661. ಬಲು ಅಪರೂರ ನಮ್ ಜೋಡಿ (1978)



ಬಲು ಅಪರೂಪ ನಮ್ಮ ಜೋಡಿ ಚಿತ್ರದ ಹಾಡುಗಳು 
  1. ಥೈ ಥೈ ಎಂದು ಕುಣಿಯಲೇ 
  2.  ಹೊಸದಾಗಿ ಅರಳಿದ ಹೂ 
  3. ಹಬ್ಬದೂಟ ಬೇಕೇ 
  4. ಚುಕುಬುಕು ರೈಲು ಬಂತು 
  5. ಬಲು ಅಪರೂಪ ನಮ್ಮ ಜೋಡಿ 
ಬಲು ಅಪರೂಪ ನಮ್ ಜೋಡಿ (1978)
ಸಾಹಿತ್ಯ: ಚಿ.ಉದಯಶಂಕರ್  ಸಂಗೀತ: ರಾಮ್‌ಲಾಲ್ ಸೆಹರ  ಹಾಡಿದವರು: ಎಸ್.ಪಿ.ಬಿ., ಎಸ್.ಜಾನಕಿ

ಗಂಡು : ಥೈ ಥೈ ಥೈ ಎಂದು ಕುಣಿಯಲೇ ನಿನ್ನ
            ಮೈ ಕೈ ನಾ ಸೋಕಿ ನಲಿಯಲೇ
            ಥೈ ಥೈ ಥೈ ಎಂದು ಕುಣಿಯಲೇ ನಿನ್ನ
           ಮೈ ಕೈ ನಾ ಸೋಕಿ ನಲಿಯಲೇ
           ಓ ಚಿನ್ನ ಮೈ ಕೈ ನಾ ಸೋಕಿ ನಲಿಯಲೇ
ಹೆಣ್ಣು : ಥೈ ಥೈ ಥೈ ಎಂದು ಕುಣಿಯಲೇ ನಿನ್ನ
          ಮೈ ಕೈ ನಾ ಸೋಕಿ ನಲಿಯಲೇ
          ಥೈ ಥೈ ಥೈ ಎಂದು ಕುಣಿಯಲೇ
         ನಿನ್ನ ಮೈ ಕೈ ನಾ ಸೋಕಿ ನಲಿಯಲೇ ಓ ಚೆನ್ನ
         ಮೈ ಕೈ ನಾ ಸೋಕಿ ನಲಿಯಲೇ

ಗಂಡು : ಹಣ್ಣಾದ ಕೆನ್ನೆ ನನಗೆ ತಾನೆ ಕೆಂಪಾದ ಕೆನ್ನೆ,
           ಕೆಂಪಾದ ಕೆನ್ನೆ ನನಗೆ ತಾನೆ
           ಯಾರಿಲ್ಲ ಬಾ ಬೇಗನೇ ಚಿನ್ನಾ
          ಯಾರಿಲ್ಲ ಬಾ ಬೇಗನೇ ಓ ಚಿನ್ನಾ
          ನಿನಗಾಗೇ ನಾ ಬಂದೆನೆ
          ಥೈ ಥೈ ಥೈ ಎಂದು ಕುಣಿಯಲೇ ನಿನ್ನ
          ಮೈ ಕೈ ನಾ ಸೋಕಿ ನಲಿಯಲೇ
          ಓ ಚಿನ್ನ ಮೈ ಕೈ ನಾ ಸೋಕಿ ನಲಿಯಲೇ

