586. ಕಲ್ಯಾಣಿ (1971)

ಕಲ್ಯಾಣಿ ಚಲನ ಚಿತ್ರದ ಹಾಡುಗಳು 
  1. ವೀಣಾ ನಿನಗೇಕೋ ಈ ಕಂಪನ ಮೃದುವಾಗಿ ಮಿಡಿ, 
  2. ಮೋಡಕೆ ಸಿಕ್ಕಿತು 
  3. ನಿನ್ನ ಮುಖ ಅರವಿಂದ 
  4. ಒಂದೇ ಒಂದೇ 
  5. ರಾಮಕೃಷ್ಣ ಗೋವಿಂದ 
ಕಲ್ಯಾಣಿ (1971) - ವೀಣಾ ನಿನಗೇಕೋ ಈ ಕಂಪನ ಮೃದುವಾಗಿ ಮಿಡಿ, 
ಸಾಹಿತ್ಯ: ಗೀತಪ್ರಿಯ  ಸಂಗೀತ: ವಿಜಯ ಭಾಸ್ಕರ್   ಹಾಡಿದವರು: ಬಿ.ಕೆ.ಸುಮಿತ್ರ

ವೀಣಾ ನಿನಗೇಕೋ ಈ ಕಂಪನ ಮೃದುವಾಗಿ ಮಿಡಿ, ಮುದವಾಗಿ ನುಡಿ ರಾಗ ಸಂಮೋಹನ
ವೀಣಾ ನಿನಗೇಕೋ ಈ ಕಂಪನ ಮೃದುವಾಗಿ ಮಿಡಿ, ಮುದವಾಗಿ ನುಡಿ ರಾಗ ಸಂಮೋಹನ
ವೀಣಾ ನಿನಗೇಕೋ ಈ ಕಂಪನ

ಭಾವನೆ ಬೆರೆತ, ಮೋಹಕ ಸೆಳೆತ   ಹಿತವೆ ನಿನಗೆ, ಈ ಪರಿ ಮಿಡಿತ
ಭಾವನೆ ಬೆರೆತ, ಮೋಹಕ ಸೆಳೆತ   ಹಿತವೆ ನಿನಗೆ, ಈ ಪರಿ ಮಿಡಿತ
ಸೂಚನೆ ಏನೋ, ಯೋಚನೆ ಏನೋ ಅರಿಯೆ ಏಕೋ ಈ ಭಾವನ
ವೀಣಾ ನಿನಗೇಕೋ ಈ ಕಂಪನ

ಮಂಗಳವಾದ, ಮಂಜುಳ ಗೀತ  ಅರಿಯುವ ಮನಕೆ, ಮೃದು ಸಂಕೇತ
ಸಂಕೋಚ ತೋರಿ, ಸಂದೇಶ ಸಾರಿ  ನಲಿವೆ ನೀಡಿ ಸಂವೇದನ
ವೀಣಾ ನಿನಗೇಕೋ ಈ ಕಂಪನ

ನಿನ್ನಯ ನಾದಕೆ, ಮೈಮನ ಒಲಿಸಿ ಭಾವ ತರಂಗದಿ, ಲೋಕವ ಮರೆಸಿ
ನಿನ್ನಯ ನಾದಕೆ, ಮೈಮನ ಒಲಿಸಿ ಭಾವ ತರಂಗದಿ, ಲೋಕವ ಮರೆಸಿ
ಸುಪ್ರೇಮ ರಾಗ, ನೀ ನುಡಿವಾಗ ಅದುವೆ ಮನದ ಆರಾಧನ
ವೀಣಾ ನಿನಗೇಕೋ ಈ ಕಂಪನ ಮೃದುವಾಗಿ ಮಿಡಿ, ಮುದವಾಗಿ ನುಡಿ ರಾಗ ಸಂಮೋಹನ
ವೀಣಾ ನಿನಗೇಕೋ ಈ ಕಂಪನ
--------------------------------------------------------------------------------------------------------------------------

ಕಲ್ಯಾಣಿ (1971) - ಮೋಡಕೆ ಸಿಕ್ಕಿತು
ಸಾಹಿತ್ಯ: ಗೀತಪ್ರಿಯ ಸಂಗೀತ: ವಿಜಯ ಭಾಸ್ಕರ್ ಹಾಡಿದವರು: ಬಿ.ಕೆ.ಸುಮಿತ್ರ, ಪಿ.ಬಿ.ಎಸ್. 

