677. ಧನ ಪಿಶಾಚಿ (1967)


ಧನ ಪಿಶಾಚಿ ಚಿತ್ರದ ಹಾಡುಗಳು 
  1. ಓ ಬೀಸೋ ತಂಗಾಳಿಯೇ 
  2. ನೀ ಎಲ್ಲಿ ಹೋಗುವೇ 
  3. ಕುಳ್ಳ ನಾನಾಗಿದ್ದರೇ ಎನಾಯ್ತೆ 
ಧನ ಪಿಶಾಚಿ (1967)
ಸಂಗೀತ: ಸತ್ಯಂ ಸಾಹಿತ್ಯ : ಮೋಹಿನಿ ಪ್ರೊಡಕ್ಷನ್  ಹಾಡಿದವರು: ಪಿ.ಬಿ.ಶ್ರೀನಿವಾಸ್, ಎಸ್.ಜಾನಕಿ

ಗಂಡು : ಓ ಬೀಸೋ ತಂಗಾಳಿಯೇ ಕುಣಿವ ಕುಸುಮಾಳಿಯೇ
           ಮನಸಿನಾದೇಶ ತಿಳಿಸದೇಕಿಂತು ತಳೆದಿದೆ ಈ ಮೌನವ
ಹೆಣ್ಣು : ಓ ಬೀಸೋ ತಂಗಾಳಿಯೇ ಕುಣಿವ ಕುಸುಮಾಳಿಯೇ
          ಮನಸಿನಾದೇಶ ತಿಳಿಸದೇಕಿಂತು ತಳೆದಿದೆ ಈ ಮೌನವ

ಗಂಡು : ಕುಲುಕುತ ಬಳುಕುತ ಕೆಣಕುತ ಕಣ್ ಕುಣಿಸುವ
            ಕುಲುಕುತ ಬಳುಕುತ ಕೆಣಕುತ ಕಣ್ ಕುಣಿಸುವ
            ಸಿಂಗಾರಿಯ ಸನ್ಮೋಹದ
            ಸಿಂಗಾರಿಯ ಸನ್ಮೋಹದ ಬಲೆಯಲ್ಲಿ ಸೆರೆಯಾದೆ ನಾ ಅ ಅ ಅ
            ಬಲೆಯಲ್ಲಿ ಸೆರೆಯಾದೆ ನಾ
            ಹೋ ಓ ಓ ಬೀಸೋ ತಂಗಾಳಿಯೇ ಕುಣಿವ ಕುಸುಮಾಳಿಯೇ
            ಮನಸಿನಾದೇಶ ತಿಳಿಸದೇಕಿಂತು ತಳೆದಿದೆ ಈ ಮೌನವ...

ಹೆಣ್ಣು : ಪಳಪಳ ಹೊಳೆಯುವ ನಯನವು ಯಾರಂದದ
          ಪಳಪಳ ಹೊಳೆಯುವ ನಯನವು ಯಾರಂದದ
          ಮುಖಬಿಂಬದ ನೆಲೆಯಾಗಿದೆ
          ಮುಖಬಿಂಬದ ನೆಲೆಯಾಗಿದೆ ತಿಳಿಹೇಳಿ ನೀವಾದರೂ ಉ ಉ ಉ
         ತಿಳಿಹೇಳಿ ನೀವಾದರೂ
         ಹೋ ಓ ಓ ಬೀಸೋ ತಂಗಾಳಿಯೇ ಕುಣಿವ ಕುಸುಮಾಳಿಯೇ
        ಮನಸಿನಾದೇಶ ತಿಳಿಸದೇಕಿಂತು ತಳೆದಿದೆ ಈ ಮೌನವ
ಗಂಡು : ಆಆಆ.. (ಆಆಆ) ಉಉಉಉ
------------------------------------------------------------------------------------------------------------------------

