35. ಸಂಯುಕ್ತ (1988)


ಸಂಯುಕ್ತ ಚಿತ್ರದ ಹಾಡುಗಳು 
  1. ಆಕಾಶ ಬಾಗಿದೆ ನಿನ್ನಂದ ಕಾಣಲೆಂದು
  2. ಮೈಸೂರಿನಲ್ಲಿ ಮಲ್ಲಿಗೆ ಹೂವು ಉಂಟಮ್ಮ
  3. ಪ್ರೀತಿಯೊ ಪ್ರೇಮವೊ ಮೋಹವೊ ನಮ್ಮಲಿ ಮೂಡಿದ ಸ್ನೇಹವೊ
  4. ಈ ನಮ್ಮ ನಾಡೆ ಚೆಂದವು ಈ ನಮ್ಮ ನುಡಿಯೆ ಚೆಂದವು
  5. ತಂಗಾಳಿಯಾಗಿ ಹೋದೆ  ತೇಲಾಡಿ ತೇಲಾಡಿ ಬಂದೆ
ಸಂಯುಕ್ತ (1988) - ಆಕಾಶ ಬಾಗಿದೆ
ಸಾಹಿತ್ಯ: ಚಿ.ಉದಯಶಂಕರ್   ಸಂಗೀತ: ಸಿಂಗೀತಂ ಶ್ರೀನಿವಾಸರಾವ್   ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ

ನಿನ್ನಂದ ಕಾಣಲೆಂದು ಆನಂದ ಹೊಂದಲೆಂದು
ಆಕಾಶ ಬಾಗಿದೆ ನಿನ್ನಂದ ಕಾಣಲೆಂದು
ಆನಂದ ಹೊಂದಲೆಂದು  ನೋಡಲ್ಲಿ ಮೋಹಿನಿ..ಕಾಮಿನಿ..ಭಾಮಿನಿ
ಆಕಾಶ ಬಾಗಿದೆ ನಿನ್ನಂದ ಕಾಣಲೆಂದು
ಆನಂದ ಹೊಂದಲೆಂದು  ನೋಡಲ್ಲಿ ಮೋಹಿನಿ..ಕಾಮಿನಿ..ಭಾಮಿನಿ
ಆಕಾಶ ಬಾಗಿದೆ....

ತಂಗಾಳಿ ಬೀಸಿ ಬಂದು  ನಿನ್ನ ಹೂ ಮಯ್ಯಿ ಸೋಕಿತೆ ಅರಳಿದ..ಸುಮಗಳ..ಪರಿಮಳ ಚೆಲ್ಲಾಡಿತೆ
ಆ ರೆಂಬೆ ತೂಗಿ ತೂಗಿ ಹೊಸ ಉಲ್ಲಾಸ ತೋರುತ ಹಸುರಿನ..ಎಲೆಗಳ..ಚಾಮರ ಬೀಸಿತೆ
ಬಳ್ಳೀಲಿ ನಗುವ ಹೂವು..ಸೌಂದರ್ಯ ಕಾಣುವಾ ಚಪಲದಿ..ಇಣುಕುತ..ನಸುನಾಚಿ ನೋಡಿದೆ
ಆಕಾಶ ಬಾಗಿದೆ    ನಿನ್ನಂದ ಕಾಣಲೆಂದು
ಆನಂದ ಹೊಂದಲೆಂದು  ನೋಡಲ್ಲಿ ಮೋಹಿನಿ..ಕಾಮಿನಿ..ಭಾಮಿನಿ
ಆಕಾಶ ಬಾಗಿದೆ

