588. ಬಾಂಧವ್ಯ (1972)


ಬಾಂಧವ್ಯ ಚಿತ್ರದ ಹಾಡುಗಳು 
  1. ಎಲ್ಲಾದರು ಹೋಗು ಮರೆಯಾಗು ಮೊರೆಹೋಗು
  2. ಹಣ ಝಣ ಝಣ 
  3. ನಿಲ್ಲು ನಿಲ್ಲೇನ್ನ ನಲ್ಲ 
  4. ಕದ್ದು ನೋಡುವೆ ಏಕೇ 
  5. ಬೆಂಗಳೂರು ಸಂಪಿಗೇ 
ಬಾಂಧವ್ಯ (1972) - ಎಲ್ಲಾದರು ಹೋಗು ಮರೆಯಾಗು ಮೊರೆಹೋಗು
ಸಂಗೀತ: ಆರ್.ರತ್ನ ಸಾಹಿತ್ಯ: ಯೋಗಾನರಸಿಂಹ  ಹಾಡಿದವರು: ಎಸ್.ಪಿ.ಬಿ

ಎಲ್ಲಾದರು ಹೋಗು ಮರೆಯಾಗು ಮೊರೆಹೋಗು
ನಿನ್ನನು ಬಿಡದೋ ಬಾಂಧವ್ಯ ಬಿಡದೋ ಮಮತೆಯ ಬಾಂಧವ್ಯ
ಎಲ್ಲಾದರು ಹೋಗು ಮರೆಯಾಗು ಮೊರೆಹೋಗು
ನಿನ್ನನು ಬಿಡದೋ ಬಾಂಧವ್ಯ ಬಿಡದೋ ಮಮತೆಯ ಬಾಂಧವ್ಯ

ಎಲ್ಲೋ ತಪ್ಪಿದೆ ಎಲ್ಲೋ ಒಪ್ಪಿದೆ ಎಲ್ಲೋ ಸಿಡಿದಿದೆ ಆಘಾತ
ಎಲ್ಲೋ ತಪ್ಪಿದೆ ಎಲ್ಲೋ ಒಪ್ಪಿದೆ ಎಲ್ಲೋ ಸಿಡಿದಿದೆ ಆಘಾತ
ಎಂತೇನೆ ಇರಲಿ ತೀರಲು ಈ ಕಥೆ ಬಿಡುವುದೆ ಕರುಳಿನ ಸೆಳೆತ
ಎಲ್ಲಾದರು ಹೋಗು ಮರೆಯಾಗು ಮೊರೆಹೋಗು
ನಿನ್ನನು ಬಿಡದೋ ಬಾಂಧವ್ಯ ಬಿಡದೋ ಮಮತೆಯ ಬಾಂಧವ್ಯ
ಎಲ್ಲಾದರು ಹೋಗು

ಭಯದುರುಳು ಕೈಬೀಸಿ ಹಿಡಿಯಲಿದೆ ತಾಯ್ ಕರುಳು ಕಾಪಾಡೆ ಕೈಒಡ್ಡಿದೆ
ವಾತ್ಸಲ್ಯದಾ ಪಾಶ ಬಾರೆಂದಿದೆ ತಲೆಕಾಯಲಿರುವೆ ನಾನೆಂದಿದೆ
ತಾಯಿಗೆ ಉಸಿರಿಲ್ಲ ಕರುಳಿಗೆ ಸಾವಿಲ್ಲ.. ।। ಮುಗಿಸಿದೆ ಅದರ ಕರ್ತವ್ಯ
ಎಲ್ಲಾದರು ಹೋಗು ಮರೆಯಾಗು ಮೊರೆಹೋಗು ನಿನ್ನನು ಬಿಡದೋ ಬಾಂಧವ್ಯ
ಬಿಡದೋ ಮಮತೆಯ ಬಾಂಧವ್ಯ
ಎಲ್ಲಾದರು ಹೋಗು ಹೋಗು ಹೋಗು ಹೋಗು
--------------------------------------------------------------------------------------------------------------------------

ಬಾಂಧವ್ಯ (1972) - ಹಣ ಝಣ ಝಣ 
ಸಂಗೀತ: ಆರ್.ರತ್ನ ಸಾಹಿತ್ಯ: ಸೋರಟ್ ಅಶ್ವಥ ಹಾಡಿದವರು: ಪಿ.ಬಿ.ಎಸ್, ಕುಮಾರಿ ಜ್ಯೋತಿ  

ಹೆಣ್ಣು : ಹಣ...  ಹಣ...  ಹಣ...
          ಹಣ ಝಣ ಝಣ...   ಹಣ ಝಣ ಝಣ...
          ಹೆಣ್ಣಿನ ಚೆಲುವಿನ ಮಿಲನದ ಜಾಣ ಸೇರೇ ಹೋಗೋಣ
          ಹೆಣ್ಣಿನ ಚೆಲುವಿನ ಮಿಲನದ ಜಾಣ ಸೇರೇ ಹೋಗೋಣ.. ಹಣ...

