579. ಬಣ್ಣದ ಗೆಜ್ಜೆ (1990)

ಬಣ್ಣದ ಗೆಜ್ಜೆ ಚಿತ್ರದ ಹಾಡುಗಳು
  1. ಸ್ವಾತಿ ಮುತ್ತಿನ ಮಳೆ ಹನಿಯೇ ಮೆಲ್ಲಮೆಲ್ಲನೆ ಧರೆಗಿಳಿಯೇ 
  2. ಏನಮ್ಮ ಮರಿ ಕೂಸೇ ಗೆಲ್ಲದು ನಿನ್ನ ಆಸೇ 
  3. ಪ್ರೇಮ ಗೀಮ್ ಜಾನೇದೋ ಎಲ್ಲಾ ಮಾಯವೋ 
  4. ಡಾನ್ಸ್ ಡಾನ್ಸ್ ಡಾನ್ಸ್ ಬಾಬಾ ಡಾನ್ಸ್ 
  5. ಯೋಗಾ ಯೋಗಾ ಯೋಗಾ ಯೋಗ 
  6. ಬೊಂಬಾಟ್ ಬೊಂಬಾಟ್ ಬೋಲೋ ಬೊಂಬಾಟ್ ಬೊಮ್ಮಣ್ಣ 
  7. ಈ ಬಣ್ಣದ ಗೆಜ್ಜೆ ಅಪರೂಪದ ಗೆಜ್ಜೆ 
ಬಣ್ಣದ ಗೆಜ್ಜೆ (1990) - ಸ್ವಾತಿ ಮುತ್ತಿನ
ಸಂಗೀತ, ಸಾಹಿತ್ಯ: ಹಂಸಲೇಖ ಹಾಡಿರುವವರು: ಎಸ್.ಪಿ.ಬಿ, ಎಸ್.ಜಾನಕಿ

ಸ್ವಾತಿ ಮುತ್ತಿನ ಮಳೆ ಹನಿಯೆ ಮೆಲ್ಲ ಮೆಲ್ಲನೆ ಧರೆಗಿಳಿಯೆ
ನನ್ನ ರಾಣಿಯ ಹೃದಯದ ಚಿಪ್ಪಿಗೆ ಬಾರೆ ಸರ ಸರನೆ
ಪ್ರೀತಿಯ ಮುತ್ತಿನ ಹಾರವ ಕಟ್ಟಲು ಧುಮುಕೆ ಮಿರ ಮಿರನೆ
ಸ್ವಾತಿ ಮುತ್ತಿನ ಮಳೆ ಹನಿಯೆ ಮೆಲ್ಲ ಮೆಲ್ಲನೆ ಧರೆಗಿಳಿಯೆ
ನನ್ನ ರಾಜನ ಹೃದಯದ ಚಿಪ್ಪಿಗೆ ಬಾರೆ ಸರ ಸರನೆ
ಪ್ರೀತಿಯ ಮುತ್ತಿನ ಹಾರವ ಕಟ್ಟಲು ಧುಮುಕೆ ಮಿರ ಮಿರನೆ

ಪ್ರೇಮದ ಕಾಶಿಯಲಿ ಮಳೆಯೆ ನಮಗೆ ಸ್ನಾನ ಕನಸೆ ಮನದ ಧ್ಯಾನ
ಮೈ ನಡುಗುವ ಛಳಿಯಲ್ಲಿ ಈ ಬೆಚ್ಚನೆ ಸವಿಗಾನ
ಪ್ರೇಮದ ಹಬ್ಬದಲಿ ಗುಡುಗೆ ನಮಗೆ ಮೇಳ ಸಿಡಿಲೆ ಅದರ ತಾಳ
ಆ ಮಿಂಚಿನ ಬೆಳಕಲ್ಲೆ ಈ ಹೃದಯದ ಸಮ್ಮೇಳ
ಆನಂದದ ಆಲಾಪದ ಆಲಿಂಗನವೋ
ಈ ನಿಮಿಷದ ಈ ಮೋಹದ ಆಪೋಶಣವೋ
ಈ ಹೆದರುವ ಥರದಲ್ಲೆ ಈ ಪ್ರೇಮದ ಗುಣಗಾನ

