685. ಅಮ್ಮ (1968)

ಅಮ್ಮ ಚಲನಚಿತ್ರದ ಹಾಡುಗಳು 
  1. ರಾತ್ರಿಯಲಿ ಮಳೆ ಬಂದು ನಿನ್ನ ನೆನಪ 
  2. ನಾಗವೇಣಿ ನಾಗರಿಗೆ ನಾ 
  3. ಧರ್ಮವೇ ಜಯವೆಂಬ 
  4. ನಿನ್ನ ಕಂಡು ನಾ ಬಂದೆ 
  5. ಬಂಗಾರವಾಗಲಿ ನಿನ್ನಾ ಬಾಳೆಲ್ಲಾ 
  6. ಎಂಥ ಚೆಲುವು ನಗುವು 
  7. ಇರುತಿರೆ ದೂರ ಬದುಕುದು ಭಾರ 
  8. ನಿನ್ನ ಲಗ್ನಪತ್ರಿಕೆ ಎನ್ನ ಕೂಗಿ
ಅಮ್ಮ (1968) - ರಾತ್ರಿಯಲಿ ಮಳೆ ಬಂದು ನಿನ್ನ ನೆನಪ ಸುರಿದಿದೆ
ಸಾಹಿತ್ಯ: ಜಿ.ವಿ.ಅಯ್ಯರ್  ಸಂಗೀತ: ಟಿ.ಜಿ.ಲಿಂಗಪ್ಪ  ಹಾಡಿದವರು: ಪಿಠಾಪುರಂ ನಾಗೇಶ್ವರ ರಾವ್, ಎಲ್.ಆರ್.ಈಶ್ವರಿ

ರಾತ್ರಿಯಲಿ ಮಳೆ ಬಂದು ನಿನ್ನ ನೆನಪ ಸುರಿದಿದೆ
ಎನ್ನೆದೆಯ ಅಂಗಳದೆ ನಿನ್ನ ನಗೆಯು ತುಂಬಿದೆ
ರಾತ್ರಿಯಲಿ ಮಳೆ ಬಂದು ನಿನ್ನ ನೆನಪ ಸುರಿದಿದೆ

ನಿನ್ನುಸಿರು ಎನ್ನೊಳಗೆ ನೆಲೆಯಾಗಿ ನಿಂತಿದೆ
ನಿನ್ನುಸಿರು ಎನ್ನೊಳಗೆ ನೆಲೆಯಾಗಿ ನಿಂತಿದೆ
ದಿನವೆಲ್ಲ ಕಾದರೆ ಹೂ ಮೊಗವು ಬಾಡದೆ
ಹೂ ಮೊಗವು ಬಾಡದೆ
ಚಿಂತೆ ಎಂಬ ಮೇಲ್ಸೆರಗ ಕಿತ್ತೆಳೆದು ಓಡಿದೆ
ಚಿಂತೆ ಎಂಬ ಮೇಲ್ಸೆರಗ ಕಿತ್ತೆಳೆದು ಓಡಿದೆ
ಈ ಬದುಕ ಕಥೆ ಇಂದು ನೂರು ಬಣ್ಣ ಬೆರೆಸಿದೆ
ನೂರು ಬಣ್ಣ ಬೆರೆಸಿದೆ
ರಾತ್ರಿಯಲಿ ಮಳೆ ಬಂದು ನಿನ್ನ ನೆನಪ ಸುರಿದಿದೆ

