34. ನಿನಗಾಗಿ ನಾನು (1975)


ನಿನಗಾಗಿ ನಾನು ಚಿತ್ರದ ಹಾಡುಗಳು 
  1. ಆಗೋದೆಲ್ಲಾ ಆಗಲೀ 
  2. ಬಂಗಾರದೀ ಕರವೂ ಸೋಕಿದಾಗಲೇ 
  3. ನಗುತಲಿರು ನಗುತಲಿರು ಎಂದೆಂದೂ ನೀನು  
  4. ನಗುವ ಚೆಲುವ ಮೊಗವ ಕಂಡು ಸೋತೇನೂ 
ನಿನಗಾಗಿ ನಾನು (1975)
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ವಿಜಯಭಾಸ್ಕರ್ ಹಾಡಿದವರು: ಎಸ್.ಪಿ.ಬಿ.
ಆಗೋದೆಲ್ಲ ಆಗಲಿ ಹೋಗೋದೆಲ್ಲ ಹೋಗಲಿ
ಊರೇ ನೋಡಿ ನಗಲಿ ನನಗೇನು ನನಗೇನು ನನಗೇನು 
ಹ್ಯಾ.. ಆಯ್ ಡೋಂಟ್ ಕೇರ್
ಹೆಣ್ಣುಗಳನ್ನು ನೋಡದಿರು ಕಣ್ಣಿನ ಮಾತ ಕೇಳದಿರು
ಪ್ರೀತಿ ಪ್ರೇಮ ಒಲವು ಚೆಲುವು ಎಲ್ಲಾ ಸುಳ್ಳು... ನಂಬದಿರು
ಅಹ್ಹಹ್ಹಹ್ಹ... ಪೀಪಲ್ ಸೇ ಲವ್ ಇಸ್ ಗಾಡ್ ನೋ ನೋ ನೆವರ್ ಇಟ್ಸ್ ಫ್ರಾಡ್ ಅಹ್ಹಹ್ಹಹ್ಹಹ್ಹ.. 

ಜನಿಸಿದೆ ನಿನ್ನ ನೆನೆಯದೆಲೆ ಬೆಳೆದೆನು ನಿನ್ನ ಅರಿಯದೆಲೆ
ಎಲ್ಲೋ ಕಂಡೆ ನಾ ಮನಸೋತೆ ನೀ ಕೈಬಿಡಲು... ಹೀಗಾದೆ
ಅಹ್ಹಹ್ಹಹ್ಹ.. ಟು ಲವ್ ಎ ಗರ್ಲ್ ಇಟ್ಸ್ ನಾಟ್ ಎ ಶೇಮ್  ಹೂಂ..  
ಬಟ್ ಮೇಕ್ ಇಟ್ ಸುರ್ ಇಸ್ ಎ ಗೇಮ್

ಒಲವಿನ ಚಿನ್ನದ ಕತ್ತಿಯಲಿ ಹೃದಯವ ಚುಚ್ಚಿದೆ ರೋಷದಲಿ
ಉಕ್ಕಿದ ರಕ್ತ ಕಂಬನಿಯಾಗಿ ಸುರಿದಿದೆ ನೋಡು... ಹನಿಯಾಗಿ
ಪ್ರೀತೀ... ಮೈ ಡಾರ್ಲಿಂಗ್ ಪ್ರೀತೀ ಮೈ ಡಾರ್ಲಿಂಗ್ 
ಆಗೋದೆಲ್ಲ ಆಗಲಿ ಹೋಗೋದೆಲ್ಲ ಹೋಗಲಿ
ಊರೇ ನೋಡಿ ನಗಲಿ ನನಗೇನು ನನಗೇನು ನನಗೇನು
------------------------------------------------------------------------------------------------------------------------

ನಿನಗಾಗಿ ನಾನು (1975)
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ವಿಜಯಭಾಸ್ಕರ್ ಹಾಡಿದವರು: ವಾಣಿ ಜಯರಾಮ್

