594. ಚಂದ್ರಹಾಸ (1965)

ಚಂದ್ರಹಾಸ ಚಿತ್ರದ ಹಾಡುಗಳು 
ಹಾಡಿದವರು : ಪಿ.ಬಿ.ಶ್ರೀನಿವಾಸ, ಘಂಟಸಾಲ, ಪಿ.ಸುಶೀಲಾ, ಎಸ್.ಜಾನಕೀ, ಪಿ.ಲೀಲಾ,  ಬಿ.ಆರ್.ಲತಾ, ನರಸಿಂಹರಾಜು 
  1. ಶ್ರೀ ಹರಿನಾರಾಯಣ ಶಾಂತಿ ಸದನ 
  2. ಹೇ.. ಶೇಷಶಯಾನಾ ನಾರಾಯಣ 
  3. ಲೋಕ ಪಾವನ ಭಕ್ತ ಕಾರಣ 
  4. ಬಪ್ಪರೇ ಬಲಿರೇ 
  5. ಏನಿದಿ ಅಂದವು ಏತಕೀ ಬಂದಹವು 
  6. ಹುಣ್ಣಿಮೆಯ ಚಂದ ಆಕಾಶದಿಂದ ಬಂದ 
  7. ಯಾವ ಕವಿಯೋ ಶೃಂಗಾರ ಕಲ್ಪನೆಯೋ 
  8. ಓ..ಪ್ರಾಣ ಸಖ ನೀ ಎಲ್ಲಿರುವೆ 
  9. ಜನನಿ ಜಯಗೌರಿ ಶ್ರೀ ತ್ರಿಪುರ ಸುಂದರಿ 
  10. ಮಾತಾ ಮಾರಕತಸ್ಯ 
ಚಂದ್ರಹಾಸ ಚಿತ್ರದ ಹಾಡುಗಳು 
ಹಾಡಿದವರು : ಪಿ.ಬಿ.ಶ್ರೀನಿವಾಸ, ಘಂಟಸಾಲ, ಪಿ.ಸುಶೀಲಾ, ಎಸ್.ಜಾನಕೀ, ಪಿ.ಲೀಲಾ,  ಬಿ.ಆರ್.ಲತಾ, ನರಸಿಂಹರಾಜು 

ಶ್ರೀಹರಿ ನಾರಾಯಣ ಶಾಂತಿ ಸದನ ಪಾಪವಿನಾಶನ ಪಾವನ
ಶ್ರೀಹರಿ ನಾರಾಯಣ ಶಾಂತಿ ಸದನ ಪಾಪವಿನಾಶನ ಪಾವನ

ಕಮಲನಯನ ಮಂದಸ್ಮಿತ ವದನ ಪುಣ್ಯಚರಣ ಶಿರಮೋಹನ
ಕಮಲನಯನ ಮಂದಸ್ಮಿತ ವದನ ಪುಣ್ಯಚರಣ ಶಿರಮೋಹನ
ಕುರುಣಾಧರಣ ಸಂಕಟಹರಣ 
ಕುರುಣಾಧರಣ ಸಂಕಟಹರಣ ಪಾಹಿಮಾ ಹರಿ ಪಾಹಿಮಾ
ಶ್ರೀಹರಿ ನಾರಾಯಣ ಶಾಂತಿ ಸದನ ಪಾಪವಿನಾಶನ ಪಾವನ
ಶ್ರೀಹರಿ ನಾರಾಯಣ ಶಾಂತಿ ಸದನ ಪಾಪವಿನಾಶನ ಪಾವನ
--------------------------------------------------------------------------------------------------------------------------
ಚಂದ್ರಹಾಸ (1965)
ಸಾಹಿತ್ಯ: ಚಿ.ಸದಾಶಿವಯ್ಯ ಸಂಗೀತ: ಎಸ್.ಹನುಮಂತ ರಾವ್ ಹಾಡಿದವರು: ಪಿ.ಲೀಲಾ 

