676. ಮಕ್ಕಳೇ ಮನೆಗೆ ಮಾಣಿಕ್ಯ (1969)

ಮಕ್ಕಳೇ ಮನೆಗೆ ಮಾಣಿಕ್ಯ ಚಲನಚಿತ್ರದ ಹಾಡುಗಳು 
  1. ಆಸೆಯು ಮುಂದೆ ಮುಂದೆ ಎಲ್ಲರು ಅದರ ಹಿಂದೆ
  2. ನನ್ನ ಚಂದ್ರ ನನ್ನ ಕಂದ ನಿನ್ನ ಚಿಂತೆ ನನಗಿರಲಿ
  3. ಮುತ್ತಣ್ಣ ಬಂದ ಮುತ್ತಣ್ಣ ಮುತ್ತನು ತಂದ ತಂದ  
  4. ಮರೆ ಮಾಚದಿರು ಈ ನಾಚಿಕೇ .. 
  5. ಪೋಮ್ ಪೋಮ್ ಮೋಟಾರ್ ಬಂಡಿಲೀ ..  

ಮಕ್ಕಳೇ ಮನೆಗೆ ಮಾಣಿಕ್ಯ (1969) - ಆಸೆಯು ಮುಂದೆ ಮುಂದೆ ಎಲ್ಲರು ಅದರ ಹಿಂದೆ
ಸಂಗೀತ: ವಿಜಯಭಾಸ್ಕರ್, ಸಾಹಿತ್ಯ: ಗೀತಪ್ರಿಯ ಹಾಡಿದವರು: ಪಿ.ಬಿ.ಶ್ರೀನಿವಾಸ್

ಆಸೆಯು ಮುಂದೆ ಮುಂದೆ ಎಲ್ಲರು ಅದರ ಹಿಂದೆ
ಆಸೆಯು ಮುಂದೆ ಮುಂದೆ ಎಲ್ಲರು ಅದರ ಹಿಂದೆ
ಆಸೆಯೆ ಇಲ್ಲದ ಹೃದಯಗಳಿಲ್ಲ ಆಸೆಯು ಇಲ್ಲದೆ ಜಗವೇ ಇಲ್ಲ
ಆಸೆಯು ಮುಂದೆ ಮುಂದೆ ಎಲ್ಲರು ಅದರ ಹಿಂದೆ

ಎಲ್ಲರ ಮನದಲಿ ಆಸೆಯ ಜಾತ್ರೆ ಆಸೆಯು ಎಂದಿಗು ತುಂಬದ ಪಾತ್ರೆ
ಶಕ್ತಿಗೆ ಮೀರಿದ ಸಾಹಸದೆಡೆಗೆ ಹಸುಳೆಗಳನ್ನು ದೂಡುವುದು
ನಗುತ ಆಡುವ ವಯಸಿನಲಿ....  ಎನಿತೋ ಚಿಂತೆಯ ನೀಡುವುದು
ಆಸೆಯು ಮುಂದೆ ಮುಂದೆ ಎಲ್ಲರು ಅದರ ಹಿಂದೆ

ಆಸೆಯ ಜೊತೆಯಲಿ ಹೆಣೆದಿರೆ ಬಾಳು ಅದಕೆ ಜೀವನದಲಿ ಈ ಗೋಳು
ಕಷ್ಟದಿ ತುಂಬಿರೆ ಆಸೆಯ ಜಾಡು ಅದರಲಿ ನಡೆಯುತ ಪಡುವರು ಪಾಡು
ಮೃಗ ಜಲದಂತೆ ಕಾಣಲು ಹತ್ತಿರ....  ಹಿಡಿಯಲು ನಡೆದರೆ ಅತಿ ದೂರ
ಆಸೆಯು ಮುಂದೆ ಮುಂದೆ ಎಲ್ಲರು ಅದರ ಹಿಂದೆ
ಆಸೆಯೆ ಇಲ್ಲದ ಹೃದಯಗಳಿಲ್ಲ ಆಸೆಯು ಇಲ್ಲದೆ ಜಗವೇ ಇಲ್ಲ
ಆಸೆಯು ಮುಂದೆ ಮುಂದೆ ಎಲ್ಲರು ಅದರ ಹಿಂದೆ
ಆಸೆಯು ಮುಂದೆ ಮುಂದೆ ಎಲ್ಲರು ಅದರ ಹಿಂದೆ
--------------------------------------------------------------------------------------------------------------------------

