679. ಗಂಡು ಸಿಡಿಗುಂಡು (1991)

ಗಂಡು ಸಿಡಿಗುಂಡು ಚಲನಚಿತ್ರದ ಹಾಡುಗಳು 
  1. ಹೊಸ ಭಾಷೆ ನಿನ್ನ ಕಣ್ಣಲ್ಲಿಯೇ ನೋಡಿದೆ
  2. ಆಹಾ ಆಹಾ ಈ ರಾತ್ರಿ ಹೊತ್ತಲ್ಲಿ ಝುಮ್ಮಕ್ಕ ಝುಮ್ಮ 
  3. ಹ್ಯಾಟಿನೊಳಗೇ ಫೋಟೋ ನೀ ನೋಡುವೆಯಾ 
  4. ಏತಕೆ ಯೋಚನೆ ಏತಕೆ ವೇದನೆ ಸುಡು ಚಿಂತೆಯೀಗಲೇ ಎದ್ದರು ನೀ ಹುಲಿಯಂತೇ 
  5. ಧನಿಕನಿಗೂ ಕಡು ಬಡವನಿಗೂ ಇರುವುದೂ ಒಬ್ಬನೇ ಭಗವಂತ 
ಗಂಡು ಸಿಡಿಗುಂಡು (1991) - ಹೊಸ ಭಾಷೆ ನಿನ್ನ ಕಣ್ಣಲ್ಲಿಯೇ ನೋಡಿದೆ
ಸಂಗೀತ: ಉಪೇಂದ್ರ ಕುಮಾರ, ಸಾಹಿತ್ಯ: ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ., ಮಂಜುಳಾ ಗುರುರಾಜ್

ಗಂಡು : ಹೊಸ ಭಾಷೆ ನಿನ್ನ ಕಣ್ಣಲ್ಲಿಯೇ ನೋಡಿದೆ
ಹೆಣ್ಣು : ಹೊಸ ಆಸೆ ನಿನ್ನ ಕಣ್ಣಲ್ಲಿಯೇ ತಂದಿದೆ
ಗಂಡು : ಹೊಸ ಭಾಷೆ ನಿನ್ನ ಕಣ್ಣಲ್ಲಿಯೇ ನೋಡಿದೆ
ಹೆಣ್ಣು : ಹೊಸ ಆಸೆ ನಿನ್ನ ಕಣ್ಣಲ್ಲಿಯೇ ತಂದಿದೆ
ಗಂಡು : ನಿನ್ನಂತೆ ಯಾರಿಲ್ಲ ಸ್ನೇಹಕೆ ಬಂಗಾರಿ ಬಾ ಇಲ್ಲಿ ಪ್ರೀತಿ ಮಾಡೋಕೆ
ಹೆಣ್ಣು : ನಿನ್ನಂತೆ ಯಾರಿಲ್ಲ ಸ್ನೇಹಕೆ ಓ ನಲ್ಲ ಬಾ ಇಲ್ಲಿ ಪ್ರೀತಿ ಮಾಡೋಕೆ
ಗಂಡು :ಇನ್ನು ನಮಗೆ ಅನುದಿನ ಆನಂದವೇ
ಹೆಣ್ಣು : ಹೊಸ ಭಾಷೆ ನಿನ್ನ ಕಣ್ಣಲ್ಲಿಯೇ ನೋಡಿದೆ
ಗಂಡು  : ಹೊಸ ಆಸೆ ನಿನ್ನ ಕಣ್ಣಲ್ಲಿಯೇ ತಂದಿದೆ

