662. ರಾಮ ಪರಶುರಾಮ (1980)

ರಾಮ ಪರಶುರಾಮ ಚಿತ್ರದ ಹಾಡುಗಳು 
  1. ಎಲ್ಲಿ ನೀನೋ ಅಲ್ಲಿ ನಾನೋ (ಎಸ್ಪಿಬಿ)
  2. ಎಲ್ಲಿ ನೀನೋ ಅಲ್ಲಿ ನಾನೋ 
  3. ನಾ ಬಿಡುವೇನೇ 
  4. ಹೊಂಬಿಸಿಲು ಬಂದಾಯಿತು 
ರಾಮ ಪರಶುರಾಮ (1980) - ಎಲ್ಲಿ ನೀನೋ ಅಲ್ಲಿ ನಾನು 
ಸಂಗೀತ: ರಾಜನ್-ನಾಗೇಂದ್ರ  ಸಾಹಿತ್ಯ: ಚಿ.ಉದಯಶಂಕರ್ ಹಾಡಿದವರು: ಎಸ್.ಪಿ.ಬಿ.

ಎಲ್ಲಿ ನೀನೋ ಅಲ್ಲಿ ನಾನು, ಎಲ್ಲಿ ನಾನೋ ಅಲ್ಲಿ ನೀನು
ನೀನೆ ರಾಧ ನಾನೇ ಕೃಷ್ಣ, ಎಂಥ ಜೋಡಿ
ನಾನೇ ಕೃಷ್ಣ ನೀನೆ ರಾಧ, ಭಲೇ ಜೋಡಿ
ಎಲ್ಲಿ ನೀನೋ ಅಲ್ಲಿ ನಾನು, ಎಲ್ಲಿ ನಾನೋ ಅಲ್ಲಿ ನೀನು

ನೀ ಹೀಗೆ ನಿಂತಾಗ, ನಿನ್ನಂದ ಕಂಡಾಗ
ನೀ ಹೀಗೆ ನಿಂತಾಗ, ನಿನ್ನಂದ ಕಂಡಾಗ
ಪ್ರಾಣ ಚಿಮ್ಮಿ ಚಿಮ್ಮಿ ಕುಣಿವುದು
ನೀ ದೂರ ಹೋದಾಗ, ಸಿಡಿ ಸಿಡಿ ಸಿಡಿ ಎಂದಾಗ
ಜೀವ ನೊಂದು ಕೂಗಿ ಅಳುವುದು
ಬಯಸದೆ ನೀ ಬಂದಿರುವೆ, ಬಯಕೆಯನು ತಂದಿರುವೆ
ಈಗ ಹೀಗೇತಕೆ, ಸಿಡುಕುವೆ, ಕೆಣಕುವೆ, ಓಡುವೆ... ಅಹ್ಹಹ್ಹಾ
ಸಿಡುಕುವೆ, ಕೆಣಕುವೆ, ಓಡುವೆ
ಎಲ್ಲಿ ನೀನೋ ಅಲ್ಲಿ ನಾನು, ಎಲ್ಲಿ ನಾನೋ ಅಲ್ಲಿ ನೀನು
ನೀನೆ ರಾಧ ನಾನೇ ಕೃಷ್ಣ, ಎಂಥ ಜೋಡಿ
ನಾನೇ ಕೃಷ್ಣ ನೀನೆ ರಾಧ, ಭಲೇ ಜೋಡಿ
ಎಲ್ಲಿ ನೀನೋ ಅಲ್ಲಿ ನಾನು, ಎಲ್ಲಿ ನಾನೋ ಅಲ್ಲಿ ನೀನು