ಕೋರಸ್ : ಆಆಆ... ಆಆಆ... ಆಆಆ...
ಗಂಡು : ಮೋಡಕೆ ಸಿಕ್ಕಿತು ಅಂದ.. ಅಂದ ಭೂಮಿಗೇ ಸಿಕ್ಕಿತು ಗಂಧ ಗಂಧ
            ಬಾಳನು ಕಟ್ಟಿತು ಬಂಧ ಬಂಧ ಹೃದಯವ  ತಟ್ಟಿತು ಆನಂದ.. ಆನಂದ.. ಆನಂದ..
ಹೆಣ್ಣು  : ಮೋಡಕೆ ಸಿಕ್ಕಿತು ಅಂದ.. ಅಂದ ಭೂಮಿಗೇ ಸಿಕ್ಕಿತು ಗಂಧ ಗಂಧ
            ಬಾಳನು ಕಟ್ಟಿತು ಬಂಧ ಬಂಧ ಹೃದಯವ  ತಟ್ಟಿತು ಆನಂದ.. ಆನಂದ.. ಆನಂದ..
ಕೋರಸ್ : ಆಆಆ... ಆಆಆ... ಆಆಆ...

ಗಂಡು : ಸುಂದರವಾದ ಪರ್ವತಮಾಲೇ ಅಂಬರವನ್ನೂ ಚುಂಬಿಸಿರೇ .. 
ಹೆಣ್ಣು : ಸುಂದರವಾದ ಪರ್ವತಮಾಲೇ ಅಂಬರವನ್ನೂ ಚುಂಬಿಸಿರೇ .. 
ಗಂಡು : ಒಂದಾಗಿರುವ ಹೃದಯಗಳೆರಡೂ ಬಾಳಿನ ಆಸೆಯ ಬಿಂಬಿಸಿರೇ .. ಬಿಂಬಿಸಿರೇ .. 
ಹೆಣ್ಣು  : ಮೋಡಕೆ ಸಿಕ್ಕಿತು ಅಂದ.. ಅಂದ ಭೂಮಿಗೇ ಸಿಕ್ಕಿತು ಗಂಧ ಗಂಧ
            ಬಾಳನು ಕಟ್ಟಿತು ಬಂಧ ಬಂಧ ಹೃದಯವ  ತಟ್ಟಿತು ಆನಂದ.. ಆನಂದ.. ಆನಂದ..
ಕೋರಸ್ : ಆಆಆ... ಆಆಆ... ಆಆಆ...

ಹೆಣ್ಣು :   ಚಿರಹಿಸಿರಾಗ ಈ ವನ ಭೂಮಿ ನಲಿಸಿರೇ ಪ್ರೀತಿಯ ಜೀವಿಗಳ 
ಗಂಡು : ಚಿರಹಿಸಿರಾಗ ಈ ವನ ಭೂಮಿ ನಲಿಸಿರೇ ಪ್ರೀತಿಯ ಜೀವಿಗಳ  
ಹೆಣ್ಣು : ನವಸಂದೇಶವ ಸಾರುತ ಗಾಳಿ  ಕೂಡಿಸಿರೆ ಹೊಸ ಭಾವಗಳ..  ಭಾವಗಳ..  
ಇಬ್ಬರು : ಮೋಡಕೆ ಸಿಕ್ಕಿತು ಅಂದ.. ಅಂದ ಭೂಮಿಗೇ ಸಿಕ್ಕಿತು ಗಂಧ ಗಂಧ
            ಬಾಳನು ಕಟ್ಟಿತು ಬಂಧ ಬಂಧ ಹೃದಯವ  ತಟ್ಟಿತು ಆನಂದ.. ಆನಂದ.. ಆನಂದ..
ಕೋರಸ್ : ಆಆಆ... ಆಆಆ... ಆಆಆ...
--------------------------------------------------------------------------------------------------------------------------

ಕಲ್ಯಾಣಿ (1971) - ನಿನ್ನ ಮುಖ ಅರವಿಂದ
ಸಾಹಿತ್ಯ: ಗೀತಪ್ರಿಯ ಸಂಗೀತ: ವಿಜಯ ಭಾಸ್ಕರ್ ಹಾಡಿದವರು: ಪಿ.ಸುಶೀಲಾ  