ಬೆಳ್ಳಿಯ ತಾರೆಗಳ ತರುವೆ ನಿನಗೆ ಕೊಡುವೆ ನಿನ್ನ ಮುಡಿಗೆ ಇಡುವೆ
ಈ ಪ್ರೇಮದ ಸಾಹಸಕೆ ನನಗೇನೆ ನೀ ತರುವೆ
ಪ್ರೇಮದ ಮಹಲಿನಲಿ ನನಗೂ ನಿನಗೂ ನಡುವೆ ಪರದೆ ಸರಿಯೆ ಮದುವೆ
ಆ ಹುಣ್ಣಿಮೆ ರಾತ್ರಿಯಲಿ ನಾ ಮುತ್ತಿನ ಮಳೆಗರೆವೆ
ಆ ಶುಭದಿನ ಭೋರ್ಗರೆಯುವ ನೀರಾಗುವೆ ನಾ
ಆ ಮಿಲನಕೆ ಹಾತೊರೆಯುವ ಸಾಗರವೋ ನಾ
ಆ ಸಾಗರ ಸಂಗಮಕೆ ಈ ಉಸಿರ ಹಿಡಿದಿಡುವೆ
--------------------------------------------------------------------------------------------------------------------------

ಬಣ್ಣದ ಗೆಜ್ಜೆ (1990) - ಏನಮ್ಮ ಮರಿ ಕೂಸೇ ಹೇ ಗೆಲ್ಲದು ನಿನ್ನ ಆಸೇ
ಸಂಗೀತ, ಸಾಹಿತ್ಯ: ಹಂಸಲೇಖ ಹಾಡಿರುವವರು: ಎಸ್.ಪಿ.ಬಿ, ನಾಗೂರಬಾಬು

ಹೇ ಹೇ.ಹೇ..ಹೇ ಹೇ.ಹೇ..ಹೇ ಹೇ.ಹೇ..
ಹೇಹೇ.... ಕ್ರೇಜಿ..ಕ್ರೇಜಿ..ಕ್ರೇಜಿ..ಕ್ರೇಜಿ..ಕ್ರೇಜಿ..ಕ್ರೇಜಿ..ಕ್ರೇಜಿ..ಕ್ರೇಜಿ
ಹೇಹೇ.... ಕ್ರೇಜಿ..ಕ್ರೇಜಿ..ಕ್ರೇಜಿ..ಕ್ರೇಜಿ..ಕ್ರೇಜಿ..ಕ್ರೇಜಿ..ಕ್ರೇಜಿ..ಕ್ರೇಜಿ
ಅಟ್ಯಾಕ್..ಅಟ್ಯಾಕ್...ಅಟ್ಯಾಕ್..ಅಟ್ಯಾಕ್...
ಅಟ್ಯಾಕ್..ಅಟ್ಯಾಕ್...ಅಟ್ಯಾಕ್..ಅಟ್ಯಾಕ್...
ಹೇ.. ಏನಮ್ಮ ಮರಿ ಕೂಸೇ ಹೇ ಗೆಲ್ಲದು ನಿನ್ನ ಆಸೇ
ಹೇ.. ಬಾರಮ್ಮ ಎಳೇ ಕೂಸೇ ಹೇ.. ಬಗ್ಗದು ನನ್ನ ಮೀಸೆ
ದಮ್ಮಿದ್ರೆ ನನ್ನ ಗೆಲ್ಲು ಬಾ ಅಟ್ಯಾಕ್ ಅಟ್ಯಾಕ್
ದಿಲ್ಲದ್ರೇ.. ನನ್ನ ಗೆಲ್ಲು ಬಾ  ಅಟ್ಯಾಕ್ ಅಟ್ಯಾಕ್ 
ಹೇ.. ಏನಮ್ಮ ಮರಿ ಕೂಸೇ ಹೇ ಗೆಲ್ಲದು ನಿನ್ನ ಆಸೇ
ಹೇ.. ಬಾರಮ್ಮ ಎಳೇ ಕೂಸೇ ಹೇ.. ಬಗ್ಗದು ನನ್ನ ಮೀಸೆ

