36. ನ್ಯಾಯವೇ ದೇವರು (1971)



ನ್ಯಾಯವೇ ದೇವರು ಚಿತ್ರದ ಗೀತೆಗಳು 
  1. ಆಕಾಶವೇ ಬೀಳಲಿ ಮೇಲೆ 
  2. ಕುಣಿದಾಡುವ ವಯಸಿದು 
  3. ಎಂದೆಂದೂ ನೀವು ಸುಖವಾಗಿರಿ 
  4. ಪರಮಾತ್ಮ ಆಡಿಸೆದಂತೆ 
ನ್ಯಾಯವೇ ದೇವರು (1971) - ಆಕಾಶವೆ ಬೀಳಲಿ ಮೇಲೆ
ಸಾಹಿತ್ಯ : ಚಿ. ಉದಯಶಂಕರ್ ಸಂಗೀತ : ರಾಜನ್-ನಾಗೇಂದ್ರ ಗಾಯನ : ಡಾ. ಪಿ. ಬಿ. ಶ್ರೀನಿವಾಸ್

ಆಕಾಶವೆ ಬೀಳಲಿ ಮೇಲೆ ನಾನೆಂದು ನಿನ್ನವನು
ಭೂಮಿಯೆ ಬಾಯ್ಬಿಡಲಿ ಇಲ್ಲೆ ನಾನೆಂದು ನಿನ್ನವನುನೀನಿರುವುದೆ ನನಗಾಗಿ ಈ ಜೀವ ನಿನಗಾಗಿ

ಹೆದರಿಕೆಯ ನೋಟವೇಕೆ ಒಡನಾಡಿ ನಾನಿರುವೆ
ಹೊಸಬಾಳಿನ ಹಾದಿಯಲ್ಲಿ ಜೊತೆಗೂಡಿ ನಾ ಬರುವೆ
ಕಲ್ಲಿರಳಿ ಮುಳ್ಳೇ ಇರಲಿ ನಾ ಮೊದಲು ಮುನ್ನಡೆವೆ
ನೀನಡಿಯ ಇಡುವೆಡೆಯಲ್ಲಿ ಒಲವಿನ ಹೂ ಹಾಸುವೆ
ಈ ಮಾತಿಗೆ ಮನವೇ ಸಾಕ್ಷಿ ಈ ಭಾಷೆಗೆ ದೇವರೆ ಸಾಕ್ಷಿ
ಇನ್ನಾದರು ನನ್ನ ನಂಬಿ ನಗೆಯಾ ಚೆಲ್ಲು ಚೆಲುವೆ

ಹಸೆಮಣೆಯು ನಮಗೆ ಇಂದು ನಾವು ನಿಂತ ತಾಣವು
ತೂಗಾಡುವ ಹಸಿರೆಲೆಯೆ ಶುಭಕೋರುವ ತೋರಣವು
ಹಕ್ಕಿಗಳ ಚಿಲಿಪಿಲಿ ಗಾನ ಮಂಗಳಕರ ಗಾನವು
ಈ ನದಿಯ ಕಲರವವೆ ಮಂತ್ರಗಳ ಘೋಷವು
ಸಪ್ತಪದಿ ಈ ನಡೆಯಾಯ್ತು ಸಂಜೆ ರಂಗು ಆರತಿಯಾಯ್ತು
ಇಂದೀಗ ಎರಡೂ ಜೀವ ಬೆರೆತು ಸ್ವರ್ಗವಾಯ್ತು
-----------------------------------------------------------------------------------------------------------------------

ನ್ಯಾಯವೇ ದೇವರು (೧೯೭೧).......ಎಂದೆಂದು ನೀವು ಸುಖವಾಗಿರಿ
ಸಾಹಿತ್ಯ : ಚಿ. ಉದಯಶಂಕರ್ ಸಂಗೀತ : ರಾಜನ್-ನಾಗೇಂದ್ರ ಗಾಯನ :ಪಿ.ಸುಶೀಲಾ


ಎಂದೆಂದು ನೀವು ಸುಖವಾಗಿರಿ ನನ್ನನ್ನು ಮರೆತು ಹಾಯಾಗಿರಿ
ನನ್ನನ್ನು ಮರೆತು ಹಾಯಾಗಿರಿ

ನೀನೆಲ್ಲೋ ನಾನೆಲ್ಲೋ ಬದುಕೆಲ್ಲ ಕುರುಡು  ನಮ್ಮಿಬ್ಬರಾ ನಡುವೆ ಈ ಬಾಳೆ ಬರಿದು
ನೀನೆಲ್ಲೋ ನಾನೆಲ್ಲೋ ಬದುಕೆಲ್ಲ ಕುರುಡು ನಮ್ಮಿಬ್ಬರಾ ನಡುವೆ ಈ ಬಾಳೆ ಬರಿದು
ಎಂದೆಂದೂ ನಿಮ್ಮ ನಾ ಸೇರಲಾರೆ  ನಿಮ್ಮ ಈ ಮಗುವೊಂದೇ ನನಗಾಸರೆ
ಎಂದೆಂದು ನೀವು ಸುಖವಾಗಿರಿ  ನನ್ನನ್ನು ಮರೆತು ಹಾಯಾಗಿರಿ