ಆಆಆ....
ನಿನ್ನ ಮುಖ ಅರವಿಂದ ನಿನ್ನ ನಗೆ ಶ್ರೀಗಂಧ ಮುದ್ದು ಕಂದ
ನಿನ್ನ ಮಂದಹಾಸವೇ ಮಾತೆಗೇ ಆನಂದ ..
ಜೋ ಜೋ ಜೋ ಕಂದ ... ಜೋ ಜೋ ಜೋ ಕಂದ
ನಿನ್ನ ಮುಖ ಅರವಿಂದ ನಿನ್ನ ನಗೆ ಶ್ರೀಗಂಧ ಮುದ್ದು ಕಂದ
ನಿನ್ನ ಮಂದಹಾಸವೇ ಮಾತೆಗೇ ಆನಂದ ..
ಜೋ ಜೋ ಜೋ ಕಂದ ... ಜೋ ಜೋ ಜೋ ಕಂದ

ಮರುಭೂಮಿಯಲ್ಲಿ ನೀನಾಗಿ ಚಿಲುಮೆ ಬರಡಾದ ಬಾಳಲ್ಲಿ ನೀನಾದೇ ಬಲುಮೆ
ತಾಯ್ ಮೋರೆಯ ಕೇಳಿ ನೀನೋಡಿ ಬಂದೇ ಜಗದಾಸೇ ಎಲ್ಲಾ ನೀನಾಗಿ ನಿಂದೇ
ಈ ನಿನ್ನ ರೂಪ ಮನೆಗೆಲ್ಲ ದೀಪ ಈ ಮನೇಯ ಉತ್ಸಾಹ  ನಿನ್ನಿಂದ ಕಂದ
ನಿನ್ನ ಮುಖ ಅರವಿಂದ ನಿನ್ನ ನಗೆ ಶ್ರೀಗಂಧ ಮುದ್ದು ಕಂದ
ನಿನ್ನ ಮಂದಹಾಸವೇ ಮಾತೆಗೇ ಆನಂದ ..
ಜೋ ಜೋ ಜೋ ಕಂದ ... ಜೋ ಜೋ ಜೋ ಕಂದ

ನೀನಿಲ್ಲದಂಥ ಸಿರಿತನವೂ ಏಕೆ ನೀನಿಲ್ಲದಿರಲೂ ಅರಮನೆಯೂ ಬೇಕೇ
ಸ್ಥಿರವಾದ ಆಸ್ತಿ ನಿನ್ನ ಪ್ರೀತಿ ಅಂತೇ ಆ ಪ್ರೀತಿ ಕಾಣದಿರೇ ಎಲ್ಲಾರಿಗೂ ಚಿಂತೇ
ನನ್ನ ನಗು ನಿನಗಿರಲೀ ನಿನ್ನವ ಅಳು ನನಗಿರಲೀ ತಾಯ್ತನಕೇ ಸನ್ಮಾನ ನೀನಂತೇ ಕಂದ
ನಿನ್ನ ಮುಖ ಅರವಿಂದ ನಿನ್ನ ನಗೆ ಶ್ರೀಗಂಧ ಮುದ್ದು ಕಂದ
ನಿನ್ನ ಮಂದಹಾಸವೇ ಮಾತೆಗೇ ಆನಂದ ..
ಜೋ ಜೋ ಜೋ ಕಂದ ... ಜೋ ಜೋ ಜೋ ಕಂದ
ಹೂಂಹೂಂಹೂಂ ಹೂಂಹೂಂಹೂಂ ಹೂಂಹೂಂಹೂಂ
--------------------------------------------------------------------------------------------------------------------------

ಕಲ್ಯಾಣಿ (1971) - ಒಂದೇ ಒಂದೇ
ಸಾಹಿತ್ಯ: ಗೀತಪ್ರಿಯ ಸಂಗೀತ: ವಿಜಯ ಭಾಸ್ಕರ್ ಹಾಡಿದವರು: ಸುಧಾಕರ,  ಅಂಜಲೀ 