ಈ ಕಣ್ಣಿನ ತುಂಟಾಟದೆ ಎಷ್ಟೊಂದು ನಾಟಕ ನೀನಾಡಿದೆ
ಈ ಕಣ್ಣಿನ ಆಲ್ಬಮ್ಮಲಿ ನಿನ್ನ ಚಿತ್ರ ನೂರಾರಿದೆ
ತಿರುತಿರುವಿ ಒಂದೊಂದು ನಾ ನೋಡಿದೆ
ತಿರುತಿರುವಿ ಒಂದೊಂದು ನಾ ನೋಡಿದೆ
ನೋಡಿದ ಮೇಲೆ ಇನ್ನೇನಿದೆ
ನೋಡಿದ ಮೇಲೆ ಇನ್ನೇನಿದೆ
ರಾತ್ರಿಯಲಿ ಮಳೆ ಬಂದು ನಿನ್ನ ನೆನಪ ಸುರಿದಿದೆ
ಎನ್ನೆದೆಯ ಅಂಗಳದೆ ನಿನ್ನ ನಗೆಯು ತುಂಬಿದೆ
ರಾತ್ರಿಯಲಿ ಮಳೆ ಬಂದು ನಿನ್ನ ನೆನಪ ಸುರಿದಿದೆ
--------------------------------------------------------------------------------------------------------------------------

ಅಮ್ಮ (1968) - ನೀರೆಯಲ್ಲಿ ಮೋಹವಾಂತೇನೆ ತಿಳಿದಿರ್ಪೆ ನಾ ಮೌನಿಯಾ
ಸಾಹಿತ್ಯ: ಜಿ.ವಿ.ಅಯ್ಯರ್  ಸಂಗೀತ: ಟಿ.ಜಿ.ಲಿಂಗಪ್ಪ  ಹಾಡಿದವರು:ಗೋವಿಂದರಾಜನ, ಪಿ.ಲೀಲಾ 

ಗಂಡು : ನೀರೆಯಲ್ಲಿ ಮೋಹವಾಂತೇನೆ ತಿಳಿದಿರ್ಪೆ ನಾ ಮೌನಿಯಾ
            ಬಾಲಕಿ ಈಗಲೇ ಸುಲಭದಿಂ ದೊರ ಕೊಳಲೆ
            ನಾಗವೇಣಿ ನಗರಿಗೆ ನಾ ಪೋಗಿ ಬರುವೆನೆ
            ಅರಸುತನದ ಕಾರ್ಯವೇನೋ ತ್ವರಿತಗೋಳಿಪುದು
            ಕರೆಸಿಕೋ ಬೇಗ ಸರಸಿ ಜಾಣನೇ
ಹೆಣ್ಣು : ಇಂತೂ ಪೇಳಿ ಪೋಗಿಸೇರಿ ಅಂತಃಪುರದವನು
          ಅಂತರಂಗವೆಂತಹುದೊ ಕಾಂತ ಕಾಣನು
ಗಂಡು : ಅನುದಿನ ಒಂದೊಂದಾಗಿ ಎಲೆ ವನಿತಾಮಣಿ
           ಎನಿಸುವೆ ಎನ್ನಯ ನಾಮಾಂಕಿತಮಂ ಕೊನಿ
           ಮುಟ್ಟು ವನಿತರೊಳೆ ಕರಿಯಿ ಪೆನು
           ನಿನ್ನ ಎನ್ನ ರಾಣಿ ವಾಸಕೆ ನಿಜದಿಂ
--------------------------------------------------------------------------------------------------------------------------

ಅಮ್ಮ (1968) - ನೀರೆಯಲ್ಲಿ ಮೋಹವಾಂತೇನೆ ತಿಳಿದಿರ್ಪೆ ನಾ ಮೌನಿಯಾ
ಸಾಹಿತ್ಯ: ಜಿ.ವಿ.ಅಯ್ಯರ್  ಸಂಗೀತ: ಟಿ.ಜಿ.ಲಿಂಗಪ್ಪ  ಹಾಡಿದವರು:ಗೋವಿಂದರಾಜನ, ಪಿ.ಲೀಲಾ 

ತಾತನೇ... ಆಆಆಅ... 
ತಾತನೇ ಸೋಲದೇ ಸೋತೆನು ಮಾತೆ ಚಿತ್ರಾಂಗದೇ ಎನಗೆ ಪಿತೃನೇ ನೀನೆಲ್ಲ.. 
ನೀತಿಯ ಮಿರದೇ.. ಬೇಡುವೇ .. ಖ್ಯಾತಿಯೆಂದಸ್ಪಮು ತಟ್ಟಿದೆ ಮನ್ನಿಸೆನ್ನ... ಆಆಆಅ ಆಆಆ 
ಹಾರಿಸುವೇ ರಸಮಮಂ ತುರುಗಮಮಂ ಕಾರಿಸುವೇ ಮುಗಿಲಮಮಂ  ಸಾರಥಿಯ ಜೀವವಮಂ       