ಅಟ್ಯಾಕ್ ಅಟ್ಯಾಕ್  ಅಟ್ಯಾಕ್ ಅಟ್ಯಾಕ್ 
ಹೇಹೇ ಹೇಹೇ ಸ್ಟೈಲಲ್ಲಿ  ನಾನು ಕಿಂಗೂ ಸಾಟಿನ  ನಂಗು ನಿಂಗೂ 
ಹೇಹೇ ಹೇಹೇ ಫೈಟಿಗೇ ನಾನು ಬಾಸು ನೀನಿನ್ನೂ ಹಸುಗೂಸು
ನಂಗಾಗದವ್ರಿಗೇ.. ನಾನು ಶೇಕ್ ಶೇಕ್
ದಂಗಾದವರಿಗೇ ಬ್ರೇಕ್ ಬ್ರೇಕ್ 
ನಂಜಾಡುವವರಿಗೇ ನಾನು ಶಾಕ್ ಶಾಕ್
ಗಿಂಜಾಡುವವರಿಗೆ ನೀನೂ ಜೋಕ್ ಜೋಕ್
ಗಂಡರ ಗಂಡ ರಣಭೇರುಂಡ ನಾ ಸರದಾರ ನಾ ರಣಧೀರ
ಗುಂಡಿನ ಗುಂಡಿಗೆ ಇದ್ದರೇ ಬಾ ಹಠ
ಅಟ್ಯಾಕ್  ಅಟ್ಯಾಕ್ ಅಟ್ಯಾಕ್  ಅಟ್ಯಾಕ್
ಅಟ್ಯಾಕ್  ಅಟ್ಯಾಕ್ ಅಟ್ಯಾಕ್  ಅಟ್ಯಾಕ್ ಮಾಡು...
ಹೇಹೇ ಹೇಹೇ ಹೇಹೇ ಹೇಹೇ ಹೇಹೇ ಹೇಹೇ
ಹೇ.. ಏನಮ್ಮ ಮರಿ ಕೂಸೇ ಹೇ ಗೆಲ್ಲದು ನಿನ್ನ ಆಸೇ
ಹೇ.. ಬಾರಮ್ಮ ಎಳೇ ಕೂಸೇ ಹೇ.. ಬಗ್ಗದು ನನ್ನ ಮೀಸೆ 

ಓಒ..ಓಒ..ಓಒ..ಓಒ.   ಓಒ..ಓಒ..ಓಒ..ಓಒ.
ಅಟ್ಯಾಕ್ ಅಟ್ಯಾಕ್ ಅಟ್ಯಾಕ್ ಅಟ್ಯಾಕ್ 
ಹೇಹೇ ಹೇಹೇ ಸ್ವೀಟಿಗೇ ನಾನು ಸ್ವೀಟುಪ್ ಏಟಿಗೆ ಎದುರೇಟು 
ಹೇಹೇ ಹೇಹೇ .. ಘಾಟಿಗೇ ನಾನು ಘಾಟಿ ಪೋಟಿಗೆ ಪೈಪೋಟಿ 
ಸತ್ಯವ ಹೇಳೋದಕ್ಕೆ ನಾನು ಫೇಮ್ ಫೇಮ್ 
ಸುಳ್ಳನ್ನ ಬಗ್ಗಿಸೋದೇ ನನ್ನ ಗೇಮ್ ಗೇಮ್
ಕೈಯಲ್ಲಿ ಆಗದಿದ್ರೇ ಇಲ್ಲಿ ಶೇಮ್ ಶೇಮ್ 
ಸೋಲುವ ಕಾಲ ಬಂದ್ರೇ ಇಲ್ಲೇ ಕ್ರೈಮ್ ಕ್ರೈಮ್ 
ಹ್ಹಾ..  ಕೈಯಿಗೇ ಕೈಯ್ಯಿ ಮುಯ್ಯಿಗೇ ಮುಯ್ಯಿ ಸೇಡಿಗೆ ಸೇಡು 
ಸೇರಿಗೇ ಹಾಡು ಗುಂಡಿನ ಗುಂಡಿಗೆ ಇದ್ದರೇ ಬಾ
ಅಟ್ಯಾಕ್ ಅಟ್ಯಾಕ್ ಅಟ್ಯಾಕ್ ಅಟ್ಯಾಕ್ 
ಅಟ್ಯಾಕ್ ಅಟ್ಯಾಕ್ ಅಟ್ಯಾಕ್ ಅಟ್ಯಾಕ್ ಮಾಡು 
ಹೇ.. ಏನಮ್ಮ ಮರಿ ಕೂಸೇ ಹೇ ಗೆಲ್ಲದು ನಿನ್ನ ಆಸೇ
ಹೇ.. ಬಾರಮ್ಮ ಎಳೇ ಕೂಸೇ ಹೇ.. ಬಗ್ಗದು ನನ್ನ ಮೀಸೆ
ದಮ್ಮಿದ್ರೆ ನನ್ನ ಗೆಲ್ಲು ಬಾ ಅಟ್ಯಾಕ್ ಅಟ್ಯಾಕ್
ದಿಲ್ಲದ್ರೇ.. ನನ್ನ ಗೆಲ್ಲು ಬಾ  ಅಟ್ಯಾಕ್ ಅಟ್ಯಾಕ್ 
ಹೇ.. ಏನಮ್ಮ ಮರಿ ಕೂಸೇ ಹೇ ಗೆಲ್ಲದು ನಿನ್ನ ಆಸೇ
ಹೇ.. ಬಾರಮ್ಮ ಎಳೇ ಕೂಸೇ ಹೇ.. ಬಗ್ಗದು ನನ್ನ ಮೀಸೆ
--------------------------------------------------------------------------------------------------------------------------