ಹೆಣ್ಣು : ಜಾಲಿ ಲೈಫು ಜೋರನಿಗೆ ಬೇಕು ಜಂಟಿ ಧಣಿಯಿಂದ ಸೇರೋ ಈ  ಕೆಂದುಟಿ
          ತಾರಲಲ್ಲ ತಾರಲಲ್ಲ ತಾರಲಲ್ಲ ಲಲ್ಲ ಲಾಲಲ ಲಲಲ್ಲಲ ಲಾಲಲ ಲಲಲ್ಲಲ ಲಾಲಲ ಲಲಲ್ಲಲ
          ಲಾಲ ... ಲಾಲ ...   ಲಾಲ ... ಲಾಲ ...   ಲಲಲಾ ... ಲಲಲಾ  ...ಲಲಲಾ
         ಹಣದ ಭೋಜನ ಮೋಜಿಗೆ ಫಿಫ್ಟಿ ಹೆಣ್ಣಿನ ರೂಪವು ಸೇರಲೂ ಫಿಫ್ಟಿ
         ಹಗಲೇ ಈ ನಿನ್ನ ಲೈಫೇ ಟೇಸ್ಟಿ ಹೆಣ್ಣಿನ ಚೆಲುವಿನ ಮಿಲನದ ಜಾಣ ಸೇರೇ ಔತಣ    
        ಹೆಣ್ಣಿನ ಚೆಲುವಿನ ಮಿಲನದ ಜಾಣ ಸೇರೇ ಔತಣ... ಹಣ....

ಗಂಡು : ಮಾನದಿಂದ ಮನೆಯಲಿ ಬಾಳೋ ಹೆಣ್ಣೇ .. ಕರುಣೆಯ ಕಣ್ಣಲ್ಲಿ ತಣಿಸುವ ಹೆಣ್ಣೇ
            ಆಹಾಹಹ ಹಹ... ಆಹಾಹಹ ಹಹಹಹ ... ಓಹೋಹೋ .. ಓಹೋಹೋ.. ಓ.. ಓ.. ಓ..
            ಕಾಮದ ಕಣ್ಣಲಿ ಈ ಕಹಿ ಬಾಳಲಿ ಮಾನವರಿಗೆಲ್ಲಿ ಮೋಜಿನ ಮಡಿಲಲ್ಲಿ
            ದೂಡಿದ ಯಾರೇ ಹೇಳೇ ಹೆಣ್ಣೇ...  ದೂಡಿದವರೂ  ಯಾರೇ ಹೇಳೇ ಹೆಣ್ಣೇ
ಹೆಣ್ಣು :  ಹಣ ಝಣ ಝಣ...   ಹಣ ಝಣ ಝಣ... 
          ಹೆಣ್ಣಿನ ಚೆಲುವಿನ ಬದುಕಿಗೆ ಗಾಯ ನೀನೇ ಕಾರಣ
          ಹೆಣ್ಣಿನ ಚೆಲುವಿನ ಬದುಕಿಗೆ ಗಾಯ ನೀನೇ ಕಾರಣ
--------------------------------------------------------------------------------------------------------------------------

ಬಾಂಧವ್ಯ (1972) - ನಿಲ್ಲು ನಿಲ್ಲೆನ್ನ ನಲ್ಲ ಓಡದೇ 
ಸಂಗೀತ: ಆರ್.ರತ್ನ ಸಾಹಿತ್ಯ: ಸೋರಟ್ ಅಶ್ವಥ ಹಾಡಿದವರು: ಎಸ್.ಜಾನಕೀ 

ಹೂಂ ... ನಿಲ್ಲು ನಿಲ್ಲು ನಿಲ್ಲೆನ್ನ ನಲ್ಲ ಓಡದೇ ಅಲ್ಲೇ ನಿಲ್ಲು ನಿಲ್ಲು ನಿಲ್ಲೆನ್ನ ನಲ್ಲ ಕಾಡದೇ
ಸಲ್ಲದ ಕೋಪ ನನ್ನ ನೀನು ತೋರದೇ
ನಿಲ್ಲು ನಿಲ್ಲು ನಿಲ್ಲೆನ್ನ ನಲ್ಲ ಓಡದೇ ಅಲ್ಲೇ ನಿಲ್ಲು ನಿಲ್ಲು ನಿಲ್ಲೆನ್ನ ನಲ್ಲ ಕಾಡದೇ

