- ದೇವರೇ ಕೇಳು, ನ್ಯಾಯವೇ ಹೇಳು
- ಒಂದು ಕಥೆ ಕೇಳು ಮಗಳೇ ಮಗಳೇ ಚಂದವೋ ಚಂದವೂ
ದೃಶ್ಯ (2014) - ದೇವರೇ ಕೇಳು, ನ್ಯಾಯವೇ ಹೇಳು
ಸಂಗೀತ: ಇಳಯರಾಜ, ಸಾಹಿತ್ಯ: ವಿ.ನಾಗೇಂದ್ರ ಪ್ರಸಾದ್, ಹಾಡಿದವರು: ಶರತ್
ದೇವರೇ ಕೇಳು, ನ್ಯಾಯವೇ ಹೇಳು
ಕಣ್ತೆರೆದು ನೋಡು, ಈ ನಮ್ಮ ಪಾಡು
ಮಾನವ ನೋವಾದರೆ, ದೇವರ ಬೇಡಾಡುವ
ದೇವರೆ ನೋವು ನೀಡಿರೆ, ಯಾರಿಗೆ ತಾ ಹೇಳುವ
ದೇವರೇ ಕೇಳು
ಮರಗಿಡದ ಜೀವಕಳೆವ, ಕ್ರಿಮಿಗಳ ಕೊಲ್ಲುವುದು ನ್ಯಾಯ
ಗಿಳಿಗಳಿರೊ ಗೂಡಿನೊಳಗೆ, ಹಾವನು ಬಿಡುವುದು ಹೇಯ
ಹುಲಿಗೆ ಹುಲಿ, ಬೇಟೆ ಎನುವ, ನಿಯಮವು ಮೃಗಗಳಿಗಿಲ್ಲ
ಮನುಜನರು ಏಕೋ ತಿಳಿಯೆ, ಮನುಜನೆ ಕೊಲ್ಲುತಿಹನಲ್ಲ
ಹಾಳಾದರೆ ದಾರ, ಚೂರಾಗದೆ ಹಾರ
ಕಾಯೋ ದೇವ ಬಂದು, ಹಾಗೆ ಬಂದು ಬಾಳಲು
ದೇವರೇ ಕೇಳು, ನ್ಯಾಯವೇ ಹೇಳು
ಖುಷಿಪಡುತ ಬಾಳುತಿಹರು ಕೆಡುಕರು ಇದು ಕಲಿಗಾಲ
ಸುಗುಣರಿಗೆ ನೋವು ಅಳುವು, ಎಲ್ಲಿ ಇದೆ ಉಳಿಗಾಲ
ಬದುಕಿನಲಿ ಏನೆ ಬರಲಿ, ಎದುರಿಸೊ ಬಲವನು ನೀಡೋ
ಎದುರಿನಲಿ ಯಾರೆ ಬರಲಿ, ಮನಸನು ಅಚಲವ ಮಾಡೋ
ಹಾಲಾಹಲ ಇಲ್ಲಿ, ಗಂಗಾಜಲ ಎಲ್ಲಿ
ನೀನೆ ನಮ್ಮ ದಿಕ್ಕು, ತಾನೆ ಬಂದು ಕೈಹಿಡಿ
ದೇವರೇ ಕೇಳು, ನ್ಯಾಯವೇ ಹೇಳು
ಕಣ್ತೆರೆದು ನೋಡು, ಈ ನಮ್ಮ ಪಾಡು
ಮಾನವ ನೋವಾದರೆ, ದೇವರ ಬೇಡಾಡುವ
ದೇವರೆ ನೋವು ನೀಡಿರೆ, ಯಾರಿಗೆ ತಾ ಹೇಳುವ
ದೇವರೇ ಕೇಳು
ಕಣ್ತೆರೆದು ನೋಡು, ಈ ನಮ್ಮ ಪಾಡು
ಮಾನವ ನೋವಾದರೆ, ದೇವರ ಬೇಡಾಡುವ
ದೇವರೆ ನೋವು ನೀಡಿರೆ, ಯಾರಿಗೆ ತಾ ಹೇಳುವ