ಹೇ.. ಶೇಷಶಯನಾ ನಾರಾಯಣ
ಹೇ.. ಕಮಲ ನಯನಾ ದೀನಾವನ
ಹೇ.. ಶೇಷಶಯನಾ ನಾರಾಯಣ
ಹೇ.. ಚಕ್ರಧಾರಿ ಶೌರೀ ಮುರಾರಿ
ನೀ ಹೋರತು ನಮಗೆ ಬೇರಿಲ್ಲ ದಾರಿ
ಎನ್ನ ಚಂದ್ರಹಾಸ ನಿನ್ನ ಪಾದದಾಸ
ಕಾಪಾಡೋ ರಂಗಾ ಕರುಣಾಂತರಂಗ
ಹೇ.. ಶೇಷಶಯನಾ ನಾರಾಯಣ

ಭಕುತ ಪ್ರಹ್ಲಾದನ ಬಾಧಿಸೆ ಪಿತನು 
ಕಂಬದಿಂದಲಿ ಬಂದು ಕಾಪಾಡಿದೆ 
ಮೊಸಳೆಗೆ ಸಿಲುಕಿ ನೊಂದ ಗಜೇಂದ್ರನ 
ಮೊರೆ ಕೇಳಿ ಬಂದು ಪೊರೆದಂಥ ಹರಿಯೇ 
ಹೇ.. ಶೇಷಶಯನಾ ನಾರಾಯಣ 

ದುಷ್ಟಾತ್ಮರುಗಳ ಒಳ ಸಂಚ ಸುಳಿಗೆ 
ಸಿಕ್ಕಿರುವೆನೆನ್ನ ಎಳೆಕಂದನೂ 
ಪಾಪಾತ್ಮರನ್ನು ನೀ ನಾಶ ಮಾಡಿ 
ಸಂರಕ್ಷಿಸಯ್ಯಾ ನಿನ್ನ ಭಕ್ತರಾ 
ಹೇ.. ಶೇಷಶಯನಾ ನಾರಾಯಣ
ಹೇ.. ಕಮಲ ನಯನಾ ದೀನಾವನ
ಹೇ.. ಶೇಷಶಯನಾ ನಾರಾಯಣ
--------------------------------------------------------------------------------------------------------------------------

ಚಂದ್ರಹಾಸ (1965)
ಸಾಹಿತ್ಯ: ಚಿ.ಸದಾಶಿವಯ್ಯ ಸಂಗೀತ: ಎಸ್.ಹನುಮಂತ ರಾವ್ ಹಾಡಿದವರು: ಪಿ.ಲೀಲಾ 

ಲೋಕಪಾವನ ಭಕ್ತ ಕಾರಣ ವಿಶ್ವ ಕಾರಣ ಶ್ರೀ ಹರಿ
ಲೋಕಪಾವನ ಭಕ್ತ ಕಾರಣ ವಿಶ್ವ ಕಾರಣ ಶ್ರೀ ಹರಿ 
ಲೋಕಪಾವನ ಭಕ್ತ ಕಾರಣ ವಿಶ್ವ ಕಾರಣ ಶ್ರೀ ಹರಿ 
ದೀನ ಶರಣ್ಯ ದೇವಲರೇಣ್ಯ  ಮಂಗಳ ಮೋಹನ ಶ್ರೀಹರಿ 

ಅನಾಥ ಬಂಧು ಕಾರುಣ್ಯ ಸಿಂಧು ಲೋಕರಾತ್ಮ ಶ್ರೀಹರಿ 
ಅನಾಥ ಬಂಧು ಕಾರುಣ್ಯ ಸಿಂಧು ಲೋಕರಾತ್ಮ ಶ್ರೀಹರಿ 
ಜಗದಾ ಧಾರಾ ವೇಂದಾಂತಕಾರ ಆನಂದರೂಪ ಶ್ರೀಹರಿ 
ಲೋಕಪಾವನ ಭಕ್ತ ಕಾರಣ ವಿಶ್ವ ಕಾರಣ ಶ್ರೀ ಹರಿ 
ದೀನ ಶರಣ್ಯ ದೇವಲರೇಣ್ಯ  ಮಂಗಳ ಮೋಹನ ಶ್ರೀಹರಿ 
ಮಂಗಳ ಮೋಹನ ಶ್ರೀಹರಿ
--------------------------------------------------------------------------------------------------------------------------