ಗಂಡು : ಒಲವಿನಲಿ ಸವಿ ಮಾತಾಡದೇ ಸವಿ ನಾನಾದರೇ ಸುಖವ ನೀಡುವೇ
            ಒಲವಿನಲಿ ಸವಿ ಮಾತಾಡದೇ ಸವಿ ನಾನಾದರೇ ಸುಖವ ನೀಡುವೇ
           ಹರುಷದಲಿ ನೀನಿರುವಾಗಲೇ  ಸ್ವರ ನಾ ಹಾಡಲೆ, ಹಿತವಾ ನೀಡಲೇ
ಹೆಣ್ಣು : ಓ ಚೆಲುವ ನಿನ್ನ, ನುಡಿಯು ಚೆನ್ನ ಜೊತೆಯಲಿರಲು ಬಾಳು ಚೆನ್ನ ಬಿಡೆನು ನಾ ನಿನ್ನ
ಗಂಡು : ಹೊಸ ಭಾಷೆ,                 ಹೆಣ್ಣು : ಹೊಸ ಭಾಷೆ
ಗಂಡು : ನಿನ್ನ ಕಣ್ಣಲ್ಲಿಯೇ,             ಹೆಣ್ಣು : ನಿನ್ನ ಕಣ್ಣಲ್ಲಿಯೇ
ಗಂಡು : ನೋಡಿದೆ,                     ಹೆಣ್ಣು : ನೋಡಿದೆ

ಹೆಣ್ಣು : ಪ್ರಣಯದಲಿ ನೀ ನನಗಾಸರೆ ನಾ ನಿನ್ನ ಸೆರೆ, ಓ ನನ್ನ ದೊರೆ
          ಬದುಕಿನಲಿ ನೀ ಹಾಡಾದರೆ ಶೃತಿ ನಿನಗಾಗುವೆ, ನಾ ಜೊತೆ ಸೇರುವೆ
          ಪ್ರಣಯದಲಿ ನೀ ನನಗಾಸರೆ ನಾ ನಿನ್ನ ಸೆರೆ, ಓ ನನ್ನ ದೊರೆ
          ಬದುಕಿನಲಿ ನೀ ಹಾಡಾದರೆ ಶೃತಿ ನಿನಗಾಗುವೆ, ನಾ ಜೊತೆ ಸೇರುವೆ
ಗಂಡು : ಓ ನನ್ನ ಗೆಳತಿ, ನನ್ನ ಒಡತಿ ಕಂಡು ಸೋತೆ, ನಿನ್ನ ಪ್ರೀತಿ ಪ್ರೇಮದಾ ಜ್ಯೋತಿ
ಹೆಣ್ಣು : ಹೊಸ ಭಾಷೆ ನಿನ್ನ ಕಣ್ಣಲ್ಲಿಯೇ ನೋಡಿದೆ ನಿನ್ನಂತೆ ಯಾರಿಲ್ಲ ಸ್ನೇಹಕೆ
          ಓ ನಲ್ಲ ಬಾ ಇಲ್ಲಿ ಪ್ರೀತಿ ಮಾಡೋಕೆ ಇನ್ನು ನಮಗೆ ಅನುದಿನ ಆನಂದವೇ
ಗಂಡು : ಹೊಸ ಭಾಷೆ,               ಹೆಣ್ಣು :  ಹೊಸ ಭಾಷೆ
ಗಂಡು : ನಿನ್ನ ಕಣ್ಣಲ್ಲಿಯೇ,          ಹೆಣ್ಣು : ನಿನ್ನ ಕಣ್ಣಲ್ಲಿಯೇ
ಗಂಡು : ನೋಡಿದೆ,                  ಹೆಣ್ಣು :  ನೋಡಿದೆ
ಹೆಣ್ಣು : ಹೊಸ ಆಸೆ,                 ಗಂಡು :  ಹೊಸ ಆಸೆ
ಹೆಣ್ಣು : ನಿನ್ನ ಕಣ್ಣಲ್ಲಿಯೇ,           ಗಂಡು :  ನಿನ್ನ ಕಣ್ಣಲ್ಲಿಯೇ
ಹೆಣ್ಣು : ಕಂಡಿದೆ,                     ಗಂಡು :  ಕಂಡಿದೆ
--------------------------------------------------------------------------------------------------------------------------

ಗಂಡು ಸಿಡಿಗುಂಡು (1991) - ಆಹಾ ಆಹಾ ಈ ರಾತ್ರಿ ಹೊತ್ತಲ್ಲಿ ಝುಮ್ಮಕ್ಕ ಝುಮ್ಮ 
ಸಂಗೀತ: ಉಪೇಂದ್ರ ಕುಮಾರ, ಸಾಹಿತ್ಯ: ಚಿ.ಉದಯಶಂಕರ, ಗಾಯನ : ವಿಷ್ಣು , ಮಂಜುಳಾ ಗುರುರಾಜ್