ಈ ಕಂದ ಮಾತನ್ನು ಕಲಿತಾಡೋ ಮುನ್ನ  ನಾ ಮುಕಿಯಾದರೆ ಈ ಬಾಳೆ ಚೆನ್ನ
ಈ ಕಂದ ಮಾತನ್ನು ಕಲಿತಾಡೋ ಮುನ್ನ ನಾ ಮುಕಿಯಾದರೆ ಈ ಬಾಳೆ ಚೆನ್ನ
ನನ್ನ ತಂದೆ ಯಾರು ಎಲ್ಲಮ್ಮ ಅವರು ಎಂದಾಗ ಏನೆಂದು ನಾ ಹೇಳಲಿ
ಎಂದೆಂದು ನೀವು ಸುಖವಾಗಿರಿ  ನನ್ನನ್ನು ಮರೆತು ಹಾಯಾಗಿರಿ
ನನ್ನನ್ನು ಮರೆತು ಹಾಯಾಗಿರಿ
------------------------------------------------------------------------------------------------------------------------

ನ್ಯಾಯವೇ ದೇವರು (೧೯೭೧).......ಎಂದೆಂದು ನೀವು ಸುಖವಾಗಿರಿ
ಸಾಹಿತ್ಯ : ಚಿ. ಉದಯಶಂಕರ್ ಸಂಗೀತ : ರಾಜನ್-ನಾಗೇಂದ್ರ ಗಾಯನ :ಪಿ.ಬಿ.ಶ್ರೀನಿವಾಸ

ಕುಣಿದಾಡುವ ವಯಸಿದು.. 
ಕುಣಿದಾಡುವ ವಯಸಿದು.. ನಲಿದಾಡುವ ದಿನವಿದು..
ಹೆಣ್ಣು ಗಂಡು ಬೇಧವಿಲ್ಲ ಇಲ್ಲಿ ಎಲ್ಲ ಒಂದು 
ಹೆಣ್ಣು ಗಂಡು ಬೇಧವಿಲ್ಲ ಇಲ್ಲಿ ಎಲ್ಲ ಒಂದು 
ಅಹ ಅಹ ಅಹ ಒಹೋ ಒಹೋ ಒಹೋ 

ಕಾಲೇಜಲ್ಲಿ ಓದೊವರೆಗೂ ಒಳ್ಳೆ ಹ್ಯಾಪಿ ಲೈಫ್ಫು 
ಕಾಲೇಜು ಬಿಟ್ಟು ಹೋದ ಮೇಲೆ ಮತ್ತೇ ಬರೆದೀ ಲೈಫ್ಫು 
ಕಾಲೇಜಲ್ಲಿ ಓದೊವರೆಗೂ ಒಳ್ಳೆ ಹ್ಯಾಪಿ ಲೈಫ್ಫು 
ಕಾಲೇಜು ಬಿಟ್ಟು ಹೋದ ಮೇಲೆ ಮತ್ತೇ ಬರೆದೀ ಲೈಫ್ಫು 
ಸಂತೋಷಕ್ಕೆ ಸಂಜೀವವೇ ನಮ್ಮ ಸ್ವೀಟು ಲಾಫು  
ನನ್ನೇ ಮಾತು ಸತ್ಯ ಏನಲು ನಮ್ಮ ಲೈಫು ಪ್ರೂಫು 
ಸುಖದ ಸ್ವರ್ಗ ಸೃಷ್ಟಿ ಮಾಡುವಾ.. 
ಕುಣಿದಾಡುವ ವಯಸಿದು.. ನಲಿದಾಡುವ ದಿನವಿದು..
ಹೆಣ್ಣು ಗಂಡು ಬೇಧವಿಲ್ಲ ಇಲ್ಲಿ ಎಲ್ಲ ಒಂದು 
ಹೆಣ್ಣು ಗಂಡು ಬೇಧವಿಲ್ಲ ಇಲ್ಲಿ ಎಲ್ಲ ಒಂದು 
ಅಹ ಅಹ ಅಹ ಒಹೋ ಒಹೋ ಒಹೋ 
ಪಾಪಪಪಪಪ ಮಮಮಮಮ ಗಗಗಗಗಗ್ ದುಡುದುದುದು 