ನೀ ಬಂದೆ ಇಲ್ಲೇಕೆ, ಈ ವೇಷ ಇನ್ನೇಕೆ
ನೀ ಬಂದೆ ಇಲ್ಲೇಕೆ, ಈ ವೇಷ ಇನ್ನೇಕೆ
ಎಲ್ಲಾ ಬಲ್ಲೆ ಬಾರೆ ಕುಮಾರಿ
ಹೆಣ್ಣನ್ನು ಕಂಡಾಗ, ಆ ಹೆಣ್ಣು ನಕ್ಕಾಗ
ಸೋತು ಹೋಗಲಾರೆ ಸುಕುಮಾರಿ
ನಿನ್ನಾಟ ಮುಗಿದಂತೆ ಹೇಹೇ  ಇನ್ನೇಕೆ ಈ ಚಿಂತೆ
ಸಾಕು ಈ ನಾಚಿಕೆ, ಇನ್ನು ನಾ, ನಿನ್ನನು, ಬಿಡುವೆನೆ
ಇನ್ನು ನಾ, ನಿನ್ನನು, ಬಿಡುವೆನೆ
ಎಲ್ಲಿ ನೀನೋ ಅಲ್ಲಿ ನಾನು, ಎಲ್ಲಿ ನಾನೋ ಅಲ್ಲಿ ನೀನು
ನೀನೆ ರಾಧ ನಾನೇ ಕೃಷ್ಣ, ಎಂಥ ಜೋಡಿ
ನಾನೇ ಕೃಷ್ಣ ನೀನೆ ರಾಧ, ಭಲೇ ಜೋಡಿ
ಎಲ್ಲಿ ನೀನೋ ಅಲ್ಲಿ ನಾನು, ಎಲ್ಲಿ ನಾನೋ ಅಲ್ಲಿ ನೀನು
ಎಲ್ಲಿ ನೀನೋ ಅಲ್ಲೆ ನಾನು, ಎಲ್ಲಿ ನಾನೋ ಅಲ್ಲೆ ನೀನು
--------------------------------------------------------------------------------------------------------------------------

ರಾಮ ಪರಶುರಾಮ (1980)- ಎಲ್ಲಿ ನೀನೋ ಅಲ್ಲಿ ನಾನು
ಸಂಗೀತ: ರಾಜನ್-ನಾಗೇಂದ್ರ ಸಾಹಿತ್ಯ: ಚಿ.ಉದಯಶಂಕರ್ ಹಾಡಿದವರು: ಎಸ್.ಜಾನಕೀ .

ಎಲ್ಲಿ ನೀನೋ ಅಲ್ಲಿ ನಾನು, ಎಲ್ಲಿ ನಾನೋ ಅಲ್ಲಿ ನೀನು
ನೀನೆ ಕೃಷ್ಣ ನಾನೇ ರಾಧ, ಎಂಥ ಜೋಡಿ
ನಾನೇ ರಾಧ ನೀನೆ ಕೃಷ್ಣ, ಭಲೇ ಜೋಡಿ
ಎಲ್ಲಿ ನೀನೋ ಅಲ್ಲಿ ನಾನು, ಎಲ್ಲಿ ನಾನೋ ಅಲ್ಲಿ ನೀನು

ನಿನ್ನನ್ನೂ ಗೆಲ್ಲೋಕೇ ನಿನ್ನನ್ನೂ ಕೊಲ್ಲೋಕೆ
ನಿನ್ನನ್ನೂ ಗೆಲ್ಲೋಕೇ ನಿನ್ನನ್ನೂ ಕೊಲ್ಲೋಕೆ
ಬಂದ ಹೆಣ್ಣಾ ನಾನು ಮನ್ನಿಸು 
ನಾ ಸೋತೆ ನಿನ್ನಲ್ಲಿ ಬೀಡು ಕೋಪ ನನ್ನಲ್ಲಿ 
ಬೇಗ ಬಂದು ನನ್ನ ಪ್ರೀತಿಸು 
ನನ್ನನ್ನು ಸ್ವೀಕರಿಸೂ ಒಲವಿಂದ ಆದರಿಸೂ 
ಆಸೇ ಈಡೇರಿಸು ವಿರಹದ ನೋವನೂ ಕರಗಿಸು 
ಎಲ್ಲಿ ನೀನೋ ಅಲ್ಲಿ ನಾನು, ಎಲ್ಲಿ ನಾನೋ ಅಲ್ಲಿ ನೀನು

