32. ಬಂಗಾರದ ಹೂವು (1967)



ಬಂಗಾರದ ಹೂವು ಚಿತ್ರದ ಹಾಡುಗಳು 
  1. ಡು ಡೂ ಬಸವಣ್ಣ 
  2. ಆ ಮೊಗವು ಎಂಥಾ ಚೆಲುವು 
  3. ಓಡುವ ನದಿ ಸಾಗರವ ಸೇರಲೇಬೇಕು 
  4. ಓದಿ ಓದಿ ಕುಚಭಟ್ಟನಾಗಬೇಡ 
  5. ಮದುವೇ ಮದುವೇ 
  6. ನೀ ನಡೆವ ಹಾದಿಯಲ್ಲಿ 

ಬಂಗಾರದ ಹೂವು (1967) - ಆ ಮೊಗವು 
ಸಾಹಿತ್ಯ: ಚಿ. ಉದಯಶಂಕರ್    ಸಂಗೀತ: ರಾಜನ್-ನಾಗೇಂದ್ರ    ಗಾಯನ: ಪಿ. ಬಿ. ಶ್ರೀನಿವಾಸ್


ಆ ಮೊಗವು ಎಂಥ ಚೆಲುವು
ಮನವ ಸೆಳೆವ ಬಂಗಾರದ ಹೂವು
ಆ ಮೊಗವು ಎಂಥ ಚೆಲುವು
ಮನವ ಸೆಳೆವ ಬಂಗಾರದ ಹೂವು
ಆ ಮೊಗವು ಎಂಥ ಚೆಲುವು

ಮಿಂಚಂತೆ ಬಂದೆ ಮನದಲ್ಲಿ ನಿಂತೆ
ಮೈ ಮರೆಸಿ ಮನ ಕುಣಿಸಿ ಆನಂದ ತಂದೆ
ಕುಡಿ ನೋಟ ಬೀರಿ ನಸುನಗುವ ತೋರಿ
ಹಿಂದೆಂದು ಕಾಣದ ಸುಖವನ್ನು ತಂದೆ
ಚಂದಿರನ ನಾಚಿಸುವ ಚೆಲುವನ್ನೇ ಪಡೆದ
ಆ ಮೊಗವು ಎಂಥ ಚೆಲುವು
ಮನವ ಸೆಳೆವ ಬಂಗಾರದ ಹೂವು
ಆ ಮೊಗವು ಎಂಥ ಚೆಲುವು

ನಿನ್ನ ನಡೆಯು ಕುಣಿವ ನವಿಲಂತೆ ಇರಲು
ಇನ್ನೆಂತಹ ಸೊಬಗು ನೀ ನಾಟ್ಯವಾಡಲು
ಕವಿ ಮಾತು ನೂರಾರು ಕಣ್ಣಲ್ಲಿ ಇರಲು
ಇನ್ನೆಂತಹ ಸೊಗಸು ನೀ ಹಾಡುತಿರಲು
ಅರಳಿದ ಕೆಂದಾವರೆಯ ಅಂದವ ಮೀರಿಸುವ
ಆ ಮೊಗವು ಎಂಥ ಚೆಲುವು
ಮನವ ಸೆಳೆವ ಬಂಗಾರದ ಹೂವು
ಆ ಮೊಗವು..
-------------------------------------------------------------------------------------------------------------------------