ಒಂದೇ ಕೈಯ ಬೀಸಿ ನೋಡು ಸದ್ದು ಕೇಳುತ್ತೇನೂ
ಒಂದೇ ಕೈಯ ಬೀಸಿ ನೋಡು ಸದ್ದು ಕೇಳುತ್ತೇನೂ 
ಒಂಟಿ ಗುಬ್ಬಿಯಂತೇ ಇಲ್ಲಿ ಇದ್ದು ಮಾಡೋದೇನೂ
ಒಂಟಿ ಗುಬ್ಬಿಯಂತೇ ಇಲ್ಲಿ ಇದ್ದು ಮಾಡೋದೇನೂ 
ಜಾಲಿಯಾಗಿ ಕಾಲ ಕಳೆಯೇ ಗಂಟು ಹೋಗೋದೇನು... 
ಜಾಲಿಯಾಗಿ ಕಾಲ ಕಳೆಯೇ ಗಂಟು ಹೋಗೋದೇನು... 
ಅಜ್ಜಿಯಾದ ಮೇಲೆ ಹೀಗೆ ಸೇರ ಬಲ್ಲೆಯೇನೂ 
ಅಜ್ಜಿಯಾದ ಮೇಲೆ ಹೀಗೆ ಸೇರ ಬಲ್ಲೆಯೇನೂ 
ಒಹೋ... ಜಗವ ಮರೆವ ಸುಖವ ಹೊಂದುವಾ... 
ಕುಣಿದಾಡುವ ವಯಸಿದು.. ನಲಿದಾಡುವ ದಿನವಿದು..

ಮದುವೆಯಾಯ್ತು ಎಂದ ಮೇಲೆ ಹೆಂಡತಿಯ ಚಿಂತೆ.. 
ಮಕ್ಕಳಾಯಿತೆಂದ ಮೇಲೆ ಸಂಸಾರದ ಸಂತೇ 
ಮದುವೆಯಾಯ್ತು ಎಂದ ಮೇಲೆ ಹೆಂಡತಿಯ ಚಿಂತೆ.. 
ಮಕ್ಕಳಾಯಿತೆಂದ ಮೇಲೆ ಸಂಸಾರದ ಸಂತೇ 
ಮುಪ್ಪಿನಲ್ಲೇ ಹಳೆಯ ನೆನಪು ಕಾಡಿ ತಿನ್ನತ್ತಂತೆ 
ಯೌವ್ವನವೇ ಬಾಳಿನಲ್ಲಿ ಗೋಲ್ಡನ್ ಏಜ್ ಅಂತೇ... 
ಒಹೋ... ಹರುಷದ ಅಲೆಯ ಮೇಲೆ ತೇಲುವಾ...   
ಕುಣಿದಾಡುವ ವಯಸಿದು.. ನಲಿದಾಡುವ ದಿನವಿದು..
ಹೆಣ್ಣು ಗಂಡು ಬೇಧವಿಲ್ಲ ಇಲ್ಲಿ ಎಲ್ಲ ಒಂದು 
ಹೆಣ್ಣು ಗಂಡು ಬೇಧವಿಲ್ಲ ಇಲ್ಲಿ ಎಲ್ಲ ಒಂದು 
ಅಹ ಅಹ ಅಹ ಒಹೋ ಒಹೋ ಒಹೋ 
--------------------------------------------------------------------------------------------------------------------------

ನ್ಯಾಯವೇ ದೇವರು (೧೯೭೧).......ಎಂದೆಂದು ನೀವು ಸುಖವಾಗಿರಿ
ಸಾಹಿತ್ಯ : ಚಿ. ಉದಯಶಂಕರ್ ಸಂಗೀತ : ರಾಜನ್-ನಾಗೇಂದ್ರ ಗಾಯನ :ಎಸ್. ಪಿ.ಬಿ.

ಪರಮಾತ್ಮ ಆಡಿಸಿದಂತೆ ಆಡುವೆ ನಾನು
ಒಳಗಿರೋ ಪರಮಾತ್ಮಾ ಹೇಳಿಸಿದಂತೆ ಹೇಳುವೆ ನಾನು
ಪರಮಾತ್ಮ ಆಡಿಸಿದಂತೆ ಆಡುವೆ ನಾನು
ಒಳಗಿರೋ ಪರಮಾತ್ಮಾ ಹೇಳಿಸಿದಂತೆ ಹೇಳುವೆ ನಾನು