ಧನ ಪಿಶಾಚಿ (1967)
ಸಂಗೀತ: ಸತ್ಯಂ 
ಸಾಹಿತ್ಯ : ಮೋಹಿನಿ ಪ್ರೊಡಕ್ಷನ್  ಹಾಡಿದವರು: ಎಸ್.ಜಾನಕಿ

ಅಹ್ಹಹ್ಹಾ... ನೀ ಎಲ್ಲಿ ಹೋಗುವೇ ನಾ ಅಲ್ಲಿ ಕಾಣುವೇ
ಎಲ್ಲೇ ಇರು ಹೇಗೆ ಇರು ನೆರಳಾಗಿ ಕಾಡುವೇ
ನೆರಳಾಗಿ ಕಾಡುವೇ ನೆರಳಾಗಿ ಕಾಡುವೇ
ನೀ ಎಲ್ಲಿ ಹೋಗುವೇ ನಾ ಅಲ್ಲಿ ಕಾಣುವೇ
ಎಲ್ಲೇ ಇರು ಹೇಗೆ ಇರು ನೆರಳಾಗಿ ಕಾಡುವೇ
ನೆರಳಾಗಿ ಕಾಡುವೇ ನೆರಳಾಗಿ ಕಾಡುವೇ

ಒಳ್ಳೆಯತನವನೂ ಅಳಿಸಿ ಹಣವಿರುವ ಬುದ್ದಿಯನು ತೆರೆಸಿ
ಒಳ್ಳೆಯತನವನೂ ಅಳಿಸಿ ಹಣವಿರುವ ಬುದ್ದಿಯನು ತೆರೆಸಿ
ಸ್ನೇಹ ಪ್ರೇಮವನು ಮರೆಸಿ ನಿನ್ನ ಬಾಳಿಗೆ ಧನ ಪಿಶಾಚಿ 
ಧನ ಪಿಶಾಚಿ ಧನ ಪಿಶಾಚಿ 
ನೀ ಎಲ್ಲಿ ಹೋಗುವೇ ನಾ ಅಲ್ಲಿ ಕಾಣುವೇ
ಎಲ್ಲೇ ಇರು ಹೇಗೆ ಇರು ನೆರಳಾಗಿ ಕಾಡುವೇ
ನೆರಳಾಗಿ ಕಾಡುವೇ ನೆರಳಾಗಿ ಕಾಡುವೇ 

 ಅಹ್ಹಹ್ಹಹ್ಹ... 
ಈ ಅತಿಯಾಸೆಯು ಸರಿಯೇ ಹಣದಾಹಕೆ ಮೊದಲೇ ಕೊನೆಯೇ 
ಈ ಅತಿಯಾಸೆಯು ಸರಿಯೇ ಹಣದಾಹಕೆ ಮೊದಲೇ ಕೊನೆಯೇ 
ನೆಮ್ಮದಿಯಾದರೂ ಇದಿಯೇ ಕೊನೆವರೆಗು ನಿನಗೆ ಈ ಗತಿಯೇ 
ಧನ ಪಿಶಾಚಿ ಧನ ಪಿಶಾಚಿ 
ನೀ ಎಲ್ಲಿ ಹೋಗುವೇ ನಾ ಅಲ್ಲಿ ಕಾಣುವೇ
ಎಲ್ಲೇ ಇರು ಹೇಗೆ ಇರು ನೆರಳಾಗಿ ಕಾಡುವೇ
ನೆರಳಾಗಿ ಕಾಡುವೇ ನೆರಳಾಗಿ ಕಾಡುವೇ 
--------------------------------------------------------------------------------------------------------------------------

