33. ಕಸ್ತೂರಿ ನಿವಾಸ (1971)




ಕಸ್ತೂರಿ ನಿವಾಸ ಚಿತ್ರದ ಹಾಡುಗಳು 
  1. ಎಲ್ಲೇ ಇರು ಹೇಗೆ ಇರು 
  2. ನೀ ಬಂದು ನಿಂತಾಗ 
  3. ಆಡೋಣ ನೀನು ನಾನು 
  4. ಆಡಿಸಿ ನೋಡು ಬೀಳಿಸಿ ನೋಡು 
  5. ಓ..ಗೆಳೆಯಾ ಈ ದಾರಿ ಮರೆತೆಯಾ 
  6. ಆಡಿಸಿದಾತ ಬೇಸರ ಮೂಡಿ ಆಟ 
ಕಸ್ತೂರಿ ನಿವಾಸ (1971) - ನೀ ಬಂದು ನಿಂತಾಗ
ಸಂಗೀತ : ಜಿ.ಕೆ.ವೆಂಕಟೇಶ್ ಸಾಹಿತ್ಯ : ಆರ್.ಏನ್.ಜಯಗೋಪಾಲ್ ಗಾಯನ : ಪಿ.ಬಿ.ಶ್ರೀನಿವಾಸ್, ಪಿ.ಸುಶೀಲ 

ಗಂಡು : ನೀ ಬಂದು ನಿಂತಾಗ ನಿಂತು ನೀ ನಕ್ಕಾಗ
           ನಕ್ಕು ನೀ ಸೆಳೆದಾಗ ಸೋತೆ ನಾನಾಗ
           ನೀ ಬಂದು (ಆಆ) ನಿಂತಾಗ (ಆಆ)ನಿಂತು (ಆಆ)ನೀ ನಕ್ಕಾಗ (ಆಆ)
           ನಕ್ಕು ನೀ (ಆಆ) ಸೆಳೆದಾಗ (ಆಆ)ಸೋತೆ (ಆಆ) ನಾನಾಗ (ಆಆಆ.. )
           (ಆಆಆಆ) ಹೂಂಹೂಂ 

ಹೆಣ್ಣು : ವಾಸಂತಿ ನಲಿದಾಗ....  ವಾಸಂತಿ ನಲಿದಾಗ ಹಸಿರುಟ್ಟು ನಗುವಾಗ
          ವನದೇವಿ ಅಡಿಮೇಲೆ ಅಡಿ ಇಟ್ಟು ಬರುವಾಗ
         ಮುಗಿಲೊಂದು ಕರೆದಾಗ ನವಿಲೊಂದು ಮೆರೆದಾಗ
         ಒಡಲಲ್ಲಿ ಹೊಸದೊಂದು ನವಜೀವ ಬಂದಾಗ
         ಕೈ ಕೈ ಸೋತಾಗ ಮನವೆರಡು ಬೆರೆತಾಗ
         ಮಿಡಿದಂತ ಹೊಸರಾಗ ಅದುವೆ ಅನುರಾಗ ಬಾರಾ
        ನೀ ಬಂದು ನಿಂತಾಗ ನಿಂತು ನೀ ನಕ್ಕಾಗ ನಕ್ಕು ನೀ ಸೆಳೆದಾಗ ಸೋತೆ ನಾನಾಗ

ಹೆಣ್ಣು : ಆಹಾ..ಆಹಾ..ಆಹಾ..ಆಹಾಹಾ..
ಗಂಡು : ಜೇನಂತ ಮಾತಲ್ಲಿ ಕುಡಿಗಣ್ಣ ಸಂಚಲ್ಲಿ ನಗುವೆಂಬ ಹೂಚೆಲ್ಲಿ ನಿಂತೆ ನೀ ಮನದಲ್ಲಿ
           ಎದುರಾದೆ ಹಗಲಲ್ಲಿ ಮರೆಯಾದೆ ಇರುಳಲ್ಲಿ ನೀ ತಂದ ನೋವಿಗೆ ಕೊನೆಯಲ್ಲಿ ಮೊದಲೆಲ್ಲಿ
           ಬಲುದೂರ ನೀ ಹೋಗೆ ನಾ ತಾಳೆ ಈ ಬೇಗೆ
          ಬಾ ಬಾರೆ ಚೆಲುವೆ ಬಾರೆ ಒಲವೆ ಬಾರ..  ಬಾರಾ...  

