40. ನಿನಗೋಸ್ಕರ (2002)




ನಿನಗೋಸ್ಕರ ಚಲನಚಿತ್ರದ ಹಾಡುಗಳು 
  1. ಪ್ರೇಮಲೋಕದಿಂದ ಬಂದ ಪಾರಿವಾಳ 
  2. ಆಸೆಗೆ ಸಾವಿರ ರೂಪ,
  3. ಪ್ರೀತಿಯಲಿ ಹಾಡುವೆ ನಿನಗೋಸ್ಕರ
  4. ರೇಕ್ಸೋಣ ಲಕ್ಸೋಣ 
  5. ಬೋಲೋರೇ ಆಯ್ ಲವ್ ಯೂ 
  6. ಪ್ರೀತಿಯಲಿ ಹಾಡುವೆ (ಸೋನು ನಿಗಮ )
  7. ನಿನಗೋಸ್ಕರ  
ನಿನಗೋಸ್ಕರ (2002) - ಪ್ರೇಮಲೋಕದಿಂದ ಬಂದ ಪಾರಿವಾಳ 
ಸಂಗೀತ: ಎಲ್.ಏನ್.ಶಾಸ್ತ್ರಿ (ಚೈತನ್ಯ)  
ಸಾಹಿತ್ಯ: ಕೆ.ಕಲ್ಯಾಣ, ಗಾಯನ : ಬಾಬುಲ್ ಸುಪ್ರಿಯೋ, ಶಮಿತಾ 

ಗಂಡು : ಓ ಓ ಓ ಓ ಓ ಓ ಓ ಪ್ರೇಮಲೋಕದಿಂದ ಬಂದ ಪಾರಿವಾಳ ನೀನೇನಾ ನೀನೇನಾ ನೀನೇನಾ 
           ಓಓಓಓಓಓಓ  ಜೀವಕಿಂತ ನಿನ್ನ ಪ್ರೀತಿ ಹೆಚ್ಚು ನಂಗೇ ಬಲ್ಲೇ ನಾ  ಬಲ್ಲೇ ನಾ ಬಲ್ಲೇ ನಾ
           ನನ್ನ ಸುಖ ಈ ಗೂಡಲಿ... ನಮ್ಮ ಎದೆಗೂಡಲಿ.. ಓ ನಾಳೆ ನಮದಾಗಲೀ ... ಎಲ್ಲ ಹೆಜ್ಜೆಯಲೀ .. 
           ಓ ಓ ಓ ಓ ಓ ಓ ಓ ಪ್ರೇಮಲೋಕದಿಂದ ಬಂದ ಪಾರಿವಾಳ ನೀನೇನಾ ನೀನೇನಾ ನೀನೇನಾ 
ಹೆಣ್ಣು : ಓಓಓಓಓಓಓ  ಜೀವಕಿಂತ ನಿನ್ನ ಪ್ರೀತಿ ಹೆಚ್ಚು ನಂಗೇ ಬಲ್ಲೇ ನಾ  ಬಲ್ಲೇ ನಾ ಬಲ್ಲೇ ನಾ  

ಗಂಡು : ಮಂಜು ಬೆಳ್ಳಿ ಮಂಜಿನಲ್ಲಿ ಪ್ರೀತಿ ಪಂಜು ಹಚ್ಚು ಅಂತೂ ನಿನ್ನ ಪ್ರತಿ ಸ್ಪರ್ಶ 
ಹೆಣ್ಣು : ಸುತ್ತ ಬೇಕಾವಳಿ ಬೆಟ್ಟ ನಿನ್ನ ಚಿತ್ರ ಬಿಡಿಸೋ ಅಂತೂ ಮೈಯ್ಯ ಪ್ರತಿ ನಿಮಿಷ 
ಗಂಡು : ಓ... ನೂರು ಸೌಂದರ್ಯ ನಿನದಾಗಲೀ ನೂರು ಆನಂದ ನನದಾಗಲೀ 
ಹೆಣ್ಣು : ನನ್ನ ಸಂಗೀತಕೇ ..ಆಆಆ  ಜೀವ ಸ್ವರವಾಗಲೀ ..  
ಗಂಡು : ನಿನ್ನ ಸಂಬಂಧಕ್ಕೆ... ನಿತ್ಯ ನೆರಳಾಗುವೇ... 
           ಓ ಓ ಓ ಓ ಓ ಓ ಓ ಪ್ರೇಮಲೋಕದಿಂದ ಬಂದ ಪಾರಿವಾಳ ನೀನೇನಾ ನೀನೇನಾ ನೀನೇನಾ 
ಹೆಣ್ಣು : ಓಓಓಓಓಓಓ  ಜೀವಕಿಂತ ನಿನ್ನ ಪ್ರೀತಿ ಹೆಚ್ಚು ನಂಗೇ ಬಲ್ಲೇ ನಾ  ಬಲ್ಲೇ ನಾ ಬಲ್ಲೇ ನಾ  