ಧನ ಪಿಶಾಚಿ (1967)
ಸಂಗೀತ: ಸತ್ಯಂ  ಸಾಹಿತ್ಯ : ಮೋಹಿನಿ ಪ್ರೊಡಕ್ಷನ್  ಹಾಡಿದವರು: ಎಸ್.ಜಾನಕಿ

ಗಂಡು : ಕ್ಕೂಕ್ಕೂ ಕ್ಕೂ ಕುಳ್ಳ ನಾನಾಗಿದ್ದರೆ ಏನಾಯ್ತೆ ಒಳ್ಳೆ ಮನಸು ನನಗೈತೆ (ಅಹ್ಹಹ್ಹ )
           ಕುಳ್ಳ ನಾನಾಗಿದ್ದರೆ ಏನಾಯ್ತೆ ಹೊಯ್ ಒಳ್ಳೆ ಮನಸು ನನಗೈತೆ (ಹುಂ)
           ನಾ ಕಳ್ಳನಲ್ಲ ಸುಳ್ಳನಲ್ಲ ಗುಳ್ಳೆನರಿಯ ಬುದ್ಧಿಯಿಲ್ಲ ಒಳ್ಳೆ ವಂಶ ನಮ್ಮದೆಲ್ಲಾ ಹೇ...
          ಕುಳ್ಳ ನಾನಾಗಿದ್ದರೆ ಏನಾಯ್ತೆ ಒಳ್ಳೆ ಮನಸು ನನಗೈತೆ (ಅಹ್ಹಹ್ಹ )

ಗಂಡು : ಮೈಯಬಣ್ಣ ಚಿನ್ನದಾಗೇ ಕೆಂಪಗೆ
           ಮೂಗು ನೋಡೇ ಸೊಟ್ಟಗಿದ್ರೂ ಸಂಪಿಗೇ
           ಮೈಯಬಣ್ಣ ಚಿನ್ನದಾಗೇ ಕೆಂಪಗೆ
           ಮೂಗು ನೋಡೇ ಸೊಟ್ಟಗಿದ್ರೂ ಸಂಪಿಗೇ
          ಚಿಗುರು ಮೀಸೆ ಬಂದ ಹುಡುಗ ಮೆಚ್ಚಿಕೊಂಡ ನಿನ್ನ ಬೆಡಗ 
          ಮೋಹ ತೋರಿ ಬಾರೇ ಬೇಗ ಹೇ...
          ಕುಳ್ಳ ನಾನಾಗಿದ್ದರೆ ಏನಾಯ್ತೆ.. ಹೇ..  ಒಳ್ಳೆ ಮನಸು ನನಗೈತೆ (ಅಹ್ಹಹ್ಹ )

ಗಂಡು : ಲವ್ಲೀ ಹುಡುಗಿ ನೀನು ನನ್ನ ಡಾರ್ಲಿಂಗ್ (ಯಾಹುಂ)
           ನೀನು ತಿನಿಸಬೇಡಾ ನನಗೆ ಪಂಜಾಂಬ ಇಂಗೂ (ಹೇ..)
           ಲವ್ಲೀ ಹುಡುಗಿ ನೀನು ನನ್ನ ಡಾರ್ಲಿಂಗ್
           ನೀನು ತಿನಿಸಬೇಡಾ ನನಗೆ ಪಂಜಾಂಬ ಇಂಗೂ
           ಮೀರಿಹೋಯ್ತು ಎಂಗೇಜು ಯಾಕೇ ಒಲ್ಲೇ ಮ್ಯಾರೇಜು
           ಏನಾಗಿದೇ ಡ್ಯಾಮೇಜೂ (ಹ್ಹಿಹ್ಹಿಹ್ಹಿಹ್ಹಿ) ಹ್ಹೇ ಹ್ಹೇ ಹ್ಹೇ...
           ಕುಳ್ಳ ನಾನಾಗಿದ್ದರೆ ಏನಾಯ್ತೆ ಹೊಯ್ ಒಳ್ಳೆ ಮನಸು ನನಗೈತೆ (ಹುಂ)
           ನಾ ಕಳ್ಳನಲ್ಲ ಸುಳ್ಳನಲ್ಲ ಗುಳ್ಳೆನರಿಯ ಬುದ್ಧಿಯಿಲ್ಲ ಒಳ್ಳೆ ವಂಶ ನಮ್ಮದೆಲ್ಲಾ ಹೇ...
          ಕುಳ್ಳ ನಾನಾಗಿದ್ದರೆ ಏನಾಯ್ತೆ ಒಳ್ಳೆ ಮನಸು ನನಗೈತೆ (ಅಹ್ಹಹ್ಹ)
--------------------------------------------------------------------------------------------------------------------------

No comments:

Post a Comment