ಹೆಣ್ಣು : ಕಣ್ಣಲ್ಲಿ ಕಣ್ಣು ಬೆರೆತ ಮೇಲೆ ನನ್ನನ್ನು ನೀನು,
          ನನ್ನನ್ನು ನೀನು ಅರಿತ ಮೇಲೆ ಬರಿ ಮಾತು ಇನ್ನೇತಕೆ ಚೆನ್ನ
          ಬರಿ ಮಾತು ಇನ್ನೇತಕೆ ಓ ಚೆನ್ನ ನನ್ನಾಸೆ ಪೂರೈಸದೆ
         ಥೈ ಥೈ ಥೈ ಎಂದು ಕುಣಿಯಲೇ ನಿನ್ನ
         ಮೈ ಕೈ ನಾ ಸೋಕಿ ನಲಿಯಲೇ ಓ ಚೆನ್ನ
         ಮೈ ಕೈ ನಾ ಸೋಕಿ ನಲಿಯಲೇ

ಗಂಡು : ನಿನ್ನಂಥ ಹೆಣ್ಣು ಎಲ್ಲೂ ಇಲ್ಲ ನನ್ನಂಥ ಗಂಡು,
ಹೆಣ್ಣು :  ನಿನ್ನಂಥ ಗಂಡು ಯಾರೂ ಇಲ್ಲ ಅದಕಾಗಿ ನಾ ಸೋತೆನು ನಲ್ಲ
           ಅದಕಾಗಿ ನಾ ಸೋತೆನು ಓ ನಲ್ಲ ನಿನ್ನಲ್ಲಿ ಒಂದಾದೆನು
ಗಂಡು : ಥೈ ಥೈ ಥೈ ಎಂದು ಕುಣಿಯಲೇ ನಿನ್ನ
           ಮೈ ಕೈ ನಾ ಸೋಕಿ ನಲಿಯಲೇ ಓ ಚಿನ್ನ
           ಮೈ ಕೈ ನಾ ಸೋಕಿ ನಲಿಯಲೇ
ಹೆಣ್ಣು : ಥೈ ಥೈ ಥೈ ಎಂದು ಕುಣಿಯಲೇ ನಿನ್ನ
          ಮೈ ಕೈ ನಾ ಸೋಕಿ ನಲಿಯಲೇ ಓ ಚೆನ್ನ
          ಮೈ ಕೈ ನಾ ಸೋಕಿ ನಲಿಯಲೇ
--------------------------------------------------------------------------------------------------------------------------

ಬಲು ಅಪರೂಪ ನಮ್ ಜೋಡಿ (1978)
ಸಾಹಿತ್ಯ: ಚಿ.ಉದಯಶಂಕರ್  ಸಂಗೀತ: ರಾಮ್‌ಲಾಲ್ ಸೆಹರ  ಹಾಡಿದವರು: ಎಸ್.ಪಿ.ಬಿ.

ಹೊಸದಾಗಿ ಅರಳಿದ ಹೂವೋ ಇದು ಸಿಂಗಾರಿಯ ಮೊಗವೋ
ಹೊಸದಾಗಿ ಅರಳಿದ ಹೂವೋ ಇದು ಸಿಂಗಾರಿಯ ಮೊಗವೋ
ನನ್ನೆಲ್ಲ ಆಸೆಯ ಪೂರೈಸೆ ಬಂದ ದೇವ ಕನ್ನಿಕೆಯೋ
ಮನವನ್ನು ಸೆಳೆಯುವ ನಗುವೋ ಇದು ಬಂಗಾರದ ಹೂವೋ
ಹೊಸದಾಗಿ ಅರಲಿದ ಹೂವೋ ಇದು ಸಿಂಗಾರಿಯ ಮೊಗವೋ

ಹುಣ್ಣಿಮೆ ಬೆಳಕೆ ಹೆಣ್ಣಾಯ್ತೇನೋ.... ಹೆಣ್ಣಾಯ್ತೇನೋ
ಹುಣ್ಣಿಮೆ ಬೆಳಕೆ ಹೆಣ್ಣಾಯ್ತೇನೋ ನೈದಿಲೆ ನಿನ್ನ ಕಣ್ಣಾಯ್ತೇನೋ,
ಕಣ್ಣಾಯ್ತೇನೋ ನನಗಾಗಿ ನನಗಾಗೆಂದೆ
ಹೊಸದಾಗಿ ಅರಳಿದ ಹೂವೋ ಇದು ಸಿಂಗಾರಿಯ ಮೊಗವೋ
ಹೊಸದಾಗಿ ಅರಲಿದ ಹೂವೋ ಇದು ಸಿಂಗಾರಿಯ ಮೊಗವೋ

