ಮಿಸ್ಟರ್ ಡೂಪ್ಲಿಕೇಟ್ ಚಲನಚಿತ್ರದ ಹಾಡುಗಳು
- ನಿನ್ನನ್ನು ನೋಡುತ್ತಾ,
- ಮಿಂಚಿ ಮಾಯವಾಗುವೆ,
- ಹಾಗೇ ಸುಮ್ಮನೇ
- ನಾನ್ ನಾನ್
- ನಾನೇ ಹೀರೋ
ಮಿಸ್ಟರ್ ಡೂಪ್ಲಿಕೇಟ್ (೨೦೧೧) - ನಿನ್ನನ್ನು ನೋಡುತ್ತಾ,
ಸಂಗೀತ: ಮನೋ ಮೂರ್ತಿ ಸಾಹಿತ್ಯ: ಜಯಂತ್ ಕಾಯ್ಕಿಣಿ ಗಾಯನ : ಸೋನು ನಿಗಮ್, ಶ್ರೇಯಾ ಘೋಶಾಲ್
ನಿನ್ನನ್ನು ನೋಡುತ್ತಾ, ನಿನ್ನನ್ನೇ ನೋಡುತ್ತಾ
ಈ ಜೀವದಲ್ಲಿ ಈಗೊಂದು ದೀಪೋತ್ಸವ
ನನ್ನನ್ನು ಕೇಳುತ್ತಾ, ನನ್ನನ್ನೇ ಕೇಳುತ್ತಾ
ಆ ಸ್ವಪ್ನದಲ್ಲಿ ಬಂದೋನು ನೀನಲ್ಲವಾ
ನನ್ನಾ ಜೇಬಲಿ, ಉಳಿದಾ ಮಾತನು
ನೀನೇ ಊಹಿಸಿ ಹೇಳು ನೋಡುವಾ
ಕಣ್ಣಾ ಮುಂದೆಯೇ, ಸುಳಿದು ಹೋಗುವೆ
ನೀನೇ ನಿಲ್ಲಿಸೆ ಕೇಳು ನೋಡುವಾ
ನಿನ್ನನ್ನು ನೋಡುತ್ತಾ, ನಿನ್ನನ್ನೇ ನೋಡುತ್ತಾ
ಈ ಜೀವದಲ್ಲಿ ಈಗೊಂದು ದೀಪೋತ್ಸವ
ನನ್ನನ್ನು ಕೇಳುತ್ತಾ, ನನ್ನನ್ನೇ ಕೇಳುತ್ತಾ
ಆ ಸ್ವಪ್ನದಲ್ಲಿ ಬಂದೋನು ನೀನಲ್ಲವಾ
ಇದೇ ಈಗ ನೀ ಬಂದು ಹೋದಂತ ಸುಳಿವು
ಎಲ್ಲೆಲ್ಲೂ ನಗುತಾವೆ ಹೂ ಗೊಂಚಲು
ಹವಾಮಾನದಲ್ಲೇನೆ ಬಂತೇನು ಒಲವು
ನನ್ನಲ್ಲಿ ನವಿರಾಗಿ ನೀ ಮಿಂಚಲು
ನನ್ನಾ ಧಾಟಿಗೆ ಮನದ ಮೌನವ
ನೀನೇ ಜೋಡಿಸೆ ಹಾಡು ನೋಡುವಾ
ನಿನ್ನನ್ನು ನೋಡುತ್ತಾ, ನಿನ್ನನ್ನೇ ನೋಡುತ್ತಾ
ಈ ಜೀವದಲ್ಲಿ ಈಗೊಂದು ದೀಪೋತ್ಸವ
ನನ್ನನ್ನು ಕೇಳುತ್ತಾ, ನನ್ನನ್ನೇ ಕೇಳುತ್ತಾ
ಆ ಸ್ವಪ್ನದಲ್ಲಿ ಬಂದೋನು ನೀನಲ್ಲವಾ
ಖುಷಿಯಿಂದ ಕಣ್ಣಲ್ಲಿ ಬಂದಂತ ಹನಿಯು
ಈ ನಿನ್ನ ತುಟಿಯಲ್ಲಿ ಮುತ್ತಾಗಲಿ
ಅತಿ ಆಸೆಯೇನಿಲ್ಲ ಬೇಕೊಂದು ಕರೆಯು
ಈ ಪ್ರೀತಿ ನಿನಗಷ್ಟೆ ಗೊತ್ತಾಗಲಿ
ನನ್ನಾ ನಾಳೆಯ, ಮಧುರ ಚಿತ್ರವಾ
ನೀನೇ ರೂಪಿಸಿ, ನೀಡು ನೋಡುವಾ
ನಿನ್ನನ್ನು ನೋಡುತ್ತಾ, ನಿನ್ನನ್ನೇ ನೋಡುತ್ತಾ
