37. ಜೀವನ ಚಕ್ರ (1985)


ಜೀವನ ಚಕ್ರ ಚಿತ್ರದ ಗೀತೆಗಳು
  1. ಆಕಾಶವು ಈ ಭೂಮಿಯು ಎಲ್ಲಾ 
  2. ನನ್ನವರು ಯಾರು ಇಲ್ಲಾ ಯಾರಿಗೆ 
  3. ಆನಂದ ಆನಂದ ಆನಂದವೇ 
  4. ಒಳ್ಳೆಯ ವಯಸಿದೆ ಒಳ್ಳೆಯ 
ಜೀವನ ಚಕ್ರ (1985)
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ರಾಜನ್-ನಾಗೇಂದ್ರ ಹಾಡಿದವರು: ಎಸ್.ಪಿ.ಬಿ., ಎಸ್.ಜಾನಕಿ

ಗಂಡು : ಆಕಾಶವು ಈ ಭೂಮಿಯು ಎಲ್ಲಾ ನಮದೆ
ಹೆಣ್ಣು : ಎಂದೆಂದಿಗು ಸಂತೋಷವು ಇನ್ನು ನಮಗೆ
ಗಂಡು : ಆಕಾಶವು ಈ ಭೂಮಿಯು ಎಲ್ಲಾ ನಮದೆ
            ಎಂದೆಂದಿಗು ಸಂತೋಷವು ಇನ್ನು ನಮಗೆ
           ಪ್ರೇಮ ಬದುಕೆಲ್ಲ ಪ್ರೇಮ     ಪ್ರೇಮ ಉಸಿರೆಲ್ಲ ಪ್ರೇಮ
           ಬದುಕೆಲ್ಲ ಉಸಿರೆಲ್ಲ ಜಗವೆಲ್ಲ ಪ್ರೇಮ
ಹೆಣ್ಣು : ಆಕಾಶವು ಈ ಭೂಮಿಯು ಎಲ್ಲಾ ನಮದೆ
         ಎಂದೆಂದಿಗು ಸಂತೋಷವು ಇನ್ನು ನಮಗೆ
         ಪ್ರೇಮ ಬದುಕೆಲ್ಲ ಪ್ರೇಮ   ಪ್ರೇಮ ಉಸಿರೆಲ್ಲ ಪ್ರೇಮ
        ಬದುಕೆಲ್ಲ ಉಸಿರೆಲ್ಲ ಜಗವೆಲ್ಲ ಪ್ರೇಮ

ಗಂಡು : ಬೇರೇನು ಹೇಳಲ್ಲ ಬೇರೇನು ಕೇಳಲ್ಲ
           ಬೇರೇನು ಹಾಡಲ್ಲ ಸಂಗಾತಿಯೆ
           ನಿನ್ನ ಪ್ರೇಮ ಒಂದೇ ಸಾಕು ಇನ್ನೇನೂ ಬೇಡವೆ
ಹೆಣ್ಣು : ನಾನೇನೊ ನೀನೇನೊ ನನ್ನಾಸೆ ಇನ್ನೇನೊ
          ಏಕಿಂತ ಮಾತನ್ನು ನೀನಾಡುವೆ ನಿನ್ನ ಪ್ರೇಮ ಬಿಟ್ಟು ಬೇರೆ
          ನಾನೇನು ಬಯಸುವೆ, ನಾನೇನು ಬಯಸುವೆ
ಗಂಡು : ಆಕಾಶವು ಈ ಭೂಮಿಯು ಎಲ್ಲಾ ನಮದೆ
ಹೆಣ್ಣು : ಎಂದೆಂದಿಗು ಸಂತೋಷವು ಇನ್ನು ನಮಗೆ
ಗಂಡು : ಪ್ರೇಮ ಬದುಕೆಲ್ಲ ಪ್ರೇಮ 
ಹೆಣ್ಣು : ಪ್ರೇಮ ಉಸಿರೆಲ್ಲ ಪ್ರೇಮ
ಇಬ್ಬರು : ಬದುಕೆಲ್ಲ ಉಸಿರೆಲ್ಲ ಜಗವೆಲ್ಲ ಪ್ರೇಮ

