663. ಸುವರ್ಣ ಭೂಮಿ (1969)


ಸುವರ್ಣ ಭೂಮಿ ಚಿತ್ರದ ಹಾಡುಗಳು 
  1. ಕಾಣದ ದೇವರು ಊರಿಗೆ ನೂರು 
  2. ಕಾಣದ ದೇವರು ಊರಿಗೆ ನೂರು (ಹೆಣ್ಣು)
  3. ಭಲೇ ಸಂಚುಗಾರ ಮಹಾ ಮೋಸಗಾರ 
  4. ಸಿರಿ ಕನ್ನಡ ನಾಡು ಪುಣ್ಯದ ಬೀಡು ಸುಂದರ 
ಸುವರ್ಣ ಭೂಮಿ (1969)
ಸಂಗೀತ: ವಿಜಯ ಭಾಸ್ಕರ್ ಸಾಹಿತ್ಯ: ಕು.ರಾ.ಸೀತಾರಾಮ ಶಾಸ್ತ್ರಿ ಹಾಡಿದವರು: ಎಸ್.ಜಾನಕಿ, ಬಿ.ಕೆ.ಸುಮಿತ್ರ

ಕಾಣದ ದೇವರು, ಊರಿಗೆ ನೂರು, ಹುಡುಕುವರಾರು
ಕಾಣುವ ತಾಯೇ ಪರಮಗುರು
ಕಾಣದ ದೇವರು, ಊರಿಗೆ ನೂರು, ಹುಡುಕುವರಾರು
ಕಾಣುವ ತಾಯೇ ಪರಮಗುರು

ಹೇಳಲು ಬಾರದ ಹಸುಳೆಯ ಆಸೆ ಊಹಿಸಿ ತರುವಳು ಹಾಲಿನ ಶೀಶೆ
ಅಮ್ಮ ಎನ್ನುತ ಅಪ್ಪಿದ ಕೂಡಲೆ ಹಿಗ್ಗುತ ಸುರಿವಳು ಮುತ್ತಿನ ಸುರಿಮಳೆ
ಬೇಡಿದುದೆಲ್ಲ ನೀಡಲು ಬಲ್ಲ...
ಬೇಡಿದುದೆಲ್ಲ ನೀಡಲು ಬಲ್ಲ ತಾಯಿಗಿಂತ ದೇವರೆ ಇಲ್ಲ
ಕಾಣದ ದೇವರು, ಊರಿಗೆ ನೂರು, ಹುಡುಕುವರಾರು
ಕಾಣುವ ತಾಯೇ ಪರಮಗುರು

ಆರಿದ ಬಾಯಿಗೆ ಹೀರುವ ಹಾಲು ಸಂಜೆಯ ಜೋಳಿಗೆ ಜೋಗುಳ ಹಾಡು
ಓದುವ ಮಗುವಿಗೆ ಶ್ರೀ ಓಂ ನಾಮ ಹಾಡುವ ಹೈದಗೆ ದೇವರ ನಾಮ
ಕೋರಿದ ವರವ ತೀರಿಸಿ ಬಿಡುವ...
ಕೋರಿದ ವರವ ತೀರಿಸಿ ಬಿಡುವ ತಾಯಿಗಿಂತ ದೇವರೆ ಇಲ್ಲ
ಕಾಣದ ದೇವರು, ಊರಿಗೆ ನೂರು, ಹುಡುಕುವರಾರು
ಕಾಣುವ ತಾಯೇ ಪರಮಗುರು
ಕಾಣದ ದೇವರು, ಊರಿಗೆ ನೂರು, ಹುಡುಕುವರಾರು
ಕಾಣುವ ತಾಯೇ ಪರಮಗುರು
--------------------------------------------------------------------------------------------------------------------------

ಸುವರ್ಣ ಭೂಮಿ (1969)
ಸಾಹಿತ್ಯ: ಕು.ರಾ.ಸೀತಾರಾಮ ಶಾಸ್ತ್ರಿ  ಸಂಗೀತ: ವಿಜಯ ಭಾಸ್ಕರ್  ಹಾಡಿದವರು: ಪಿ.ಬಿ.ಎಸ್, ಕೆ.ಜೆ.ಏಸುದಾಸ 


ಪಿಬಿಎಸ್. : ಕಾಣದ ದೇವರು, ಊರಿಗೆ ನೂರು, ಹುಡುಕುವರಾರು
                  ಕಾಣುವ ತಾಯೇ ಪರಮಗುರು.. ಅಮ್ಮಾ
ಕೆಜೆಏ: ಕಾಣದ ದೇವರು, ಊರಿಗೆ ನೂರು, ಹುಡುಕುವರಾರು
          ಕಾಣುವ ತಾಯೇ ಪರಮಗುರು