ಬಂಗಾರದ ಹೂವು (1967) - ಮದುವೆ ಮದುವೆ ಮದುವೆ

ಸಾಹಿತ್ಯ : ಚಿ.ಉದಯಶಂಕರ್  ಸಂಗೀತ : ರಾಜನ್-ನಾಗೇಂದ್ರ  ಹಾಡಿದವರು : ಪಿ.ಸುಶೀಲ, ಎಸ್.ಜಾನಕಿ


ಮದುವೆ ಮದುವೆ ಮದುವೆ ಹೆಣ್ಣಿಗು ಗಂಡಿಗು ಮದುವೆ
ಮದುವೆ ಮದುವೆ ಮದುವೆ.. ಹೆಣ್ಣಿಗು ಗಂಡಿಗು ಮದುವೆ
ಸಂಭ್ರಮ ತುಂಬಿದ ಹಬ್ಬದ ದಿನವೇ ಸಂತೋಷದ ದಿನವೇ
ಮದುವೆ ಮದುವೆ ಮದುವೆ ಹೆಣ್ಣಿಗು ಗಂಡಿಗು ಮದುವೆ
ಸಂಭ್ರಮ ತುಂಬಿದ ಹಬ್ಬದ ದಿನವೇ ಸಂತೋಷದ ದಿನವೇ
ಮದುವೆ ಮದುವೆ ಮದುವೆ ಹೆಣ್ಣಿಗು ಗಂಡಿಗು ಮದುವೆ

ಬಾಗಿಲಲಿ ಬಾರಿ ಛಪ್ಪರ ಹಾಕಿ ಮಾವಿನ ಎಲೆಗಳ ತೋರಣ ಕಟ್ಟಿ
ಬಾಗಿಲಲಿ ಬಾರಿ ಛಪ್ಪರ ಹಾಕಿ ಮಾವಿನ ಎಲೆಗಳ ತೋರಣ ಕಟ್ಟಿ
ಹೆಣ್ಣನು ಗಂಡಲು ಸಿಂಗರಿಸಿ ಮಂತ್ರವ ಹೇಳಿಸಿ ವಾದ್ಯವ ಮೊಳಗಿಸಿ
ಹಸಮಣೆ ಮೇಲೆ ಅವರನು ಕೂರಿಸಿ ಮಾಡುವ ಈ ಶುಭಕಾರ್ಯವೇ
ಮದುವೆ ಮದುವೆ ಮದುವೆ ಹೆಣ್ಣಿಗು ಗಂಡಿಗು ಮದುವೆ

ಠೀವಿಯಿಂದಲೇ ಬರುವ ಮದುವೆ ಗಂಡು ನಾಚುತ ನಾಚುತ ಬರುವಳು ಹೆಣ್ಣು
ಠೀವಿಯಿಂದಲೇ ಬರುವ ಮದುವೆ ಗಂಡು ನಾಚುತ ನಾಚುತ ಬರುವಳು ಹೆಣ್ಣು
ಒಬ್ಬರನೊಬ್ಬರು ಕದ್ದೂ ನೋಡಲು ಮಂಗಳ ಮುಹೂರ್ತ ಕೂಡುತ ಬರಲು
ಮದುವೆ ಗಂಡು ತಾಳಿಯ ಕಟ್ಟಲು ಮದುವೆ ಗಂಡು ತಾಳಿಯ ಕಟ್ಟಲು
ಮುತ್ತೈದೆಯರು ಆರತಿ ಬೆಳಗಲು
ಮದುವೆ ಮದುವೆ ಮದುವೆ ಹೆಣ್ಣಿಗು ಗಂಡಿಗು ಮದುವೆ
ಸಂಭ್ರಮ ತುಂಬಿದ ಹಬ್ಬದ ದಿನವೇ ಸಂತೋಷದ ದಿನವೇ
ಮದುವೆ ಮದುವೆ ಮದುವೆ... ಮದುವೆ ಮದುವೆ ಮದುವೆ
-------------------------------------------------------------------------------------------------------------------

ಬಂಗಾರದ ಹೂವು (1967) - ನೀ ನಡೆವ ಹಾದಿಯಲ್ಲಿ
ಸಾಹಿತ್ಯ: ವಿಜಯನಾರಸಿಂಹ   ಸಂಗೀತ: ರಾಜನ್-ನಾಗೇಂದ್ರ  ಗಾಯನ: ಪಿ.ಸುಶೀಲ, ಎಸ್.ಜಾನಕಿ