ಹೆಣ್ಣು : ಒಲವೆಂದರೇನೆಂದು ಜೊತೆ ಎಂದರೇನೆಂದು
          ಸುಖವೆಂದರೇನೆಂದು ನಾ ಕಂಡೆನು
          ಎಂಥ ಚೆನ್ನ ಎಂಥ ಚೆನ್ನ     ಈ ನಮ್ಮ ಪ್ರೇಮವು
ಗಂಡು : ಇನ್ನೆಂದು ನಿನ್ನಿಂದ ನಾ ದೂರ ಇರಲಾರೆ
           ಕ್ಷಣಕಾಲ ಬಿಡಲಾರೆ ಬಾ ಹತ್ತಿರ  ನನ್ನ ಚಿನ್ನ ಒಮ್ಮೆ ನಿನ್ನ
           ತೋಳಿಂದ ಬಳಸು ಬಾ, ತೋಳಿಂದ ಬಳಸು ಬಾ
ಹೆಣ್ಣು : ಆಕಾಶವು ಈ ಭೂಮಿಯು ಎಲ್ಲಾ ನಮದೆ
ಗಂಡು : ಲಾಲಾ..  ಎಂದೆಂದಿಗು ಸಂತೋಷವು ಇನ್ನು ನಮಗೆ
ಗಂಡು : ಪ್ರೇಮ ಬದುಕೆಲ್ಲ ಪ್ರೇಮ
ಹೆಣ್ಣು :  ಪ್ರೇಮ ಉಸಿರೆಲ್ಲ ಪ್ರೇಮ
ಇಬ್ಬರು : ಬದುಕೆಲ್ಲ ಉಸಿರೆಲ್ಲ ಜಗವೆಲ್ಲ ಪ್ರೇಮ
ಗಂಡು ಆಕಾಶವು ಈ ಭೂಮಿಯು ಎಲ್ಲಾ ನಮದೆ
ಹೆಣ್ಣು : ಲಾ ಲಾ ಎಂದೆಂದಿಗು ಸಂತೋಷವು ಇನ್ನು ನಮಗೆ
ಇಬ್ಬರು : ಪ್ರೇಮ ಬದುಕೆಲ್ಲ ಪ್ರೇಮ  ಪ್ರೇಮ ಉಸಿರೆಲ್ಲ ಪ್ರೇಮ
----------------------------------------------------------------------------------------------------------------------

ಜೀವನ ಚಕ್ರ (1985)
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ರಾಜನ್-ನಾಗೇಂದ್ರ ಹಾಡಿದವರು: ಎಸ್.ಪಿ.ಬಿ.


ಕೋರಸ್ : ಆಆಆ...ಆಆಆ....ಆಆಆ...
ಗಂಡು : ನನ್ನವರು ಯಾರೂ ಇಲ್ಲ ಯಾರಿಗೆ ಯಾರೂ ಇಲ್ಲ
           ಪ್ರೀತಿ ವಾತ್ಸಲ್ಯಕೆ ಅರ್ಥವೆ ಇಲ್ಲ
          ಪ್ರೀತಿ ವಾತ್ಸಲ್ಯಕೆ ಅರ್ಥವೆ ಇಲ್ಲ