ನೀರನಗಲಿ ತಾವರೇ ಇರದೂ ಆಸರೇ ಇಲ್ಲದೇ ಬಳ್ಳಿ ನಿಲ್ಲದೂ
ನಲ್ಲ ಇಲ್ಲದ ಬಾಳು ಬರಿದು ಆಆ.. ಆಆ...ಆಆಆ...ಆಆ.. ಆಆ.
ನೀರನಗಲಿ ತಾವರೇ ಇರದೂ ಆಸರೇ ಇಲ್ಲದೇ ಬಳ್ಳಿ ನಿಲ್ಲದೂ
ನಲ್ಲ ಇಲ್ಲದ ಬಾಳು ಬರಿದು ನಿನ್ನ ಕಾಣದ ಜೀವವಿನ್ನೂ ನಿಲ್ಲದೂ
ನಿಲ್ಲು ನಿಲ್ಲು ನಿಲ್ಲೆನ್ನ
--------------------------------------------------------------------------------------------------------------------------

ಬಾಂಧವ್ಯ (1972) - ಕದ್ದು ನೋಡುವೇ ಏಕೇ
ಸಾಹಿತ್ಯ: ಯೋಗಾನರಸಿಂಹ ಸಂಗೀತ: ಆರ್.ರತ್ನ ಹಾಡಿದವರು: ಎಸ್.ಜಾನಕೀ 

ಜಗವೆಂಬ ಗುಡಿಯಲ್ಲಿ ಬಾಳೆಂಬ ಮಂಟಪವೇ
ಕುಳಿತ ನವವಧು ವರರೇ ಹೃದಯಗಳು ಬೆಸೆದಾಯ್ತು ಭಯವೇಕೇ ಕಣ್ಣಿಗೇ...
ಕದ್ದು ನೋಡುವೇ ಏಕೇ... ಕದ್ದು ನೋಡುವೇ ಏಕೇ ಎಲೇ ಕಣ್ಣೇ
ಕದಿಯುವುದೆಲ್ಲಾ  ನಲುಮೆಯ ಲಕ್ಕಿರುವಾಗ
ಕದ್ದು ನೋಡುವೇ ಏಕೇ...

ರೂಪವ ನೋಡಿ ಆತುರವೇ ದೃಷ್ಟಿ ತಾಕಿತೆಂಬ ಕಾತುರವೇ
ರೂಪವ ನೋಡಿ ಆತುರವೇ ದೃಷ್ಟಿ ತಾಕಿತೆಂಬ ಕಾತುರವೇ
ಆರಂಭ ಈಗ ಬದುಕು ಕಾದಿರುವಾಗ ಅವಸರವೇಕೀಗ ಎಲ್ಲವೂ ನಿಮ್ಮದೇ ಆಗಿರುವಾಗ...
ಕದ್ದು ನೋಡುವೇ ಏಕೇ...

ನೋಡುವ ಆಸೆಗೇ ತಡೆಯೇನೂ ಮಮತೆಯ ಕಂಗಳು ಕುರುಡೇನೂ
ನೋಡುವ ಆಸೆಗೇ ತಡೆಯೇನೂ ಮಮತೆಯ ಕಂಗಳು ಕುರುಡೇನೂ
ಸಂತಸದಾ ನೋಟ ತುಂಬಿ ನಿಂತಿರುವಾಗ
ಸವಿಯುವೇ ಏನನ್ನೂ ಎಲ್ಲರ ಎದುರಲಿ ನೀನಿರುವಾಗ...
ಕದ್ದು ನೋಡುವೇ ಏಕೇ... ಕದ್ದು ನೋಡುವೇ ಏಕೇ ಎಲೇ ಕಣ್ಣೇ
ಕದಿಯುವುದೆಲ್ಲಾ  ನಲುಮೆಯ ಲಕ್ಕಿರುವಾಗ
ಕದ್ದು ನೋಡುವೇ ಏಕೇ...
--------------------------------------------------------------------------------------------------------------------------

