ಗೃಹಲಕ್ಷ್ಮಿ ಚಿತ್ರದ ಹಾಡುಗಳು
ಸಂಗೀತ : ಎಂ.ರಂಗರಾವ್ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಜಾನಕಿ
ಆಆಆ... ಆಆಆ... ಆಆಆ... ಆಆಆ... ಆಆಆ...
- ಮನೆಯೇ ಗುಡಿಯಮ್ಮ
- ನನಾಗಾಗಿ ದೇವರು
- ಮನ್ನಿಸು ಚಿನ್ನ
- ಡವ ಡವ ಎಂದಿದೆ ಕೇಳು
- ಗೃಹಿಣಿಯ ಜೀವನ
ಸಂಗೀತ : ಎಂ.ರಂಗರಾವ್ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಜಾನಕಿ
ಆಆಆ... ಆಆಆ... ಆಆಆ... ಆಆಆ... ಆಆಆ...
ಮನೆಯೇ ಗುಡಿಯಮ್ಮ ಪತಿಯೇ ದೇವರಮ್ಮ
ಮನೆಯೇ ಗುಡಿಯಮ್ಮ ಪತಿಯೇ ದೇವರಮ್ಮ
ಮನೆಯೇ ಗುಡಿಯಮ್ಮ ಪತಿಯೇ ದೇವರಮ್ಮ
ದೇವರ ಮುಂದೆ ಕಿರು ನಗೆ ಎಂಬ ಜ್ಯೋತಿಯ ಬೆಳಗಮ್ಮಾ ..
ಮನೆಯೇ ಗುಡಿಯಮ್ಮ ಪತಿಯೇ ದೇವರಮ್ಮ
ಸೇವೆಯೇ ನಿನ್ನ ಉಸಿರಾಗಿರಲೀ... ಆಆಆ...
ಸೇವೆಯೇ ನಿನ್ನ ಉಸಿರಾಗಿರಲೀ ತ್ಯಾಗವೇ ಬಾಳಿನ ಪಲ್ಲವಿಯಾಗಲಿ
ಈ ಸಂಸಾರವೇ ಸುಖ ಸಾಗರವು
ಈ ಸಂಸಾರವೇ ಸುಖ ಸಾಗರವು ಎನಿಸುವ ಭಾಗ್ಯವು ನಿನದಾಗಿರಲಿ .....

ಹಾಡುವ ಕೊರಳು ಕೋಗಿಲೆದಾಯಿತು ಆಡುವ ಅಂದ ನವೀಲಿನದಾಯಿತು
ಹಾಡುವ ಕೊರಳು ಕೋಗಿಲೆದಾಯಿತು ಆಡುವ ಅಂದ ನವೀಲಿನದಾಯಿತು
ಯಾರಿಗೆ ಏನನು ಕೊಡವನು ಅವನೂ.. ....
ಯಾರಿಗೆ ಏನನು ಕೊಡವನು ಅವನೂ ಅದನೇ ಹರುಷದಿ ಸ್ವೀಕರಿಸಮ್ಮ .....
ಹಾಡುವ ಕೊರಳು ಕೋಗಿಲೆದಾಯಿತು ಆಡುವ ಅಂದ ನವೀಲಿನದಾಯಿತು
ಯಾರಿಗೆ ಏನನು ಕೊಡವನು ಅವನೂ.. ....
ಯಾರಿಗೆ ಏನನು ಕೊಡವನು ಅವನೂ ಅದನೇ ಹರುಷದಿ ಸ್ವೀಕರಿಸಮ್ಮ .....
ಮನೆಯೇ ಗುಡಿಯಮ್ಮ ಪತಿಯೇ ದೇವರಮ್ಮ
ದೇವರ ಮುಂದೆ ಕಿರು ನಗೆ ಎಂಬ ಜ್ಯೋತಿಯ ಬೆಳಗಮ್ಮಾ ..