ಮನಸೆಲ್ಲಾ ಇಲ್ಲಿದೇ ನಿನ್ನಲ್ಲೇ ಉಸಿರಿದೇ 
ಮನಸೆಲ್ಲಾ ಇಲ್ಲಿದೇ ನಿನ್ನಲ್ಲೇ ಉಸಿರಿದೇ 
ಹೇಗೆ ದೂರ ನಾನು ಹೋಗುವೇ 
ಬಿಸಿಲೆಂದು ಹೆದರೇನು ಮುಳ್ಳೆಂದು ನಡುಗೇನೂ 
ನಿನ್ನ ನೆರಳಿನಂತೇ ನಡೆಯುವೇ 
ನನ್ನಲ್ಲೀ ದಯೆತೋರೂ ಕೈ ಮುಗಿವೇ ಬಾ ಸೇರೂ 
ದೂರ ನೀ ತಳ್ಳದೇ ತೋಳಲಿ ಬಂಧಿಸು ಮುದ್ದಿಸು 
ಎಲ್ಲಿ ನೀನೋ ಅಲ್ಲಿ ನಾನು, ಎಲ್ಲಿ ನಾನೋ ಅಲ್ಲಿ ನೀನು
ನೀನೆ ರಾಧ ನಾನೇ ಕೃಷ್ಣ, ಎಂಥ ಜೋಡಿ.. ಅಹ್ಹಹ್ಹ
ನಾನೇ ಕೃಷ್ಣ ನೀನೆ ರಾಧ, ಭಲೇ ಜೋಡಿ
ಎಲ್ಲಿ ನೀನೋ ಅಲ್ಲಿ ನಾನು, ಎಲ್ಲಿ ನಾನೋ ಅಲ್ಲಿ ನೀನು
ಎಲ್ಲಿ ನೀನೋ ಅಲ್ಲಿ ನಾನು, ಎಲ್ಲಿ ನಾನೋ ಅಲ್ಲಿ ನೀನು
--------------------------------------------------------------------------------------------------------------------------

ರಾಮ ಪರಶುರಾಮ (1980) - ನಾ ಬಿಡುವೇನೇ 
ಸಂಗೀತ: ರಾಜನ್-ನಾಗೇಂದ್ರ ಸಾಹಿತ್ಯ: ಚಿ.ಉದಯಶಂಕರ್ ಹಾಡಿದವರು: ಎಸ್.ಪಿ.ಬಿ. ಎಸ್.ಜಾನಕೀ 

ಗಂಡು : ಆಆಆಆಅ (ಆಆಆಆ) ಅಹ್ಹಹಾ... (ಆಆಆ) ಆಹ್ಹಾಹಾ
           ನಾ ಬಿಡುವೇನೇ ನಲ್ಲೇ ನಾ ಕೊಡುವೇನೇ
           ಒಲಿದರೂ ಮುನಿದರೂ ಕರೆದರೂ ಬೈಯ್ದರೂ
          ನೀ ನನ್ನ ಪ್ರಾಣವೂ ನಿನ್ನಲ್ಲೇ ಪ್ರೇಮವೂ
          ನೀ ನನ್ನ ಪ್ರಾಣವೂ ನಿನ್ನಲ್ಲೇ ಪ್ರೇಮವೂ
           ನಾ ಬಿಡುವೇನೇ ನಲ್ಲೇ ನಾ ಕೊಡುವೇನೇ

ಗಂಡು : ಮುಗಿಲೂರುವುದೂ ಬಾನಿಗಾಗಿ ಕಡಲಿರುವುದು ಭೂಮಿಗಾಗಿ
            ನಾ ನಿನ್ನ ಸ್ನೇಹಕ್ಕಾಗಿ ಓಡೋಡಿ ಬಂದೆನು 
ಹೆಣ್ಣು : ಆಹ್ಹಹ್ಹಾ... (ಆಆ ) ಆಹ್ಹಾಹಾ .. (ಆಆಆ ) 
          ರವಿಯಿರುವುದೂ ಬಾನಿಗಾಗಿ ಬೆಳಕಿರುವುದೂ ಭೂಮಿಗಾಗೀ 
          ನಾ ನಿನ್ನ ಪ್ರೇಮಕ್ಕಾಗಿ ಕೈ ಚಾಚಿ ನಿಂತೇನೂ 
ಗಂಡು : ನಿನ್ನಿಲೀ ಬಂದೇ ನಾನಲ್ಲಿ ನೊಂದೇ ಇನ್ನೆಂದೂ ಹೀಗೇ ದೂರವಾಗೇನೂ 
ಹೆಣ್ಣು : ನಾ ಬಿಡುವೇನೇ ನನ್ನೇ ನಾ ಕೊಡುವೇನೇ
          ಒಲಿದರೂ ಮುನಿದರೂ ಕರೆದರೂ ಜರಿದರೂ
          ನೀ ನನ್ನ ಪ್ರಾಣವೂ ನಿನ್ನಲ್ಲೇ ಪ್ರೇಮವೂ
          ನೀ ನನ್ನ ಪ್ರಾಣವೂ ನಿನ್ನಲ್ಲೇ ಪ್ರೇಮವೂ
           ನಾ ಬಿಡುವೇನೇ ನನ್ನೇ ನಾ ಕೊಡುವೇನೇ

