ರಾಟೆ ಚಲನಚಿತ್ರದ ಹಾಡುಗಳು
- ಜೋಡಕ್ಕಿ ಗೂಡ್ ಕಟ್ಕಂತಾವೆ
- ರಾಜಾ ರಾಣಿ
- ನನ್ನ ಬೆನ್ನಲಿನ
- ರಾಜ ರಾಣಿಯಂತೇ
- ದೇವರು ಇಲ್ಲದ
- ರಟ್ಟಿ ಪುಟ್ಟ
ರಾಟೆ (೨೦೧೫) - ಜೋಡಕ್ಕಿ ಗೂಡ್ ಕಟ್ಕಂತಾವೆ
ಸಂಗೀತ: ವಿ.ಹರಿಕೃಷ್ಣ ಸಾಹಿತ್ಯ: ಎ.ಪಿ.ಅರ್ಜುನ್ ಹಾಡಿದವರು: ಕಿಚ್ಚ ಸುದೀಪ್
ಜೋಡಕ್ಕಿ ಗೂಡ್ ಕಟ್ಕಂತಾವೆ ಗೂಡಲ್ಲಿ ಬೀಡ್ ಬಿಡ್ಕಂತಾವೆ
ಬೆಳ್ಳಕ್ಕಿ ಎಡೆಮಾಡ್ಕಂತಾವೆ ಮಡಿಲಂಗೆ ಸರಿಮಾಡ್ಕಂತಾವೆ
ಮರದಿಣ್ಣೆ ಕೊಂಡುವ ಕಷ್ಟ ಇಲ್ಲ ಬಾಡಿಗೆ ಕಟ್ಟೋ ಚಿಂತೆ ಇಲ್ಲ
ಬದುಕಾ ಕಟ್ಕಂತಾವೆ ಖುಸಿಯಾ ಪಡ್ಕಂತಾವೆ
ಜೋಡಕ್ಕಿ ಗೂಡ್ ಕಟ್ಕಂತಾವೆ ಗೂಡಲ್ಲಿ ಬೀಡ್ ಬಿಡ್ಕಂತಾವೆ
ಜೋಡಕ್ಕಿ ಗೂಡ್ ಕಟ್ಕಂತಾವೆ
ಕಾಡು ಮದ್ಯೆ ಜೋಡಿ ಹೂವು ಯಾರೋ ಇಟ್ಟ ದೃಷ್ಟಿ ಬೊಟ್ಟು
ಅವನು ಬಡವ ಅವಳು ಬಡವಿ ಪ್ರೀತಿ ಒಂದೇ ಇವರ ಗುಟುಕು
ಎದೆಬಡಿತ ಕೂಡ, ಅಲುಗಾಡೋದಿಲ್ಲ ಇಬ್ಬರ ಒಪ್ಪಿಗೆ ಇರದೇ…
ಮನಸೂರಿನ ಪಕ್ಕ ಸಿಕ್ಕಿದ ರಾಣಿ ಉಸಿರೂರಿನ ಒಳಗೆ ಒಪ್ಪಿದ ರಾಜ
ಇಬ್ರೂ ಸಂದಾಗವ್ರೆ ಹೆಂಗೋ ಖುಸಿಯಾಗವ್ರೆ
ನಾಕು ಕಣ್ಣು ಒಂದೇ ಮನವಿ ಎರಡು ಜೀವ ಒಂದೇ ಉಸಿರು
ಅವನಿಗೆ ಅವಳೇ ರಾತ್ರಿ ಹಗಲು ಇವನ ತೋಳೇ ಅವಳ ಮಡಿಲು
ಈ ಪ್ರೀತಿಯ ಜೊತೆಗೆ, ಕಡೆವರೆಗು ಇರಲಿ ಅವರೂರಿನ ಬೀರಪ್ಪನ ಕರುಣೇ…
ಅಪರೂಪಕೆ ಸಿಗುವ ಅಮೃತ ಬಳ್ಳಿ ಆ ಬಳ್ಳಿಯ ಕಾಯೋ ಕಾವಲುಗಾರಇಬ್ರೂ ಜೊತೆಯಾಗವ್ರೆ ಹೆಂಗೋ ಖುಸಿಯಾಗವ್ರೆ ಜೋಡಕ್ಕಿ
-------------------------------------------------------------------------------