ಚಂದ್ರಹಾಸ (1965)
ಸಾಹಿತ್ಯ: ಚಿ.ಸದಾಶಿವಯ್ಯ ಸಂಗೀತ: ಎಸ್.ಹನುಮಂತ ರಾವ್ ಹಾಡಿದವರು: ಪಿ.ಬಿ.ಶ್ರೀನಿವಾಸ, ಪಿ.ಲೀಲಾ

ಬಪ್ಪರೇ ಭಳಿರೇ 
ಅಹ್ ಬಪ್ಪರೇ ಭಳಿರೇ ಒಹೋ ಬಪ್ಪರೇ ಭಳಿರೇ 
ಅಹ್ ಬಪ್ಪರೇ ಭಳಿರೇ ಒಹೋ ಬಪ್ಪರೇ ಭಳಿರೇ 
ಅಹ್ ಬಪ್ಪರೇ ಭಳಿರೇ ತಾಯಕಿ ಇದು ಆಂಜನೇಯನ ತಾಯಕಿ
ಶ್ರೀ ವೀರಾಂಜನೇಯನ ತಾಯಕಿ  ವಜ್ರಗಾಂ ಬಲಿಯ ತಾಯಕಿ  
ದೇವತೆಗಳ ಸಾವಿಂದ ಕಟ್ಟಿಸಿ ಅಮರರಾಗಿಸಿದ ತಾಯಕಿ    
ಬಪ್ಪರೇ ಭಳಿರೇ

ಸಪ್ತ ಸುಮುದ್ರವ.. ಹುರ್ರ್..   
ಸಪ್ತ ಸುಮುದ್ರವ ದಾಟಲು ಹಿಂದೆ ಶಕ್ತಿ ಕೊಟ್ಟದ್ದು ಈ ತಾಯಕಿ 
ಸಪ್ತ ಸುಮುದ್ರವ ದಾಟಲು ಹಿಂದೆ ಶಕ್ತಿ ಕೊಟ್ಟದ್ದು ಈ ತಾಯಕಿ
ಸಂಜೀವಿನಿ ಪರ್ವತವ ಎತ್ತಲು ಸಾಧಕವಾಯಿತು ಈ ತಾಯಕಿ 
ಬಪ್ಪರೇ ಭಳಿರೇ 

ಹರಿಹರಾದಿಗಳು ಅಡ್ಡಬಂದರು ಎದುರಿಸಲಿ ಈ ಕೈಯೇ ಸಾಕು
ಹರಿಹರಾದಿಗಳು ಅಡ್ಡಬಂದರು ಎದುರಿಸಲಿ ಈ ಕೈಯೇ ಸಾಕು
ಮಗಳ ಕೊಡುವ ಮಾವಯ್ಯಾ 
ತನ ಮಗಳ ಕೊಡುವ ಮಾವಯ್ಯನು ಕೂಡಾ
ನೆಲವಕಚ್ಚಿದನ ಬೇಡಲೇ ಬೇಕು
ಬಪ್ಪರೇ ಭಳಿರೇ
ಅಹ್ ಬಪ್ಪರೇ ತಾಯಕಿ ಇದು ಆಂಜನೇಯನ ತಾಯಕಿ
ಶ್ರೀ ವೀರಾಂಜನೇಯನ ತಾಯಕಿ  ವಜ್ರಗಾಂ ಬಲಿಯ ತಾಯಕಿ  
ದೇವತೆಗಳ ಸಾವಿಂದ ಕಟ್ಟಿಸಿ ಅಮರರಾಗಿಸಿದ ತಾಯಕಿ    
ಬಪ್ಪರೇ ಭಳಿರೇ 
ಜೈ ವೀರ ಹನುಮಾನ 
--------------------------------------------------------------------------------------------------------------------------