         ನೀ ನಡೆವ ಹಾದಿಯಲ್ಲಿ ನಗೆ ಹೂವು ಬಾಡದಿರಲಿ
          ಈ ಬಾಳ ಬುತ್ತಿಯಲಿ ಸಿಹಿ ಪಾಲು ನಿನಗಿರಲಿ
          ಈ ಬಾಳ ಬುತ್ತಿಯಲಿ ಸಿಹಿ ಪಾಲು ನಿನಗಿರಲಿ ಕಹಿ ಎಲ್ಲ ನನಗಿರಲಿ
         ನೀ ನಡೆವ ಹಾದಿಯಲ್ಲಿ ನಗೆ ಹೂವು ಬಾಡದಿರಲಿ
          ಈ ಬಾಳ ಬುತ್ತಿಯಲಿ ಸಿಹಿ ಪಾಲು ನಿನಗಿರಲಿ ಕಹಿ ಎಲ್ಲ ನನಗಿರಲಿ

ಸಹನೆ ಮೀರಿ ಕಾಣದ ಕೈಗೆ ಮಾಡಿತೇನೋ ಮೈಯಿಗೆ ಮುಯ್ಯಿ
ಯಾರು ಇದಕೆ ಹೊಣೆಯೇ ಇಲ್ಲ ಇರಲಿ ನನಗೆ ನಿಂದನೆ ಎಲ್ಲ ಅ..ಆ..ಆ.
ವಿಧಿಯು ಹೂಡಿ ಒಳಸಂಚನ್ನು ತೊರೆಯಿತೆನ್ನ ಹೊಂಗನಸನ್ನು
ನೋವ ನುಂಗಿ ಬಾಳುವೆ ನಾನು ಸುಖವು ನಿನ್ನ ಕಾಡಿತೇನು
ಈ ಬೇಗೆ ನೀಗಲಿ ಮನಸು ಹಗುರವಾಗಲಿ
ನೀ ನಡೆವ ಹಾದಿಯಲ್ಲಿ ನಗೆ ಹೂವು ಬಾಡದಿರಲಿ

ಏನೇನೊ ಬಯಸಿತು ಮನಸು ಕೈ ಸೇರೆ ಎಲ್ಲಾ ಸೊಗಸು
ಕೈ ಜಾರೆ ಎಲ್ಲಾ ಕನಸು ಆಸೆ ಮರೆತರೇ ಲೇಸು
ನನ್ನ ಕಣ್ಣ ನೀರಿನಲ್ಲಿ ನಿನ್ನ ಬಿಂಬ ಕಾಣುತಿರಲಿ
ಈ ಬಾಳು ಇಂತೆ ಇರಲಿ ನಿನ್ನ ನೆನವು ಚಿರವಾಗಿರಲಿ
ಈ ಬೇಗೆ ನೀಗಲಿ ಮನಸು ಹಗುರವಾಗಲಿ
ನೀ ನಡೆವ ಹಾದಿಯಲ್ಲಿ ನಗೆ ಹೂವು ಬಾಡದಿರಲಿ
ಈ ಬಾಳ ಬುತ್ತಿಯಲಿ ಸಿಹಿ ಪಾಲು ನಿನಗಿರಲಿ ಕಹಿ ಎಲ್ಲ ನನಗಿರಲಿ
ಸಿಹಿ ಪಾಲು ನಿನಗಿರಲಿ ಕಹಿ ಎಲ್ಲ ನನಗಿರಲಿ
-------------------------------------------------------------------------------------------------------------------------

ಬಂಗಾರದ ಹೂವು (1967) - ಓದಿ ಓದಿ ಓದಿ ಓದಿ ಕೂಚುಭಟ್ಟನಾಗಬೇಡ

ಸಂಗೀತ: ರಾಜನ್-ನಾಗೇಂದ್ರ  ಗಾಯನ: ಎಸ್.ಜಾನಕಿ


ಹೆಣ್ಣು : ಓದಿ ಓದಿ ಓದಿ ಓದಿ ಕೂಚುಭಟ್ಟನಾಗಬೇಡ
        ಸಂಜೆ ಕವಳು ಪಾಠ ಹಾಳು ಎನ್ನೋ ಗಾದೆ ಮರೆಯಬೇಡ
        ತಲೆಯ ಕೆಡಿಸಿಕೊಳ್ಳಬೇಡ
        ಓದಿ ಓದಿ ಓದಿ ಓದಿ ಕೂಚುಭಟ್ಟನಾಗಬೇಡ
        ಸಂಜೆ ಕವಳು ಪಾಠ ಹಾಳು ಎನ್ನೋ ಗಾದೆ ಮರೆಯಬೇಡ
        ತಲೆಯ ಕೆಡಿಸಿಕೊಳ್ಳಬೇಡ