ರಾಟೆ (೨೦೧೫) - ರಟ್ಟಿ ಪುಟ್ಟ
ಸಂಗೀತ: ವಿ.ಹರಿಕೃಷ್ಣ ಸಾಹಿತ್ಯ: ಎ.ಪಿ.ಅರ್ಜುನ್ ಗಾಯನ : ವಾಣಿ ಹರಿಕೃಷ್ಣ, ಸಂತೋಷ್
ರಟ್ಟಿ ಪುಟ್ಟ, ರಟ್ಟಿ ಪುಟ್ಟ,ರಾ,,,ಆ...ರಾಟೆ
ರಟ್ಟಿ ಪುಟ್ಟ, ರಟ್ಟಿ ಪುಟ್ಟ,ರಾ,,,ಆ...ರಾಟೆ
ರಟ್ಟಿ ಪುಟ್ಟ, ರಟ್ಟಿ ಪುಟ್ಟ,ರಾ,,,ಆ...ರಾಟೆ
ನಗ್ತವಳೇ ನನ್ನರಸಿ ಪ್ರೀತಿಯ ಎದೆಗೊರಸಿ
ಟರ್,,, ಅಂತ ತಿರುಗೈತೆ ರಾಟೆ...
ಇವಳೊಬ್ಬಳು ನಂಗಂತ,ನಾನೊಬ್ಬ ಇವಳಗಂತ
ಒಪಕೊಂಡು ತಿರುಗೈತೆ ರಾಟೆ.....
ಮನಸೋಳಗೆ ಮಂಟಪನಾ,, ನಂಗಾಗಿ ಕಟ್ಟವನೋ
ಬೆಟ್ಟದಷ್ಟು ಪ್ರೀತಿನಾ,,ಆ,, ಅದರೊಳಗೆ ಇಟ್ಟವನೋ
ದೃಷ್ಟಿ ಆಯ್ತದೆ ನೋಡಬೇಡಿ,,,
ಫೆಸಲ್ಲಾಗೈತೆ ನಮ್ ಜೋಡಿ.
ರಟ್ಟು ಪುಟ್ಟ, ರಟ್ಟು ಪುಟ್ಟ,ರಾ,,,ಯೆ...ರಾಟೆ
ರಟ್ಟು ಪುಟ್ಟ, ರಟ್ಟು ಪುಟ್ಟ,ರಾ,,,ಯೆ...ರಾಟೆ
ರಟ್ಟು ಪುಟ್ಟ, ರಟ್ಟು ಪುಟ್ಟ,ರಾ,,,ಯೆ...ರಾಟೆ
ರಟ್ಟು ಪುಟ್ಟ, ರಟ್ಟು ಪುಟ್ಟ,ರಾ,,,ಯೆ...ರಾಟೆ
ಈ ಹಾಡನ್ನು ಸ್ಮುಲ್ ಗೆ ರವಾನಿಸಿದವರು
ಹೆಸರು ಕಾಳ್ ಮೇಲೆ, ನಮ್ಮ,,ಹೆಸರು.
ಬರೆದುಬಿಟ್ಟವನೆ,ಎಲ್ಲಾ,, ನಮ್ಗೆ ಬಿಟ್ಟವನೆ.
ಎದೆಯ ಮೊಗ್ಗಲಲ್ಲಿ ನಿನ್ನೀರಿಸಿ,
ಉಸಿರು ಕೊಟ್ಟವನೆ, ಪ್ರೀತಿ, ಬುತ್ತಿ ಕಟ್ಟವನೆ.
ರಾಗಿ ಕಲ್ಲು ಸದ್ದು ಒಳ್ಳೆ,,,ಸೋ,,,,ಬಾನೆ.
ಸ್ಯಾನೇ ಪ್ರೀತಿ ಮಾಡೋ ಜೀವಾ,,ನೀ,,,ನೆನೇ
ಈ ಮೂತಿ ಮ್ಯಾಲೊಂದು ಪದ ಬರದು ಹಾಡ್ತೀನಿ
ಕಟ್ಟುಕೊಳ್ಳದೆ ಹೋದ್ರುನೂ ಹೆಂಡರಾಗೆ ಇರ್ತೀನಿ
ದೃಷ್ಟಿ ಆಯ್ತದೆ ನೋಡಬೇಡಿ,,,,
ಫೆಸಲ್ಲಾಗೈತೆ ನಮ್ ಜೋಡಿ.