ಮಕ್ಕಳೇ ಮನೆಗೆ ಮಾಣಿಕ್ಯ (1969) - ನನ್ನ ಚಂದ್ರ ನನ್ನ ಕಂದ ನಿನ್ನ ಚಿಂತೆ ನನಗಿರಲಿ
ಸಂಗೀತ: ವಿಜಯಭಾಸ್ಕರ್, ಸಾಹಿತ್ಯ: ಗೀತಪ್ರಿಯ  ಹಾಡಿದವರು: ಪಿ.ಸುಶೀಲಾ 

ನನ್ನ ಚಂದ್ರ ನನ್ನ ಕಂದ
ನನ್ನ ಚಂದ್ರ ನನ್ನ ಕಂದ ನಿನ್ನ ಚಿಂತೆ ನನಗಿರಲಿ ಶಾಂತ ನಿದ್ರೆ ನಿನಗಿರಲಿ.. ತುಂಟ ಮಲಗೋ ..
ನನ್ನ ಚಂದ್ರ ನನ್ನ ಕಂದ ನಿನ್ನ ಚಿಂತೆ ನನಗಿರಲಿ ಶಾಂತ ನಿದ್ರೆ ನಿನಗಿರಲಿ
ನನ್ನ ಚಂದ್ರ ನನ್ನ ಕಂದ 

ನನ್ನನೊಂದ ಬಾಳಿನಲ್ಲಿ...
ನನ್ನನೊಂದ ಬಾಳಿನಲ್ಲಿ ನಿನ್ನ ರೂಪ ಆಶಾ ದೀಪ
ಅಂಧಕಾರ ತುಂಬಿ ಇರಲು ನಿನ್ನ ಪ್ರೀತಿ ನನಗೆ ಜ್ಯೋತಿ
ಅಳುವೆಲ್ಲಾ ನನಗಿರಲಿ ನಗುವೆಲ್ಲ ನಿನಗಿರಲಿ
ನನ್ನ ಚಂದ್ರ ನನ್ನ ಕಂದ ನಿನ್ನ ಚಿಂತೆ ನನಗಿರಲಿ ಶಾಂತ ನಿದ್ರೆ ನಿನಗಿರಲಿ
ನನ್ನ ಚಂದ್ರ ನನ್ನ ಕಂದ

ದೂರಕೆ ಸಾಗಿರೇ... ಮನದಾ ಶಾಂತಿ...
ದೂರಕೆ ಸಾಗಿರೇ... ಮನದಾ ಶಾಂತಿ ಕಂಡಿದೆ  ನನಗೆ ಸುತ್ತಲೂ ಭ್ರಾಂತಿ
ನಿರಾಸೆಯಲ್ಲಿ ಸಾಗಿರೇ ಪಯಣ ತೋರೈ ದೇವಾ ಆಶಾಕಿರಣ
ನೆನಪಿನಲಿ ಮುಳುಗುತಲಿ ನಾನಿಹೆನು ಮರುಗತಲಿ
ನನ್ನ ಚಂದ್ರ ನನ್ನ ಕಂದ ನಿನ್ನ ಚಿಂತೆ ನನಗಿರಲಿ ಶಾಂತ ನಿದ್ರೆ ನಿನಗಿರಲಿ
ನನ್ನ ಚಂದ್ರ ನನ್ನ ಕಂದ
--------------------------------------------------------------------------------------------------------------------------

ಮಕ್ಕಳೇ ಮನೆಗೆ ಮಾಣಿಕ್ಯ (1969) - ಮುತ್ತಣ್ಣ ಬಂದ ಮುತ್ತಣ್ಣ ಮುತ್ತನು ತಂದ ತಂದ  ಸಂಗೀತ: ವಿಜಯಭಾಸ್ಕರ್, ಸಾಹಿತ್ಯ: ಗೀತಪ್ರಿಯ  ಹಾಡಿದವರು:  ಎಲ್.ಆರ್.ಈಶ್ವರಿ 

ಮುತ್ತಣ್ಣ ಬಂದ ಬಂದ ಮುತ್ತಣ್ಣ ಮುತ್ತನು ತಂದ ತಂದ ಮುತ್ತಿನ ವ್ಯಾಪಾರಿ ತಾನೆಂದ
ಮುತ್ತಣ್ಣ ಬಂದ ಬಂದ ಮುತ್ತಣ್ಣ ಮುತ್ತನು ತಂದ ತಂದ ಮುತ್ತಿನ ವ್ಯಾಪಾರಿ ತಾನೆಂದ