ಹವಳವೆ ನಿನ್ನ ತುಟಿಯಾಯ್ತೇನೋ ಮಲ್ಲಿಗೆ
ನಗೆಯೆ ನಗುವಾಯ್ತೇನೋ,  ನಗುವಾಯ್ತೇನೋ ಹವಳವೆ
ನಿನ್ನ ತುಟಿಯಾಯ್ತೇನೋ ಮಲ್ಲಿಗೆ ನಗೆಯೆ ನಗುವಾಯ್ತೇನೋ,
ನಗುವಾಯ್ತೇನೋ ನನಗಾಗಿ ನನಗಾಗೆಂದೆ
ಹೊಸದಾಗಿ ಅರಳಿದ ಹೂವೋ ಇದು ಸಿಂಗಾರಿಯ ಮೊಗವೋ
ಹೊಸದಾಗಿ ಅರಲಿದ ಹೂವೋ ಇದು ಸಿಂಗಾರಿಯ ಮೊಗವೋ

ಬಳುಕುವ ಲತೆಯೆ ನಡುವಾಯ್ತೇನೋ... ನಡುವಾಯ್ತೇನೋ
ಬಳುಕುವ ಲತೆಯೆ ನಡುವಾಯ್ತೇನೋ ನವಿಲಿನ ನಾಟ್ಯ ನಡೆಯಾಯ್ತೇನೋ,
ನಡೆಯಾಯ್ತೇನೋ ನನಗಾಗಿ ನನಗಾಗೆಂದೆ
ಹೊಸದಾಗಿ ಅರಳಿದ ಹೂವೋ ಇದು ಸಿಂಗಾರಿಯ ಮೊಗವೋ
ಹೊಸದಾಗಿ ಅರಳಿದ ಹೂವೋ ಇದು ಸಿಂಗಾರಿಯ ಮೊಗವೋ
------------------------------------------------------------------------------------------------------------------------

ಬಲು ಅಪರೂಪ ನಮ್ ಜೋಡಿ (1978)
ಸಾಹಿತ್ಯ:ಚಿ.ಉದಯಶಂಕರ, ಸಂಗೀತ:ರಾಮ್‌ಲಾಲ್ ಸೆಹರ, ಗಾಯನ: ಎಸ್.ಪಿ.ಬಿ, ರಾಮಕೃಷ್ಣ, ರಮೇಶ, ಎಸ್.ಜಾನಕೀ   

ಗಂಡು:  ಹಬ್ಬದೂಟ ಬೇಕೇ ಓ.. ಅಬ್ಬ ಎನ್ನಬೇಕೇ
           ಒಮ್ಮೆ ತಿಂದು ರುಚಿಯ ಹೇಳಿರಿ 
           ಹೊಟ್ಟೆ ತುಂಬಾ ಬೇಕೇ ನೀವು ತಿಂದು ತೇಗಬೇಕೇ 
          ನಮ್ಮ ಅಡಿಗೆ ಬಾಯಿಗೆ ಹಾಕೀರಿ 
          ಹಬ್ಬದೂಟ ಬೇಕೇ ಓ.. ಅಬ್ಬ್ ಎನ್ನಬೇಕೇ
          ಒಮ್ಮೆ ತಿಂದು ರುಚಿಯ ಹೇಳಿರಿ 
         ಹೊಟ್ಟೆ ತುಂಬಾ ಬೇಕೇ ನೀವು ತಿಂದು ತೇಗಬೇಕೇ 
        ನಮ್ಮ ಅಡಿಗೆ ಬಾಯಿಗೆ ಹಾಕೀರಿ 
        ಹಬ್ಬದೂಟ ಬೇಕೇ..ಏಏಏ . ಆಆ.. ಆಅ .. ಓಓ.. ಓಓ..