ನಗು ಅಂದರೆ ನಗುತೀನಿ, ಅಳು ಅಂದರೇ ಅಳುತಿನಿ
ನಗು ಅಂದರೆ ನಗುತೀನಿ, ಅಳು ಅಂದರೇ ಅಳುತಿನಿ
ಒಳಗೆ ಇರುವ ಈಚಲ ದೇವಾ ಕುಣಿ ಅಂದ್ರೇ ಕುಣಿತಿನೀ...
ಥಯ್ಯಾ ಥಕ ಜುಮ್ಮಾ ಲಕ, ಥಕಿಟ ತದುಮಿ ಥಕಿಟ ತದುಮಿ
ತತ್ತಳಂಗು  ತತ್ತಳಂಗು  ಥಾಮ್, ಧಿತ್ತಲಾಂಗೂ  ಧಿತ್ತಲಾಂಗೂ  ಧೈ
ಥಳಾಂಗೂ ತದಿಕಿತ ತೋಮ್
ಪರಮಾತ್ಮ ಆಡಿಸಿದಂತೆ ಆಡುವೆ ನಾನು
ಪರಮಾತ್ಮಾ ಹೇಳಿಸಿದಂತೆ ಹೇಳುವೆ ನಾನು

ನಡಿ ಅಂದ್ರೇ ಲೈಫ್ಟ್ ರೈಟ್  ಹೆಜ್ಜೆ ಹಾಕುವೇ
ನಿಲ್ಲು ಅಂದ್ರೇ ಕಂಬದಂತೇ ಅಲ್ಲೇ ನಿಲ್ಲುವೇ
ನಡಿ ಅಂದ್ರೇ ಲೈಫ್ಟ್ ರೈಟ್  ಹೆಜ್ಜೆ ಹಾಕುವೇ
ನಿಲ್ಲು ಅಂದ್ರೇ ಕಂಬದಂತೇ ಅಲ್ಲೇ ನಿಲ್ಲುವೇ
ಹುಳಿ ಹೆಂಡದ ಸ್ವಾಮಿ ನನ್ನ ಬಿದ್ಕೋ ಅಂದರೇ
ಮಳೆಯೋ ಬಿಸಿಲೋ ಕಲ್ಲೋ ಮುಳ್ಳೋ ಅಲ್ಲೇ ಮಲಗುವೇ
ನಂದಲ್ಲ ತಪ್ಪು ಎಲ್ಲಾ ಅವಂದೇ
ಪರಮಾತ್ಮ ಆಡಿಸಿದಂತೆ ಆಡುವೆ ನಾನು
ಪರಮಾತ್ಮಾ ಹೇಳಿಸಿದಂತೆ ಹೇಳುವೆ ನಾನು
ಯಾರರರ..ರುರುರೂ.... ಹೇ... ಯಹಾ.. 

ಕುಡಿ ಅಂದ ತೀರ್ಥ ಕುಡಿದೆ ಚಿಂತೆ ಮರೆಸಿತು
ಹೊಟ್ಟೆ ಒಳಗೆ ಕುರುಕ್ಷೇತ್ರ ಯುದ್ಧ ನಡೆಸಿತು
ಕುಡಿ ಅಂದ ತೀರ್ಥ ಕುಡಿದೆ ಚಿಂತೆ ಮರೆಸಿತು
ಹೊಟ್ಟೆ ಒಳಗೆ ಕುರುಕ್ಷೇತ್ರ ಯುದ್ಧ ನಡೆಸಿತು
ನನ್ನ ಬುದ್ದಿ ಬೇಕ್ ಇಲ್ಲದ ಲಾರಿ ಆಯಿತು
ಹಳ್ಳ ದಿನ್ನೆ ಹತ್ತಿ ಇಳಿದು ರಂಪವಾಯಿತು
ಪರಮಾತ್ಮ ಆಡಿಸಿದಂತೆ ಆಡುವೆ ನಾನು
ಪರಮಾತ್ಮಾ ಹೇಳಿಸಿದಂತೆ ಹೇಳುವೆ ನಾನು
ನಗು ಅಂದರೆ ನಗುತೀನಿ, ಅಳು ಅಂದರೇ ಅಳುತಿನಿ
ನಗು ಅಂದರೆ ನಗುತೀನಿ, ಅಳು ಅಂದರೇ ಅಳುತಿನಿ
ಒಳಗೆ ಇರುವ ಈಚಲ ದೇವಾ ಕುಣಿ ಅಂದ್ರೇ ಕುಣಿತಿನೀ...
ಥಯ್ಯಾ ಥಕ ಜುಮ್ಮಾ ಲಕ, ಥಕಿಟ ತದುಮಿ ಥಕಿಟ ತದುಮಿ
ಥಯ್ಯಾ ಥಕ ಜುಮ್ಮಾ ಲಕ, ಥಕಿಟ ತದುಮಿ ಥಕಿಟ ತದುಮಿ
 ಯಾರರರ.. ರುರುರುಉಉಉ  

No comments:

Post a Comment