೇ ನೋಡಿ ಬಂಗಾರ ಬೆಳ್ಳಿ ಒಡವೇ ಬೇಕಿಲ್ಲ ಕೇಳಿ
          ಬಂಗಾರ ಬೆಳ್ಳಿ ಒಡವೇ ಬೇಕಿಲ್ಲ ಕೇಳಿ
ಗಂಡು : ಇನ್ನೇನ ಆಸೇ ಪನ್ನೀರ ಜಾಜೀ
            ಇನ್ನೇನ ಆಸೇ ಪನ್ನೀರ ಜಾಜೀ
ಹೆಣ್ಣು : ಎಲ್ಲೋ ಭಾಗ್ಯ ಗೆಲ್ಲುವಂಥ ಒಲವೇ ನೀಡಿ
          ಎಲ್ಲೋ ಭಾಗ್ಯ ಗೆಲ್ಲುವಂಥ ಒಲವೇ ನೀಡಿ
ಇಬ್ಬರು :ಸೊಂಪಾದ ಸಂಜೇ ವೇಳೆ ತಂಗಾಳಿ ಬೀಸೋ ವೇಳೆ
           ಇಂಪಾದ ರಾಗ ಮಾಲೇ ಹೂಬಳ್ಳಿ ಹಾಡೋ ವೇಳೆ
           ಒಂದಾಗಿ ಪಾಡೋಣ ಓಓಓಓ  ಒಂದಾಗಿ ಆಡೋಣ
----------------------------------------------------------------------------------------------------------------------

ಸ್ಕೂಲ್ ಮಾಸ್ಟರ್ (1958) - ಅತೀ ಮಧುರ ಅನುರಾಗ
ಸಂಗೀತ: ಟಿ.ಜಿ.ಲಿಂಗಪ್ಪ ಸಾಹಿತ್ಯ : ಕೆ.ಪ್ರಭಾಕರಶಾಸ್ತ್ರಿ ಗಾಯನ : ಏ .ಎಂ. ರಾಜಾ.ಜಮುನಾರಾಣಿ


ಹೆಣ್ಣು : ಆಆಆಅ ... (ಓಓಓಓಓ ) ಆಆಆಅ ... (ಆಆಆ..  )
ಗಂಡು : ಅತಿ ಮಧುರ ಅನುರಾಗ... ಅತಿ ಮಧುರ ಅನುರಾಗ
ಹೆಣ್ಣು : ಜೀವನ ಸಂಧ್ಯಾರಾಗ.. ಅತಿ ಮಧುರ ಅನುರಾಗ
ಗಂಡು : ಸಮರಸದ ವೈಭೋಗ       ಹೆಣ್ಣು : ಸಂಗ ಸಮಾಗಮ ರಾಗ
ಗಂಡು : ಸಮರಸದ ವೈಭೋಗ       ಹೆಣ್ಣು : ಸಂಗ ಸಮಾಗಮ ರಾಗ
ಇಬ್ಬರು : ಅತಿ ಮಧುರ ಅನುರಾಗ
             ಅತಿ ಮಧುರ ಅನುರಾಗ ಜೀವನ ಸಂಧ್ಯಾರಾಗ

ಹೆಣ್ಣು : ನೀಲಿಯ ಬಾನಿನ ಬೆಳ್ಮುಗಿಲೆ ನವಿಲಿನ ನಾಟ್ಯಕೆ ಕರೆಯೋಲೆ
          ನೀಲಿಯ ಬಾನಿನ ಬೆಳ್ಮುಗಿಲೆ ನವಿಲಿನ ನಾಟ್ಯಕೆ ಕರೆಯೋಲೆ
ಗಂಡು : ಜೇನಿನ ಹೊನಲೇ ಉಕ್ಕುವ ವೇಳೆ ... ಓಓಓಓಓ ( ಓಓಓಓಓ )
            ಜೇನಿನ ಹೊನಲೇ ಉಕ್ಕುವ ವೇಳೆ ಒಲವೆ ಸುಖದ ಉಯ್ಯಾಲೆ.....
ಇಬ್ಬರು : ಒಲವೆ ಸುಖದ ಉಯ್ಯಾಲೆ..... ಅತಿ ಮಧುರ ಅನುರಾಗ
             ಅತಿ ಮಧುರ ಅನುರಾಗ ಜೀವನ ಸಂಧ್ಯಾರಾಗ