ಎಲ್ಲಿಂದ ತಂದ ಕಣ್ಣು ಇವಳೆಲ್ಲಿಂದ ಬಂದ ಹೆಣ್ಣೊ ನಡೆಯಲು..ನಾಟ್ಯವು..ಮೌನವೆ ಸಂಗೀತವು
ಶೃಂಗಾರ ಕಾವ್ಯವೊಂದು ಹೊಸ ಹೆಣ್ಣಾಗಿ ಬಂದಿತೇನೊ ಹವಳವೊ..ಅಧರವೊ..ಪ್ರಣಯದ ಚೆಲ್ಲಾಟವೊ
ಬಂಗಾರದಿಂದ ತಂದ ಈ ತನುವ ಕಾಂತಿಗೆ ಬಯಕೆಯು..ಮನಸನು..ಕೆಣಕಲು ನಾ ಸೋತೆನೆ
ಆಕಾಶ ಬಾಗಿದೆ  ನಿನ್ನಂದ ಕಾಣಲೆಂದು
ಆನಂದ ಹೊಂದಲೆಂದು   ನೋಡಲ್ಲಿ ಮೋಹಿನಿ..ಕಾಮಿನಿ..ಭಾಮಿನಿ
ಆಕಾಶ ಬಾಗಿದೆ
-----------------------------------------------------------------------------------------------------------------

ಸಂಯುಕ್ತ (೧೯೮೯).....ಮೈಸೂರಿನಲ್ಲಿ ಮಲ್ಲಿಗೆ ಹೂವು
ಸಾಹಿತ್ಯ: ಚಿ.ಉದಯಶಂಕರ್  ಸಂಗೀತ: ಸಿಂಗೀತಂ ಶ್ರೀನಿವಾಸ ರಾವ್  ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಮ್

ಗಂಡು : ಮೈಸೂರಿನಲ್ಲಿ ಮಲ್ಲಿಗೆ ಹೂವು ಉಂಟಮ್ಮ ಮಂಗಳೂರಿನಲ್ಲಿ ಭಾರಿ ಕಡಲು ಉಂಟಮ್ಮ
            ಕೋಲಾರದಲ್ಲಿ ಚಿನ್ನದ ಗಣಿಯೆ ಉಂಟಮ್ಮ ಈ ಊರಲಿ ಏನುಂಟು ನೀನೇ ಹೇಳಮ್ಮ
ಕೋರಸ್: ಶಿವನಿಗೆ ಗೊತ್ತಮ್ಮ ಆ ಶಿವನಿಗೆ ಗೊತ್ತಮ್ಮ ಶಿವನಿಗೆ ಗೊತ್ತಮ್ಮ ಆ ಶಿವನಿಗೆ ಗೊತ್ತಮ್ಮ

ಗಂಡು : ಈ ಊರಿನ ವಿಷಯ ನಾ ಬಲ್ಲೆನು ಸೌಂದರ್ಯದ ನಿಧಿಯ ನಾ ಕoಡೆನು.. ಲ...ಲ...ಲ...ಲ...
           ಈ ಊರಿನ ವಿಷಯ ನಾ ಬಲ್ಲೆನು  ಸೌಂದರ್ಯದ ನಿಧಿಯ ನಾ ಕoಡೆನು
           ಓ ಮೊಗವು ಹೂವಂತಿದೆ ಆ ಸೊಗಸು ಮೈತುಂಬಿದೆ  ಹೇ ವಯಸು ಬಾ ಎಂದಿದೆ
           ಇಂಥಾ ಸವಿಜೋಡಿ ಎಲ್ಲುoಟು ಹೇಳಮ್ಮ
          ಮೈಸೂರಿನಲ್ಲಿ ಮಲ್ಲಿಗೆ ಹೂವು ಉಂಟಮ್ಮ  ಮಂಗಳೂರಿನಲ್ಲಿ ಭಾರಿ ಕಡಲು ಉಂಟಮ್ಮ
          ಕೋಲಾರದಲ್ಲಿ ಚಿನ್ನದ ಗಣಿಯೆ ಉಂಟಮ್ಮ  ಈ ಊರಲಿ ಏನುಂಟು ನೀನೇ ಹೇಳಮ್ಮ
ಕೋರಸ್: ಶಿವನಿಗೆ ಗೊತ್ತಮ್ಮ ಆ ಶಿವನಿಗೆ ಗೊತ್ತಮ್ಮ ಶಿವನಿಗೆ ಗೊತ್ತಮ್ಮ ಆ ಶಿವನಿಗೆ ಗೊತ್ತಮ್ಮ

