654. ಬೋರೇಗೌಡ ಬೆಂಗಳೂರಿಗೆ ಬಂದ (೧೯೭೦)


ಬೋರೇಗೌಡ ಬೆಂಗಳೂರಿಗೆ ಬಂದ ಚಿತ್ರದ ಹಾಡುಗಳು 
  1. ನಮ್ಮದೇ ನಾಡೆಲ್ಲಾ ನಮ್ಮವರೇ ಜನರೆಲ್ಲಾ 
  2. ಅಲ್ಲಿ ಇಲ್ಲಿ ಹುಡುಕುತ ಮನಸು ಏನೋ 
  3. ಮಲಗೋಬಾ ಮಾವಿನ 
  4. ಅಂದದೂರು ಬೆಂಗಳೂರು   
ಬೋರೇಗೌಡ ಬೆಂಗಳೂರಿಗೆ ಬಂದ (೧೯೭೦) - ನಮ್ಮದೇ ನಾಡೆಲ್ಲಾ ನಮ್ಮವರೇ ಜನರೆಲ್ಲಾ ..
ಸಾಹಿತ್ಯ : ರಾಜನ್ ನಾಗೇಂದ್ರ, ಸಾಹಿತ್ಯ : ಉದಯಶಂಕರ  ಗಾಯನ : ಎಸ್ಪಿಬಿ 

ನಮ್ಮದೇ ನಾಡೆಲ್ಲಾ ನಮ್ಮವರೇ ಜನರೆಲ್ಲಾ ..
ನಮ್ಮದೇ ನಾಡೆಲ್ಲಾ ನಮ್ಮವರೇ ಜನರೆಲ್ಲಾ ..
ನಿಲ್ಲಲು ನೆಲೆಯಿಲ್ಲ  ಮಲಗಲು ಮನೆಯಿಲ್ಲ
ನಮ್ಮದೇ ನಾಡೆಲ್ಲಾ ನಮ್ಮವರೇ ಜನರೆಲ್ಲಾ ..

ಮಹಡಿಯ ಮನೆಯ ಸಾಲುಗಳು ಒಳಗೆ ಬೆಕ್ಕು ನಾಯಿಗೆ ಒಳ್ಳೆ ಭೋಗಗಳು 
ಮಹಡಿಯ ಮನೆಯ ಸಾಲುಗಳು ಒಳಗೆ ಬೆಕ್ಕು ನಾಯಿಗೆ ಒಳ್ಳೆ ಭೋಗಗಳು 
ಬಡವನ ಬಾಳು ಕಣ್ಣೀರಿನ ಪಾಲು ಬೀದಿನಾಯಿಗಿಂತ ಕೀಳು 
ನಮ್ಮದೇ ನಾಡೆಲ್ಲಾ ನಮ್ಮವರೇ ಜನರೆಲ್ಲಾ .. 

ಹುಟ್ಟುವ ಸಂಖ್ಯೆಗೆ ಕೊನೆಯಿಲ್ಲಾ  ಹುಟ್ಟಿದ ಜೀವಿಗೆ ಸುಖವಿಲ್ಲಾ 
ಹುಟ್ಟುವ ಸಂಖ್ಯೆಗೆ ಕೊನೆಯಿಲ್ಲಾ  ಇಲ್ಲಿ ಹುಟ್ಟಿದ ಜೀವಿಗೆ ಸುಖವಿಲ್ಲಾ 
ಹೊಟ್ಟೆಗೂ ಬಟ್ಟೆಗೂ ಸಿಗದಲ್ಲಾ.... ಆಆಆ
ಹೊಟ್ಟೆಗೂ ಬಟ್ಟೆಗೂ ಸಿಗದಲ್ಲಾ ಕಡು ಕಷ್ಟಕ್ಕೆ ಕೊನೆಯೇ ಇಲ್ಲಿಲ್ಲಾ 
ನಮ್ಮದೇ ನಾಡೆಲ್ಲಾ ನಮ್ಮವರೇ ಜನರೆಲ್ಲಾ .. 