ಹೆಣ್ಣು : ಆಹಾ.. ಆಹಾ.. ಈ ರಾತ್ರಿ ಹೊತ್ತಲ್ಲಿ ಝುಮ್ಮಕ್ಕ ಝುಮ್ಮ ಈ ತಣ್ಣನೆ ಗಾಳೀಲಿ ಝುಮ್ಮಕ್ಕ ಝುಮ್ಮ
         ಒಹೋ ಮೈಯಲ್ಲಿ ಏನೋ ಝುಮ್ ಝುಮ್ ಈ ಕೆಂದುಟಿ ಜೇನು ಝುಮ್ಮಕ್ಕ ಝುಮ್ಮ
         ಈ ರಾತ್ರಿ ಹೊತ್ತಲ್ಲಿ ಝುಮ್ಮಕ್ಕ ಝುಮ್ಮ ಈ ತಣ್ಣನೆ ಗಾಳೀಲಿ ಝುಮ್ಮಕ್ಕ ಝುಮ್ಮ

ಹೆಣ್ಣು : ಆಆಆಹಾ ಒಹೋ ... ಹೇಹೇಹೇ .. ಪದಪಸನೀಸನೀಸ
          ಪ್ರಾಯ ಬಂದಾಗ ಕಣ್ಣಲ್ಲಿ ಝಮ್ಮಕ ಝುಮ್ಮ
ಗಂಡು : ಪದಸರಿಗ ಮಪಗಗಗಗ ಆಹಾ ಆಹಾ ಹೇಹೇಹೇ
            ಪ್ರಾಯ ಬಂದಾಗ ಕಣ್ಣಲ್ಲಿ ಝುಮ್ಮಕ್ಕ ಝುಮ್ಮ
            ಜೋಡಿ ಕಂಡಾಗ ಕನಸಲಿ ಝುಮ್ಮಕ್ಕ ಝುಮ್ಮ
            ಮನಸು ಬೆರೆತರೆ ಎದೆಯಲ್ಲಿ ಸೇರಿ ನಲಿಸಿದ ನಿನ್ನಲ್ಲಿ ಝುಮ್ಮಕ್ಕ ಝುಮ್ಮ
             ಹೊಯ್ ಝುಮ್ಮಕ್ಕ ಝುಮ್ಮ
ಹೆಣ್ಣು : ಈ ರಾತ್ರಿ ಹೊತ್ತಲ್ಲಿ ಝುಮ್ಮಕ್ಕ ಝುಮ್ಮ ಈ ತಣ್ಣನೆ ಗಾಳೀಲಿ ಝುಮ್ಮಕ್ಕ ಝುಮ್ಮ

ಗಂಡು : ಮೆಟ್ಟಿ ಕಂಡಾಗ ಬಿಡಲಾರೆ ಝುಮ್ಮಕ್ಕ ಝುಮ್ಮ
            ಮುತ್ತು ಕೊಡದೇನೆ ಇರಲಾರೆ ಝುಮ್ಮಕ್ಕ ಝುಮ್ಮ
            ಹೊತ್ತು ಮೀರಿಸೇ ನಿಲ್ಲಲಾರೇ ಮತ್ತೇ ಕೇಳಿಯ ಕೊಡಲಾರೆ ಝುಮ್ಮಕ್ಕ ಝುಮ್ಮ
            ಹೊಯ್ ಹೊಯ್ ಝುಮ್ಮಕ್ಕ ಝುಮ್ಮ
ಹೆಣ್ಣು : ಆಹಾ.. ಆಹಾ.. ಈ ರಾತ್ರಿ ಹೊತ್ತಲ್ಲಿ ಝುಮ್ಮಕ್ಕ ಝುಮ್ಮ ಈ ತಣ್ಣನೆ ಗಾಳೀಲಿ ಝುಮ್ಮಕ್ಕ ಝುಮ್ಮ
         ಒಹೋ ಮೈಯಲ್ಲಿ ಏನೋ ಝುಮ್ ಝುಮ್ ಈ ಕೆಂದುಟಿ ಜೇನು ಝುಮ್ಮಕ್ಕ ಝುಮ್ಮ
         ಈ ರಾತ್ರಿ ಹೊತ್ತಲ್ಲಿ ಝುಮ್ಮಕ್ಕ ಝುಮ್ಮ ಈ ತಣ್ಣನೆ ಗಾಳೀಲಿ ಝುಮ್ಮಕ್ಕ ಝುಮ್ಮ
--------------------------------------------------------------------------------------------------------------------------