ಹೆಣ್ಣು : ತಿರುಗೋ ಭೂಮಿ ಒಂದು ಹಣೆ ಪಟ್ಟಿ ಸುತ್ತಿ ನಮ್ಮ ಹೆಸರ ಅಲ್ಲಿ ಬರೆಯೋಣ 
ಗಂಡು : ನೀಲಿ ಆಕಾಶಾನ ಗೂಡಿಸಿನೆಲ್ಲಾ ಮರೆಸಿ ನಮ್ಮ ಹೆಸರಕ್ಕೆ ಇಲ್ಲಿ ಹೋದಿಸೋಣ 
ಹೆಣ್ಣು : ಆ... ನಿನ್ನ ಮಾತಿಗೇ ಜತೆಯಾಗುವೇ.. ನಿನ್ನ ಪ್ರೀತಿಗೇ ಜೊತೆಯಾಗುವೇ .. 
ಗಂಡು : ಪ್ರೇಮ ಕಾವೇರಿಯೇ.. ನಿನ್ನೆ ನಮ್ಮ ಯೌವ್ವನ.. ಓ..ಓ 
ಹೆಣ್ಣು : ಹೃದಯ ಸಹ್ಯಾದ್ರಿಯೇ..... ನೀನೇ ನನ್ನ ಜೀವನ... 
ಗಂಡು : ಓ ಓ ಓ ಓ ಓ ಓ ಓ ಪ್ರೇಮಲೋಕದಿಂದ ಬಂದ ಪಾರಿವಾಳ ನೀನೇನಾ ನೀನೇನಾ ನೀನೇನಾ 
ಹೆಣ್ಣು : ಓಓಓಓಓಓಓ  ಜೀವಕಿಂತ ನಿನ್ನ ಪ್ರೀತಿ ಹೆಚ್ಚು ನಂಗೇ ಬಲ್ಲೇ ನಾ  ಬಲ್ಲೇ ನಾ ಬಲ್ಲೇ ನಾ
ಗಂಡು : ನನ್ನ ಸುಖ ಈ ಗೂಡಲಿ... ನಮ್ಮ ಎದೆಗೂಡಲಿ.. 
ಇಬ್ಬರು : ಓ ನಾಳೆ ನಮದಾಗಲೀ ... ಎಲ್ಲ ಹೆಜ್ಜೆಯಲೀ .. 
 
---------------------------------------------------------------------------------------------------------

ನಿನಗೋಸ್ಕರ (2002) - ಆಸೆಗೆ ಸಾವಿರ ರೂಪ,
ಸಂಗೀತ: ಚೈತನ್ಯ 
ಸಾಹಿತ್ಯ: ಕೆ.ಕಲ್ಯಾಣ, ಗಾಯನ : ಸೋನು ನಿಗಮ್, ಅರ್ಚನಾ ಉಡುಪ

ಇಬ್ಬರು : ಆಸೆಗೆ ಸಾವಿರ ರೂಪ, ಕನಸಿಗೆ ಸಾವಿರ ಅರ್ಥ
            ಹೃದಯಕ್ಕೆ ಸಾವಿರ ಸ್ಪರ್ಶ, ಪ್ರೀತಿಗೆ ಸಾವಿರ ನಂಟು
            ಮನಸಿಗೆ ಮನಸು ಉಯಿಲು ಬರೆಯೊ ವಸಂತ ಕಾಲವಿದು
            ಅಪರಂಜಿ ಅಪರಂಜಿ ನಮ್ಮ ಪ್ರೇಮ ಅಪರಂಜಿ
           ಉಂಡಷ್ಟು ಉಣಬಡಿಸೊ ಅಪರೂಪದ ಸಿಹಿಗಂಜಿ
           ಆಸೆಗೆ ಸಾವಿರ ರೂಪ, ಕನಸಿಗೆ ಸಾವಿರ ಅರ್ಥ
           ಹೃದಯಕ್ಕೆ ಸಾವಿರ ಸ್ಪರ್ಶ, ಪ್ರೀತಿಗೆ ಸಾವಿರ ನಂಟು
          ಮನಸಿಗೆ ಮನಸು ಉಯಿಲು ಬರೆಯೊ ವಸಂತ ಕಾಲವಿದು
          ಅಪರಂಜಿ ಅಪರಂಜಿ ನಮ್ಮ ಪ್ರೇಮ ಅಪರಂಜಿ
          ಉಂಡಷ್ಟು ಉಣಬಡಿಸೊ ಅಪರೂಪದ ಸಿಹಿಗಂಜಿ

