38. ಕಾವ್ಯ (1995)

ಕಾವ್ಯ ಚಿತ್ರದ ಹಾಡುಗಳು 
  1. ಆಸೆಗಳ ಲೋಕದಲಿ ಕತೆಗಳ ಬರೆವಂಥ
  2. ನೀ ಮಿಡಿದ ಮಧುರ ಸ್ವರದಲ್ಲಿ ನಾ ಹಾಡುವೆ  ಈ ಜೀವ ನೀನು
  3. ಒಲುಮೆಯ ಕಾವ್ಯ ನೀನು ಕವಿಯು ನಾನು ಹಾಡುವಾಗ
  4. ವಂದನೆ ವಂದನೆ  ಸಾವಿರ ವಂದನೆ ಸಾಧನೆ ತೋರಿದ ಜಾಣೆಗೆ
  5. ಎತ್ತ ತಿರುಗಲಿ ಕಣ್ಣು ನಿನ್ನ ಕಾಣುವಾಸೆ
ಕಾವ್ಯ (1995) - ಆಸೆಗಳ ಲೋಕದಲಿ
ಸಂಗೀತ: ಸಾಧು ಕೋಕಿಲ  ಸಾಹಿತ್ಯ : ಗೀತಪ್ರಿಯ  ಗಾಯಕ: ಡಾ ರಾಜಕುಮಾರ 

ಓಓ ಓಓ  ಆಆ ಆಆ
ಆಸೆಗಳ ಲೋಕದಲಿ ಕತೆಗಳ ಬರೆವಂಥ
ಜೀವನದ ಪುಟಗಳಲಿ  ವ್ಯಥೆಗಳು ಬೆರೆತಂಥ ಬದುಕೆ ಒಂದು ಕಾವ್ಯಾ
ಆಸೆಗಳ ಲೋಕದಲಿ ಕತೆಗಳ ಬರೆವಂಥ
ಜೀವನದ ಪುಟಗಳಲಿ  ವ್ಯಥೆಗಳು ಬೆರೆತಂಥ

ಸೋತಾಗಲೆ ಒಬ್ಬರು ಇಲ್ಲಿ ಇನ್ನೊಬ್ಬರು ಗೆಲ್ಲುವರಲ್ಲಿ
ಇದೆ ಯೋಗ ಇದೆ ಭಾಗ್ಯ ಎನುವಂತೆ
ಕೈಗೂಡದು ಆಸೆಗಳೆಲ್ಲ ಹಣ್ಣಾಗದು ಹೂಗಳು ಎಲ್ಲ್ಲ
ಇದೆ ಸತ್ಯ ದಿನ ನಿತ್ಯ ಸುಳಿವಂತೆ
ಸುಳಿಗಳ ನಡುವಿನ ಬದುಕೆವೊಂದು ಕಾವ್ಯಾ
ಆಸೆಗಳ ಲೋಕದಲಿ ಕತೆಗಳ ಬರೆವಂಥ
ಜೀವನದ ಪುಟಗಳಲಿ  ವ್ಯಥೆಗಳು ಬೆರೆತಂಥ

ಒಂದೆ ನದಿಯ ಎರಡು ತೀರ ಎಂದೆಂದಿಗು ದೂರ ದೂರ
ಇದೆ ಲೋಕ ಇದೆ ಶೋಕ ಎನುವಂತೆ
ಈ ಲೋಕದಿ ಸ್ನೇಹದ ನಂಟು ಬರಿ ಭ್ರಾಂತಿಯ ಕನ್ನಡಿ ಗಂಟು
ಇದೆ ಮೋಹ ಇದೆ ದಾಹ ಕೊಡುವಂತೆ
ದುಗುಡದ ಪಯಣವೆ ಬದುಕೆ ಒಂದು ಕಾವ್ಯಾ
ಆಸೆಗಳ ಲೋಕದಲಿ ಕತೆಗಳ ಬರೆವಂಥ
ಜೀವನದ ಪುಟಗಳಲಿ  ವ್ಯಥೆಗಳು ಬೆರೆತಂಥ ಬದುಕೆ ಒಂದು ಕಾವ್ಯಾ ಆಆಆ...
------------------------------------------------------------------------------------------------------------------------

