660. ಮಾನವ ದಾನವ (1985)

ಮಾನವ ದಾನವ ಚಲನಚಿತ್ರದ ಹಾಡುಗಳು 
  1. ಈ ಸುದಿನ ನಿನ್ನ ಜನುಮದಿನ  ಸಂತೋಷದ ಶುಭ ಸುದಿನ
  2. ಮೆಲ್ಲಗೆ ಮೆಲ್ಲಗೆ, ಮೆಲ್ಲಗೆ ಮೆಲ್ಲಗೆ ಬಾರಮ್ಮ
  3. ಗುಡ್ ಮಾರ್ನಿಂಗ್ ಶುಭದಿಂ ಸುಪ್ರಭಾತ
  4. ಸರಿಗಮ ನಮಗೇ ಬೇಕಮ್ಮಾ 
  5. ಬಾ ಬಾ ಈ ಮೈಯ್ಯ ಬೆಂಕಿ ಆರದು 
ಮಾನವ ದಾನವ (೧೯೮೫) - ಈ ಸುದಿನ ನಿನ್ನ ಜನುಮದಿನ  ಸಂತೋಷದ ಶುಭ ಸುದಿನ
ಸಂಗೀತ: ರಮೇಶ್ ನಾಯ್ಡು ಸಾಹಿತ್ಯ: ಆರ್.ಎನ್.ಜಯಗೋಪಾಲ್ ಹಾಡಿದವರು: ಎಸ್.ಪಿ.ಬಿ.

ಗಂಡು : ಈ ಸುದಿನ ನಿನ್ನ ಜನುಮದಿನ  ಸಂತೋಷದ ಶುಭ ಸುದಿನ
            ಈ ಸುದಿನ ನಿನ್ನ ಜನುಮದಿನ
            ಹಳೆಯದು ಮರೆಯಲಿ ಹೊಸತಿನಲಿ ಈ ಜೀವನ ನಲಿಯಲಿ ಹರುಷದಲಿ
ಮಕ್ಕಳು : ಈ ಸುದಿನ ನಿನ್ನ ಜನುಮದಿನ  ಸಂತೋಷದ ಶುಭ ಸುದಿನ
            ಈ ಸುದಿನ ನಿನ್ನ ಜನುಮದಿನ

ಗಂಡು : ನಿಮ್ಮಯ ಪ್ರೀತಿ ಹೂವಿನ ರೀತಿ ಅಂಧಗೆ ಕಣ್ಣನು ತೆರೆಸುವ ಜ್ಯೋತಿ
           ನಿಮ್ಮಯ ಪ್ರೀತಿ ಹೂವಿನ ರೀತಿ ಅಂಧಗೆ ಕಣ್ಣನು ತೆರೆಸುವ ಜ್ಯೋತಿ
           ಕಲ್ಲಿನ ಮನಸನು ಕರಗಿಸೊ ಕುಲುಮೆ  ಪಾಪವ ತೊಳೆವುದು ಪ್ರೀತಿಯ ಚಿಲುಮೆ
ಮಕ್ಕಳು : ಈ ಸುದಿನ ನಿನ್ನ ಜನುಮದಿನ  ಸಂತೋಷದ ಶುಭ ಸುದಿನ
            ಈ ಸುದಿನ ನಿನ್ನ ಜನುಮದಿನ