ಗಂಡು : ಒಂದೇ ಒಂದೇ.. ಒಂದೇ ಒಂದೇ..
            ಎಲ್ಲರೂ ಇರುವ ಭೂಮಿಯು ಒಂದೇ  ಎಲ್ಲರ ಮೇಲಿಹ ಗಗನವೂ ಒಂದೇ
            ಮಾನವರೆಲ್ಲರೂ ಒಂದೇ
ಕೋರಸ್ : ಒಂದೇ ಒಂದೇ.. ಒಂದೇ ಒಂದೇ..
            ಎಲ್ಲರೂ ಇರುವ ಭೂಮಿಯು ಒಂದೇ  ಎಲ್ಲರ ಮೇಲಿಹ ಗಗನವೂ ಒಂದೇ
            ಮಾನವರೆಲ್ಲರೂ ಒಂದೇ.. ಒಂದೇ ಒಂದೇ.. ಒಂದೇ ಒಂದೇ..

ಗಂಡು : ಕೋಟಿ ಕೋಟಿ ರೂಪಗಳಿದ್ದರೂ ದೇಹದ ರಚನೆಯೂ ಒಂದೇ
ಕೋರಸ್ : ಆಹಹ್.. ಅಹ್ ಆಆಆ.. ಆಆಆ... ಆಆಆ.. ಆಆಆ...
ಗಂಡು :  ವಿಧ ವಿಧವಾದ ಬಣ್ಣಗಳಿದ್ದರೂ ರಕ್ತದ ಬಣ್ಣವೂ ಒಂದೇ
             ಮತಗಳು ಇದ್ದರೂ ನೂರಾರೂ ಮಾನವ ಕುಲವೂ ಒಂದೇ
ಕೋರಸ್ : ಮತಗಳು ಇದ್ದರೂ ನೂರಾರೂ ಮಾನವ ಕುಲವೂ ಒಂದೇ
ಗಂಡು : ಬಾಳುವ ಸ್ಥಳವೂ ಹಲವಾರು ಇದ್ದರೂ ತೆರಳುವ ಸ್ಥಳವೂ ಒಂದೇ
ಕೋರಸ್ : ಒಂದೇ ಒಂದೇ.. ಒಂದೇ ಒಂದೇ..
            ಎಲ್ಲರೂ ಇರುವ ಭೂಮಿಯು ಒಂದೇ  ಎಲ್ಲರ ಮೇಲಿಹ ಗಗನವೂ ಒಂದೇ
            ಮಾನವರೆಲ್ಲರೂ ಒಂದೇ... ಒಂದೇ ಒಂದೇ.. ಒಂದೇ ಒಂದೇ..

ಗಂಡು : ಸಾವಿರ ಸಾವಿರ ತಾರೆಗಳಿದ್ದರೂ ಚಂದ್ರನ ಬಿಂಬವೂ ಒಂದೇ
ಕೋರಸ್ : ಆಹಹ್.. ಅಹ್ ಆಆಆ.. ಆಆಆ... ಆಆಆ.. ಆಆಆ...
ಗಂಡು :  ಅಗಲಿತವಾಗಿ ಕಿರಣಗಳಿದ್ದರೂ ಸೂರ್ಯನ ಕಿರಣವೂ ಒಂದೇ 
             ದೇಶವೂ ಇದ್ದರೂ ನೂರಾರೂ ಭೂಮಿಯೂ ಮಾತ್ರ  ಒಂದೇ 
ಕೋರಸ್ : ದೇಶವೂ ಇದ್ದರೂ ನೂರಾರೂ ಭೂಮಿಯೂ ಮಾತ್ರ  ಒಂದೇ 
ಗಂಡು : ಬೇಧ ಭಾವನೇ ನಿಲ್ಲದೇ ಹೋದರೇ ವಿಶ್ವ ಸಂಸಾರವೂ ಒಂದೇ 
ಎಲ್ಲರು  : ಒಂದೇ ಒಂದೇ.. ಒಂದೇ ಒಂದೇ..
            ಎಲ್ಲರೂ ಇರುವ ಭೂಮಿಯು ಒಂದೇ  ಎಲ್ಲರ ಮೇಲಿಹ ಗಗನವೂ ಒಂದೇ
            ಮಾನವರೆಲ್ಲರೂ ಒಂದೇ... ಒಂದೇ ಒಂದೇ.. ಒಂದೇ ಒಂದೇ..
--------------------------------------------------------------------------------------------------------------------------