ಚಂದ್ರಹಾಸ (1965)
ಸಾಹಿತ್ಯ: ಚಿ.ಸದಾಶಿವಯ್ಯ ಸಂಗೀತ: ಎಸ್.ಹನುಮಂತ ರಾವ್ ಹಾಡಿದವರು: ಎಸ್.ಜಾನಕೀ 

ಏನಿದೋ..  ಏತಕೋ..  ಏನಿದೋ..  ಏತಕೋ..
ಏನಿದೇ ಅಂದವೋ ಏತಕೆ ಬಂಧವೋ
ನೋಡಲೇ ನೆನೆಯಲೇ  ಆಗುವಾನಂದವೂ
ಏನಿದೇ ಅಂದವೋ ಏತಕೆ ಬಂಧವೋ
ನೋಡಲೇ ನೆನೆಯಲೇ  ಆಗುವಾನಂದವೂ
ಏನಿದೋ..  ಏತಕೋ.. 

ಕುಸುಮ ಬಾಣವೇತಕೊ ಹುಸಿನಗುವಿದು ಏತಕೋ
ಕುಸುಮ ಬಾಣವೇತಕೊ ಹುಸಿನಗುವಿದು ಏತಕೋ
ತಾರೆಯನು ಚಂದ್ರನು ಸೇರಿರುವುದು ಏತಕೋ  

ತಾರೆಯನು ಚಂದ್ರನು ಸೇರಿರುವುದು ಏತಕೋ  
ಹೂವು ಸುತ್ತಿ ದುಂಬಿ ಯು ಹಾಡುತಿಹುದು ಏತಕೋ 
ಏನಿದೋ..  ಏತಕೋ.. 

ಜೊನ್ನ ಹಕ್ಕಿ ಜೋಡಿಯು ಆಡುತಿಹುದು ಏತಕೋ 
ನನ್ನ ಹೃದಯ ಸಂಗವ ಬೇಡುತಿಹುದು ಏತಕೋ 
ಚಿಗುರೆಲೆಯ ಸೊಂಪಲೆ ಕೂಗುತಿಹುದು ಕೋಗಿಲೆ 
ಜಿಗಿವ ಮನದ 
ಏನಿದೋ..  ಏತಕೋ.. 

ಎಳೆಯ ತಂಗಾಳಿಗೆ ಪುಳಕರಿಸಿದೇ ದೇಹವು 
ತಿಳಿಮನವ ಸೆಳೆದಿದೆ ತಿಳಿಯದ ವ್ಯಾಮೋಹವೂ 
ರತಿಯು ನಾನಾದರೇ ಯಾರು ನನ್ನ ಮಾರನು 
ರತಿಯು ನಾನಾದರೇ ಯಾರು ನನ್ನ ಮಾರನು 
ಯಾವನೋ ಯಾವಾನೋ ನನ್ನ ಮಾರ ಯಾವನೋ  
ಎಲ್ಲಿಹನು ಎಲ್ಲಿಹನು ನನ್ನ ಮಾರ ಎಲ್ಲಿಹನು 
--------------------------------------------------------------------------------------------------------------------------

ಚಂದ್ರಹಾಸ (1965)
ಸಾಹಿತ್ಯ: ಚಿ.ಸದಾಶಿವಯ್ಯ ಸಂಗೀತ: ಎಸ್.ಹನುಮಂತ ರಾವ್ ಹಾಡಿದವರು: ಪಿ.ಬಿ.ಶ್ರೀನಿವಾಸ, ಪಿ.ಲೀಲಾ