ಗಂಡು ಸಿಡಿಗುಂಡು (1991) - ಹ್ಯಾಟಿನೊಳಗೇ ಫೋಟೋ ನೀ ನೋಡುವೆಯಾ 
ಸಂಗೀತ: ಉಪೇಂದ್ರ ಕುಮಾರ, ಸಾಹಿತ್ಯ: ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ., ಮಂಜುಳಾ ಗುರುರಾಜ್

ಗಂಡು : ಹೊಯ್ ಹ್ಯಾಟಿನೊಳಗೇ ಫೋಟೋ  ನೋಡುವೆಯಾ
ಹೆಣ್ಣು : ಫೋಟೋ ಎಂದರೇ ಏಕೆ ಕಣ್ಣು ಬಿಡುವೇ ಏನು ಎದೆಯಲ್ಲಿ ಡವ ಡವ ಮನದಲ್ಲಿ ಹವ ಹವ
         ತಡೆಯಲ್ಲಿ ಶಿವ  ಶಿವ ಭಂ ಭಂ
ಗಂಡು : ಹೊಯ್ ಹ್ಯಾಟಿನೊಳಗೇ ಫೋಟೋ  ನೋಡುವೆಯಾ

ಗಂಡು : ಕಾಮಣ್ಣ ಬಳಿಗೆ ಬಾರಮ್ಮ ಸೋಮಣ್ಣ ಸ್ನೇಹ ತೋರಯ್ಯ ನೀನು ಇಲ್ಲಿ ಬಂದಾಗ ಬೇಕೇ ಬೇಕೇ ಎಂದಾಗ 
            ಆಗ ಕೊಡುವಿ ಒಂದು ಅಯ್ಯೋ ಎಂದು ಕೂಗೋ ಹಾಗೆ ಕೆನ್ನೆಗೆ 
ಹೆಣ್ಣು : ಸುಬ್ಬಣ್ಣ ಎಂಥ ಚೆಲುವನೋ ಹೆಣ್ಣು ಎದುರು ನಿಂತಾಗ ನಡುಕೋ  ಅವನ ಮೈಯಾಗೇ ಯಾಕೋ ಭಯವು ಕಾಣೆ 
          ನನ್ನಾಣೆ ಹುಲಿಯೇ ನಾನು ನೀ ಹೇಳು 
ಗಂಡು : ಬಾರೋ ಧಡಿಯನೇ ಬಾರೋ ಕರಿಯನೇ ದೂರ ನಿಲ್ಲದೇನೇ 
           ನಿನ್ನ ಎದೆಯಲ್ಲಿ ಡವ ಡವ ಮನದಲ್ಲಿ ಹವ ಹವ ತಡೆಯಲ್ಲಿ ಶಿವ ಶಿವ ಭಂ ಭಂ 
           ಹೊಯ್ ಹ್ಯಾಟಿನೊಳಗೇ ಫೋಟೋ  ನೋಡುವೆಯಾ 