ಗಂಡು : ಪ್ರೀತಿಯು ಇಲ್ಲದ ಬಾಳಿನ ಹಾಡು ದೇವರು ಇಲ್ಲದ ಗುಡಿಯದು ನೋಡು
            ಪ್ರೀತಿಯು ಇಲ್ಲದ ಬಾಳಿನ ಹಾಡು ದೇವರು ಇಲ್ಲದ ಗುಡಿಯದು ನೋಡು
           ನಿಮ್ಮನು ನೀಡಿತು ದೈವವು ನನಗೆ ನನ್ನಯ ಪ್ರಾಣವು ಮೀಸಲು ನಿಮಗೆ
           ಈ ಸುದಿನ ನಿನ್ನ ಜನುಮದಿನ  ಸಂತೋಷದ ಶುಭ ಸುದಿನ
           ಈ ಸುದಿನ ನಿನ್ನ ಜನುಮದಿನ
          ಹಳೆಯದು ಮರೆಯಲಿ ಹೊಸತಿನಲಿ ಈ ಜೀವನ ನಲಿಯಲಿ ಹರುಷದಲಿ
ಮಕ್ಕಳು : ಈ ಸುದಿನ ನಿನ್ನ ಜನುಮದಿನ  ಸಂತೋಷದ ಶುಭ ಸುದಿನ
ಗಂಡು :  ಈ ಸುದಿನ ನಿನ್ನ ಜನುಮದಿನ  ಸಂತೋಷದ ಶುಭ ಸುದಿನ
ಎಲ್ಲರು : ಈ ಸುದಿನ ನಿನ್ನ ಜನುಮದಿನ  ಲಾಲಾ ಲಲ ಲಲ್ಲಲ್ಲಾಲ
            ಈ ಸುದಿನ ನಿನ್ನ ಜನುಮದಿನ
----------------------------------------------------------------------------------------------------------------------

ಮಾನವ ದಾನವ (೧೯೮೫) - ಮೆಲ್ಲಗೆ ಮೆಲ್ಲಗೆ, ಮೆಲ್ಲಗೆ ಮೆಲ್ಲಗೆ ಬಾರಮ್ಮ 
ಸಂಗೀತ: ರಮೇಶ್ ನಾಯ್ಡು ಸಾಹಿತ್ಯ: ಆರ್.ಎನ್.ಜಯಗೋಪಾಲ್   ಹಾಡಿದವರು: ಎಸ್.ಪಿ.ಬಿ.

ಮೆಲ್ಲಗೆ ಮೆಲ್ಲಗೆ, ಮೆಲ್ಲಗೆ ಮೆಲ್ಲಗೆ ಬಾರಮ್ಮ ನಿದಿರಾ ದೇವಿಯೆ ಬಾರಮ್ಮ
ಮಲ್ಲಿಗೆ ಹೂವಿನ ಕಂಗಳಿಗೆ ಹಾಯಾದ ನಿದಿರೆಯ ತಾರಮ್ಮ
ತಾಯಿಯ ಪ್ರೇಮವ ತಿಳಿದಿಲ್ಲ ಇವರಿಗೆ ಮಾತೆಯ ಮಡಿಲ ಸುಖವಿಲ್ಲ
ತಾಯಿಯ ಪ್ರೇಮವ ತಿಳಿದಿಲ್ಲ ಇವರಿಗೆ ಮಾತೆಯ ಮಡಿಲ ಸುಖವಿಲ್ಲ
ಆ ತಾಯಿ ನೀನಾಗಬೇಕು ಆ ಪ್ರೀತಿ ನೀ ತೋರಬೇಕು
ಮೆಲ್ಲಗೆ ಮೆಲ್ಲಗೆ ಬಾರಮ್ಮ  ನಿದಿರಾ ದೇವಿಯೆ ಬಾರಮ್ಮ
ಮಲ್ಲಿಗೆ ಹೂವಿನ ಕಂಗಳಿಗೆ ಹಾಯಾದ ನಿದಿರೆಯ ತಾರಮ್ಮ

ಹಾಲಿನ ಮನಸಿನ ಮಕ್ಕಳಿಗೆ ನಗುವೋ ಅಳುವೋ ಅರಘಳಿಗೆ
ಹಾಲಿನ ಮನಸಿನ ಮಕ್ಕಳಿಗೆ ನಗುವೋ ಅಳುವೋ ಅರಘಳಿಗೆ
ಅವರಂತೆ ನಾನಾಗಬೇಕು ಈ ಚಿಂತೆ ನಾ ನೀಗಬೇಕು
ಮೆಲ್ಲಗೆ ಮೆಲ್ಲಗೆ ಬಾರಮ್ಮ  ನಿದಿರಾ ದೇವಿಯೆ ಬಾರಮ್ಮ
ಮಲ್ಲಿಗೆ ಹೂವಿನ ಕಂಗಳಿಗೆ  ಹಾಯಾದ ನಿದಿರೆಯ ತಾರಮ್ಮ

