- ದೇವ ನಿನ್ನ ರಾಜ್ಯದ ನ್ಯಾಯವಿದೇನಾ..
- ದೂರ ದೂರ ದೂರಕೇ
- ಫುಟಪಾತ್ ವಾಸೀ ಹಸುವೇ ಸಿಟಿ
- ಝಳುಕಿನ ಝಳುಕಿನ ಲೋಕ
- ಲೋಕ ರೀತಿ ಅರಿಯದರ
- ಪ್ರೇಮದ ಪ್ರೀತಿಯ ಪೂಜಾರಿ
ಭಾಗ್ಯ ಚಕ್ರ (೧೯೫೬) - ದೇವ ನಿನ್ನ ರಾಜ್ಯದ ನ್ಯಾಯವಿದೇನಾ
ಸಂಗೀತ: ವಿಜಯಭಾಸ್ಕರ್, ಸಾಹಿತ್ಯ : ಗೀತಪ್ರಿಯ, ಗಾಯನ: : ಘಂಟಸಾಲ
ನ್ಯಾಯವಿದೇನಾ.... ದೇವ ನಿನ್ನ ರಾಜ್ಯದ ನ್ಯಾಯವಿದೇನಾ
ದೇವ ನಿನ್ನ ರಾಜ್ಯದ ನ್ಯಾಯವಿದೇನಾ... ನ್ಯಾಯವಿದೇನಾ... ನ್ಯಾಯವಿದೇನಾ
ಲೋಕಕೆಲ್ಲಾ ಒಬ್ಬ ಸೂರ್ಯ ಒಬ್ಬನೆಯೇ ಚಂದಿರ
ಎಲ್ಲರಿಗೂ ಒಂದೇ ಭೂಮಿ ಇರುವುದೊಂದೇ ಅಂಬರ
ಆದರೇಕೆ ಜಗದಲೀ...
ಆದರೇಕೆ ಜಗದಲೀ ಬೇಧಭಾವನಾ.. ಬೇಧಭಾವನಾ.. ಬೇಧಭಾವನಾ..
ಬಡವರಾಯೀ ಗೋಳ ನೋಡಿ ಗುಡಿಗಳಲ್ಲಿ ಅವಿತೆಯಾ
ಕಲ್ಲು ಮಾಡಿ ಹೃದಯವಾ ಕಲ್ಲಾಗಿ ಕುಳಿತೆಯಾ
ಮರೆತೆಯೇನೋ ಬಡವರ ಶೋಕ ಜೀವನ... ಶೋಕಜೀವನ... ಶೋಕ ಜೀವನ...
ದೇವ ನಿನ್ನ ರಾಜ್ಯದ ನ್ಯಾಯವಿದೇನಾ... ನ್ಯಾಯವಿದೇನಾ... ನ್ಯಾಯವಿದೇನಾ
ತುಂಬಿಹುದೂ ಸುತ್ತಲೂ ಪಾಪಿಗಳ ಪಂಗಡ.. ಪಾಪಿಗಳ ಪಂಗಡ..
ತುಂಬಿಹುದೂ ಸುತ್ತಲೂ ಪಾಪಿಗಳ ಪಂಗಡ.. ಪಾಪಿಗಳ ಪಂಗಡ..