ಹೆಣ್ಣು : ಬಿಸಿಬೇಳೆ ಅನ್ನವಿದೆ...  ಚಿತ್ರಾನ್ನ ಕೂಡ ಇದೆ...
ಎಲ್ಲರು : ಆಹಾ... ಆಹಾ..ಆಹಾ... ಆಹಾ..ಆಹಾ... ಆಹಾ..
ಹೆಣ್ಣು : ಬಿಸಿಬೇಳೆ ಅನ್ನವಿದೆ...  ಚಿತ್ರಾನ್ನ ಕೂಡ ಇದೆ...
ಗಂಡು : ಮಜ್ಜಿಗೆ ಹುಳಿ ಬೇಕೇ ಅರೇ.. ಗೊಜ್ಜು ತಿನ್ನಬೇಕೇ
           ಭಜ್ಜಿ ಚಟ್ನಿ ಎಲ್ಲಾ ಮಾಡಿದೇ... 
          ಒಳ್ಳೇ ಹಾಲು ಖೀರೂ ಆಹ್ಹ್.. ರುಚಿಯು ಏನೋ ಜೋರೂ 
           ಮೈಸೂರು ಪಾಕು ಕೂಡಾ ಇಲ್ಲಿದೇ 
ಹೆಣ್ಣು : ಒಬ್ಬಟ್ಟು ಬೇಕೇ ಕೇಳೀ ಒಹ್ ತಂಬಿಟ್ಟು ಬೇಕೇ ಕೇಳಿ 
          ಏನು ಬೇಕು ಬೇಗ ಕೇಳಿರಿ 
ಗಂಡು : ಹಬ್ಬದೂಟ ಬೇಕೇ... ಆಆ.. ಆಅ .. ಓಓ.. ಓಓ..   

ಹೆಣ್ಣು : ಕುಡಿಯೋಕೆ ಜಾಗವಿದೇ.. ತಿನ್ನೋಕೆ ಖಾರವಿದೇ.. 
ಎಲ್ಲರು : ಆಹಾ... ಆಹಾ..ಆಹಾ... ಆಹಾ..ಆಹಾ... ಆಹಾ..
ಹೆಣ್ಣು : ಕುಡಿಯೋಕೆ ಜಾಗವಿದೇ.. ತಿನ್ನೋಕೆ ಖಾರವಿದೇ.. 
ಗಂಡು : ಬೀರು ಕುಡಿಯಬೇಕೇ ಅಹ್ ಬ್ರಾಂದಿ ಹೀರಬೇಕೆ 
            ರಮ್ಮು ಜಿನ್ನ್ ಎಲ್ಲಾ ಇಲ್ಲಿದೇ 
           ಹೊಟ್ಟೆ ಭಾರವಿಲ್ಲಾ.. ಅಜೀರ್ಣ ಬರುವುದಿಲ್ಲಾ 
           ತಿಂದ ಮೇಲೆ ಅರಿವು ಬರುವುದೂ 
           ಯಾವ ಊರಿನಲ್ಲೂ ಇಂಥ ಹೋಟೆಲ್ ಇಲ್ಲಾ 
           ಬಿಲ್ಲು ನೋಡಿ ಆಗ ತಿಳಿವುದೂ 
ಎಲ್ಲರು : ಹಬ್ಬದೂಟ ಬೇಕೇ ಓ.. ಅಬ್ಬ ಎನ್ನಬೇಕೇ
            ಒಮ್ಮೆ ತಿಂದು ರುಚಿಯ ಹೇಳಿರಿ 
           ಹೊಟ್ಟೆ ತುಂಬಾ ಬೇಕೇ ನೀವು ತಿಂದು ತೇಗಬೇಕೇ 
          ನಮ್ಮ ಅಡಿಗೆ ಬಾಯಿಗೆ ಹಾಕೀರಿ 
          ಹಬ್ಬದೂಟ ಬೇಕೇ... ಆಆ.. ಆಅ .. ಓಓ.. ಓಓ..   
--------------------------------------------------------------------------------------------------------------------------