ಈ ಜೀವದಲ್ಲಿ ಈಗೊಂದು ದೀಪೋತ್ಸವ
ಕಣ್ಣಾ ಮುಂದೆಯೇ, ಸುಳಿದು ಹೋಗುವೆ
ನೀನೇ ನಿಲ್ಲಿಸೆ ಕೇಳು ನೋಡುವಾ
ನನ್ನನ್ನು ಕೇಳುತ್ತಾ, ನನ್ನನ್ನೇ ಕೇಳುತ್ತಾ
ಆ ಸ್ವಪ್ನದಲ್ಲಿ ಬಂದೋನು ನೀನಲ್ಲವಾ
ನನ್ನಾ ಜೇಬಲಿ, ಉಳಿದಾ ಮಾತನು
ನೀನೇ ಊಹಿಸಿ ಹೇಳು ನೋಡುವಾ
--------------------------------------------------------------------------------------------------------------------------
ಮಿಸ್ಟರ್ ಡೂಪ್ಲಿಕೇಟ್ (೨೦೧೧) - ಮಿಂಚಿ ಮಾಯವಾಗುವೆ,
ಸಂಗೀತ: ಮನೋ ಮೂರ್ತಿ ಸಾಹಿತ್ಯ: ಜಯಂತ್ ಕಾಯ್ಕಿಣಿ ಗಾಯನ : ಚೇತನ್ ಸೋಸ್ಕ, ಮಾನಸ
ಮಿಂಚಿ ಮಾಯವಾಗುವೆ, ಮೆಚ್ಚುವಂತೆ ಕಾಡುವೆ
ಮಿಂಚಿ ಮಾಯವಾಗುವೆ, ಮೆಚ್ಚುವಂತೆ ಕಾಡುವೆ
ಚೂರುಪಾರು ಗೀಚಿದ ರೂಪರೇಖೆಯೆ
ಎಂದು ನೀನು ಬಣ್ಣ ತಾಳುವೆ
ಮಿಂಚಿ ಮಾಯವಾಗುವೆ, ಮೆಚ್ಚುವಂತೆ ಕಾಡುವೆ
ಮಿಂಚಿ ಮಾಯವಾಗುವೆ, ಮೆಚ್ಚುವಂತೆ ಕಾಡುವೆ
ಹಾದಿಯಲ್ಲಿ ಹೊಮ್ಮಿದ ಭಾವಗೀತೆಯೆ
ಎಂದು ನೀನು ನನ್ನದಾಗುವೆ
ಮಿಂಚಿ ಮಾಯವಾಗುವೆ
ಅದಾವ ಸೀಮೆಯಿಂದ ನೀನು, ರಾಶಿ ರಾಶಿ ಸ್ವಪ್ನವನ್ನು
ಹೊತ್ತುಕೊಂಡು ಬಂದೆ ಹೇಳು ಇಲ್ಲಿ ಹಂಚಲು
ಅತೀವವಾದ ಆಸೆಯಿಂದ, ಓಡಿ ಓಡಿ ಬಂದೆ ನಾನು
ಬೆನ್ನ ಹಿಂದೆ ನಿಂತು ನಿನ್ನ ಕಣ್ಣ ಮುಚ್ಚಲು
ಇದೇ ತಾನೆ ದೂರದಿಂದ ತಂಗಾಳಿಯಂತೆ ಬಂದು
ಮತ್ತೆಲ್ಲಿ ಮತ್ತೆಲ್ಲಿ ನೀ ಹೋಗುವೆ
ಮಿಂಚಿ ಮಾಯವಾಗುವೆ, ಮೆಚ್ಚುವಂತೆ ಕಾಡುವೆ
ಮಿಂಚಿ ಮಾಯವಾಗುವೆ, ಮೆಚ್ಚುವಂತೆ ಕಾಡುವೆ
ಚೂರುಪಾರು ಗೀಚಿದ ರೂಪರೇಖೆಯೆ
ಎಂದು ನೀನು ಬಣ್ಣ ತಾಳುವೆ
ಮಿಂಚಿ ಮಾಯವಾಗುವೆ
ತಯಾರಾಗಿ ಬಂದೆ ನಾನು, ನೂರು ನೂರು ರೀತಿಯಲ್ಲಿ