ಮನೆಯೇ ಗುಡಿಯಮ್ಮ ಪತಿಯೇ ದೇವರಮ್ಮ
--------------------------------------------------------------------------------------------------------------------ಗೃಹಲಕ್ಷ್ಮಿ (೧೯೬೯) - ನನಗಾಗಿ ದೇವರು ಕಂದಾ
ಸಂಗೀತ : ಎಂ.ರಂಗರಾವ್ ಸಾಹಿತ್ಯ : ಚಿ.ಸದಾಶಿವಯ್ಯ ಗಾಯನ : ಎಸ್.ಜಾನಕಿ
ಹೂಂ...ಹೂಂ...ಹೂಂ...ಹೂಂ...ಹೂಂ...ಹೂಂ...ಹೂಂ...
ನನಗಾಗಿ ದೇವರು ಕಂದಾ ನಿನ್ನ ತಂದ ಇಲ್ಲಿಗೆ
ನಿನಗಾಗಿ ಬಂದಾ ನನ್ನ ಕರೆ ತಂದಾ ಅವನೇ ಈ ಮನೆಗೆ
ಅವನೇ ಈ ಮನೆಗೆ
ಆನಂದ ಮನಕೆ ವಾತ್ಸಲ್ಯ ಎದೆಗೆ ಹೂವೊಂದ ನೀಡಿದ ಈ ಮಡಿಲಿಗೇ
ಆನಂದ ಮನಕೆ ವಾತ್ಸಲ್ಯ ಎದೆಗೆ ಹೂವೊಂದ ನೀಡಿದ ಈ ಮಡಿಲಿಗೇ
ಬರಿದಾದ ಕೈಯಿಗೇ ಈ ಮುದ್ದು ಗೊಂಬೆ ಎಂದೆನ್ನಗೇ ನೀಡಿದ ಈ ಕಾಣಿಕೇ ..
ಆನಂದ ಮನಕೆ ವಾತ್ಸಲ್ಯ ಎದೆಗೆ ಹೂವೊಂದ ನೀಡಿದ ಈ ಮಡಿಲಿಗೇ
ಬರಿದಾದ ಕೈಯಿಗೇ ಈ ಮುದ್ದು ಗೊಂಬೆ ಎಂದೆನ್ನಗೇ ನೀಡಿದ ಈ ಕಾಣಿಕೇ ..
ನನಗಾಗಿ ದೇವರು ಕಂದಾ ನಿನ್ನ ತಂದ ಇಲ್ಲಿಗೆ
ನಿನಗಾಗಿ ಬಂದಾ ನನ್ನ ಕರೆ ತಂದಾ ಅವನೇ ಈ ಮನೆಗೆ
ಅವನೇ ಈ ಮನೆಗೆ
ನೀನಿರುವ ಮನೆಯು ದೇವರ ಗುಡಿಯು ನಿನ ಸೇವೆ ಬಾಳಿನ ಗುರಿಯಾಗಿದೆ
ನೀನಿರುವ ಮನೆಯು ದೇವರ ಗುಡಿಯು ನಿನ ಸೇವೆ ಬಾಳಿನ ಗುರಿಯಾಗಿದೆ
ಈ ತುಂಟ ನಗೆಯೂ ಪ್ರೇಮದ ನುಡಿಯು ನನಗಾಗಿ ನೀ ಕೊಡುವ ಸಿರಿಯಾಗಿದೆ
ನನಗಾಗಿ ದೇವರು ಕಂದಾ ನಿನ್ನ ತಂದ ಇಲ್ಲಿಗೆ
ನಿನಗಾಗಿ ಬಂದಾ ನನ್ನ ಕರೆ ತಂದಾ ಅವನೇ ಈ ಮನೆಗೆ
ಅವನೇ....
-----------------------------------------------------------------------------------------------------------------------
ಗೃಹಲಕ್ಷ್ಮಿ (೧೯೬೯) - ಮನ್ನಿಸು ಚಿನ್ನ ಮನ್ನಿಸು ರನ್ನಾ
ಸಂಗೀತ : ಎಂ.ರಂಗರಾವ್ ಸಾಹಿತ್ಯ : ವಿಜಯನಾರಸಿಂಹ ಗಾಯನ : ಪಿ.ಬಿ.ಎಸ್.
ಮನ್ನಿಸು ಚಿನ್ನ ಮನ್ನಿಸು ರನ್ನಾ ಮನ್ನಿಸು
ನನ್ನ ದುಡುಕುತ ನಿನ್ನಾಸಿಡುಕಿದ ನನ್ನ ತಪ್ಪು ಅರಿತೆನಾ...