ಬಂಗಾರದೀ ಕರವು ಸೋಕಿದಾಗಲೇ
ಬಿಳಿಯ ಹಾಳೆಗೆ ಬಣ್ಣ ಬಂದು ಜೀವ ಮೂಡುವುದು
ನಿನ್ನಾಸೆಯ ಕಣ್ಣಾ ನೋಡಿದಾಗಲೇ
ನನ್ನ ಎದೆಯಲಿ ಜೇನ ಹನಿಯ ಮಳೆಯು ಸುರಿಯುವುದು
ನಲಿದು ಜೀವ ಹೊಸತು ಭಾವ ಹೃದಯ ತುಂಬುತಿದೆ
ಸಲಿಗೆ ತಂದ ಸರಸದಿಂದ ಮನವು ಸೋಲುತಿದೆ....
ಬಂಗಾರದೀ ಕರವು ಸೋಕಿದಾಗಲೇ
ಬಿಳಿಯ ಹಾಳೆಗೆ ಬಣ್ಣ ಬಂದು ಜೀವ ಮೂಡುವುದು

ನಿನ್ನಿಂದ ನಿಜವಾದ ಹೆಣ್ಣಾದೆವೋ ನಿನ್ನಾಸೆ ಅತಿಯಾಗಿ ಹಣ್ಣಾದೆನು
ಬಿಸಿಲು ಮಳೆಯನು ಹಗಲು ಇರುಳನು ಅರಿಯದಿರುವೆನು ಒಲಿದು ನೀನು
ಬಂಗಾರದೀ ಕರವು ಸೋಕಿದಾಗಲೇ
ಬಿಳಿಯ ಹಾಳೆಗೆ ಬಣ್ಣ ಬಂದು ಜೀವ ಮೂಡುವುದು
ಕಲೆಯೆಂಬ ಕೈದೀಪ ನಿನದಾಗಿದೆ

ಕಲೆಯೆಂಬ ಕೈ ದೀಪ ನಿನದಾಗಿದೆ ಒಲವೆಂಬ ಮನೆದೀಪ ನನದಾಗಿದೆ
ಕಲೆಯ ನೆರಳಲಿ ನೀನು ಬಾಳುವೆ ನಿನ್ನ ನೆರಳಲಿ ನಾನು ನಲಿವೆ
ಬಂಗಾರದೀ ಕರವು ಸೋಕಿದಾಗಲೇ
ಬಿಳಿಯ ಹಾಳೆಗೆ ಬಣ್ಣ ಬಂದು ಜೀವ ಮೂಡುವುದು
ನಿನ್ನಾಸೆಯ ಕಣ್ಣಾ ನೋಡಿದಾಗಲೇ
ನನ್ನ ಎದೆಯಲಿ ಜೇನ ಹನಿಯ ಮಳೆಯು ಸುರಿಯುವುದು
---------------------------------------------------------------------------------------------------------------------

ನಿನಗಾಗಿ ನಾನು (1975)
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ವಿಜಯಭಾಸ್ಕರ್ ಹಾಡಿದವರು: ಎಸ್.ಪಿ.ಬಿ.

ನಗುತಲಿರು ನಗುತಲಿರು ಎಂದೆಂದು ನೀ
ನಿನಗೆ ನಾನು ನನಗೆ ನೀನು ಮುದ್ದು ಮೋಹಿನಿ
ಇನ್ನೇಕೆ ಬಿಗುಮಾನ ಈ ಏಕಾಂತದಿ
ಇನ್ನೇಕೆ ಬಿಗುಮಾನ ಈ ಏಕಾಂತದಿ