ಕೆಜೆಏ:  ಸಾವಿರ ಕಾಳಗ ಕಾದುವ ಧೀರ ನಾಡನು ನಡುಗಿಪ ದರೋಡೆಕೋರ
            ಸಾವಿರ ಕಾಳಗ ಕಾದುವ ಧೀರ ನಾಡನು ನಡುಗಿಪ ದರೋಡೆಕೋರ
            ಗಂಡರ ಗಂಡ ರಣಭೇರುಂಡ
            ಗಂಡರ ಗಂಡ ರಣಭೇರುಂಡ ಹಾಕಬೇಕು ಪಾದಕೆ ದಂಡ
ಪಿಬಿಎಸ್. : ಕಾಣದ ದೇವರು, ಊರಿಗೆ ನೂರು, ಹುಡುಕುವರಾರು
                  ಕಾಣುವ ತಾಯೇ ಪರಮಗುರು.. ಅಮ್ಮಾ

ಪಿಬಿಎಸ್. :ಬೇತ್ಲೆ ಹೇಮಿನಾ ಏಸು ಕ್ರಿಸ್ತ ಮಕ್ಕಾ ನಗರದ ಗುರು ಪೈಗಂಬರ
               ಬೇತ್ಲೆ ಹೇಮಿನಾ ಏಸು ಕ್ರಿಸ್ತ ಮಕ್ಕಾ ನಗರದ ಗುರು ಪೈಗಂಬರ
               ರಾಘವ ಯಾದವ ಎಲ್ಲಾ ದೈವ
               ರಾಘವ ಯಾದವ ಎಲ್ಲಾ ದೈವ ತಾಯ್ ಮುಂದೆ ಬಾಲಕರವ್ವ
ಕೆಜೆಏ:   ಕಾಣದ ದೇವರು, ಊರಿಗೆ ನೂರು, ಹುಡುಕುವರಾರು
            ಕಾಣುವ ತಾಯೇ ಪರಮಗುರು
ಇಬ್ಬರು :   ಕಾಣದ ದೇವರು, ಊರಿಗೆ ನೂರು, ಹುಡುಕುವರಾರು
            ಕಾಣುವ ತಾಯೇ ಪರಮಗುರು
--------------------------------------------------------------------------------------------------------------------------

ಸುವರ್ಣ ಭೂಮಿ (1969)
ಸಾಹಿತ್ಯ: ಕು.ರಾ.ಸೀತಾರಾಮ ಶಾಸ್ತ್ರಿ  ಸಂಗೀತ: ವಿಜಯ ಭಾಸ್ಕರ್  ಹಾಡಿದವರು: ಪಿ.ಸುಶೀಲಾ 


ಭಲೇ ಸಂಚುಗಾರ ಮಹಾ ಮೋಸಗಾರ
ಭಲೇ ಸಂಚುಗಾರ ಮಹಾ ಮೋಸಗಾರ
ಬಳಿಬಂದ ಹೆಣ್ಣಿನ ಮನ ವಿಕಾರ ಗೈದ ವೀರ
ಭಲೇ ಸಂಚುಗಾರ ಮಹಾ ಮೋಸಗಾರ

ಹಳೆ ನೇಹ ಅರಿಸಿ ಬರಲು ಹೊಸದಾಹ ಬೆರೆಸಿ ತಂದೆ
ಹಳೆ ನೇಹ ಅರಿಸಿ ಬರಲು ಹೊಸದಾಹ ಬೆರೆಸಿ ತಂದೆ
ತಿಳಿಹಾಸ್ಯ ತಿರುವಲ್ಲೇ ಬಿಸಿಪ್ರೇಮ ಹೇರ ಬಂದೆ
ಎದೆ ಸೂರೆಗೈವ ಮೂಡಿ ಅಸಮಾನ್ಯ ಗಾರುಡಿ
ಸವಿ ತುಂಬಿದಂಥ ಇಂತ ಮೋಸದಲ್ಲೇ ಮೋಹವಲ್ಲೇ
ಭಲೇ ಸಂಚುಗಾರ ಮಹಾ ಮೋಸಗಾರ