ಬಾಂಧವ್ಯ (1972) - ಬೆಂಗಳೂರ್ ಸಂಪಿಗೇ 
ಸಂಗೀತ: ಆರ್.ರತ್ನ ಸಾಹಿತ್ಯ: ಸೋರಟ್ ಅಶ್ವಥ ಹಾಡಿದವರು: ಪಿ.ಬಿ.ಎಸ್, ಕುಮಾರಿ ಜ್ಯೋತಿ  

ಗಂಡು : ಓಯ್ ಬನ್ನಿ ಸ್ವಾಮಿ ಬನ್ನಿ ಬುದ್ದಿ ಬನ್ನೀ ಅಣ್ಣೋರೇ ಮಲ್ಲೆ ಗಿಲ್ಲೆ ಜಾಜಿ ಮಲ್ಲೆ ಕೊಳ್ಳಿ
ಹೆಣ್ಣು : ಬನ್ನಿ ತಾಯಿ ಬನ್ನಿ ಅಮ್ಮಾ ಬನ್ನಿ ಅಮ್ಮೋರೇ ಹೂವೂ ಗೀವು ಜವನ ಗಿವನ  ತಕ್ಕಳ್ಳಿ ತಕ್ಕಳ್ಳಿ ತಕ್ಕಳ್ಳಿ
          ತಾಜಾ ಮಾಲೂ ...               ಗಂಡು : ಇಲ್ಲ ತಂಗಳು ಮಾಲೂ
ಹೆಣ್ಣು : ಇಲ್ಲ ಇಲ್ಲ ತಾಜಾ ಮಾಲೂ      ಗಂಡು : ಮಾರಿಗೇ ಆರವತ್ತೂ
ಹೆಣ್ಣು : ಹ್ಹ್ .. ಐವತ್ತೂ                      ಗಂಡು : ಇಲ್ಲೂ ಐವತ್ತೂ
ಹೆಣ್ಣು : ಇಲ್ಲ ನಲವತ್ತೂ ...                ಗಂಡು : ಐವತ್ತೂ
ಹೆಣ್ಣು : ನಲವತ್ತೂ ...                       ಗಂಡು : ಐವತ್ತೂ
ಹೆಣ್ಣು : ನಲವತ್ತೂ ...                       ಗಂಡು : ಐವತ್ತೂ
ಹೆಣ್ಣು : ನಲವತ್ತೂ ...ನಲವತ್ತೂ ...     ಗಂಡು : ಐವತ್ತೂ ಐವತ್ತೂ ಐವತ್ತೂ ಐವತ್ತೂ ಐವತ್ತೂ
ಹೆಣ್ಣು :  ಹೇ... ಏನಿದೆಲ್ಲಾ....             ಗಂಡು :  ಕಾಂಪಿಟೀಷನ್... ವ್ಯಾಪಾರಾ ...
ಹೆಣ್ಣು : ಹ್ಹಾಂ ...                             ಗಂಡು : ಹ್ಹಾಂ ...             
ಗಂಡು : ಹೂಂ ಹಃ ... ಬೆಂಗಳೂರು ಸಂಪಿಗೇ ದೇವರ ಪೂಜೆಗೇ
           ಬೆಂಗಳೂರು ಸಂಪಿಗೇ ದೇವರ ಪೂಜೆಗೇ ಕಮ್ಮಿ ಬೆಲೆ ಮಾರಿಗೇ ಕೊಳ್ಳಿ ಬನ್ನೀ ಇಲ್ಲಿಗೇ
ಹೆಣ್ಣು : ಮೈಸೂರು ಮಲ್ಲಿಗೇ ಮೆಚ್ಚಿ ಬರೋ ಹೆಣ್ಣಿಗೇ
          ಮೈಸೂರು ಮಲ್ಲಿಗೇ ಮೆಚ್ಚಿ ಬರೋ ಹೆಣ್ಣಿಗೇ ಕಮ್ಮಿ ಬೆಲೆ ಮಾರಿಗೇ ಕೊಳ್ಳಿ ಬನ್ನಿ ಇಲ್ಲಿಗೇ
          ಮೈಸೂರು ಮಲ್ಲಿಗೇ ಮೆಚ್ಚಿ ಬರೋ ಹೆಣ್ಣಿಗೇ ....