ತಂಗಾಳಿಯಲ್ಲಿ ವಾಕಿಂಗ್ ಹೋಗೋಣ ಬಾ ಬಾ ಡಾರ್ಲಿಂಗ್
ತಂಗಾಳಿಯಲ್ಲಿ ವಾಕಿಂಗ್ ಹೋಗೋಣ ಬಾ ಬಾ ಡಾರ್ಲಿಂಗ್
ಜೀವನ ಜ್ಯಾಮಿಟ್ರಿ ಅಲ್ಲ ಬಾಳೆಲ್ಲ ಬಾಟ್ನಿ ಅಲ್ಲ
ಲೈಫಲಿ ಈ ಓದಿಗೆಲ್ಲ ಬೆಲೆಯೆ ಇಲ್ಲ
ಜೀವನ ಜ್ಯಾಮಿಟ್ರಿ ಅಲ್ಲ ಬಾಳೆಲ್ಲ ಬಾಟ್ನಿ ಅಲ್ಲ
ಲೈಫಲಿ ಈ ಓದಿಗೆಲ್ಲ ಬೆಲೆಯೆ ಇಲ್ಲ
ಪುಸ್ತಕ ಹಿಡಿದು ಜೀವನದಲ್ಲಿ ಏನನು ಸಾಧಿಸಬಲ್ಲೆ
ಬಾಳಲು ಅನುಭವ ಬೇಕು ಬರಿ ಪುಸ್ತಕ ಪಾಠವು ಸಾಕು
ಬಾಳಲು ಅನುಭವ ಬೇಕು ಬರಿ ಪುಸ್ತಕ ಪಾಠವು ಸಾಕು
ಕಣ್ಣಿಹುದು ನೋಡಲೆಂದು ಹಣ್ಣಿಹುದು ತಿನ್ನಲೆಂದು
ವಯಸಿಹುದು ಸುಖ ಪಡಲೆಂದು ನೀನಿದ ತಿಳಿದು
ಕಣ್ಣಿಹುದು ನೋಡಲೆಂದು ಹಣ್ಣಿಹುದು ತಿನ್ನಲೆಂದು
ವಯಸಿಹುದು ಸುಖ ಪಡಲೆಂದು ನೀನಿದ ತಿಳಿದು
ಹೆಣ್ಣೇ ಬಂದಾಗ ಕಣ್ಣನು ಮುಚ್ಚಿದ ಮಂಕನಂಥೆ ನೀನಾಗದೆ
ರಸಿಕನಾಗಿ ಬಾಳು ಇದು ಜೀವನದರ್ಥವು ಕೇಳು
ರಸಿಕನಾಗಿ ಬಾಳು ಇದು ಜೀವನದರ್ಥವು ಕೇಳು
ಓದಿ ಓದಿ ಓದಿ ಓದಿ ಕೂಚುಭಟ್ಟನಾಗಬೇಡ
ಸಂಜೆ ಕವಳು ಪಾಠ ಹಾಳು ಎನ್ನೋ ಗಾದೆ ಮರೆಯಬೇಡ ತಲೆಯ ಕೆಡಿಸಿಕೊಳ್ಳಬೇಡ
ಅರೆ..ಓದಿ ಓದಿ ಓದಿ ಓದಿ ಕೂಚುಭಟ್ಟನಾಗಬೇಡ
ಸಂಜೆ ಕವಳು ಪಾಠ ಹಾಳು ಎನ್ನೋ ಗಾದೆ ಮರೆಯಬೇಡ ತಲೆಯ ಕೆಡಿಸಿಕೊಳ್ಳಬೇಡ
ತಂಗಾಳಿಯಲ್ಲಿ ವಾಕಿಂಗ್ ಹೋಗೋಣ ಬಾ ಬಾ ಡಾರ್ಲಿಂಗ್
ತಂಗಾಳಿಯಲ್ಲಿ ವಾಕಿಂಗ್ ಹೋಗೋಣ ಬಾ ಬಾ ಡಾರ್ಲಿಂಗ್
ಲಲಾಲ ಲಾಲ ಲಲಾಲ ಲ ಲಾಲ
------------------------------------------------------------------------------------------------------------------------