ಗಂಡು : ಉಸಿರು ಆಡೋ ಮಾತೆಲ್ಲ, ಈ ಹೃದಯ ಕೇಳಿರಲಿಲ್ಲ
           ಹೃದಯ ಬರೆಯೊ ಕಥೆಯೆಲ್ಲ, ಈ ಚೆಲುವು ಕಂಡಿರಲಿಲ್ಲ
ಹೆಣ್ಣು : ಚೆಲುವು ಸೆಳೆದ ಕಡೆಯೆಲ್ಲ, ಈ ಮನಸು ಸೋತಿರಲಿಲ್ಲ
           ಮನಸು ಸೋತ ಕಡೆಯೆಲ್ಲ, ಅನುರಾಗ ಬೆಳೆದಿರಲಿಲ್ಲ
ಗಂಡು : ಯಾವುದೊ ಅದು ಯಾವುದೊ ಹೊಸ ಮಿಂಚೊಂದು ಮೈಯಲ್ಲಿ ಮೂಡಿದೆ
ಹೆಣ್ಣು : ಯಾತಕೊ ಅದು ಯಾತಕೊ ನನ್ನ ಒಳಗೀಗ ನಾನಿಲ್ಲವಾಗಿದೆ
ಗಂಡು : ಯುಗಕು ಆಚೆ ನಮ್ಮದೆ ಯುಗಳ ಗೀತೆ ಹಾಡಿದೆ
ಇಬ್ಬರು : ಅಪರಂಜಿ ಅಪರಂಜಿ ನಮ್ಮ ಪ್ರೇಮ ಅಪರಂಜಿ
             ಉಂಡಷ್ಟು ಉಣಬಡಿಸೊ ಅಪರೂಪದ ಸಿಹಿಗಂಜಿ

ಹೆಣ್ಣು : ಆಸೆ ಒಂದು ಗಾಳಿಪಟ, ಅದಕೆಂದೂ ಸೂತ್ರಗಳಿಲ್ಲ
          ಅಂದ ಇರುವೆಡೆ ಅಲೆದಾಟ, ಅದಕೆಂದೂ ಅಳತೆಗಳಿಲ್ಲ
ಗಂಡು : ಹೆಣ್ಣಿನ ಮನಸು ಒಂದು ಒಗಟು, ಅದ ಬಿಡಿಸೊ ಗಂಡುಗಳಿಲ್ಲ
           ಆದರೂ ಗಂಡೆದೆಯ ಒರಟು, ಅದ ಮರೆಯೊ ಹೆಣ್ಣುಗಳಿಲ್ಲ
ಹೆಣ್ಣು : ಎಂದಿಗೂ ಎಂದೆಂದಿಗೂ ಸೋತು ಗೆಲ್ಲೋರೆ ನಿಲ್ಲೊದು ಎಂದಿಗೂ
ಗಂಡು : ತಿರುಗುವ ಈ ಭೂಮಿಗೆ ಗುರುತಾಗೋರು ನಾವೇನೆ ಎಂದಿಗೂ
ಹೆಣ್ಣು : ಪ್ರತಿ ಜನುಮ ನಮ್ಮದೆ ಎಂದಿದೆ ಪ್ರೀತಿ ಎಂಬ ಬಾಳಿದೆ
ಇಬ್ಬರು : ಅಪರಂಜಿ ಅಪರಂಜಿ ನಮ್ಮ ಪ್ರೇಮ ಅಪರಂಜಿ
            ಉಂಡಷ್ಟು ಉಣಬಡಿಸೊ ಅಪರೂಪದ ಸಿಹಿಗಂಜಿ
           ಆಸೆಗೆ ಸಾವಿರ ರೂಪ, ಕನಸಿಗೆ ಸಾವಿರ ಅರ್ಥ
          ಹೃದಯಕ್ಕೆ ಸಾವಿರ ಸ್ಪರ್ಶ, ಪ್ರೀತಿಗೆ ಸಾವಿರ ನಂಟು
          ಮನಸಿಗೆ ಮನಸು ಉಯಿಲು ಬರೆಯೊ ವಸಂತ ಕಾಲವಿದು
         ಅಪರಂಜಿ ಅಪರಂಜಿ ನಮ್ಮ ಪ್ರೇಮ ಅಪರಂಜಿ
        ಉಂಡಷ್ಟು ಉಣಬಡಿಸೊ ಅಪರೂಪದ ಸಿಹಿಗಂಜಿ
------------------------------------------------------------------------------------------------------------------------


ನಿನಗೋಸ್ಕರ (2002) - ಪ್ರೀತಿಯಲಿ ಹಾಡುವೆ ನಿನಗೋಸ್ಕರ
ಸಂಗೀತ: ಚೈತನ್ಯ 
ಸಾಹಿತ್ಯ: ಕೆ.ಕಲ್ಯಾಣ ಗಾಯನ : ಸೋನು ನಿಗಮ್, ನಂದಿತಾ

ಗಂಡು : ಪ್ರೀತಿಯಲಿ ಹಾಡುವೆ ನಿನಗೋಸ್ಕರ ನಾನು ಉಸಿರಾಡುವೆ ನಿನಗೋಸ್ಕರ
           ಪ್ರೀತಿಯಲಿ ಹಾಡುವೆ ನಿನಗೋಸ್ಕರ ನಾನು ಉಸಿರಾಡುವೆ ನಿನಗೋಸ್ಕರ
           ನೀನಿರಲೆ ಬೇಕು ಹತ್ತಿರ ಸಾಕಮ್ಮ ಇನ್ನು ದೂರ
           ಬೆಳಕೂ ನೀನೆ, ಬದುಕೂ ನೀನೆ ಜಗ ನೀನೆ, ಜನುಮ ನೀನೆ ಜೊತೆಗೆ ಪ್ರೀತಿಸು
ಹೆಣ್ಣು : ಪ್ರೀತಿಯಲಿ ಹಾಡುವೆ ನಿನಗೋಸ್ಕರ ನಾನು ಉಸಿರಾಡುವೆ ನಿನಗೋಸ್ಕರ

