580. ತಾಯಿಯ ಹೊಣೆ (1985)


ತಾಯಿಯ ಹೊಣೆ ಚಲನಚಿತ್ರದ ಹಾಡುಗಳು 
  1. ಮುಗಿಲ ಮಲ್ಲಿಗೆಯೋ ಗಗನದ ತಾರೆಯೋ (ಎಸ್ಪಿ ) 
  2. ಮುಗಿಲ ಮಲ್ಲಿಗೆಯೋ ಗಗನದ ತಾರೆಯೋ
  3. ನಾಡ ಚರಿತೆ ನೆನಪಿಸುವ ವೀರ ಗೀತೆಯ
  4. ಸೊಗಸು ಕಣ್ಣು ಕುಣಿಸಿರಲೂ 
ತಾಯಿಯ ಹೊಣೆ (1985) - ಮುಗಿಲ ಮಲ್ಲಿಗೆಯೋ
ಸಂಗೀತ: ಸತ್ಯಂ ರಚನೆ: ಚಿ.ಉದಯಶಂಕರ್  ಗಾಯನ: ಎಸ್.ಪಿ.ಬಾಲು ಹಾಗು ಪಿ.ಸುಶೀಲಾ

ಗಂಡು : ಮುಗಿಲ ಮಲ್ಲಿಗೆಯೋ...  ಗಗನದ ತಾರೆಯೋ...
            ಮುಗಿಲ ಮಲ್ಲಿಗೆಯೋ ಗಗನದ ತಾರೆಯೋ
            ನಿನ್ನ ಸ್ನೇಹ ನಿನ್ನ ಪ್ರೇಮ ಕನಸಿನ ಸಿರಿಯೋ... ಕನಸಿನ ಸಿರಿಯೋ
            ಮುಗಿಲ ಮಲ್ಲಿಗೆಯೋ ಗಗನದ ತಾರೆಯೋ
           ನಿನ್ನ ಸ್ನೇಹ ನಿನ್ನ ಪ್ರೇಮ ಕನಸಿನ ಸಿರಿಯೋ... ಕನಸಿನ ಸಿರಿಯೋ

ಕೋರಸ್ : ಲಲ್ಲಲ್ಲಲ್ಲಲಲಲ .. ಲಲ್ಲಲ್ಲಲ್ಲಲಲಲ ..
ಗಂಡು : ಅರಳಿದ ತಾವರೆ ಹೂವಿನ ಹಾಗೆ ಚೆಲುವೆಯ ಮೊಗವು....(ಆಆಆಆಆಆ )
           ಚಂದ್ರನ ಕಂಡ ನೈದಿಲೆಯಂತೆ ನಿನ್ನ ಈ ನಗುವೋ.... ಕಾಮಿನಿ.... ಅರಗಿಣಿ.....
           ನಿನ್ನ ನುಡಿಗಳು (ಆಆಆ) ವೀಣೆ ಸ್ವರಗಳು (ಆಆಆ)  ಅರಿಯದೆ ಹೋದೆ ಓಓಓಓ .. ಗೆಳತಿ ಬೆರಗಾದೆ
           ಮುಗಿಲ ಮಲ್ಲಿಗೆಯೋ ಗಗನದ ತಾರೆಯೋ

ಗಂಡು : ಮನದಲಿ ತುಂಬಿ ಹೃದಯದಿ ತುಂಬಿ ಆಸೆ ತಂದಿರುವೆ... (ಆಆಆಆಅ ಲಲಲಲಾ )
            ನೆನಪಲಿ ನಿಂತು ನಯನಗಳಲ್ಲಿ ಕನಸ ತುಂಬಿರುವೆ ಮೋಹವೋ..  ವಿರಹವೋ...
             ನಿನ್ನ ಸೇರದೆ (ಆಆಆ) ಕೂಡಿ ಬಾಳದೆ (ಆಆಆ)  ಜೀವ ನಿಲ್ಲುವುದೆ ಶಾಂತಿ ದೊರಕುವುದೆ
            ಮುಗಿಲ ಮಲ್ಲಿಗೆಯೋ ಗಗನದ ತಾರೆಯೋ
--------------------------------------------------------------------------------------------------------------------------

ತಾಯಿಯ ಹೊಣೆ (1985) - ಮುಗಿಲ ಮಲ್ಲಿಗೆಯೋ
ಸಂಗೀತ: ಸತ್ಯಂ ರಚನೆ: ಚಿ.ಉದಯಶಂಕರ್  ಗಾಯನ: ರಾಜ್‍ಕುಮಾರ್ ಭಾರತಿ ಹಾಗು ಪಿ.ಸುಶೀಲಾ