ರಟ್ಟು ಪುಟ್ಟ, ರಟ್ಟು ಪುಟ್ಟ,ರಾ,,,ಯೆ...ರಾಟೆ
ರಟ್ಟು ಪುಟ್ಟ, ರಟ್ಟು ಪುಟ್ಟ,ರಾ,,,ಯೆ...ರಾಟೆ
ರಟ್ಟು ಪುಟ್ಟ, ರಟ್ಟು ಪುಟ್ಟ,ರಾ,,,ಯೆ...ರಾಟೆ
ರಟ್ಟು ಪುಟ್ಟ, ರಟ್ಟು ಪುಟ್ಟ,ರಾ,,,ಯೆ...ರಾಟೆ
ಜೋಡಿ ಎತ್ತಂಗೆ, ನಮ್ಮಿಬ್ರ ಜೊತೆಗೆ ಬಿಟ್ಟವನೆ
ಪ್ರೀತಿ ನೆಗಲು ಕಟ್ಟವನೆ.....
ಗಂಗೆ ಅಂತೋಳ್ ತಂದುಬುಟ್ಟು
ನಮ್ಗೆ ಕೊಟ್ಟವನೆ, ಮನಸ ತಣ್ಣಗಿಟ್ಟವನೆ.
ಬೆಳ್ಳಿ, ಬಟ್ಟಲು,ಹಾಲು ಇವನು,,ಸೂ.... ರಾನೇ.
ಚಿನ್ನ ಬೆಳ್ಳಿ ಎಲ್ಲಾ ನಂಗೆ,,ನೀ..... ನೆನೇ
ಎಣಿಯ ಮ್ಯಾಲ್ ನಿಂತು, ಸೂರ್ಯನಾ ತಡಿತೀವಿ
ಆರತಿ ಮಾಡಂತಾ,,, ಎರಡು ಮೂತಿ ಹಿಡಿತೀವಿ
ದೃಷ್ಟಿ ಆಯ್ತದೆ ನೋಡಬೇಡಿ,,,
ಫೆಸಲ್ಲಾಗೈತೆ ನಮ್ ಜೋಡಿ.
ರಟ್ಟಿ ಪುಟ್ಟ, ರಟ್ಟಿ ಪುಟ್ಟ,ರಾ,,,ಆ...ರಾಟೆ
ರಟ್ಟಿ ಪುಟ್ಟ, ರಟ್ಟಿ ಪುಟ್ಟ,ರಾ,,,ಆ...ರಾಟೆ
ರಟ್ಟು ಪುಟ್ಟ, ರಟ್ಟು ಪುಟ್ಟ,ರಾ,,,ಯೆ...ರಾಟೆ
ರಟ್ಟು ಪುಟ್ಟ, ರಟ್ಟು ಪುಟ್ಟ,ರಾ,,,ಯೆ...ರಾಟೆ
ನಗ್ತವಳೇ ನನ್ನರಸಿ ಪ್ರೀತಿಯ ಎದೆಗೊರಸಿ
ಟರ್,,, ಅಂತ ತಿರುಗೈತೆ ರಾಟೆ...
ಇವಳೊಬ್ಬಳು ನಂಗಂತ,ನಾನೊಬ್ಬ ಇವಳಗಂತ
ಒಪಕೊಂಡು ತಿರುಗೈತೆ ರಾಟೆ.....