ಕಾವ್ಯ (1995) - ನೀ ಮಿಡಿದ ಮಧುರ

ಸಂಗೀತ: ಸಾಧು ಕೋಕಿಲ  ಸಾಹಿತ್ಯ: ದೇವಪ್ಪ  ಗಾಯನ : ಮಂಜುಳಾ ಗುರುರಾಜ ಮತ್ತು  ರಾಜೇಶ ಕೃಷ್ಣ 

ಹೆಣ್ಣು :  ಜೂಜುಜೂ ಜೂಜುಜೂ  ಜೂಜುಜೂ ಜೂಜುಜೂ
ಗಂಡು : ಜೂಜುಜೂ  ಜೂಜುಜೂ  ಜೂಜುಜೂ  ಜೂಜುಜೂ
ಹೆಣ್ಣು :  ನೀ ಮಿಡಿದ ಮಧುರ ಸ್ವರದಲ್ಲಿ ನಾ ಹಾಡುವೆ ಈ ಜೀವಾ ನೀನು
ಕೋರಸ್ :ತುರುತ್ತೂರು ತುರುತ್ತೂರು ತುರುತ್ತುತುರುತ್ತುತುತುರುರುರು
              ತುರುತ್ತೂರು ತುರುತ್ತೂರು ತುರುತ್ತುತುರುತ್ತುತುತುರುರುರು
ರಾಜೇಶ್: ಈ ಜಗವ ಮರೆತು ಜೊತೆಯಲ್ಲಿ ನಾ ಬಾಳುವೆ  
             ನೀ ಮಿಡಿದ ಮಧುರ ಸ್ವರದಲ್ಲಿ ನಾ ಹಾಡುವೆ ಈ ಭಾವ ನೀನು
ಕೋರಸ್ :  ತುರುತ್ತೂರು ತುರುತ್ತೂರು ತುರುತ್ತುತುರುತ್ತುತುತುರುರುರು
                ತುರುತ್ತೂರು ತುರುತ್ತೂರು ತುರುತ್ತುತುರುತ್ತುತುತುರುರುರು

ಕೋರಸ್ : ಪಾಮರಿಮಪಮ ನೀಸರಿಸರಿಸ ನೀಪಮಪನಿರಿಸಾ
               ಪಾಮರಿಮಪಮ ನೀಸರಿಸರಿಸ ನೀಪಮಪನಿರಿಸಾ
ಹೆಣ್ಣು : ನಿನ್ನ ಪ್ರೇಮದಲ್ಲಿ ಹೊಸ ಲೋಕ ನೋಡಿದೆ
ಗಂಡು : ಜೀವ ಭಾವ ಸೇರಿ  ಸುಖ ಸ್ನೇಹ ತಂದಿದೆ
ಹೆಣ್ಣು : ಹಳೆ ಸಿಂಧೂರ ಸಿಂಗಾರ ನಕ್ಕಾಗ ಒಲವಿನ ನನ್ನಾಸೆ ಹೆಚ್ಚಾಗಿ ಸಂತೋಷದಲಿ
ಗಂಡು : ಬಲು ರಂಗಾಗಿ ನಾಚ್ಚುತ್ತ ಬಂದಾಗ  ಎದುರಲಿ ಸಂಗಾತಿ ನೀನಿಲ್ಲಿ ನಿಂತಾಗ
              ಹೊಸ ರಾಗ ಹೊಸ ಗೀತೆ ಬರೆದೆ...
ಕೋರಸ್ :  ತುರುತ್ತೂರು ತುರುತ್ತೂರು ತುರುತ್ತುತುರುತ್ತುತುತುರುರುರು
               ತುರುತ್ತೂರು ತುರುತ್ತೂರು ತುರುತ್ತುತುರುತ್ತುತುತುರುರುರು
ಹೆಣ್ಣು : ಈ ಜಗವ ಮರೆತು ಜೊತೆಯಲ್ಲಿ ನಾ ಬಾಳುವೆ
ಗಂಡು : ನೀ ಮಿಡಿದ ಮಧುರ  ಸ್ವರದಲ್ಲಿ ನಾ ಹಾಡುವೆ 
       