ವೇದಾಂತ ಬಾಯಲ್ಲಿ ಆಡುವರು ಜನಸೇವೆಯೇ ಗುರಿಯೆಂದು ಹೇಳುವರು 
ವೇದಾಂತ ಬಾಯಲ್ಲಿ ಆಡುವರು ಜನಸೇವೆಯೇ ಗುರಿಯೆಂದು ಹೇಳುವರು 
ಸ್ವಾರ್ಥಕ್ಕೆ ಬಲಿಯಾಗಿ  ಗುಂಪು ಕಟ್ಟುತ್ತಾ  ಹೋಗಿ ದೇಶಕ್ಕೆ ದ್ರೋಹ ಬಗೆಯುವರು 
ನಮ್ಮದೇ ನಾಡೆಲ್ಲಾ ನಮ್ಮವರೇ ಜನರೆಲ್ಲಾ ..
ನಮ್ಮದೇ ನಾಡೆಲ್ಲಾ ನಮ್ಮವರೇ ಜನರೆಲ್ಲಾ ..
------------------------------------------------------------------------------------------------------------------------

ಬೋರೇಗೌಡ ಬೆಂಗಳೂರಿಗೆ ಬಂದ (೧೯೭೦) - ಅಲ್ಲಿ ಇಲ್ಲಿ ಹುಡುಕುತ ಕಣ್ಣು ಏನೊ ಹೇಳಿತು
ಸಂಗೀತ : ರಾಜನ್ ನಾಗೇಂದ್ರ ಸಾಹಿತ್ಯ : ಉದಯಶಂಕರ ಗಾಯನ : ಎಸ್ಪಿಬಿ, ಪಿ.ಸುಶೀಲ  

ಗಂಡು :ಹೇಹೆಹೇ... ಹೇ... ಹೇ... ಹೇ..
ಹೆಣ್ಣು : ಒಹೋ..ಆಆಆ.... ಒಹೋ.. ಒಹೋ... ಒಹೋ..
ಗಂಡು : ಅಲ್ಲಿ ಇಲ್ಲಿ ಹುಡುಕುತ ಕಣ್ಣು ಏನೊ ಹೇಳಿತು
           ಅತ್ತ ಇತ್ತ ಆಡುವ ಮನಸು ಏನೋ ಕೇಳಿತು
           ಅಲ್ಲಿ ಇಲ್ಲಿ ಹುಡುಕುತ ಕಣ್ಣು ಏನೊ ಹೇಳಿತು
           ಅತ್ತ ಇತ್ತ ಆಡುವ ಮನಸು ಏನೋ ಕೇಳಿತು
ಹೆಣ್ಣು : ಆಆಆ... ಚಿನ್ನ ನಿನ್ನ ಕಂಡು ಕಣ್ಣು ನನ್ನೆ ಮರೆಯಿತು
         ಕನಸು ನನಸು ಎಂದೀ ಮನಸು ಹಾಡಿ ಕುಣಿಯಿತು
        ಲಾ ಲಲ ಲಾ ಲಾಲ ಲಲ್ಲಲ್ಲಾ ಲಲ್ಲಲ್ಲಾ ಲಾ

ಗಂಡು : ಏಕೋ ಏನೋ ಅಂದಿನ ರಾತ್ರಿ ನಿದ್ದೆ ಇಲ್ಲದೆ
            ನಗುವು ನಲಿವು ಏನೋ ನೋವು ನನ್ನ ಕಾಡಿದೆ
ಹೆಣ್ಣು : ಆ.. (ಆಹಾ..) ಓ.... (ಆಆಆ.. )
            ಅಂತೆ ಆಗಿ ಇರುಳಲಿ ಕೊರಗಿ ಹೊರಳಿ ಬಳಲಿದೆ
            ಹುಣ್ಣಿಮೆ ಬೆಳಕು ಉರಿ ಬಿಸಿಲಾಗಿ ಬೆಂದು ಬೆವರಿದೆ
ಗಂಡು : ಬಿಟ್ಟಿನ್ನು ಇರಲಾಗದೆ
ಹೆಣ್ಣು : ನಿನ್ನನ್ನು ಹುಡುಕಾಡಿದೆ
ಇಬ್ಬರು : ನೀ ಸಿಕಿದೆ ನೀ ಸಿಕ್ಕಿದೆ ಸುಖದಿಂದ ನಾ ಸೊಕ್ಕಿದೆ
ಗಂಡು : ಓ... ಅಲ್ಲಿ ಇಲ್ಲಿ ಹುಡುಕುತ ಕಣ್ಣು ಏನೊ ಹೇಳಿತು
           ಅತ್ತ ಇತ್ತ ಆಡುವ ಮನಸು ಏನೋ ಕೇಳಿತು
ಹೆಣ್ಣು : ಆಹಾ... ಆ.. ಆಹಾ.. ಆಹಾ.. (ಒಹೋ.. ಓ.. ಓ... ಓ.. ಓ.. )