ಬಳಿಬಂದ ಹೆಣ್ಣಿನ ಮನ ವಿಕಾರ ಗೈದ ವೀರ
ಭಲೇ ಸಂಚುಗಾರ ಮಹಾ ಮೋಸಗಾರ

ನೆಲೆ ಕಾಣುದಂತ ಅಮಲ ಅಲೆ ಅಲೆ ಬೀರಬಲ್ಲ
ನೆಲೆ ಕಾಣುದಂತ ಅಮಲ ಅಲೆ ಅಲೆ ಬೀರಬಲ್ಲ
ಮುದ ಮೂಡವಂಥ ನಿಮಿರ ಹದ ತಿಳಿದ ಕಾರ್ಯ ಚತುರ
ಹೆಡೆ ಎತ್ತಿ ಬಂತು ಬಯಕೆ ನಿರಾತಂಕ ಪ್ರೇಮಕೆ
ಬಿಗುತೊರೆದ ನನ್ನ ಮನ ಮೈ ಕಾದ ಮೇಣ ಗೈವ ಜಾಣ
ಭಲೇ ಸಂಚುಗಾರ ಮಹಾ ಮೋಸಗಾರ
ಬಳಿಬಂದ ಹೆಣ್ಣಿನ ಮನ ವಿಕಾರ ಗೈದ ವೀರ
ಭಲೇ ಸಂಚುಗಾರ ಮಹಾ ಮೋಸಗಾರ
--------------------------------------------------------------------------------------------------------------------------

ಸುವರ್ಣ ಭೂಮಿ (1969)
ಸಾಹಿತ್ಯ: ಕು.ರಾ.ಸೀತಾರಾಮ ಶಾಸ್ತ್ರಿ  ಸಂಗೀತ: ವಿಜಯ ಭಾಸ್ಕರ್  ಹಾಡಿದವರು: ಪಿ.ಬಿ.ಶ್ರೀನಿವಾಸ, ಎಸ್.ಜಾನಕಿ 


ಗಂಡು : ಒಹೋ...ಓಓಓಓಓ ಒಹೋ...ಓಓಓಓಓ
ಕೋರಸ್ : ಓ..ಹೊಯಿಲೇ ಹೋಯಿ ಹೊಯಿಲೇ ಹೋಯಿ ಹೊಯಿಲೇ
             ಕಣದ .ಹೊಯಗಳ ಬಣದ ..ಹೊಯಗಳ ಹೊಯಿಲೇ ಹೋಯಿ ಹೊಯಿಲೇ  ಯ್ಯಾ
             ಓಓಓಓಓಓಓ.... ಓಓಓಓಓಓಓ.... 
ಗಂಡು : ಸಿರಿ ಕನ್ನಡ ನಾಡು ಪುಣ್ಯದ ಬೀಡು ಸುಂದರ
            ಹಾಲು ಜೇನು ಎರೆವ ಮಂದಾರ
ಹೆಣ್ಣು : ಬರಿ ಹೊನ್ನಿನ ಹೊಂಬೆಳೆ ಬೆಳೆಯುವ ತಾಯಿ ಈ ನೆಲ
           ಇಂಥ ತಾಯಿಗೆ ಜೋಡಿ ಇನ್ನಿಲ್ಲಾ
ಇಬ್ಬರು : ಓಯ್ ಒಕ್ಕಲ ಮಕ್ಕಳಾ ಅಕ್ಕರೆ ತಾಯಿ
           ದುಡಿವ ಬಡವರ ಕಾಯುವ ತಾಯಿ ನಾನಾ ಪುರುಷರ ಮಹಾತಾಯಿ
ಗಂಡು : ಯಾಹುಂ ಯಾಹುಂ ಯಾಹುಂ ಯಾಹುಂ ಯಾಹುಂ
 ಕೋರಸ್ :  ಸಿರಿ ಕನ್ನಡ ನಾಡು ಪುಣ್ಯದ ಬೀಡು ಸುಂದರ
                  ಹಾಲು ಜೇನು ಎರೆವ ಮಂದಾರ

ಗಂಡು : ಭೂಮಿ ನೀರು ಗಾಳಿ.. ಎಲ್ಲಾ ಮಹಾತಾಯಿಯ
             ತುತ್ತು ಎಂಬುದ ಅರಿಯ ಮರುಳ
            ನನ್ನದು ನಿನ್ನದು ಎಂಬುವುದೆಲ್ಲ ಏನು ಇಲ್ಲ
            ಹಂಚಿ ಕೊಂಡರೆ ಹಬ್ಬದ ಊಟ
           ತಿರಿದು ತಿಂದರೆ ಹದ್ದಿನ ಕಾಟ ಕೇಳು ಭಂಟ
ಹೆಣ್ಣು :ಹೊಯ್  ನಾಡಿನ ಜನರ ನೆಮ್ಮದಿಗಾಗಿ
          ಹೆಣಗುವ ತ್ಯಾಗಿ ನೇಗಿಲ ಯೋಗಿ ಕಾಯಕ ಧರ್ಮದ ಬೈರಾಗಿ
ಇಬ್ಬರು : ಸಿರಿ ಕನ್ನಡ ನಾಡು ಪುಣ್ಯದ ಬೀಡು ಸುಂದರ
             ಹಾಲು ಜೇನು ಎರೆವ ಮಂದಾರ