ಗಂಡು : ಎಂಥ ಚೆಂದ ನೀನು ರತಿ ದೇವಿ ರೂಪವು
ಹೆಣ್ಣು : ನಿನ್ನ ಜೋಡಿ ನಾನು ಇದು ನನ್ನ ಭಾಗ್ಯವೋ
ಗಂಡು : ನಗು ಹೂವಾಗಿ ಹೊನ್ನಾಗಿ ಎಲ್ಲೆಲ್ಲು ಗೆಲುವಿನ ಉಲ್ಲಾಸ ಕಣ್ಣಲ್ಲಿ ಮಿಂಚಾಗುತಿದೆ
ಹೆಣ್ಣು : ಮನ ನಿನ್ನಲ್ಲಿ ಒಂದಾಗಿ ಎಂದೆಂದು ಹೃದಯವು ಕುಂತಲ್ಲಿ ನಿಂತಲ್ಲಿ
               ನಿನ್ನನ್ನು ನೆನೆದಾಗ ಅನುರಾಗ ಪಡೆವೇ....    
ಕೋರಸ್ : ತುರುತ್ತೂರು ತುರುತ್ತೂರು ತುರುತ್ತುತುರುತ್ತುತುತುರುರುರು
               ತುರುತ್ತೂರು ತುರುತ್ತೂರು ತುರುತ್ತುತುರುತ್ತುತುತುರುರುರು
ಗಂಡು : ಈ ಜಗವ ಮರೆತು ಜೊತೆಯಲ್ಲಿ ನಾ ಬಾಳುವೆ
ಹೆಣ್ಣು : ನೀ ಮಿಡಿದ ಸ್ವರದಲ್ಲಿ  ನಾ ಹಾಡುವೆ
ಇಬ್ಬರು :  ಈ ಜೀವ ನೀನು
ಕೋರಸ್ : ತುರುತ್ತೂರು ತುರುತ್ತೂರು ತುರುತ್ತುತುರುತ್ತುತುತುರುರುರು
               ತುರುತ್ತೂರು ತುರುತ್ತೂರು ತುರುತ್ತುತುರುತ್ತುತುತುರುರುರು
------------------------------------------------------------------------------------------------------------------------

ಕಾವ್ಯ (1995) - ಒಲುಮೆಯ ಕಾವ್ಯ

ಚಿತ್ರಗೀತೆ:  ದೊಡ್ಡರಂಗೇಗೌಡ   ಸಂಗೀತ: ಸಾಧು ಕೋಕಿಲ  ಗಾಯನ : ರಾಜೇಶ ಕೃಷ್ಣ ಹಾಗು  ಚಿತ್ರ 

ಕೋರಸ್ : ಓಓಓಓಓ...  ಓಓಓಓಓ...  ಓಓಓಓಓ...
ರಾಜೇಶ್: ಒಲುಮೆಯ ಕಾವ್ಯ ನೀನು ಕವಿಯು ನಾನು ಹಾಡುವಾಗ
              ಚೆಲುವಿನ ರಾಗ ತಾನ ಕಂಡಿದೆ  ಒಲವಿನ ಜೀವ ಭಾವ ತುಂಬಿದೆ
ಚಿತ್ರ: ಒಲುಮೆಯ ಕಾವ್ಯ ನಾನು  ಕವಿಯು ನೀನು ಹಾಡುವಾಗ
        ಚೆಲುವಿನ ರಾಗ ತಾನ ಕಂಡಿದೆ ಒಲವಿನ ಜೀವ ಭಾವ ಕೂಡಿದೆ
ರಾಜೇಶ್: ನಗುವ ನಲಿವ ನಮ್ಮೀ ಬದುಕು ಚೆಲುವಿನ ರಾಗ ತಾನ ಕಂಡಿದೆ
              ಒಲವಿನ ಜೀವ ಭಾವ ತುಂಬಿದೆ