-----------------------------------------------------------------------------------
ರಾಟೆ (೨೦೧೫) - ರಾಜಾ ರಾಣಿ
ಸಂಗೀತ: ವಿ.ಹರಿಕೃಷ್ಣ ಸಾಹಿತ್ಯ: ಎ.ಪಿ.ಅರ್ಜುನ್ ಗಾಯನ : ಸಂತೋಷ ವೆಂಕಿ
ರಾಜ ರಾಣಿಯಂತೆ ನಾನು ನೀನು ಹಾಲು ಜೇನಿನಂತೆ ನೀನು ನಾನು
ಅದೇ ನಗು ಅದೇ ತರ ಜೊತೆ ಇದೆ ನಿರಂತರ
ತನು ಮನ ಪರಸ್ಪರ ಇರಲಿ ಹೀಗೆ
ರಾಜ ರಾಣಿಯಂತೆ ನಾನು ನೀನು ಹಾಲು ಜೇನಿನಂತೆ ನೀನು ನಾನು
ಎಲ್ಲಿಯೂ ಕಾಣದ ಪ್ರೀತಿ ನಮಗಾಗಿ
ಬಂದಿದೆ ಭೂಮಿಗೆ ನಮ್ಮ ಸಲುವಾಗಿ
ಹೆಜ್ಜೆ ಇಡಬೇಕು ಒಂದೇ ಸಮವಾಗಿ
ನೋವಿನಲಿ ನಗುವಾಗಿ ನಾನಿರುವೆ ನಿನಗಾಗಿ
ಕನಸುಗಳ ಕಾಣೋಕೆ ಉಳಿವೇನು ಕಣ್ಣಾಗಿ
ಪ್ರೀತಿಸುವೆನು ನಿನ್ನ ನಾನು
ದೇವರು ಕೊಟ್ಟಿರೋ ಹೂವು ನೀನು
ಎಂದಿಗೂ ಬಾಳುವ ಹೀಗೆ ಒಂದಾಗಿ
ರಾಜ ರಾಣಿಯಂತೆ ನಾನು ನೀನು ಹಾಲು ಜೇನಿನಂತೆ ನೀನು ನಾನು
ಲೋಕವೇ ಮೆಚ್ಚುವ ವಧು ವರರಾಗಿ
ನೀನೇ ಇರಬೇಕು ನನಗೆ ಮಗುವಾಗಿ
ಜೊತೆ ಬರುವೆ ಎಂದೆಂದೂ ನೆರಳಾಗಿ ಬದಲಾಗಿ
ಹೀಗೆ ಇರು ನೀನೆಂದೂ ಪ್ರತಿ ದಿನವೂ ಸುಖವಾಗಿ
ಕಾವಲಿರುವೆ ಎಂದು ನಾನು ಯಾವುದೋ ಜನ್ಮದ ಪುಣ್ಯ ನೀನು
ರಾಜ ರಾಣಿಯಂತೆ ನಾನು ನೀನು ಹಾಲು ಜೇನಿನಂತೆ ನೀನು ನಾನು
-----------------------------------------------------------------------------------
ರಾಟೆ (೨೦೧೫) - ನನ್ನ ಬೆನ್ನಲಿನ
ಸಂಗೀತ: ವಿ.ಹರಿಕೃಷ್ಣ ಸಾಹಿತ್ಯ: ಯೋಗರಾಜ ಭಟ್ಟ ಗಾಯನ : ಸೋನು ನಿಗಮ್
ರಾಟೆ (೨೦೧೫) - ನನ್ನ ಬೆನ್ನಲಿನ
ಸಂಗೀತ: ವಿ.ಹರಿಕೃಷ್ಣ ಸಾಹಿತ್ಯ: ಯೋಗರಾಜ ಭಟ್ಟ ಗಾಯನ : ಸೋನು ನಿಗಮ್
ನನ್ನ ಬೆನ್ನಲ್ಲಿನ ಕಣ್ಣೆಲ್ಲ ಅವಳ ಕಂಡೆ
ಉಸಿರು ಕಟ್ಟುವುದು ನಿಂತಲ್ಲೇ ನಿಂತ ಕಡೆ
ಕನಸು ನಕ್ಷತ್ರ ಹುಡುಕುವುದು ಎಲ್ಲಾ ಕಡೆ