--------------------------------------------------------------------------------------------------------------------------

ಅಮ್ಮ (1968)
ಸಾಹಿತ್ಯ: ಜಿ.ವಿ.ಅಯ್ಯರ್  ಸಂಗೀತ: ಟಿ.ಜಿ.ಲಿಂಗಪ್ಪ  ಹಾಡಿದವರು:ಪಿ.ಬಿ.ಶ್ರೀನಿವಾಸ 

ಹ್ಹಾಂ... ಬಲುಜಿಗಿನ ಗುಡಿ ಲೂಬಾಹ್ ಲೂಬಹ್  ಬಲುಜಿಗಿನ ಗುಡಿ ಲೂಬಾಹ್ 
ಹಜಕ್ ಹ್ಹಾ.. ಹಜಕ್ ಜಿಜೀಗಿನ ತೇರಿ ಜಿಜೀಗಿನ ತೇರಿ 
ಜಿಜೀಗಿನ ತೇರಿ ಜಿಜೀಗಿನ ತೇರಿ ಜಿಜೀಗಿನ ತೇರಿ ಜಿಜೀಗಿನ ತೇರಿ 
ಜೀಜೀ ಜಿಜೀಗಿನ ತೇರಿ ಜಿಜೀಗಿನ ತೇರಿ ಜಿಜೀಯಾ .. ಹ್ಹಾಹ್ಹಾ.. ಓಹೋ.. ಓಹೋ 
ನಿನ ಕಂಡು ನಾ ಬಂದೆ ನನ ಕಂಡು ನೀ ಬಂದೆ ಇನ್ಯಾಕೇ ಕೋಪವೇ ಕೋಮಲಾಂಗಿ
ನಿನ ಕಂಡು ಹ್ಹಾಹ್ಹಾ ನಿನ ಕಂಡು ಓಹೋ ಓಹೋ 
ನಿನ ಕಂಡು ನಾ ಬಂದೆ ನನ ಕಂಡು ನೀ ಬಂದೆ ಇನ್ಯಾಕೇ ಕೋಪವೇ ಕೋಮಲಾಂಗಿ
ಹ್ಹಾ ಕೋಮಲಾಂಗಿ ಹ್ಹಹ್ಹಾ ಕೋಮಲಾಂಗಿ

ನೀ ಪೇರು ಅಡಿಗೀತೆ ಕೋಪಂಭೂ ಏಲನೇ 
ನೀ ಪೇರು ಅಡಿಗೀತೆ ಕೋಪ ಮೇಲನೇ.... ಏಏಏಏಏ 
ನೀ ಪೇರು ಅಡಿಗೀತೆ ಕೋಪ ಮೇಲನೇ ನಿಲಿಚೆ ಮಾತ್ಲಾಡವೆ ನೀಲವೇಣಿ
ನೂ ನಿಲಿಚೆ ಮಾತ್ಲಾಡವೆ ನೀಲವೇಣಿ ನಾ ನೀಲವೇಣಿ ನಾ ನೀಲವೇಣಿ 

ಪ್ಯಾರಿ ಏ ಬಾತ ನಹೀ ಮೈ ತೋ ಕ್ಯಾ ಕರೂ
ಪ್ಯಾರಿ ಏ ಬಾತ ನಹೀ ಮೈ ತೋ ಕ್ಯಾ ಕರೂ
ಮೇರ ದಿಲ್ ಸಚ್ ಹೈ ಅಬ್ ತೇರೇ ಪಾಸ್... ಖುದಾಕೀ ಕಸಂ  
ಅಬ್ ತೇರೇ ಪಾಸ್... ಖುದಾಕೀ ಕಸಂ  ಅಬ್ ತೇರೇ ಪಾಸ್... ಖುದಾಕೀ ಕಸಂ  