ಗಂಡು : ಅರಳುವ ಮುನ್ನ ಮೊಗ್ಗು, ಬಳ್ಳಿಗೆ ಸ್ವಂತ
           ಅರಳಿದ ಮೇಲೆ ಹೂವು, ಪರರಿಗೆ ಸ್ವಂತ
           ಹಸಿರಿನ ಕಾಯಿ ಎಂದೂ, ರೆಂಬೆಗೆ ಸ್ವಂತ
           ರುಚಿಸುವ ಹಣ್ಣು ಎಂದೂ, ತಿನ್ನೋರಿಗೆ ಸ್ವಂತ
           ಜಗವೇ ಹೀಗೆ, ಬದುಕೆ ಹೀಗೆ ನೊಂದರು ಇಲ್ಲ, ಬೆಂದರು ಇಲ್ಲ,
           ಬೆಂದರು ಇಲ್ಲ ಆಕಾಶಕ್ಕೆ ಕೊನೆಯೆ ಇಲ್ಲ, ಆಸೆಗೆ ಮಿತಿಯೆ ಇಲ್ಲ
          ನಾನು ನೀನು ಬಯಸೋದೆಲ್ಲ, ನಡೆಯುವುದಿಲ್ಲ
          ನನ್ನವರು ಯಾರೂ ಇಲ್ಲ  ಯಾರಿಗೆ ಯಾರೂ ಇಲ್ಲ
          ಪ್ರೀತಿ ವಾತ್ಸಲ್ಯಕೆ ಅರ್ಥವೆ ಇಲ್ಲ

ಕೋರಸ್ : ಆಆಆ...ಆಆಆ....ಆಆಆ...
ಗಂಡು : ರೆಕ್ಕೆಯು ಬಂದಾಮೇಲೆ, ಹಕ್ಕಿಯು ತಾನು
            ಹೆತ್ತವರು ಯಾರು ಎಂದು, ನೋಡುವುದೇನು
            ದೇವರ ಸೃಷ್ಟಿ ಹೀಗೆ, ಕಾಣೆಯ ನೀನು
           ವೇದನೆಯೊಂದೇ ತಾನೆ, ಬದುಕಲಿ ಇನ್ನು
           ಮರೆಯೆ ನೋವ, ಬಿಡು ವ್ಯಾಮೋಹ
           ಎಲ್ಲ ವಿಚಿತ್ರ, ಜೀವನ ಚಕ್ರ, ಜೀವನ ಚಕ್ರ
           ತೊಟ್ಟಿಲನು ತೂಗಿದೆಯಲ್ಲ, ಜೋಗುಳ ಹಾಡಿದೆಯಲ್ಲ
           ಕಣ್ಣಲ್ಲಿಟ್ಟು ಕಾಪಾಡಿದೆ, ವ್ಯರ್ಥವು ಎಲ್ಲ
          ನನ್ನವರು ಯಾರೂ ಇಲ್ಲ ಯಾರಿಗೆ ಯಾರೂ ಇಲ್ಲ
          ಪ್ರೀತಿ ವಾತ್ಸಲ್ಯಕೆ ಅರ್ಥವೆ ಇಲ್ಲ
         ನನ್ನವರು ಯಾರೂ ಇಲ್ಲ ಯಾರಿಗೆ ಯಾರೂ ಇಲ್ಲ
------------------------------------------------------------------------------------------------------------------------

ಜೀವನ ಚಕ್ರ (1985)
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ರಾಜನ್-ನಾಗೇಂದ್ರ ಹಾಡಿದವರು: ಎಸ್.ಪಿ.ಬಿ., ಎಸ್.ಜಾನಕಿ


ಗ : ಏ.. ಹೇ.. ಆಆ ... ಹಾ... ಹಾ... ಹೆ : ಆಆ ... ಹಾ... ಹಾ...
ಗ :  ಹಾ... ಹಾ...                            ಹೆ : ಆಆ ... ಹಾ.   ಗ : ಆಹಾ...   ಹೆ : ಆಆಆ
ಹೆ : ಆಆ ... ಹಾ... ಹಾ...                  ಗ : ಆಆ ... ಹಾ... ಹಾ...
ಗಂಡು : ಆನಂದ ಆನಂದ ಆನಂದವೇ ನೀ ತಂದ ಪ್ರೀತಿಯಿಂದ ನೀ ತಂದ  ಬಾಳಿನಿಂದ
           ನಾನು ನೀನು ಎಂದು ಹೀಗೆ ಸ್ನೇಹದಿ ಸೇರಲು
ಹೆಣ್ಣು : ಆನಂದ ಆನಂದ ಆನಂದವೇ  ನೀ ತಂದ ಪ್ರೀತಿಯಿಂದ ನೀ ತಂದ  ಬಾಳಿನಿಂದ
           ನಾನು ನೀನು ಎಂದು ಹೀಗೆ ಸ್ನೇಹದಿ ಸೇರಲು
ಗಂಡು : ಆನಂದ ಆನಂದ ಆನಂದವೇ  ನೀ ತಂದ ಪ್ರೀತಿಯಿಂದ ನೀ ತಂದ  ಬಾಳಿನಿಂದ