ಮನುಜಗೆ ಶಿಕ್ಷೆಯ ನೀ ಕೊಟ್ಟೆ ಅಂಗೈ ಹೃದಯವ ನೀ ಇಟ್ಟೆ
ಮನುಜಗೆ ಶಿಕ್ಷೆಯ ನೀ ಕೊಟ್ಟೆ ಅಂಗೈ ಹೃದಯವ ನೀ ಇಟ್ಟೆ
ಮರೆಯದು ನೆನಪುಗಳೆಲ್ಲಿ ಮನಸಿಗೆ ನೆಮ್ಮದಿ ಇನ್ನೆಲ್ಲಿ
ಮೆಲ್ಲಗೆ ಮೆಲ್ಲಗೆ ಬಾರಮ್ಮ  ನಿದಿರಾ ದೇವಿಯೆ ಬಾರಮ್ಮ
ಮಲ್ಲಿಗೆ ಹೂವಿನ ಕಂಗಳಿಗೆ  ಹಾಯಾದ ನಿದಿರೆಯ ತಾರಮ್ಮ
ತಾಯಿಯ ಪ್ರೇಮವ ತಿಳಿದಿಲ್ಲ ಇವರಿಗೆ ಮಾತೆಯ ಮಡಿಲ ಸುಖವಿಲ್ಲ
ತಾಯಿಯ ಪ್ರೇಮವ ತಿಳಿದಿಲ್ಲ  ಇವರಿಗೆ ಮಾತೆಯ ಮಡಿಲ ಸುಖವಿಲ್ಲ
ಆ ತಾಯಿ ನೀನಾಗಬೇಕು  ಆ ಪ್ರೀತಿ ನೀ ತೋರಬೇಕು
ಮೆಲ್ಲಗೆ ಮೆಲ್ಲಗೆ ಬಾರಮ್ಮ  ನಿದಿರಾ ದೇವಿಯೆ ಬಾರಮ್ಮ
ಮಲ್ಲಿಗೆ ಹೂವಿನ ಕಂಗಳಿಗೆ  ಹಾಯಾದ ನಿದಿರೆಯ ತಾರಮ್ಮ
------------------------------------------------------------------------------------------------------------------------

ಮಾನವ ದಾನವ (೧೯೮೫) - ಗುಡ್ ಮಾರ್ನಿಂಗ್ ಶುಭದಿಂ ಸುಪ್ರಭಾತ
ಸಂಗೀತ: ರಮೇಶ್ ನಾಯ್ಡು ಸಾಹಿತ್ಯ: ಆರ್.ಎನ್.ಜಯಗೋಪಾಲ್  ಗಾಯನ : ಎಸ್.ಪಿ.ಬಿ. ಮತ್ತು ಪಿ. ಸುಶೀಲ 

ಗಂಡು : ಗುಡ್ ಮಾರ್ನಿಂಗ್ ಶುಭದಿಂ ಸುಪ್ರಭಾತ
            ಗುಡ್ ಮಾರ್ನಿಂಗ್ ಶುಭದಿಂ ಸುಪ್ರಭಾತ
            ಓ ಡಾರ್ಲಿಂಗ್ ಓ ಪ್ರೇಮಿ ಪ್ರೇಮ ಪ್ರಭಾತ ಪ್ರೇಮ್ ಪ್ರಭಾತ
           ನೀನಾದೆ ಬಾಳಿನಲಿ ಪ್ರಿಯ ಸಂಕೇತ ನೀ ತಂದೆ ಹೊಸದೊಂದು ನಗುವಿನ ಸಂಗೀತ
ಹೆಣ್ಣು :  ಗುಡ್ ಮಾರ್ನಿಂಗ್ ಶುಭದಿಂ ಸುಪ್ರಭಾತ
           ಗುಡ್ ಮಾರ್ನಿಂಗ್ ಶುಭದಿಂ ಸುಪ್ರಭಾತ
           ಓ ಡಾರ್ಲಿಂಗ್ ಓ ಪ್ರೇಮಿ ಪ್ರೇಮ ಪ್ರಭಾತ ಪ್ರೇಮ್ ಪ್ರಭಾತ
           ನೀನಾದೆ ಬಾಳಿನಲಿ ಪ್ರಿಯ ಸಂಕೇತ ನೀ ತಂದೆ ಹೊಸದೊಂದು ನಗುವಿನ ಸಂಗೀತ
ಗಂಡು : ಗುಡ್ ಮಾರ್ನಿಂಗ್ ಶುಭದಿಂ ಸುಪ್ರಭಾತ