ಗಂಡು : ಸಂಗೀತವ ದಿನವೂ ನಾ ಕೇಳುವೆ ಆ ಹಾಡಿಗೆ ತಲೆಯ ನಾ ತೂಗುವೆ ಆ.........ಆ...........
            ಸಂಗೀತವ ದಿನವೂ ನಾ ಕೇಳುವೆ ಆ ಹಾಡಿಗೆ ತಲೆಯ ನಾ ತೂಗುವೆ
           ಓ ಇರುಳು ಬಂದಾಗಲೇ ಆ ನೆರಳು ಕಂಡಾಗಲೇ ಹೇ ಕೊರಳ ಇಂಪಾಗಲೇ
          ಕೇಳಿ ದಿನವೆಲ್ಲಾ ನಾ ಸೋತೇ ಹೊನ್ನಮ್ಮ
          ಮೈಸೂರಿನಲ್ಲಿ ಮಲ್ಲಿಗೆ ಹೂವು ಉಂಟಮ್ಮ ಮಂಗಳೂರಿನಲ್ಲಿ ಭಾರಿ ಕಡಲು ಉಂಟಮ್ಮ
         ಕೋಲಾರದಲ್ಲಿ ಚಿನ್ನದ ಗಣಿಯೆ ಉಂಟಮ್ಮ  ಈ ಊರಲಿ ಏನುಂಟು ನೀನೇ ಹೇಳಮ್ಮ
ಕೋರಸ್:  ಶಿವನಿಗೆ ಗೊತ್ತಮ್ಮ ಆ ಶಿವನಿಗೆ ಗೊತ್ತಮ್ಮ ಶಿವನಿಗೆ ಗೊತ್ತಮ್ಮ ಆ ಶಿವನಿಗೆ ಗೊತ್ತಮ್ಮ
------------------------------------------------------------------------------------------------------------------------

ಸಂಯುಕ್ತ (1989)....ಪ್ರೀತಿಯೊ ಪ್ರೇಮವೊ ಮೋಹವೊ
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಸಿಂಗೀತಂ ಶ್ರೀನಿವಾಸ ರಾವ್ ಗಾಯನ: ಎಸ್.ಪಿ.ಬಿ ,ವಾಣಿ ಜಯರಾಂ

ಗಂಡು : ಪ್ರೀತಿಯೊ ಪ್ರೇಮವೊ ಮೋಹವೊ  ನಮ್ಮಲಿ ಮೂಡಿದ ಸ್ನೇಹವೊ
            ಏನಾದರೂ ನೀ ಹೇಳಿಕೊ  ನೀನೇ ನನ್ನಾ ಪ್ರಾಣವೂ
ಹೆಣ್ಣು :   ಪ್ರೀತಿಯೊ ಪ್ರೇಮವೊ ಮೋಹವೊ  ನಮ್ಮಲಿ ಮೂಡಿದ ಸ್ನೇಹವೊ
            ಏನಾದರೂ ನೀ ಹೇಳಿಕೊ  ನೀನೇ ನನ್ನಾ ಪ್ರಾಣವೂ
ಗಂಡು : ಪ್ರೀತಿಯೊ ಪ್ರೇಮವೊ ಮೋಹವೊ
ಹೆಣ್ಣು :  ನಮ್ಮಲಿ ಮೂಡಿದ ಸ್ನೇಹವೊ