ಹೆಣ್ಣು : ಆಆಆ.... ಓಓಓಓಓ...ಆಆಆಆಅ.... ಆಆಆ.... 
          ಹುಣ್ಣಿಮೆಯ ಚಂದ್ರ ಆಕಾಶದಿಂದ ಬಂದ 
          ಕಣ್ಣನ್ನು ತುಂಬಿ ನಿಂದಾ ಆನಂದದಿಂದ ತಾ ಹಾಡಿದ 
         ಈ ನನ್ನ ಮನಸಾ ತಾ ದೋಚಿದ

ಹೆಣ್ಣು : ಆಆಆಆ..
         ನಾ ಎಂದೂ ಕಾಣದ ಒಲವೂ ಗಂಭೀರ ಧೀರ ನೀಲುವು
         ನಾ ಎಂದೂ ಕಾಣದ ಒಲವೂ ಗಂಭೀರ ಧೀರ ನೀಲುವು  
         ನವಮಾರನಂತ ಚೆಲುವನ್ನು ತಾ ತೋರಿದಾ 
         ಈ ನನ್ನ ಮನಸಾ ತಾ ದೋಚಿದಾ 
         ಹುಣ್ಣಿಮೆಯ ಚಂದ್ರ ಆಕಾಶದಿಂದ ಬಂದ 
        ಕಣ್ಣನ್ನು ತುಂಬಿ ನಿಂದಾ ಆನಂದದಿಂದ ತಾ ಹಾಡಿದ 
         ಈ ನನ್ನ ಮನಸಾ ತಾ ದೋಚಿದ
ಗಂಡು :  ಆಆಆ.... ಓಓಓಓಓ...ಆಆಆಆಅ.... ಆಆಆ....
         ಓಓಓ.. ಸಖಿ ಸಿಂಗಾರಿ ಲಲನಾ ಮಣಿ ಸುರುಚಿದ ತರುಣಿ 
         ನವಮೋಹಿನಿ ಮಧುವಾಹಿನಿ ವರಭಾಮಿನಿ ಪ್ರಿಯ ಬಾಷಿತ ಸಖಿ ಸಿಂಗಾರಿ
         ವೈಯಾರಿ ನೀ ಬಾರೇ ಬಂಗಾರ ದೂಪ ತೂರೇ ಅಂದ ಚಂದ ವದನ
        ನನ್ನ ಮನವ ಕಾಡುತಿರುವೇ .. ಓಓಓ.. ಸಖಿ ಸಿಂಗಾರಿ

ಹೆಣ್ಣು : ನನ್ನಂತರಂಗವನ್ನ ಓ ಸೂರೆಗೊಂಡ ಚೆನ್ನ 
        ನನ್ನಂತರಂಗವನ್ನ ಓ ಸೂರೆಗೊಂಡ ಚೆನ್ನ
        ನಾ ಕಣ್ಣಲಿಟ್ಟೆ ತೂಗೇನೆ ಬಾ ಬೇಗನೇ
        ಈ ಕ್ಷಣವೊಂದು ಯುಗವಾಗಿದೆ
ಗಂಡು : ಓ.. ಕೋಮಲಾಂಗಿ ನೀರೇ ನೀನೆಂದು ಮರೆಯಲಾರೆ
           ಓ.. ಕೋಮಲಾಂಗಿ ನೀರೇ ನೀನೆಂದು ಮರೆಯಲಾರೆ
          ನೆನದಂತೆ ತನುವೆಲ್ಲ ಜುಂ ಜುಂ ಎನ್ನುತಾ
          ಪ್ರಣಯದಾನಂದ ತಾ ನೀಡಿದೆ