ಗಂಡು : ಹೋ... ಮನಸಿನೊಳಗೆ ಮನಸು ಬೆಸೆಯೊ ಆರಂಭದ ಹೆಜ್ಜೆಯಲಿ ಬಂದು ಕುಳಿತೆ
ಹೆಣ್ಣು : ಹೋ... ಹೃದಯದೊಳಗೆ ಹೃದಯ ಹೊಸೆಯೊ ಪ್ರತಿಬಂಧದ ಅನುಬಂಧದ ಮಾತು ಕಲಿತೆ
ಗಂಡು : ನಿನ್ನ ಒಂದು ಮಧುರ ಸ್ಪರ್ಶ ನನ್ನೆದೆ ಕವಿತೆ 
ಹೆಣ್ಣು :  ಪ್ರತಿ ಪ್ರೇಮಸಾಲಿನಲ್ಲು ಗೆದ್ದು ಸೋತೆ
ಗಂಡು :   ಪ್ರತಿ ಸನಿಹವು ನಿನಗೋಸ್ಕರ ಪ್ರತಿ ವಿರಹವೂ ನಿನಗೋಸ್ಕರ
            ನಾಕೂ ದಿಕ್ಕಿನಲ್ಲೂ ಸಿಕ್ಕುತಿಲ್ಲ ಉತ್ತರ
            ಪ್ರೀತಿಯಲಿ ಹಾಡುವೆ ನಿನಗೋಸ್ಕರ ನಾನು ಉಸಿರಾಡುವೆ ನಿನಗೋಸ್ಕರ

ಹೆಣ್ಣು : ಹೇ... ನೆನಪುಗಳಿಗು ಕನಸುಗಳಿಗು ಈ ಪ್ರೀತಿಯೆ ಸುಖ ಸೇತುವೆ ಅನ್ನುತಾರೆ
ಗಂಡು : ಹೇ... ಎಲ್ಲೊ ಹುಟ್ಟಿ ಎಲ್ಲೊ ಬೆಳೆಯೊ ಪ್ರತಿಯೊಬ್ಬರ ಪ್ರತಿ ಪ್ರೀತಿಯು ನಿಂತ ನೀರೆ
ಹೆಣ್ಣು : ಓ... ಇಲ್ಲಿ ಭಾವನೆಗಳ ಕುಂಚ ಹಿಡಿದಿದೆ ಹೃದಯ 
ಗಂಡು : ಸ್ಪಂದಿಸುವ ಚಿತ್ರ ಮಾತ್ರ ಎಲ್ಲಿ ಮಾಯ
ಹೆಣ್ಣು : ಪ್ರತಿ ಆಸರೆ ನಿನಗೋಸ್ಕರ ಪ್ರತಿ ಅಗಲಿಕೆ ನಿನಗೋಸ್ಕರ
          ನಾಲ್ಕು ಪ್ರೇಮಗೀತೆಗಿಲ್ಲಿ ಒಂದೇ ಅಕ್ಷರ
ಗಂಡು : ಪ್ರೀತಿಯಲಿ ಹಾಡುವೆ ನಿನಗೋಸ್ಕರ 
ಹೆಣ್ಣು :  ನಾನು ಉಸಿರಾಡುವೆ ನಿನಗೋಸ್ಕರ
ಗಂಡು : ನೀನಿರಲೆ ಬೇಕು ಹತ್ತಿರ          ಹೆಣ್ಣು :ಯಾಕೇ ಇನ್ನೂ ಇನ್ನೂ  ದೂರ
ಗಂಡು : ಬೆಳಕೂ ನೀನೆ,                     ಹೆಣ್ಣು : ಬದುಕೂ ನೀನೆ 
ಗಂಡು :  ಜಗ ನೀನೆ, ಜನುಮ ನೀನೆ ಜೊತೆಗೆ ಪ್ರೀತಿಸು
----------------------------------------------------------------------------------------------

ನಿನಗೋಸ್ಕರ (2002) - ರೇಕ್ಸೋಣ ಲಕ್ಸೋಣ 
ಸಂಗೀತ: ಚೈತನ್ಯ 
ಸಾಹಿತ್ಯ: ಕೆ.ಕಲ್ಯಾಣ ಗಾಯನ : ರಾಜೇಶ.  ಸುಜಾತ 