ಗಂಡು : ಬಾನಿಂದಲಿ ಈ ಭೂಮಿಗೆ ತಾನಾಗಿ ಜಾರಿ ಬಂದ ಹೂವೇ
           ನಿನ್ನoದಕೆ ವೈಯ್ಯಾರಕೆ ಸಾಟಿ ಯಾರೂ ಇಲ್ಲ ಬೇರೆ ನನ್ನ ಒಲವೇ
ಹೆಣ್ಣು:  ಕೆಂದಾವರೆ ಸಂತೋಷವು ಆ ಸೂರ್ಯ ಮೂಡಿದಾಗ ತಾನೇ
          ಈ ಹೆಣ್ಣಿನ ಆನoದವು ನಲ್ಲ ನಿನ್ನ ಪ್ರೇಮ ಸವಿದ ಮೇಲೆ ತಾನೇ
ಗಂಡು:  ಬಾಳಲಿ ನಿನ್ನ ನೋಡಿದೆ  ಬಾಳಲಿ ನಿನ್ನ ನೋಡಿದೆ ಹೇಗೋ ನಿನ್ನ ಸೇರಿದೆ
ಹೆಣ್ಣು :  ಪ್ರೀತಿಯೊ ಪ್ರೇಮವೊ ಮೋಹವೊ ನಮ್ಮಲಿ ಮೂಡಿದ ಸ್ನೇಹವೊ
ಗಂಡು:   ಏನಾದರೂ ನೀ ಹೇಳಿಕೊ ನೀನೇ ನನ್ನಾ ಪ್ರಾಣವೂ
ಹೆಣ್ಣು :  ಪ್ರೀತಿಯೊ ಪ್ರೇಮವೊ ಮೋಹವೊ
ಗಂಡು : ನಮ್ಮಲಿ ಮೂಡಿದ ಸ್ನೇಹವೊ ಆ......ಆ.....ಓ....ಊ......

ಹೆಣ್ಣು : ಸಂಗೀತವೂ ಸಾಹಿತ್ಯವೂ ಒಂದಾಗಿ ಸೇರಿದಾಗ ತಾನೇ
          ಆ ಗೀತೆಯ ಸೌoದರ್ಯಕೆ ಮಾರುಹೋಗಿ ಹೊನ್ನ ಕಲಶ ಇಟ್ಟ ಹಾಗೆ
ಗಂಡು :  ನಾ ಕೂಗಿದೆ ಕೈ ನೀಡಿದೆ ಸಂಗಾತಿಯಾಗಿ ಬಾರೆ ಇಂದೆ
             ಆ ಮಾತಿಗೆ ನೀ ಸೋಲುತ ದಾರಿದೀಪವಾಗಿ ನನ್ನ ಬಳಿಗೆ ಬಂದೆ
ಹೆಣ್ಣು : ಮಾತಲೇ ಮೋಡಿ ಹಾಕುವೆ  ಮಾತಲೇ ಮೋಡಿ ಹಾಕುವೆ ನೋಟದಲ್ಲೇ ಕೊಲ್ಲುವೆ
ಗಂಡು : ಪ್ರೀತಿಯೊ ಪ್ರೇಮವೊ ಮೋಹವೊ
ಹೆಣ್ಣು :ನಮ್ಮಲಿ ಮೂಡಿದ ಸ್ನೇಹವೊ
ಗಂಡು : ಏನಾದರೂ ನೀ ಹೇಳಿಕೊ
ಹೆಣ್ಣು : ನೀನೇ ನನ್ನಾ ಪ್ರಾಣವೂ
ಇಬ್ಬರೂ :  ಪ್ರೀತಿಯೊ ಪ್ರೇಮವೊ ಮೋಹವೊ ನಮ್ಮಲಿ ಮೂಡಿದ ಸ್ನೇಹವೊ
                ಏನಾದರೂ ನೀ ಹೇಳಿಕೊ ನೀನೇ ನನ್ನಾ ಪ್ರಾಣವೂ
------------------------------------------------------------------------------------------------------------------------

ಸಂಯುಕ್ತ (೧೯೮೯)......ಈ ನಮ್ಮ ನಾಡೆ ಚಂದವು
ಸಾಹಿತ್ಯ: ಚಿ.ಉದಯಶಂಕರ ಗಾಯನ: ಎಸ್.ಪಿ.ಬಿ, ರಮೇಶ್, ಮನೋ ಸಂಗೀತ: ಸಿಂಗೀತಂ ಶ್ರೀನಿವಾಸರಾವ್