ಹೆಣ್ಣು : ನಾ ಇಂದು ತಾನೇ ಅರಿತೆ ಈ ಪ್ರೇಮಸುಧೆಯ ಸವಿಯ
         ನಾ ಇಂದು ತಾನೇ ಅರಿತೆ ಈ ಪ್ರೇಮಸುಧೆಯ ಸವಿಯ
         ಮನವಿಂದು ಬೇರೊಂದು ಸುಖ ಕಂಡಿದೆ
        ಜಗ ಮರೆವಂತೆ  ಮಾಡಿದೆ
          ಹುಣ್ಣಿಮೆಯ ಚಂದ್ರ ಆಕಾಶದಿಂದ ಬಂದ 
          ಕಣ್ಣನ್ನು ತುಂಬಿ ನಿಂದಾ ಆನಂದದಿಂದ ತಾ ಹಾಡಿದ 
         ಈ ನನ್ನ ಮನಸಾ ತಾ ದೋಚಿದ 
--------------------------------------------------------------------------------------------------------------------------
ಚಂದ್ರಹಾಸ (1965)
ಸಾಹಿತ್ಯ: ಚಿ.ಸದಾಶಿವಯ್ಯ ಸಂಗೀತ: ಎಸ್.ಹನುಮಂತ ರಾವ್ ಹಾಡಿದವರು: ಘಂಟಸಾಲ, ಬೆಂಗಳೂರು ಲತಾ

ಹೆಣ್ಣು : ಆಆಆ.... ಓಓಓಓಓ....
ಗಂಡು :  ಯಾವ ಕವಿಯ ಶೃಂಗಾರ ಕಲ್ಪನೆಯೊ ಸೌಂದರ್ಯವಲ್ಲಿಯೊ
             ಯಾವ ಕವಿಯ ಶೃಂಗಾರ ಕಲ್ಪನೆಯೊ ಸೌಂದರ್ಯವಲ್ಲಿಯೊ
             ದೇವ ಶಿಲ್ಪಿಯ ಅಮರ ಕಲಾಕೃತಿಯೊ ನೀ
             ಯಾವ ಕವಿಯ ಶೃಂಗಾರ ಕಲ್ಪನೆಯೊ

ಹೆಣ್ಣು : ಆಆಆ.... ಓಓಓಓಓ.... ಆಆಆ.
ಗಂಡು : ಎಲೆಯ ಮರೆಯ ಸುಂದರ ಕೆಂದಾವರೆಯೊ
            ನೆಲದ ಮರೆಯ ನವದಿವ್ಯ ರತುನ ಮಣಿಯೊ
            ಮುಗಿಲ ಮರೆಯ ಮಿಂಚಿನ ಭವ್ಯಾಂಗನೆಯೊ...ಆಆಆ.....
           ಮುಗಿಲ ಮರೆಯ ಮಿಂಚಿನ ಭವ್ಯಾಂಗನೆಯೊ
           ಜಗದ ಚೆಲುವೆ ಹೆಣ್ಣಾಗಿ ಬಂದ ಸಿರಿಯೊ
           ಜಗದ ಚೆಲುವೆ ಹೆಣ್ಣಾಗಿ ಬಂದ ಸಿರಿಯೊ
           ಯಾವ ಕವಿಯ ಶೃಂಗಾರ ಕಲ್ಪನೆಯೊ

ಗಂಡು :   ನೀನೆ ನನ್ನ ಶೃಂಗಾರ ರಾಜ್ಯ ರಾಣಿ
              ನೀನೆ ನನ್ನ ಭಾವನೆಯ ಭವ್ಯ ವಾಣಿ
             ನೀನೆ ನನ್ನ ಶೃಂಗಾರ ರಾಜ್ಯ ರಾಣಿ
             ನೀನೆ ನನ್ನ ಭಾವನೆಯ ಭವ್ಯ ವಾಣಿ
             ನೀನೆ ನನ್ನ ಪ್ರಣಯಾನಂದದ ಖಣಿಯು
             ನೀನೆ ನನ್ನ ಪ್ರೇಮದ ಮುದ್ದಿನ ಗಿಣಿಯು
            ಯಾವ ಕವಿಯ ಶೃಂಗಾರ ಕಲ್ಪನೆಯೊ ಸೌಂದರ್ಯವಲ್ಲಿಯೊ
            ದೇವ ಶಿಲ್ಪಿಯ ಅಮರ ಕಲಾಕೃತಿಯೊ ನೀ
            ಯಾವ ಕವಿಯ ಶೃಂಗಾರ ಕಲ್ಪನೆಯೊ
--------------------------------------------------------------------------------------------------------------------------