ಬಲು ಅಪರೂಪ ನಮ್ ಜೋಡಿ (1978)
ಸಾಹಿತ್ಯ: ಚಿ.ಉದಯಶಂಕರ್  ಸಂಗೀತ: ರಾಮ್‌ಲಾಲ್ ಸೆಹರ  ಹಾಡಿದವರು: ಎಸ್.ಪಿ.ಬಿ.,ರಾಮಕೃಷ್ಣ, ರಮೇಶ, 

ಚುಕುಬುಕು ಚುಕುಬುಕು ರೈಲು ಬಂತು  ರೈಲು ಪುಟಾಣಿ ರೈಲು
ಚುಕುಬುಕು ಚುಕುಬುಕು ರೈಲು ಬಂತು  ರೈಲು ಬಣ್ಣದ ರೈಲು
ಚುಕುಬುಕು ಚುಕುಬುಕು ರೈಲು ಬಂತು  ರೈಲು ಪುಟಾಣಿ ರೈಲು
ಚುಕುಬುಕು ಚುಕುಬುಕು ರೈಲು ಬಂತು  ರೈಲು ಬಣ್ಣದ ರೈಲು 

ಕಾಗೆಯೊಂದು ಬೆದರಿ ಹಾರಿತು.. ಕಾ..ಕಾ..  
ಗೂಬೆಯೊಂದು ಬೆಚ್ಚಿ ಕೂಗಿತು ಉಊ.. ಉಊ 
ಕತ್ತೆಯೊಂದು ರಾಗ ಹಾಡಿತು ಹಾ..ಹಾ..ಹಾ.. 
ಕೋತಿಯೊಂದು ತಾಳ ಹಾಕಿತು.. ಹಾಯ್ 
ಚಿಕ್ಕ ಬೆಕ್ಕು  ಮೀಸೆ ತಿರುವಿತು ಅಕ್ಕ ಪಕ್ಕ ಏನೋ ಹುಡುಕಿತೋ ಆಗ 
ಇಲಿಯ ಮರಿಯು ಹೆದರಿ ಓಡಿತು  
ಚುಕುಬುಕು ಚುಕುಬುಕು ರೈಲು ಬಂತು  ರೈಲು ಪುಟಾಣಿ ರೈಲು
ಚುಕುಬುಕು ಚುಕುಬುಕು ರೈಲು ಬಂತು  ರೈಲು ಬಣ್ಣದ ರೈಲು 

ಪುಟ್ಟ ಕುರಿಯ ಮರಿಯು ಬಂದಿತು... ಮೇ..ಮೇ...ಮೇ 
ದೊಡ್ಡ ಹುಲಿಯ ಕಂಡು ಹೆದರಿತು... 
ನಾಯಿಯೊಂದು ರೇಗಿ ಬೊಗಳಿತು ಹಾಯ್  ಬೌ..ಬೌ.. ಬೌ.. 
ಕೋಳಿಯೊಂದು ರೆಕ್ಕೆ ಬಡಿಯಿತು ... ಕ್ಕೋ.ಕ್ಕೋ.. 
ಆನೆಯೊಂದು ಓಡಿ ಬಂದಿತು... ಗುಡ್ಡದಂತೆ ಅಡ್ಡ ನಿಂತಿತು ಆಗ 
ಸಿಂಹ ಬರಲು ಹೆದರಿ ಓಡಿತು  
ಚುಕುಬುಕು ಚುಕುಬುಕು ರೈಲು ಬಂತು  ರೈಲು ಪುಟಾಣಿ ರೈಲು
ಚುಕುಬುಕು ಚುಕುಬುಕು ರೈಲು ಬಂತು  ರೈಲು ಬಣ್ಣದ ರೈಲು
ಚುಕುಬುಕು ಚುಕುಬುಕು  ಚುಕುಬುಕು ಚುಕುಬುಕು
ಚುಕುಬುಕು ಚುಕುಬುಕು 
------------------------------------------------------------------------------------------------------------------------