ಈ ನಮ್ಮ ನಾಡೆ ಚೆಂದವು ಈ ನಮ್ಮ ನುಡಿಯೆ ಚೆಂದವು
ಈ ನಮ್ಮ ನಾಡೆ ಚೆಂದವು ಈ ನಮ್ಮ ನುಡಿಯೆ ಚೆಂದವು
ಗಿರಿಗಿರಿಯಲಿ ಬಳುಬಳುಕುತ ಹರಿಯುವ ನದಿ ಚೆನ್ನ
ಹಸುಹಸಿರಿನ ಲತೆಲತೆಯಲಿ ಅರಳಿದ ನುಮ ಚೆನ್ನ
ಗಿಡಮರದಲಿ ಅರಗಿಳಿಗಳ ಚಿಲಿಪಿಲಿ ದನಿ ಚೆನ್ನ
ಓಹೋಹೋ...ಓಹೋಹೋ...ಓಹೋಹೋ...
ಈ ನಮ್ಮ ನಾಡೆ ಚೆಂದವು  ಈ ನಮ್ಮ ನುಡಿಯೆ ಚೆಂದವು

ಗಾಳಿಯೋ ಸುಮಗಳ ಪರಿಮಳ ತರುತಿದೆ ಬೀಸುತ
ಪಯಣಕೆ ಹುರುಪನು ಕೊಡೊ ಹೊಸತನವನು ತುoಬುತ
ಗಾಳಿಯೋ ಸುಮಗಳ ಪರಿಮಳ ತರುತಿದೆ ಬೀಸುತ
ಪಯಣಕೆ ಹುರುಪನು ಕೊಡೊ ಹೊಸತನವನು ತುoಬುತ
ಸಂತೋಷ ಮನಕೆ ತಂದಿದೆ ಉಲ್ಲಾಸ ಬದುಕು ಕಂಡಿದೆ
ಈ ಹಾದಿ ಸುಂದರ ಈ ನೋಟ ಸುಂದರ
ಓಹೋಹೋ...ಓಹೋಹೋ...ಓಹೋಹೋ...
ಈ ನಮ್ಮ ನಾಡೆ ಚೆಂದವು  ಈ ನಮ್ಮ ನುಡಿಯೆ ಚೆಂದವು
ಹೆ..ಹೆ...ಹೆ.....ಆ...ಆ....ಆ.....

ನೋಡದೋ ನಯನವ ಸೆಳೆಯುವ ಹುಡುಗಿಯರಂದವ
ಬಿಡದಲೇ ಹುಡುಕಿಕೋ ಜೊತೆ ನಿನ ಮನಸಿಗೆ ಹಿಡಿಸುವ
ನೋಡದೋ ನಯನವ ಸೆಳೆಯುವ ಹುಡುಗಿಯರಂದವ
ಬಿಡದಲೇ ಹುಡುಕಿಕೋ ಜೊತೆ ನಿನ ಮನಸಿಗೆ ಹಿಡಿಸುವ
ಸಂಗಾತಿ ಈಗ ಬಂದರೆ ಸಂಸಾರ ಎಂಬ ತೊಂದರೆ
ಹತ್ತಾರು ಮಕ್ಕಳು ಗೋಳಾಡೊ ದನಿಗಳು
ಓಹೋಹೋ...ಓಹೋಹೋ...ಓಹೋಹೋ...
ಈ ನಮ್ಮ ನಾಡೆ ಚೆಂದವು  ಈ ನಮ್ಮ ನುಡಿಯೆ ಚೆಂದವು
ಗಿರಿಗಿರಿಯಲಿ ಬಳುಬಳುಕುತ ಹರಿಯುವ ನದಿ ಚೆನ್ನ
ಹಸುಹಸಿರಿನ ಲತೆಲತೆಯಲಿ ಅರಳಿದ ನುಮ ಚೆನ್ನ
ಗಿಡಮರದಲಿ ಅರಗಿಳಿಗಳ ಚಿಲಿಪಿಲಿ ದನಿ ಚೆನ್ನ
ಓಹೋಹೋ...ಓಹೋಹೋ...ಓಹೋಹೋ...
ಈ ನಮ್ಮ ನಾಡೆ ಚೆಂದವು  ಈ ನಮ್ಮ ನುಡಿಯೆ ಚೆಂದವು
--------------------------------------------------------------------------------------------------------------------------