ಕಲ್ಯಾಣಿ (1971) - ರಾಮಕೃಷ್ಣ ಗೋವಿಂದ
ಸಾಹಿತ್ಯ: ಗೀತಪ್ರಿಯ ಸಂಗೀತ: ವಿಜಯ ಭಾಸ್ಕರ್ ಹಾಡಿದವರು: ಲತಾ ಸೋಮಶೇಖರ 

ಆಆಆ... ಆಆಆ
ರಾಮಕೃಷ್ಣ ಗೋವಿಂದಾ ನೀನೇ ನಮ್ಮನ್ನ ಕಾಯಬೇಕು ನೀನೇ ಧೈರ್ಯ ಕೊಡಬೇಕೂ
ರಾಮಕೃಷ್ಣ ಗೋವಿಂದಾ
ರಾಮಕೃಷ್ಣ ಗೋವಿಂದಾ ನೀನೇ ನಮ್ಮನ್ನ ಕಾಯಬೇಕು ನೀನೇ ಧೈರ್ಯ ಕೊಡಬೇಕೂ
ರಾಮಕೃಷ್ಣ ಗೋವಿಂದಾ

ನೀನೂ ಧೈರ್ಯ ಕೊಟ್ಟಬಿಟ್ರೇ ಹಾವೂ ಬಂದ್ರೇ ಹೆದರೋಕ್ಕಿಲ್ಲಾ
ಕಪ್ಪೇ ಬಂದ್ರೂ ಹೆದರಿಕ್ಕಿಲ್ಲಾ ಹುಲಿ ಬರಲೀ ಹೆದರೋಕ್ಕಿಲ್ಲಾ
ಇಲಿ ಬರಲೀ ಹೆದರೋಕ್ಕಿಲ್ಲಾ ಆನೇ ಗೀನೇ ಏನೇ ಬರಲೀ
ಭೂತ ಗೀತ ಬಂದ್ರೂ ಬರಲೀ ನಾವೂ ಮಾತ್ರ ಹೆದರೋಕಿಲ್ಲಾ...
ರಾಮಕೃಷ್ಣ ಗೋವಿಂದಾ ನೀನೇ ನಮ್ಮನ್ನ ಕಾಯಬೇಕು ನೀನೇ ಧೈರ್ಯ ಕೊಡಬೇಕೂ
ರಾಮಕೃಷ್ಣ ಗೋವಿಂದಾ

ಅಲ್ಲಿ ಅಮ್ಮ ಅಳತೀರತ್ತಾಳೇ ಅಜ್ಜೀ ಅಮ್ಮನ್ ಬೈಯ್ಯತ್ತಿತ್ತರತ್ತಾಳೇ
ಇಲ್ಲಿ ತಮ್ಮಾ ಅಳತೀರತ್ತಾನೇ ಅಮ್ಮನದೇ  ಧ್ಯಾನ ಮಾಡತ್ತಿರತ್ತಾನೇ
ಅಮ್ಮನಿಗೂ  ಧೈರ್ಯ ಕೊಡಬೇಕೂ ಅಜ್ಜಿಗೇ ಬುದ್ಧಿ ಹೇಳಬೇಕೂ
ಈ ಕೆಲಸ ನೀನು ಮಾಡ್ತಿ ಅಂತಾ ನಿಂದೇ ಧ್ಯಾನ ಮಾಡ್ತಿರತ್ತೆವೇ
ರಾಮಕೃಷ್ಣ ಗೋವಿಂದಾ ನೀನೇ ನಮ್ಮನ್ನ ಕಾಯಬೇಕು ನೀನೇ ಧೈರ್ಯ ಕೊಡಬೇಕೂ
ರಾಮಕೃಷ್ಣ ಗೋವಿಂದಾ
ರಾಮಕೃಷ್ಣ ಗೋವಿಂದಾ ನೀನೇ ನಮ್ಮನ್ನ ಕಾಯಬೇಕು ನೀನೇ ಧೈರ್ಯ ಕೊಡಬೇಕೂ
ರಾಮಕೃಷ್ಣ ಗೋವಿಂದಾ
ರಾಮಕೃಷ್ಣ ಗೋವಿಂದಾ ನೀನೇ ನಮ್ಮನ್ನ ಕಾಯಬೇಕು ನೀನೇ ಧೈರ್ಯ ಕೊಡಬೇಕೂ
ರಾಮಕೃಷ್ಣ ಗೋವಿಂದಾ
--------------------------------------------------------------------------------------------------------------------------

No comments:

Post a Comment