ಗಂಡು : ಮುಗಿಲ ಮಲ್ಲಿಗೆಯೋ...  ಗಗನದ ತಾರೆಯೋ
            ಮುಗಿಲ ಮಲ್ಲಿಗೆಯೋ ಗಗನದ ತಾರೆಯೋ
            ನಿನ್ನ ಸ್ನೇಹ ನಿನ್ನ ಪ್ರೇಮ ಕನಸಿನ ಸಿರಿಯೋ....ಕನಸಿನ ಸಿರಿಯೋ....
            ಮುಗಿಲ ಮಲ್ಲಿಗೆಯೋ ಗಗನದ ತಾರೆಯೋ

ಗಂಡು : ಅರಳಿದ ತಾವರೆ ಹೂವಿನ ಹಾಗೆ ಚೆಲುವೆಯ ಮೊಗವು
           ಚಂದ್ರನ ಕಂಡ ನೈದಿಲೆಯಂತೆ ನಿನ್ನ ಈ ನಗುವೋ ಕಾಮಿನಿ...  ಅರಗಿಣಿ.....
           ನಿನ್ನ ನುಡಿಗಳು ವೀಣೆ ಸ್ವರಗಳು ಅರಿಯದೆ ಹೋದೆ ಓಓಓಓ  ಗೆಳತಿ ಬೆರಗಾದೆ
           ಮುಗಿಲ ಮಲ್ಲಿಗೆಯೋ ಗಗನದ ತಾರೆಯೋ

ಹೆಣ್ಣು  : ಆಆಆ..... ಆಆಆ.. ಆಆಆ... ಆಆಆ... ಆಆಆ...
         ತಣ್ಣನೆ ಗಾಳಿ ಸೋಕಿದ ಹಾಗೆ ಸುಖವನು ಕಂಡೆ,
         ಬಿಸಿಲಲಿ ಕರಗೋ ಮಂಜಿನ ಹಾಗೆ ಕಾಣದೆ ಹೋದೆ ವೇದನೇ ..  ತಾಳದೇ...
         ಮರೆಯಲಾರದೇ ದಾರಿ ಕಾಣದೆ ನಾನು ನೊಂದಿರುವೆ ಓ ನಲ್ಲ ಎಲ್ಲಿರುವೆ
ಇಬ್ಬರು :  ಮುಗಿಲ ಮಲ್ಲಿಗೆಯೋ....
ಹೆಣ್ಣು : ಗಗನದ ತಾರೆಯೋ ನಿನ್ನ ಸ್ನೇಹ ನಿನ್ನ ಪ್ರೇಮ ಕನಸಿನ ಸಿರಿಯೋ.. ಓಓಓಓಓ ಕನಸಿನ ಸಿರಿಯೋ..
---------------------------------------------------------------------------------------------------------------------

ತಾಯಿಯ ಹೊಣೆ (1985) - ನಾಡ ಚರಿತೆ ನೆನಪಿಸುವ ವೀರ ಗೀತೆಯ
ಸಂಗೀತ: ಸತ್ಯಂ  ಸಾಹಿತ್ಯ: ಸಿ.ವಿ.ಶಿವಶಂಕರ್   ಹಾಡಿದವರು: ಪಿ.ಸುಶೀಲಾ, ಬೆಂಗಳೂರು ಲತಾ, ಛಾಯಾ

ಹೆಣ್ಣು : ನಾಡ ಚರಿತೆ ನೆನಪಿಸುವ ವೀರ ಗೀತೆಯ ಹಾಡು ನೀನು ಕನ್ನಡಿಗ ದೇಶ ಗೀತೆಯ
          ಹಾಡು ನೀನು ಕನ್ನಡಿಗ ದೇಶ ಗೀತೆಯ
ಎಲ್ಲರು : ನಾಡ ಚರಿತೆ ನೆನಪಿಸುವ ವೀರ ಗೀತೆಯ ಹಾಡು ನೀನು ಕನ್ನಡಿಗ ದೇಶ ಗೀತೆಯ
            ಹಾಡು ನೀನು ಕನ್ನಡಿಗ ದೇಶ ಗೀತೆಯ
ಹೆಣ್ಣು : ಆಆಆ... ಆಆಆ... 
ಎಲ್ಲರು : ಓಓಓಓಓಓಓ