ಬಣ್ಣದ ಗೆಜ್ಜೆ (1990) - ಪ್ರೇಮಗೀಮ್ ಜಾನೇದೋ ಎಲ್ಲಾ ಮಾಯವೋ
ಸಂಗೀತ, ಸಾಹಿತ್ಯ: ಹಂಸಲೇಖ ಹಾಡಿರುವವರು: ಎಸ್.ಪಿ.ಬಿ, ಎಸ್.ಜಾನಕೀ

ಗಂಡು : ಪ್ರೇಮ ಗೀಮ್ ಜಾನೇದೋ ಎಲ್ಲಾ ಮಾಯವೋ
           ಪ್ರೇಮಿಂ ಶರಣಂ ಗಚ್ಛಾಮಿ ಅಂದ್ರೆ ಮೋಸವೋ
          ನೀರಲ್ಲಿ ಕಂಡೇ ನಾನು ಆ ಮೀನಿನ ಹೆಜ್ಜೇ
          ಕಣ್ಣಿಗೇ ಕಾಣಲಿಲ್ಲ ಆ.. ಬಣ್ಣದ ಗೆಜ್ಜೇ

ಹೆಣ್ಣು : ಹ್ಹಹ್ಹಹ್ಹಹ್ಹ...
ಗಂಡು : ನಗುತ ಬರುವಾ ಕನಸು ಕೊಡುವಾ ಮನಸು ಮುರಿವಾ ತನುವ ಸುಡುವಾ
           ಈ ಪ್ರೀತಿನೇ ಸುಳ್ಳೂ ಕಲ್ಲಲ್ಲಿನ  ಮುಳ್ಳೂ
          ಪ್ರೇಮದ ಅರಮನೆಯೇ.. ಗಾಳಿಯ ಗೋಪುರವೋ
         ಪ್ರೇಮದ ಗೆಳೆತನಾ .. ನಾಗರ ಚುಂಬನವೋ
         ಎಲ್ಲಾ ನಾಟಕವೋ ಎಲ್ಲಾ ಭೂಟಕವೋ
        ಪ್ರೇಮ ಗೀಮ್ ಜಾನೇದೋ ಎಲ್ಲಾ ಮಾಯವೋ
        ಪ್ರೇಮಿಂ ಶರಣಂ ಗಚ್ಛಾಮಿ ಅಂದ್ರೆ ಮೋಸವೋ
        ನೀರಲ್ಲಿ ಕಂಡೇ ನಾನು ಆ ಮೀನಿನ ಹೆಜ್ಜೇ
        ಕಣ್ಣಿಗೇ ಕಾಣಲಿಲ್ಲ ಆ.. ಬಣ್ಣದ ಗೆಜ್ಜೇ

ಹೆಣ್ಣು : ಪಾರ್ವತೀ ಇಲ್ಲದ ಪರಮೇಶ ಏತಕೋ ಒಣ ಘೋಷ
          ಪ್ರೇಮವೇ ಜೀವನ ಸಂದೇಶ ತೆಗೆದಿರಿಸೋ ನಿನ್ನ ವೇಷ
ಗಂಡು : ಪ್ರಳಯಾ ಬರಲೀ ವಿನಯ ಇರಲೀ
           ಅವಳೇ ಬರಲೀ ಉಸಿರೇ ಬಿಡಲೀ
           ನನಗೇನು ಬೇಕಿಲ್ಲಾ ನನಗ್ಯಾರ ಹಂಗಿಲ್ಲಾ
          ನಾನೇ ಸಂಗೀತ ನಾನೇ ವೇದಾಂತ ಆದಿ ಅಂತ್ಯಕ್ಕೂ ನನದೇ ಸಿದ್ದಾಂತ
          ನಾನೇ ನಾದಮಯ ನಾನೇ ದಿಗ್ವಿಜಯ
          ಪ್ರೇಮ ಗೀಮ್ ಜಾನೇದೋ ಎಲ್ಲಾ ಮಾಯವೋ
           ಪ್ರೇಮಿಂ ಶರಣಂ ಗಚ್ಛಾಮಿ ಅಂದ್ರೆ ಮೋಸವೋ
          ನೀರಲ್ಲಿ ಕಂಡೇ ನಾನು ಆ ಮೀನಿನ ಹೆಜ್ಜೇ
          ಕಣ್ಣಿಗೇ ಕಾಣಲಿಲ್ಲ ಆ.. ಬಣ್ಣದ ಗೆಜ್ಜೇ
--------------------------------------------------------------------------------------------------------------------------