ಹೆಣ್ಣು : ಬಾಳೆಂಬ ಪಥದಲ್ಲಿ... ಬಾಳೆಂಬ ಪಥದಲ್ಲಿ     ಗಂಡು : ಒಲವೆಂಬ ರಥದಲ್ಲಿ
ಹೆಣ್ಣು : ಕನಸೆಲ್ಲ ನನಸಾಗಿ                                  ಗಂಡು : ನನಸೆಲ್ಲ ಸೊಗಸಾಗಿ
ಹೆಣ್ಣು : ಯುಗವೊಂದು ದಿನವಾಗಿ                          ಗಂಡು : ದಿನವೊಂದು ಛಣವಾಗಿ
ಹೆಣ್ಣು : ನಮ್ಮಾಸೆ ಹೂವಾಗಿ                                ಗಂಡು : ಇಂಪಾದ ಹಾಡಾಗಿ
ಇಬ್ಬರು : ಕಹಿಯಲ್ಲಿ ಸಿಹಿಯಲ್ಲಿ ಮಳೆಯಲ್ಲಿ ಬಿಸಿಲಲ್ಲಿ
             ಎಂದೆಂದು ಜೊತೆಯಾಗಿ ನಡೆವ ಒಂದಾಗಿ ಬಾರ ಬಾರ
             ನೀ ಬಂದು ನಿಂತಾಗ ನಿಂತು ನೀ ನಕ್ಕಾಗ ನಕ್ಕು ನೀ ಸೆಳೆದಾಗ ಸೋತೆ ನಾನಾಗ
--------------------------------------------------------------------------------------------------------------------------


ಕಸ್ತೂರಿ ನಿವಾಸ (1971) - ಆಡಿಸಿದಾತ ಬೇಸರ ಮೂಡಿ ಆಟ ಮುಗಿಸಿದ... (ಶೋಕ ಗೀತೆ)
ಸಾಹಿತ್ಯ : ಚಿ.ಉದಯಶಂಕರ  ಸಂಗೀತ: ಜಿ.ಕೆ.ವೆಂಕಟೇಶ್   ಗಾಯನ: ಜಿ.ಕೆ.ವೆಂಕಟೇಶ್


ಆಡಿಸಿದಾತ ಬೇಸರ ಮೂಡಿ ಆಟ ಮುಗಿಸಿದಾ
ಸೂತ್ರವ ಹರಿದ ಬೊಂಬೆಯ ಮುರಿದ ಮಣ್ಣಾಗಿಸಿದಾ...

ಆಡಿಸಿದಾತ ಬೇಸರ ಮೂಡಿ ಆಟ ಮುಗಿಸಿದಾ
ಸೂತ್ರವ ಹರಿದ ಬೊಂಬೆಯ ಮುರಿದ ಮಣ್ಣಾಗಿಸಿದಾ...
ಕಂಬನಿಧಾರೆ ಹರಿಸಲು ನನ್ನ ಜೀವ ಉಳಿಸಿದ ನನ್ನ ಜೀವ ಉಳಿಸಿದ

ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು
ಯಾರೇ ಬರಲಿ ಮನಸಿಗೆ ಏಂದು ಶಾಂತಿ ದೊರಕದೂ..
ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು
ಯಾರೇ ಬರಲಿ ಮನಸಿಗೆ ಏಂದು ಶಾಂತಿ ದೊರಕದೂ..
ಕಣ್ಣೀರಿಡುವಾ ನನ್ನೀ ಕಥೆಯೂ ಏಕೋ ಮುಗಿಯದು, ಅಯ್ಯೋ ಏಕೋ ಮುಗಿಯದು

--------------------------------------------------------------------------------------------------------------------------

ಕಸ್ತೂರಿ ನಿವಾಸ (1971) - ಆಡಿಸಿ ನೋಡು ಬೀಳಿಸಿ ನೋಡು
ಸಾಹಿತ್ಯ : ಚಿ.ಉದಯಶಂಕರ ಸಂಗೀತ: ಜಿ.ಕೆ.ವೆಂಕಟೇಶ್  ಗಾಯನ: ಪಿ.ಬಿ.ಎಸ್


ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು
ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು
ಏನೆ ಬರಲಿ ಯಾರಿಗು ಸೋತು ತಲೆಯ ಬಾಗದು
ಎಂದಿಗು ನಾನು ಹೀಗೆ ಇರುವೇ ಎಂದು ನಗುವುದು, ಹೀಗೆ ನಗುತಲಿರುವುದು
ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು

ಗುಡಿಸಲೆ ಆಗಲಿ ಅರಮನೆಯಾಗಲಿ ಆಟ ನಿಲ್ಲದೂ..
ಹಿರಿಯರೆ ಇರಲಿ ಕಿರಿಯರೆ ಬರಲಿ ಭೇದ ತೋರದು..
ಗುಡಿಸಲೆ ಆಗಲಿ ಅರಮನೆಯಾಗಲಿ ಆಟ ನಿಲ್ಲದೂ..
ಹಿರಿಯರೆ ಇರಲಿ ಕಿರಿಯರೆ ಬರಲಿ ಭೇದ ತೋರದು..
ಕಷ್ಟವೊ ಸುಖವೊ ಅಳುಕದೆ ಆಡಿ ತೂಗುತಿರಿವುದೂ, ತೂಗುತಿರಿವುದೂ
ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು

ಮೈಯನೆ ಹಿಂಡಿ ನೊಂದರು ಕಬ್ಬು ಸಿಹಿಯ ಕೊಡುವುದೂ
ತೇಯುತಲಿದ್ದರು ಗಂಧದ ಪರಿಮಳ ತುಂಬಿ ಬರುವುದು
ಮೈಯನೆ ಹಿಂಡಿ ನೊಂದರು ಕಬ್ಬು ಸಿಹಿಯ ಕೊಡುವುದೂ
ತೇಯುತಲಿದ್ದರು ಗಂಧದ ಪರಿಮಳ ತುಂಬಿ ಬರುವುದು
ತಾನೇ ಉರಿದರು ದೀಪವು ಮನೆಗೆ ಬೆಳಕ ತರುವುದು, ದೀಪ ಬೆಳಕ ತರುವುದು
ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು

ಆಡಿಸುವಾತನ ಕೈಚಳಕದಲಿ ಎಲ್ಲ ಅಡಗಿದೇ....
ಅತನ ಕರುಣೆಯೆ ಜೀವವ ತುಂಬಿ ಕುಣಿಸಿ ನಲಿಸಿದೇ
ಆಡಿಸುವಾತನ ಕೈಚಳಕದಲಿ ಎಲ್ಲ ಅಡಗಿದೇ....
ಅತನ ಕರುಣೆಯೆ ಜೀವವ ತುಂಬಿ ಕುಣಿಸಿ ನಲಿಸಿದೇ
ಆ ಕೈ ಸೋತರೆ ಬೊಂಬೆಯ ಕಥೆಯು ಕೊನೆಯಾಗುವುದೇ?, ಕೊನೆಯಾಗುವುದೇ?
ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು
ಏನೆ ಬರಲಿ ಯಾರಿಗು ಸೋತು ತಲೆಯ ಬಾಗದು
ಎಂದಿಗು ನಾನು ಹೀಗೆ ಇರುವೇ ಎಂದು ನಗುವುದು, ಹೀಗೆ ನಗುತಲಿರುವುದು
ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು
--------------------------------------------------------------------------------------------------------------------------

ಕಸ್ತೂರಿ ನಿವಾಸ (1971) - ಓ..... ಗೆಳೆಯ ಈ ದಾರಿ ಮರೆತೆಯಾ
ಸಾಹಿತ್ಯ :ಆರ್ ಆರ್.ಏನ್.ಜಯಗೋಪಾಲ್ ಸಂಗೀತ :ಜಿ.ಕೆ.ವೆಂಕಟೇಶ್ ಗಾಯನ : ಎಲ್.ಆರ್.ಈಶ್ವರಿ


ಓ..... ಗೆಳೆಯ ಈ ದಾರಿ ಮರೆತೆಯಾ
ಇಲ್ಲಿ ನಾ ಕಾದಿಹೆ ಅರಿತೆಯಾ ಬಾ ಬೇಗ ಮನದಿನಿಯಾ
ಓ..... ಗೆಳೆಯ ಈ ದಾರಿ ಮರೆತೆಯಾ
ಇಲ್ಲಿ ನಾ ಕಾದಿಹೆ ಅರಿತೆಯಾ ಬಾ ಬೇಗ ಮನದಿನಿಯಾ