ಹೆಣ್ಣು : ಯೌವ್ವನ ಬಾಳಿನ ಹೊಂಬಾಳೆ ಪ್ರೀತಿಯೇ ಬಾಡದ ಹೂಮಾಲೆ
          ಯೌವ್ವನ ಬಾಳಿನ ಹೊಂಬಾಳೆ ಪ್ರೀತಿಯೇ ಬಾಡದ ಹೂಮಾಲೆ
ಗಂಡು : ನಲ್ಮೆಯ ನೀಡೋ ಪ್ರೇಮದ ಲೀಲೆ ... ಓಓಓಓಓ ( ಓಓಓಓಓ )
            ನಲ್ಮೆಯ ನೀಡೋ ಪ್ರೇಮದ ಲೀಲೆ ಒಲವೆ ಸುಖದ ಉಯ್ಯಾಲೆ.....
ಇಬ್ಬರು : ಒಲವೆ ಸುಖದ ಉಯ್ಯಾಲೆ.....ಅತಿ ಮಧುರ ಅನುರಾಗ
             ಅತಿ ಮಧುರ ಅನುರಾಗ ಜೀವನ ಸಂಧ್ಯಾರಾಗ
             ಅತಿ ಮಧುರ 
----------------------------------------------------------------------------------------------------------------------

ಸ್ಕೂಲ್ ಮಾಸ್ಟರ್ (1958) - ಭಾಮೆಯ ನೋಡಲೂ
ಸಂಗೀತ: ಟಿ.ಜಿ.ಲಿಂಗಪ್ಪ ಸಾಹಿತ್ಯ : ಕೆ.ಪ್ರಭಾಕರಶಾಸ್ತ್ರಿ ಗಾಯನ : ಆರ್.ರಾಜಲಕ್ಷ್ಮಿ

ಭಾಮೆಯ ನೋಡಲು ತಾ ಬಂದಾ
ಭಾ...ಮೆಯ ನೋಡಲು ತಾ ಬಂದಾ
ಭಾ.....ಮೆಯ ನೋಡಲು ತಾ.. ಬಂದಾ
ಬೃಂದಾವನದಿಂದಾ ಮುಕುಂದಾ ಭಾಮೆಯ ನೋಡಲು ತಾ ಬಂದಾ
ಬೃಂದಾವನದಿಂದಾ ಮುಕುಂದಾ ಭಾಮೆಯ ನೋಡಲು ತಾ.... ಬಂದಾ

ಕಣ್ಸನ್ನೆಯಲೇ..ಹೇ...ಹೇ...ಹೇ...ಹೇ...ಹೇ..ಹೇ.
ಕಣ್ಸನ್ನೆಯಲೇ ಕನ್ಯೆಯ ಮನ ಸೆಳೆದ
ಕಣ್ಣ್....ಸನ್ನೆಯಲೇ ಕನ್ಯೆಯ ಮನ ಸೆಳೆದ
ಕಣ್ಣ್......ಸನ್ನೆಯಲೇ ಕನ್ಯೆಯ ಮನ ಸೆಳೆದ ಚಿನ್ಮಯ ಮೂರುತಿ ಶ್ರೀಗೋವಿಂದಾ
ಚಿನ್ಮಯ ಮೂರುತಿ ಶ್ರೀ..ಗೋ..ವಿಂದಾ ಭಾಮೆಯ ನೋಡಲು ತಾ ಬಂದಾ
ಬೃಂದಾವನದಿಂದಾ ಮುಕುಂದಾ ಭಾಮೆಯ ನೋಡಲು ತಾ.... ಬಂದಾ

ಬಾಗಿಲ ಮರೆಯಾಗೀ.........
ಬಾಗಿಲ ಮರೆಯಾಗಿ ನಾಗೋಲಿಯ ದಿನ
ಬಾ..ಗಿಲ ಮರೆಯಾಗಿ ನಾ..ಗೋ.ಲಿಯ ದಿನ ರಾಗೋಲ್ಲಾಸದಿ ಊದಿದ ಕೊಳಲಿನ
ರಾಗೋಲ್ಲಾಸದಿ ಊ..ದಿದ ಕೊಳಲಿನ  ಕೂಗಿಗೆ ಮನಸೋತು ಮೋಹದಿ ಮೈ ಬಿಗಿದೆ
ಕೂ..ಗಿಗೆ ಮನಸೋತು ಮೋಹದಿ ಮೈ ಬಿಗಿದೆ
ಕೂ....ಗಿಗೆ ಮನಸೋತು ಮೋಹದಿ ಮೈ ಬಿಗಿದೆ ಆಗರಿವಾಯಿತು ಅವನೇ ಜನಾರ್ದನ
ಆಗರಿವಾಯಿತು ಅವನೇ ಜನಾರ್ದನಾ ಭಾಮೆಯ ನೋಡಲು ತಾ ಬಂದಾ
ಬೃಂದಾವನದಿಂದಾ ಮುಕುಂದಾ ಭಾಮೆಯ ನೋಡಲು ತಾ.... ಬಂದಾ
----------------------------------------------------------------------------------------------------------------------