ಹೆಣ್ಣು : ಕೆಂಪಿರುವುದೂ ಸಂಜೆಯಲ್ಲಿ ತಂಪಿರುವುದೂ ಗಾಳಿಯಲ್ಲಿ
          ನೀ ಬಂದ ವೇಳೆಯಲ್ಲಿ ಹೀತ ಕಂಡೇ ಮಾತಲಿ
ಗಂಡು : ಆಹಹಾ.. (ಆಆಆ) ಕಂಪಿರುವುದೂ ಹೂವಿನಲ್ಲೀ ಇಂಪೀರುವುದೂ ಗಾನದಲ್ಲಿ
           ನಾ ನಿನ್ನ ಪ್ರೀತಿಯಲ್ಲಿ ಸುಖ ಕಂಡೇ ಬಾಳಲೀ
ಹೆಣ್ಣು : ಎಂದೆಂದೂ ಹೀಗೆ ಇರುವಾಸೇ ನನಗೇ ನೀನೆಲ್ಲೋ ಅಲ್ಲೇ ನಾನು ಬರುವೇನೂ
ಗಂಡು : ನಾ ಬಿಡುವೇನೇ            ಹೆಣ್ಣು : ನನ್ನೇ ನಾ ಕೊಡುವೇನೇ
ಗಂಡು : ಒಲಿದರೂ ಮುನಿದರೂ   ಹೆಣ್ಣು : ಕರೆದರೂ ಜರಿದರೂ
ಇಬ್ಬರು: ನೀ ನನ್ನ ಪ್ರಾಣವೂ ನಿನ್ನಲ್ಲೇ ಪ್ರೇಮವೂ
           ನೀ ನನ್ನ ಪ್ರಾಣವೂ ನಿನ್ನಲ್ಲೇ ಪ್ರೇಮವೂ
           ನಾ ಬಿಡುವೇನೇ ನನ್ನೇ ನಾ ಕೊಡುವೇನೇ
           ಅಹ್ಹಹ್ಹಾ (ಅಹ್ಹಹ್ಹಾ ) ಆ...ಅಹ್ಹಹ್ಹಾ (ಆ.. ಅಹ್ಹಹ್ಹಾ )
--------------------------------------------------------------------------------------------------------------------------

ರಾಮ ಪರಶುರಾಮ (1980) -  ಹೊಂಬಿಸಿಲೂ ಬಂದಾಯ್ತು 
ಸಂಗೀತ: ರಾಜನ್-ನಾಗೇಂದ್ರ ಸಾಹಿತ್ಯ: ಚಿ.ಉದಯಶಂಕರ್ ಹಾಡಿದವರು: ಪಿ.ಬಿ.ಎಸ್. ಎಸ್.ಜಾನಕೀ 

ಗಂಡು : ಹೊಂಬಿಸಿಲೂ ಬಂದಾಯ್ತು ಮಂಜಿನ ತೆರೆಯು ಜಾರಿತೂ
           ಈ ನನ್ನ ತಂಗಿಯ ಕಂಡು ಆನಂದವಾಯಿತು
ಹೆಣ್ಣು : ಹೊಂಬಿಸಿಲು ಬಂದಾಯ್ತು ಮಂಜಿನ ತೆರೆಯು ಜಾರಿತೂ
          ಈ ನನ್ನ ಅಣ್ಣನ ಕಂಡೂ ಆನಂದವಾಯಿತು
         ಹೊಂಬಿಸಿಲು ಬಂದಾಯ್ತು ಮಂಜಿನ ತೆರೆಯು ಜಾರಿತೂ