ಬಲು ಅಪರೂಪ ನಮ್ ಜೋಡಿ (1978)
ಸಾಹಿತ್ಯ: ಚಿ.ಉದಯಶಂಕರ್  ಸಂಗೀತ: ರಾಮ್‌ಲಾಲ್ ಸೆಹರ  ಹಾಡಿದವರು: ಪಿ.ಬಿ.ಎಸ್,ರಾಮಕೃಷ್ಣ, ರಮೇಶ, 

ಗಂಡು : ತಕತಕ ಧೂಮಮ.. ತಕತಕ ಧೂಮಮ ತಕತಕ ಧೂಮಮ
           ತಕತಕ ಧೂಮಮ ತಕತಕ ಧೂಮಮ ತಕತಕ ಧೂಮಮ
ಹೆಣ್ಣು : ತಕತಕ ಧೂಮಮ ತಕತಕ ಧೂಮಮ ತಕತಕ ಧೂಮಮ
         ಚಿಕಿಚಿಕಿ ಧೂಮಮ ಚಿಕಿಚಿಕಿ ಧೂಮಮ ಚಿಕಿಚಿಕಿ ಧೂಮಮ
ಗಂಡು : ತಕತಕ ಧೂಮಮ.. ತಕತಕ ಧೂಮಮ ತಕತಕ ಧೂಮಮ
ಹೆಣ್ಣು : ಚಿಕಿಚಿಕಿ ಧೂಮಮ ಚಿಕಿಚಿಕಿ ಧೂಮಮ ಚಿಕಿಚಿಕಿ ಧೂಮಮ
ಗಂಡು : ತಕತಕ ಧೂಮಮ.. ಹೆಣ್ಣು : ಚಿಕಿಚಿಕಿ ಧೂಮಮ
ಗಂಡು : ತಕತಕ ಧೂಮಮ.. ಹೆಣ್ಣು : ಚಿಕಿಚಿಕಿ ಧೂಮಮ 
ಎಲ್ಲರು : ಧೂಮಮ ಧೂಮಮ ಧೂಮಮ ಧೂಮಮ 
ಗಂಡು : ಬಲು ಅಪರೂಪದ ನಮ್  ಜೋಡಿ..  ಜೋಡಿ.. ಜೋಡಿ..  
            ನಮ್ಮ ಕೈಚಳಕ  ಎಲ್ಲಾ ನೋಡಿ ನೋಡಿ ನೋಡಿ  
ಗಂಡು : ತಕತಕ ಧೂಮಮ.. ತಕತಕ ಧೂಮಮ ತಕತಕ ಧೂಮಮ
           ತಕತಕ ಧೂಮಮ ತಕತಕ ಧೂಮಮ ತಕತಕ ಧೂಮಮ
ಗಂಡು : ಬಲುಅಪರೂಪದ ನಮ್  ಜೋಡಿ..  ಜೋಡಿ.. ಜೋಡಿ..  
            ನಮ್ಮ ಕೈಚಳಕ  ಎಲ್ಲಾ ನೋಡಿ ಜೋಡಿ.. ಜೋಡಿ..
            ನೋಡಿ ನೋಡಿ ಜೋಡಿ.. ಜೋಡಿ..  ನೋಡಿ ನೋಡಿ 
ಹೆಣ್ಣು : ತಕತಕ ಧೂಮಮ.. ತಕತಕ ಧೂಮಮ ತಕತಕ ಧೂಮಮ
           ತಕತಕ ಧೂಮಮ ತಕತಕ ಧೂಮಮ ತಕತಕ ಧೂಮಮ