ಬಣ್ಣದ ಗೆಜ್ಜೆ (1990) - ಡಾನ್ಸ್ ಡಾನ್ಸ್ ಡಾನ್ಸ್ ಬಾಬಾ ಡಾನ್ಸ್ ಡಾನ್ಸ್
ಸಂಗೀತ, ಸಾಹಿತ್ಯ: ಹಂಸಲೇಖ ಹಾಡಿರುವವರು: ಎಸ್.ಪಿ.ಬಿ, ಎಸ್.ಜಾನಕೀ

ಹೆಣ್ಣು : ಡಾನ್ಸ್ ಡಾನ್ಸ್ ಬಾಬಾ ಡಾನ್ಸ್ ಡಾನ್ಸ್
ಗಂಡು: ಡಾನ್ಸ್ ಡಾನ್ಸ್ ಬೇಬಿ ಡಾನ್ಸ್ ಡಾನ್ಸ್
           ಒಂದ್ ಸರಿಗಾ ಸರಿಗಾ ಸರಿಗಾ
ಹೆಣ್ಣು :  ಒಂದ್ ಸರಿಗಾ ಸರಿಗಾ ಸರಿಗಾ
ಗಂಡು : ಟೂ ರಿಗಮ ರಿಗಮ      ಹೆಣ್ಣು :  ಟೂ ರಿಗಮ ರಿಗಮ
ಗಂಡು : ತ್ರೀ ...
ಹೆಣ್ಣು : ರಿಗಮಾ ಗಮಪಾ ಮಮದ ಪದನಿ ದನಿಸ ನಿದರಿ ದರಿಸಾ
          ಗಗಗಸಾ ರರರಾ ಪಪಮಾ
ಹೆಣ್ಣು : ಜೀವನ ಆಟದ ಮೈದಾನ ಪ್ರೇಮದ ಓಟಕೆ ಬಾರೋ
ಹೆಣ್ಣು : ಡಾನ್ಸ್ ಡಾನ್ಸ್ ಬಾಬಾ ಡಾನ್ಸ್ ಡಾನ್ಸ್
ಗಂಡು: ಡಾನ್ಸ್ ಡಾನ್ಸ್ ಬೇಬಿ ಡಾನ್ಸ್ ಡಾನ್ಸ್

ಗಂಡು :  ಒಂದ್ ಸರಿಗಾ ಸರಿಗಾ ಸರಿಗಾ ನಾಟ್ಯಕೆ  ಸರಿಸಮಾ ಯಾವುದೀದೆ
ಹೆಣ್ಣು :  ಟೂ ರಿಗಮ ರಿಗಮ ಪಂಚಮ ವೇದ ಸಂಗೀತವಿದೆ
ಗಂಡು : ನಾಟ್ಯದ ಒಲವಿಗೆ ನಾದವು ಕಲಿತರೆ
ಹೆಣ್ಣು : ಅಭಿನಯ ಸ್ಥಾನವೇ ಆದರಲಿ ನಿಂತರೆ
ಗಂಡು : ಸೃಷ್ಟಿಯೇ                ಹೆಣ್ಣು : ಸೌಂದರ್ಯವೋ
ಗಂಡು : ಅದು ಪ್ರೇಮವೇ
ಗಂಡು : ಪ್ರೀತಿಯ ಮಾಯದ ಕೈಯಲಿ ತಿರುಗುವುದು  ಭೂಮಿ
           ಪ್ರೇಮದ ಕ್ರೀಡೆಗೆ ಬಹುಮಾನ ಹೃದಯದಲಿ ಓ ಪ್ರೇಮ

ಹೆಣ್ಣು : ಡಾನ್ಸ್ ಡಾನ್ಸ್ ಬಾಬಾ ಡಾನ್ಸ್ ಡಾನ್ಸ್
ಗಂಡು: ಡಾನ್ಸ್ ಡಾನ್ಸ್ ಬೇಬಿ ಡಾನ್ಸ್ ಡಾನ್ಸ್
ಗಂಡು :  ಒಂದ್ ಸರಿಗಾ ರಿಗಮ ಗಮದಾ
ಹೆಣ್ಣು :  ಒಂದ್ ಸರಿಗಾ ರಿಗಮ ಗಮದಾ
ಗಂಡು : ದಾ ಪದನಿ ದನಿಸಾ ನಿಸರಿ
ಹೆಣ್ಣು : ಮಾ ಪದನಿ ದನಿಸಾ ನಿಸರಿ
ಗಂಡು : ಗಾ ಗಸ            ಹೆಣ್ಣು : ರಿನರಿ
ಗಂಡು : ಗಗ ಗಸಾ         ಹೆಣ್ಣು : ರಿರಿನಿ
ಗಂಡು : ಗಾಗಾ             ಹೆಣ್ಣು : ರಾಸಾ
ಗಂಡು : ರಿನಿ                ಹೆಣ್ಣು : ರಿನಿ
ಗಂಡು : ಆಹಾ              ಹೆಣ್ಣು : ಒಹೋ  
--------------------------------------------------------------------------------------------------------------------------