ಕೋರಸ್ : ಆಆಆ... ಆಆಆ... ಲಾಲಾಲ ಓಓಓ..ಓಓಓ  ಲಲಾಲಾ
                ಲಲಾಲಾ   ಲಲ  ( ಲಲಾಲಾ   ಲಲ ) ಹಯ್ ಹಯ್ ಹಯ್ ಹಯ್
ಗಂಡು : ಬಂದೇ ನಿನ್ನ ಕಂಡಾಗ ತಂಗಿ ಎಂದೂ ಅಂದಾಗ
            ಕಣ್ಣೀರೂ ಕಣ್ಣಲ್ಲಿ ಉಲ್ಲಾಸ ಮನದಲಿ ಏನೋ ಸಂತೋಷ ಕಂಡೇ
ಹೆಣ್ಣು : ಆಆಆ... ನಿನ್ನ ನಾನು ಕಂಡಾಗ ಅಣ್ಣಾ ಎಂದೂ ಅಂದಾಗ
          ಈ ಮಾತು ದೇವರೇ ನಿಜವಾಗಿ ಹೋದರೇ ಎಂಥ ಸೊಗಸೆಂದು ಕೊಂಡೇ
ಗಂಡು : ಆ ಆಸೇ ನಿಜವಾಯಿತು ಇಂದು ನಮ್ಮ ಬಾಳಲೀ
          ಹೊಂಬಿಸಿಲು ಬಂದಾಯ್ತು ಮಂಜಿನ ತೆರೆಯು ಜಾರಿತೂ
          ಈ ನನ್ನ ತಂಗಿಯ ಕಂಡೂ ಆನಂದವಾಯಿತು
ಕೋರಸ್ : ಹೊಂಬಿಸಿಲು ಬಂದಾಯ್ತು ಮಂಜಿನ ತೆರೆಯು ಜಾರಿತೂ
               ಈ ನನ್ನ ಅಣ್ಣ ತಂಗಿಯ ಕಂಡೂ ಆನಂದವಾಯಿತು 
              ಹೊಂಬಿಸಿಲು ಬಂದಾಯ್ತು ಮಂಜಿನ ತೆರೆಯು ಜಾರಿತೂ...

ಕೋರಸ್ : ತನನನ ನನನನನ ಥೈ ಥೈ ಥೈ ಥೈ ಓ ಓ ಓ ಓ
ಹೆಣ್ಣು : ಎರಡೂ ಹೂವೂ ಸೇರಾಯ್ತು ಬಾಳೂ ಇಂದೂ ಜೇನಾಯ್ತು
          ಇನ್ನೊಂದು ಹೂವಿನ ನೆನಪಾಯಿತು ಈ ದಿನ ಎಲ್ಲೋ ಅವನೆಲ್ಲೋ ಕಾಣೇ
ಗಂಡು : ಆಆಆ.. ಕಾಲ ಕೂಡಿ ಬಂದಾಗ ಹೀಗೆ ಮಂಜು ಸರಿದಾಗ
           ಆ ನಮ್ಮ ಅಣ್ಣನೂ ತಾನಾಗಿ ಬರುವನೂ ನಂಬೂ ಆ ದೇವರಾಣೆ
ಹೆಣ್ಣು : ನನ್ನಾಸೆ ಆ ಕಾಲ ಇಂದೇ ಬರದಾಗದೇ
          ಹೊಂಬಿಸಿಲು ಬಂದಾಯ್ತು ಮಂಜಿನ ತೆರೆಯು ಜಾರಿತೂ
          ಈ ನನ್ನ ಅಣ್ಣನ ಕಂಡೂ ಆನಂದವಾಯಿತು
         ಹೊಂಬಿಸಿಲು ಬಂದಾಯ್ತು ಮಂಜಿನ ತೆರೆಯು ಜಾರಿತೂ
ಕೋರಸ್ : ಹೊಂಬಿಸಿಲು ಬಂದಾಯ್ತು ಮಂಜಿನ ತೆರೆಯು ಜಾರಿತೂ
               ಈ ನನ್ನ ಅಣ್ಣ ತಂಗಿಯ ಕಂಡೂ ಆನಂದವಾಯಿತು 
              ಹೊಂಬಿಸಿಲು ಬಂದಾಯ್ತು ಮಂಜಿನ ತೆರೆಯು ಜಾರಿತೂ... ಹೊಯ್  
--------------------------------------------------------------------------------------------------------------------------

No comments:

Post a Comment