ವಯಸ್ಸು ತಿಳಿಯದಲೇ ಇಳಿಯುವುದು ಇಂತಾ ಕಡೆ
ತುಂಬಾ ನಡುಗುವೇನು ಕನ್ನಡಿಯ ಕಂಡು
ನನ್ನಂತ ನನಗು ಏನಾಯಿತಿಂದು
ಈ ಒಂಟಿ ರಾತ್ರಿಯಲಿ ಅವಳ ಗುಂಗು
ನನಗೇಕೋ ಕೇಳಿಸದು ನನ್ನ ಕೂಗು
ನನ್ನ ಬೆನ್ನಲ್ಲಿನ ಕಣ್ಣೆಲ್ಲ ಅವಳ ಕಂಡೆ
ಉಸಿರು ಕಟ್ಟುವುದು ನಿಂತಲ್ಲೇ ನಿಂತ ಕಡೆ
ಕೆಂಪು ಕಿರುಬೆರಳೆ ನೆನಪಾಗದಿರಿ ಕಾಡಿಸದಿರಿ ಸುಮ್ಮನೆ ಇರೀ
ಅನುರಾಗದ ಈ ನೋವಿಗೆ ಏನ್ ಹೆಸರಿಡಲಿ
ಅನುರಾಗದ ಈ ನೋವಿಗೆ ಏನ್ ಹೆಸರಿಡಲಿ
ಎದೆಯೊಳಗಡೆ ಎದೆಯೊಂದಿದೆ
ನೆನಪಗೋಳಡೇ ನೆನಪೊಂದಿದೆ
ಈ ಒಂಟಿ ರಾತ್ರಿಯಲಿ ಅವಳ ಗುಂಗು
ನನಗೇಕೋ ಕೇಳಿಸದು ನನ್ನ ಕೂಗು
ನನ್ನ ಬೆನ್ನಲ್ಲಿನ ಕಣ್ಣೆಲ್ಲ ಅವಳ ಕಂಡೆ
ಉಸಿರು ಕಟ್ಟುವುದು ನಿಂತಲ್ಲೇ ನಿಂತ ಕಡೆ
ಒಲವೆಂಬುವುದು ಮಳೆಗಾಲ ಬಾಯಾರಿದಂತೆ
ಕಾದು ಎಚ್ಚರ ನಾಳೆ ಹೃದಯ ಕಾಲ ಜಾರಿದಂತೆ
ಅವಳೆಂದರೆ ಮನದಾಳದ ಕೊನೆಯಾಸೆಯಂತೆ
ಅವಳೆಂದರೆ ಮನದಾಳದ ಕೊನೆಯಾಸೆಯಂತೆ
ಅವಳಿಲ್ಲದ ಕಾಡು ಹುಣ್ಣಿಮೆ ಸುಡುಗಾಡಿನಂತೆ
ಅವಳೆಂದರೆ ಏನೇನ್ನಲಿ ಏನನದಿರಲಿ
ಅವಳೆಂದರೆ ಏನೇನ್ನಲಿ ಏನನದಿರಲಿ
ನೆನಪಿನಲಿ ನಂದೆನ್ನಲಿ ಕನಸೆಂದರೆ ನನಸೇನ್ನಲ್ಲಿ
ಅವಳೆಂದರೆ ಏನೇನ್ನಲಿ ಏನನದಿರಲಿ
ನೆನಪಿನಲಿ ನಂದೆನ್ನಲಿ ಕನಸೆಂದರೆ ನನಸೇನ್ನಲ್ಲಿ
ಈ ಒಂಟಿ ರಾತ್ರಿಯಲಿ ಅವಳ ಗುಂಗು
ನನಗೇಕೋ ಕೇಳಿಸದು ನನ್ನ ಕೂಗು
ನನ್ನ ಬೆನ್ನಲ್ಲಿನ ಕಣ್ಣೆಲ್ಲ ಅವಳ ಕಂಡೆ
ಉಸಿರು ಕಟ್ಟುವುದು ನಿಂತಲ್ಲೇ ನಿಂತ ಕಡೆ
-----------------------------------------------------------------------------------
ರಾಟೆ (೨೦೧೫) - ರಾಜ ರಾಣಿಯಂತೇ
ಸಂಗೀತ: ವಿ.ಹರಿಕೃಷ್ಣ ಸಾಹಿತ್ಯ: ಎ.ಪಿ.ಅರ್ಜುನ್ ಗಾಯನ : ಶ್ರೇಯಾ ಘೋಷಾಲ್
ರಾಜರಾಣಿಯಂತೆ ನಾನು ನೀನು
ಹಾಲು ಜೇನಿನಂತೆ ನೀನು ನಾನು