ಹೆಣ್ಣಿಗೆ ಇದುವೇ ಸಿಂಗಾರವೆಂದ ತೊಟ್ಟಂಥ ಮುಖವೇ ಬಂಗಾರವೆಂದ
ಹೆಣ್ಣಿಗೆ ಇದುವೇ ಸಿಂಗಾರವೆಂದ ತೊಟ್ಟಂಥ ಮುಖವೇ ಬಂಗಾರವೆಂದ
ಉಡುಗೋರೆಯಾಗಿ ಪಡೆದಾಗಿಂದ ಕೆನ್ನೆಗೆ ಕೆಂಬಣ್ಣ ಏರುತ್ತೆ ಎಂದಾ ..
ಆಗಲೇ ಕಾಣೋದು ಆನಂದ... ಆನಂದ
ಮುತ್ತಣ್ಣ ಬಂದ ಬಂದ ಮುತ್ತಣ್ಣ ಮುತ್ತನು ತಂದ ತಂದ ಮುತ್ತಿನ ವ್ಯಾಪಾರಿ ತಾನೆಂದ

ಬಿಂಕದ ಬೆಡಗಿಯ ಸಂಪಿಗೆ ಮೂಗಿಗೂ ಮುತ್ತಿನ ಮೂಗುತಿ ಒಪ್ಪುತ್ತೆ ಎಂದ 
ಬಿಂಕದ ಬೆಡಗಿಯ ಸಂಪಿಗೆ ಮೂಗಿಗೂ ಮುತ್ತಿನ ಮೂಗುತಿ ಒಪ್ಪುತ್ತೆ ಎಂದ 
ಹಾರಿಸಿ ಕುರುಳು ಕೊಂಕಿಸಿ ಕೊರಳು ಬಳಕುವ ಹೆಣ್ಣಿಗೂ ಬೇಕೇ ಬೇಕೆಂದ 
ಹಿಂಗೆಂದು ಮುತ್ತನು ಕೊಳ್ಳೆಂದ... ಕೊಳ್ಳೆಂದ ..  
ಮುತ್ತಣ್ಣ ಬಂದ ಬಂದ ಮುತ್ತಣ್ಣ ಮುತ್ತನು ತಂದ ತಂದ ಮುತ್ತಿನ ವ್ಯಾಪಾರಿ ತಾನೆಂದ

ಮುತ್ತನ್ನ ಮಾರೋನು ಹೆಣ್ಣನ್ನು  ಕಂಡ ಕಣ್ಣಿನ ಸನ್ನೆಲೇ ಏನೇನೋ ಅಂದ 
ಮುತ್ತನ್ನ ಮಾರೋನು ಹೆಣ್ಣನ್ನು  ಕಂಡ ಕಣ್ಣಿನ ಸನ್ನೆಲೇ ಏನೇನೋ ಅಂದ 
ನಿನ್ನಂದ ಚಂದಕ್ಕೆ ಸಾಟಿ ಇಲ್ಲೆಂದ  ನಗೆಮುತ್ತ ಸುರಿಸು ನಾಚುತ ಎಂದ 
ಲಜ್ಜೆಯ ನಿನಗೆ ಮುತ್ತೆಂದ.. ಮುತ್ತೆಂದ..
ಮುತ್ತಣ್ಣ ಬಂದ ಬಂದ ಮುತ್ತಣ್ಣ ಮುತ್ತನು ತಂದ ತಂದ ಮುತ್ತಿನ ವ್ಯಾಪಾರಿ ತಾನೆಂದ

ಗಜನಿಂಬೆ ಬಣ್ಣಂತೆ ಹೆಣ್ಣೇ .... ಓಹೋಹೋ  ದುರಗುಟ್ಟಿ ನೋಡುವೇ ಏನೇ ಒಹೋ... 
ಓಡಲು ಸುಮ್ಮನೆ ಬಿಡುವೆನೇ ನಿನ್ನೇ 
ನಾನೆಂದೇ ನಿನಗಾಗಿ ಮಾಡಿ ಬಂದೇನೇ ಸಫಲಾಗಿ 
ಮುತ್ತಣ್ಣ ಬಂದ ಮುತ್ತಣ್ಣ ಮುತ್ತನು ತಂದ ತಂದ  
ಮುತ್ತಿನ ವ್ಯಾಪಾರಿ ತಾನೆಂದ 
--------------------------------------------------------------------------------------------------------------------------