ಏಕೋ ಏನೋ ಇರುಳಲಿ ನಿನ್ನ ಅಂದ ಹೆಚ್ಚಾಗಿದೆ
ಆಸೆ ನೂರು ಮನಸಲಿ ಮೂಡಿ ಎದೆಯು ಝಿಲ್ಲೆಂದಿದೆ
ಏಕೋ ಏನೋ ಇರುಳಲಿ ನಿನ್ನ ಅಂದ ಹೆಚ್ಚಾಗಿದೆ
ಆಸೆ ನೂರು ಮನಸಲಿ ಮೂಡಿ ಎದೆಯು ಝಿಲ್ಲೆಂದಿದೆ
ಇಂದೇಕೊ ಹೊಸದೇನೊ ಈ ಮನಸು ಕೇಳಿದೆ
ಇಂದೇಕೊ ಹೊಸದೇನೊ ಈ ಮನಸು ಕೇಳಿದೆ
ನಗುತಲಿರು ನಗುತಲಿರು ಎಂದೆಂದು ನೀ
ನಿನಗೆ ನಾನು ನನಗೆ ನೀನು ಮುದ್ದು ಮೋಹಿನಿ

ತಂಪು ಗಾಳಿ ಬಳಸುತ ನನ್ನ ಚಳಿಯ ಚೆಲ್ಲಾಡಿದೆ
ತಂಟೆ ಮಾಡಿ ಕೆಣಕುತ ಕಾಡಿ ನಿನ್ನ ಸೇರೆಂದಿದೆ
ತಂಪು ಗಾಳಿ ಬಳಸುತ ನನ್ನ ಚಳಿಯ ಚೆಲ್ಲಾಡಿದೆ
ತಂಟೆ ಮಾಡಿ ಕೆಣಕುತ ಕಾಡಿ ನಿನ್ನ ಸೇರೆಂದಿದೆ
ಬಳಿ ಬಂದು ತುಟಿಗೊಂದು ನಾನಿನ್ನ ಕೇಳಲೆ
ಬಳಿ ಬಂದು ತುಟಿಗೊಂದು ನಾನಿನ್ನ ಕೇಳಲೆ
ನಗುತಲಿರು ನಗುತಲಿರು ಎಂದೆಂದು ನೀ
ನಿನಗೆ ನಾನು ನನಗೆ ನೀನು ಮುದ್ದು ಮೋಹಿನಿ
ಇನ್ನೇಕೆ ಬಿಗುಮಾನ ಈ ಏಕಾಂತದಿ
ಇನ್ನೇಕೆ ಬಿಗುಮಾನ ಈ ಏಕಾಂತದಿ
ನಗುತಲಿರು ನಗುತಲಿರು ಎಂದೆಂದು ನೀ
ನಿನಗೆ ನಾನು ನನಗೆ ನೀನು ಮುದ್ದು ಮೋಹಿನಿ
--------------------------------------------------------------------------------------------------------------------------

ನಿನಗಾಗಿ ನಾನು (1975)
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ವಿಜಯಭಾಸ್ಕರ್ ಹಾಡಿದವರು: ಎಸ್.ಪಿ.ಬಿ., ಎಸ್.ಜಾನಕಿ

ಹೆಣ್ಣು : ಅಹ್ಹಹ್ಹಹ್ಹ..   ಗಂಡು : ಹಾಯ್ ಹಾಯ್ ಹಾಯ್ ಹ್ಹಾಂ.. 
ಹೆಣ್ಣು : ಆ..ಆಹಾಂ ..ಆ   
ಗಂಡು : ನಗುವ ಚೆಲುವ ಮೊಗವ ಕಂಡು ಸೋತೆನು
           ಅರಳಿ ಬಿರಿದ ತುಟಿಯ ಬಯಸಿ ಬಂದೆನು ಹೇಹೇ ...
           ನಗುವ ಚೆಲುವ ಮೊಗವ ಕಂಡು ಸೋತೆನು
           ಅರಳಿ ಬಿರಿದ ತುಟಿಯ ಬಯಸಿ ಬಂದೆನು
ಹೆಣ್ಣು : ಹೂಂ ಹೂಂ  ಅಲ್ಲೇ ಇರು ಅಲ್ಲೇ ಇರು ಸಾಕಿನ್ನು ನೀ ಕಾಡಬೇಡ
           ನಿಧಾನಿಸು ನಿಧಾನಿಸು ತೋಳಿಂದ ಮೈ ಬಳಸಬೇಡ
           ಅಲ್ಲೇ ಇರು ಅಲ್ಲೇ ಇರು ಸಾಕಿನ್ನು ನೀ ಕಾಡಬೇಡ
           ನಿಧಾನಿಸು ನಿಧಾನಿಸು ತೋಳಿಂದ ಮೈ ಬಳಸಬೇಡ
ಗಂಡು : ನಗುವ ಚೆಲುವ ಮೊಗವ ಕಂಡು ಸೋತೆನು
            ಅರಳಿ ಬಿರಿದ ತುಟಿಯ ಬಯಸಿ ಬಂದೆನು ಹೂಂ..  (ಹೂಹೂಂ )