ದೇವರೇ ಕೇಳು
ಮರಗಿಡದ ಜೀವಕಳೆವ, ಕ್ರಿಮಿಗಳ ಕೊಲ್ಲುವುದು ನ್ಯಾಯ
ಗಿಳಿಗಳಿರೊ ಗೂಡಿನೊಳಗೆ, ಹಾವನು ಬಿಡುವುದು ಹೇಯ
ಹುಲಿಗೆ ಹುಲಿ, ಬೇಟೆ ಎನುವ, ನಿಯಮವು ಮೃಗಗಳಿಗಿಲ್ಲ
ಮನುಜನರು ಏಕೋ ತಿಳಿಯೆ, ಮನುಜನೆ ಕೊಲ್ಲುತಿಹನಲ್ಲ
ಹಾಳಾದರೆ ದಾರ, ಚೂರಾಗದೆ ಹಾರ
ಕಾಯೋ ದೇವ ಬಂದು, ಹಾಗೆ ಬಂದು ಬಾಳಲು
ದೇವರೇ ಕೇಳು, ನ್ಯಾಯವೇ ಹೇಳು
ಖುಷಿಪಡುತ ಬಾಳುತಿಹರು ಕೆಡುಕರು ಇದು ಕಲಿಗಾಲ
ಸುಗುಣರಿಗೆ ನೋವು ಅಳುವು, ಎಲ್ಲಿ ಇದೆ ಉಳಿಗಾಲ
ಬದುಕಿನಲಿ ಏನೆ ಬರಲಿ, ಎದುರಿಸೊ ಬಲವನು ನೀಡೋ
ಎದುರಿನಲಿ ಯಾರೆ ಬರಲಿ, ಮನಸನು ಅಚಲವ ಮಾಡೋ
ಹಾಲಾಹಲ ಇಲ್ಲಿ, ಗಂಗಾಜಲ ಎಲ್ಲಿ
ನೀನೆ ನಮ್ಮ ದಿಕ್ಕು, ತಾನೆ ಬಂದು ಕೈಹಿಡಿ
ದೇವರೇ ಕೇಳು, ನ್ಯಾಯವೇ ಹೇಳು
ಕಣ್ತೆರೆದು ನೋಡು, ಈ ನಮ್ಮ ಪಾಡು
ಮಾನವ ನೋವಾದರೆ, ದೇವರ ಬೇಡಾಡುವ
ದೇವರೆ ನೋವು ನೀಡಿರೆ, ಯಾರಿಗೆ ತಾ ಹೇಳುವ
ದೇವರೇ ಕೇಳು
---------------------------------------------------------------------------
ದೃಶ್ಯ (2014) - ಒಂದು ಕಥೆ ಕೇಳು ಮಗಳೇ ಮಗಳೇ ಚಂದವೋ ಚಂದವೂ
ಸಾಹಿತ್ಯ: ವಿ.ನಾಗೇಂದ್ರ ಪ್ರಸಾದ, ಸಂಗೀತ: ಇಳಯರಾಜ ಗಾಯನ: ವಿಜಯ ಪ್ರಕಾಶ, ಪೂಜಾ, ,ಮಾನಸೀ , ಸುರಮುಖಿ
ನಿತ್ಯ ಸಂತೋಷ ಚಲುವೆ ಮನೆಯೂ ತುಂಬಿದ ಬಂಧವೋ
ತಂಪೂ ತಂಗಾಳಿಯು ನಾ ಹೇಳೋ ಕತೆಗೆ ಕಾಯುತಿದೇ
ಕಾಮನಬಿಲ್ಲೂ ಅದೇನೋ ಕಾತುರ ತುಂಬಿದೇ
ಹೇ..ಹೇ...ಹೇ.. ನಮ್ಮ ಕತೆಯು ಸಣ್ಣದೇ ಅದರ ಭಾವ ದೊಡ್ಡದೇ..