ಮಕ್ಕಳೇ ಮನೆಗೆ ಮಾಣಿಕ್ಯ (1969) - ಮರೆ ಮಾಚದಿರು ಈ ನಾಚಿಕೇ ..    
ಸಂಗೀತ: ವಿಜಯಭಾಸ್ಕರ್, ಸಾಹಿತ್ಯ: ಗೀತಪ್ರಿಯ ಹಾಡಿದವರು: ಪಿ.ಬಿ.ಎಸ್. ಪಿ.ಸುಶೀಲಾ

ಗಂಡು : ಮರೆ ಮಾಚದಿರು ಈ ನಾಚಿಕೇ ..    ನಿನಗೇ ಇದುವೇ ಸಿಂಗಾರ..
ಹೆಣ್ಣು : ಮನದಾಸೆಯೇ ನೀನಾಗಿರಲೂ ನನಗೇ ಅದುವೇ ಬಂಗಾರ
ಗಂಡು : ಮರೆ ಮಾಚದಿರು ಈ ನಾಚಿಕೇ ..    ನಿನಗೇ ಇದುವೇ ಸಿಂಗಾರ..
ಹೆಣ್ಣು : ಮನದಾಸೆಯೇ ನೀನಾಗಿರಲೂ ನನಗೇ ಅದುವೇ ಬಂಗಾರ

ಗಂಡು : ನಿನ್ನಯ ಮೋಹಕ ಮುಂಗುರುಳೂ ನಲ್ಲನ ಗಲ್ಲವ ಚುಂಬಿಸಿರೇ ..
ಹೆಣ್ಣು :  ಆಹಾ.. ಆಹಾ... ಆಹಾ.. ಅಹ್ಹಹ್ಹಹಾ .. ಹ್ಹಆ...ಅಹ್ಹಹ್ಹಹ್ಹ .. ಒಹೋ.. ಒಹೋ.. ಓಹೋಹೋ..
ಗಂಡು : ನಿನ್ನಯ ಮೋಹಕ ಮುಂಗುರುಳೂ ನಲ್ಲನ ಗಲ್ಲವ ಚುಂಬಿಸಿರೇ ..
ಹೆಣ್ಣು : ಈ ದಿನ ನಮ್ಮ ಕಣ್ಣುಗಳೂ ಅಂದಿನ ನೆನಪನೂ ಬಿಂಬಿಸಿರೇ ..
ಗಂಡು : ನಿನ್ನಯ ಈ ಕುಡಿನೋಟದಲೀ ಬಿಂಕವೂ ಬೆಡಗೂ ಮೆರೆಯುತಿದೇ ..
            ನಿನ್ನಯ ಈ ನುಡಿ ಮುತ್ತುಗಳೇ  ಮೋಹದ ಮುನ್ನುಡಿ ಬರೆಯುತಿರೇ..
           ಮರೆ ಮಾಚದಿರು ಈ ನಾಚಿಕೇ ..    ನಿನಗೇ ಇದುವೇ ಸಿಂಗಾರ..
ಹೆಣ್ಣು : ಮನದಾಸೆಯೇ ನೀನಾಗಿರಲೂ ನನಗೇ ಅದುವೇ ಬಂಗಾರ