ಗ: ಹೊಸ ಬಾಳು ಹೊಸ ರೀತಿ ಹೊಸ ದಾರಿ ಹೊಸ ಪ್ರೀತಿ ಗೆಳತೀ... ನೋಡಿದೆ
     ಹೊಸ ರಾಗ ಹೊಸ ತಾಳ  ಹೊಸ ಭಾವ ಹೊಸ ಮಾತು ಇಂದು... ಕೇಳಿದೇ
     ಹೊಸ ಬಾಳು ಹೊಸ ರೀತಿ ಹೊಸ ದಾರಿ ಹೊಸ ಪ್ರೀತಿ ಗೆಳತೀ... ನೋಡಿದೆ
     ಹೊಸ ರಾಗ ಹೊಸ ತಾಳ  ಹೊಸ ಭಾವ ಹೊಸ ಮಾತು ಇಂದು... ಕೇಳಿದೇ
ಹೆಣ್ಣು : ಸವಿಯಾದ ನುಡಿಯಿಂದ ಹಿತವಾದ ಹಾಡಿಂದ ಹೊಸ ನೋಟ ನೋಡಿದೇ ... ಎಲ್ಲಾ ಚೆಂದವೇ...
ಗಂಡು : ಆನಂದ ಆನಂದ ಆನಂದವೇ  ನೀ ತಂದ ಪ್ರೀತಿಯಿಂದ ನೀ ತಂದ  ಬಾಳಿನಿಂದ
ಹೆಣ್ಣು :  ನಾನು ನೀನು ಎಂದು ಹೀಗೆ ಸ್ನೇಹದಿ ಸೇರಲು
ಇಬ್ಬರು :    ಆನಂದ ಆನಂದ ಆನಂದವೇ
ಗಂಡು : ನೀ ತಂದ ಪ್ರೀತಿಯಿಂದ
ಹೆಣ್ಣು : ನೀ ತಂದ  ಬಾಳಿನಿಂದ 

ಹೆ : ಆಆ ... ಹಾ... ಹಾ...                  ಗ : ಆಆ ... ಹಾ... ಹಾ...
ಹೆ : ಆಆ ... ಹಾ... ಹಾ...                  ಗ : ಲಾ ಲಾ ಲಾ
ಹೆ : ನನ್ನಾಸೆ ಮೊಗ್ಗಾಗಿ ಆ ಮೊಗ್ಗು ಹೂವಾಗಿ ಕಂಪು ಚೆಲ್ಲಿದೆ
      ಒಡಲ್ಲೆಲ್ಲಾ ಜೇನಾಗಿ ಆ ಜೇನು ನಿನಗಾಗಿ ಇನಿಯಾ ಇಲ್ಲಿದೆ
      ನನ್ನಾಸೆ ಮೊಗ್ಗಾಗಿ ಆ ಮೊಗ್ಗು ಹೂವಾಗಿ ಕಂಪು ಚೆಲ್ಲಿದೆ
      ಒಡಲ್ಲೆಲ್ಲಾ ಜೇನಾಗಿ ಆ ಜೇನು ನಿನಗಾಗಿ ಇನಿಯಾ ಇಲ್ಲಿದೆ
ಗಂಡು : ತನುವೆಲ್ಲಾ ಬಂಗಾರ ಮನವೆಲ್ಲಾ ಬಂಗಾರ
            ಗುಣದಲ್ಲೂ  ಚಿನ್ನವೇ... ಎಂಥಾ ಭಾಗ್ಯವೇ...
ಹೆಣ್ಣು : ಆನಂದ ಆನಂದ ಆನಂದವೇ  ನೀ ತಂದ ಪ್ರೀತಿಯಿಂದ ನೀ ತಂದ  ಬಾಳಿನಿಂದ
ಗಂಡು :ನಾನು ನೀನು ಎಂದು ಹೀಗೆ ಸ್ನೇಹದಿ ಸೇರಲು
ಇಬ್ಬರು : ಆನಂದ ಆನಂದ ಆನಂದವೇ   ನೀ ತಂದ ಪ್ರೀತಿಯಿಂದ
              ನೀ ತಂದ  ಬಾಳಿನಿಂದ 
-----------------------------------------------------------------------------------------------------------------------