ಹೆಣ್ಣು : ಆಹಾ ಕೇಡಿ ಕೇಡಿಗೆ ಕೆಡಿಯಾಗುವೆ ಜೋಡಿಗೆ ಜೋಡಿಯಾಗುವೇ
          ಲೆಕ್ಕ ಎಂದು ಕಂಡಾಗ ರೊಕ್ಕ ಸುಲಿಯೇ ಬಂದಾಗ ನಾನು ಕಣ್ಣು ಹೊಡೆದು ಬಳಿಗೆ ಕರೆದು
          ಕಿರುಚದೇ ಹಾಗೇ ಗೊತ್ತೇನು
ಗಂಡು : ಮೋಸಕ್ಕೆ ಮೋಸ ಮಾಡುವೆ ವೇಷ ಮರೆಸಿ ಬಂದಾಗ
           ದ್ರೋಹಿ ಎಂದು ತಿಳಿದಾಗ ಅಲ್ಲೇ ಅವನ ಕಥೆಯ ಮುಗಿಸಿ
           ಬಿಡುವೇ ಒಂದೇ ನಿಮಿಷ ನೋಡು  ಈಗ
ಹೆಣ್ಣು : ಹ್ಯಾಟು ನಿನ್ನದೇ ಕೋಟು ನಿನ್ನದೇ ಬಾರೋ ಹೆದರದೇನೇ
ಗಂಡು : ಅರೇ ಹ್ಯಾಟು ನಿನ್ನದೇ ಕೋಟು ನಿನ್ನದೇ ಬಾರೋ ಹೆದರದೇನೆ
ಹೆಣ್ಣು : ನಿನ್ನ ಎದೆಯಲ್ಲಿ ಡವಡವ ಮನದಲಿ ಡವಡವ ತಡೆಯಲಿ ಶಿವಶಿವ ಭಂ ಭಂ
ಗಂಡು : ನಿನ್ನ ಎದೆಯಲ್ಲಿ ಡವಡವ ಮನದಲಿ ಡವಡವ ತಡೆಯಲಿ ಶಿವಶಿವ
           ಹೊಯ್ ಹ್ಯಾಟಿನೊಳಗೇ ಫೋಟೋ  ನೋಡುವೆಯಾ
ಹೆಣ್ಣು : ಫೋಟೋ ಎಂದರೇ ಏಕೆ ಕಣ್ಣು ಬಿಡುವೇ ಏನು ಎದೆಯಲ್ಲಿ ಡವ ಡವ ಮನದಲ್ಲಿ ಹವ ಹವ
         ತಡೆಯಲ್ಲಿ ಶಿವ  ಶಿವ ಭಂ ಭಂ
ಗಂಡು : ಹೊಯ್ ಹ್ಯಾಟಿನೊಳಗೇ ಫೋಟೋ  ನೋಡುವೆಯಾ
--------------------------------------------------------------------------------------------------------------------------

ಗಂಡು ಸಿಡಿಗುಂಡು (1991) - ಏತಕೆ ಯೋಚನೆ ಏತಕೆ ವೇದನೆ ಸುಡು ಚಿಂತೆಯೀಗಲೇ ಎದ್ದರು ನೀ ಹುಲಿಯಂತೇ 
ಸಂಗೀತ: ಉಪೇಂದ್ರ ಕುಮಾರ, ಸಾಹಿತ್ಯ: ಚಿ.ಉದಯಶಂಕರ, ಗಾಯನ : ಮಂಜುಳಾ ಗುರುರಾಜ್, ಕೋರಸ್ 

ಏತಕೆ ಯೋಚನೆ ಏತನೆ ವೇದನೆ ಸುಡು ಚಿಂತೆಯೀಗಲೇ ಎದ್ದರು ನೀನು ಹುಲಿಯಂತೇ
ಕಡು ರೋಷದಿಂದ ನೀ ನೋಡಲು ವೈರಿ ಇಲಿಯಂತೆ
ಛಲದಿ ನಿಂತರೇ ನೀನು ಗಂಡು ಸಿಡಿಗುಂಡು ಗಂಡು ಸಿಡಿಗುಂಡು
ಏತಕೆ ಯೋಚನೆ ಏತನೆ ವೇದನೆ ಸುಡು ಚಿಂತೆಯೀಗಲೇ ಎದ್ದರು ನೀನು ಹುಲಿಯಂತೇ
ಕಡು ರೋಷದಿಂದ ನೀ ನೋಡಲು ವೈರಿ ಇಲಿಯಂತೆ
ಛಲದಿ ನಿಂತರೇ ನೀನು ಗಂಡು ಸಿಡಿಗುಂಡು ಗಂಡು ಸಿಡಿಗುಂಡು