ಬಳುಕುವ ಹೆಣ್ಣಿದು ಕುಸುಮ ಕೋಮಲ ಹೊಳೆಯುವ ಕಣ್ಣಿದು ಚಪಲ ಚಂಚಲ
ಬಳುಕುವ ಹೆಣ್ಣಿದು ಕುಸುಮ ಕೋಮಲ ಹೊಳೆಯುವ ಕಣ್ಣಿದು ಚಪಲ ಚಂಚಲ
ನಿನ್ನಾಸೆಯೆಲ್ಲ ಪೂರೈಸೆ ಬಲ್ಲ ನನ್ನಲ್ಲಿ ಬೆರೆ ಜಗವ ಮರೆ ಮನದಿನಿಯ... ಓ...
ಓ..... ಗೆಳೆಯ ಈ ದಾರಿ ಮರೆತೆಯಾ
ಇಲ್ಲಿ ನಾ ಕಾದಿಹೆ ಅರಿತೆಯಾ ಬಾ ಬೇಗ ಮನದಿನಿಯಾ

ಮುಗಿಯದ ಮಾತನು ಮುಗಿಸಲೆಂದು ಬಾ ಮರೆಯದ ಅನುಭವ ಪಡೆಯಲೆಂದು ಬಾ
ಮುಗಿಯದ ಮಾತನು ಮುಗಿಸಲೆಂದು ಬಾ ಮರೆಯದ ಅನುಭವ ಪಡೆಯಲೆಂದು ಬಾ
ನಿಧಾನವೇಕೆ ವಿನೋದ ಬೇಕೆ ಈ ಸಮಯಾ ಇದೋ ಸರಸಮಯ ಮನದಿನಿಯ... ಓ...
ಓ..... ಗೆಳೆಯ ಈ ದಾರಿ ಮರೆತೆಯಾ
ಇಲ್ಲಿ ನಾ ಕಾದಿಹೆ ಅರಿತೆಯಾ ಬಾ ಬೇಗ ಮನದಿನಿಯಾ
----------------------------------------------------------------------------------------------------------------------

ಕಸ್ತೂರಿ ನಿವಾಸ - ಎಲ್ಲೇ ಇರು ಹೇಗೇ ಇರು
ಸಂಗೀತ : ಜಿ.ಕೆ.ವೆಂಕಟೇಶ್ 
ಸಾಹಿತ್ಯ : ಚಿ. ಉದಯಶಂಕರ್ ಹಾಡಿರುವವರು: ಪಿ.ಸುಶೀಲ 

ಎಲ್ಲೇ ಇರು ಹೇಗೇ ಇರು ಎಂದೆಂದು ಮನದಲ್ಲಿ ನೀ ತುಂಬಿರು
ಎಲ್ಲೇ ಇರು ಹೇಗೇ ಇರು ಎಂದೆಂದು ಮನದಲ್ಲಿ ನೀ ತುಂಬಿರು 

ಬಾಳೆಂಬ ಗುಡಿಗೆ ನೀ ದೇವನಾದೆ ಕರುಣಾಳು ನೀನು ಆಧಾರವಾದೆ
ಬಾಳೆಂಬ ಗುಡಿಗೆ ನೀ ದೇವನಾದೆ ಕರುಣಾಳು ನೀನು ಆಧಾರವಾದೆ
ನಾ ಬೇಡಲಾರೆ ವರವೇನನೂ ನೀ ನೀಡು ಸಾಕು ನಗೆಯೊಂದನು 
ಎಲ್ಲೇ ಇರು ಹೇಗೇ ಇರು ಎಂದೆಂದು ಮನದಲ್ಲಿ ನೀ ತುಂಬಿರು 

ನನ್ನಾಸೆ ನೂರು ಹೂವಾಗಿ ನಗಲು ಹೂಮಾಲೆ ಮಾಡಿ ನಿನಗೆಂದೆ ತರಲು
ನನ್ನಾಸೆ ನೂರು ಹೂವಾಗಿ ನಗಲು ಹೂಮಾಲೆ ಮಾಡಿ ನಿನಗೆಂದೆ ತರಲು
ಕಣ್ತುಂಬ ಕಂಡೆ ಆ ರೂಪವ ಬೆಳಕಾಗಿ ಬಂದ ಆ ದೀಪವ 
ಎಲ್ಲೇ ಇರು ಹೇಗೇ ಇರು ಎಂದೆಂದು ಮನದಲ್ಲಿ ನೀ ತುಂಬಿರು
ಎಲ್ಲೇ ಇರು ಹೇಗೇ ಇರು ಎಂದೆಂದು ಮನದಲ್ಲಿ ನೀ ತುಂಬಿರು
-------------------------------------------------------------------------------------------------------------------------