ಸ್ಕೂಲ್ ಮಾಸ್ಟರ್ (1958) - ಎಲ್ಲರೂ ನಮ್ಮವರೇ
ಸಂಗೀತ: ಟಿ.ಜಿ.ಲಿಂಗಪ್ಪ ಸಾಹಿತ್ಯ : ಕೆ.ಪ್ರಭಾಕರಶಾಸ್ತ್ರಿ ಗಾಯನ : ಕೋಮಲ್

ಎಲ್ಲಾರೂ ನಮ್ಮವರೇ ..
ಎಲ್ಲಾರೂ ನಮ್ಮವರೇ ಜಗದೀ ಗುಣಕಿಂತ ಮಿಗಿಲಾದ ಹಣವಂತರಾದರೇ
ಎಲ್ಲಾರೂ ನಮ್ಮವರೇ ..
ಎಲ್ಲಾರೂ ನಮ್ಮವರೇ ಜಗದೀ ಗುಣಕಿಂತ ಮಿಗಿಲಾದ ಹಣವಂತರಾದರೇ
ಎಲ್ಲಾರೂ ನಮ್ಮವರೇ ..

ಒಂದೂ ಒಂದಾದ ಮನೆಯಲ್ಲೇ ನೋಡೀ .. ಆಆಆ....ಆಆಆ
ಒಂದೂ ಒಂದಾದ ಮನೆಯಲ್ಲೇ ನೋಡೀ ಒಡೆದು ಹನ್ನೆರಡೂ ಭಾಗವ ಮಾಡಿ
ಒಡಲಾದ ನಂಟರೂ ... ಕೊಂಡಾಡೋ ಬೀಗರೂ...
ಒಡಲಾದ ನಂಟರೂ ಕೊಂಡಾಡೋ ಬೀಗರೂ ನಾವಲ್ಲಾ ಗಾಂಧಾರಿ ಎನುವರೂ ಕೇಳೀ 
ಎಲ್ಲಾರೂ ನಮ್ಮವರೇ ..
ಎಲ್ಲಾರೂ ನಮ್ಮವರೇ ಜಗದೀ ಗುಣಕಿಂತ ಮಿಗಿಲಾದ ಹಣವಂತರಾದರೇ
ಎಲ್ಲಾರೂ ನಮ್ಮವರೇ ..

ಪ್ರೀತಿ ವಾತ್ಸಲ್ಯ ನಿಧಿಯಾದ ಮಕ್ಕಳೂ... ಆಆಆ... ಆಆಆ
ಪ್ರೀತಿ ವಾತ್ಸಲ್ಯ ನಿಧಿಯಾದ ಮಕ್ಕಳೂ ಮನೆಗೇ ಮಾಣಿಕ್ಯ ಸಿರಿಯಾದ ಸೊಸೆಗಳೂ
ಅತ್ತೇ ಮಾವಂದಿರಾ... ಬಹು ದೂರ ಮಾಡೀ ..
ಅತ್ತೇ ಮಾವಂದಿರಾ ಬಹು ದೂರ ಮಾಡೀ ಬೆಂತಲ್ಲ ಹೊಂಗಲ್ಲ ಎನ್ನುವರು ಹೇಳಿ
ಎಲ್ಲಾರೂ ನಮ್ಮವರೇ..
ಎಲ್ಲಾರೂ ನಮ್ಮವರೇ ಜಗದೀ  ಗುಣದಿಂದ ಮಿಗಿಲಾದ ಹಣವಂತರಾದರೇ
ಎಲ್ಲಾರೂ ನಮ್ಮವರೇ ಜಗದಿ ಎಲ್ಲಾರೂ ನಮ್ಮವರೇ.. ..
----------------------------------------------------------------------------------------------------------------------