ಕೋರಸ್ : ಓಓಓಓಓ...  ಓಓಓಓಓ...  ಓಓಓಓಓ...
ರಾಜೇಶ : ಬಾನಲೋಕದ ಬೆಡಗಿ ಬಂಗಾರಿಯೆ ಬದುಕಿನಲಿ ಕವಿತೆ ಈ ಪ್ರೀತಿ
ಚಿತ್ರ: ರಾಗ ತಾನದ ರಸಿಕ ರೂವಾರಿಯೆ ನುಡಿಯುತಿದೆ ಋತುಮಾನ ಪ್ರೀತಿ
ರಾಜೇಶ್: ಮುತ್ತಾಗಿ ಬಾ ಮಂದಾರವೆ  ಹಗಲು ಇರುಳು ಒಲಿಯಿತು ಕೂಡಿ
ಇಬ್ಬರು : ಓಓಓ...  ಓಓಓ...
ರಾಜೇಶ: ಒಲುಮೆಯ ಕಾವ್ಯ ನೀನು ಕವಿಯು ನಾನು ಹಾಡುವಾಗ
             ಚೆಲುವಿನ ರಾಗ ತಾನ ಕಂಡಿದೆ  ಒಲವಿನ ಜೀವ ಭಾವ ಕೂಡಿದೆ

ಕೋರಸ್ : ಓಓಓಓಓ...  ಓಓಓಓಓ...  ಓಓಓಓಓ...
ರಾಜೇಶ್: ನಿನ್ನ ಮಾತು ಗೀತೆಯಂತೆ ಮಧುರವಾಗಿ
              ನನ್ನ ಹೃದಯ ಮೀಟುತಿದೆ ವೀಣೆಯಾಗಿ
ಚಿತ್ರ:  ನಿನ್ನ ಸ್ನೇಹ ನನ್ನ ಪ್ರೀತಿ ಬಯಸುವಾಗ
          ನನ್ನ ಹೃದಯ ಹಕ್ಕಿಯಾಗಿ ಸರಸ ಸಂಗ
ರಾಜೇಶ್: ಈ ಜೀವನ ರೋಮಾಂಚನ  ನಿಮಿಷ ನಿಮಿಷ ಹರುಷವ ನೀಡಿ
ಇಬ್ಬರು : ಓಓಓ...  ಓಓಓ...
ಚಿತ್ರ: ಒಲುಮೆಯ ಕಾವ್ಯ ನಾನು  ಕವಿಯು ನೀನು ಹಾಡುವಾಗ
        ಚೆಲುವಿನ ರಾಗ ತಾನ ತುಂಬಿದೆ  ಒಲವಿನ ಜೀವ ಭಾವ ಕೂಡಿದೆ
ರಾಜೇಶ್: ಒಲುಮೆಯ ಕಾವ್ಯ ನೀನು  ಕವಿಯು ನಾನು ಹಾಡುವಾಗ
             ಚೆಲುವಿನ ರಾಗ ತಾನ ಕಂಡಿದೆ  ಒಲವಿನ ಜೀವ ಭಾವ ತುಂಬಿದೆ
ಚಿತ್ರ: ನಗುವ ನಲಿವ ನಮ್ಮೀ ಬದುಕು  ಚೆಲುವಿನ ರಾಗ ತಾನ ಕಂಡಿದೆ
        ಒಲವಿನ ಜೀವ ಭಾವ ಕೂಡಿದೆ
------------------------------------------------------------------------------------------------------------------------

ಕಾವ್ಯ (1995) - ವಂದನೆ ವಂದನೆ

ಚಿತ್ರಗೀತೆ:  ದೊಡ್ಡರಂಗೇಗೌಡ  ಸಂಗೀತ: ಸಾಧು ಕೋಕಿಲ  ಗಾಯಕ: ಎಸ್ ಪಿ ಬಿ

ವಂದನೆ ವಂದನೆ  ಸಾವಿರ ವಂದನೆ ಸಾಧನೆ ತೋರಿದ ಜಾಣೆಗೆ
ಗೆಲುವಿನ ಬಂಗಾರಿಗೆ ಸೊಬಗಿನ ಸಿಂಗಾರಿಗೆ ವಂದನೆ ವಂದನೆ ವಂದನೆ
ವಂದನೆ ವಂದನೆ  ಸಾವಿರ ವಂದನೆ ಸಾಧನೆ ತೋರಿದ ಜಾಣೆಗೆ
ಗೆಲುವಿನ ಬಂಗಾರಿಗೆ ಸೊಬಗಿನ ಸಿಂಗಾರಿಗೆ ವಂದನೆ ವಂದನೆ ವಂದನೆ