ಗಂಡು : ಸುಳ್ಳು ಮಾತೇಕೆ ನಲ್ಲೆ, ನಾನು ನಿನ್ನಾಸೆ ಬಲ್ಲೆ
ಹೆಣ್ಣು :  ಬಲ್ಲೆ ನಿನ್ನಾಟ ಎಲ್ಲ, ಸಾಕು ನಿಲ್ಲಲ್ಲೆ ನಲ್ಲ
ಗಂಡು : ದೂರ ಹೋಗಿ ನನ್ನ, ಕಾಡ ಬೇಡ ಚಿನ್ನ ಆ...
           ದೂರ ಹೋಗಿ ನನ್ನ,ಆ  ಕಾಡ ಬೇಡ ಚಿನ್ನ (ಅಹ್ಹಹ್ಹ )
          ನಗುವ ಚೆಲುವ ಮೊಗವ ಕಂಡು ಸೋತೆನು
  ಅರಳಿ ಬಿರಿದ ತುಟಿಯ ಬಯಸಿ ಬಂದೆನು ಹೂಂ..  (ಹೂಹೂಂ )
ಗಂಡು : ಕೆನ್ನೆ ಕೆಂಪಾದ ಮೇಲೆ, ಬಿಂಕ ಇನ್ನೇಕೆ ಬಾಲೆ
ಹೆಣ್ಣು : ಆ.. ನಿನ್ನ ತುಂಟಾಟ ನಲ್ಲ, ತಂದ ಆನಂದ ಎಲ್ಲ
ಗಂಡು : ಒಂದೇ ಒಂದು ತುಟಿಗೆ, ಹಾಯ್ ಹಾಯ್ ಕೊಡುವೆ ಬಾರೆ ಬಳಿಗೆ
           ಒಂದೇ ಒಂದು ತುಟಿಗೆ, ಕೊಡುವೆ ಬಾರೆ ಬಳಿಗೆ
ಹೆಣ್ಣು : ನಗುವ ಚೆಲುವ ಮೊಗವ ಕಂಡು ಸೋತೆನು.. (ಅಹ್ಹಹ್ಹ)
         ಅರಳಿ ಬಿರಿದ ತುಟಿಯ ಬಯಸಿ ಬಂದೆನು (ಅಹ್ಹಹ್ಹಹ್ಹ )
         ನಗುವ ಚೆಲುವ ಮೊಗವ ಕಂಡು ಸೋತೆನು
         ಅರಳಿ ಬಿರಿದ ತುಟಿಯ ಬಯಸಿ ಬಂದೆನು
ಗಂಡು : ಅಲ್ಲೇ ಇರು ಅಲ್ಲೇ ಇರು ಸಾಕಿನ್ನು ನೀ ಕಾಡಬೇಡ (ಆ.. )
          ನಿಧಾನಿಸು ನಿಧಾನಿಸು ತೋಳಿಂದ ಮೈ ಬಳಸಬೇಡ (ಅಹ್ಹಹ್ಹ )
ಇಬ್ಬರು : ನಗುವ ಚೆಲುವ ಮೊಗವ ಕಂಡು ಸೋತೆನು
             ಅರಳಿ ಬಿರಿದ ತುಟಿಯ ಬಯಸಿ ಬಂದೆನು
--------------------------------------------------------------------------------------------------------------------------

No comments:

Post a Comment