ಓ.. ಡಿಯರ್.. ಕಂ  ಹಿಯರ್ ವೈ ಡು ಯು ಸೊ ಫಿಯರ್ 
ಓ.. ಡಿಯರ್.. ಕಂ  ಹಿಯರ್ ವೈ ಡು ಯು ಸೊ ಫಿಯರ್ 
ಸ್ಟಾಪ್ ಪ್ಲೀಸ್ ಸ್ಟಾಪ್ ಬಸ್ ಸ್ಟಾಪ್ ಫುಲ್ ಸ್ಟಾಪ್ 
ಸ್ಟಾಪ್ ಅಂಡ್ ಟಾಕ್ ಟೂ ಮೀ ಲೌಲೀ ಲೇಡಿ
ಸ್ಟಾಪ್ ಅಂಡ್ ಟಾಕ್ ಟೂ ಮೀ ಲೌಲೀ ಲೇಡಿ
ಹ್ಹಾಂ... ಬಲುಜಿಗಿನ ಗುಡಿ ಲೂಬಾಹ್ ಲೂಬಹ್  ಬಲುಜಿಗಿನ ಗುಡಿ ಲೂಬಾಹ್ 
ಹಜಕ್ ಹ್ಹಾ.. ಹಜಕ್ ಜಿಜೀಗಿನ ತೇರಿ ಜಿಜೀಗಿನ ತೇರಿ 
ಜಿಜೀಗಿನ ತೇರಿ ಜಿಜೀಗಿನ ತೇರಿ ಜಿಜೀಗಿನ ತೇರಿ ಜಿಜೀಗಿನ ತೇರಿ 
ಜೀಜೀ ಜಿಜೀಗಿನ ತೇರಿ ಜಿಜೀಗಿನ ತೇರಿ ಜಿಜೀಯಾ .. ಹ್ಹಾಹ್ಹಾ.. ಓಹೋ.. ಓಹೋ 
------------------------------------------------------------------------------------------------------------------------

ಅಮ್ಮ (1968)
ಸಾಹಿತ್ಯ: ಜಿ.ವಿ.ಅಯ್ಯರ್ ಸಂಗೀತ: ಟಿ.ಜಿ.ಲಿಂಗಪ್ಪ ಹಾಡಿದವರು:ಪಿ.ಬಿ.ಶ್ರೀನಿವಾಸ, ಎಸ್.ಜಾನಕೀ

ಗಂಡು : ಬಂಗಾರವಾಗಲಿ ನಿನ ಬಾಳೆಲ್ಲ ನೀನಾಗಿ ನೀಡಿದರೆ ಬೇಡ ಎನ್ನುವುದಿಲ್ಲ
ಹೆಣ್ಣು : ಬಂಗಾರವಾಗಲಿ ನಿನ ಬಾಳೆಲ್ಲ ನೀನಾಗಿ ನೀಡಿದರೆ ಬೇಡ ಎನ್ನುವುದಿಲ್ಲ
          ಬಂಗಾರವಾಗಲಿ ನಿನ ಬಾಳೆಲ್ಲ 

ಗಂಡು : ಕೈಯೆತ್ತಿ ನೀಡು (ಹೂಂ) ಮೊಗವೆತ್ತಿ ನೋಡು (ಹೂಂಹೂಂ)  
            ಮುತ್ತಂಥ ಮಾತಾಡು ನೀನೊಂದು ಹಾಡು (ಅಹ್ಹಹ್ಹಹ್ಹಹ್ಹಹ್)... 
            ಮುತ್ತಂಥ ಮಾತಾಡು ನೀನೊಂದು ಹಾಡು 
ಹೆಣ್ಣು : ಕುಡಿನೋಟ ನೋಡು ಇದೇ ಅಲ್ಲೇ ಹಾಡು
           ಕುಡಿನೋಟ ನೋಡು ಇದೇ ಅಲ್ಲೇ ಹಾಡು 
           ಅದ ಕೇಳಿ ನೋಡು ಅದರಂತೆ ಹಾಡು (ಆಆಆ  ಆಅಅಅಅ ) ಆಆ ಆಆಆ ಆಆಅ ಆ 
ಗಂಡು : ಬಂಗಾರವಾಗಲಿ ನಿನ ಬಾಳೆಲ್ಲ 
ಹೆಣ್ಣು : ಬಂಗಾರವಾಗಲಿ ನಿನ ಬಾಳೆಲ್ಲ 