ಗಂಡು : ಯೂ ನೋ ಸಂಥಿಂಗ್ (ಹೂಂ ) ಮ್ಯಾರೇಜಿಸ್ ಸೋ ಮೇಡ್ ಇನ್ ಹ್ಯಾವನ್
           ಮದುವೆಯು ಸ್ವರ್ಗದಲ್ಲಿ ಆ ಮಾತು ಅಂದು ಸ್ವರ್ಗವ ಭೂಮಿಯಲಿ ನೀ ತಂದೆ ಇಂದು
ಹೆಣ್ಣು : ಪ್ರೀತಿಯ ತುಂಬಿರಲು ಮನೆಯೆಲ್ಲ ಸ್ವರ್ಗ ತೊಳದು ಬಳಸಿರಲು ನನಗಿಲ್ಲೆ ಸ್ವರ್ಗ
ಗಂಡು : ಮಮತೆಯ ಮಹಲಿಗೆ ಮಹಾರಾಣಿಯಾದೆ
ಹೆಣ್ಣು : ನನ್ನೆದೆ ಗುಡಿಯಲ್ಲಿ ನೀ ದೇವರಾದೆ... 
          ಗುಡ್ ಮಾರ್ನಿಂಗ್ ಶುಭದಿಂ ಸುಪ್ರಭಾತ
ಗಂಡು :     ಓ ಡಾರ್ಲಿಂಗ್             ಹೆಣ್ಣು : ಓ ಪ್ರೇಮಿ 
ಗಂಡು : ಪ್ರೇಮ ಪ್ರಭಾತ              ಹೆಣ್ಣು : ಪ್ರೇಮ್ ಪ್ರಭಾತ
ಗಂಡು :  ಗುಡ್ ಮಾರ್ನಿಂಗ್          ಹೆಣ್ಣು : ಶುಭದಿಂ 
ಗಂಡು : ಸುಪ್ರಭಾತ

ಗಂಡು : ತಾಳಿಯೂ ಬಂದ ದಿನ ಈ  ತಾಯಿಯಾದೆ ಕೋಮಲ ಕಂದನಿಗೆ ನೀ ಪ್ರೀತಿ ತಂದೆ
ಹೆಣ್ಣು : ತಾಳಿಯ ಭಾಗ್ಯವನು ನಿನ್ನಿಂದ ಪಡೆದೆ ಕಣ್ಮಣಿ ಮಕ್ಕಳನು ಮಡಿಲಲ್ಲಿ ಪಡೆದೆ
ಗಂಡು : ನಿನ್ನಯ ಒಲವಲಿ  ಬೆಳೆದಂಥ ಹೂವು
ಹೆಣ್ಣು : ಕಾಣುವ ಅವರಲ್ಲಿ ಸುಖವೆಲ್ಲ ನಾವು
ಗಂಡು : ಗುಡ್ ಮಾರ್ನಿಂಗ್ ಶುಭದಿಂ ಸುಪ್ರಭಾತ
ಹೆಣ್ಣು  :  ಓ ಡಾರ್ಲಿಂಗ್  ಓ ಪ್ರೇಮಿ ಪ್ರೇಮ ಪ್ರಭಾತ  ಪ್ರೇಮ್ ಪ್ರಭಾತ
           ಗುಡ್ ಮಾರ್ನಿಂಗ್ ಶುಭದಿಂ ಸುಪ್ರಭಾತ
ಗಂಡು :  ಓ ಡಾರ್ಲಿಂಗ್  ಓ ಪ್ರೇಮಿ ಪ್ರೇಮ ಪ್ರಭಾತ  ಪ್ರೇಮ್ ಪ್ರಭಾತ
ಇಬ್ಬರು : ಗುಡ್ ಮಾರ್ನಿಂಗ್  ಶುಭದಿಂ  ಸುಪ್ರಭಾತ
-----------------------------------------------------------------------------------------------------------------------