ಹೆಣ್ಣು : ನೋಟದಿ ಒಂದೂ ಬಾಷೆಯನೂ ನಮ್ಮಯ ಕಂಗಳು ಆಡುತಿರೇ..
ಗಂಡು :  ಆಹಾ.. ಆಹಾ... ಆಹಾ.. ಅಹ್ಹಹ್ಹಹಾ .... ಒಹೋ.. ಒಹೋ.. ಓಹೋಹೋ..
ಹೆಣ್ಣು : ನೋಟದಿ ಒಂದೂ ಬಾಷೆಯನೂ ನಮ್ಮಯ ಕಂಗಳು ಆಡುತಿರೇ..
ಗಂಡು : ಈ ಬಾಷೆಯಲೀ  ಅಭಿಲಾಷೆಯಲೀ ಹೊಸ ಜೀವನ ರೇಖೆ ಮೂಡುತಿರೇ ...
ಹೆಣ್ಣು : ಪ್ರೀತಿಯ ಹೊಸ ಹೊಸ ಭಾವಗಳ ನೀ ನನ್ನಯ ಬಾಳಲಿ ತುಂಬುತಿಹೇ ..
          ಬಾಳಿನ ಹೊಸ ಇತಿಹಾಸವನೇ ನಾ ನಿನ್ನಯ ಜೊತೆಯಲೀ ಬರೆಯುತಿಹೇ..
ಗಂಡು : ಮರೆ ಮಾಚದಿರು ಈ ನಾಚಿಕೇ ..    ನಿನಗೇ ಇದುವೇ ಸಿಂಗಾರ..
ಹೆಣ್ಣು : ಮನದಾಸೆಯೇ ನೀನಾಗಿರಲೂ ನನಗೇ ಅದುವೇ ಬಂಗಾರ
ಗಂಡು : ಮರೆ ಮಾಚದಿರು ಈ ನಾಚಿಕೇ ..    ನಿನಗೇ ಇದುವೇ ಸಿಂಗಾರ..
ಹೆಣ್ಣು : ಮನದಾಸೆಯೇ ನೀನಾಗಿರಲೂ ನನಗೇ ಅದುವೇ ಬಂಗಾರ
ಗಂಡು :  ಆಹಾ.. ಆಹಾ... ಆಹಾ..      ಹೆಣ್ಣು : ಒಹೋ.. ಒಹೋ.. ಓಹೋಹೋ..
ಇಬ್ಬರು :  ಆಹಾ.. ಆಹಾ... ಆಹಾ.. ಅಹ್ಹಹ್ಹಹಾ .... ಒಹೋ.. ಒಹೋ.. ಓಹೋಹೋ..
--------------------------------------------------------------------------------------------------------------------------

ಮಕ್ಕಳೇ ಮನೆಗೆ ಮಾಣಿಕ್ಯ (1969) - ಪೋಮ್ ಪೋಮ್ ಮೋಟಾರ್ ಬಂಡಿಲೀ .. 
ಸಂಗೀತ: ವಿಜಯಭಾಸ್ಕರ್, ಸಾಹಿತ್ಯ: ಗೀತಪ್ರಿಯ ಹಾಡಿದವರು: ಅಂಜಲಿ, ಬಿ.ಕೆ.ಸುಮಿತ್ರಾ 

ಅಂಜಲಿ : ಪೋಮ್ ಪೋಮ್ ಮೋಟಾರ್ ಬಂಡಿಲೀ .. ಭಲೇ ಸವಾರೀ ರಸ್ತೇಲಿ
             ಕಣ್ಣು ಮುಚ್ಚಾಲೇ ಆಡ್ತಾನೇ ಇದ್ದೇ ಇರತೇ ಜೊತೆಯಲ್ಲಿ..
             ಪೋಮ್ ಪೋಮ್ ಮೋಟಾರ್ ಬಂಡಿಲೀ .. ಭಲೇ ಸವಾರೀ ರಸ್ತೇಲಿ
             ಕಣ್ಣು ಮುಚ್ಚಾಲೇ ಆಡ್ತಾನೇ ಇದ್ದೇ ಇರತೇ ಜೊತೆಯಲ್ಲಿ..