ಬಿಸಿಲ ಮೇಲೆ ಕೋಪಗೊಂಡು ಮೊಗ್ಗು ಹಿಗ್ಗುದಿರುವುದೇ
ರಾತ್ರಿ ಕಂಡು ಮುನಿಸಿಕೊಂಡು ನಳಿನಿ ಅರಳದಿರುವುದೇ
ಕೋಪ ಬಿಡು ಕೈಯ ಕೊಡು
ಕೋಪ ಬಿಡು ಕೈಯ ಕೊಡು ನಗುತ ನಗುತ ನನ್ನ ನೋಡು
ಮನ್ನಿಸು ಚಿನ್ನ ಮನ್ನಿಸು ರನ್ನಾ ಮನ್ನಿಸು
ನನ್ನ ದುಡುಕುತ ನಿನ್ನಾ ಸಿಡುಕಿದ ನನ್ನ ತಪ್ಪು ಅರಿತೆನಾ...
ಅಹ್ಹಹ್ಹಹ್ಹಾಹೋ.. ಅಹ್ಹಹ್ಹಹ್ಹಾಹೋ..
ಬೇಡವೆಂದು ದೂರ ಹೋಗೆ ವಯಸು ಸುಮ್ಮನಿರುವುದೇ
ಎದೆಯ ತುಂಬಾ ಬಯಕೆ ತುಂಬಿ ಮಾನವ ಕಾಡದಿರುವುದೇ
ಬೇಡವೆಂದು ದೂರ ಹೋಗೆ ವಯಸು ಸುಮ್ಮನಿರುವುದೇ
ಎದೆಯ ತುಂಬಾ ಬಯಕೆ ತುಂಬಿ ಮಾನವ ಕಾಡದಿರುವುದೇ
ಓಡದಿರು ಕಾಡದಿರು
ಓಡದಿರು ಕಾಡದಿರು ನಿನ್ನ ಚೆಲುವ ಮೊಗವ ತೋರು
ಮನ್ನಿಸು ಚಿನ್ನ ಮನ್ನಿಸು ರನ್ನಾ ಮನ್ನಿಸು
ನನ್ನ ದುಡುಕುತ ನಿನ್ನಾ ಸಿಡುಕಿದ ನನ್ನ ತಪ್ಪು ಅರಿತೆನಾ...
ಕಡಲ ನೀರು ಮೇಘವಾಗಿ ಗಗನ ಸೇರಲೇನು
ಮಳೆಯಾಗಿ ನದಿಯಾಗಿ ಕಡಲ ವರಿಸದೇನು
ಕಡಲ ನೀರು ಮೇಘವಾಗಿ ಗಗನ ಸೇರಲೇನು
ಮಳೆಯಾಗಿ ನದಿಯಾಗಿ ಕಡಲ ವರಿಸದೇನು
ಕಾದಿರುವಾ.. ಇನಿಯನಲಿ..
ಕಾದಿರುವಾ.. ಇನಿಯನಲಿ.. ಇನ್ನು ನಿನಗೆ ಕೋಪವೇಕೆ
ಮನ್ನಿಸು ಚಿನ್ನ ಮನ್ನಿಸು ರನ್ನಾ ಮನ್ನಿಸು
ನನ್ನ ದುಡುಕುತ ನಿನ್ನಾ ಸಿಡುಕಿದ ನನ್ನ ತಪ್ಪು ಅರಿತೆನಾ...