ನೀಲಾಂಬರದ ಬೆಳದಿಂಗಳಲಿ ತೇಲಾಡುತಿರೊ ಸೌಂದರ್ಯವು ನೀನೆ
ರಂಗೆರಿರುವ ಹೂದೋಟದಲಿ ತೂಗಾಡುತಿರೊ ಮಂದಾರವು ನೀನೆ
ನೀಲಾಂಬರದ ಬೆಳದಿಂಗಳಲಿ ತೇಲಾಡುತಿರೊ ಸೌಂದರ್ಯವು ನೀನೆ
ರಂಗೆರಿರುವ ಹೂದೋಟದಲಿ ತೂಗಾಡುತಿರೊ ಮಂದಾರವು ನೀನೆ
ಮೋಹಾಂಗನೆ ನೀನು ಆಆಆ... ರಾಗಾಂಗ್ಕಿತ ನಾನು
ಓ ಶೋಭನೆ ನೀಲಾಂಜನೆ ಅಭಿವಂದನೆ
ವಂದನೆ ವಂದನೆ  ಸಾವಿರ ವಂದನೆ ಸಾಧನೆ ತೋರಿದ ಜಾಣೆಗೆ
ಗೆಲುವಿನ ಬಂಗಾರಿಗೆ ಸೊಬಗಿನ ಸಿಂಗಾರಿಗೆ ವಂದನೆ ವಂದನೆ ವಂದನೆ
(ಆಆಆ.. ಆಆಆ.. ಆಆಆ.. ಆಆಆ.. )

ಕಾರ್ತಿಕ ಸಿರಿ ದೇವಾಲಯದಿ ಓಲಾಡುತಿರೊ ದೀಪಾಂಜಲಿಯು ನೀನೆ
ಬೃಂದಾವನದ ಕಾರಂಜಿಯಲಿ ನಲಿದಾಡುತಿರೊ ನೃತ್ಯಾಂಗನೆಯು ನೀನೆ
ಕಾರ್ತಿಕ ಸಿರಿ ದೇವಾಲಯದಿ ಓಲಾಡುತಿರೊ ದೀಪಾಂಜಲಿಯು ನೀನೆ
ಬೃಂದಾವನದ ಕಾರಂಜಿಯಲಿ ನಲಿದಾಡುತಿರೊ ನೃತ್ಯಾಂಗನೆಯು ನೀನೆ
ಸಿರಿ ಯೌವ್ವನೆ ನೀನು ಆ... ಅಭಿಮಾನಿಯು ನಾನು
ಓ ಶೋಭನೆ ಪ್ರೇಮಾಂಗನೆ ಅಭಿವಂದನೆ  ....
ವಂದನೆ ವಂದನೆ  ಸಾವಿರ ವಂದನೆ ಸಾಧನೆ ತೋರಿದ ಜಾಣೆಗೆ
ಗೆಲುವಿನ ಬಂಗಾರಿಗೆ ಸೊಬಗಿನ ಸಿಂಗಾರಿಗೆ ವಂದನೆ ವಂದನೆ ವಂದನೆ
-------------------------------------------------------------------------------------------------------------------------