ನಮ್ಮ ಒಳಗೇ ಜನಿಸಿದೇ ಪ್ರೀತಿಯಿಂದ ನಡೆದಿದೆ
ಒಂದು ಕಥೆ ಕೇಳು ಮಗಳೇ ಮಗಳೇ ಚಂದವೋ ಚಂದವೂ
ನಿತ್ಯ ಸಂತೋಷ ಚಲುವೆ ಮನೆಯೂ ತುಂಬಿದ ಬಂಧವೋ
ಓ.. ಪುಣ್ಯಕೋಟಿ ಹಾಗೇ ಬಾಳುತೀವಿ ನಾವು
ಪಾಪ ಎಂಬ ಮಾತೇನೂ ಕಾಣದಂತೆ ನಾವೂ
ಸೂರ್ಯ ಚಂದ್ರರ ಆಣೆ ಮಗು ,ಮನಸೂ
ಶಾಂತಿ ಮಂತ್ರ ಸೇರಿ ಮನೆ ಸೊಗಸೂ
ಆ ದೈವ ಇಟ್ಟಂತೇ ಸಾಗೂ ಮುಳ್ಳಿದ ರೋಜ ಹೂವೂ
ಋತುಗತಿ ಬದಲಾಗೋ ಹಾಗೇನೂ ಆಗಲ್ಲ ನಾವೂ
ಓ.. ಸರಳ ಸಂಸಾರ ಸುಖವೇ ಸಂಚಾರ ಸವಿಸು ನಮ್ಮ ಕಥೇ ..
ಒಂದು ಕಥೆ ಕೇಳು ಮಗಳೇ ಮಗಳೇ ಚಂದವೋ ಚಂದವೂ
ನಿತ್ಯ ಸಂತೋಷ ಚಲುವೆ ಮನೆಯೂ ತುಂಬಿದ ಬಂಧವೋ
ಓ.. ತುಂಬಿ ಓಡೋ ಕಾವೇರಿ ನಾಟ್ಯ ಮಾಡುತ್ತಾಳೇ
ಕೋಗಿಲಮ್ಮಾ ಹಾಯಾಗೀ ಪದ್ಯ ಹಾಡುತ್ತಾಳೇ
ತಾಳ ಹಾಕುತ್ತಾವೇ ಗಿಳಿ ಬಳಗ ನೋಡಿ ನಮ್ಮ ಸ್ನೇಹ ಇಂಥ ಬೆರೆಗ
ಬೆಳ್ಳಕ್ಕಿ ಗೂಡನ್ನೂ ಕೇಳು ತಂದಾನ ಅಂತಾವೇ ಬಾಳೂ
ಎಲ್ಲೂ ನಮ್ಮದೇನೇ ಮಾತೂ
ಓ.. ನಗುವೇ ಆನಂದ ಬೆರೆತ ಶ್ರೀಗಂಧ ಗಾನವು ನಮ್ಮ ಕಥೆ...
ಒಂದು ಕಥೆ ಕೇಳು ಮಗಳೇ ಮಗಳೇ ಚಂದವೋ ಚಂದವೂ
ನಿತ್ಯ ಸಂತೋಷ ಚಲುವೆ ಮನೆಯೂ ತುಂಬಿದ ಬಂಧವೋ
ತಂಪೂ ತಂಗಾಳಿಯು ನಾ ಹೇಳೋ ಕತೆಗೆ ಕಾಯುತಿದೇ
ಕಾಮನಬಿಲ್ಲೂ ಅದೇನೋ ಕಾತುರ ತುಂಬಿದೇ
ಹೇ..ಹೇ...ಹೇ.. ನಮ್ಮ ಕತೆಯು ಸಣ್ಣದೇ ಅದರ ಭಾವ ದೊಡ್ಡದೇ..
ನಮ್ಮ ಒಳಗೇ ಜನಿಸಿದೇ ಪ್ರೀತಿಯಿಂದ ನಡೆದಿದೆ
ಒಂದು ಕಥೆ ಕೇಳು ಮಗಳೇ ಮಗಳೇ ಚಂದವೋ ಚಂದವೂ
ನಿತ್ಯ ಸಂತೋಷ ಚಲುವೆ ಮನೆಯೂ ತುಂಬಿದ ಬಂಧವೋ
---------------------------------------------------------------------------
No comments:
Post a Comment