ಬಣ್ಣದ ಗೆಜ್ಜೆ (1990) - ಯೋಗಾ ಯೋಗಾ ಯೋಗ ಯೋಗ
ಸಂಗೀತ, ಸಾಹಿತ್ಯ: ಹಂಸಲೇಖ ಹಾಡಿರುವವರು: ಎಸ್.ಪಿ.ಬಿ, ಎಸ್.ಜಾನಕೀ

ಗಂಡು : ಯೋಗಾ ಯೋಗಾ ಯೋಗಾ ಯೋಗಾ
ಹೆಣ್ಣು :  ನಾನು ನೀನು ಸೇರೋ ಯೋಗಾ ಈಗಾ
ಗಂಡು : ಈ ಜೀವ ಕೇಳೋದು ವ್ಯಾಯಾಮವೇ
ಹೆಣ್ಣು : ಈ ದೇಹ ಕೇಳೋದು ವ್ಯಾಯಾಮವೇ
ಗಂಡು :  ಓಂ ಶಾಂತಿ ಓಂ ಶಾಂತಿ  ಚಿಂತಾಮಣಿ

ಹೆಣ್ಣು : ಆಲಿಂಗನಾ ಆನಂದದ ಯೋಗ ಸಿಹಿ ಚುಂಬನ ಅನುರಾಗದ ಯೋಗ
ಗಂಡು : ಉಸಿರು ಬಿಗಿ ಹಿಡಿ ಯೋಗ ತುಂಬಾ ಮಣಿ ಆಸೆ ಹೆಚ್ಚಾದರೆ ಶಿರಶಾಸನ ಹಿಡಿ
            ನಿನ್ನಂದ ನೋಡೋರ ಕಣ್ಣುರಿಸಿದೆ
ಹೆಣ್ಣು : ರೋಮಾಂಚನ ತೋಳಲ್ಲಿದ್ದಾಗ ಮೈಮರೆತೇನಾ ನೀ ನನ್ನ ಗೆದ್ದಾಗ
ಗಂಡು : ಸಾಕು ಪೋಲಿತನ ಕಲಿಯೇ ಒಳ್ಳೆತನ ಬೇಕು ಪ್ರತಿದಿನ  ಮುಕ್ತಾಸನ
            ನೀ ಗೆದ್ದೆ ನನ್ನೆದೆಯಸಿಂಹಾಸನ
ಗಂಡು : ಯೋಗಾ ಯೋಗಾ ಯೋಗಾ ಯೋಗಾ
ಹೆಣ್ಣು :  ನಾನು ನೀನು ಸೇರೋ ಯೋಗಾ ಈಗಾ
ಗಂಡು : ಈ ಜೀವ ಕೇಳೋದು ವ್ಯಾಯಾಮವೇ
ಹೆಣ್ಣು : ಈ ದೇಹ ಕೇಳೋದು ವ್ಯಾಯಾಮವೇ
ಗಂಡು :  ಓಂ ಶಾಂತಿ ಓಂ ಶಾಂತಿ  ಚಿಂತಾಮಣಿ
--------------------------------------------------------------------------------------------------------------------------

ಬಣ್ಣದ ಗೆಜ್ಜೆ (1990) - ಬೊಂಬಾಟ್ ಬೊಂಬಾಟ್ ಬೋಲೋ ಬೊಂಬಾಟ್
ಸಂಗೀತ, ಸಾಹಿತ್ಯ: ಹಂಸಲೇಖ ಹಾಡಿರುವವರು: ಎಸ್.ಪಿ.ಬಿ, ಎಸ್.ಜಾನಕೀ