ಗಂಡು : ಒಹೋ... ಓಓಓಓಓ...
ಹೆಣ್ಣು : ಅಂತೂ ಇಂತೂ ಎಂತು ಸುಗ್ಗಿ  ಬಂತು ಈಗಲೇ
           ಕೈ ಕೆಸರಯ್ಯ ಬಾಯಿ ಮೊಸರೇಲ್ಲಿ ಮೈ ಕೈಯನ್ನು
           ಹಾಯಿಸಿ ಇನ್ನು ಹೊನ್ನು ಹೊನ್ನು
ಗಂಡು : ಹೊನ್ನು ಅಂದರೆ ಅರಳಿಸಿ ಕಣ್ಣಾ
            ಪಿಳಿ ಪಿಳಿ ನೋಡುವ ಹಳ್ಳಿ ಹೆಣ್ಣ ನೋಡ ಅಣ್ಣ
ಇಬ್ಬರು : ಹೆಣ್ಣು ಹೊನ್ನು ಎಲ್ಲ ಕೂಡಿ ಹಿಗ್ಗುತಾ ಸುಗ್ಗಿಯ ಕುಣಿತವ ಹೂಡಿ
             ಮರೆಯ ಮೋಜಿನ ಈ ಮೋಡಿ
             ಸಿರಿ ಕನ್ನಡ ನಾಡು ಪುಣ್ಯದ ಬೀಡು ಸುಂದರ
             ಹಾಲು ಜೇನು ಎರೆವ ಮಂದಾರ
ಹೆಣ್ಣು : ಆಆಆ.... ಆಆಆ
ಗಂಡು : ಅರ್ಥ ಪರ್ಥ ಬೇಕೇ ಇನ್ನ ಈ ಮೋಜಿಗೇ
            ಹೆಜ್ಜೆ ಗೆಜ್ಜೆಗೆ ಪೂಜೆ ಇಲ್ಲ ತಾಳ ಮೇಳದ ಗೀಳೇ ಇಲ್ಲ ಗೋಳೇ ಇಲ್ಲ
ಹೆಣ್ಣು : ಮಾತಿಗೆ ಮಾತು ಹೇಗೋ ನೀತಿ
          ಏನೋ ರಾಗದ ಏನೋ ಹಾಡು ಒಂದೇ ಜಾಣ
ಇಬ್ಬರು : ಹೊಯ್ ಹಿಗ್ಗಿನ ಹಾಡಿಗೆ ತುದಿ ಮೊದಲಿಲ್ಲ
             ಸುಗ್ಗಿಯ ಕುಣಿತಕೆ ಅಡೆತಡೆಯಿಲ್ಲ ಇಲ್ಲದ ಸಲ್ಲದ ಹಂಗಿಲ್ಲಾ..           
             ಸಿರಿ ಕನ್ನಡ ನಾಡು ಪುಣ್ಯದ ಬೀಡು ಸುಂದರ
             ಹಾಲು ಜೇನು ಎರೆವ ಮಂದಾರ
             ಬರಿ ಹೊನ್ನಿನ ಹೊಂಬೆಳೆ ಬೆಳೆಯುವ ತಾಯಿ ಈ ನೆಲ
            ಇಂಥ ತಾಯಿಗೆ ಜೋಡಿ ಇನ್ನಿಲ್ಲಾ
             ಓ..ಹೊಯಿಲೇ ಹೋಯಿ ಹೊಯಿಲೇ ಹೋಯಿ ಹೊಯಿಲೇ
             ಕಣದ .ಹೊಯಗಳ ಬಣದ ..ಹೊಯಗಳ ಹೊಯಿಲೇ ಹೋಯಿ ಹೊಯಿಲೇ  ಯ್ಯಾ
ಗಂಡು : ವಾಹುಂ ವಾಹುಂ ವಾಹುಂ ವಾಹುಂ ವಾಹುಂ ವಾಹುಂ
            ವಾಹುಂ ವಾಹುಂ ವಾಹುಂ ವಾಹುಂ ವಾಹುಂ ವಾಹುಂ
            ಹೊಯ್... ಹೈ ಹೈ ಹೈ ಹೈ ಹೈ ಹೈ ಓ.. ಹೈ ಹೈ ಹೈ ಹೈ
-------------------------------------------------------------------------------------------------------------------------



No comments:

Post a Comment