ವಂಚನೆಯೂ ಮುತ್ತಿರಲೂ ಸ್ವಾರ್ಥತೆಯ ಸಂಗಡ
ಲೋಕದಲ್ಲಿ ಎತ್ತಲೂ ಕತ್ತಲೆಯೇನಾ ... ಕತ್ತಲೆಯೇನಾ.. ಕತ್ತಲೆಯೇನಾ
ದೇವ ನಿನ್ನ ರಾಜ್ಯದ ನ್ಯಾಯವಿದೇನಾ... ನ್ಯಾಯವಿದೇನಾ... ನ್ಯಾಯವಿದೇನಾ
-------------------------------------------------------------------------------------
ಭಾಗ್ಯ ಚಕ್ರ (೧೯೫೬) - ದೂರ ದೂರ ದೂರಕೇ
ಸಂಗೀತ: ವಿಜಯಭಾಸ್ಕರ್, ಸಾಹಿತ್ಯ : ಗೀತಪ್ರಿಯ, ಗಾಯನ: :ಬಾಲಸರಸ್ವತಿ ದೇವಿ
ಓಓಓಓಓ ದೂರಕೇ ದೂರ ದೂರ ದೂರಕೇ
ಮರೆತೂ ಎನ್ನ ಶೋಕಕೇ ಬೇಗ ಬೇಗ ತೆರೆಳುವರೇ ಮರಳಿ ಬರುವುದೆಂದೂ
ಮರಳಿ ಬರುವುದೆಂದೂ
ಓಓಓಓಓ ದೂರಕೇ ದೂರ ದೂರ ದೂರಕೇ
ಮರೆತೂ ಎನ್ನ ಲೋಕಕೇ ಬೇಗ ಬೇಗ ತೆರೆಳುವರೇ ಮರಳಿ ಬರುವುದೆಂದೂ
ಮರಳಿ ಬರುವುದೆಂದೂ
ಬಾಲ್ಯದಲ್ಲಿ ಆಡುತಾ ಪ್ರೇಮದಲ್ಲಿ ನಲಿಯುತಾ
ಪ್ರಣಯದಲ್ಲಿ ಒಂದುಗೂಡಿ ಚೆಂದಾದಿಂದ ನಲಿದೆವೋಡಿ ಮರಳಿ ಬರುವದೆಂದೂ
ಮರಳಿ ಬರುವದೆಂದೂ
ಬೀಸುತಿರುವ ಗಾಳಿಯ... ಸಾಗುತೀರುವ ಮೋಡವ
ಬೀಸುತಿರುವ ಗಾಳಿಯ... ಸಾಗುತೀರುವ ಮೋಡವ
ಹರಿಯುತಿರುವ ತೊರೆಯೆನು ನಿಡುವೇನು ನಿಮಗೇ ಎನ್ನ ಧೋಕ ತಿಳಿಸಿರೆಂದೂ...
ಧೋಕ ತಿಳಿಸಿರೆಂದೂ...
ಓಓಓಓಓ ದೂರಕೇ ದೂರ ದೂರ ದೂರಕೇ
ಮರೆತೂ ಎನ್ನ ಲೋಕಕೇ ಬೇಗ ಬೇಗ ತೆರೆಳುವರೇ ಮರಳಿ ಬರುವುದೆಂದೂ
ಮರಳಿ ಬರುವುದೆಂದೂ ಓಓಓಓಓ ದೂರಕೇ
---------------------------------------------------------------------------------------
ಭಾಗ್ಯ ಚಕ್ರ (೧೯೫೬) - ಫುಟಪಾತ್ ವಾಸೀ ಹಸುವೇ ಸಿಟಿ
ಸಂಗೀತ: ವಿಜಯಭಾಸ್ಕರ್, ಸಾಹಿತ್ಯ : ಗೀತಪ್ರಿಯ, ಗಾಯನ: : ಏ.ಎಂ.ರಾಜ
ಫುಟಪಾತ್ ವಾಸೀ ಹಸುವೇ ಸಿಟಿ ನಗಬೇಡಿ ಹ್ಹೀಹ್ಹೀ ಅಹ್ಹಹ್ಹಹಹ ಹ್ಹೀಹ್ಹೀ ಅಹ್ಹಹ್ಹ
ನಗಬೇಡಿ ಎಲ್ಲಾರೂ ನನ್ನ ಕಡೆಗೆ ತೋರಿಸಿ ಫುಟಪಾತ್ ವಾಸೀ
ಫುಟಪಾತ್ ವಾಸೀ ಹಸುವೇ ಸಿಟಿ ನಗಬೇಡಿ ಎಲ್ಲಾರೂ ನನ್ನ ಕಡೆಗೆ ತೋರಿಸಿ ಫುಟಪಾತ್ ವಾಸೀ
ಈಶ್ವರನ ಆಟದಲೀ ನಾನೊಂದು ಚೆಂಡೂ.. ನಾನೊಂದು ಚೆಂಡೂ..