ಆಹಾಹಾ... ಓಹೋಹೋ... ಆಹಾಹಾ...ಲಾಲಾಲಾಲಾಲಾ
-------------------------------------------------------------------------------------------------------------------------
ಗೃಹಲಕ್ಷ್ಮಿ (೧೯೬೯) - ಡವ ಡವ ಎಂದಿದೆ ಕೇಳು
ಸಂಗೀತ : ಎಂ.ರಂಗರಾವ್ ಸಾಹಿತ್ಯ : ವಿಜಯನಾರಸಿಂಹ ಗಾಯನ : ಪಿ.ಬಿ.ಎಸ್. ಎಸ್.ಜಾನಕಿ
ಹೆಣ್ಣು : ಅಹ್ ಹ್ ಹ್ ಹ್ ಹ್ ಹ್ ಹ್ ಹ್
ಗೃಹಲಕ್ಷ್ಮಿ (೧೯೬೯) - ಡವ ಡವ ಎಂದಿದೆ ಕೇಳು
ಸಂಗೀತ : ಎಂ.ರಂಗರಾವ್ ಸಾಹಿತ್ಯ : ವಿಜಯನಾರಸಿಂಹ ಗಾಯನ : ಪಿ.ಬಿ.ಎಸ್. ಎಸ್.ಜಾನಕಿ
ಡವ ಡವ ಎಂದಿದೆ ಕೇಳು ಇದೇನಿದು ಬಲ್ಲೆಯ ಹೇಳು
ಮೈಯ್ಯ ಪುಳುಕ ಕೈಯ್ಯ ಚಳಕ ಎಂಥ ಒಲವಿನ ಸೋಲು
ಗಂಡು : ಡವ ಡವ ಎಂದಿದೆ ಕೇಳು ಇದೇನಿದು ಬಲ್ಲೆಯ ಹೇಳು
ಮೈಯ್ಯ ಪುಳುಕ ಕೈಯ್ಯ ಚಳಕ ಎಂಥ ಒಲವಿನ ಸೋಲು
ಗಂಡು : ಡವ ಡವ ಎಂದಿದೆ ಕೇಳು ಇದೇನಿದು ಬಲ್ಲೆಯ ಹೇಳು
ಮೈಯ್ಯ ಪುಳುಕ ಕೈಯ್ಯ ಚಳಕ ಎಂಥ ಒಲವಿನ ಸೋಲು
ಹೆಣ್ಣು : ಮೊದಲ ಮಿಲನದ ಮಿಂಚಿನಲ್ಲೇ ನಿನ್ನ ಬಿಂಬದ ತುಂಟು ಹಲ್ಲೆ
ಮೊದಲ ಮಿಲನದ ಮಿಂಚಿನಲ್ಲೇ ನಿನ್ನ ಬಿಂಬದ ತುಂಟು ಹಲ್ಲೆ
ಮೊದಲ ಮಿಲನದ ಮಿಂಚಿನಲ್ಲೇ ನಿನ್ನ ಬಿಂಬದ ತುಂಟು ಹಲ್ಲೆ
ಗಂಡು : ಜನುಮ ಜನುಮದ ಆಸೆ ಎಲ್ಲೆ....
ಜನುಮ ಜನುಮದ ಆಸೆ ಎಲ್ಲೆ...ಮನಸು ಮನಸಿನ ಬೆಸುಗೆಯಲ್ಲೇ
ಗಂಡು : ಅಹ್ ಹ್ ಹ್ ಹ್ ಹ್ ಹ್ ಹ್ ಹ್
ಡವ ಡವ ಎಂದಿದೆ ಕೇಳು ಇದೇನಿದು ಬಲ್ಲೆಯ ಹೇಳು
ಮೈಯ್ಯ ಪುಳುಕ ಕೈಯ್ಯ ಚಳಕ ಎಂಥ ಒಲವಿನ ಸೋಲು
ಮೈಯ್ಯ ಪುಳುಕ ಕೈಯ್ಯ ಚಳಕ ಎಂಥ ಒಲವಿನ ಸೋಲು
ಮೀನು ಜಾಲವ ಬೀಸಿತೇನು ಬೆಸ್ತ ಕೈಸೆರೆ ಆದನೇನು
ಹೆಣ್ಣು : ಕಣ್ಣು ಮೀನು ಬೆಸ್ತ ನೀನೂ
ಕಣ್ಣು ಮೀನು ಬೆಸ್ತ ನೀನು ಪ್ರೇಮದಾ ಸೆರೆ ಚೆನ್ನು ಚೆನ್ನು ಚೆನ್ನೂ
ಹೆಣ್ಣು : ಅಹ್ ಹ್ ಹ್ ಹ್ ಹ್ ಹ್ ಹ್ ಹ್