ಕಾವ್ಯ (1995) - ಎತ್ತ ತಿರುಗಲಿ

ಸಾಹಿತ್ಯ :  ಕುವೆಂಪು  ಸಂಗೀತ: ಸಾಧು ಕೋಕಿಲ ಗಾಯಕಿ: ಚಿತ್ರ

ಎತ್ತ ತಿರುಗಲಿ ಕಣ್ಣು ನಿನ್ನ ಆಹಹಾಹಾ (ಹೇಹೇಹೇಹೇಹೇ )
ಎತ್ತ ತಿರುಗಲಿ ಕಣ್ಣು ನಿನ್ನ ಕಾಣುವಾಸೆ ಏನ ನೆನೆಯಲಿ ಚಿತ್ತ  ನಿನ್ನ ಚಿಂತಿಪಾಸೆ
ನುಡಿವ ನಾಲಿಗೆಗೊಂದೆ ನಿನ್ನ ಹೆಸರಿನಾಸೆ ಮಣಿವ ಹಣೆಗೆ ಇಹುದೊಂದೆ ನಿನ್ನ ಚರಣದಾಸೆ
ಮಣಿವ ಹಣೆಗೆ ಇಹುದೊಂದೆ ನಿನ್ನ ಚರಣದಾಸೆ
ಎತ್ತ ತಿರುಗಲಿ ಕಣ್ಣು ..... (ಹೇಹೇಹೇಹೇಹೇ )

(ಆಆಅಅಅ )
ಮುತ್ತಿಡುವ ತುಟಿಗೊಂದೆ ನಿನ್ನ ಕೆನ್ನೆಯಾಸೆ  ಆಲಂಗಿಸೊ ತೋಳಗೇ ನಿನ್ನ ವಕ್ಷದಾಸೆ.. (ಹೇಹೇಹೇಹೇಹೇ )
ಮುತ್ತಿಡುವ ತುಟಿಗೊಂದೆ ನಿನ್ನ ಕೆನ್ನೆಯಾಸೆ  ಆಲಂಗಿಸೊ ತೋಳಗೇ ನಿನ್ನ ವಕ್ಷದಾಸೆ
ಮೊಲ್ಲೆ ಮಲ್ಲಿಗೆ ರಾಶಿ ಮೈಯನ್ನಪ್ಪುವಾಸೆ ಜೀವ ದುಂಬಿಗೆ ಮೂಸಿ ತಣಿವನೊಪ್ಪದಾಸೆ
ಎತ್ತ ತಿರುಗಲಿ ಕಣ್ಣು ನಿನ್ನ ಕಾಣುವಾಸೆ ಎತ್ತ ತಿರುಗಲಿ ಕಣ್ಣು... (ಹೇಹೇಹೇಹೇಹೇ )
(ಆಆಅಅಅ )

ಉಸಿರು ಉಸಿರೊಳು ನಿನ್ನ ಒಳಗೆ ಕೊಳ್ಳುವಾಸೆ ಉಸಿರು ಉಸಿರು ನಿನ್ನೊಳು ನಿತ್ಯವಾಗುವಾಸೆ.. (ಹೇಹೇಹೇಹೇಹೇ )
ಉಸಿರು ಉಸಿರೊಳು ನಿನ್ನ ಒಳಗೆ ಕೊಳ್ಳುವಾಸೆ ಉಸಿರು ಉಸಿರು ನಿನ್ನೊಳು ಐಕ್ಯವಾಗುವಾಸೆ
ಹೀರಿದನಿತು ಹೀರಿ ಸೇರಿ ಹೋಗುವಾಸೆ ಸೇರಿ ಹೋಗುವಾಸೆ ಸೇರಿ ಹೋಗುವಾಸೆ
ಎತ್ತ ತಿರುಗಲಿ ಕಣ್ಣು ನಿನ್ನ ಕಾಣುವಾಸೆ .. (ಹೇಹೇಹೇಹೇಹೇ )
ಎತ್ತ ತಿರುಗಲಿ ಕಣ್ಣು ನಿನ್ನ ಕಾಣುವಾಸೆ ಏನ ನೆನೆಯಲಿ ಚಿತ್ತ ನಿನ್ನ ಚಿಂತಿಪಾಸೆ
ನುಡಿವ ನಾಲಿಗೆಗೊಂದೆ ನಿನ್ನ ಹೆಸರಿನಾಸೆ ಮಣಿವ ಹಣೆಗೆ ಇಹುದೊಂದೆ ನಿನ್ನ ಚರಣದಾಸೆ
ಮಣಿವ ಹಣೆಗೆ ಇಹುದೊಂದೆ ನಿನ್ನ ಚರಣದಾಸೆ...
ಎತ್ತ ತಿರುಗಲಿ ಕಣ್ಣು  .. (ಹೇಹೇಹೇಹೇಹೇ )
--------------------------------------------------------------------------------------------------------------------------

No comments:

Post a Comment