ಚಂದ್ರಹಾಸ (1965)
ಸಾಹಿತ್ಯ: ಚಿ.ಸದಾಶಿವಯ್ಯ ಸಂಗೀತ: ಎಸ್.ಹನುಮಂತ ರಾವ್ ಹಾಡಿದವರು: ಎಸ್.ಜಾನಕೀ 

ಆಆಆ... ಓ ಪ್ರಾಣಸಖಾ ನೀ ಎಲ್ಲಿರುವೇ
ಏಕಾಂಗಿಯ ಬದುಕು ಭಾರವೇ
ನನ್ನಂದದ   ನಲ್ಲನೇ ಬೇಗ ಬಾ
ಓ ಪ್ರಾಣಸಖಾ ನೀ ಎಲ್ಲಿರುವೇ
ಏಕಾಂಗಿಯ ಬದುಕು ಭಾರವೇ
ನನ್ನಂದದ  ನಲ್ಲನೇ ಬೇಗ ಬಾ
ಓ ಪ್ರಾಣಸಖಾ ನೀ ಎಲ್ಲಿರುವೇ 

ಬರುವನು ಬಾರನು ತಾ ಮನದನ್ನ 
ಬರುವನು ಬಾರನು ತಾ ಮನದನ್ನ 
ವಿರಹವ ಹರಿಸನು ಸಾರುತ  ನನ್ನ 
ಅಂಧಕಾರವು ಆವರಿಸುವುದು 
ನಿನ್ನನೇ ಕಾಣಲೂ 
ನಿನ್ನನೇ ಕಾಣಲೂ ಕಾದಿಹೆ ನಾ
ಓ ಪ್ರಾಣಸಖಾ ನೀ ಎಲ್ಲಿರುವೇ 

ಕಣ್ಣಲ್ಲಿ ಕುಣಿದಿದೆ ನಿನ್ನಯ ಚೆಲುವು 
ಮನದಲಿ ನಲಿದಿದೆ ನಿನ್ನಯ ಒಲವೂ 
ಸುತ್ತಲು ಬರುತಿದೆ ನಿನ್ನಯ ತರೆಯೇ ಆಆಆ.... 
ಸುತ್ತಲು ಬರುತಿದೆ ನಿನ್ನಯ ತರೆಯೇ ಆಆಆ.... 
ನಿನ್ನಯ ನಗುಮುಖ 
ನಿನ್ನಯ ನಗುಮುಖ ನಾ ಮರೆಯೇ 
ಓ ಪ್ರಾಣಸಖಾ ನೀ ಎಲ್ಲಿರುವೇ
ಏಕಾಂಗಿಯ ಬದುಕು ಭಾರವೇ
ನನ್ನಂದದ  ನಲ್ಲನೇ ಬೇಗ ಬಾ
ಓ ಪ್ರಾಣಸಖಾ ನೀ ಎಲ್ಲಿರುವೇ
--------------------------------------------------------------------------------------------------------------------------

ಚಂದ್ರಹಾಸ (1965)
ಸಾಹಿತ್ಯ: ಚಿ.ಸದಾಶಿವಯ್ಯ ಸಂಗೀತ: ಎಸ್.ಹನುಮಂತ ರಾವ್ ಹಾಡಿದವರು: ಎಸ್.ಜಾನಕೀ

ಜನನಿ ಜಯಗೌರಿ
ಜನನಿ ಜಯಗೌರಿ ಶ್ರೀ ತ್ರಿಪುರಸುಂದರೀ ಬನಶಂಕರಿ
ಜನನಿ ಜಯಗೌರಿ ಶ್ರೀ ತ್ರಿಪುರಸುಂದರೀ ಬನಶಂಕರಿ
ಜನನಿ ಜಯಗೌರಿ