ಡವ ಡವ ಎಂದಿದೆ ಕೇಳು ಇದೇನಿದು ಬಲ್ಲೆಯ ಹೇಳು
ಮೈಯ್ಯ ಪುಳುಕ ಕೈಯ್ಯ ಚಳಕ ಎಂಥ ಒಲವಿನ ಸೋಲು
ಇಬ್ಬರು : ಆಹ್ಹಹಾಹಾಹಾಹಾಹಾಹಾ ಓಹೋಹೋಹೊಹೋ
ಮೈಯ್ಯ ಪುಳುಕ ಕೈಯ್ಯ ಚಳಕ ಎಂಥ ಒಲವಿನ ಸೋಲು
ಇಬ್ಬರು : ಆಹ್ಹಹಾಹಾಹಾಹಾಹಾಹಾ ಓಹೋಹೋಹೊಹೋ
------------------------------------------------------------------------------------------------------------------------
ಗೃಹಲಕ್ಷ್ಮಿ (೧೯೬೯) - ಗೃಹಿಣಿಯ ಜೀವನ
ಗೃಹಲಕ್ಷ್ಮಿ (೧೯೬೯) - ಗೃಹಿಣಿಯ ಜೀವನ
ಸಂಗೀತ : ಎಂ.ರಂಗರಾವ್ ಸಾಹಿತ್ಯ : ಕಣಗಲ ಪ್ರಭಾಕರಶಾಸ್ತ್ರಿ ಗಾಯನ : ಪಿ.ಬಿ.ಎಸ್. ಎಸ್.ಜಾನಕಿ
ಗೃಹಣಿಯ ಜೀವನ ಮಹಾ ತ್ಯಾಗ ಗಂಗಾ ಅನಂತ ಸೇವಾ ಸಾಧನೆಯ ರಂಗಾ
ಮನೆಮಂದಿಯ ಚಿಂತೆಯೇ ಅವಳಿಗೇ ...
ಪತಿದೇವನ ಮನವರಿತೂ ನಡೆಯುತ...
ಪತಿ ಹೀತಕ್ಕಾಗಿ ತಾನೇ ದುಡಿಯುತಾ ಬಾಳುತಾ
ಪತಿದೇವನ ಮನವರಿತೂ ನಡೆಯುತ...
ಪತಿ ಹೀತಕ್ಕಾಗಿ ತಾನೇ ದುಡಿಯುತಾ ಬಾಳುತಾ
ಮನೆಯ ತುಂಬಾ ಸಂತೋಷವ ತುಂಬೀ
ಮನೆಯ ತುಂಬಾ ಸಂತೋಷವ ತುಂಬೀ ತನಗಾಗುವ ದಣಿವಾ.. ಮರೆಯುತ್ತ ಬಾಳುವಾ.. ಗೃಹಣಿಯ ಜೀವನ ಮಹಾ ತ್ಯಾಗ ಗಂಗಾ ಅನಂತ ಸೇವಾ ಸಾಧನೆಯ ರಂಗಾ
ಮನೆಮಂದಿಯ ಚಿಂತೆಯೇ ಅವಳಿಗೇ ...
ಪತಿಯೂ ಕೋಪದಲೀ... ಬೈಯ್ಯಲೀ ನೋಯಿಸಲೀ
ಪತಿಯೂ ಕೋಪದಲೀ... ಬೈಯ್ಯಲೀ ನೋಯಿಸಲೀ ಮನೆಯ ಕಷ್ಟವೂ ಎಷ್ಟಾದರೂ ಬರಲೀ ..
ಮನೆಯ ಕಷ್ಟವೂ ಎಷ್ಟಾದರೂ ಬರಲೀ .. ಭೂದೇವಿಯ ತೆರದಿ ಭರಿಸುತ್ತ ಬಾಳುವ
ಗೃಹಣಿಯ ಜೀವನ ಮಹಾ ತ್ಯಾಗ ಗಂಗಾ ಅನಂತ ಸೇವಾ ಸಾಧನೆಯ ರಂಗಾ
ಮನೆಮಂದಿಯ ಚಿಂತೆಯೇ ಅವಳಿಗೇ ...
------------------------------------------------------------------------------------------------------------------------
No comments:
Post a Comment