ಮಾನವ ದಾನವ (೧೯೮೫) - ಸರಿಗಮ ನಮಗೇ ಬೇಕಮ್ಮಾ
ಸಂಗೀತ: ರಮೇಶ್ ನಾಯ್ಡು ಸಾಹಿತ್ಯ: ಆರ್.ಎನ್.ಜಯಗೋಪಾಲ್ ಗಾಯನ : ಎಸ್.ಪಿ.ಪಲ್ಲವಿ, ಎಸ್.ಪಿ.ವಸಂತಲಕ್ಷ್ಮಿ .

ಮಕ್ಕಳು : ಸರಿಕ್ಕಕ್ಕಮ ನಮಗೇ ಬೇಕಮ್ಮಾ ನಮಗೇ ನೀವೂ ನಮಗೇ ಬೇಕಮ್ಮಾ
              ಅಮ್ಮಾ ಇಲ್ಲದ ಮಕ್ಕಳು ನಾವೂ ಅಮ್ಮಾ ಬೇಕಮ್ಮಾ ನೀವೇ ಆಗಿ ನಮ್ಮಮ್ಮಾ
              ನೀವೇ ಆಗಿ ನಮ್ಮಮ್ಮಾ
              ಸರಿಗ್ಗಗ್ಗಮ ನಮಗೇ ಬೇಕಮ್ಮಾ ನೀವೂ ನಮಗೇ ಬೇಕಮ್ಮಾ
              ಅಮ್ಮಾ ಇಲ್ಲದ ಮಕ್ಕಳು ನಾವೂ ಅಮ್ಮಾ ಬೇಕಮ್ಮಾ ನೀವೇ ಆಗಿ ನಮ್ಮಮ್ಮಾ
              ನೀವೇ ಆಗಿ ನಮ್ಮಮ್ಮಾ

ಮಕ್ಕಳು : ಅಮ್ಮಾ ಇಲ್ಲದಾ ಮನೆಯಲೀ ಬೆಳಕೇ ಇಲ್ಲಮ್ಮಾ ಅಮ್ಮಾ ಇಲ್ಲದಾ ಜೀವನದಲ್ಲಿ ನಗುವೇ ಇಲ್ಲಮ್ಮಾ
              ಅಮ್ಮಾ ಇಲ್ಲದಾ ಮನೆಯಲೀ ಬೆಳಕೇ ಇಲ್ಲಮ್ಮಾ ಅಮ್ಮಾ ಇಲ್ಲದಾ ಜೀವನದಲ್ಲಿ ನಗುವೇ ಇಲ್ಲಮ್ಮಾ
              ಅಮ್ಮನ ಹಾಗೇ ಇರುವಿರಿ ನೀವೂ... ಅಮ್ಮನ ಹಾಗೇ ನಗುವಿರಿ ನೀವೂ
              ಅಮ್ಮನ ಹಾಗೇ ಇರುವಿರಿ ನೀವೂ... ಅಮ್ಮನ ಹಾಗೇ ನಗುವಿರಿ ನೀವೂ
              ಪಾಠ ನಮಗೇ ಹೇಳಿ ಕೊಡಲೂ ಅಮ್ಮ ಬೇಕಮ್ಮಾ ನೀವೇ ಆಗಿ ನಮ್ಮಮ್ಮಾ
              ಅಮ್ಮ ಬೇಕಮ್ಮಾ ನೀವೇ ಆಗಿ ನಮ್ಮಮ್ಮಾ
              ಸರಿಗ್ಗಗ್ಗಮ ನಮಗೇ ಬೇಕಮ್ಮಾ ನೀವೂ ನಮಗೇ ಬೇಕಮ್ಮಾ
              ಅಮ್ಮಾ ಇಲ್ಲದ ಮಕ್ಕಳು ನಾವೂ ಅಮ್ಮಾ ಬೇಕಮ್ಮಾ ನೀವೇ ಆಗಿ ನಮ್ಮಮ್ಮಾ
              ನೀವೇ ಆಗಿ ನಮ್ಮಮ್ಮಾ