ಗಂಡು: ನನ್ನಂಥ ವೀರ ಇಲ್ಲೆಲ್ಲೂ ಇಲ್ಲಾ
          ನನ್ನಂಥ ಮಾತುಗಾರ ಊರಲ್ಲೇ ಇಲ್ಲಾ
          ನನ್ನಂಥ ಕುಳ್ಳ ಭೂಮಿಲೇ ಇಲ್ಲಾ
          ನನಂಥ ಭಾರಿ ಕಳ್ಳ ಇನ್ನೂ ಹುಟ್ಟಿಲ್ಲಾ..
ಇಬ್ಬರು : ನಮ್ಮನ್ನು ಗೆಲ್ಲೋರು ಯಾರು ಇಲ್ಲಾ ನಮ್ಮನ್ನು ಬಲ್ಲೋರು ಯಾರು ಇಲ್ಲಾ
ಗಂಡು : ಬಲು ಅಪರೂಪದ ನಮ್  ಜೋಡಿ..  ಜೋಡಿ.. ಜೋಡಿ..  
            ನಮ್ಮ ಕೈಚಳಕ  ಎಲ್ಲಾ ನೋಡಿ ನೋಡಿ ನೋಡಿ  
ಎಲ್ಲರು : ತಕತಕ ಧೂಮಮ.. ತಕತಕ ಧೂಮಮ ತಕತಕ ಧೂಮಮ
           ತಕತಕ ಧೂಮಮ ತಕತಕ ಧೂಮಮ ತಕತಕ ಧೂಮಮ

ಗಂಡು : ಕಣ್ಣಿಲ್ಲಿ ಬಿತ್ತೂ ಆಪತ್ತು ಬಂತು ನಾನಾದೇ ಸುಸ್ತೂ ಹೇಗೆ ಓಡೋದು ಗಸ್ತು 
            ಹೊಡೆಯೋಕ್ ಗೊತ್ತು ಬಡಿಯೋಕ್ ಗೊತ್ತು
            ಒದೆಯೋಕ್ ಗೊತ್ತು ಅಪ್ಪ ತಿನ್ನೋಕೆ ಗೊತ್ತು
            ಗೊತ್ತಿದ್ದ ಮೇಲೆ ಚಿಂತೆ ಏಕೇ
            ನುಗ್ಗೋಕೆ ಇನ್ನೂ ಧೈರ್ಯ ಬೇಕೇ            
            ಬಾರಸೋಣ ಹೇಳೋ ಕುಳ್ಳಪ್ಪಾ ಬಾರಸು.. ಬಾರಸು
            ಚಚ್ಚೋಣವೇನೋ  ಕೇಳೋ ಕುಳ್ಳಪ್ಪಾ.. ಚಚ್ಚು ಚಚ್ಚು
            ಬಾರಸೋಣ ಹೇಳೋ ಕುಳ್ಳಪ್ಪಾ ಬಾರಸು.. ಬಾರಸು
            ಚಚ್ಚೋಣವೇನೋ  ಕೇಳೋ ಕುಳ್ಳಪ್ಪಾ.. ಚಚ್ಚು ಚಚ್ಚು
            ಬಾರಸೋಣಾ .. ಓಹೋಹೋ ಚಚ್ಚೋಣಾ              
            ಬಾರಸೋಣಾ .. ಓಹೋಹೋ ಚಚ್ಚೋಣಾ             
ಎಲ್ಲರು : ತಕತಕ ಧೂಮಮ.. ತಕತಕ ಧೂಮಮ ತಕತಕ ಧೂಮಮ
           ತಕತಕ ಧೂಮಮ ತಕತಕ ಧೂಮಮ ತಕತಕ ಧೂಮಮ
           ತಕತಕ ಧೂಮಮ ತಕತಕ ಧೂಮಮ ತಕತಕ ಧೂಮಮ
           ತಕತಕ ಧೂಮಮ ತಕತಕ ಧೂಮಮ ತಕತಕ ಧೂಮಮ
           ತಕತಕ ಧೂಮಮ ತಕತಕ ಧೂಮಮ ತಕತಕ ಧೂಮಮ
--------------------------------------------------------------------------------------------------------------------

No comments:

Post a Comment