ಒಲವಲಿ ನೀನು ಹೂವಿನ ಹಾಗೆ ಬಲ್ಲೆನು ನಾ ನಲ್ಲಾ ಒಲಿದರೆ ಸಾಕು ನಲ್ಲೆಯ ಬಾಳು ಸಕ್ಕರೆಯೇ ಬೆಲ್ಲ
ಸಿಡಿದರೇ ನೀನು ಸಿಡಿಲಿನ ಹಾಗೆ ಹೆದರುವರೆಲ್ಲ ಎದುರಿಸಿ ಬಂದ ಪರ್ವತ ಕೂಡಾ ಉಳಿಯುವುದಿಲ್ಲ
ಸೂರ್ಯನು ಇರುಳಲಿ ನೆಮ್ಮದಿ ಜಗದಲಿ ಶಾಂತಿಯು ಕಡಲಲಿ ಇರುವುದೇನು ಹೇಳು
ಏತಕೆ ಯೋಚನೆ ಏತನೆ ವೇದನೆ ಸುಡು ಚಿಂತೆಯೀಗಲೇ ಎದ್ದರು ನೀನು ಹುಲಿಯಂತೇ
ಕಡು ರೋಷದಿಂದ ನೀ ನೋಡಲು ವೈರಿ ಇಲಿಯಂತೆ
ಛಲದಿ ನಿಂತರೇ ನೀನು ಗಂಡು ಸಿಡಿಗುಂಡು ಗಂಡು ಸಿಡಿಗುಂಡು

ದುರುಳುರ ನಾಶ ಆಗಲೇಬೇಕು ತಿಳಿದುಕೋ ನಲ್ಲಾ
ಕಪಟಗಳಲ್ಲೇ ಓಡದೇ ಬೇರೆ ದಾರಿಯೇ ಇಲ್ಲ
ಮೋಸಕ್ಕೆ ಮೋಸ ಮಾಡಲೇಬೇಕು ತಪ್ಪೇನಿಲ್ಲಾ
ದ್ರೋಹಿಗಳೆಲ್ಲೇ ಇರಲಿ ಇನ್ನು ಉಳಿವೆ ಇಲ್ಲ
ಜೊತೆಯಲಿ ಇರುವೆನು ಕರೆದರೇ ಬರುವೆನು
ಪ್ರಾಣಕೆ ಪ್ರಾಣವ ಕೊಡುವೆ ನಾನು ಏನೂ
ಏತಕೆ ಯೋಚನೆ ಏತನೆ ವೇದನೆ ಸುಡು ಚಿಂತೆಯೀಗಲೇ ಎದ್ದರು ನೀನು ಹುಲಿಯಂತೇ
ಕಡು ರೋಷದಿಂದ ನೀ ನೋಡಲು ವೈರಿ ಇಲಿಯಂತೆ
ಛಲದಿ ನಿಂತರೇ ನೀನು ಗಂಡು ಸಿಡಿಗುಂಡು ಗಂಡು ಸಿಡಿಗುಂಡು
--------------------------------------------------------------------------------------------------------------------------

ಗಂಡು ಸಿಡಿಗುಂಡು (1991) - ಧನಿಕನಿಗೂ ಕಡು ಬಡವನಿಗೂ ಇರುವುದೂ ಒಬ್ಬನೇ ಭಗವಂತ 
ಸಂಗೀತ: ಉಪೇಂದ್ರ ಕುಮಾರ, ಸಾಹಿತ್ಯ: ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ., 

ಕೊಟ್ಟು ಕುದಿಯಲಿ ಬೇಡ ಬಿಟ್ಟಾಡಿ ಕೊಡಬೇಡ ಕೊಟ್ಟು ನಾ ಕೆಟ್ಟೆ ಎನಬೇಡ
ಶಿವನಲ್ಲಿ ಕಟ್ಟಿಹುದು ಬುತ್ತಿ ಸರ್ವಜ್ಞ ..
ಧನಿಕನಿಗೂ ಕಡು ಬಡವನಿಗೂ ಇರುವುದೂ ಒಬ್ಬನೇ ಭಗವಂತ
ಧನಿಕನಿಗೂ ಕಡು ಬಡವನಿಗೂ ಇರುವುದೂ ಒಬ್ಬನೇ ಭಗವಂತ
ಈ ಪೂಜಾರಿಯ ಕೈ ಸೆರೆಯಾಗಿ ಬರಿ ಕಲ್ಲಾದ ಭಗವಂತ
ಧನಿಕನಿಗೂ ಕಡು ಬಡವನಿಗೂ ಇರುವುದೂ ಒಬ್ಬನೇ ಭಗವಂತ
ಈ ಪೂಜಾರಿಯ ಕೈ ಸೆರೆಯಾಗಿ ಬರಿ ಕಲ್ಲಾದ ಭಗವಂತ
ಧನಿಕನಿಗೂ ಕಡು ಬಡವನಿಗೂ ಇರುವುದೂ ಒಬ್ಬನೇ ಭಗವಂತ 