ಮಕ್ಕಳು : ಪ್ರೀತಿ ಪ್ರೇಮ ತೋರುವಂಥ ಅಮ್ಮ ನೀನಮ್ಮಾ
              ನೋವಾದಾಗ ಕಣ್ಣೀರ ಒರೆಸುವಾ ಕೈಗಳೇ ನೀನಮ್ಮಾ
              ಪ್ರೀತಿ ಪ್ರೇಮ ತೋರುವಂಥ ಅಮ್ಮ ನೀನಮ್ಮಾ
              ನೋವಾದಾಗ ಕಣ್ಣೀರ ಒರೆಸುವಾ ಕೈಗಳೇ ನೀನಮ್ಮಾ
              ದೇವರ ದೀಪ ಹಚ್ಚುವಂಥ .. ಅಪ್ಪನ ಗಾಡಿ ತಳ್ಳುವಂಥ
              ದೇವರ ದೀಪ ಹಚ್ಚುವಂಥ .. ಅಪ್ಪನ ಗಾಡಿ ತಳ್ಳುವಂಥ  ಅಮ್ಮನ ಜಾಗ ತುಂಬುವಂತ
              ಅಮ್ಮ ಬೇಕಮ್ಮಾ ನೀವೇ ಆಗಿ ನಮ್ಮಮ್ಮಾ
              ಅಮ್ಮ ಬೇಕಮ್ಮಾ ನೀವೇ ಆಗಿ ನಮ್ಮಮ್ಮಾ
              ಸರಿಗ್ಗಗ್ಗಮ ನಮಗೇ ಬೇಕಮ್ಮಾ ನೀವೂ ನಮಗೇ ಬೇಕಮ್ಮಾ
              ಅಮ್ಮಾ ಇಲ್ಲದ ಮಕ್ಕಳು ನಾವೂ ಅಮ್ಮಾ ಬೇಕಮ್ಮಾ ನೀವೇ ಆಗಿ ನಮ್ಮಮ್ಮಾ
              ನೀವೇ ಆಗಿ ನಮ್ಮಮ್ಮಾ
-----------------------------------------------------------------------------------------------------------------------

ಮಾನವ ದಾನವ (೧೯೮೫) - ಬಾ ಈ ಮೈಯ್ಯ ಬೆಂಕಿ ಆರದು
ಸಂಗೀತ: ರಮೇಶ್ ನಾಯ್ಡು ಸಾಹಿತ್ಯ: ಆರ್.ಎನ್.ಜಯಗೋಪಾಲ್ ಹಾಡಿದವರು: ಎಸ್.ಪಿ.ಬಿ.ವಾಣಿಜಯರಾಂ 

ಹೆಣ್ಣು : ಬಾ..  ಈ ಮೈಯ್ಯ ಬೆಂಕಿ  ಆರದು ಸುಮ್ಮನೇ ತೀರದೂ
          ನಿನ್ನ ಸಂಗ ಇಲ್ಲದೇ ಪ್ರೀತಿಯ ಆಟ ಆಡದೇ ಆಸೆಯ ದಾಹವೂ ಇಂಗದು
          ಲಲ ಲಲಲ್ಲಲ್ಲಾ ಲಲಾಲಾಲಲಲಾ
ಗಂಡು : ಹ್ಹಾ.. ಈ ಮೈಯ್ಯ ಬೆಂಕಿ ಆರಲು ಬಿಡೂ ನೀ ನೀರಲಿ
            ನಿನ್ನ ಸಂಗಾ ಇಲ್ಲದೇ ಪ್ರೀತಿಕಾಟ ಇಲ್ಲದೇ ನಮ್ಮೇದಿ ತುಂಬಿದೇ ನನ್ನಲ್ಲೀ.....
ಹೆಣ್ಣು : ಬಾ... ಬಾ..  ಬಾ..  ಈ ಮೈಯ್ಯ ಬೆಂಕಿ  ಆರದು ಸುಮ್ಮನೇ ತೀರದೂ
              