ಹೆಣ್ಣು : ಜನಕಮ್ಮಾ ಬಾರಮ್ಮಾ ಜಡೆ ಜಡೆ ಕೊಳ್ಳಮ್ಮಾ
          ಜನಕಮ್ಮಾ ಬಾರಮ್ಮಾ ಜಡೆ ಜಡೆ ಕೊಳ್ಳಮ್ಮಾ ಜಾಜಿ ಹೂವೂ ಘಮಘಮಾ ಮುಡಿದಮ್ಮ ಜುಮ್ಮಜುಮ್ಮಾ
ಗಂಡು : ಜಂಗ್ಲಿ ಹೆಣ್ಣ ನಂಬಬೇಡಿ ತಂಗಳ ಹೂವ ಕೊಳ್ಳಬೇಡಿ
            ಜಂಗ್ಲಿ ಹೆಣ್ಣ ನಂಬಬೇಡಿ ತಂಗಳ ಹೂವ ಕೊಳ್ಳಬೇಡಿ ಮುನಿಸಿ ಕುಂತ ಗಂಡನ್ನ ವಶವಂತ ಮಲ್ಲೇ ನೋಡಿ
            ಕಮ್ಮಿ ಬೆಲೆ ಮಾರಿಗೇ ಕೊಳ್ಳಿ ಬನ್ನೀ ಇಲ್ಲಿಗೇ
            ಬೆಂಗಳೂರು ಸಂಪಿಗೇ ದೇವರ ಪೂಜೆಗೇ....  ಹೋಯ್ ...

ಹೆಣ್ಣು : ಹೆಣ್ಣಿನಂದ ಈ ಸ್ವತ್ತೂ ಈ ಬೆಪ್ಪು ಗಂಡಿಗೆ ಏನ ಗೊತ್ತು
          ಹೆಣ್ಣಿನಂದ ಈ ಸ್ವತ್ತೂ ಈ ಬೆಪ್ಪು ಗಂಡಿಗೆ ಏನ ಗೊತ್ತು (ಎಲ್ಲಾ ಗೊತ್ತು )
          ನನ್ನ ಹೂವ ಕಿಮ್ಮತ್ತೂ ನಯಾಪೈಸೆ ನಲವತ್ತೂ
          ನನ್ನ ಹೂವ ಕಿಮ್ಮತ್ತೂ ನಯಾಪೈಸೆ ನಲವತ್ತೂ
ಗಂಡು : ಹ್ಹ್  .. ಕೂಗಿ ಕೂಗಿ ನೀ ಸುಸ್ತೂ..  ನಡೆಯಲ್ಲಾ ಕಸರತ್ತೂ (ಹ್ಹಾ.. ಹ್ಹಾ )
            ಕೂಗಿ ಕೂಗಿ ನೀ ಸುಸ್ತೂ..  (ಹ್ಹಾ) ನಡೆಯಲ್ಲಾ ಕಸರತ್ತೂ
            ಮುತ್ತಿನಂಥ ಮಲ್ಲಿಗೇ ಮತ್ತೂ ಕೊಳ್ಳೋ ಜನರಿಗೆ ಎಲ್ಲಾ ಗೊತ್ತೂ
            ಮುತ್ತಿನಂಥ ಮಲ್ಲಿಗೇ ಮತ್ತೂ ಕೊಳ್ಳೋ ಜನರಿಗೆ ಎಲ್ಲಾ ಗೊತ್ತೂ
            ಕಮ್ಮಿ ಬೆಲೆ ಮಾರಿಗೇ ಕೊಳ್ಳಿ ಬನ್ನೀ ಇಲ್ಲಿಗೇ
            ಬೆಂಗಳೂರು ಸಂಪಿಗೇ            ಹೆಣ್ಣು : ದೇವರ ಪೂಜೆಗೇ....
ಗಂಡು : ಮೈಸೂರು ಮಲ್ಲಿಗೇ               ಹೆಣ್ಣು : ಮೆಚ್ಚಿ ಬರೋ ಹೆಣ್ಣಿಗೇ
ಇಬ್ಬರು :  ಕಮ್ಮಿ ಬೆಲೆ ಮಾರಿಗೇ ಕೊಳ್ಳಿ ಬನ್ನೀ ಇಲ್ಲಿಗೇ  
ಗಂಡು : ಬೆಂಗಳೂರು ಸಂಪಿಗೇ                    ಹೆಣ್ಣು : ಅಹಾ.. ಮೈಸೂರು ಮಲ್ಲಿಗೇ
ಗಂಡು : ಅಹಾ ಬೆಂಗಳೂರು ಸಂಪಿಗೇ           ಹೆಣ್ಣು : ಅಹಾ.. ಮೈಸೂರು ಮಲ್ಲಿಗೇ
--------------------------------------------------------------------------------------------------------------------------

No comments:

Post a Comment