ಜೀವನ ಚಕ್ರ (1985)
ಸಾಹಿತ್ಯ: ಚಿ.ಉದಯಶಂಕರ, ಸಂಗೀತ: ರಾಜನ್-ನಾಗೇಂದ್ರ, ಗಾಯನ: ಎಸ್.ಪಿ.ಬಿ., ವಾಣಿಜಯರಾಮ ಎಸ್.ಜಾನಕಿ

ಗಂಡು : ಥರ ಥರ ಥರ ಏಹೇ...
ಹೆಣ್ಣು :  ಲಲಲಲ ಲಾ ಲಾಲಾಲ
ಗಂಡು : ರಪ ಪಾಪಬಪ
ಹೆಣ್ಣು : ಲಾಲಾ ಲಾಲಾ ಲಾಲಾ

ಗಂಡು : ಒಳ್ಳೆಯ ವಯಸಿದೆ ಒಳ್ಳೆಯ ಮನಸಿದೆ
           ಒಳ್ಳೆಯ ವಯಸಿದೆ ಒಳ್ಳೆಯ ಮನಸಿದೆ ಅಂದವು ತುಂಬಿದೆ
ಹೆಣ್ಣು : ಕಣ್ಣಲ್ಲಿ ಕನಸಿದೆ ಯೌವ್ವನ ಕುಣಿಸಿದೆ ಜೋಡಿಯ ಕೇಳಿದೆ
ಗಂಡು :ಆತುರ ಕೆಣಕಿದೆ ಕಾತುರ ಕಾಡಿದೆ ಆಸೆ ಮೂಡಿದೆ
ಇಬ್ಬರು : ತಾಗುನ್ ತಾಗುನ್ ತಾಗುನ್ ತಾಗುನ್ ಥಕ ಥಕ
             ತಾಗುನ್ ತಾಗುನ್ ತಾಗುನ್ ತಾಗುನ್ ಥಕ ಥಕ
ಹೆಣ್ಣು : ಒಳ್ಳೆಯ ವಯಸಿದೆ ಒಳ್ಳೆಯ ಮನಸಿದೆ ಅಂದವು ತುಂಬಿದೆ