ಗಂಡು : ರೆಕ್ಸೋನಾ ಓ.. ಲಕ್ಸೋಣ ಜಾರುತೀಯ ಜೋಪಾನ 
ಹೆಣ್ಣು : ಜಿಂಬ್ ನಿಂಗ್ ಜಿಗ ಜಿಂಬ ನೀ ತುಂಬಿ ನೋಡು ಮನ ತುಂಬ 
          ನೊರೆ ನೊರೆಯ ಬಯಸುತಿದೆ ಪ್ರಾದಿ ಮದನ ಸ್ನಾನಾನು 
ಗಂಡು : ಜಿಂಬ ಜಿಂಗ ಜಿಗ ಜಿಂಬ ಕನ್ಫ್ಯೂಸ್ ನೋಡು ಕಣ್ತುಂಬ 
           ಮನಸ್ಸು ಎಸ್ಸೂ ಅಂದ್ರೆ ಮೈ ಪ್ಲಸ್ಸೂ 
ಹೆಣ್ಣು : ಆಸೆಗಸ್ಸೇ ಹೊಡೆದ್ರೆ ಮೈನಸ್ಸೂ 
ಗಂಡು : ನರ ನರ ಉರಳಬೇಕು ಕೈಜಾರಿ ಸಿಗಬೇಕು 
           ಆಗ ಎದೆಯಲ್ಲಿ ಗುಂಯ್... ಗುಂಯ್...   ಗುಂಯ್...        
ಹೆಣ್ಣು : ರೆಕ್ಸೋನಾ ಓ.. ಲಕ್ಸೋಣ ಜಾರುತೀಯ ಜೋಪಾನ 
ಗಂಡು: ಜಿಂಬ್ ಜಿಂಗ್ ಜಿಗ ಜಿಂಬ ಜೀರ್ ಜಿಂಬೇ ನೋಡು ಮೈ ತುಂಬಾ 

ಹೆಣ್ಣು : ಇದು ಬಿಸಿ ಇದೆ ಅಡಿಕೆ ಚೆಲ್ಲಿ ಚೆಲ್ಲಿ ಹೋಗುತಿದೆ ಗಡಿಗೆ 
          ಅಂದ ಅನ್ನೋ ಬಾಳೆ ಎಲೆ ಇಟ್ಟು ಬಂದೆ ಇನ್ನು ಹಸಿವಾಗದೇ 
ಗಂಡು : ಯಾಕೋ ಕಾಣೆ ಒಳಗೊಳಗೇ ಕಾಣೆಯಾಗುತಿದೆ ಸಲಿಗೆ 
            ಬಚ್ಚಿಕೊಂಡು ನೆಚ್ಚಿಕೊಂಡು ಉಂಡು ಬಂದೆ ಇನ್ನು ಸಾಕಾಗಿದೆ 
ಹೆಣ್ಣು : ಅತ್ತಾ ಸಿಹಿ ಸಜ್ಜಿಗೆ ನೋಡಿತ್ತಾ ಹುಳಿ ಮಜ್ಜಿಗೆ 
ಗಂಡು : ಓ... ಎತ್ತಾ ಕೈಯ್ಯಿ ಚಾಚಲಿ ಅತ್ತತ್ತ ಸೇವಂತಿಗೇ 
ಹೆಣ್ಣು : ಒಂಟಿ ಬಯಲು ಜೋಡಿ ನವಿಲು ಇದು ಋತುವಾ ಆಲಿಂಗನಾ.. 
ಗಂಡು : ರೆಕ್ಸೋನಾ ಓ.. ಲಕ್ಸೋಣ ಜಾರುತೀಯ ಜೋಪಾನ 
           ಜಿಂಬ್ ಜಿಂಗ್ ಜಿಗ ಜಿಂಬ ಜೀರ್ ಜಿಂಬೇ ನೋಡು ಮೈ ತುಂಬಾ 

ಗಂಡು : ಅಂಗ ಅಂಗಗಳ ಮೇಲೆ ರತಿರಾಣಿ ಬಿಡಿಸದು ಓಲೆ 
            ಬಲೆ ಬಿಚ್ಚಿ ಬಿಚ್ಚಿ ಒಲೆ ಹಚ್ಚಿ ಬಂದೆ ಸಿಕ್ಕಿ ಬಿಡಬಾರದೇ 
ಹೆಣ್ಣು : ಕೊಟ್ಟು ಪಡೆಯುವ ಮುಂಚೆ ಗುಟ್ಟು ಬಿಟ್ಟು ಕೊಡುವೆ ಆಚೀಚೆ 
          ಮುಟ್ಟೋ ಮುಂಚೆ ಪುಟ್ಟ ಲಜ್ಜೆ ಕಂಡು ಕಂಡು ಮೈಯ್ಯಿ ಬಿಸಿಯಾಗದೆ 
ಗಂಡು : ಪ್ರೇಮ ಪಾರಾಯಣ ಓದೋ ಮುಂಚೆ ರಾಮಾಯಣ 
ಹೆಣ್ಣು : ಮರೆತು ಹೋಗಲಾರೆ ಗುರುತು ಇದ್ದ ವಾತ್ಸಾಯನ 
ಗಂಡು : ಜಾರೋ ಕಂಬ ಮೇಲೆ ಜಂಭ ಇದು ಕಾಮ ಸಮ್ಮೇಳನ 
ಹೆಣ್ಣು : ರೆಕ್ಸೋನಾ ಓ.. ಲಕ್ಸೋಣ ಜಾರುತೀಯ ಜೋಪಾನ 
ಗಂಡು: ಜಿಂಬ್ ಜಿಂಗ್ ಜಿಗ ಜಿಂಬ ಜೀರ್ ಜಿಂಬೇ ನೋಡು ಮೈ ತುಂಬಾ 
-------------------------------------------------------------------------------------------