ಕಸ್ತೂರಿ ನಿವಾಸ (೧೯೭೧) - ಆಡೋಣ ನೀನು ನಾನು, ಎನ್ನಾ ಆಸೆ ತಾರೆ ನೀನು
ರಚನೆ: ವಿಜಯನಾರಸಿಂಹ  ಸಂಗೀತ: ಜಿ. ಕೆ. ವೆಂಕಟೇಶ್   ಗಾಯಕ: ಪಿ. ಬಿ. ಶ್ರೀನಿವಾಸ್,

ಗಂಡು : ಆಡೋಣ ನೀನು ನಾನು, ಎನ್ನಾ ಆಸೆ ತಾರೆ ನೀನು
            ನೋಡಿ ನಿನ್ನ ಈ ಅಂದ ಚಂದ, ಚಂದಾಮಾಮ ನಾಚಿ ನಿಂದ
            ಆಡೋಣ ನೀನು ನಾನು, ಎನ್ನಾ ಆಸೆ ತಾರೆ ನೀನು
            ನೋಡಿ ನಿನ್ನ ಈ ಅಂದ ಚಂದ, ಚಂದಾಮಾಮ ನಾಚಿ ನಿಂದ
            ಆ..  ಚಂದಾಮಾಮ ನಾಚಿ ನಿಂದ

ಗಂಡು : ಹೂಂಹೂಂಹೂಂ..   ಕಣ್ಣಾ ಗೊಂಬೆ ನೀನಾದೆ, ನಿನ್ನಾ ಕೈಗೊಂಬೆ ನಾನಾದೆ
            ಕಣ್ಣಾ ಗೊಂಬೆ ನೀನಾದೆ, ನಿನ್ನಾ ಕೈಗೊಂಬೆ ನಾನಾದೆ 
            ನಿನ್ನಂದ ಮುದ್ದಾಡಲೆಂದೇ, ಬಂದಿದೆ ಕಣ್ಣಲ್ಲಿ ನಿದ್ದೆ
            ಎನ್ನೆದೆ ನೀ ಮೀಟಿ ಬಂದೆ, ಬಾಳಿನ ಬಂಧನ ನೀ ತಂದೆ
            ಆಡೋಣ ನೀನು ನಾನು, ಎನ್ನಾ ಆಸೆ ತಾರೆ ನೀನು
           ನೋಡಿ ನಿನ್ನ ಈ ಅಂದ ಚಂದ, ಆ ಚಂದಾಮಾಮ ನಾಚಿ ನಿಂದ

ಗಂಡು : ಇಲ್ಲೀ ಚೆಲುವಾಗಿ ನಗುವೆ, ಅಲ್ಲಿ ಕರುಳನ್ನೆ ಮಿಡಿವೆ
            ಹಾಗು ಹೀಗೂ ಸೆಳೆವೆ, ನಾನಿನ್ನ ಕೈಗೊಂಬೆ ಅಲ್ಲವೆ
            ಇಲ್ಲೀ ಚೆಲುವಾಗಿ ನಗುವೆ, ಅಲ್ಲಿ ಕರುಳನ್ನೆ ಮಿಡಿವೆ
            ಹಾಗು ಹೀಗೂ ಸೆಳೆವೆ, ನಾನಿನ್ನ ಕೈಗೊಂಬೆ ಅಲ್ಲವೆ
          ನೀ ಎನ್ನ ಉಸಿರಾದೆ ಮಗುವೆ, ದೇವರ ನಿನ್ನಲ್ಲಿ ಕಾಣುವೆ
          ಆಡೋಣ ನೀನು ನಾನು, ಎನ್ನಾ ಆಸೆ ತಾರೆ ನೀನು
          ನೋಡಿ ನಿನ್ನ ಈ ಅಂದ ಚಂದ, ಆ ಚಂದಾಮಾಮ ನಾಚಿ ನಿಂದ
------------------------------------------------------------------------------------------------------------------------

No comments:

Post a Comment