ಇಬ್ಬರು : ಬೊಂಬಾಟ್ ಬೊಂಬಾಟ್ ಬೋಲೋ ಬೊಂಬಾಟ್ ಬೊಮ್ಮಣ್ಣ
            ಅರೇ ಸಾಂಬಾ ಬೋಲೋ ಬ್ಲಾ ಬೊಂಬಾಟ್ ಬೊಮ್ಮಣ್ಣಾ
ಗಂಡು : ಜೋಡಿಸ್ತೀನಯ್ಯೋ ಬ್ರಹ್ಮ ನಿಂಗೆ ನಿಂಗೆ ನನ್ನ ಕೈಯ್ಯಾ
ಹೆಣ್ಣು : ಬಗ್ಗಿಸ್ತಿನಯ್ಯೋ ಬ್ರಹ್ಮ ನಿಂಗೆ ನನ್ ತಲೆಯಾ
ಗಂಡು : ಅರೇ ಹುಡುಗಿನ ಸೃಷ್ಟಿ ಮಾಡಿದಕ್ಕೆ ಇಂಗ್ಲಿಷ್ ಸೆಲ್ಯೂಟೂ
ಹೆಣ್ಣು : ಅವಳ್ ಕೈಯಲ್ ಪ್ರೀತಿ ಕಳ್ಸಿದಕ್ಕೆ ಕನ್ನಡದ ಸೆಲ್ಯೂಟೂ
          ಹುಡುಗನ್ ಸೃಷ್ಟಿ ಮಾಡಿದಕ್ಕೆ ಇಂಗ್ಲೀಷ ಸೆಲ್ಯೂಟೂ
          ಅವನ್ ಕೈಯಲ್ ಪ್ರೀತಿನ್ ಕಳ್ಸಿದಕ್ಕೆ ಕನ್ನಡದ ಸೆಲ್ಯೂಟೂ
ಗಂಡು : ಜೋಡಿಸ್ತೀನಯ್ಯೋ ಬ್ರಹ್ಮ ನಿಂಗೆ ನಿಂಗೆ ನನ್ನ ಕೈಯ್ಯಾ
ಹೆಣ್ಣು : ಬಗ್ಗಿಸ್ತಿನಯ್ಯೋ ಬ್ರಹ್ಮ ನಿಂಗೆ ನನ್ ತಲೆಯಾ

ಗಂಡು : ಎದೆಯ ನೋವಿತ್ತು ಅದು ಬಡಿದು ಕೊಂಡಿತ್ತು 
           ಪ್ರಿಯಕರಳಿಗೆ ತೋರಿಸಿದೆ ಅವಳೆದೆಗಿದು ಕೇಳಿಸಿದೆ 
           ನೋವು ಹಾರಿತ್ತು ಪ್ರೀತಿ ಹೊರಗೆ ಬಂದಿತ್ತು 
ಹೆಣ್ಣು : ಮೊಡವೆ ಬಂದಿತ್ತು ಅದು ಗೊಡವೆ ಮಾಡಿತ್ತು 
          ಪ್ರಿಯಕರನಿಗೆ ತೋರಿಸಿದೆ ತುಟಿ ಅಂಚಲೆ ಸವರಿಸಿದೆ 
         ಗುಳ್ಳೆ ಹೋಗಿತ್ತು ಪ್ರೀತಿ ಮುತ್ತು ಸಿಕ್ಕಿತ್ತು 
ಗಂಡು : ಲವ್ವಿನಲ್ಲಿ ಏನು ಮಜ ಇದೆಯಮ್ಮಾ ಬ್ರಹ್ಮ ಬೊಂಬಾಟ್ 
ಹೆಣ್ಣು : ಲವ್ವಿನಲ್ಲಿ ಏನು ಮಜ ಇದೆಯಮ್ಮಾ ಬ್ರಹ್ಮ ಬೊಂಬಾಟ್ 

ಹೆಣ್ಣು : ಕಾವೇರಿಯಿಂದ ಈ ಗಂಗೆಯವರೆಗೂ ನದಿ ಝರಿಗಳು ನೂರಾರು 
         ನಡೆನುಡಿಗಳು ಸಾವಿರಾರು ಪ್ರೀತಿ ಒಂದೇನೆ ಅದರ ಜಾತಿ ಒಂದೇನೇ 
ಗಂಡು : ಕಾಶ್ಮೀರದಿಂದ ಕನ್ಯಾಕುಮಾರಿಗೆ ಹೈವೇಗಳೂ ನೂರಾರು ಸಬವೇಗಗಳು ಸಾವಿರಾರು 
           ಪ್ರೀತಿ ಒಂದೇನೇ  ಅದರ ರೂಟು ಒಂದೇನೇ 
ಇಬ್ಬರು : ಲವ್ವಿನಲ್ಲಿ ಏನು ಮಜಾ ಇದೆಯಮ್ಮಾ ಬ್ರಹ್ಮ..  ಬ್ರಹ್ಮ 
ಗಂಡು : ಅರೇ ಹುಡುಗಿನ ಸೃಷ್ಟಿ ಮಾಡಿದಕ್ಕೆ ಇಂಗ್ಲಿಷ್ ಸೆಲ್ಯೂಟೂ
ಹೆಣ್ಣು : ಅವಳ್ ಕೈಯಲ್ ಪ್ರೀತಿ ಕಳ್ಸಿದಕ್ಕೆ ಕನ್ನಡದ ಸೆಲ್ಯೂಟೂ
          ಹುಡುಗನ್ ಸೃಷ್ಟಿ ಮಾಡಿದಕ್ಕೆ ಇಂಗ್ಲೀಷ ಸೆಲ್ಯೂಟೂ
          ಅವನ್ ಕೈಯಲ್ ಪ್ರೀತಿನ್ ಕಳ್ಸಿದಕ್ಕೆ ಕನ್ನಡದ ಸೆಲ್ಯೂಟೂ
ಗಂಡು : ಜೋಡಿಸ್ತೀನಯ್ಯೋ ಬ್ರಹ್ಮ ನಿಂಗೆ ನಿಂಗೆ ನನ್ನ ಕೈಯ್ಯಾ
ಹೆಣ್ಣು : ಬಗ್ಗಿಸ್ತಿನಯ್ಯೋ ಬ್ರಹ್ಮ ನಿಂಗೆ ನನ್ ತಲೆಯಾ 
--------------------------------------------------------------------------------------------------------------------------