ಗಂಡು : ಗಾಳಿ ನೀನಾದರೆ                       ಹೆಣ್ಣು : ಗಂಧ ನೀನಾಗುವೇ
ಗಂಡು : ಗಾಳಿ ನೀನಾದರೆ                       ಹೆಣ್ಣು : ಗಂಧ ನೀನಾಗುವೇ
ಗಂಡು : ಬಳ್ಳಿ ನಾನಾದರೇ                      ಹೆಣ್ಣು : ಹೂವು ನಾನಾಗುವೇ 
ಗಂಡು : ಬಳ್ಳಿ ನಾನಾದರೇ                      ಹೆಣ್ಣು : ಹೂವು ನಾನಾಗುವೇ 
ಗಂಡು : ನೀ ಬೆಳಕಾದರೇ ನಾ ನೆರಳಾಗುವೆ 
            ನೀ ಬೆಳಕಾದರೇ ನಾ ನೆರಳಾಗುವೆ 
ಹೆಣ್ಣು : ನೀನೆದುರು ನಿಂತರೇ ನಾ ನಿನ್ನೊಳಾಗುವೆ 
ಇಬ್ಬರು: (ಆಆಆ  ಆಅಅಅಅ ) ಆಆ ಆಆಆ ಆಆಅ ಆ 
            ಬಂಗಾರವಾಗಲಿ ನಿನ ಬಾಳೆಲ್ಲ 
            ಬಂಗಾರವಾಗಲಿ ನಿನ ಬಾಳೆಲ್ಲ ನೀನಾಗಿ ನೀಡಿದರೆ ಬೇಡ ಎನ್ನುವುದಿಲ್ಲ
            ಬಂಗಾರವಾಗಲಿ ನಿನ ಬಾಳೆಲ್ಲ 
-------------------------------------------------------------------------------------------------------------------------

ಅಮ್ಮ (1968)
ಸಾಹಿತ್ಯ: ಜಿ.ವಿ.ಅಯ್ಯರ್  ಸಂಗೀತ: ಟಿ.ಜಿ.ಲಿಂಗಪ್ಪ  ಹಾಡಿದವರು:ಪಿ.ಬಿ.ಶ್ರೀನಿವಾಸ, ಎಸ್.ಜಾನಕೀ 

ಗಂಡು : ಜ್ಯುಲಿಯೇಟ್ ಮೈ ಡಿಯರ್ ಜ್ಯುಲಿಯೇಟ್
ಹೆಣ್ಣು : ರೋಮಿಯೋ ಮೈ ಡಿಯರ್ ರೋಮಿಯೋ 
ಗಂಡು : ಇರುತಿರೆ ದೂರ ಬದುಕಿದು ಭಾರ ಗತಿ ಎನಗ್ಯಾರ ಎನ್ನಾಸೆ ಕಣ್ಣಾಸೆ ಸುಖಸಾಗರಾ
            ಇರುತಿರೆ ದೂರ (ಅಹ್ಹಹಾ) ಬದುಕಿದು ಭಾರ (ಅಹ್ಹಹಾ) 
            ಗತಿ ಎನಗ್ಯಾರ ಎನ್ನಾಸೆ ಕಣ್ಣಾಸೆ ಸುಖಸಾಗರಾ