ಬಂಗಾರದ ಹೂವು (1967) - ಓಡುವ ನದಿ ಸಾಗರವ ಬೆರೆಯಲೆ ಬೇಕು

ಸಾಹಿತ್ಯ : ಚಿ.ಉದಯ ಶಂಕರ್   ಸಂಗೀತ : ರಾಜನ್-ನಾಗೇಂದ್ರ  ಗಾಯನ : ಪಿ.ಬಿ.ಶ್ರೀನಿವಾಸ್, ಪಿ.ಸುಶೀಲ

ಗಂಡು : ಓಡುವ ನದಿ ಸಾಗರವ ಬೆರೆಯಲೆ ಬೇಕು
           ನಾನು ನೀನು ಎಂದಾದರು ಸೇರಲೆ ಬೇಕು
           ಸೇರಿ ಬಾಳಲೆ ಬೇಕು ಬಾಳು ಬೆಳಗಲೆ ಬೇಕು
ಹೆಣ್ಣು : ಹೃದಯ ಹಗುರಾಯಿತು ಬದುಕು ಜೇನಾಯಿತು
          ನಿನ್ನ ವಚನ ಹೊಸಬಾಳಿಗೆ ನಾಂದಿಯಾಯಿತು
ಗಂಡು : ಓಡುವ ನದಿ ಸಾಗರವ ಬೆರೆಯಲೆಬೇಕು
           ನಾನು ನೀನು ಎಂದಾದರು ಸೇರಲೆಬೇಕು
          ಸೇರಿ ಬಾಳಲೆಬೇಕು ಬಾಳು ಬೆಳಗಲೆಬೇಕು

ಹೆಣ್ಣು : ದೂರ ಬೆಟ್ಟದಲ್ಲಿ ಪುಟ್ಟ ಮನೆಯಿರಬೇಕು
          ಮನೆಯ ಸುತ್ತ ಹೂವರಾಶಿ ಹಾಸಿರಬೇಕು
          ದೂರ ಬೆಟ್ಟದಲ್ಲಿ ಪುಟ್ಟ ಮನೆಯಿರಬೇಕು
          ಮನೆಯ ಸುತ್ತ ಹೂವರಾಶಿ ಹಾಸಿರಬೇಕು
ಗಂಡು : ತಂಗಾಳಿ ಜೋಗುಳವ ಹಾಡಲೆಬೇಕು
            ತಂಗಾಳಿ ಜೋಗುಳವ ಹಾಡಲೆಬೇಕು
           ಬಂಗಾರದ ಹೂವೆ ನೀನು ನಗುತಿರಬೇಕು ನನ್ನ ಜೊತೆಗಿರಬೇಕು
ಹೆಣ್ಣು : ಓಡುವ ನದಿ ಸಾಗರವ ಬೆರೆಯಲೆ ಬೇಕು
          ನಾನು ನೀನು ಎಂದಾದರು ಸೇರಲೆಬೇಕು
         ಸೇರಿ ಬಾಳಲೆಬೇಕು ಬಾಳು ಬೆಳಗಲೆಬೇಕು