ನಿನಗೋಸ್ಕರ (2002) - ಬೋಲೋರೇ ಆಯ್ ಲವ್ ಯೂ 
ಸಂಗೀತ: ಚೈತನ್ಯ 
ಸಾಹಿತ್ಯ: ವಿ.ನಾಗೇಂದ್ರಪ್ರಸಾದ  ಗಾಯನ : ಹೇಮಂತ, ಸಂಗೀತ, ಮಹಾಲಕ್ಷ್ಮಿ 

ಗಂಡು : ಬೋಲೋರೇ  ಬೋಲೋರೇ ಆಯ್ ಲವ್ ಯೂ ... ಆಯ್ ಲವ್ ಯೂ 
           ಪ್ರೀತಿಗೆ ಕೊನೆಯಿಲ್ಲ ನಿನ್ನೆಯೂ ನಾಳೆಯೂ ಎಲ್ಲಾರು ಸೇರೋಣ ಒಂದಾಗಿ ಬಾಳೋಣ 
           ಒಂದಾಗಿ ಬಾಳೋದು ಹೇಗೆಂದು ಹೇಳೋಣ ಪ್ರೀತಿ ಇದ್ದರೇ ಸಂತೋಷ 
           ಈ ಪ್ರೀತಿನೇ ಮಧುಮಾಸ ಪ್ರೀತಿಯಿಂದಾನೇ ಸಂತಸ 
ಗಂಡು : ಬೋಲೋರೇ  ಬೋಲೋರೇ ಆಯ್ ಲವ್ ಯೂ ... ಆಯ್ ಲವ್ ಯೂ 

ಗಂಡು : ಪ್ರಣಯ ಅನ್ನುವ ಎವರೆಸ್ಟಲಿ ಗೌರಿಯೊಂದಿಗೆ ಶಂಕರ ಉಂಟು 
            ಜೀವ ಜೀವ ಮೀಟೋ  ನಂಟು ಇದು 
ಹೆಣ್ಣು : ಜೋಡಿ ಎನ್ನುವ ಹೆಬ್ಬೆಟ್ಟಲ್ಲಿ ಪ್ರೀತಿ ಕನಸಿಗೆ ಜಾತಕ ಉಂಟು 
          ರಂಗಾದ ತಾಜ್ ಮಹಲು ಮಬ್ಬಾಗದು 
          ಮೂಡಣ ಮೋಡ ಮುತ್ತಿಟ್ಟರೇ ಮಳೆ ಬೇರನ್ನ ಭೂಮಿ ತಬ್ಕೊಂಡ್ರೆ ಬೆಳೆ  ಓಹೋಹೋ ..   
ಗಂಡು : ಪ್ರೀತಿಯ ಬೆನ್ನಲ್ಲೇ ನೂರಾರು ವಂಚನೆ ಪರಿಶುದ್ಧ ಪ್ರೇಮಿಗೆ ಇನ್ಯಾಕೆ ಯೋಚನೆ 
ಹೆಣ್ಣು : ಕೋಟಿ ಅಭಿರುಚಿ ಒಂದಾದಾಗ ಈ ಆತ್ಮ ಸಾಯೋಲ್ಲ ಬನ್ನಿ ಮರೆಯುವಾ ಚಿಂತೆಯಾ.... 
ಗಂಡು : ಬೋಲೋರೇ  ಬೋಲೋರೇ ಆಯ್ ಲವ್ ಯೂ ... ಆಯ್ ಲವ್ ಯೂ 