ಗಂಡು : ಅರಿತರೆ ಈ ರಾತ್ರಿ ನಾನು ನಿನ್ನ ನೀನು ನನ್ನ ಹರುಷವ ನೀಡುವೆ
           ಬೆರೆತರೆ ನೀನಿಂದು ಕಾಣದಂತ ಕೇಳದಂತ ಸುಖವ ಪಡೆಯುವೆ
           ಹಾಡುವೆ ನಲಿಯುವೆ ಸ್ವರ್ಗ ಕಾಣುವೆ ಹೂಂ...
ಹೆಣ್ಣು : ಮಲ್ಲಿಗೆ ಹೂವಿಂದ ಮೆತ್ತೆಯಿಂದ ಮಾಡಿ ತಂದು ಸರಸ ಆಡುವೇ
          ಸುಮಗಳ ಕಂಪಿಂದ ಮತ್ತು ಏರಿ ಮತ್ತೆ ಮತ್ತೆ ಮೊಗವ ನೋಡುವೆ
         ನೋಡುತ ಹಾಡುತ ಮೈಯ ಮರೆಯುವೆ
ಗಂಡು : ಮಾತಿನಲ್ಲೇ  ಎಲ್ಲವನ್ನು ಏತಕೆ ಹೇಳುವೆ ಹಾಂ ಹಾಂ
           ಒಳ್ಳೆಯ ವಯಸಿದೆ ಒಳ್ಳೆಯ ಮನಸಿದೆ ಅಂದವು ತುಂಬಿದೆ....
          ಲಾಲಲ್ಲ ಲಾಲಲ್ಲ ಲಾಲಲ್ಲ ಲಾಲಾ ಲಾ ಲಾ ಲಾ ಲಾ ಲಾ 
ಹೆಣ್ಣು : ಲಾಲಲ್ಲ ಲಾಲಲ್ಲ ಲಾಲಲ್ಲ ಲಾಲಾ ಲಾ ಲಾ ಲಾ ಲಾ ಲಾ
          ಲಾಲಲ್ಲ ಲಾಲಲ್ಲ ಲಾಲಲ್ಲ ಲಾಲಾ ಲಾ ಲಾ ಲಾ ಲಾ ಲಾ 
ಹೆಣ್ಣು : ಲಾಲಲ್ಲ ಲಾಲಲ್ಲ ಲಾಲಲ್ಲ ಲಾಲಾ ಲಾ ಲಾ ಲಾ ಲಾ ಲಾ
ಗಂಡು : ಲಾ ಲಾ .. ಹೆಣ್ಣು : ಲಾ ಲಾ  ಇಬ್ಬರು : ಲಾ ಲಾ 

ಹೆಣ್ಣು : ದೊರಕದ ಮಾಣಿಕ್ಯ ಯಾರು ಎಂದು ನೋಡುತಿದ್ದೆ  ದಿನವೂ ನಲ್ಲನೆ
          ಕಡಲಿನ ಮುತ್ತೊಂದು ಬೇಕು ಎಂದು ಹೇಳುತಿದ್ದೆ  ದಿನವೂ ಜಾಣನೇ
          ಈ ದಿನ ದೊರಕಿತು ಚಿಂತೆ ಮುಗಿಯಿತು
ಗಂಡು : ಹೊನ್ನಿನ ಹೂವೊಂದು ಬೇಕು ಎಂದು ಹೇಳುತಿದೆ ನಿನ್ನ ಕಾಣದೆ
           ಅರೆ..  ಬಾಡದ ಸೌಂದರ್ಯ ಎಲ್ಲಿ ಎಂದು ಕೇಳುತಿದೆ ಇಂದು ನೋಡದೆ
           ಆಸೆಯೂ ಮುಗಿಯದೆ ಬಯಕೆ ತೀರದೆ
ಹೆಣ್ಣು : ನಿಲ್ಲಲಾರೆ (ಹ್ಹ )ಹೋಗಲಾರೆ (ಹೋ  )ನಿನ್ನಾ ಸೇರದೆ (ಹ್ಹಾಂ )
           ಒಳ್ಳೆಯ ವಯಸಿದೆ ಒಳ್ಳೆಯ ಮನಸಿದೆ ಅಂದವು ತುಂಬಿದೆ
ಗಂಡು : ಕಣ್ಣಲ್ಲಿ ಕನಸಿದೆ ಯೌವ್ವನ ಕುಣಿಸಿದೆ ಜೋಡಿಯ ಕೇಳಿದೆ
ಇಬ್ಬರು : ಆತುರ ಕೆಣಕಿದೆ ಕಾತುರ ಕಾಡಿದೆ ಆಸೆ ಮೂಡಿದೆ
            ತಾಗುನ್ ತಾಗುನ್ ತಾಗುನ್ ತಾಗುನ್ ಥಕ ಥಕ
            ತಾಗುನ್ ತಾಗುನ್ ತಾಗುನ್ ತಾಗುನ್ ಥಕ ಥಕ
          ಒಳ್ಳೆಯ ವಯಸಿದೆ ಒಳ್ಳೆಯ ಮನಸಿದೆ ಅಂದವು ತುಂಬಿದೆ.. ಹೇ... ಹೇ... ಹೇ...
--------------------------------------------------------------------------------------------------------------------------

No comments:

Post a Comment