ಅಂಜಲಿ : ನಾಳೇ ನಾಡದ್ದ ಬರತ್ತೀನಿ ಅಂತಾ ಕಾಗದ ಹಾಕಿದ್ದ ಅಪ್ಪಾ ಕಾಗದ ಹಾಕಿದ್ದಾ..
              ನಾಳೇ ನಾಡದ್ದ ಬರತ್ತೀನಿ ಅಂತಾ ಕಾಗದ ಹಾಕಿದ್ದ ಅಪ್ಪಾ ಕಾಗದ ಹಾಕಿದ್ದಾ..
ಸುಮಿತ್ರಾ : ಕಾಗದ ನಂಬಕೊಂಡು ದಿನವೂ ರಾಮು ಕಾಯ್ತಾ ಕೂಡತಿದ್ದ.. ರಾಮು ಕಾಯ್ತಾ ಕೂಡತಿದ್ದ
                ಕಾಗದ ನಂಬಕೊಂಡು ದಿನವೂ ರಾಮು ಕಾಯ್ತಾ ಕೂಡತಿದ್ದ.. ರಾಮು ಕಾಯ್ತಾ ಕೂಡತಿದ್ದ
ಅಂಜಲಿ :  ಆದ್ರೂ ಅಪ್ಪಾ ಯಾಕೋ ನಮಗೇ ಚಕ್ಕರ್ ಕೋಡುತ್ತಿದ್ದಾ .. ಬರದೇ ಚಕ್ಕರ್ ಕೋಡುತ್ತಿದ್ದಾ ..
ಸುಮಿತ್ರಾ : ಕಷ್ಟ ಪಟ್ಟು ಹುಡುಕಿದ ಮೇಲೆ ಕೈಯ್ಯಿಗೇ ಸಿಕ್ಕಿಬಿಟ್ಟಾ .. ನಮ್ಮ ಕೈಯ್ಯಿಗೇ ಸಿಕ್ಕಿಬಿಟ್ಟ
ಇಬ್ಬರು :  ಪೋಮ್ ಪೋಮ್ ಮೋಟಾರ್ ಬಂಡಿಲೀ .. ಭಲೇ ಸವಾರೀ ರಸ್ತೇಲಿ
              ಕಣ್ಣು ಮುಚ್ಚಾಲೇ ಆಡ್ತಾನೇ ಇದ್ದೇ ಇರತೇ ಜೊತೆಯಲ್ಲಿ..

ಅಂಜಲಿ : ಮಕ್ಕಳ ಜೊತೆಯಲಿ ಅಪ್ಪ ಇದ್ರೇ ಆಗಲೇ ಬಲು ಚೆನ್ನಾ.. ಆಹಾ ಆಗಲೇ ಬಲು ಚೆನ್ನ
              ಮಕ್ಕಳ ಜೊತೆಯಲಿ ಅಪ್ಪ ಇದ್ರೇ ಆಗಲೇ ಬಲು ಚೆನ್ನಾ.. ಆಹಾ ಆಗಲೇ ಬಲು ಚೆನ್ನ
ಸುಮಿತ್ರಾ : ಅಪ್ಪನ ಜೊತೆಯಲಿ ಅಮ್ಮ ಇದ್ರೇ ಇನ್ನೂ ಬಲು ಚೆನ್ನಾ.. ಆಗ ಇನ್ನೂ ಬಲು ಚೆನ್ನಾ..
                ಅಪ್ಪನ ಜೊತೆಯಲಿ ಅಮ್ಮ ಇದ್ರೇ ಇನ್ನೂ ಬಲು ಚೆನ್ನಾ.. ಆಗ ಇನ್ನೂ ಬಲು ಚೆನ್ನಾ..
ಅಂಜಲಿ : ಇವರ ಜೊತೆಯಲಿ ತಾತಾ ಇದ್ರೇ ಇನ್ನೂ ಬಲು ಚೆನ್ನಾ.. ಆಹಾ   ಇನ್ನೂ ಬಲು ಚೆನ್ನಾ.
ಸುಮಿತ್ರಾ : ಎಲ್ಲರೂ ಸೇರಿ ಕನ್ನಡ ಹಾಡೂ ಹಾಡತ್ತಿದ್ದರೇ ಚೆನ್ನಾ.. ಹಾಡಿ ಹಾಡತ್ತಿದ್ದರೇ ಚೆನ್ನಾ.
ಇಬ್ಬರು :  ಪೋಮ್ ಪೋಮ್ ಮೋಟಾರ್ ಬಂಡಿಲೀ .. ಭಲೇ ಸವಾರೀ ರಸ್ತೇಲಿ
              ಕಣ್ಣು ಮುಚ್ಚಾಲೇ ಆಡ್ತಾನೇ ಇದ್ದೇ ಇರತೇ ಜೊತೆಯಲ್ಲಿ..
              ಪೋಮ್ ಪೋಮ್ ಮೋಟಾರ್ ಬಂಡಿಲೀ .. ಭಲೇ ಸವಾರೀ ರಸ್ತೇಲಿ
              ಕಣ್ಣು ಮುಚ್ಚಾಲೇ ಆಡ್ತಾನೇ ಇದ್ದೇ ಇರತೇ ಜೊತೆಯಲ್ಲಿ..
-------------------------------------------------------------------------------------------------------------------------

No comments:

Post a Comment