ಗಂಡು : ಮರದ ಮೈಯ್ಯಲಿ ಸೂರ್ಯನ ಕಿರಣ ಕೆನ್ನೆ ನೈದಿಲೆಗೆ ಚಂದ್ರನ ಕಿರಣ 
            ಒಂದಾಗಿ ಬೆರೆತ ಹಾಗೆ ದಾಂಪತ್ಯವು 
ಹೆಣ್ಣು : ಹರಿಯೋ ನದಿಗಳು ಕಡಲುಗಳನ್ನೂ ನಿದಿರೆ ತುಂಬುವುದು 
          ದಣಿದಿರೋ ಕಣ್ಣ ಎಲ್ಲೆಲ್ಲೂ ಸಹಚರ ಸಂಧಾನವು                
          ಆಲಿಂಗನಯಾ ನಮೋ ನಮಃ ಓ ಚುಂಬನಾಯ ಏನೀ ತರಹ... 
ಹೆಣ್ಣು : ಒಂದಿಲ್ದೆ ಒಂದಿಲ್ಲ ಅನ್ನೋದು ವೇದಾಂತ  ನೀನಿಲ್ದೆ ನಾನಿಲ್ಲ ಪ್ರೀತಿಗೆ ಸಿದ್ಧಾಂತ 
ಗಂಡು : ಐದು ಇದ್ರೆ ಹತ್ತಾದಗ ಶೃಂಗಾರ ಬಾಳೆಲ್ಲ ಪ್ರತಿ ಸ್ಪರ್ಶವು ಶೀತಲ... ಓ.. ಎವ್ರಿ ಬಡಿ 
            ಬೋಲೋರೇ  ಬೋಲೋರೇ ಆಯ್ ಲವ್ ಯೂ ... ಆಯ್ ಲವ್ ಯೂ 
           ಪ್ರೀತಿಗೆ ಕೊನೆಯಿಲ್ಲ ನಿನ್ನೆಯೂ ನಾಳೆಯೂ ಎಲ್ಲಾರು ಸೇರೋಣ ಒಂದಾಗಿ ಬಾಳೋಣ 
           ಒಂದಾಗಿ ಬಾಳೋದು ಹೇಗೆಂದು ಹೇಳೋಣ ಪ್ರೀತಿ ಇದ್ದರೇ ಸಂತೋಷ 
           ಈ ಪ್ರೀತಿನೇ ಮಧುಮಾಸ ಪ್ರೀತಿಯಿಂದಾನೇ ಸಂತಸ 
            ಬೋಲೋರೇ  ಬೋಲೋರೇ ಆಯ್ ಲವ್ ಯೂ ... ಆಯ್ ಲವ್ ಯೂ 
---------------------------------------------------------------------------------------------

ನಿನಗೋಸ್ಕರ (2002) - ಪ್ರೀತಿಯಲಿ ಹಾಡುವೆ (ಸೋನು ನಿಗಮ )
ಸಂಗೀತ: ಚೈತನ್ಯ ಸಾಹಿತ್ಯ: ಕೆ.ಕಲ್ಯಾಣ ಗಾಯನ : ಸೋನು ನಿಗಮ್, ನಂದಿತಾ

ಪ್ರೀತಿಯಲಿ ಹಾಡುವೇ ನಿನಗೋಸ್ಕರ ನಾನು ಉಸಿರಾಡುವೆ ನಿನಗೋಸ್ಕರ 
ಪ್ರೀತಿಯಲಿ ಹಾಡುವೇ ನಿನಗೋಸ್ಕರ ನಾನು ಉಸಿರಾಡುವೆ ನಿನಗೋಸ್ಕರ 
ನೀನಿರಲೇಬೇಕು ಹತ್ತಿರ ಸಾಕಷ್ಟು ಎನ್ನೋ ದೂರ 
ಬೆಳಕು ನೀನೇ ಬದುಕು ನೀನೇ ಜಗ ನೀನೇ ಜನುಮ ನೀನೇ ಜೊತೆಗೆ ಪ್ರೀತಿಸು 
ಪ್ರೀತಿಯಲಿ ಹಾಡುವೇ ನಿನಗೋಸ್ಕರ ನಾನು ಉಸಿರಾಡುವೆ ನಿನಗೋಸ್ಕರ 

ಓ... ಮನಸ್ಸಿನೊಳಗೇ ಮನಸು ಬೆಸೆಯೋ ಆರಂಭದಾ ಹೆಜ್ಜೆಯಲಿ ಬಂದು ಕುಳಿತೆ 
ಓ... ಹೃದಯದೊಳಗೇ ಹೃದಯ ಹೊಸೆಯೋ ಪ್ರತಿ ಬಂಧದಾ ಅನುಬಂಧದಾ ಮಾತು ಕಲಿತೆ 
ನಿನ್ನ ಒಂದು ಮಧುರ ಸ್ಪರ್ಶ ನನ್ನೆದೆ ಕವಿತೆ ಪ್ರತಿ ಪ್ರೇಮ ಸಾವಿನಲ್ಲೂ ಗೆದ್ದು ಸೋತೆ 
ಪ್ರತಿ ಸನಿಹವು ನಿಂಗೋಸ್ಕರ ಪ್ರತಿ ವಿರಹವು ನಿನಗೋಸ್ಕರ 
ನಾಲ್ಕು ದಿಕ್ಕಿನಲ್ಲೂ ಸಿಕ್ಕುತ್ತಿಲ್ಲ ಉತ್ತರ 
ಪ್ರೀತಿಯಲಿ ಹಾಡುವೇ ನಿನಗೋಸ್ಕರ ನಾನು ಉಸಿರಾಡುವೆ ನಿನಗೋಸ್ಕರ 
---------------------------------------------------------------------------------------------