ಅದೇ ನಗು ಅದೇ ತರ ಜೊತೆ ಇದೆ ನಿರಂತರ
ತನು ಮನ ಪರಸ್ಪರ ಇರಲಿ ಹೀಗೆ
ರಾಜರಾಣಿಯಂತೆ ನಾನು ನೀನು
ಹಾಲು ಜೇನಿನಂತೆ ನೀನು ನಾನು
ಬಂದಿದೆ ಭೂಮಿಗೆ ನಮ್ಮ ಸಲುವಾಗಿ
ಹೆಜ್ಜೆ ಇಡಬೇಕು ಒಂದೇ ಸಮವಾಗಿ
ನೋವಿನಲಿ ನಗುವಾಗಿ ನಾನಿರುವೆ ನಿನಗಾಗಿ
ಕನಸುಗಳ ಕಾಣೋಕೆ ಉಳಿವೇನೂ ಕಣ್ಣಾಗಿ
ಪ್ರೀತಿಸುವೆನು ನಿನ್ನ ನಾನು ದೇವರು ಕೊಟ್ಟಿರೋ ಹೂವು ನೀನು
ರಾಜರಾಣಿಯಂತೆ ನಾನು ನೀನು
ಹಾಲು ಜೇನಿನಂತೆ ನೀನು ನಾನು
ಎಂದಿಗೂ ಬಾಳುವ ಹೀಗೆ ಒಂದಾಗಿ
ಲೋಕವೇ ಮೆಚ್ಚುವ ವಧುವರರಾಗಿ
ನೀನೇ ಇರಬೇಕು ನನಗೆ ಮಗುವಾಗಿ
ಜೊತೆ ಬರುವೆ ಎಂದೆಂದೂ ನೆರಳಾಗಿ ಬದಲಾಗಿ
ಹೀಗೆ ಇರು ನೀನೆಂದೂ ಪ್ರತಿ ದಿನವೂ ಸುಖವಾಗಿ
ಕಾವಲಿರುವೆ ಎಂದೂ ನಾನು
ಯಾವುದೋ ಜನ್ಮದ ಪುಣ್ಯ ನೀನು
ರಾಜರಾಣಿಯಂತೆ ನಾನು ನೀನು
ಹಾಲು ಜೇನಿನಂತೆ ನೀನು ನಾನು
-----------------------------------------------------------------------------------
ರಾಟೆ (೨೦೧೫) - ದೇವರು ಇಲ್ಲದ
ಸಂಗೀತ: ವಿ.ಹರಿಕೃಷ್ಣ ಸಾಹಿತ್ಯ: ಎ.ಪಿ.ಅರ್ಜುನ್, ಗಾಯನ : ಸಂತೋಷ ವೆಂಕಿ
ದೇವರು ಇಲ್ಲದ ಗುಡಿಯ ಬದಲಾಗಿ
ಸಿಕ್ಕಿದೆ ಸ್ವರ್ಗವು ಅದಲು ಬದಲಾಗಿ
ಎಲ್ಲಿ ಉಳಿಯೋಣಾ..ಒಂದೇ ಉಸಿರಾಗಿ
ಕಷ್ಟಸುಖ ತಿಳಿಯೋಣ
ಗಿಡ ಮರದ ಒಡಲಾಗಿ
ಹೊಸ ಬದುಕ ಕಲಿಯೋಣ
ಮಳೆ ಹಣಿಯ ಮನಸಾಗಿ
ಮಡಿಲು ಕೊಡುವೆ..ನಿನಗೆ ನಾನು...
ಜೀವವೇ ಹೋದರೂ
ಜೀವ ನೀನು...ರಾಜ ರಾಣಿಯಂತೆ ನಾನು ನೀನು
ಹಾಲು ಜೇನಿನಂತೆ ನಾನು ನೀನು
ಅದೇ ನಗು ಅದೇ ಥರ
ಜೊತೆ ಇದೆ ನಿರಂತರ
ತನುಮನ ಪರಸ್ಪರ ಇರಲಿ ಹೀಗೆ...
-----------------------------------------------------------------------------------
No comments:
Post a Comment