ಸದಾ ಗುಡಿಯಲ್ಲಿ ನೈವ್ಯದ್ಯವೋ .. ಆಹಾ... ಇಲ್ಲಿ ಬರೀ ಹೊಟ್ಟೆ ಉಪವಾಸವೋ 
ಸದಾ ಗುಡಿಯಲ್ಲಿ ನೈವ್ಯದ್ಯವೋ .. ಆಹಾ... ಇಲ್ಲಿ ಬರೀ ಹೊಟ್ಟೆ ಉಪವಾಸವೋ 
ಬರಿ ಜನ ಮರಳೋ ಇಲ್ಲ ಮನೆ ಮರುಳೋ ಇದು ಕಲಿಯುಗದ ಲೀಲೆಯೋ 
ಧನಿಕನಿಗೂ ಕಡು ಬಡವನಿಗೂ ಇರುವುದೂ ಒಬ್ಬನೇ ಭಗವಂತ
ಈ ಪೂಜಾರಿಯ ಕೈ ಸೆರೆಯಾಗಿ ಬರಿ ಕಲ್ಲಾದ ಭಗವಂತ
ಧನಿಕನಿಗೂ ಕಡು ಬಡವನಿಗೂ ಇರುವುದೂ ಒಬ್ಬನೇ ಭಗವಂತ 

ಕಲ್ಲಿನ ನಾಗರ ಕಂಡರೇ ಕ್ಷೀರಾಭಿಷೇಕ ದೀನರ ಬಾಳಿಗೆ ನಿತ್ಯವೂ ಕಣ್ಣೀರ ಶೋಕ 
ಕಲ್ಲಿನ ನಾಗರ ಕಂಡರೇ ಕ್ಷೀರಾಭಿಷೇಕ ದೀನರ ಬಾಳಿಗೆ ನಿತ್ಯವೂ ಕಣ್ಣೀರ ಶೋಕ 
ಏನು ನೀತಿ..  ಓ... ಓಓಓಓಓ.. ಲೋಕ ರೀತಿ ಆಹಾ..ಆಹ್ಹಹಾಹಾಹಾ 
ಇಲ್ಲಿ ತಲೆಗೊಂದು ಏಕಾಂತ ನೋಡಿ ಬೆಪ್ಪಾದ ಭಗವಂತ .. 
ಧನಿಕನಿಗೂ ಕಡು ಬಡವನಿಗೂ ಇರುವುದೂ ಒಬ್ಬನೇ ಭಗವಂತ
ಈ ಪೂಜಾರಿಯ ಕೈ ಸೆರೆಯಾಗಿ ಬರಿ ಕಲ್ಲಾದ ಭಗವಂತ
ಧನಿಕನಿಗೂ ಕಡು ಬಡವನಿಗೂ ಇರುವುದೂ ಒಬ್ಬನೇ ಭಗವಂತ 

ರಾಮನು ಹುಟ್ಟಿದ ನಾಡಿದು ಈ ನಮ್ಮ ದೇಶ ಹೊಟ್ಟೆಯ ಬಾಳಿಗೆ ನಮ್ಮದು ನೂರಾರು ವೇಷ 
ರಾಮನು ಹುಟ್ಟಿದ ನಾಡಿದು ಈ ನಮ್ಮ ದೇಶ ಹೊಟ್ಟೆಯ ಬಾಳಿಗೆ ನಮ್ಮದು ನೂರಾರು ವೇಷ 
ಕಾಸಿಗಾಗಿ ಹೊಯ್ ಹೊಯ್ ಎಲ್ಲಾ ಮೋಸ ಇಲ್ಲಿ ಕಾಸಿದ್ದರೇ ಕೈಲಾಸ 
ರಾಮನು ಹುಟ್ಟಿದ ನಾಡಿದು ಈ ನಮ್ಮ ದೇಶ ಹೊಟ್ಟೆಯ ಬಾಳಿಗೆ ನಮ್ಮದು ನೂರಾರು ವೇಷ 
--------------------------------------------------------------------------------------------------------------------------

No comments:

Post a Comment