ಸ್ಕೂಲ್ ಮಾಸ್ಟರ್ (1958) - ನಾನೂ ನೀನೂ ಜೋಡಿ
ಸಂಗೀತ: ಟಿ.ಜಿ.ಲಿಂಗಪ್ಪ ಸಾಹಿತ್ಯ : ಕೆ.ಪ್ರಭಾಕರಶಾಸ್ತ್ರಿ ಗಾಯನ : ಜಮುನಾರಾಣಿ, ನಾಗೇಶ್ವರರಾವ್

ಗಂಡು : ಓಓಓಓಓಓಓ ... ಓಓಓಓಓಓಓ
ಹೆಣ್ಣು : ಓಓಓಓಓಓಓ..  ಓಓಓಓಓಓಓ
ಗಂಡು : ನಾನು ನೀನು ಜೋಡಿ ಈ ಜೀವನ ಎತ್ತಿನ ಗಾಡಿ.. ಹೇಯ್ .. ಟೂರ್ರ್ಯಾ ...
           ನಾನು ನೀನು ಜೋಡಿ ಈ ಜೀವನ ಎತ್ತಿನ ಗಾಡಿ
           ಹಳ್ಳಿ ಹಾದಿಯಲ್ಲೂ ಹೊಸ ಡಿಲ್ಲಿ ಬೀದಿಯಲ್ಲೂ.. ಓಓಓಓ .. ಓಓಓಓಓ
           ಹಳ್ಳಿ ಹಾದಿಯಲ್ಲೂ ಹೊಸ ಡಿಲ್ಲಿ ಬೀದಿಯಲ್ಲೂ
ಹೆಣ್ಣು : ಹಳ್ಳ ದಿಣ್ಣೆ ಎಲ್ಲಾ ದಾಟಿ ... (ಅಹ್ಹಹ್ )
          ಹಳ್ಳ ದಿಣ್ಣೆ ಎಲ್ಲಾ ದಾಟಿ ಒಂದೇ ರೀತಿ ಓಡೋ ದಾರೀ
ಇಬ್ಬರು : ನಾನು ನೀನು ಜೋಡಿ ಈ ಜೀವನ ಎತ್ತಿನ ಗಾಡಿ

ಗಂಡು : ರೈಲು ಕಾರು ಮೋಟಾರ ಗಾಡಿ ಬಾರದ ಊರಿಗೆ ನಡೆಯೋ ಗಾಡಿ  (ಐತೇ ) ಓ.. ಎತ್ತಿನ ಗಾಡೀ
            ರೈಲು ಕಾರು ಮೋಟಾರ ಗಾಡಿ ಬಾರದ ಊರಿಗೆ ನಡೆಯೋ ಗಾಡಿ
ಹೆಣ್ಣು : ತೌರಿಗೇ ದಾರಿ ತೋರುವ ಗಾಡೀ ಅತ್ತೆಮನೆಯಾ ಮುತ್ತಿನ ಜೋಡಿ (ಆಹ್ಹಾ.. )
          ತೌರಿಗೇ ದಾರಿ ತೋರುವ ಗಾಡೀ ಅತ್ತೆಮನೆಯಾ ಮುತ್ತಿನ ಜೋಡಿ
ಇಬ್ಬರು : ನಾನು ನೀನು ಜೋಡಿ ಈ ಜೀವನ ಎತ್ತಿನ ಗಾಡಿ

ಹೆಣ್ಣು : ಹೆಣ್ಣು ಗಂಡು ಪ್ರೇಮದಿ ಕೂಡಿ.. ಆಆಆ... ಆಆಆ...
          ಹೆಣ್ಣು ಗಂಡು ಪ್ರೇಮದಿ ಕೂಡಿಮದುವೆಯ ಪುರವಣಿ ಹೋಗೋ ಗಾಡಿ ಈ ಕಾಮನ ಜಾಡಿ.. (ಕೈ ಕೈ )
ಗಂಡು : ಭಾರತ ದೇಶದ ರೈತರ ನವನಿಧಿ ಒಂದೇ ಜೋಡಿ ಎತ್ತಿನ ಗಾಡಿ          
ಇಬ್ಬರು : ಭಾರತ ದೇಶದ ರೈತರ ನವನಿಧಿ ಒಂದೇ ಜೋಡಿ ಎತ್ತಿನ ಗಾಡಿ             
           ನಾನು ನೀನು ಜೋಡಿ ಈ ಜೀವನ ಎತ್ತಿನ ಗಾಡಿ (ಓಓಓಓಓಓಓ )
ಗಂಡು : ನಾನು ನೀನು ಜೋಡಿ ಈ ಜೀವನ ಎತ್ತಿನ ಗಾಡಿ (ಓಓಓಓಓಓಓ )
           ನಾನು ನೀನು ಜೋಡಿ ಈ ಜೀವನ ಎತ್ತಿನ ಗಾಡಿ (ಓಓಓಓಓಓಓ )
           ನಾನು ನೀನು ಜೋಡಿ ಈ ಜೀವನ ಎತ್ತಿನ ಗಾಡಿ (ಓಓಓಓಓಓಓ )
----------------------------------------------------------------------------------------------------------------------