ಹೆಣ್ಣು : ಆ..ಆ..ಹಾ            ಗಂಡು : ಓ..ಹೊ..ಹೋ
ಹೆಣ್ಣು : ಓ..ಹೋ..ಹೋ     ಗಂಡು : ಆ..ಅ..ಅಹಾ
ಗಂಡು : ನನ್ನ ಬಾಳ ನಗುವ ನಿನ್ನ ಮುಖದಿ ಕಾಣುವೆ
            ಹರುಷದಲ್ಲಿ ದುಃಖದಲ್ಲಿ ಭಾಗಿಯಾಗುವೆ
            ನನ್ನ ಬಾಳ ನಗುವ ನಿನ್ನ ಮುಖದಿ ಕಾಣುವೆ
           ಹರುಷದಲ್ಲಿ ದುಃಖದಲ್ಲಿ ಭಾಗಿಯಾಗುವೆ
ಹೆಣ್ಣು : ಎಲ್ಲಿ ಹೋದರಲ್ಲಿ ನಿನ್ನ ನೆರಳಾಗಿರುವೆ
           ಎಲ್ಲಿ ಹೋದರಲ್ಲಿ ನಿನ್ನ ನೆರಳಾಗಿರುವೆ
          ಬಳ್ಳಿ ಮರವ ಹಬ್ಬಿದಂತೆ ನಿನ್ನೊಡನಿರುವೆ ಬಯಕೆ ಪೂರೈಸುವೆ
ಇಬ್ಬರೂ : ಓಡುವ ನದಿ ಸಾಗರವ ಬೆರೆಯಲೆಬೇಕು
              ನಾನು ನೀನು ಎಂದಾದರು ಸೇರಲೆಬೇಕು
             ಸೇರಿ ಬಾಳಲೆಬೇಕು ಬಾಳು ಬೆಳಗಲೆಬೇಕು
             ಹೃದಯ ಹಗುರಾಯಿತು ಬದುಕು ಜೇನಾಯಿತು
            ನಿನ್ನ ವಚನ ಹೊಸಬಾಳಿಗೆ ನಾಂದಿಯಾಯಿತು
            ಲಾಲ ಲಾಲ ಲಾಲ ಲಾಲ ಲಲ ಲಾಲಲ  ಆಹಹ
           ಲಾಲಲ ಓಹೊಹೋ ಲಾಲಲ  ಉಹುಹು ಉಹುಹು
---------------------------------------------------------------------------------------------------------------------

ಬಂಗಾರದ ಹೂವು (1967) - ಡೂಡು ಡೂಡು ಬಸವಣ್ಣ ಡಿಡಿ ಕೊಡುವೆ
ಸಾಹಿತ್ಯ: ಚಿ. ಉದಯಶಂಕರ ಸಂಗೀತ: ರಾಜನ್-ನಾಗೇಂದ್ರ ಗಾಯನ: ಪಿ.ಬಿ.ಶ್ರೀನಿವಾಸ & ಎಲ್.ಆರ್.ಈಶ್ವರಿ