ಹೆಣ್ಣು : ಗಲ್ಲಕೆ ಗಲ್ಲ ಸೋಕಲು ಕೆನ್ನೆ ಕೆಂಪೇಕಾಯಿತು
         ಕೆಂದುಟಿ ಜೇನ ಸವಿಯುವ ಮುನ್ನ ಭಯವೇಕಾಯಿತು
ಗಂಡು : ಆ.. (ಆಹಾ..) ಓ.... (ಅಹ್ಹಹ್ಹಹ್ಹ.. )
          ಕಾಣದ ಸುಖಕೆ ಹೊಸ ಅನುಭವಕೆ ಎದೆ ಝಲ್ಲೆಂದಿತು
         ಮೆತ್ತನೆ ಮೈಯಿ ಒತ್ತಲು ನನ್ನ ಮತ್ತು ಏರಿತು
ಹೆಣ್ಣು : ಮೊಗ್ಗೊಂದು ಹೂವಾಯಿತು
ಗಂಡು : ನನ್ನಸೆ ಪೂರೈಸಿತು
ಇಬ್ಬರು : ಹಗುರಾಯಿತು ಹಗುರಾಯಿತು ತೇಲಾಡುವಂತಾಯಿತು
             ಹೊಯ್  ಅಲ್ಲಿ ಇಲ್ಲಿ ಹುಡುಕುತ ಕಣ್ಣು ಏನೊ ಹೇಳಿತು
            ಅತ್ತ ಇತ್ತ ಆಡುವ ಮನಸು ಏನೋ ಕೇಳಿತು
           ಚಿನ್ನ ನಿನ್ನ ಕಂಡು ಕಣ್ಣು ನನ್ನೆ ಮರೆಯಿತು
           ಕನಸು ನನಸು ಎಂದೀ ಮನಸು ಹಾಡಿ ಕುಣಿಯಿತು
           ಲಾ ಲಲ ಲಾ ಲಾಲ ಲಾ ಲಾ ಲಲ ಲಾ ಲಾಲ ಲಾ ಲಾ ಲಲ ಲಾ ಲಾಲ ಲಾ
---------------------------------------------------------------------------------------------------------------------

ಬೋರೇಗೌಡ ಬೆಂಗಳೂರಿಗೆ ಬಂದ (೧೯೭೦) - ಮಲಗೋಬಾ ಮಾವಿನಹಣ್ಣು 
ಸಂಗೀತ : ರಾಜನ್ ನಾಗೇಂದ್ರ ಸಾಹಿತ್ಯ : ಉದಯಶಂಕರ ಗಾಯನ : ಎಲ್.ಆರ್.ಈಶ್ವರಿ 

ಮಲಗೋಬಾ....  ಮಲಗೋಬಾ  ಮಲಗೋಬಾ
ಮಲಗೋಬಾ. ಮಾವಿನ ಹಣ್ಣು ಇದು ಮರದಲ್ಲೇ ಮಾಗಿದ ಹಣ್ಣು ತಕ್ಕೊಳಪ್ಪ
ಮಲಗೋಬಾ....  ಮಲಗೋಬಾ...
ಮಲಗೋಬಾ. ಮಾವಿನ ಹಣ್ಣು ಹೊಯ್ ಇದು ಮರದಲ್ಲೇ ಮಾಗಿದ ಹಣ್ಣು