ಹೆಣ್ಣು : ನಂಗೇನೋ ಒಂದು ತೋರದೇ ಶೃಂಗಾರವಾಗಿ ತೋಟದೇ (ಆಆ ಆಆಆಆ ಆಆ ) 
          ನಂಗೇನೋ ಒಂದು ತೋರದೇ ಶೃಂಗಾರವಾಗಿ ತೋಟದೇ
          ನಿಂಗಾಗೇ ನಿಂತೇ ಸೋಲದೇ  
          ನಿಂಗಾಗೇ ನಿಂತೇ ಸೋಲದೆ ಗುಂಗು ಅದೇಕೋ ಸದಾ ನಿನ್ನದೇ
ಗಂಡು : ಆನಂದವಾದ ಬಾಳಿಗೆ ನೀನಾದೆ ಜಾಜಿ ಸಂಪಿಗೆ (ಆಆ ಆಆಆಆ ಆಆ ) 
           ಆನಂದವಾದ ಬಾಳಿಗೆ ನೀನಾದೆ ಜಾಜಿ ಸಂಪಿಗೆ 
           ಏನೇನೋ ಆಸೆ ಮೆಲ್ಲಗೆ 
           ಏನೇನೋ ಆಸೆ ಮೆಲ್ಲಗೆ ಹೂವೇ ತರಾನ ಹೊಸ ಹಾಡಿಗೆ
ಇಬ್ಬರು : ಇರುತಿರೆ ದೂರ ಬದುಕಿದು ಭಾರ ಗತಿ ಎನಗ್ಯಾರ ಎನ್ನಾಸೆ ಕಣ್ಣಾಸೆ ಸುಖಸಾಗರಾ
            ಇರುತಿರೆ ದೂರ ಬದುಕಿದು ಭಾರ ಗತಿ ಎನಗ್ಯಾರ ಎನ್ನಾಸೆ ಕಣ್ಣಾಸೆ ಸುಖಸಾಗರಾ
--------------------------------------------------------------------------------------------------------------------------

ಅಮ್ಮ (1968)
ಸಾಹಿತ್ಯ: ಜಿ.ವಿ.ಅಯ್ಯರ್  ಸಂಗೀತ: ಟಿ.ಜಿ.ಲಿಂಗಪ್ಪ  ಹಾಡಿದವರು:ಪಿ.ಬಿ.ಶ್ರೀನಿವಾಸ, ಎಸ್.ಜಾನಕೀ 

ನಿನ್ನ ಲಗ್ನಪತ್ರಿಕೆ ಎನ್ನಕೂ ಕರೆದಿದೆ ನಿನ್ನ ಶ್ರೀಮಂತಿಕೆ
ಬಾ ಎಂದಿದೆ ನಾನೇನು ಬರಲಿಲ್ಲಾ ಎನಗಾಸೆ ಏನು ಇಲ್ಲ
ನಿಲುಕದ ಹಣ್ಣಿಗೆ ನೀಡಿದ ಕೈಯ್ ಬಳುಕುವ ಬಳಿ
ಬಾಗಿದೆಯಯ್ಯ  ಹಣ್ಣು ಕೈಗೆ ಸಿಕ್ಕರೆ ಬೇಡಂಬೆಯೆನಯ್ಯಾ
ನಿನ್ನಯಾ ಮನವಾ ನಂಬೇನಯ್ಯಾ
ನಾನೇನು ಬರಲಿಲ್ಲಾ ಎನಗಾಸೆ ಏನು ಇಲ್ಲ
ಸೆರಗನು ಹಿಡಿದು ಏಳಿಯುವೆಯೇಕೆ ಕರೆದರೆ
ಬರೇನೆ ಕಣ್ಣಸನ್ನೆಗೆ ಬಳಿಯಲಿ ನಾನಿರೇ ಈ ಮಧು 
ಬೇಕೇ ನಾಳೆಯ ಕನಸು ಇಂದೇತಕೆ 
ನಾನೇನು ಬರಲಿಲ್ಲಾ ಎನಗಾಸೆ ಏನು ಇಲ್ಲ 
--------------------------------------------------------------------------------------------------------------------------