ಬಣ್ಣದ ಗೆಜ್ಜೆ (1990) - ಈ ಬಣ್ಣದ ಗೆಜ್ಜೆ ಅಪರೂಪದ ಗೆಜ್ಜೆ
ಸಂಗೀತ, ಸಾಹಿತ್ಯ: ಹಂಸಲೇಖ ಹಾಡಿರುವವರು: ಎಸ್.ಪಿ.ಬಿ, ಎಸ್.ಜಾನಕೀ

ಇಬ್ಬರು : ಈ ಬಣ್ಣದ ಗೆಜ್ಜೆ ಅಪರೂಪದ ಗೆಜ್ಜೆ ಕೈ ಸೇರಿದರೇ ಕಾಲೇರಿದರೇ
            ಒಲವೆಂಬ ನಾದವೂ ಕುಣಿದಾಗ ಪಾದವೂ

ಹೆಣ್ಣು : ಮಲ್ಲಿಗೆಯಂತೆ ಮನಸಿಗ ಕಸ್ತೂರಿ ತನುವೀಗ ಬಾಯಲ್ಲಿ ನೋಡು ತಂಗಾಳಿ ಹಾಡು
ಗಂಡು : ಕತ್ತಲೆ ಕೋಣೆಗೆ ಬೆಳ್ಳನೇ ಚಂದಿರ ದೀಪದಾ ಹಾಗಿರೋ ರಾತ್ರಿಯಲಿ
            ನೈದಿಲೇ ಮೈಯಿಗೇ ಹುಣ್ಣಿಮೆ ಗಂಧದ ಲೇಪನ ಮಾಡುವೇ ರಾತ್ರಿಯಲಿ
ಹೆಣ್ಣು : ಮಾನದಂಗಳದಾಸೆಗಳು ರತಿ ರಿಂಗಣ ಮಾಡುತಿದೆ
ಗಂಡು : ಬೆಳದಿಂಗಳ ಬಾಲೆಯನು ಆಲಂಗಿಸು ಎನ್ನುತಿದೆ
ಹೆಣ್ಣು : ಓ ಗೆಳೆಯಾ ಪ್ರೀತಿಗಿದೋ ಪರಿವೇದನೆ ಪ್ರೇಮಲೋಕವೇ ..

ಹೆಣ್ಣು : ಬಗೆದರು ಎದೆಯಾ ದೊರಕದು ಹೃದಯ ಕೊಟ್ಟೇನು ನನ್ನಯ ನಲ್ಲನಿಗೆ
ಗಂಡು : ಪ್ರಾಣಕೆ ಪ್ರಾಣ ಎಂದರೇ ಪ್ರೇಮ ಎಂಬುದು ತಿಳಿವುದೇ ಮೂರ್ಖರಿಗೇ
ಹೆಣ್ಣು : ಬೀಸುವ ದೊಣ್ಣೆಯ ತಪ್ಪಿಸಿಕೊಂಡರೇ  ಸಾವಿರ ವರ್ಷದ ಆಯುಷವೇ
          ಈ ರಸ ಕುಡಿದರೇ ಸಾಯುವೇ ಆದರೆ ಪುನಃ ಉದಯಕೆ ಜೀವಿಸುವೇ
ಗಂಡು : ಓ ಗೆಳತೀ ಗೆಳತೀ ಈ ಬಡ ಪ್ರೇಮಿಗೆ ಹೇಳದೇ ಹಾರಿ ಹೋದೆಯಾ
ಹೆಣ್ಣು : ಓ ಗೆಳೆಯಾ ಗೆಳೆಯಾ ಈ ಬಡ ಪ್ರೇಮಿಗೆ ಹೇಳದೇ ಹಾರಿ ಹೋದೆಯಾ

--------------------------------------------------------------------------------------------------------------------------

No comments:

Post a Comment