ಹಣ್ಣು ಬಹಳ ದಪ್ಪ ಅಹ್ ರುಚಿಯು ಜೇನುತುಪ್ಪ
ಯಾಕ ಅನುಮಾನವೂ ತಿಂದು ನೋಡಿ ಸ್ವಲ್ಪ
ಹೂಂ ... ನೋಡಿ ಪರವಾಗಿಲ್ಲ ಒಂದು ಕೈ ನೋಡಿ
ಪೇಟೆಯಲ್ಲಿ ಸಿಗದು ಯಾವ್ ತೋಟದಲ್ಲೂ ಇರದು
ದೂರದಲ್ಲೇ ನೋಡಿ..  ಬಾಯ್ ಜೊಲ್ಲೂ ಸುರಿಸಬೇಡಿ
ದೂರದಲ್ಲೇ ನೋಡಿ ಬಾಯ್ ಜೊಲ್ಲೂ ಸುರಿಸಬೇಡಿ
ತಿಂದು ನೋಡಿ ಕಾಸ ನೀಡಿ
ಮಲಗೋಬಾ....  ಮಲಗೋಬಾ...
ಮಲಗೋಬಾ. ಮಾವಿನ ಹಣ್ಣು ಹೊಯ್ ಇದು ಮರದಲ್ಲೇ ಮಾಗಿದ ಹಣ್ಣು

ಹಣ್ಣಿನಾಸೆ ಏನೋ ತಾಯಾಗೋ ಸಮಯವೇನೋ
ಹಣ್ಣಿನಾಸೆ ಏನೋ ತಾಯಾಗೋ ಸಮಯವೇನೋ
ಹಣ್ಣು ತಿಂದು ನೀ ಪಡಿ ಮುದ್ದು ಮಗುವನ್ನು ತಕ್ಕೊಳಮ್ಮ ತಿನ್ನೂ ತಿನ್ನೂ
ಯಾಕೇ ಸುಮ್ನೇ ನಿಂತೇ ನಿನಗೇನೋ ಅಂಥ  ಚಿಂತೇ
ಯಾಕೇ ಸುಮ್ನೇ ನಿಂತೇ ನಿನಗೇನೋ ಅಂಥ  ಚಿಂತೇ
ಈ ಹಣ್ಣು ನೀ ತಿಂದ್ರೇ ಮಾಯಾ ನಿನ್ನ ಚಿಂತೇ
ಮಲಗೋಬಾ....  ಮಲಗೋಬಾ...
ಮಲಗೋಬಾ. ಮಾವಿನ ಹಣ್ಣು ಹೊಯ್  ಇದು ಮರದಲ್ಲೇ ಮಾಗಿದ ಹಣ್ಣು ತಕ್ಕೊಳಪ್ಪಾ
ಮಲಗೋಬಾ....  ಮಲಗೋಬಾ...  ಮಲಗೋಬಾ
ಮಲಗೋಬಾ. ಮಾವಿನ ಹಣ್ಣು ಹೊಯ್ ಇದು ಮರದಲ್ಲೇ ಮಾಗಿದ ಹಣ್ಣು
ಮಲಗೋಬಾ....  ಮಲಗೋಬಾ...  ಮಲಗೋಬಾ
-------------------------------------------------------------------------------------------------------------------------

ಬೋರೇಗೌಡ ಬೆಂಗಳೂರಿಗೆ ಬಂದ (೧೯೭೦) - ಅಂದದೂರು ಬೆಂಗಳೂರು 
ಸಂಗೀತ : ರಾಜನ್ ನಾಗೇಂದ್ರ ಸಾಹಿತ್ಯ : ಉದಯಶಂಕರ  ಗಾಯನ : ಪಿ.ಸುಶೀಲಾ 

ಆಆಆ... ಆಆಆ... ಆಆಆ...
ಅಂದದೂರು ಬೆಂಗಳೂರು ಹೋಯ್ ಆನಂದದ ತವರೂರು ಹೋಯ್
ಅಂದದೂರು ಬೆಂಗಳೂರು ಹೋಯ್ ಹೋಯ್ ಆನಂದದ ತವರೂರು
ಬದುಕಿದರೇ ಇಲ್ಲೇ ನಾವ ಬದುಕಿರಬೇಕೂ
ಸುಖಪಡಲೂ ಈ ಊರಲೇ ನಾವಿರಬೇಕೂ
ಅಂದದೂರು ಬೆಂಗಳೂರು ಹೋಯ್ ಆನಂದದ ತವರೂರು ಹೋಯ್ ಹೋಯ್ ಹೋಯ್