ನಿನಗೋಸ್ಕರ (2002) - ನಿನಗೋಸ್ಕರ
ಸಂಗೀತ: ಚೈತನ್ಯ ಸಾಹಿತ್ಯ: ರಮೇಶರಾವ ಗಾಯನ : ಶಂಕರಮಹಾದೇವನ್ 

ನಿನಗೋಸ್ಕರ ಪ್ರಾಣನ ಪಣವಾಗಿದುವೇ ನಿನಗೋಸ್ಕರ 
ನಿನಗೋಸ್ಕರ ಜೀವಾನ ಮುಡಿಪಾಗಿಡುವೇ ನಿನಗೋಸ್ಕರ 
ನಡೆಯೋಕೆ ಪ್ರೀತಿ ಯಂತ್ರ ತಿಳಿಬೇಕು ಅದರ ತಂತ್ರ 
ಪ್ರೀತಿಲಿ ಸಾವಿರ ಮಂತ್ರ ತಿಳಿದವನು ಪ್ರೇಮಿ ಮಾತ್ರ 
ನಿನಗೋಸ್ಕರ... ನಿನಗೋಸ್ಕರ... ನಿನಗೋಸ್ಕರ... 

ಓ ಮನಸುಗಳ ತಿಳಿಯೋದಕ್ಕೆ ಮಿಡಿತಗಳ ಅರಿಯೋದಕ್ಕೆ ವಿಜ್ಞಾನಿ ಆಗಬೇಕಿಲ್ಲ 
ಹೇ... ಕನಸುಗಳ ಕಾಣೋದಕ್ಕೆ ನನಸದನು ಮಾಡೋದಕ್ಕೆ ಅಜ್ಞಾನಿ ಪ್ರೇಮಿ ಸಾಕಲ್ಲ 
ಪ್ರೇಮಕ್ಕೆ ಸೋತ ಪ್ರೇಮಿಗೆ ಪ್ರೇಮಾನೇ ಋಗ್ವೇದ 
ಪ್ರೇಮಿಯ ಸೋಲಿಸೋ ಜೋಡಿನ ಆರಾಮಾ ಈವಾಗ 
ನಿನಗೋಸ್ಕರ... ನಿನಗೋಸ್ಕರ... ನಿನಗೋಸ್ಕರ... 

ಪ್ರೀತಿಯ ಬಗೆ ಬಗೆ ಬಣ್ಣ ಬಳಿಯೋಕೆ ಈ ಥರವನ್ನ 
ಪಡೆಯೋಕೆ ಪ್ರೇಮದ ಹೊನ್ನ ಹಾಕ್ತಾರೆ ಹೃದಯಕ್ಕೆ ಕನ್ನ  
ನಿನಗೋಸ್ಕರ... ನಿನಗೋಸ್ಕರ... ನಿನಗೋಸ್ಕರ... 
ನಿನಗೋಸ್ಕರ ಪ್ರೀತೀನ ಗೆಲ್ಲೋದಕ್ಕೆ ನೂರು ಥರ 
ನಿನಗೋಸ್ಕರ ಪ್ರೇಮಿನ ಪಡೆಯೋದಕ್ಕೆ ಇಂದು ಒಂಥರಾ ... 
ಓ... ಸ್ನೇಹನಾ ಬೆಸೆಯೋದಕ್ಕೆ ಪ್ರೇಮಾನ ಮುರಿಯೋದಕ್ಕೆ ಈ ಆಟ ಎಂಥಾ ತುಂಟಾಟ 
ಹೇ... ನಂಬಿಕೆಯಾ ಮೆರೆಸೋದಕ್ಕೆ ನಂಬಿದರೆ ಅಳಿಸೋದಕ್ಕೆ ಈ ಸಂಚು ಎಂಥಾ ಜಂಜಾಟ 
ನಿಂತಲ್ಲೇ ಬಲೆಯಾ ಹಣೆಯುವಾ ಆ ಜೇಡನಾ ಮೋಡಿ 
ಸುತ್ತೆಲ್ಲ ಬಲೆಯಾ ಪ್ರೇಮದಿ ಹೆಣೆದಾಡೋ ಈ ಜೋಡಿ  
ಮುಗ್ದತೆಯಾ ಸೋಗಿನ ಮೇಳ ಮುಗ್ದರಿಗೆ ಇಲ್ಲದೆ ಗಾಳ 
ಎಸೆಯುವರು ಮಾತಲೇ ಗಾಳ ತಪ್ಪಿಸಲು ಪ್ರೀತಿಯ ತಾಳ 
ನಿನಗೋಸ್ಕರ.. ನಿನಗೋಸ್ಕರ.. ನಿನಗೋಸ್ಕರ.. 
ನಿನಗೋಸ್ಕರ ಪ್ರಾಣಾನ ಪಣವಾಗಿಡುವೆ ನಿನಗೋಸ್ಕರ 
ನಿನಗೋಸ್ಕರ ಜೀವಾನಾ ಮುಡಿಪಾಗಿಡುವೆ ನಿನಗೋಸ್ಕರ 
ನಿನಗೋಸ್ಕರ.. ನಿನಗೋಸ್ಕರ.. ನಿನಗೋಸ್ಕರ.. 
----------------------------------------------------------------------------------------------

No comments:

Post a Comment