ಹೆಣ್ಣು : ಡೂಡು ಡೂಡು
ಸಂಗಡಿಗರು : ಅ..ಹ..ಹಾ
ಹೆಣ್ಣು : ಡಿಡಿ ಡಿಡಿ
ಸಂಗಡಿಗರು : ಒ..ಹೊ..ಹೋ
ಹೆಣ್ಣು : ಡೂಡು ಡೂಡು ಬಸವಣ್ಣ ಡಿಡಿ ಕೊಡುವೆ ಬಾರಣ್ಣ
          ಹೆಜ್ಜೆಯ ಮೇಲೆ ಹೆಜ್ಜೆಯ ಹಾಕುತ ಬಾ ಬಾ ಗುಮ್ಮಣ್ಣ   ಅಯ್ಯೊ ಎಮ್ಮೆ ತಮ್ಮಣ್ಣ
ಹೆಣ್ಣು : ಡೂಡು ಡೂಡು ಬಸವಣ್ಣ ಡಿಡಿ ಕೊಡುವೆ ಬಾರಣ್ಣ
          ಹೆಜ್ಜೆಯ ಮೇಲೆ ಹೆಜ್ಜೆಯ ಹಾಕುತ ಬಾ ಬಾ ಗುಮ್ಮಣ್ಣ   ಅಯ್ಯೊ ಎಮ್ಮೆ ತಮ್ಮಣ್ಣ
ಹೆಣ್ಣು : ಆಡಿದ ಮಾತು ಕೇಳದೆ
           ಆಡಿದ ಮಾತು ಕೇಳದೆ ಹಾಡಲು ಬಾಯಿ ಬಾರದೆ
ಸಂಗಡಿಗರು : ಅಯ್ಯಯ್ಯಯ್ಯೇ ಕಿವಿಡ ಕಣೇ ಮಾತೇ ಬಾರದ ಮೂಗ ಕಣೆ  ಯಾ..ಯಾ
ಹೆಣ್ಣು : ರು.ರು.ರುಕ್ಕು ರು.ರು.ರುಕ್ಕು
ಸಂಗಡಿಗರು : ಯಾ..ಯಾ
ಹೆಣ್ಣು : ರು.ರು.ರುಕ್ಕು ಹೈ ಹೈ
ಹೆಣ್ಣು : ಅಂದವ ಕಾಣದ ಕುರುಡನೆ
           ಅಂದವ ಕಾಣದ ಕುರುಡನೆ ಕುಣಿತವು ಬಾರದ ಕುಂಟನೆ
ಸಂಗಡಿಗರು : ಅಯ್ಯಯ್ಯಯ್ಯೇ ಪೆಚ್ಚು ಕಣೇ ಹೆಣ್ಣಿಗೆ ಹೆದರೋ ಹುಚ್ಚು ಕಣೇ
ಹೆಣ್ಣು : ಚೆಲುವನ ಕೈಯಿಗೆ ಬಳೆಯನ್ನ ತೊಡಿಸೋಣ
ಹೆಣ್ಣು : ಡೂಡು ಡೂಡು ಬಸವಣ್ಣ ಡಿಡಿ ಕೊಡುವೆ ಬಾರಣ್ಣ
          ಹೆಜ್ಜೆಯ ಮೇಲೆ ಹೆಜ್ಜೆಯ ಹಾಕುತ ಬಾ ಬಾ ಗುಮ್ಮಣ್ಣ  ಅಯ್ಯೊ ಎಮ್ಮೆ ತಮ್ಮಣ್ಣ
ಸಂಗಡಿಗರು : ಹಾ...ಹಾ..ಹಾ

ಗಂಡು : ಹೆ..ಹೇ..ಕುರುಡ್ನಲ್ಲ ಕುಂಟ್ನಲ್ಲ ಮೂಗ್ನಲ್ಲ ಕಿವುಡ್ನಲ್ಲ ಕಿಲಾಡಿರಂಗ ಕಣೇ
            ಗೌರವ ಘನತೆಗೆ ಭಯಪಟ್ಟು ಸುಮ್ನಿದ್ದ ಕನ್ನಡ ಜಾಣ ಕಣೇ
            ಕುರುಡ್ನಲ್ಲ ಕುಂಟ್ನಲ್ಲ ಮೂಗ್ನಲ್ಲ ಕಿವುಡ್ನಲ್ಲ ಕಿಲಾಡಿ ರಂಗ ಕಣೇ
            ಗೌರವ ಘನತೆಗೆ ಭಯಪಟ್ಟು ಸುಮ್ನಿದ್ದ ಕನ್ನಡ ಜಾಣ ಕಣೇ
            ಕುಣಿಯಲು ಬಲ್ಲೆ ಕುಣಿಸಲು ಬಲ್ಲೆ ಎಲ್ಲಾ ಬಲ್ಲೆ ಕಣೇ
ಗಂಡು : ಡೂಡು ಡೂಡು ಬಸಮ್ಮ ಡಿಡಿ ಕೊಡುವೆ ಬಾರಮ್ಮ
            ಅ..ಡೂಡು ಡೂಡು ಬಸಮ್ಮ ಡಿಡಿ ಕೊಡುವೆ ಬಾರಮ್ಮ
           ಲಜ್ಜೆಯ ಬಿಟ್ಟು ಹೆಜ್ಜೆಯ ಹಾಕಲು ಮಾನ ಮರ್ಯಾದೆ ಮೀಸ್ಲಮ್ಮ
            ಲಜ್ಜೆಯ ಬಿಟ್ಟು ಹೆಜ್ಜೆಯ ಹಾಕಲು ಮಾನ ಮರ್ಯಾದೆ ಮೀಸ್ಲಮ್ಮ
ಗಂಡು : ಅ..ಹ..ಹಾ
ಗಂಡು : ಒ..ಹೊ..ಹೋ

No comments:

Post a Comment