ಹೆಣ್ಣು : ವೀರರಾದ ನಾಡವರ ಸಾಹಸದ ನಾಡಿದು ನಾಡ ಪ್ರೇಮಿ ಕೆಂಪಯ್ಯ ಗೌಡ ಮೆರೆದ ನಾಡಿದು
ಎಲ್ಲರು : ನಾಡ ಪ್ರೇಮಿ ಕೆಂಪಯ್ಯ ಗೌಡ ಮೆರೆದ ನಾಡಿದು
ಹೆಣ್ಣು : ಚಿತ್ರದುರ್ಗ ವೀರರ ಪೌರುಷದ ನಾಡಿದು ಕೆಳದಿಯ ನಾಯಕರು ಬಾಳಿದಂತ ನಾಡಿದು
ಎಲ್ಲರು : ಕೆಳದಿಯ ನಾಯಕರು ಬಾಳಿದಂತ ನಾಡಿದು
ಹೆಣ್ಣು : ನಾಡ ಚರಿತೆ ನೆನಪಿಸುವ ವೀರ ಗೀತೆಯ ಹಾಡು ನೀನು ಕನ್ನಡಿಗ ದೇಶ ಗೀತೆಯ
ಎಲ್ಲರು : ಹಾಡು ನೀನು ಕನ್ನಡಿಗ ದೇಶ ಗೀತೆಯ

ಹೆಣ್ಣು : ಬೃಂದಾವನ ಚೆಲುವಲಿ ನಲಿವಂತ ನಾಡಿದು ವಿಶ್ವೇಶ್ವರಯ್ಯ ಹುಟ್ಟಿದಂತ ನಾಡಿದು
ಎಲ್ಲರು : ವಿಶ್ವೇಶ್ವರಯ್ಯ ಹುಟ್ಟಿದಂತ ನಾಡಿದು
ಹೆಣ್ಣು : ಹನುಮಂತಯ್ಯ ಕಟ್ಟಿದ ವಿಧಾನಸೌಧ ನೋಡಿದು
ಎಲ್ಲರು : ವಿಧಾನಸೌಧ ನೋಡಿದು
ಹೆಣ್ಣು : ಸ್ವಾಭಿಮಾನಿ ಪ್ರಜೆಗಳ ಸಂತಸದ ನಾಡಿದು
          ನಾಡ ಚರಿತೆ ನೆನಪಿಸುವ ವೀರ ಗೀತೆಯ ಹಾಡು ನೀನು ಕನ್ನಡಿಗ ದೇಶ ಗೀತೆಯ
ಎಲ್ಲರು : ಹಾಡು ನೀನು ಕನ್ನಡಿಗ ದೇಶ ಗೀತೆಯ

ಮಗು : ತಾಯಿನಾಡ ರಕ್ಷಿಸಲು ವೀರಮರಣ ಅಪ್ಪಿದ ಸಂಗೊಳ್ಳಿ ರಾಯಣ್ಣನ ತ್ಯಾಗ ಭೂಮಿ ನಮ್ಮದು
ಹೆಣ್ಣು : ಸಂಗೊಳ್ಳಿ ರಾಯಣ್ಣನ ತ್ಯಾಗ ಭೂಮಿ ನಮ್ಮದು
ಎಲ್ಲರು : ತಂದಾನ ತಾನಿ ತಂದಾನ ತಂದಾನ ತಾನಿ ತಂದಾನ

ಮಗು  : ನೇಗಿಲ ಹೊತ್ತ ರೈತರ ಪುಣ್ಯ ಭೂಮಿ ನಮ್ಮದು
           ಎಂದೆಂದು ಅಳಿಯದ ಇತಿಹಾಸ ನಮ್ಮದು
ಎಲ್ಲರು : ಎಂದೆಂದು ಅಳಿಯದ ಇತಿಹಾಸ ನಮ್ಮದು
ಹೆಣ್ಣು : ನಾಡ ಚರಿತೆ ನೆನಪಿಸುವ ವೀರ ಗೀತೆಯ ಹಾಡು ನೀನು ಕನ್ನಡಿಗ ದೇಶ ಗೀತೆಯ
ಎಲ್ಲರು : ನಾಡ ಚರಿತೆ ನೆನಪಿಸುವ ವೀರ ಗೀತೆಯ ಹಾಡು ನೀನು ಕನ್ನಡಿಗ ದೇಶ ಗೀತೆಯ
            ಹಾಡು ನೀನು ಕನ್ನಡಿಗ ದೇಶ ಗೀತೆಯ
--------------------------------------------------------------------------------------------------------------------------

ತಾಯಿಯ ಹೊಣೆ (1985) - ಸೊಗಸು ಕಣ್ಣು ಕುಣಿಸಿರಲೂ
ಸಂಗೀತ: ಸತ್ಯಂ ಸಾಹಿತ್ಯ: ಸಿ.ವಿ.ಶಿವಶಂಕರ್ ಹಾಡಿದವರು: ಎಸ್.ಪಿ.ಬಿ , ಬೆಂಗಳೂರು ಲತಾ, ಛಾಯಾ

ಗಂಡು:  ಸೊಗಸು ಕಣ್ಣು ಕುಣಿಸಿರಲೂ ವಯಸು ತನುವ ಸೆಳೆದಿರಲೂ
            ಏಕಾಂತ ಇದ್ದಾಗ ಮನದಾಸೆ ಎದ್ದಾಗ.. ಹ್ಹಾ...
ಹೆಣ್ಣು : ಸೊಗಸು ಕಣ್ಣು ಕುಣಿಸಿರಲೂ ವಯಸು ತನುವ ಸೆಳೆದಿರಲೂ
            ಏಕಾಂತ ಇದ್ದಾಗ ಮನದಾಸೆ ಎದ್ದಾಗ... ಆ..