ದೊಡ್ಡ ಪೇಟೆಯಲ್ಲಿ ದೊಡ್ಡ ಮನೆಯಿರಬೇಕೂ ..
ದೊಡ್ಡ ಪೇಟೆಯಲ್ಲಿ ದೊಡ್ಡ ಮನೆಯಿರಬೇಕೂ ..
ನಮ್ಮ ಯಜಮಾನರೂ ಸೂಟುಬೂಟು ಹಾಕಿರಬೇಕೂ
ಹೊರಗೇ ಬರಲು ಕಾರೂ ಕಾರಿಗೇ ಡ್ರೈವರ್ರೂ
ಹೊರಗೇ ಬರಲು ಕಾರು ಆ ಕಾರಿಗೇ ಡ್ರೈವರ್ರೂ
ಕಂಗಳ ಹಬ್ಬ ನೋಡೋಕೆ ಗೌಡರ ಜೋರೂ
ಕಣ್ಣಂಗೇ ಹಬ್ಬ ನೋಡೋಕೆ ಗೌಡರ ಜೋರೂ...
ಅಂದದೂರು ಬೆಂಗಳೂರು ಹೋಯ್ ಆನಂದದ ತವರೂರು ಹೋಯ್ ಹೋಯ್ ಹೋಯ್

ಸರಕಾರೀ ಅರಮನೇಲೀ ಭಾರಿಯ ಕೆಲಸಾ...
ಸರಕಾರೀ ಅರಮನೇಲೀ ಭಾರಿಯ ಕೆಲಸಾ...
ನಮ್ಮ ಗೌಡರಿಗೇ ಮಹಡಿ ಮೇಲೆ ಕೋಣೆಯ ವಾಸ
ಕೈಗೇ ಒಬ್ಬ ಆಳು ಕಾಲಿಗೊಬ್ಬ ಆಳು
ಕೈಗೇ ಒಬ್ಬ ಆಳು ಅಹ್ಹಹ್ಹಾ ಕಾಲಿಗೊಬ್ಬ ಆಳು
ಮಹಾರಾಜರ ದರ್ಬಾರೇ ನಡೆಸಿಬಿಡುವರೂ ..
ಮಹಾರಾಜರ ದರ್ಬಾರೇ ನಡೆಸಿಬಿಡುವರೂ ..
ಅಂದದೂರು ಬೆಂಗಳೂರು ಹೋಯ್ ಆನಂದದ ತವರೂರು ಹೋಯ್ ಹೋಯ್ ಹೋಯ್

ಆಆಆ... ಆಆಆ... ಓಓಓಓ ... ಗೀ ಗೀ  ಗೀಯ್
ಜರಿಗೇ ರವಿಕೆ ಜರಿಗೇ ಸೀರೇ ದಿನಾ ಉಡುವೇನೂ
ಜರಿಗೇ ರವಿಕೆ ಜರಿಗೇ ಸೀರೇ ದಿನಾ ಉಡುವೇನೂ
ಮೈತುಂಬಾ ಬಂಗಾರದ ಒಡವೆ ಇಡುವೆನೂ
ಸಿನಿಮಾ ನೋಡಿ ಬರುವೇ ಹೊಸ ಫ್ಯಾಷನೆಲ್ಲಾ ಕಲಿವೇ..
ಸಿನಿಮಾ ನೋಡಿ ಬರುವೇ ಹೊಸ ಫ್ಯಾಷನೆಲ್ಲಾ ಕಲಿವೇ..
ಬೆರಗಾಗಿ ನೋಡಬೇಕೂ ನನ್ನ ಗೌಡರೂ ..
ಬೆರಗಾಗಿ ನೋಡಬೇಕೂ ನನ್ನ ಗೌಡರೂ ..
ಅಂದದೂರು ಬೆಂಗಳೂರು ಹೋಯ್ ಆನಂದದ ತವರೂರು ಹೋಯ್
ಬದುಕಿದರೇ ಇಲ್ಲೇ ನಾವ ಬದುಕಿರಬೇಕೂ
ಸುಖಪಡಲೂ ಈ ಊರಲೇ ನಾವಿರಬೇಕೂ
ಅಂದದೂರು ಬೆಂಗಳೂರು ಹೋಯ್ ಆನಂದದ ತವರೂರು ಹೋಯ್ ಹೋಯ್ ಹೋಯ್
--------------------------------------------------------------------------------------------------------------------

No comments:

Post a Comment