ಹುಡುಹುಡುಕಿ ಸೇದುವೇನೂ ಬೀಡಿಗಳ ತುಂಡೂ... ಬೀಡಿಗಳ ತುಂಡೂ
ಹುಡುಗಿಯರೂ ನೋಡುತೀರೇ ... ಚಪ್ಪಾಳೆ ಬಾರಿಸೀ ..
ಫುಟಪಾತ್ ವಾಸೀ ಹಸುವೇ ಸಿಟಿ ನಗಬೇಡಿ ಎಲ್ಲಾರೂ ನನ್ನ ಕಡೆಗೆ ತೋರಿಸಿ ಫುಟಪಾತ್ ವಾಸೀ
ಕಾಸಿದ್ರೇ ಕೈಲಾಸ ಇಲ್ಲದಿದ್ದರೇ ವನವಾಸ ಹೀಗೆಂದೂ ಹತ್ತಾರಿ ಹೇಳಿದ್ರೂ ನಮ್ಮ ತಾತ
ಕಾಸಿದ್ರೇ ಕೈಲಾಸ ಇಲ್ಲದಿದ್ದರೇ ವನವಾಸ ಹೀಗೆಂದೂ ಹತ್ತಾರಿ ಹೇಳಿದ್ರೂ ನಮ್ಮ ತಾತ
ಈ ಮಾತು ಮರೆತಾಗ ಪರದಾಟ ಗ್ಯಾರಂಟೀ ..
ಫುಟಪಾತ್ ವಾಸೀ ಹಸುವೇ ಸಿಟಿ ನಗಬೇಡಿ ಎಲ್ಲಾರೂ ನನ್ನ ಕಡೆಗೆ ತೋರಿಸಿ ಫುಟಪಾತ್ ವಾಸೀ
ತಡವರಸೀ ಸಾಗುತಿರೇ ಜೀವನದ ಯಾತ್ರೇ.. ಜೀವನದ ಯಾತ್ರೇ..
ಅವರಿವರ ನಂಬುತಲೀ ಕಂಡೇ ಭಿಕ್ಷೇ ಪಾತ್ರೇ
ಕುಳಿತರಲೂ ನಮ್ಮ ಕರ್ಮ .. ಹ್ಹಾ..
ಕುಳಿತರಲೂ ನಮ್ಮ ಕರ್ಮ ಓಡಾಡಸಿ ಗೋಳಾಡಸಿ ತೂರಾಡಿಸೀ ತಡಕಾಡಿಸೀ ಸಂತೋಷ ಜಾತ್ರೇ ..
ಫುಟಪಾತ್ ವಾಸೀ ಹಸುವೇ ಸಿಟಿ ನಗಬೇಡಿ ಎಲ್ಲಾರೂ ನನ್ನ ಕಡೆಗೆ ತೋರಿಸಿ ಫುಟಪಾತ್ ವಾಸೀ
--------------------------------------------------------------------------------------------
ಭಾಗ್ಯ ಚಕ್ರ (೧೯೫೬) - ಝಳುಕಿನ ಝಳುಕಿನ ಲೋಕ
ಸಂಗೀತ: ವಿಜಯಭಾಸ್ಕರ್, ಸಾಹಿತ್ಯ : ಗೀತಪ್ರಿಯ, ಗಾಯನ: : ಬಾಲ ಸರಸ್ವತಿದೇವಿ
ಝಳಕಿನ ಝಳಕಿನ ಲೋಕವಿದುವೇ ಜೋಕಿನ
ಮೋಹದ ಮಿಂಚಿನ ಆಟ ಇದುವೇ ಮೋಜಿನ... ಮೋಜಿನ
ನಿನ್ನದೇ... ಯೌವ್ವನ ನಿನ್ನದೇ... ಜೀವನ
ನಿನ್ನದೇ... ಯೌವ್ವನ ನಿನ್ನದೇ... ಜೀವನ
ಈ ಪ್ರಪಂಚ ನಿನ್ನದೇ ಸುಖವೂ ದುಃಖವೂ ನಿನ್ನದೇ
ಈ ಪ್ರಪಂಚ ನಿನ್ನದೇ ಸುಖವೂ ದುಃಖವೂ ನಿನ್ನದೇ
ಚಿಂತೆಯ ದೂಡುತ ಕಾಲ ಬಾಳ ಬಂಧನ.. ಬಂಧನ..