ಅಮ್ಮ (1968)
ಸಂಗೀತ: ಟಿ.ಜಿ.ಲಿಂಗಪ್ಪ ಸಾಹಿತ್ಯ: ಪುರಂದದಾಸ  ಹಾಡಿದವರು: ಬಾಲಮುರಳಿಕೃಷ್ಣ

ಧರ್ಮವೇ ಜಯವೆಂಬ ದಿವ್ಯ ಮಂತ್ರ
ಧರ್ಮವೇ ಜಯವೆಂಬ ದಿವ್ಯ ಮಂತ್ರ
ಮರ್ಮವನರಿತು  ಮಾಡಲು ಬೇಕು ತಂತ್ರ
ಧರ್ಮವೇ ಜಯವೆಂಬ ದಿವ್ಯ ಮಂತ್ರ 

ವಿಷ ವಿಕ್ಕಿದವಗೆ ಷದ್ರಸವ ನುಣಿಸಲು ಬೇಕು...ಆಆಆ... 
ವಿಷ ವಿಕ್ಕಿದವಗೆ ಷದ್ರಸವ ನುಣಿಸಲು ಬೇಕು
ದ್ವೇಷ ಮಾಡಿದವನ ಪೋಷಿಸಲು ಬೇಕು
ದ್ವೇಷ ಮಾಡಿದವನ ಪೋಷಿಸಲು ಬೇಕು
ಪುಸಿಯಾಡಿ ಕೆಡಿಸುವನ ಹಾಡಿ ಹರಸಲು ಬೇಕು 
ಪುಸಿಯಾಡಿ ಕೆಡಿಸುವನ ಹಾಡಿ ಹರಸಲು ಬೇಕು 
ಮೋಸ ಮಾಡುವನ ಹೆಸರು ಮಗನಿಗಿಡಬೇಕು
ಧರ್ಮವೇ ಜಯವೆಂಬ ದಿವ್ಯ ಮಂತ್ರ

ಕೊಂಡೈದು ಬಡಿಯುವರ ಕೊಂಡಾಡುತಿರಬೇಕು... ಆಆಆಆ...  
ಕೊಂಡೈದು ಬಡಿಯುವರ ಕೊಂಡಾಡುತಿರಬೇಕು
ಕಂಡು ಸಹಿಸದವರ ಕರೆಯ ಬೇಕು
ಕಂಡು ಸಹಿಸದವರ ಕರೆಯ ಬೇಕು
ಪುಂಡರೀಕಾಕ್ಷ ಶ್ರೀ ಪುರಂದರ ವಿಠಲನ
ಪುಂಡರೀಕಾಕ್ಷ ಶ್ರೀ ಪುರಂದರ ವಿಠಲನ
ಕೊಂಡಾಡಿ ಧನ್ಯನಾಗ ಬೇಕು
ಧರ್ಮವೇ ಜಯವೆಂಬ ದಿವ್ಯ ಮಂತ್ರ
ಮರ್ಮವನರಿತು  ಮಾಡಲು ಬೇಕು ತಂತ್ರ
ಧರ್ಮವೇ ಜಯವೆಂಬ ದಿವ್ಯ ಮಂತ್ರ 
--------------------------------------------------------------------------------------------------------------------------

ಅಮ್ಮ (1968)
ಸಂಗೀತ: ಟಿ.ಜಿ.ಲಿಂಗಪ್ಪ ಸಾಹಿತ್ಯ: ಜಿ.ವಿ.ಅಯ್ಯರ ಹಾಡಿದವರು: ಪಿ.ಬಿ.ಶ್ರೀನಿವಾಸ, ಬಿ.ಆರ್.ಲತಾ 

ಗಂಡು : ಎಂಥ ಚೆಲುವ ನಗುವೋ ಇದು ಎಂಥ ಚೆಲುವ ನಗುವೋ
            ವಸಂತದೋಕುಳಿಯ ಆಡುವ ಗೆಲುವೋ 
ಹೆಣ್ಣು :  ಎಂಥ ಚೆಲುವ ನಗುವೋ  ವಸಂತದೋಕುಳಿಯ ಆಡುವ ಗೆಲುವೋ 
           ಎಂಥ ಚೆಲುವ ನಗುವೋ...  

