597. ರಿಷಿ (2005)

ರಿಷಿ ಚಲನಚಿತ್ರದ ಹಾಡುಗಳು 
  1. ಎಲ್ಲೆಲ್ಲೆಲ್ಲೂ ಹಬ್ಬ ಹಬ್ಬ, ಬಂತು 
  2. ನಾನು ಹೊತ್ತಾರೆ ಎದ್ಬುಟ್ಟು
  3. ಲಾಲಿ ಲಾಲಿ 
  4. ಸೊಗಸೇ ಸೊಗಸೇ 
  5. ಬಂದಳೂರ ಬಂದರೆಲ್ಲ 
  6. ಏನೆಂದು ನಾ ಹೇಳಲಾರೇ 
ರಿಷಿ (೨೦೦೫) - ಎಲ್ಲೆಲ್ಲೆಲ್ಲೂ ಹಬ್ಬ ಹಬ್ಬ, ಬಂತು 
ಸಂಗೀತ: ಗುರುಕಿರಣ್ ಸಾಹಿತ್ಯ: ವಿ.ಮನೋಹರ್, ಗಾಯನ : ಸೋನು ನಿಗಮ್, ಚಿತ್ರಾ

ಎಲ್ಲೆಲ್ಲೆಲ್ಲೂ ಹಬ್ಬ ಹಬ್ಬ, ಬಂತು ಯುಗಾದಿ ಹಬ್ಬ
ಈ ಸಂಬಂಧ ಬೆಸೆದ ಹಬ್ಬ, ಕಣ್ತುಂಬ ಪ್ರೀತಿ ಹಬ್ಬ
ಎಲ್ಲೆಲ್ಲೆಲ್ಲೂ ಹಬ್ಬ ಹಬ್ಬ, ಬಂತು ಯುಗಾದಿ ಹಬ್ಬ
ಈ ಸಂಬಂಧ ಬೆಸೆದ ಹಬ್ಬ, ಕಣ್ತುಂಬ ಪ್ರೀತಿ ಹಬ್ಬ

ಬೇವು ಕೂಡ ಸಿಹಿಯಾಯ್ತು, ಬೆಲ್ಲ ಮೆಲ್ಲ ಜೇನಾಯ್ತು
ಮನೆಯ ತುಂಬ ನಗುವಿನ ತೋರಣ ತೂಗಿ ತೂಗಿತು
ಚಿಂತೆ ನೋವು ಹಗುರಾಯ್ತು, ಸುಗ್ಗಿ ಸಿರಿಯ ಮಳೆಯಾಯ್ತು
ಮನದ ತುಂಬ ಹರುಷದ ಹೂರಣ ಆಹಾ ಮೂಡಿತು
ಎಲ್ಲೆಲ್ಲೂ ಜೀವ ಕಳೆ, ಜೀವಕಿದು ಹೂವ ಕಳೆ
ಎಲ್ಲೆಲ್ಲೂ ಜೀವ ಕಳೆ, ಜೀವಕಿದು ಹೂವ ಕಳೆ
ಹಳೆಯ ಕೊಳೆಯ ತೊಳೆಯ ಬಂತು ರಂಗಿನ ಯುಗಾದಿ
ಎಲ್ಲೆಲ್ಲೆಲ್ಲೂ ಹಬ್ಬ ಹಬ್ಬ, ಬಂತು ಯುಗಾದಿ ಹಬ್ಬ
ಈ ಸಂಬಂಧ ಬೆಸೆದ ಹಬ್ಬ, ಕಣ್ತುಂಬ ಪ್ರೀತಿ ಹಬ್ಬ