ಹೆಣ್ಣು : ಮನ್ಮಥನು ಬಂದಾಗ ಸುಮಬಾಣ ಹಿಡಿದಾಗ ಎದುರು ನಿಂತು ಗೆಲುವೆಯೇನುವರುಂಟೇನೋ
ಗಂಡು : ಅನುರಾಗ ಕರೆದಾಗ ಆ ವಿರಹ ಸುಡುವಾಗ ನಾಚಿಕೊಂಡು ದೂರನಿಲ್ಲುವರುಂಟೇನೋ.. ಅಹ್ಹಹ್ಹಹ್ಹ..
ಹೆಣ್ಣು : ಮನ್ಮಥನು ಬಂದಾಗ ಸುಮಬಾಣ ಹಿಡಿದಾಗ ಎದುರು ನಿಂತು ಗೆಲುವೆಯೇನುವರುಂಟೇನೋ
ಗಂಡು : ಅನುರಾಗ ಕರೆದಾಗ ಆ ವಿರಹ ಸುಡುವಾಗ ನಾಚಿಕೊಂಡು ದೂರನಿಲ್ಲುವರುಂಟೇನೋ..
ಹೆಣ್ಣು : ಚುಂಬನಕೇ                    ಗಂಡು : ಚಂದ್ರಿಕೆಯೂ
ಹೆಣ್ಣು : ಬಿಸಿ ಉಸಿರೇ                 ಗಂಡು : ತಂಗಾಳಿ
ಇಬ್ಬರು : ಮೌನವೇ ಸಂಗೀತವೂ ...
ಹೆಣ್ಣು : ಸೊಗಸು ಕಣ್ಣು ಕುಣಿಸಿರಲೂ (ಅಹ್ಹಹ್ಹಹ್ಹ )ವಯಸು (ಆ) ತನುವ ಸೆಳೆದಿರಲೂ (ಆಆಆ )
ಗಂಡು : ಏಕಾಂತ ಇದ್ದಾಗ ಮನದಾಸೆ ಎದ್ದಾಗ... ಅಹ್ಹಹ್ಹಹ್ಹ ..

ಗಂಡು : ಕೈಗಳನು ಹಿಡಿದಾಗ ಬಳೆಸದ್ದು ಬಂದಾಗ ಮಧುರವಾಗಿ ವೀಣೆ ಸ್ವರ ನುಡಿದಂತೇ ..
ಹೆಣ್ಣು : ಕೆಂಪಾದ ತುಟಿಯಾಗ ಕಿರುನಗೆಯ ಕಂಡಾಗ ಸ್ವರ್ಗದಲ್ಲಿ ಅಮೃತವನ್ನೂ ಕಂಡಂತೇ ...
ಗಂಡು : ಕೈಗಳನು ಹಿಡಿದಾಗ ಬಳೆಸದ್ದು ಬಂದಾಗ ಮಧುರವಾಗಿ ವೀಣೆ ಸ್ವರ ನುಡಿದಂತೇ .. ಏಏಏಏಏ
ಹೆಣ್ಣು : ಕೆಂಪಾದ ತುಟಿಯಾಗ ಕಿರುನಗೆಯ ಕಂಡಾಗ ಸ್ವರ್ಗದಲ್ಲಿ ಅಮೃತವನ್ನೂ ಕಂಡಂತೇ ...
ಗಂಡು :  ಆ ಸಮಯ                        ಹೆಣ್ಣು : ಶುಭ ಸಮಯ
ಗಂಡು : ಆ ಇರುಳೂ                        ಹೆಣ್ಣು : ಮೊದಲ ಇರುಳೂ
ಇಬ್ಬರು : ಆನಂದ ಆನಂದವೂ ..
ಗಂಡು : ಸೊಗಸು ಕಣ್ಣು ಕುಣಿಸಿರಲೂ (ಅಹ್ಹಹ್ಹಹ್ಹ ) ವಯಸು (ಆಹ್ಹ ) ತನುವ ಸೆಳೆದಿರಲೂ (ಆಹ್ಹಹ್ಹ  )
ಹೆಣ್ಣು : ಏಕಾಂತ (ಆ) ಇದ್ದಾಗ (ಆ) ಮನದಾಸೆ (ಆ) ಎದ್ದಾಗ...(ಆ)  ಅಹ್ಹಹ್ಹಹ್ಹ ..
--------------------------------------------------------------------------------------------------------------------------

No comments:

Post a Comment