ಮೆಲ್ಲ ಮೆಲ್ಲ ಮೆಲ್ಲನೇ... ಕಂಡು ಮನದ ಓಟ
ಅಲ್ಲಿ ಇಲ್ಲಿ ಎಲ್ಲಿಯೂ.. ಒಂದೇ ಬಗೆಯ ನೋಟ
ಕುಳಿತು ಬಾ ತಣಿಸು ಬಾ ಬಾರೇ ಇದುವೇ ಕಣ್ಣಿನ .. ಕಣ್ಣಿನ ..
ಸಿಂಗಾರಿಯಾ... ವೈಯ್ಯಾರಿಯಾ...
ಸಿಂಗಾರಿಯ... ವೈಯ್ಯಾರಿಯ... ನಗುವಿನ ಲಾಸ್ಯ ಆಟ
ಮಾರುಹೋದ ಮನಗಳ ನಡೆಸಿದೆಯೇ ಆಟ
ಸೋಲಿನ ಗೆಲುವಿನ ಚಿಂತೆ ಏಕೇ ಶಂಕಿನ.. ಶಂಕಿನ
ಝಳಕಿನ ಝಳಕಿನ ಲೋಕವಿದುವೇ ಜೋಕಿನ
ಮೋಹದ ಮಿಂಚಿನ ಆಟ ಇದುವೇ ಮೋಜಿನ... ಮೋಜಿನ
-------------------------------------------------------------------------------------------
ಭಾಗ್ಯ ಚಕ್ರ (೧೯೫೬) - ಲೋಕ ರೀತಿ ಅರಿಯದರ
ಸಂಗೀತ: ವಿಜಯಭಾಸ್ಕರ್, ಸಾಹಿತ್ಯ : ಗೀತಪ್ರಿಯ, ಗಾಯನ: : ಏ .ಎಂ.ರಾಜ, ಪಿ.ಸುಶೀಲಾ
ಗಂಡು : ಲೋಕ ರೀತಿ ಅರಿಯದಾದೇ ಸಿಲುಕಿ ಮೋಹ ಜಾಲಕೇ
ಭಾಗ್ಯವನ್ನೂ ಬಾಳಿಗಾಗಿ ಅರಸುತಿಹೆನು ಸೂರ್ಯರೇ..
ಹೆಣ್ಣು : ಕಣ್ಣನೀರ ಭಾರಯಾ.. ಸುರಿಸುತಿಹೆನು ನೇತ್ರದೇ
ಸುಡುತಲಿಹಿದು ಶೋಕತಾಪ ಎನ್ನ ಅಂತರಂಗದೇ... ಎನ್ನ ಅಂತರಂಗದೇ...
ಗಂಡು : ಗೈದೇ ಎನಿತು ಪಾಪವ ಮೆರೆದೆ ಸಿರಿಯ ನೋಟದೇ
ಮರುಳು ಆಗಿ ಮೋಸ ಹೋದೇ ಸೋಲೇ ಜಗದ ಆಟದೇ..
ಸೋತೇ ಜಗದ ಆಟದೇ..
ಹೆಣ್ಣು : ಎಣಿಸುತಿಹೆನು ದಿನಗಳ ಪ್ರಿಯನೇ ನಿನ್ನ ಗಾನದೇ
ಸುಖದ ಕಿರಣ ತೋರೋ ಬೇಗ ಎನ್ನ ಬಾಳ ದೀಪದೇ.. ಎನ್ನ ಬಾಳ ದೀಪದೇ
ಗಂಡು: ಕುರುಡುನಂತೇ ನಡೆದೇ ನಾ.. ನಿಜದ ಹಾದಿ ಕಾಣದೇ ..
ಮುಂದೆ ಇಹುದು ಚಿಂತೆ ಈಗ ಶಾಂತಿಯನ್ನೇ ತೋರದೇ .. ಶಾಂತಿಯನ್ನೇ ತೋರದೇ ..