ಅಂತರಂಗವಾಯಿತೀಗ ಒಂದು ವೇದಿಕೆ
ಅದೇ ಊರಿನಲ್ಲಿ ನೀನು, ಬೇರೆ ಬೇರೆ ದಾರಿಯಲ್ಲಿ
ಮತ್ತೆ ಮತ್ತೆ ಕಾಣುತೀಯೆ ಹೇಳು ಏತಕೆ
ಸಮಾಧಾನ ನೀಡುವಂತ ನಿನ್ನೊಂದು ಮಾತಿಗಾಗಿ
ಎಂದೆಂದು ಎಂದೆಂದು ನಾ ಕಾಯುವೆ
ಮಿಂಚಿ ಮಾಯವಾಗುವೆ, ಮೆಚ್ಚುವಂತೆ ಕಾಡುವೆ
ಮಿಂಚಿ ಮಾಯವಾಗುವೆ, ಮೆಚ್ಚುವಂತೆ ಕಾಡುವೆ
ಹಾದಿಯಲ್ಲಿ ಹೊಮ್ಮಿದ ಭಾವಗೀತೆಯೆ
ಎಂದು ನೀನು ನನ್ನದಾಗುವೆ
ಮಿಂಚಿ ಮಾಯವಾಗುವೆ, ಮೆಚ್ಚುವಂತೆ ಕಾಡುವೆ
ಮಿಂಚಿ ಮಾಯವಾಗುವೆ, ಮೆಚ್ಚುವಂತೆ ಕಾಡುವೆ
ಚೂರುಪಾರು ಗೀಚಿದ ರೂಪರೇಖೆಯೆ
ಎಂದು ನೀನು ಬಣ್ಣ ತಾಳುವೆ
ಮಿಂಚಿ ಮಾಯವಾಗುವೆ
-------------------------------------------------------------------------------------
ಮಿಸ್ಟರ್ ಡೂಪ್ಲಿಕೇಟ್ (೨೦೧೧) - ಹಾಗೇ ಸುಮ್ಮನೇ
ಸಂಗೀತ: ಮನೋ ಮೂರ್ತಿ ಸಾಹಿತ್ಯ: ದ್ವಾರ್ಕಿ ರಾಘವ ಗಾಯನ : ರಾಜೇಶ, ರಿತೀಷ ಪದ್ಮನಾಭ
-------------------------------------------------------------------------------------
ಮಿಸ್ಟರ್ ಡೂಪ್ಲಿಕೇಟ್ (೨೦೧೧) - ನಾನ್ ನಾನ್
ಸಂಗೀತ: ಮನೋ ಮೂರ್ತಿ ಸಾಹಿತ್ಯ: ದ್ವಾರ್ಕಿ ರಾಘವ ಗಾಯನ : ನಂದಿತಾ
-------------------------------------------------------------------------------------
ಮಿಸ್ಟರ್ ಡೂಪ್ಲಿಕೇಟ್ (೨೦೧೧) - ನಾನೇ ಹೀರೋ
ಸಂಗೀತ: ಮನೋ ಮೂರ್ತಿ ಸಾಹಿತ್ಯ: ಕವಿರಾಜ ಗಾಯನ : ಹೇಮಂತ, ಚೇತನ ಸೋಸ್ಕ
-------------------------------------------------------------------------------------
No comments:
Post a Comment