ಪಾವನಮಾತೆ ಮಂಗಳದಾತೆ ನಂಬಿದೆ ನಿನ್ನಾ ಕಾತ್ಯಾಯಿನಿ
ಪಾವನಮಾತೆ ಮಂಗಳದಾತೆ ನಂಬಿದೆ ನಿನ್ನಾ ಕಾತ್ಯಾಯಿನಿ
ನನ್ನಯ ಸ್ವಾಮಿಯ ರಕ್ಷಿಸು ತಾಯೇ ಆಪತ್ ಬರದಂತೇ ಕಾಪಾಡಮ್ಮಾ
ಜನನಿ ಜಯಗೌರಿ ಶ್ರೀ ತ್ರಿಪುರಸುಂದರೀ ಬನಶಂಕರಿ
ಜನನಿ ಜಯಗೌರಿ ಶ್ರೀ ತ್ರಿಪುರಸುಂದರೀ ಬನಶಂಕರಿ
ಜನನಿ ಜಯಗೌರಿ

ಪಾಪಶೋಷಿಣಿ ಭಕ್ತ ಪೋಷಿಣಿ ಪಾಹಿಮಾ ಭವಾನಿ
ಭಕ್ತಿ ಕಾಮಿನಿ ಮುಕ್ತಿದಾಯಿನಿ ಪಾಹಿದ ದಕ್ಪನನಿ
ನನ್ನ ಪತಿಯ ಕಾಪಾಡಿ.... ಮಾಂಗಲ್ಯವ ನೀ ನೀಡಿ...
ನನ್ನ ಬಾಳಿನ ಬೆಳಕನು ನಿಲ್ಲಿಸಿ ರಕ್ಷಿಸಮ್ಮಾ ಕಲ್ಯಾಣಿ
-------------------------------------------------------------------------------------------------------------------------

ಚಂದ್ರಹಾಸ (1965)
ಸಾಹಿತ್ಯ: ಚಿ.ಸದಾಶಿವಯ್ಯ ಸಂಗೀತ: ಎಸ್.ಹನುಮಂತ ರಾವ್ ಹಾಡಿದವರು: ಪಿ.ಬಿ.ಎಸ್.

ಮಾತಾ... ಮರಕತಶ್ಯಾಮಾ ಮಾತಂಗೀ ಮಧುಶಾಲಿನೀ ಆ.....
ಕುರ್ಯಾತ್ಕಟಾಕ್ಷಂ ಕಲ್ಯಾಣೀ.. ಕದಂಬ ವನವಾಸಿನೀ...
ಜಯ ಮಾತಂಗತನಯೇ, ಜಯ ನೀಲೋತ್ಪಲದ್ಯುತೇ
ಜಯ ಸಂಗೀತರಸಿಕೇ, ಜಯ ಲೀಲಾಶುಕಪ್ರಿಯೇ...
ನಮೋಸ್ತುತೇ ಮಹಾದೇವಿ ನಮೋ ಭಗವಿಶ್ವರೀ
ನಮಸ್ತೆ ಜಗನ್ಮಾತಃ ಜಯ ಶಂಕರ ವಲ್ಲಭಿ
ನಮೋ ನಮಸ್ತೆ ರಕ್ತಾಕ್ಷೀ ಜಯಮದಾಲನಿ
ಮಹಾಲಕ್ಷ್ಮಿ ಈಶ್ವರಿ ನಮೋಸ್ತುತೇ
ಮಹಾಕಾಳಿ ನಮೋಸ್ತುತೇ
--------------------------------------------------------------------------------------------------------------------------

No comments:

Post a Comment