ಲೋಕ ರೀತಿ ಅರಿಯದಾದೇ ಸಿಲುಕಿ ಮೋಹ ಜಾಲಕೇ
ಹೆಣ್ಣು : ಆಆಆ... ಭಾಗ್ಯವನ್ನೂ ಬಾಳಿಗಾಗಿ ಅರಸುತಿಹೆನು ಶೂನ್ಯದೇ ..
---------------------------------------------------------------------------------------------------
ಭಾಗ್ಯ ಚಕ್ರ (೧೯೫೬) - ಪ್ರೇಮದ ಪ್ರೀತಿಯ ಪೂಜಾರಿ
ಸಂಗೀತ: ವಿಜಯಭಾಸ್ಕರ್, ಸಾಹಿತ್ಯ : ಗೀತಪ್ರಿಯ, ಗಾಯನ: : ಏ .ಎಂ.ರಾಜ, ಪಿಲ್ಲವಲು ಗಜಪತಿ ಕೃಷ್ಣವೇಣಿ (ಜಿಕ್ಕಿ)
ಗಂಡು : ಪ್ರೇಮದ ಪ್ರೀತಿಯ ಪೂಜಾರಿ ನಾನಲ್ಲವೇ
ಹೆಣ್ಣು : ಮೋಹದ ಮಾಧುರ್ಯ ರಾಗಿಣಿ ನಾನಲ್ಲವೇ
ಗಂಡು : ಯೌವ್ವನವೂ .. ಹೆಣ್ಣು : ನನಗಾಗೀ ..
ಗಂಡು : ನನಗಾಗೀ ಹೆಣ್ಣು : ಇಹುದಲ್ಲವೇ
ಇಬ್ಬರು : ಇಂದಿನ ಸಂಗೀತ ಸಾಮ್ರಾಜ್ಯ ನಮಗಲ್ಲವೇ ..
ಗಂಡು : ವಧುವಿನ ಶೃಂಗಾರ ವಯಸ್ಸಿನ ವಯ್ಯಾರ.. ಆನಂದವೂ..
ಹೆಣ್ಣು : ಓಹೋ ಆನಂದವೂ ..
ಬಾಷೆಯ ಆಧಾರ ಸಂತೋಷ ಸಂಸಾರ ಸುಖದಾಟವೂ ..
ಗಂಡು : ಓಹೋಹೋ ಸುಖದಾಟವೂ ..
ಆಆಆ.. (ಆಆಆ ) ಆಆಆ.. (ಆಆಆ ) ಆಆಆ.. (ಆಆಆ )
ಗಂಡು : ನಾಗಿಣಿಯೋ ನೀನಾಗಿ ಗಾರುಡಿಗ ನಾನಾಗಿ ಹಾಡಾಡುವಾ
ಹೆಣ್ಣು : ಓಹೋಹೋ.. ಹಾಡಾಡುವಾ
ಮೋಹನನೂ ನೀನಾಗಿ ಮೋಹಿನಿಯೂ ನಾನಾಗಿ ನಲಿದಾಡುವಾ
ಗಂಡು : ಓಹೋಹೋ ನಲಿದಾಡುವಾ
ಆಆಆ.. (ಆಆಆ ) ಆಆಆ.. (ಆಆಆ ) ಆಆಆ.. (ಆಆಆ )
ಗಂಡು : ಪ್ರೇಮದ ಪ್ರೀತಿಯ ಪೂಜಾರಿ ನಾನಲ್ಲವೇ
ಹೆಣ್ಣು : ಮೋಹದ ಮಾಧುರ್ಯ ರಾಗಿಣಿ ನಾನಲ್ಲವೇ
ಗಂಡು : ಯೌವ್ವನವೂ .. ಹೆಣ್ಣು : ನನಗಾಗೀ ..
ಗಂಡು : ನನಗಾಗೀ ಹೆಣ್ಣು : ಇಹುದಲ್ಲವೇ
ಇಬ್ಬರು : ಇಂದಿನ ಸಂಗೀತ ಸಾಮ್ರಾಜ್ಯ ನಮಗಲ್ಲವೇ ..
----------------------------------------------------------------------------------------------------------
No comments:
Post a Comment