ಹೆಣ್ಣು : ಕರೆದಿರುವಾಗ ಒಪ್ಪಿ ಹೆಣ್ಣು ಕಳವಳ ಏಕೇ ನೀನ್ನಲ್ಲಿ ಇನ್ನೂ
          ಬಳಿಯಿರುವಾಗ ಪ್ರಾಯ ಇಲ್ಲೀ ಸೆರೆಹಿಡಿ ನನ್ನ ತೋಳಿನಲ್ಲಿ
ಗಂಡು : ಈ ನಿನ್ನ ರೂಪಕೆ ನಾ ಸೋತು ಹೋದೆನು ನೀ ನನ್ನ ಬಿಟ್ಟರೇ ಬೇರೇನೂ ಕೇಳೇನೋ
ಹೆಣ್ಣು : ಹೋಗಯ್ಯಾ ಸನ್ಯಾಸಿ ನೀನಲ್ಲಾ ಈ ಮಾತು ಕೇಳೋ ದುರುಳಾ
ಗಂಡು : ನೋ .. ನೋ.. ನೋ.. ನೋ..
ಹೆಣ್ಣು : ಈ ಮೈಯ್ಯ ಬೆಂಕಿ  ಆರದು ಸುಮ್ಮನೇ ತೀರದೂ
ಗಂಡು :  ನಿನ್ನ ಸಂಗಾ ಇಲ್ಲದೇ ಪ್ರೀತಿಕಾಟ ಇಲ್ಲದೇ ನಮ್ಮೇದಿ ತುಂಬಿದೇ ನನ್ನಲ್ಲೀ...... ಹೂಂ ...
ಹೆಣ್ಣು : ಬಾ... ಬಾ..  ಬಾ..  ಈ ಮೈಯ್ಯ ಬೆಂಕಿ  ಆರದು ಸುಮ್ಮನೇ ತೀರದೂ

ಹೆಣ್ಣು : ತುಟಿ ತುಟಿ ಸೇರಿ ಎಂಥಾ ಚೆನ್ನಾ... ಆದರಲಿ ಸ್ವರ್ಗ ನೋಡು ಇನ್ನೂ ..
ಗಂಡು : ಹೃದಯವೂ ನೋಡು ಕಲ್ಲಿನಂತೇ ತಿಳಿಯದೂ ಪ್ರೀತಿ ಎಂಬ ಮಾತೇ ...
ಹೆಣ್ಣು : ನಾ ನಿನ್ನ ಗೆಲ್ಲದೇ ಎಂದೆಂದೂ ನಿಲ್ಲೇನೂ (ಹೇಗೇ )
ಗಂಡು : ಹಣಕೇನೇ ಸಾಧ್ಯವೂ ಗೆಲ್ಲೋಕೇ ನನ್ನನೂ
ಹೆಣ್ಣು : ಹೆಣ್ಣಿಂದ ಪಾರಾದ ಗಂಡಿಲ್ಲಾ ಈ ಮಾತು ತಪ್ಪುದಿಲ್ಲಾ..
ಗಂಡು : ಡೋಂಟ್ ಟಚ್ ಮೀ ಆಯ್ ಸೇ.. ನೋ...
ಹೆಣ್ಣು : ಈ ಮೈಯ್ಯ ಬೆಂಕಿ  ಆರದು ಸುಮ್ಮನೇ ತೀರದೂ.. ಹೊಯ್
ಗಂಡು : ನಿನ್ನ ಸಂಗಾ ಇಲ್ಲದೇ ಪ್ರೀತಿಕಾಟ ಇಲ್ಲದೇ ನಮ್ಮೇದಿ ತುಂಬಿತು ನನ್ನಲ್ಲೀ.. ಹ್ಹಾ..  ...
 ಹೆಣ್ಣು : ಲಲ ಲಲಲ್ಲಲ್ಲಾ ಲಲಾಲಾಲಲಲಾ   ಈ ಮೈಯ್ಯ ಬೆಂಕಿ
ಗಂಡು : ಆರಲು ಬಿಡೂ ನೀ ನೀರಲಿ ... (ಹ್ಹಾ....ಆಆಆ )
-----------------------------------------------------------------------------------------------------------------------

No comments:

Post a Comment