ಗಂಡು :  ಹಾರಿ ಹಾರಿ ಹೂ ತೂರಿ ಬಂದಿದೆ... ಆಆಆ.ಆಆಆ .... 
             (ಆಆಆಆಆ ಆ)... ಆಆಆ ಆಆ... (ಆಆಅಅ ಆಆ)..  
             ಹಾರಿ ಹಾರಿ ಹೂ ತೂರಿ ಬಂದಿದೆ...
ಹೆಣ್ಣು : ಕೋರಿ ಕೋರಿ ಅದು ನಿನ್ನ ಸೇರಿದೆ.. 
ಗಂಡು :  ಹಾರಿ ಹಾರಿ ಹೂ ತೂರಿ ಬಂದಿದೆ...
ಹೆಣ್ಣು : ಕೋರಿ ಕೋರಿ ಅದು ನಿನ್ನ ಸೇರಿದೆ.. 
ಗಂಡು : ಭಾಗ್ಯಶಾಲಿ ಎನಗೆ ತಂಗಾಳಿ ತಂದ ಕೊಡುಗೆ 
ಹೆಣ್ಣು : ಹೂವಿನ ಸವಿ ಬಾಳಿಗೆ ನೀನೇ ತಾನೇ ಸುಖದ ಆಸೆ ಆಸೆಗೆ 
           ಎಂಥ ಚೆಲುವ ನಗುವೋ...  

ಗಂಡು: ಮೌನವಾಗೇ ಅನುರಾಗ ತುಂಬಿದೆ 
ಹೆಣ್ಣು : ನಾನು ನಿನ್ನ ಮನಸಾರೆ ನಂಬಿದೇ 
ಗಂಡು: ಮೌನವಾಗೇ ಅನುರಾಗ ತುಂಬಿದೆ 
ಹೆಣ್ಣು : ನಾನು ನಿನ್ನ ಮನಸಾರೆ ನಂಬಿದೇ 
ಗಂಡು : ನೋಡೇ ನಿನ್ನ ಬಿಡದೇ ಏನೇನೋ ಆಸೆ ಬರಿದೇ 
ಇಬ್ಬರು : ಆಸೆಯೇ ನನಸಾಗಿದೆ ಪ್ರೇಮ ನಾವೆ ನಮಗಾಗಿ ಕಾದಿದೆ 
             ಎಂಥ ಚೆಲುವ ನಗು
ಗಂಡು : ಆಆಆ.... ಆಅ... ಆಆಆ... ಎಂಥ ಚೆಲುವ ನಗು
ಹೆಣ್ಣು : ಆಆಆ.... ಆಅ... ಆಆಆ... ಎಂಥ ಚೆಲುವ ನಗುವೋ
ಗಂಡು : ಆಆಆ.... ಆಅ... ಆಆಆ...
ಹೆಣ್ಣು : ಆಆಆ.... ಆಅ... ಆಆಆ...
ಗಂಡು : ಆಆಆ.... ಆಅ... ಆಆಆ...
ಹೆಣ್ಣು : ಆಆಆ.... ಆಅ... ಆಆಆ...
ಗಂಡು : ಆಆಆ.... ಆಅ... ಆಆಆ..
ಹೆಣ್ಣು : ಆಆಆ.... ಆಅ... ಆಆಆ...
ಇಬ್ಬರು :ಆಆಆ.... ಆಅ... ಆಆಆ...  ಆಆಆ.... ಆಅ... ಆಆಆ...
           ಎಂಥ ಚೆಲುವ ನಗುವೋ ವಸಂತದೋಕುಳಿಯ ಆಡುವ ಗೆಲುವೋ  
           ಎಂಥ ಚೆಲುವ ನಗುವೋ
  ------------------------------------------------------------------------------------------------------------------------

No comments:

Post a Comment