ಕಳೆದುದೆಲ್ಲ ದೊರೆತಾಯ್ತು, ದೊರಕಿದ್ದೆಲ್ಲ ವರವಾಯ್ತು
ಹೊಸದು ಹಾದಿ ತೋರಿ ಬಾಳ ಗೀತೆಯಾಯಿತು
ಹೃದಯ ಕುಣಿವ ನವಿಲಾಯ್ತು, ಮನೆಯ ತುಂಬ ನಲಿವಾಯ್ತು
ಎಂದು ಹೀಗೆ ಇರಲಿ ಗಾಳಿ ಗಂಧ ಕೋರಿತು
ಇನ್ನೆಲ್ಲ ಶುಭ ಶಕುನ, ಅನುದಿನವು ಸನ್ಮಾನ
ಇನ್ನೆಲ್ಲ ಶುಭ ಶಕುನ, ಅನುದಿನವು ಸನ್ಮಾನ
ಮರೆಯದಂತ ಸವಿಸವಿ ಗಳಿಗೆ ತಂದಿತು ಯುಗಾದಿ
ಎಲ್ಲೆಲ್ಲೆಲ್ಲೂ ಹಬ್ಬ ಹಬ್ಬ, ಬಂತು ಯುಗಾದಿ ಹಬ್ಬ
ಈ ಸಂಬಂಧ ಬೆಸೆದ ಹಬ್ಬ, ಕಣ್ತುಂಬ ಪ್ರೀತಿ ಹಬ್ಬ
ಎಲ್ಲೆಲ್ಲೆಲ್ಲೂ ಹಬ್ಬ ಹಬ್ಬ, ಬಂತು ಯುಗಾದಿ ಹಬ್ಬ
ಈ ಸಂಬಂಧ ಬೆಸೆದ ಹಬ್ಬ, ಕಣ್ತುಂಬ ಪ್ರೀತಿ ಹಬ್ಬ
----------------------------------------------------------------------------------------------------------------------

ರಿಷಿ (೨೦೦೫) - ನಾನು ಹೊತ್ತಾರೆ ಎದ್ಬುಟ್ಟು.
ಸಂಗೀತ: ಗುರುಕಿರಣ,  ಸಾಹಿತ್ಯ: ವಿ.ಮನೋಹರ್ ಗಾಯನ: ರಾಜು ಅನಂತಸ್ವಾಮಿ, ಗುರು ಕಿರಣ್, ಆರಾಧನ

ನಾನು ಹೊತ್ತಾರೆ ಎದ್ಬುಟ್ಟು..  ನಿನ್ ಮೋರೆ ನೊಡ್ಬುಟ್ಟು..
ಕೈ ಜೋಡ್ಸಿ ನಿಲ್ತಿನ್ ಕಣೆ!
ಬೇಗ ಬೆಡ್ ಕಾಪಿ ತನ್ಬುಟ್ಟು.. ನಿನ್ ಕಾಲ ಹೊತ್ಬುಟ್ಟು 
ಬಗ್ ಬಗ್ಸಿ ಕೊಡ್ತಿನ್ ಕಣೆ!
ಕಾಪಿ ಸೀಗಿಲ್ಲ ಅಂತ ನೀ ಒಟ್ಗುಟ್ಟ್ರೆ.. ನಿನ್ ಬೆಳ್ಳ ಕಪ್ಪಲ್ಲಿ ಅದ್ತೀನ್ ಕಣೆ
ಈ ಸಕ್ಕ್ರೆಯ ಬೊಂಬೆಗೆ ಸಕ್ಕರೆ ಯಾಕಂತ ಅನ್ಬುಟ್ಟು ಬೀಳ್ಸ್ತಿನ್ ಕಣೆ!
ಆಯ್ ಲವ್ ಯೂ ಲವ್ ಯೂ ಡವ್ 
ಆಯ್ ರಿಯಲಿ ಲವ್ ಯೂ ಡವ್ 
ಆಯ್ ಟ್ರೂಲೀ ಲವ್ ಯು ಡವ್  ಹೇ ಹೇ ಹೇ ಹೇ  