ಸ್ಕೂಲ್ ಮಾಸ್ಟರ್ (1958) - ಇನ್ನೇನೂ ಆನಂದ ಬೇಕಾಗಿದೇ
ಸಂಗೀತ: ಟಿ.ಜಿ.ಲಿಂಗಪ್ಪ ಸಾಹಿತ್ಯ : ಕೆ.ಪ್ರಭಾಕರಶಾಸ್ತ್ರಿ ಗಾಯನ : ಆರ್.ರಾಜಲಕ್ಷ್ಮಿ

ಇನ್ನೇನೂ ಆನಂದ ಬೇಕಾಗಿದೇ ..  ಏಏಏಏಏ
ಇನ್ನೇನೂ ಆನಂದ ಬೇಕಾಗಿದೇ ಸವಿಯೂಟವ ನಾ ನೀಡುವೇ 
ಸವಿಯೂಟವ ನಾ ನೀಡುವೇ  ಮಾತಾಡಿ ಉಲ್ಲಾಸದೇ .. 
ಇನ್ನೇನೂ ಆನಂದ ಬೇಕಾಗಿದೇ ..

ಕನಸಾದ ಆಸೇ ನನಸಾಗಿದೇ ಕೆನೆಹಾಲು ಬೆಲ್ಲ ಅಣಿಯಾಗಿದೇ 
ಕನಸಾದ ಆಸೇ ನನಸಾಗಿದೇ ಕೆನೆಹಾಲು ಬೆಲ್ಲ ಅಣಿಯಾಗಿದೇ 
ಹುಯ್ಯಾದ ಹಣ್ಣು ಸಿಹಿಯಾಗಿದೇ ಕಣ್ಣಿಂದ ಬಾಳೆಲ್ಲಾ ಕಥೆಯಾಗಿದೇ 
ಸಂಕೋಚದಿ ತಡಮಾಡದೇ ಮಾತಾಡಿ ಉಲ್ಲಾಸದೇ ... 
ಇನ್ನೇನೂ ಆನಂದ ಬೇಕಾಗಿದೇ ..

ಪ್ರೇಮಾನುರಾಗ ಒಂದಾಗಿದೇ ಏಕಾಂತ ವೇಣಿ ಹಾಯಾಗಿದೇ 
ಪ್ರೇಮಾನುರಾಗ ಒಂದಾಗಿದೇ ಏಕಾಂತ ವೇಣಿ ಹಾಯಾಗಿದೇ 
ನೂರಾರು ಚಿಂತೇ ಕಣದಂತಿದೇ ಮನಸೆಲ್ಲಾ ಮಲ್ಲಿಗೆಯೇ ಹೂವಾಗಿದೇ 
ಸಂಕೋಚದಿ ತಡಮಾಡದೇ ಮಾತಾಡಿ ಉಲ್ಲಾಸದೇ ... 
ಇನ್ನೇನೂ ಆನಂದ ಬೇಕಾಗಿದೇ ..
ಇನ್ನೇನೂ ಆನಂದ ಬೇಕಾಗಿದೇ ಸವಿಯೂಟವ ನಾ ನೀಡುವೇ   
ಸವಿಯೂಟವ ನಾ ನೀಡುವೇ  ಮಾತಾಡಿ ಉಲ್ಲಾಸದೇ .. 
ಇನ್ನೇನೂ ಆನಂದ ಬೇಕಾಗಿದೇ ..
----------------------------------------------------------------------------------------------------------------------

No comments:

Post a Comment