ಸಂಯುಕ್ತ (೧೯೮೯)....ತಂಗಾಳಿಯಾಗಿ ಹೋದೆ
ಸಾಹಿತ್ಯ: ಚಿ.ಉದಯಶಂಕರ್  ಸಂಗೀತ: ಸಿಂಗೀತಂ ಶ್ರೀನಿವಾಸ ರಾವ್  ಗಾಯನ: ಎಸ್.ಜಾನಕಿ


ಆ..........ಆ..........
ತಂಗಾಳಿಯಾಗಿ ಹೋದೆ  ತೇಲಾಡಿ ತೇಲಾಡಿ ಬಂದೆ
ಇರುಳಲ್ಲಿ ನೆರಳಾಗಿ ಅಲೆದೆನು ನಿನಗಾಗಿ
ನನಗಾಗಿ ನೀ ಬಾರೆಯಾ....ಪ್ರಿಯಾ.......ಪ್ರಿಯಾ.......ಪ್ರಿಯಾ.......
ತಂಗಾಳಿಯಾಗಿ ಹೋದೆ  ತೇಲಾಡಿ ತೇಲಾಡಿ ಬಂದೆ
ಇರುಳಲ್ಲಿ ನೆರಳಾಗಿ ಅಲೆದೆನು ನಿನಗಾಗಿ ನನಗಾಗಿ ನೀ ಬಾರೆಯಾ....
ಪ್ರಿಯಾ.......ಪ್ರಿಯಾ.......ಪ್ರಿಯಾ.......

ನೀನಿನಿಲ್ಲದ ಈ ದೇದನೆ ನಾ ತಾಳೆ ಬಾರೊ ಪ್ರಿಯ
ಬೆಳಕಾದರೆ ನಾ ಕಾಣೆನು ನನ್ನಾಣೆ ಕೇಳೊ ಪ್ರಿಯ
ಈ ರಾತ್ರಿಯ ಆನಂದಕೆ
ಈ ರಾತ್ರಿಯ ಆನಂದಕೆ ಜೊತೆಯಾಗಿ ಬರಲಾರೆಯಾ ಪ್ರಿಯಾ.......ಪ್ರಿಯಾ.......ಪ್ರಿಯಾ.......
ತಂಗಾಳಿಯಾಗಿ ಹೋದೆ  ತೇಲಾಡಿ ತೇಲಾಡಿ ಬಂದೆ
ಇರುಳಲ್ಲಿ ನೆರಳಾಗಿ ಅಲೆದೆನು ನಿನಗಾಗಿ
ನನಗಾಗಿ ನೀ ಬಾರೆಯಾ.... ಪ್ರಿಯಾ.......ಪ್ರಿಯಾ.......ಪ್ರಿಯಾ.......

ಬೆಳದಿಂಗಳ ಕೆನೆಹಾಲಲಿ ಮೀಯೋಣ ಉಲ್ಲಾಸದಿ
ಕಾವೇರಿಯ ಜಲರಾಶಿಯ ಈಜೋಣ ಸಂತೋಷದಿ
ಒಲವಿಂದಲಿ ಒಂದಾಗುವ
ಒಲವಿಂದಲಿ ಒಂದಾಗುವ ಇನ್ನೇಕೆ ವಿರಹ ಪ್ರಿಯ ಪ್ರಿಯಾ.......ಪ್ರಿಯಾ.......ಪ್ರಿಯಾ.......
ತಂಗಾಳಿಯಾಗಿ ಹೋದೆ  ತೇಲಾಡಿ ತೇಲಾಡಿ ಬಂದೆ
ಇರುಳಲ್ಲಿ ನೆರಳಾಗಿ ಅಲೆದೆನು ನಿನಗಾಗಿ
ನನಗಾಗಿ ನೀ ಬಾರೆಯಾ.... ಪ್ರಿಯಾ.......ಪ್ರಿಯಾ.......ಪ್ರಿಯಾ.......
--------------------------------------------------------------------------------------------------------------------------

No comments:

Post a Comment