ನಿಂಗೆ ಒಳ್ಳೆಣ್ಣೆ ಹಚ್ಬುಟ್ಟು ಮೈಯಲ್ಲಾ ನೀವ್ಳ್‍ಸ್ಬಿಟ್ಟು ನೆಟ್ಗೆ ತಗಿತಿನ್ ಕಣೆ
ಜಳ್ಕ ಮಾಡ್ಸುತ್ತ ಮಾಡ್ಸುತ್ತ ಬೆಳ್ ಬೆಳ್ಳೆ ಬೆನ್ನನ್ನು ಮುದ್ದಾಡ್ತ ತಿಕ್ತಿನ್ ಕಣೆ!
ಕಿರು ಉಪ್ಪಿಟ್ಟು, ಒಬ್ಬಟ್ಟು, ನಿಪ್ಪಾಟ್ಟು, ತಂಬಿಟ್ಟು ಎಲ್ಲ ನಾ ಮಾಡ್ತಿನ್ ಕಣೆ
ನಿನ್ನ ಮಡ್ಲಲ್ಲಿ ಕುಡ್ಸ್ಕೊಂಡು ಸೊಂಟಾನ ತಬ್ಗೊಂಡು ತುತ್ ತುತ್ತು ತಿನ್ಸ್‍ತೀನ್ ಕಣೆ!
ಆಯ್ ಲವ್ ಯೂ ಲವ್ ಯೂ ಡವ್ 
ಆಯ್ ರಿಯಲಿ ಲವ್ ಯೂ ಡವ್ 
ಆಯ್ ಟ್ರೂಲೀ ಲವ್ ಯು ಡವ್  ಹೇ ಹೇ ಹೇ ಹೇ  

ಅಹ್! ಅಹ್! ಸಂತೇಗೆ ಕರ್ಕೊಂಡು ಸೀರೇಯ ಕೊಣ್ಕೊಂಡು ನಿನ್ಗ್ ಉಡ್ಸಿ ನೊಡ್ತಿನ್ ಕಣೆ
ಅಲ್ಲಿ ತೊಟ್ಲಲ್ಲಿ ಕುಂತ್ಕೊಂಡು ಮಂಡಕ್ಕಿ ತಿನ್ಕೊಂಡು ಎತ್ಕೊಂಡೆ ಬತ್ತಿನ್ ಕಣೆ!
ಅಹ್! ಅಹ್! ಬೆಳ್ದಿಂಗ್ಳಲ್ ರಾತ್ರೇಲಿ ಮುಂಜಾನೆ ಜೋಕಾಲಿ ಅಂಗ್ಳಾನೆ ಮಲ್ಗೊ ಕೋಣೆ
ಇಂತಾ ಮುಂಗೋಪ ಬಿಟ್ಬುಟ್ಟು ಇನ್ನಾದ್ರು ನಂಬುಟ್ಟು ಬಾ ಬಾರೆ ನನ್ನಾ ಜಾಣೆ!
ಆಯ್ ಲವ್ ಯೂ ಲವ್ ಯೂ ಡವ್ 
ಆಯ್ ರಿಯಲಿ ಲವ್ ಯೂ ಡವ್ 
ಆಯ್ ಟ್ರೂಲೀ ಲವ್ ಯು ಡವ್  ಹೇ ಹೇ ಹೇ ಹೇ  
-------------------------------------------------------------------------------------------

ರಿಷಿ (೨೦೦೫) - ಲಾಲಿ ಲಾಲಿ 
ಸಂಗೀತ: ಗುರುಕಿರಣ್ ಸಾಹಿತ್ಯ: ಕವಿರಾಜ, ಗಾಯನ : ಉನ್ನಿಕೃಷ್ಣನ್ 

-------------------------------------------------------------------------------------------

ರಿಷಿ (೨೦೦೫) - ಸೊಗಸೇ ಸೊಗಸೇ 
ಸಂಗೀತ: ಗುರುಕಿರಣ್ ಸಾಹಿತ್ಯ: ವಿ.ಮನೋಹರ್, ಗಾಯನ : ಗುರುಕಿರಣ, ರಾಜೇಶ, ಚೇತನ 

-------------------------------------------------------------------------------------------

ರಿಷಿ (೨೦೦೫) - ಬಂದಳೂರ ಬಂದರೆಲ್ಲ 
ಸಂಗೀತ: ಗುರುಕಿರಣ್ ಸಾಹಿತ್ಯ: ವಿ.ಮನೋಹರ್, ಗಾಯನ : ಪುನೀತರಾಜಕುಮಾರ 

-------------------------------------------------------------------------------------------

ರಿಷಿ (೨೦೦೫) - ಏನೆಂದು ನಾ ಹೇಳಲಾರೇ 
ಸಂಗೀತ: ಗುರುಕಿರಣ್ ಸಾಹಿತ್ಯ: ವಿ.ಮನೋಹರ್, ಗಾಯನ : ಉದಿತನಾರಾಯಣ 

-------------------------------------------------------------------------------------------

No comments:

Post a Comment